ಸಾವಯವ ಕೃಷಿ ಪರಿವಾರದ ಸದಸ್ಯರು ಒಂದು ಕುಟುಂಬದ ಅಡುಗೆ ಮನೆಗೆ ಬೇಕಾದ ಎಲ್ಲಾ ಉತ್ಪನ್ನಗಳನ್ನು ಹೊಂದಿರುತ್ತಾರೆ.ಈ ಉತ್ಪನ್ನಗಳ ಬೆಲೆಯು ಹಳ್ಳಿಯಲ್ಲಿನ ಕಿರಣೆ ಅಂಗಡಿಯಲ್ಲಿ ಸಿಗುವ ಬೆಲೆಗೆ ಹೋಲಿಸಿದರೆ ಸರಿಸುಮರು ಒಂದೆ ಆಗಿರುತ್ತದೆ.ಇಲ್ಲಿ ಧಾನ್ಯಗಳು, ಕಾಳುಗಳು, ಮಸಾಲೆಗಳು, ಮೌಲ್ಯಾಧಾರಿತ ಪದಾರ್ಥಗಳು ಆಯುರ್ವೇದ ಉತ್ಪನ್ನುಗಳು ಹಾಗೂಸಣ್ಣ ಅರಣ್ಯ ಉತ್ಪನ್ನಗಳನ್ನು ಸಂಸ್ಕರಿಸಿ ಇಡಲಾಗುತ್ತದೆ.
ಗ್ರಾಹಕರು ಪ್ರತಿ ತಿಂಗಳು ಸಂಘಟಿಸಿದ “ಸಾವಯವ ಮೇಳ” ಸಮಯದಲ್ಲಿ ನಮ್ಮ ರೈತರಿಂದ ಸಾವಯವ ಉತ್ಪನ್ನಗಳನ್ನು ಖರೀದಿಸಬಹುದು.
80 ಕ್ಕೂ ಹೆಚ್ಚು ಉತ್ಪನ್ನಗಳು ಸಾವಯವ ಮೇಳ ಸಮಯದಲ್ಲಿ ಮಾರಾಟಕ್ಕೆ ಇರುತ್ತದೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಊಟದ ಬಟ್ಟಲಲ್ಲೂ ವಿಷವಿದೆ ಎಂಬ ಆಘಾತಕಾರೀ ವಿಷಯವನ್ನು ಕೇಳಿದ್ದೇವೆ. ಕೃಷಿಯಲ್ಲಿ ನಾವು ಬಳಸುತ್ತಿರುವ ರಾಸಾಯನಿಕ ಒಳಸುರಿಗಳ ಶೇಷಗಳು ನಮ್ಮ ನೆಲ, ಜಲ, ಗಾಳಿಯನ್ನು ಸೇರಿವೆ. ರಾಸಾಯನಿಕ ವಿಷ ಶೇಷಗಳು ನಾವು ಬಳಸುತ್ತಿರುವ ಆಹಾರ ಪದಾರ್ಥಗಳಲ್ಲೂ ಇವೆ. ಅಧ್ಯಯನವೊಂದರ ಪ್ರಕಾರ ನಮ್ಮ ದೇಶದಲ್ಲಿ ಮಾರಾಟವಾಗುವ 51% ಆಹಾರ ಪದಾರ್ಥಗಳಲ್ಲಿ ವಿಷ ಅಂಶವಿರುವುದು ಪತ್ತೆಯಾಗಿದ್ದು ಅವುಗಳಲ್ಲಿ 20% ವಸ್ತುಗಳಲ್ಲಿ ಇವುಗಳ ಪ್ರಮಾಣ ವಿಶ್ವ ಆರೋಗ್ಯ ಸಂಸ್ಥೆ(Wಊಔ) ನಿಗದಿಪಡಿಸಿದ ಪ್ರಮಾಣಕ್ಕಿಂತ ಗಣನೀಯವಾಗಿ ಜಾಸ್ತಿಯಿದೆ. ಇಂತಹ ವಿಷಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ನಮ್ಮ ಆರೋಗ್ಯ ಕೆಡುತ್ತಿದೆ. ಗುಣಪಡಿಸಲಾಗದ ಭೀಕರ ರೋಗಗಳು ನಮ್ಮನ್ನು ಕಾಡುತ್ತಿವೆ. ಪ್ರಾಕೃತಿಕ ಸಮತೋಲನವೂ ತಪ್ಪುತ್ತಿದೆ.
‘ಸ್ವಸ್ಥ ಸಮಾಜಕ್ಕಾಗಿ ವಿಷಮುಕ್ತ ಆಹಾರ’ ನಮ್ಮ ಕನಸು. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಕಳೆದ ಎರಡು ದಶಕಗಳಿಂದ ಕೆಲಸ ಮಾಡುತ್ತಿದೆ. ಸ್ವದೇಶೀ – ಸ್ವಾವಲಂಬಿ – ಸಾವಯವ ಕೃಷಿಯತ್ತ ಅನೇಕ ರೈತರನ್ನು ಪ್ರೇರೇಪಿಸಿ, ಕಾರ್ಯೋನ್ಮುಖರಾಗುವಂತೆ ಮಾಡಿದೆ. ನಮ್ಮ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಸಾವಯವ ರೈತರನ್ನು ‘ಸಾವಯವ ಕೃಷಿ ಪರಿವಾರ’ ಎಂಬ ಸಂಘಟನೆಯಡಿ ಸೇರುವಂತೆ ಮಾಡಿದೆ. ಪ್ರಸ್ತುತ ನಮ್ಮ ದೇಶದ ಅತಿ ದೊಡ್ಡ ಸಾವಯವ ಕೃಷಿಕರ ಸಂಘಟನೆಯೆಂದರೆ ‘ಸಾವಯವ ಕೃಷಿ ಪರಿವಾರ’. ಈ ಪರಿವಾರದ ರೈತ ಸದಸ್ಯರು ಬೆಳೆದ ಸಾವಯವ ಕೃಷಿ ಉತ್ಪನ್ನಗಳನ್ನು ಬಳಕೆದಾರರಿಗೆ ಪೂರೈಸುವ ಪ್ರಯತ್ನವೊಂದನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಮಾಡುತ್ತಿದೆ.
ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ಅಕ್ಕಿ, ಗೋಧಿ, ಜೋಳ, ರಾಗಿ, ತೊಗರಿ, ಹೆಸರು, ಉದ್ದು, ಹುರುಳಿ, ಕಡಲೆ, ಶೇಂಗಾ, ಅರಿಶಿನ, ದನಿಯಾ, ಮೆಣಸು, ಬೆಲ್ಲ, ಮೆಂತೆ, ಸಾಸಿವೆ, ಕಾಳುಮೆಣಸು, ಏಲಕ್ಕಿ, ಚಕ್ಕೆ, ಲವಂಗ, ಜಾಕಾಯಿ, ಕಾಫಿ, ಹುಣಸೆ, ವಾಟೆಪುಡಿ, ಪುನರ್ಪುಳಿ, ಬಾಳೆಹಣ್ಣು, ಮೂಸುಂಬಿ, ಸಪೋಟಾ, ಪೇರಲೆ, ತೆಂಗು, ಅಡಿಕೆ, ಹಸಿಮೆಣಸು, ಸೀಗೆಪುಡಿ, ಅಂಟುವಾಳ, ಹಪ್ಪಳಗಳು, ಇತ್ಯಾದಿ ವಸ್ತುಗಳು ಈ ಯೋಜನೆಯಲ್ಲಿ ಲಭ್ಯವಾಗಲಿದೆ. ನಮ್ಮ ಅಡಿಗೆ ಮನೆಯ ಎಲ್ಲಾ ಅವಶ್ಯಕತೆಗಳನ್ನು ಪೂರೈಸಬೇಕೆಂಬ ಆಶಯ ಸಾವಯವ ಕೃಷಿ ಪರಿವಾರದ್ದು.
ರಾಸಾಯನಿಕ ಗೊಬ್ಬರ, ರೋಗ-ಕೀಟನಾಶಕ ಬಳಕೆ ಮಾಡದ, ಕೃತಕವಾಗಿ ಹಣ್ಣು ಮಾಡದ, ರಾಸಾಯನಿಕ ಕಲಬೆರಕೆಯಿರದ, ಕೃತಕ ಹಾರ್ಮೋನ್ ಬಳಸದ ತಾಜಾ ಆರೋಗ್ಯಕರ ಸಾವಯವ ಉತ್ಪನ್ನಗಳನ್ನು ನಾವು ಬಳಸೋಣ. ಇಂತಹ ಉತ್ಪನ್ನಗಳನ್ನು ಪೂರೈಸುವ ಬೆಳೆಗಾರರನ್ನು ಅಭಿನಂದಿಸೋಣ, ಪ್ರೋತ್ಸಾಹಿಸೋಣ.
ಉತ್ಪನ್ನಗಳ ಸಂಪೂರ್ಣ ಪಟ್ಟಿಗಾಗಿ, ಇಲ್ಲಿ ಕ್ಲಿಕ್ ಮಾಡಿ
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 6/23/2020
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ
ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.
ವ್ಯವಸ್ಥಿತ ತೋಟವೆಂದರೆ ನೋಡಲು ಚೆನ್ನಾಗಿ ಇರಬೇಕು. ಬೆಳೆಯ ಹ...