ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಇತಿಹಾಸ

ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸಲಾಗಿದೆ.

ಮೊದಲಿಗೆ

ಸುಮಾರು 90ರ ದಶದಲ್ಲಿ ಕರ್ನಾಟಕದ ಪಶ್ಚಿಮ ಘಟ್ಟ ದಲ್ಲಿರುವ ಸಾಗರ ತಾಲ್ಲೋಕಿನ ತುಮರಿ ಎಂಬ ಸಣ್ಣ ಹಳ್ಳಿಯಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತು ಈ ಶಿಬಿರಕ್ಕೆ ಹಿರಿಯ RSS ಪ್ರಚಾರಕರಾದ ಶ್ರೀ ಡಾ// ಉಪೇಂದ್ರ ಶಣೈ ಹಾಗೂ ಪ್ರಗತಿಪರ ಸಾವಯವ ಕೃಷಿಕರಾದ ಶ್ರೀ ಪುರುಷೋತ್ತಮರಾವ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಈ ತುಮರಿ ಗ್ರಾಮಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನಿರಿನ ಪ್ರದೇಶದಲ್ಲಿದೆ. ಈ ಶಿಬಿರಕ್ಕೆ ಬಂದ ಶಿಬಿರಾರ್ಥಿಗಳನ್ನು ಡಾ// ಉಪೇಂದ್ರ ಶಣೈ ರವರು ನಿಮ್ಮ ಕೃಷಿ ಕೆಲಸದಲ್ಲಿ ಮತ್ತು ನಿಮ್ಮ ಹಳ್ಳಿಯಲ್ಲಿ ನೀವು ಎದುರಿಸುತ್ತಿರುವ ಸಮಸ್ಯಗಳನ್ನು ಪಟ್ಟಿ ಮಾಡಿ ಎಂದು ಹೇಳಿದರು. ಆಗ ರೈತರು ಸುಮಾರು 40 ಸಮಸ್ಯೆಗಳನ್ನು ಪಟ್ಟಿಮಾಡಿರರು ಅದರಲ್ಲಿ ರಾಸಾಯನಿಕ ಕೃಷಿಯುಕೂಡ ಒಂದಾಗಿತ್ತು.

ಕೃಷಿ ಪ್ರಯೋಗ ಪರಿವಾರ

ರಾಸಾಯನಿಕ ಕೃಷಿ ಸಮಸ್ಯೆಯನ್ನು ಆಳವಾಗಿ ಅಧ್ಯಾಯನ ಮಾಡಿ ತಿಳಿದುಕೊಂಡ ಸಮಾನ ಮನಸ್ಕ ರೈತರು ‘ಕೃಷಿ ಪ್ರಯೋಗ ಪರಿವಾರ’ ಎಂಬ ಗುಂಪನ್ನು ಕಟ್ಟಿಕೊಂಡರು. ಮೊದಲಿಗೆ ಸ್ಥಳೀಯವಾಗಿರುವ ರಾಸಯನಿಕ ರಹಿತವಾಗಿರುವ ಹೊಸ ವಿಧಾನಗಳನ್ನು ಪ್ರಯೋಗ ಮಾಡುವುದು ಅವರ ದ್ಯೇಯವಾಗಿತ್ತು ನಂತರ ಈ ‘ಕೃಷಿ ಪ್ರಯೋಗ ಪರಿವಾರ’ ಶ್ರೀ ಪುರುಷೋತ್ತಮರಾವ್ ರವರ ಮಾರ್ಗದರ್ಶನದಲ್ಲಿ ಪರಿಸರ ಸ್ನೇಹಿ ಕೃಷಿ ಕಾರ್ಯದಲ್ಲಿ ನಿರತವಾಗಿ ಅನೌಪಚಾರಿಕವಾಗಿ ಕರ್ನಾಟಕದಾದ್ಯಂತ ಬೆಳವಣಿಗೆಗೆ ಬಂತು. ಶ್ರೀ ಪುರುಷೋತ್ತಮರಾವ್ ರವರ ಶ್ರೇಷ್ಟ ಪರಿಶ್ರಮಕ್ಕೆ ‘ಕೃಷಿ ಋಷಿ’ ಎಂದುಪುರಸ್ಕಾರವು ದೊರೆಯಿತು. 1996ರಲ್ಲಿ ಅಧಿಕೃತವಾಗಿ ಭಾರತೀಯ ಟ್ರಸ್ಟ್ ಕಾಯ್ದಿಯಡಿಯಲ್ಲಿ ಕೃಷಿ ಪ್ರಯೋಗ ಪರಿವಾರ ವನ್ನು ನೋಂದಾಯಿಸಲಾಯಿತು. ಇದರ ಗುರಿ ಕೇವಲ ಲಾಭದಾಯಕವಾದುದ್ದಲ್ಲ ಬಹಳ ವಿಸ್ತಾರವಾದದ್ದು, ಪ್ರಯೋಗಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿತ್ತು. ಅಲ್ಲದೆ ನೈತಿಕ ಆದ್ಯಾತ್ಮಕ ಹಾಗು ಪರಿಸರ ಮೌಲ್ಯಗಳೊಂದಿಗೆ ಮೂರು ಮುಖ್ಯ ಉದ್ದೇಶವನ್ನು ಇಟ್ಟುಕೊಂಡಿದೆ.

  • ದೇಸಿಯವಾಗಿ/ ಸ್ಥಳೀಯವಾಗಿರುವ ಸ್ವಾವಲಂಬಿ ಮತ್ತು ಪರಿಸರÀ ಸ್ನೇಹಿ ಜೈವಿಕ ಕೃಷಿ ಪದ್ದತಿಯನ್ನು ಸುಸ್ಥಿರಗೂಳಿಸುವುದು.
  • ಪಾರಂಪರಿಕ ಸ್ಥಳೀಯ ಆರೋಗ್ಯ ಪದ್ದತಿಗಳಿಗೆ ಮರುಜೀವ ನೀಡುವುದು.
  • ಯುವಕರಿಗೆ ರಚನಾತ್ಮಕವಾದ ರಾಜಕೀಯವಲ್ಲದ ಶಿಕ್ಷಣವನ್ನು ಕೂಟ್ಟು ಸಬಲೀಕರಣಗೊಳಿಸುವುದು.

ಕೃಷಿ ಪ್ರಯೋಗ ಪರಿವಾರ ನೋಂದಾಯಿತ ಕಛೀರಿ ಶ್ರೀ ಪುರುಷೋತ್ತಮರಾವ್ ರವರು ಅಭಿವೃದ್ಧಿ ಪಡಿಸಿವ ಕೃಷಿ ನಿವಾಸ ತೋಟದ ಮನೆಯಲ್ಲಿದೆ. ಈ ತೋಟ 10ಎಕರೆ ಜಾಗವನ್ನು ಒಳಗೊಂಡಿದ್ದು ಶೇಕಡ 40 ಜಾಗದಲ್ಲಿ ಸ್ಥಳೀಯ ಭತ್ತದ ಬೆಳೆಗಳನ್ನು ಉಳಿದ ಶೇಕಡ 60 ಜಾಗದಲ್ಲಿ ಅಡಿP,É ತೆಂಗು, ಮೆಣಸು, ಏಲಕ್ಕಿ, ಬಾಳೆ, ಕಾಫಿ ಹಾಗು ಇತರೆ ತರಕಾರಿಗಳನ್ನು ಬೆಳೆಯುತ್ತಾರೆ. 1986ರಿಂದ ಈತೋಟ ಸಂಪೂರ್ಣ ಸಾವಯವವಾಗಿ ಪರಿವರ್ತನೆಗೊಂಡಿದೆ. ದೇಶದ ವಿವಿಧ ಭಾಗಗಳಿಂದ ಬಂದು ರೈತರು ಸಾವಯವ ಕೃಷಿ, ಜೈವಿಕ ಜೀವನ ವಿಧಾನ, ಸಾವಯವ ಗೂಬ್ಬರ ಮತ್ತು ಕೀಟನಾಶಕ ತಯಾರಿಕೆ ಇತ್ಯಾದಿಗಳ ಬಗ್ಗೆ ತಿದುಕೊಳ್ಳುತ್ತಾರೆ ಅಲ್ಲದೆ ಬೆಳೆ ಬೆಳೆಯುವ ವಿಧಾನ, ಬಿತ್ತನೆ, ನಾಟಿ, ಅಂತರಬೇಸಾಯ, ಕೀಟ ನಿಯಂತ್ರಣ, ಕಟಾವು ಮತ್ತು ಕಟಾವಿನ ನಂತರದ ವಿಧಾನಗಳ ಬಗೆಯು ತಿಳಿದುಕ್ಕೊಳ್ಳುತ್ತಾರೆ. ಕೃಷಿ ಪ್ರಯೋಗ ಪರಿವಾರವು ಒಂದು ಪ್ರಕಾಶನವನ್ನು ಕೂಡ ಹೊಂದಿದೆ.ರೈತ ಸದಸ್ಯರ ಸಭೆಗಳು, ಬೋರ್ಡ ಆಫ್ ಟ್ರಸ್ಟೀಸ್ ಸಭೆಗಳು ಹಾಗು ಹಲವಾರು ತರಬೇತಿಗಳು ಮತ್ತು ವಿಚಾರ ಗೋಷ್ಠಗಳು ಇಲ್ಲಿಯೇ ನಡೆಯುತ್ತವೆ.

ಕೃಷಿ ಪ್ರಯೋಗ ಪರಿವಾರ ಪ್ರಾರಂಭವಾದಾಗಿನಿಂದ ಹಲವಾರು ಸ್ಥಳೀತ ರೈತರ ಅಭಿವೃದ್ದಿಗೆ ಶ್ರಮಿಸುತ್ತಿದೆ.1998 ರಿಂದ ಕೃಷಿ ಪ್ರಯೋಗ ಪರಿವಾರ ಅomಠಿಚಿs ಠಿಡಿoರಿeಛಿಣ oಜಿ ಇಖಿಅ ಓeಣheಡಿಟಚಿಟಿಜs ಇದರ ಪಾಲುದಾರಿಕೆಯಲ್ಲಿgದೆ ಇದರ ಉದೇಶವೆನೆಂದರೆ ಸ್ಥಳೀಯ ತಂತ್ರÀರ ಜ್ಞಾನವನ್ನು ತಿಳಿದುಕ್ಕೂಳ್ಳುವುದು. ಕೃಷಿ ಪ್ರಯೋಗ ಪರಿವಾರವು 2005 ರಿಂದ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಜೈವಿಕ ಗ್ರಾಮ ಯೋಜನೆಯೊಂದಿಗೂ ಸಂಬಂಧವನ್ನು ಹೊಂದಿದೆ..

ಸಾವಯವ ಕೃಷಿ ಪರಿವಾರ

ಸಾವಯವ ಕೃಷಿ ಪರಿವಾರ ತಾಲ್ಲೋಕು ವiಟ್ಟದ ಒಂದು ಒಕ್ಕೂಟವಾಗಿದ್ದು.ಈಪರಿವಾರವನ್ನು ಪ್ರತೀ ತಾಲ್ಲೋಕಿನಲ್ಲು ಮಾಡಿ ಭಾರತೀಯ ಟ್ರಸ್ಟ ಕಾಯ್ದೆಯಡಿಯಲ್ಲಿ ನೋಂದಣಿ ಮಾಡಿಸಿರುತ್ತಾರೆ ಇದೊಂದು ಸ್ವತಂತ್ರವಾದ ಒಕ್ಕೂಟವಾಗಿರುತ್ತದೆ.ಇಲ್ಲಿ ರೈತರೆ ಪದಾಧಿಕಾರಿಗಳಾಗಿತ್ತಾರೆ. ಟ್ರಸ್ಟ್ ನ ನಿರ್ದೇಶಕರನ್ನು ಚುನಾವಣೆಯ ಮೂಲಕ ಅಥವಾ ಅನೌಪಚಾರಿಕವಾಗಿ ಸದಸ್ಯರೆಲ್ಲರು ಸೇರಿ ಆಯ್ಕೆ ಮಾಡುತ್ತಾರೆ ಪ್ರತಿ ತಾಲ್ಲೋಕು ಮಟ್ಟದ ಪರಿವಾರದಿಂದ ಇಬ್ಬರು ಸದಸ್ಯರನ್ನು ಆಯ್ಕೆಮಾಡಿ ಜಿಲ್ಲಾ ಮಟ್ಟದ ಪರಿವಾರವನ್ನು ಭಾರತೀಯ ಟ್ರಸ್ಟ ಕಾಯ್ದೆಯಡಿಯಲ್ಲಿ ನೋಂದಣಿ ಮಾಡಿಸುತ್ತಾರೆ.ಈ ಜಿಲ್ಲಾ ಪರಿವಾರವು ತಾಲ್ಲೋಕು ಪರಿವಾರಗಳಿಗೆ ಸಹಾಯಕವಾಗಿರುತ್ತವೆ.

ಮೂಲ  : ಸಾವಯವ ಕೃಷಿ ಪರಿವರ್

3.10810810811
vinay May 28, 2016 04:15 PM

ಸಾವಯವ ಕೃಷಿ / ಇತಿಹಾಸ ಉತ್ತಮವಾದ ಲೇಖನ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top