অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ

ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ

  1. ಸಂಸ್ಥೆಯ ಬಗ್ಗೆ
  2. ಸಾವಯವ ಕೃಷಿ ಕ್ಷೇತ್ರಗಳನ್ನು ಪ್ರಮಾಣೀಕರಿಸಲು ಅನುಸರಿಸಬೇಕಾದ ಕ್ರಮಗಳು
  3. ಸಾವಯವ ಭೂಪರಿವರ್ತನೆ
  4. ಭಾಗಶಃ ಪರಿವರ್ತನೆ
  5. ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳು
  6. ಸಾವಯವ ಕೃಷಿಯಲ್ಲಿ ಬಳಸುವ ಗೊಬ್ಬರಗಳು ಮತ್ತು ಸಸ್ಯ ಸಂರಕ್ಷಣೆ
  7. ನೈಸರ್ಗಿಕ ತಡೆಗೋಡೆ
  8. ಜೈವಿಕ ವೈವಿಧ್ಯತೆ
  9. ಕ್ಷೇತ್ರ ಮಟ್ಟದಲ್ಲಿ ದಾಖಲಾತಿಗಳ ನಿರ್ವಹಣೆ
  10. ಕೊಯ್ಲು
  11. ಶೇಖರಣೆ ಮತ್ತು ಸಾಗಣಿಕೆ
  12. ಸಾವಯವ ಕೃಷಿ ಪ್ರಮಾಣೀಕರಣದಲ್ಲಿ ನಿಷೇಧಾತ್ಮಕ ಕ್ರಮಗಳು
  13. ಸಮಾನಾಂತರ ಬೆಳೆ (Parallel production):
  14. ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳು
  15. ಸಾವಯವ ಕೃಷಿ
  16. ಭೂಮಿಯನ್ನು ಆಗಿಂದಾಗೆ ಬದಲಾವಣೆ ಮಾಡಬಾರದು
  17. ಮನುಷ್ಯನ ಮಲ ಮೂತ್ರ
  18. ಪ್ರಮಾಣೀಕರಣ ಸೇವೆಗಳು
  19. ವ್ಯಕ್ತಿಗತ ಸಾವಯವ ಕೃಷಿ ಕ್ಷೇತ್ರ
  20. ಸಾವಯವ ರೈತರ ಗುಂಪು
  21. ಗುಂಪು ಪ್ರಮಾಣೀಕರಣಕ್ಕೆ ಬೇಕಾಗುವ ಕನಿಷ್ಠ ಅಗತ್ಯತೆಗಳು
  22. ಸಾವಯವ ಅರಣ್ಯ ಉತ್ಪನ್ನಗಳು
  23. ಸಾವಯವ ಉತ್ಪನ್ನಗಳ ಸಂಸ್ಕರಣೆ
  24. ಸಾವಯವ ಉತ್ಪನ್ನಗಳ ಮಾರಾಟಗಾರರು
  25. ಸಾವಯವ ಕೃಷಿ ಪರಿಕರಗಳ ಅನುಮೋದನೆ
  26. ವಿಳಾಸ

ಕರ್ನಾಟಕ ರಾಜ್ಯದಲ್ಲಿ ಸಾವಯವ ಬೆಳೆ/ಉತ್ಪನ್ನಗಳಿಗೆ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇವುಗಳ ಗುಣಮಟ್ಟವನ್ನು ಖಾತರಿ ಪಡಿಸಲು  ಸರ್ಕಾರಿ ಸ್ವಾಮ್ಯದ ಸಾವಯವ ಪ್ರಮಾಣೀಕರಣ ಸಂಸ್ಥೆ ಇಲ್ಲದಿರುವುದನ್ನು ಮನಗಂಡು ಘನ ಸರ್ಕಾರದ ಆದೇಶದ ಸಂಖ್ಯೆ: ಕೃ.ಇ 50 : ಎಎಇ 2012 ಬೆಂಗಳೂರು ದಿನಾಂಕ. 04.01.2013 ರ ಪ್ರಕಾರ  ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯುವ ಪ್ರಮಾಣನ ಸಂಸ್ಥೆ (KSSOCA) ಯ ಅಡಿಯಲ್ಲಿ ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ (KSOCA)ಯನ್ನು ಒಂದು ವಿಭಾಗವಾಗಿ ಸ್ಥಾಪನೆ ಮಾಡಲಾಗಿದೆ.

ಸಂಸ್ಥೆಯ ಬಗ್ಗೆ

ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆ (KSSCA) ಯು 1974 ನೇ ಸಾಲಿನಲ್ಲಿ  ಕರ್ನಾಟಕ ಸರ್ಕಾರದ ಒಂದು ಸ್ವಾಯುತ್ತ ಸಂಸ್ಥೆಯಾಗಿ ಕೇಂದ್ರ ಬೀಜ ಕಾಯಿದೆ-1966 ರ ಅಡಿಯಲ್ಲಿ ಸ್ಥಾಪಿಸಿದೆ. ಸೊಸೈಟಿ ನೊಂದಣಿ ಕಾಯಿದೆ-1960 ರ ಅಡಿಯಲ್ಲಿ ನೊಂದಾಯಿಸಲ್ಪಟ್ಟಿದ್ದು, ರಾಜ್ಯದಲ್ಲಿ ಬೆಳೆಯುವ ವಿವಿಧ ಅಧಿಸೂಚಿತ ತಳಿ ಬೆಳೆಗಳ ಬೀಜಗಳನ್ನು ಪ್ರಮಾಣೀಕರಿಸಿ ರೈತ ಬಾಂಧವರಿಗೆ ಸಕಾಲದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ಒದಗಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ.

  • ಕರ್ನಾಟಕ ರಾಜ್ಯದಲ್ಲಿ ಸಾವಯವ ಬೆಳೆ/ಉತ್ಪನ್ನಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇವುಗಳ ಗುಣಮಟ್ಟವನ್ನು ಖಾತರಿ ಪಡಿಸಲು ಸರ್ಕಾರಿ ಸ್ವಾಮ್ಯದ ಸಂಸ್ಥೆ ಇಲ್ಲದಿರುವುದನ್ನು ಮನಗಂಡು ಘನ ಸರ್ಕಾರದ ಆದೇಶ ಸಂಖ್ಯೆ : ಕೃ.ಇ.50. ಎಎಇ. 2012, ಬೆಂಗಳೂರು ದಿನಾಂಕ.04.01.2013ರ ಪ್ರಕಾರ ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆಯು,ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ (KSSOCA) ಎಂದು ಮರು ನಾಮಕರಣಗೊಂಡು ಇದರ ಅಡಿಯಲ್ಲಿ ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ (KSOCA)ಯು ಒಂದು ವಿಭಾಗವಾಗಿ ಸ್ಥಾಪಿತವಾಗಿದೆ.
  • KSSCA ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಾವಯವ ಪ್ರಮಾಣನ ವಿಭಾಗಕ್ಕೆ APEDA ಮಾರ್ಗಸೂಚಿ ಪ್ರಕಾರ ವಿವಿಧ  ದರ್ಜೆಯ  ನೌಕರರ ಸಂಖ್ಯೆಗಳಿಗನುಗುಣವಾಗಿ ಹೊಸದಾಗಿ ಸೃಜಿಸಿ ವೃತ್ತಿಪರ ಹಾಗೂ ತಾಂತ್ರಿಕ ಕೌಶಲ್ಯವುಳ್ಳ ಏಳು ತಾಂತ್ರಿಕ ಅಧಿಕಾರಿಗಳು ಹಾಗೂ ನಾಲ್ಕು ಲಿಪಿಕ/ಇತರೆ ಸಿಬ್ಬಂದಿಗಳನ್ನು ನೇಮಕಮಾಡಿ, ಸದರಿ ಅಧಿಕಾರಿಗಳಿಗೆ ಸಾವಯವ ಪ್ರಮಾಣೀಕರಣದ ಬಗ್ಗೆ ಸೂಕ್ತ ತರಬೇತಿ ನೀಡಲಾಗಿರುತ್ತದೆ. KSOCA ಸಂಸ್ಥೆಯು ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದು, APEDA ವತಿಯಿಂದ ಮಾನ್ಯತೆ ಪಡೆಯುವವರೆಗೂ ರಾಜ್ಯದಲ್ಲಿ ಸಾವಯವ ಪ್ರಮಾಣನ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ಉತ್ತರ ಖಂಡ್ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ (USOCA) ದೊಂದಿಗೆ ಒಪ್ಪಂದ (MoU)ವನ್ನು ಮಾಡಿಕೊಳ್ಳಲಾಗಿದ್ದು ಪ್ರಸಕ್ತ ದಿನಾಂಕ:17-08-2015 ರಿಂದ ಸ್ವತಂತ್ರವಾಗಿ ಸಾವಯಾವ ಪ್ರಮಾಣೀಕರಣ ಕಾರ್ಯವನ್ನು ನಿರ್ವಹಿಸಲು NAB (National Accreditation Body) ಇಂದ Accreditation ದೊರಕಿರುತ್ತದೆ.
  • KSOCA ಸಂಸ್ಥೆಯ ಉದ್ದೇಶಗಳು: ಸರ್ಕಾರ ಸ್ವಾಮ್ಯದ KSOCA ಸಂಸ್ಥೆಯು ರಾಜ್ಯದಲ್ಲಿ ಕೈಗೆಟುಕುವ ಪ್ರಮಾಣೀಕರಣ ಶುಲ್ಕದೊಂದಿಗೆ ರಾಷ್ಟ್ರೀಯ (NPOP - National Program for Organic Production concern to Indian Standards) ಹಾಗೂ ಅಂತರಾಷ್ಟ್ರೀಯ (NOP - National Organic Production concern to USA Standards) ಮಾನದಂಡಗಳ ಪ್ರಕಾರ ಪ್ರಮಾಣನ ಕಾರ್ಯ ಕೈಗೊಳ್ಳುವುದು.

ಪ್ರಮಾಣಿತ ಸಾವಯವ ಉತ್ಪನ್ನಗಳನ್ನು ದೊರಕಿಸಿಕೊಡುವಲ್ಲಿ ಸಹಕಾರಿಯಾಗುವುದು.

ಸಾವಯವ ಕೃಷಿ ಕ್ಷೇತ್ರಗಳನ್ನು ಪ್ರಮಾಣೀಕರಿಸಲು ಅನುಸರಿಸಬೇಕಾದ ಕ್ರಮಗಳು

ಸಾವಯವ ಭೂಪರಿವರ್ತನೆ

ಸಾಂದ್ರ ಬೇಸಾಯ ಪದ್ಧತಿಯಿಂದ ಸಾವಯವ ಬೇಸಾಯ ಪದ್ಧತಿಗೆ ಭೂಪರಿವರ್ತನೆಗೊಳ್ಳಲು ಬೇಕಾಗುವ ಸಮಯ.

  • ವಾರ್ಷಿಕ ಬೆಳೆಗಳಿಗೆ: 2 ವರ್ಷಗಳು
  • ಬಹುವಾರ್ಷಿಕ ಬೆಳೆಗಳಿಗೆ: 3 ವರ್ಷಗಳು

ಭಾಗಶಃ ಪರಿವರ್ತನೆ

ಭಾಗಶಃ ಭೂಪರಿವರ್ತನೆಗೆ ಒಳಪಡುವ ಕೃಷಿ ಕ್ಷೇತ್ರಗಳು ಹಾಗೂ ಶೇಖರಣ ಸ್ಥಳಗಳು ಪ್ರತ್ಯೇಕವಾಗಿದ್ದು, ಪರಿವೀಕ್ಷಣೆ ಮಾಡುವಂತಿರಬೇಕು

ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳು

ಸಾವಯವ ಕೃಷಿಯಲ್ಲಿ ಉಪಯೋಗಿಸುವ ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳು ಪ್ರಮಾಣಿತ ಸಾವಯವ ಮೂಲದ್ದಾಗಿರಬೇಕು, ಇಲ್ಲವಾದಲ್ಲಿ ರಸಾಯನಿಕ ಅನುಪಚರಿತ ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳನ್ನು ಬಳಸಬಹುದು.

ಸಾವಯವ ಕೃಷಿಯಲ್ಲಿ ಬಳಸುವ ಗೊಬ್ಬರಗಳು ಮತ್ತು ಸಸ್ಯ ಸಂರಕ್ಷಣೆ

ಪ್ರಮಾಣಿತ ಸಾವಯವ ಮೂಲದ ಗೊಬ್ಬರಗಳು ಹಾಗೂ ಪೀಡೆನಾಶಕಗಳನ್ನು ಬಳಸಬೇಕು (ಆದಷ್ಟು ಕ್ಷೇತ್ರದಲ್ಲೇ ಉತ್ಪಾದಿಸಿ ಉಪಯೋಗಿಸಬೇಕು).

ನೈಸರ್ಗಿಕ ತಡೆಗೋಡೆ

ಸಿಂಪರಣೆ ಮಾಡಿದ ರಾಸಾಯನಿಕ ಕ್ಷೇತ್ರಗಳಿಂದ ಬರಬಹುದಾದಂತಹ ಕೀಟ ನಾಶಕಗಳ ಹರಡುವಿಕೆ (Drift)ಯನ್ನು ತಡೆಯಲು ಸಾವಯವ ಕೃಷಿ ಕ್ಷೇತ್ರದಲ್ಲಿ ನೈಸರ್ಗಿಕ ತಡೆಗೋಡೆಯನ್ನು (ಬಫರ್ ಜ್ಹೋನ್) ನಿರ್ಮಿಸುವುದು.

ಜೈವಿಕ ವೈವಿಧ್ಯತೆ

ಪ್ರತ್ಯೇಕವಿರಬೇಕು ಇಲ್ಲವಾದಲ್ಲಿ ಸಾವಯವ ಕೃಷಿಯಲ್ಲಿ ಬಳಸುವ ಮುನ್ನ ಸ್ವಚ್ಚಗೊಳಿಸಿ ಉಪಯೋಗಿಸಬೇಕು.

ಕ್ಷೇತ್ರ ಮಟ್ಟದಲ್ಲಿ ದಾಖಲಾತಿಗಳ ನಿರ್ವಹಣೆ

  • ಕ್ಷೇತ್ರ ದಿನಚರಿ (Farm Diary)
  • ವಾರ್ಷಿಕ ಸಾವಯವ ಕ್ಷೇತ್ರ ನಿರ್ವಹಣಾ ಯೋಜನೆ (Annual Organic Farm Management Plan)
  • ಖರೀದಿಸಿದ ದಾಖಲೆಗಳು
  • ಮಾರಾಟದ ದಾಖಲೆಗಳು
  • ಮಣ್ಣು ಮತ್ತು ನೀರಿನ ಪರೀಕ್ಷಾ ವರದಿಗಳು
  • ಸಾವಯವ ಕೃಷಿಯ ಬಗ್ಗೆ ತರಬೇತಿ ಪಡೆದ ಮಾಹಿತಿ.

ಕೊಯ್ಲು

ಸಾವಯವ ಬೆಳೆಗಳ ಕೊಯ್ಲಿನಲ್ಲಿ ಹಾಗೂ ಕೊಯ್ಲೋತ್ತರ ಚಟುವಟಿಕೆಗಳಲ್ಲಿ ಬಳಸುವ ಉಪಕರಣಗಳು ರಾಸಾಯನಿಕ ಕಲುಷಿತ ಮುಕ್ತವಾಗಿರಬೇಕು.

ಶೇಖರಣೆ ಮತ್ತು ಸಾಗಣಿಕೆ

ಸಾವಯವ ಕೃಷಿ ಉತ್ಪನ್ನಗಳನ್ನು ನಿರ್ಭಂದಿತ / ರಾಸಾಯನಿಕ ಕಲುಷಿತ ಮುಕ್ತವಾಗಿ ಶೇಖರಣೆ ಮತ್ತು ಸಾಗಾಣಿಕೆ ಮಾಡಬೇಕು.

ಸಾವಯವ ಕೃಷಿ ಪ್ರಮಾಣೀಕರಣದಲ್ಲಿ ನಿಷೇಧಾತ್ಮಕ ಕ್ರಮಗಳು

ಸಮಾನಾಂತರ ಬೆಳೆ (Parallel production):

ಸಾಂದ್ರ ಹಾಗೂ ಸಾವಯವ ಕೃಷಿ ಕ್ಷೇತ್ರಗಳಲ್ಲಿ ಒಂದೇ/ಏಕರೀತಿಯ ಬೆಳೆಗಳನ್ನು ಬೆಳೆಯಬಾರದು

ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳು

  • ರಾಸಾಯನಿಕವಾಗಿ ಉಪಚರಿಸಿದ ಬಿತ್ತನೆ ಬೀಜ/ಸಸ್ಯಾಭಿವೃದ್ಧಿ ಭಾಗಗಳನ್ನು ಉಪಯೋಗಿಸಬಾರದು
  • ಜೈವಿಕವಾಗಿ ಮಾರ್ಪಾಟುಗೊಂಡ (Genetically Modified Organism) ಬಿತ್ತನೆ ಬೀಜ ಮತ್ತು ಸಸ್ಯಾಭಿವೃದ್ಧಿ ಭಾಗಗಳನ್ನು ಉಪಯೋಗಿಸಬಾರದು.

ಸಾವಯವ ಕೃಷಿ

ಸಾವಯವ ಕೃಷಿಯಲ್ಲಿ ರಸಾಯನಿಕ ಗೊಬ್ಬರ, ಪೀಡೆನಾಶಕಗಳು ಹಾಗೂ ಬೆಳೆವಣಿಗೆಯ ಹಾರ್ಮೋನ್ ಗಳನ್ನು ಉಪಯೋಗಿಸಬಾರದು.

ಭೂಮಿಯನ್ನು ಆಗಿಂದಾಗೆ ಬದಲಾವಣೆ ಮಾಡಬಾರದು

ಸಾವಯವ ಕೃಷಿಯಿಂದ ಸಾಂದ್ರ ಕೃಷಿ ಪದ್ಧತಿಗೆ ಹಾಗೂ ಸಾಂದ್ರ ಕೃಷಿ ಪದ್ಧತಿಯಿಂದ ಸಾವಯವ ಕೃಷಿ ಪದ್ಧತಿಗೆ ಆಗಿಂದಾಗೆ ಬದಲಾವಣೆ ಮಾಡಬಾರದು.

ಮನುಷ್ಯನ ಮಲ ಮೂತ್ರ

ಮನುಷ್ಯನ ಮಲ ಮೂತ್ರವನ್ನು ಸಾವಯವ ಕೃಷಿಯಲ್ಲಿ ಗೊಬ್ಬರವಾಗಿ ಬಳಸಬಾರದು.

ಪ್ರಮಾಣೀಕರಣ ಸೇವೆಗಳು

ವ್ಯಕ್ತಿಗತ ಸಾವಯವ ಕೃಷಿ ಕ್ಷೇತ್ರ


ವ್ಯಕ್ತಿಗತ (Individual) ಸಾವಯವ ಪ್ರಮಾಣೀಕರಣ ಮಾಡಿಸಲು ಇಚ್ಚಿಸುವವರು ಈ ಕೆಳಗಿನಂತೆ ದಾಖಲಾತಿಗಳನ್ನು ನೀಡುವುದು ಮತ್ತು ಕಾರ್ಯನಿರ್ವಹಿಸುವುದು

  • ಪ್ಯಾನ್ ಕಾರ್ಡ್ ಜೆರಾಕ್ಸ್ ಕಾಪಿ ನೀಡುವುದು.
  • ಪ್ರಮಾಣೀಕರಣ ಕ್ಷೇತ್ರದ ಅಕ್ಷಾಂಶ ಮತ್ತು ರೇಖಾಂಶ ಗಳನ್ನು ನೀಡುವುದು.
  • ಬೆಂಗಳೊರಿನಿಂದ ಪ್ರಮಾಣೀಕರಣ ಕ್ಷೇತ್ರಕ್ಕೆ ಬರುವುದಕ್ಕಿರುವ ದಾರಿಯ ದೂರ (ಕಿ .ಮಿ.) ಮತ್ತು ನಕ್ಷೆಯನ್ನು ನೀಡುವುದು.
  • ಇದಲ್ಲದೆ ಬೇರೆ ದಾಖಲಾತಿಗಳು ಹಾಗೂ ಕಾರ್ಯವಿಧಾನಗಳನ್ನು ಸಂಸ್ಥೆಯು ಆಗಿಂದಾಗೆ ಕೇಳಿದಾಗ ನೀಡುವುದು

ಸಾವಯವ ರೈತರ ಗುಂಪು


ಗುಂಪು ಪ್ರಮಾಣೀಕರಣ

ಉತ್ಪಾದಕ ಗುಂಪುಗಳು, ರೈತರ ಸಹಕಾರ ಸಂಘಗಳು, ಕರಾರು ಉತ್ಪಾದಕರು ಮತ್ತು ಸಣ್ಣ ಸಂಸ್ಕರಣ ಘಟಕಗಳು ಆಂತರಿಕ ಗುಣಮಟ್ಟ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪ್ರಮಾಣೀಕರಣ ಮಾಡಿಸುವುದಕ್ಕೆ ಗುಂಪು ಪ್ರಮಾಣೀಕರಣ ಎನ್ನುತ್ತಾರೆ.


ಗುಂಪು ಪ್ರಮಾಣೀಕರಣದ ಅನುಕೂಲಗಳು

  • ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಗುಂಪಿನಲ್ಲಿ ಪ್ರಮಾಣೀಕರಣ ಮಾಡಿಸುವುದರಿಂದ ಪ್ರಮಾಣೀಕರಣ ವೆಚ್ಚವು ಕಡಿಮೆಯಾಗುತ್ತದೆ.
  • ಗುಂಪು ಪ್ರಮಾಣೀಕರಣದಿಂದ ಹೆಚ್ಚಿನ ತರಬೇತಿಯನ್ನು ಪಡೆದುಕೊಳ್ಳುವುದರ ಮೂಲಕ ಆಧುನಿಕ ಹಾಗೂ ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಬಹುದು.
  • ಗುಂಪಿನಲ್ಲಿರುವ ರೈತರು ಸಾವಯವ ಕೃಷಿ ಉತ್ಪನ್ನಗಳಿಗೆ ತಗಲುವ ಸಂಸ್ಕರಣಾ ವೆಚ್ಚವನ್ನು ಕಡಿಮೆ ಮಾಡಬಹುದಲ್ಲದೆ, ಸಂಸ್ಕರಣಾ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
  • ರಫ್ತುದಾರರು ಅಥವಾ ಮಾರಾಟಗಾರರಿಗೆ ಸಾವಯವ ಕೃಷಿ ಉತ್ಪನ್ನಗಳ   ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವುದರಿಂದ ಗುಂಪಿನಲ್ಲಿರುವ ಸದಸ್ಯರಿಗೆ ಉತ್ತಮ ಮಾರುಕಟ್ಟೆ ದರ ದೊರೆಯುವುದಲ್ಲದೆ, ಉತ್ಪನ್ನಗಳನ್ನು ಸುಲಭವಾಗಿ ಮಾರಾಟ ಮಾಡಬಹುದಾಗಿರುತ್ತದೆ.

ಗುಂಪು ಪ್ರಮಾಣೀಕರಣಕ್ಕೆ ಬೇಕಾಗುವ ಕನಿಷ್ಠ ಅಗತ್ಯತೆಗಳು

  • ರೈತರ ಗುಂಪು ಕಾನೂನಾತ್ಮಕವಾಗಿ ಒಂದೇ ಅಸ್ತಿತ್ವದ ಅಡಿಯಲ್ಲಿ ನೊಂದಣಿಯಾಗಿರಬೇಕು.
  • ಗುಂಪಿನಲ್ಲಿರುವ ರೈತರು  ನಿರ್ದಿಷ್ಟ ಭೌಗೋಳಿಕ ಪರಿಮಿತಿಯಲ್ಲಿರಬೇಕು ಹಾಗೂ ಏಕ ರೀತಿಯ ಉತ್ಪಾದನಾ ಪದ್ಧತಿಯನ್ನು ಅನುಸರಿಸುತ್ತಿರಬೇಕು.
  • ಒಂದು ಗುಂಪಿನಲ್ಲಿ ಕನಿಷ್ಠ 25 ಗರಿಷ್ಠ 500 ರವರೆಗೆ ಸದಸ್ಯರು ಇರಬಹುದು.
  • ಬಾಹ್ಯ ನಿರೀಕ್ಷಣಾ ಸಂಸ್ಥೆಯು ನಿರೀಕ್ಷಣೆ ಕೈಗೊಳ್ಳುವ ಮೊದಲು ಆಂತರಿಕ ನಿರೀಕ್ಷಕರು ಎಲ್ಲಾ ಕ್ಷೇತ್ರಗಳ ನಿರೀಕ್ಷಣೆಯನ್ನು ಕಡ್ಡಾಯವಾಗಿ ಕೈಗೊಂಡಿರಬೇಕು.
  • ಗುಂಪು ಪ್ರಮಾಣನ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಈ ಕೆಳಕಂಡ ಸಿಬ್ಬಂದಿಗಳನ್ನು ನೇಮಿಸಬೇಕು.
    • ಆಂತರಿಕ ಗುಣಮಟ್ಟ ವ್ಯವಸ್ಥೆಯ ವ್ಯವಸ್ಥಾಪಕರು
    • ಆಂತರಿಕ ನಿರೀಕ್ಷಕರು
    • ಮಂಜೂರಾತಿ ವ್ಯವಸ್ಥಾಪಕರು/ಸಮಿತಿ
    • ಕ್ಷೇತ್ರ ಅಧಿಕಾರಿಗಳು
    • ಖರೀದಿ ಅಧಿಕಾರಿಗಳು
    • ಉಗ್ರಾಣ ವ್ಯವಸ್ಥಾಪಕರು
    • ಸಂಸ್ಕರಣಾ ವ್ಯವಸ್ಥಾಪಕರು
  • ಗುಂಪು ಪ್ರಮಾಣೀಕರಣದಲ್ಲಿ ನಿರ್ವಹಿಸಬೇಕಾದ ದಾಖಲೆಗಳು:
    • ಕರಾರು: ಪ್ರಮಾಣನ ಮಾನದಂಡಗಳನ್ನು ಪಾಲಿಸುವ ಬಗ್ಗೆ ಗುಂಪಿನ ಸದಸ್ಯರ ನಡುವೆ ಲಿಖಿತ ಒಪ್ಪಂದ.
    • ಸಾವಯವ ಕ್ಷೇತ್ರ ನಿರ್ವಹಣಾ ಯೋಜನೆ (ಬೀಜದಿಂದ ಮಾರಾಟದವರೆಗೆ):
      • ಕ್ಷೇತ್ರದ ಇತಿಹಾಸ
      • ಕ್ಷೇತ್ರದ ನಕ್ಷೆ
      • ಫಾರಂ ಡೈರಿ
      • ರಸೀದಿಗಳು (ಖರೀದಿ/ಮಾರಾಟ)
      • ಗುಂಪು ಕ್ಷೇತ್ರಗಳ ನಕ್ಷೆ (Overview Map)
  • ಆಂತರಿಕ ಮಾನದಂಡಗಳು: ಗುಂಪು ಪ್ರಮಾಣೀಕರಣಕ್ಕೆ ಅವಶ್ಯವಿರುವ ಆಂತರಿಕ ಮಾನದಂಡಗಳನ್ನು ಸ್ಥಳೀಯ ಭಾಷೆಯಲ್ಲಿ ಅಭಿವೃದ್ಧಿ ಪಡಿಸಿ ಅಳವಡಿಸಿಕೊಳ್ಳಬೇಕು.
  • ಗುಂಪಿನಲ್ಲಿರುವ ರೈತರು/ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ನೀಡಬೇಕು.
  • ಗುಂಪು ಪ್ರಮಾಣೀಕರಣದಲ್ಲಿ ಆಂತರಿಕ ನಿರೀಕ್ಷಕರು ಪ್ರತಿ ವರ್ಷದಲ್ಲಿ ಬೆಳೆಗನುಗುಣವಾಗಿ ಕನಿಷ್ಠ ಎರಡು ನಿರೀಕ್ಷಣೆಗಳನ್ನು ಕೈಗೊಳ್ಳಬೇಕು.
  • ಗುಂಪಿನ ಹೆಸರಿನಲ್ಲಿ PAN ಕಾರ್ಡ್ ಇರಬೇಕು.

ಸಾವಯವ ಅರಣ್ಯ ಉತ್ಪನ್ನಗಳು


  • ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಾಗ ಪರಿಸರಕ್ಕೆ ದಕ್ಕೆಯಾಗದಂತೆ ಪೂರಕವಾಗಿರಬೇಕು.
  • ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಾಗ ನೈಸರ್ಗಿಕ ಸಮತೋಲನ ಹಾಗೂ ಪರಿಸರ ಸುಸ್ಥಿರತೆ ಕಾಪಾಡಲು ಒತ್ತು ನೀಡಬೇಕು.
  • ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಾಗ ಪರಿಸರದಲ್ಲಿರುವ ಸಸ್ಯ ಹಾಗೂ ಜೀವ ಸಂಕುಲಕ್ಕೆ ಯಾವುದೇ ಹಾನಿ ಉಂಟುಮಾಡಬಾರದು.
  • ಅರಣ್ಯ ಉತ್ಪನ್ನಗಳನ್ನು ಸ್ಪಷ್ಟವಾಗಿ ಗುರುತಿಸಿದ ದೃಢ  (Stable) ಮತ್ತು ಸುಸ್ಥಿರ (Sustainable) ಪ್ರದೇಶದಲ್ಲಿ ಸಂಗ್ರಹಣೆ ಮಾಡಬೇಕು.
  • ಅರಣ್ಯ ಉತ್ಪನ್ನಗಳ ಸಂಗ್ರಹಣಾ ಪ್ರದೇಶವು ಕಲುಷಿತ/ಮಾಲಿನ್ಯ/ನಿಷೇಧಾತ್ಮಕ ಪ್ರದೇಶದಿಂದ ದೂರವಿರಬೇಕು ಮತ್ತು ಪರಿವೀಕ್ಷಣೆಗೆ ಯೋಗ್ಯವಾಗಿರಬೇಕು.
  • ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪತ್ರವನ್ನು ಪಡೆಯಬೇಕು.
  • ಅರಣ್ಯ ಉತ್ಪನ್ನಗಳ ಸಂಗ್ರಹಣಾ ಪ್ರದೇಶದ ನೀಲಿ ನಕ್ಷೆಯನ್ನು ಪ್ರಮಾಣನ ಸಂಸ್ಥೆಗೆ ಒದಗಿಸಬೇಕು.

ಸಾವಯವ ಉತ್ಪನ್ನಗಳ ಸಂಸ್ಕರಣೆ


  • ಸಾವಯವ ಉತ್ಪನ್ನಗಳ ಸಂಸ್ಕರಣೆ ಹಾಗೂ ಕೃಷಿ ಪರಿಕರಗಳನ್ನು ಉತ್ಪಾದಿಸುವ ಕಾರ್ಯವಿಧಾನವನ್ನು ಸ್ಪಷ್ಟವಾಗಿ ಬರವಣಿಗೆಯಲ್ಲಿ ನೀಡಬೇಕು.
  • ಸಂಸ್ಕರಣ ಘಟಕ/ಕೃಷಿ ಪರಿಕರಗಳ ಉತ್ಪಾದನ ಘಟಕ/ಮಾರಾಟಗಾರರ ಸ್ಥಳವು ಕಲುಷಿತ ಮುಕ್ತವಾಗಿರಬೇಕು.
  • ಉತ್ಪಾದನೆಯಲ್ಲಿ ಬಳಸುವ ಎಲ್ಲಾ ಪದಾರ್ಥಗಳು ಸಾವಯವ ಪ್ರಮಾಣಿತ ಮೂಲದ್ದಾಗಿರಬೇಕು.
  • ಸಂಸ್ಕರಣಾ ಉತ್ಪನ್ನಗಳನ್ನು ಪೊಟ್ಟಣೀಕರಿಸಲು ಬಳಸುವ ವಸ್ತುವು ಪರಿಸರ ಸ್ನೇಹಿಯಾಗಿರಬೇಕು.
  • ಉತ್ಪನ್ನಗಳ ಶೇಖರಣೆ ಹಾಗೂ ಸಾಗಾಣಿಕೆ ಕಲುಷಿತ ಮುಕ್ತವಾಗಿರಬೇಕು.
  • ಮೇಲಿನ ಎಲ್ಲಾ ಚಟುವಟಿಕೆಗಳ ಖರೀದಿ ಮತ್ತು ಮಾರಾಟದ ರಸೀದಿಗಳು ಹಾಗೂ ಇತರೆ ದಾಖಾಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.

ಸಾವಯವ ಉತ್ಪನ್ನಗಳ ಮಾರಾಟಗಾರರು


  • ಸಾವಯವ ಉತ್ಪನ್ನಗಳ ಸಂಸ್ಕರಣೆ ಹಾಗೂ ಕೃಷಿ ಪರಿಕರಗಳನ್ನು ಉತ್ಪಾದಿಸುವ ಕಾರ್ಯವಿಧಾನವನ್ನು ಸ್ಪಷ್ಟವಾಗಿ ಬರವಣಿಗೆಯಲ್ಲಿ ನೀಡಬೇಕು.
  • ಸಂಸ್ಕರಣ ಘಟಕ/ಕೃಷಿ ಪರಿಕರಗಳ ಉತ್ಪಾದನ ಘಟಕ/ಮಾರಾಟಗಾರರ ಸ್ಥಳವು ಕಲುಷಿತ ಮುಕ್ತವಾಗಿರಬೇಕು.
  • ಉತ್ಪಾದನೆಯಲ್ಲಿ ಬಳಸುವ ಎಲ್ಲಾ ಪದಾರ್ಥಗಳು ಸಾವಯವ ಪ್ರಮಾಣಿತ ಮೂಲದ್ದಾಗಿರಬೇಕು.
  • ಸಂಸ್ಕರಣಾ ಉತ್ಪನ್ನಗಳನ್ನು ಪೊಟ್ಟಣೀಕರಿಸಲು ಬಳಸುವ ವಸ್ತುವು ಪರಿಸರ ಸ್ನೇಹಿಯಾಗಿರಬೇಕು.
  • ಉತ್ಪನ್ನಗಳ ಶೇಖರಣೆ ಹಾಗೂ ಸಾಗಾಣಿಕೆ ಕಲುಷಿತ ಮುಕ್ತವಾಗಿರಬೇಕು.
  • ಮೇಲಿನ ಎಲ್ಲಾ ಚಟುವಟಿಕೆಗಳ ಖರೀದಿ ಮತ್ತು ಮಾರಾಟದ ರಸೀದಿಗಳು ಹಾಗೂ ಇತರೆ ದಾಖಾಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.

ಸಾವಯವ ಕೃಷಿ ಪರಿಕರಗಳ ಅನುಮೋದನೆ


  • ಸಾವಯವ ಉತ್ಪನ್ನಗಳ ಸಂಸ್ಕರಣೆ ಹಾಗೂ ಕೃಷಿ ಪರಿಕರಗಳನ್ನು ಉತ್ಪಾದಿಸುವ ಕಾರ್ಯವಿಧಾನವನ್ನು ಸ್ಪಷ್ಟವಾಗಿ ಬರವಣಿಗೆಯಲ್ಲಿ ನೀಡಬೇಕು.
  • ಸಂಸ್ಕರಣ ಘಟಕ/ಕೃಷಿ ಪರಿಕರಗಳ ಉತ್ಪಾದನ ಘಟಕ/ಮಾರಾಟಗಾರರ ಸ್ಥಳವು ಕಲುಷಿತ ಮುಕ್ತವಾಗಿರಬೇಕು.
  • ಉತ್ಪಾದನೆಯಲ್ಲಿ ಬಳಸುವ ಎಲ್ಲಾ ಪದಾರ್ಥಗಳು ಸಾವಯವ ಪ್ರಮಾಣಿತ ಮೂಲದ್ದಾಗಿರಬೇಕು
  • ಸಂಸ್ಕರಣಾ ಉತ್ಪನ್ನಗಳನ್ನು ಪೊಟ್ಟಣೀಕರಿಸಲು ಬಳಸುವ ವಸ್ತುವು ಪರಿಸರ ಸ್ನೇಹಿಯಾಗಿರಬೇಕು.
  • ಉತ್ಪನ್ನಗಳ ಶೇಖರಣೆ ಹಾಗೂ ಸಾಗಾಣಿಕೆ ಕಲುಷಿತ ಮುಕ್ತವಾಗಿರಬೇಕು.
  • ಮೇಲಿನ ಎಲ್ಲಾ ಚಟುವಟಿಕೆಗಳ ಖರೀದಿ ಮತ್ತು ಮಾರಾಟದ ರಸೀದಿಗಳು ಹಾಗೂ ಇತರೆ ದಾಖಾಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.

ವಿಳಾಸ




ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ (KSOCA)

(KSSOCA ಸಂಸ್ಥೆಯ ವಿಭಾಗ - ಕರ್ನಾಟಕ ಸರ್ಕಾರದ ಅಂಗಸಂಸ್ಥೆ)

ಬ್ಯಾಪ್ಟಿಸ್ಟ್ ಆಸ್ಪತ್ರೆ ಎದುರು, ಬಳ್ಳಾರಿ ರಸ್ತೆ, ಹೆಬ್ಬಾಳ, ಬೆಂಗಳೂರು 560024

ದೂರವಾಣಿ ಸಂಖ್ಯೆ : 080 23418302,

ಮೊಬೈಲ್ ಸಂಖ್ಯೆ: 9448990362/9448990356/9448990353/9448990382

ಫ್ಯಾಕ್ಸ್ ಸಂಖ್ಯೆ: 080 23415506

ಇ-ಮೇಲ್ : ksocabng@gmail.com

ವೆಬ್ಸೈಟ್ : www.kssoca.ಇನ್

ಮೂಲ : ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ

ಕೊನೆಯ ಮಾರ್ಪಾಟು : 7/13/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate