ವಿಳಾಸ | ರಮೇಶ ರಾಜುರವರ ತೋಟ |
---|---|
ಸ್ಥಳ | ಪಾಂಡವಪುರ , ಮಂಡ್ಯಜಿಲ್ಲೆ |
ಕೃಷಿಕ | ಶ್ರೀ ರಮೇಶ್ರಾಜು ಹೆಚ್.ಕೆ |
ಬೆಳೆ | ಕಬ್ಬು ,ಬಾಳೆಹಣ್ಣು ,ಬದನೇಕಾಯಿ,ಬತ್ತ ,ತೆಂಗಿನಕಾಯಿ ,ಜೋಳ |
ಕೃಷಿ ಭೂಮಿ | 15 ಎಕರೆಗಳು |
ವರದಿಗಾರ | ಶ್ರೀ ರಘು |
ದಿನಾಂಕ | Dec 30, 2013 |
ರಮೇಶ್ ರಾಜುರವರ ತೋಟವು ನಮಗೆ ನೈಸರ್ಗಿಕ ಕೃಷಿಯ ಸಮೃದ್ಧವಾದ,ಶ್ರೇಷ್ಠವಾದ,ಜೀವಂತ ಉದಾಹರಣೆಯಾಗಿರುತ್ತದೆ. ಕಬ್ಬು ಇವರ ಪ್ರಮುಖ ಬೆಳೆ. ಸುಮಾರು 500 ಟನ್ ಕಬ್ಬನ್ನು ಪ್ರತಿ ವರ್ಷ ಬೆಳೆಯುತ್ತಾರೆ. ಇವರು ಉಳುವುದಾಗಲಿ,ಗೊಬ್ಬರ ಹಾಕುವುದಾಗಲಿ,ಮತ್ತೆ ಬೀಜ ಬಿತ್ತುವುದಾಗಲಿ ಮಾಡುವುದಿಲ್ಲ.ಕಬ್ಬನ್ನು ಕೊಯ್ಲು ಮಾಡಿದ ಮೇಲೆ ಅದರ ಮುಂದಿನ ಪೀಳಿಗೆಯು(ಬೆಳೆಯು)ತಾನಾಗಿಯೇ ಬೆಳೆಯಲು ಪ್ರಾರಂಭಿಸುತ್ತದೆ.ಕಬ್ಬಿನಿಂದ ಬಿದ್ದ ಎಲೆಗಳು ಒಂದು ಅಡಿಯಷ್ಟು ಆಳವಾದ ಮುಚ್ಚಿಗೆಯ ನೆಲವಾಗಿ ರಕ್ಷಣಾ ಪದರದಂತೆ ಕೂಡಿರುತ್ತದೆ.
ಕಬ್ಬಿನ ಕಟಾವು ಆದ ನಂತರ ಮಸೂರ ಅವರೆಯನ್ನು ಬಿತ್ತಲಾಗುತ್ತದೆ.ಇದು ಮುಂದಿನ ಹಂತದ ಕಬ್ಬಿನ ಇಳುವರಿಗಿಂತ ಮುಂಚೆಯೇ ಇದರ ಇಳುವರಿ ಪಡೆಯಬಹುದು.ಅತೀ ಮುಖ್ಯವಾಗಿ ಅವುಗಳು ಸಾರಜನಕದ ಸ್ಥಿರೀಕರಣಕ್ಕೆ ಉಪಯುಕ್ತವಾಗುತ್ತದೆ. ಇದರಿಂದಾಗಿ ಮಣ್ಣಿನ ಫಲವತ್ತತೆಯೂ ಸಹ ಹೆಚ್ಚುತ್ತದೆ.
ವಿವಿಧ ಬೆಳೆಗಳನ್ನು ಬೆಳೆಯುವುದನ್ನು ಅತೀ ಮುಖ್ಯವಾದ,ಅಗತ್ಯವಾದ,ಲಾಭದಾಯಕವಾದ ಅಂಶವಾಗಿ ನೈಸರ್ಗಿಕ ಕೃಷಿಯಲ್ಲಿ ಕಾಣಬಹುದು.ರಮೇಶ್ ರಾಜುರವರ ತೋಟದಲ್ಲಿ ಅಡಿಕೆಯೂ ಸಹ ಬಾಳೆಹಣ್ಣು ಮತ್ತು ದಾಳಿಂಬ್ರೆ ಹಣ್ಣುಗಳ ಒಡಗೂಡಿ ಬೆಳೆಯುತ್ತಿದ್ದಾರೆ. ಅಡಿಕೆಯು ನಗದು ಬೆಳೆ ಅದರೂ ಕೂಡ ಬೆಳೆಯಲು ಸಮಯ ತೆಗೆದುಕೊಳ್ಳುವುದು.ಅಡಿಕೆಯು ಎಳೆಯದಿರುವಾಗ ನೆರಳಿನ ಅವಶ್ಯಕತೆ ಇರುತ್ತದೆ ಮತ್ತು ಅದು ಬೆಳೆಯುತ್ತಿರುವಾಗ ಅದರ ಬೇರು ಸಹ ಆಳವಾಗಿ ಬೆಳೆಯುವುದು.ಬಾಳೆಹಣ್ಣು ಬೇಗ ಬೆಳೆಯುವುದರ ಜೊತೆಗೆ ಅದರ ಎಲೆಗಳು ದೊಡ್ಡ ಮತ್ತು ಅಗಲವಿರುವುದರಿಂದ ಅದು ಅಡಿಕೆಗೆ ಸಾಕಷ್ಟು ನೆರಳನ್ನು ಒದಗಿಸುತ್ತದೆ ಮತ್ತು ಎಳೆಯದಾದ ಅಡಿಕೆಗೆ ಮುಚ್ಚಿಗೆಯ ಅಂಶವನ್ನು ಒದಗಿಸುತ್ತದೆ. ಬಾಳೆಹಣ್ಣಿನ ಬೇರುಗಳು ಮೇಲ್ಮೈ ಇರುವುದರಿಂದ ಅಡಿಕೆಯ ಬೇರುಗಳೊಡನೆ ಹಸ್ತಕ್ಷೇಪವಿರುವುದಿಲ್ಲ.ಅರ್ಲಿ-ಶೂಟ್,ಹೆಲಿಯೊತಿಸ್ ಮತ್ತು ವೈಟ್-ಫ್ಲೈ ಅಂತಹ ಕೀಟಗಳು ಈ ಸಹಬಾಳ್ವೆಯನ್ನು ಕೆಡಿಸಬಹುದು.ಆಶ್ಚರ್ಯಕರವಾಗಿ ಅಡಿಕೆಯ ಕೃಷಿಭೂಮಿಯನ್ನು ಹತ್ತಿ,ಚೆಂಡುಹೂವು ಮತ್ತು ಉದ್ದವಾದ ಮರಗಳಿಂದ ಸುತ್ತುವರೆದಿವೆ.ಈ ಕೃಷಿಕನಿಗೆ ಇದರ ಯಾವುದೇ ಇಳುವರಿಯ ಆಸಕ್ತಿ ಇಲ್ಲ, ಆದರೆ ಈ ಕೀಟಗಳು ಅಡಿಕೆ ಅಥವಾ ಬಾಳೆಹಣ್ಣಿನ ಬದಲು ಹತ್ತಿ ಅಥವಾ ಚೆಂಡು ಹೂವಿಗೆ ಆಕರ್ಷಣೆಯಾಗಿ ಅಡಿಕೆ ಮತ್ತು ಬಾಳೆಹಣ್ಣು ಕೀಟಗಳ ಭಾದೆಯಿಂದ ಮುಕ್ತವಾಗಿವೆ.ಗೀಜಗದಂತಹ ಹಕ್ಕಿಗಳಿಗೆ ಈ ಕೀಟಗಳು ಆಹಾರವಾಗುತ್ತದೆ. ಉದ್ದವಾದ ಮರಗಳು ಹಕ್ಕಿಗಳಿಗೆ ಕೀಟಗಳನ್ನು ಹುಡುಕುವುದಕ್ಕೆ ಉಪಯುಕ್ತವಾಗುತ್ತದೆ. ಈ ಮರಗಳು ಹಕ್ಕಿಗಳಿಗೆ ಗೂಡನ್ನು ಕಟ್ಟುವುದಕ್ಕೂ ಸಹ ಉಪಯೋಗವಾಗುತ್ತದೆ.ಚೆಂಡುಹೂವು ಕೀಟಗಳ ಭಾದೆಯನ್ನು ನಿಯಂತ್ರಿಸುವುದಲ್ಲದೆ ಕೃಷಿಭೂಮಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಮಂಡ್ಯ ಜಿಲ್ಲೆಯು ಕಬ್ಬಿನ ಭೂಮಿ.ಟನ್ನುಗಟ್ಟಲೆಯಷ್ಟು ಕಬ್ಬನ್ನು ರೈತರು ಬೆಳೆಯುತ್ತಾರೆ.ಕಬ್ಬನ್ನು ಸಕ್ಕರೆ ಮತ್ತು ಬೆಲ್ಲಕ್ಕಾಗಿ ಮುಖ್ಯವಾಗಿ ಬೆಳೆಯುತ್ತಾರೆ.ರಮೇಶ್ ರಾಜು ಮತ್ತು ಇತರೆ ರೈತರು ಹಾಗು ಒಬ್ಬ ಪ್ರತ್ಯೇಕವಾದ ವಿಜ್ಞಾನಿ ಹಲವಾರು ವರ್ಷಗಳಿಂದ ಜೊತೆಗೂಡಿ ನಾವಿನ್ಯ ರೀತಿಯ ವಿನ್ಯಾಸವನ್ನು ಕಾರ್ಯಗತಗೊಳಿಸಿ ಬೆಲ್ಲ ಉತ್ಪಾದನೆಯ ಕಾರ್ಖಾನೆಯನ್ನು ನಿರ್ಮಿಸಿದ್ದಾರೆ.ಈ ಕಾರ್ಖಾನೆಯು ಒಂದು ಘಂಟೆಯಲ್ಲಿ ಕಬ್ಬನ್ನು ಪ್ರಕ್ರಿಯಿಸಿ 200ಏಉಯಷ್ಟು ಬೆಲ್ಲವನ್ನು ಉತ್ಪಾದನೆ ಮಾಡುತ್ತದೆ.
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 1/28/2020
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.
ಕಷ್ಟ ಪಡುವುದೇ ಕೃಷಿ ಮಹಿಳೆಯ ಬದುಕೇ
ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ