ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಾವಯವ ಭಾಗ್ಯ

ಸಾವಯವ ಕೃಷಿ ನೀತಿಯಡಿ ಅನುಷ್ಟಾನದಲ್ಲಿದ್ದ ಸಾವಯವ ಗ್ರಾಮ/ಸ್ಥಳ ಯೋಜನೆಯನ್ನು ಕೆಲವು ಪರಿಷ್ಕರಣೆಯೊಂದಿಗೆ 2013-14 ನೇ ಸಾಲಿನಲ್ಲಿ "ಸಾವಯವ ಭಾಗ್ಯ" ಯೋಜನೆ ಹೆಸರಿನಡಿಯಲ್ಲಿ ಹೋಬಳಿ ಮಟ್ಟಕ್ಕೆ ವಿಸ್ತರಿಸಲಾಗಿರುತ್ತದೆ.

ಸಾವಯವ ಕೃಷಿ ನೀತಿಯಡಿ ಅನುಷ್ಟಾನದಲ್ಲಿದ್ದ ಸಾವಯವ  ಗ್ರಾಮ/ಸ್ಥಳ ಯೋಜನೆಯನ್ನು ಕೆಲವು ಪರಿಷ್ಕರಣೆಯೊಂದಿಗೆ 2013-14 ನೇ ಸಾಲಿನಲ್ಲಿ "ಸಾವಯವ ಭಾಗ್ಯ" ಯೋಜನೆ ಹೆಸರಿನಡಿಯಲ್ಲಿ ಹೋಬಳಿ ಮಟ್ಟಕ್ಕೆ ವಿಸ್ತರಿಸಲಾಗಿರುತ್ತದೆ.  ಈ ಹಿಂದೆ ಸಾವಯವ ಗ್ರಾಮ/ಸ್ಥಳ ವಿಸ್ತರಣೆ ಯೋಜನೆ ಚಾಲ್ತಿಯಲ್ಲಿದ್ದ 176 ಹೋಬಳಿಗಳನ್ನು ಹೊರತುಪಡಿಸಿ, ರಾಜ್ಯದ ಉಳಿದ 571 ಹೋಬಳಿಗಳಲ್ಲಿ ಯೋಜನೆಯ ಅನುಷ್ಟಾನಕ್ಕಾಗಿ ಸರ್ಕಾರೇತರ ಸಂಸ್ಥೆಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿರುತ್ತದೆ. ಹಾಗೆಯೇ ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕಾರ್ಯಕ್ರಮಗಳನ್ನು ಸಹ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಯೋಜನೆಯಡಿ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಈ ಕೆಳಕಂಡ ಕಾರ್ಯಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

  • ತಾಲ್ಲೂಕಿನ ಪ್ರತಿ ಹೋಬಳಿಯಲ್ಲಿ 100 ಹೆ. ಪ್ರದೇಶವನ್ನು ಸ್ಥಳ ಆಯ್ಕೆ ಮಾನದಂಡಗಳನ್ವಯ ಸರ್ಕಾರೇತರ ಸಂಸ್ಥೆ ಮತ್ತು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಜಂಟಿಯಾಗಿ ಗುರುತಿಸುವುದು.
  • ಆಯ್ಕೆಯಾದ ಈ ಸ್ಥಳಕ್ಕೆ ಜಂಟಿ ಕೃಷಿ ನಿರ್ದೇಶಕರ ಅಧ್ಯತೆಯ ಜಿಲ್ಲಾ ಚಾಲಾನಾ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆಯುವುದು.
  • ಸರ್ಕಾರೇತರ ಸಂಸ್ಥೆಗಳು ಯೋಜನಾ ಅನುಷ್ಠಾನ ಸ್ಥಳದ ಪ್ರಾಥಮಿಕ ಸಮೀಕ್ಷೆಯನ್ನು ನಿಗಧಿತ ನಮೂನೆಯನ್ವಯ ಕೈಗೊಳ್ಳುವುದು.
  • ಯೋಜನಾ ಪ್ರದೇಶದ ಫಲಾನುಭವಿ ರೈತರನ್ನು ಸಂಘಟನೆಗೊಳಿಸಿ, ಗುಂಪು ರಚಿಸಿ ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ 1960 ರಡಿಯಲ್ಲಿ ನೊಂದಾಯಿಸುವುದು.
  • ಕ್ರಿಯಾಯೋಜನೆ ಅನುಷ್ಠಾನಕ್ಕಾಗಿ ಸದರಿ ಗುಂಪಿನ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆದು, ಸದರಿ ಖಾತೆಯನ್ನು ನೊಂದಾಯಿಸಲಾದ ರೈತರ ಗುಂಪಿನ ಅಧ್ಯಕ್ಷರು, ಸರ್ಕಾರೇತರ ಸಂಸ್ಥೆಯ ಕ್ಷೇತ್ರಾಧಿüಕಾರಿ ಹಾಗೂ ಇಲಾಖೆಯ ಸ್ಥಳಾಧಿಕಾರಿ ಜಂಟಿಯಾಗಿ ನಿರ್ವಹಿಸುವುದು.
  • ಯೋಜನಾ ಅನುಷ್ಠಾನ ಪ್ರದೇಶದ ಸಾವಯವ ಕೃಷಿಕರ ಸಂಘದ (ನೊಂದಾಯಿv ಗುಂಪಿನÀ) ಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ ಹಾಗೂ ಇಲಾಖಾ ಸ್ಥಳಾಧಿಕಾರಿಗಳನ್ನೊಳಗೊಂಡ ಸ್ಥಳ ಸಮಿತಿ  ಯನ್ನು ರಚಿಸುವುದು.
  • ಈ ಸ್ಥಳ ಸಮಿತಿಯು ಯೋಜನಾ ಅನುಷ್ಠಾನ ಪ್ರದೇಶದ ಪ್ರಾಥಮಿಕ ಸಮೀಕ್ಷೆ ಹಾಗೂ ಅಲ್ಲಿನ ಫಲಾನುಭವಿ ರೈತರುಗಳ ಬೇಡಿಕೆಯನ್ನಾಧರಿಸಿ ಯೋಜನಾ ಪ್ರದೇಶವನ್ನು ಸಾವಯವ ಕೃಷಿ ಪದ್ಧತಿಗೆ ಪರಿವರ್ತಿಸಲು ಸೂಕ್ತ ಕ್ರಿಯಾಯೋಜನೆ ಸಿದ್ಧಪಡಿಸುವುದು.
  • ಪ್ರತಿ ಹೋಬಳಿಯಿಂದ ಕ್ರಿಯಾ ಯೋಜನೆ  ಪಡೆದುಕೊಂಡು  ಜಿಲ್ಲಾ ಚಾಲನಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಿ ಕಾರ್ಯಕ್ರಮ ಅನುಷ್ಠಾನಕ್ಕೆ ಅವಕಾಶ ಕಲ್ಪಿಸುವುದು.

ಸಾವಯವ ಭಾಗ್ಯ ಯೋಜನೆಯಡಿ (ಪ್ರತಿ ಹೋಬಳಿಯಲ್ಲಿ) ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮ/ಘಟಕಗಳು ಮತ್ತು ನೆರವಿನ ಪ್ರಮಾಣ ಹಾಗೂ ವಿವರವಾದ ಮರ್ಗಸೂಚಿಗಳನ್ನು ಈ ಕೆಳಗೆ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಸಾವಯವ ಭಾಗ್ಯ

ಮೂಲ: ಸಾವಯವ ಭಾಗ್ಯ

2.97619047619
Anonymous Jun 11, 2017 12:40 AM

ಗೂಬರ ಗಾಸ ನೀರಮಾಣ

chetan May 12, 2016 11:38 AM

ಸಾವಯವ ಭಾಗ್ಯ ಒಳ್ಳೆ ಯೋಜನೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top