ವಿಳಾಸ | ರೇಣುಕಾರವರ ಕೃಷಿಕೇಂದ್ರ |
---|---|
ಸ್ಥಳ | ನೆಲಮಂಗಲ ಹತ್ತಿರ |
ಕೃಷಿಕ | ಶ್ರೀ ರೇಣುಕಾ |
ಬೆಳೆ | ಹೂಕೋಸು, ಬದನೆಕಾಯಿ, ಬೆಂಡೆಕಾಯಿ ಮತ್ತು ಇತರೆ ತರಕಾರಿಗಳು |
ಕೃಷಿ ಭೂಮಿ | 0.75 ಎಕರೆಗಳು |
ವರದಿಗಾರ | ಶ್ರೀ ರಘು |
ದಿನಾಂಕ | Nov 1, 2013 |
ರೇಣುಕಾ ಸೊಪ್ಪುಗಳನ್ನು ಹಾಗೂ ತರಕಾರಿಗಳಾದ ಹೂಕೋಸು, ಬದನೆಕಾಯಿ, ಮತ್ತು ಬೆಂಡೆಕಾಯಿಗಳನ್ನು ಬೆಳೆಯುವ ಒಬ್ಬ ಉತ್ಸಾಹಭರಿತ ಯುವ ರೈತ. ಇವರು ವಾರದಲ್ಲಿ ಎರಡು ಬಾರಿ ತಮ್ಮ ಉತ್ಪನ್ನಗಳನ್ನು ಗಾಡಿಯಲ್ಲಿ ಸಾವಯವ ಮಳಿಗೆಗೆ ಮಾರಾಟಕ್ಕಾಗಿ ಸಾಗಿಸುತ್ತಾರೆ. ಈ ಸಗಟು ವ್ಯಾಪಾರ ಕೇಂದ್ರವು ಬೆಂಗಳೂರಿನಲ್ಲಿನ ಸಾವಯವ ಮಳಿಗೆಗೆಳಿಗೆ ತಾಜಾ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಒದಗಿಸುತ್ತದೆ.
ನಗರದ ಗ್ರಾಹಕರ ಕೃಷಿಯ ಬಗೆಗಿನ ಅಲ್ಪಜ್ಞಾನದಿಂದಾಗಿ ಸಾವಯವ ರೈತನು ಸಮಸ್ಯಗೀಡಾಗುತ್ತಿದ್ದಾನೆಂಬ ಸಂಗತಿಯನ್ನು ಇವರು ನಮಗೆ ತಿಳಿಸಿದರು. ಕೇವಲ ಮಿಶ್ರಜ ಬೀಜಗಳಿಂದ ಮಾತ್ರ ಉನ್ನತ ಇಳುವರಿ ಪಡೆಯಲು ಸಾಧ್ಯವೆಂಬ ನಮ್ಮ ಅನಿಸಿಕೆ ಸುಳ್ಳು. ನಿಜಾಂಶವೇನೆಂದರೆ, ಸಾವಯವ ಕೃಷಿಯಿಂದಲೂ ಕೂಡ 5 ಕೆ.ಜಿ ತೂಕದ ಎಲೆಕೋಸನ್ನು ಮತ್ತು 3 ಕೆ.ಜಿ ತೂಕದ ಹೂಕೋಸನ್ನು ಬೆಳೆಯಬಹುದೆಂಬ ಆಶ್ಚರ್ಯಕರ ಸಂಗತಿಯನ್ನು ನಮ್ಮೊಂದಿಗೆ ಇವರು ಹಂಚಿಕೊಂಡರು.
ಸಮಸ್ಯೆ ಏನೆಂದರೆ, ನಗರದ ಜನರು ತಮ್ಮ ವಿಭಕ್ತ ಕುಟುಂಬಗಳಿಗೆ ಅಗತ್ಯವಿದ್ದಷ್ಟು ಒಂದು ಸಣ್ಣ ಎಲೆಕೋಸನ್ನೊ ಅಥವಾ ಒಂದು ಸಣ್ಣ ಹೂಕೋಸನ್ನೊ ಖರೀದಿಸುತ್ತಾರೆ. ಇದರಿಂದಾಗಿ, ರೈತರ ಉನ್ನತ ಉತ್ಪನ್ನ ಮಾರಾಟವಾಗುವುದಿಲ್ಲ. ಹಾಗಾಗಿ ಮಾರುಕಟ್ಟೆಯ ಅಗತ್ಯವನ್ನು ಪೂರೈಸಲು ರೈತನು ಕಡಿಮೆ ಪೌಷ್ಠಿಕಾಂಶದ, ಅಗತ್ಯವಿರುವಷ್ಟು ಗಾತ್ರದ ತಳಿಗಳನ್ನು ಬೆಳೆಯುತ್ತಾನೆ. ಇನ್ನೂ ಕೆಲವೊಂದು ಪ್ರಸಂಗದಲ್ಲಂತೂ ಸೋಂಕಿತ ಮತ್ತು ಇನ್ನೂ ಸಂಪೂರ್ಣವಾಗಿ ಬೆಳೆಯದ ತರಕಾರಿಗಳು ಚನ್ನಾಗಿ ಮಾರಾಟವಾಗುತ್ತವೆ, ಕಾರಣ ಕೇವಲ ಅವುಗಳು ಗ್ರಾಹಕರ ಬೇಡಿಕೆಯ ಗಾತ್ರದ್ದಾಗಿರುತ್ತವೆ.
ಕೇವಲ ಕೀಟನಾಶಗಳಿಂದ ಹಾಗೂ ರಾಸಾಯನಿಕ ಗೊಬ್ಬರದಿಂದ ಮಾತ್ರ ದೊಡ್ಡ ಗಾತ್ರದ ಬೆಳೆಗಳನ್ನು ಬೆಳೆಯಬಹುದೆಂಬ ಸಂಗತಿ ಒಂದು ದೊಡ್ಡ ಮಿಥ್ಯವನ್ನುತ್ತಾರೆ ರೇಣುಕಾರವರು. “ತರಕಾರಿಯನ್ನು ಎರಡು ದಿನದವರೆಗೆ ಬಳಸಿ ಇಲ್ಲವೆ ನೆರೆಮನೆಯವರ ಜೊತೆ ಹಂಚಿಕೊಳ್ಳಿ!” ಎಂದು ಇನ್ನೊಬ್ಬ ರೈತ, ಗಂಗಾಧರರು ಸೂಚಿಸುತ್ತಾರೆ.
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 8/28/2019
ರಾಸಾಯನಿಕ ಗೊಬ್ಬರಗಳ ಪರಿಚಯ
ಕಳೆ ಹತೋಟಿ ಕ್ರಮಗಳು
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ಲಿಂಗಣ್ಣ ಗೌಡರವರ ತೋಟ, ಹಾವೇರಿ