অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆರ್ ಕೆ ಯುಂ ಪಿ

ಆರ್ ಕೆ ಯುಂ ಪಿ

ಸುಧಾರಿತ ಭತ್ತದ ತಳಿಗಳು ಕರ್ನಾಟಕ

ಭತ್ತವು ಕರ್ನಾಟಕ ರಾಜ್ಯದ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿರುವ ಒಂದು ಪ್ರಮುಖ ಆಹಾರಬೆಳೆ. ಅಚ್ಚುಕಟ್ಟು ಪ್ರದೇಶಗಳಲ್ಲಿ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ಈ ಬೆಳೆಯನ್ನು ಕೆರೆ, ಬಾವಿ ಹಾಗೂ ಮಳೆ ಆಶ್ರಯಗಳಲ್ಲೂಕಾಣಬಹುದು. ರಾಜ್ಯದ ಸುಮಾರು 13.28 ಲಕ್ಷ ಹೆಕ್ಟೇರುಗಳಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಈಬೆಳೆಯನ್ನು ಬೆಳೆಯಲಾಗುತ್ತಿದ್ದು ವಾರ್ಷಿಕ ಸುಮಾರು 38.56 ಲಕ್ಷ ಟನ್‍ಗಳಷ್ಟು ಭತ್ತವನ್ನು ಉತ್ಪಾದನೆ ಮಾಡಲಾಗುತ್ತಿದೆ.ರಾಜ್ಯದ ದಕ್ಷಿಣ ಜಿಲ್ಲೆಗಳ ಮೈದಾನ ಪ್ರದೇಶಕ್ಕೆ ಬಿತ್ತನೆ ಕಾಲ, ನೀರಿನ ಲಭ್ಯತೆ, ಕೀಟ ಹಾಗೂ ರೋಗದ ತೀವ್ರತೆ ಮತ್ತು ಮಣ್ಣಿನಗುಣಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕ ಇಳುವರಿ ನೀಡುವ ಅನೇಕ ತಳಿಗಳು ಹಾಗೂ ಹೈಬ್ರಿಡ್‍ಗಳನ್ನುಅಭಿವೃದ್ಧಿಪಡಿಸಲಾಗಿದೆ. ಆದುದರಿಂದ ರೈತರು ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ತಮ್ಮ ಜಮೀನಿಗೆಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿಕೊಂಡು ಬೆಳೆಯುವುದರಿಂದ ಹೆಚ್ಚಿನ ಲಾಭ ಪಡೆಯಬಹುದು. ರಾಜ್ಯದ ದಕ್ಷಿಣ ಮೈದಾನಪ್ರದೇಶದ ವಿವಿಧ ಭಾಗಗಳಿಗೆ ಶಿಫಾರಸ್ಸು ಮಾಡಲಾಗಿರುವ ಅಧಿಕ ಇಳುವರಿ ನೀಡುವ ಪ್ರಮುಖ ಸುಧಾರಿತ ಭತ್ತದ ತಳಿಗಳಮುಖ್ಯವಾದ ಗುಣಲಕ್ಷಣಗಳನ್ನು ಇಲ್ಲಿ ವಿವರಿಸಿಕೊಡಲಾಗಿದೆ.

ದೀರ್ಘಾವಧಿ ತಳಿಗಳು

ಬಿ.ಆರ್-2655: ಈ ತಳಿಯನ್ನು ಬಾಂಗ್ಲಾದೇಶದಿಂದ ಆಮದು ಮಾಡಿಕೊಂಡ ಬಿ.ಆರ್.2655-9-1-1-2 ಎಂಬತಳಿಯೊಂದರಿಂದ ಪುನರಾಯ್ಕೆ ಮಾಡಿ ಅಭಿವೃದ್ಧಿಪಡಿಸಲಾಗಿದೆ. 140 ರಿಂದ 145 ದಿನಗಳಲ್ಲಿ ಕೊಯ್ಲಿಗೆ ಸಿದ್ದವಾಗುವ ಈತಳಿಯ ಸಸಿಮಡಿ ತಯಾರು ಮಾಡಲು ಜೂನ್ ತಿಂಗಳ ಕೊನೆಯ ವಾರ ಅತ್ಯಂತ ಸೂಕ್ತ ಕಾಲ. ಜಯ ತಳಿಗಿಂತ ಎತ್ತರವಾಗಿಬೆಳೆಯುವ ಈ ತಳಿಯು ಗೊನೆ ಬಾಗಿದ ನಂತರವೂ ಕೆಳಗೆ ಬೀಳುವುದಿಲ್ಲ. ಭತ್ತವು ಮಧ್ಯಮ ವರ್ಗಕ್ಕೆಸೇರಿದ್ದು ಗಿರಣಿಯಲ್ಲಿ ಹೆಚ್ಚಿನ ಅಕ್ಕಿಯ ಇಳುವರಿ ನೀಡುತ್ತದೆ. ಈ ತಳಿಯು ಬೆಂಕಿ ರೋಗಕ್ಕೆ ಸಹಿಷ್ಣುತಾ ಶಕ್ತಿ ಹೊಂದಿದೆ. ಆದುದರಿಂದ ಪ್ರತಿ ವರ್ಷವೂ ಬೆಂಕಿ ರೋಗ ಕಂಡುಬರುವ ಪ್ರದೇಶಗಳಿಗೆ ಇದು ಅತ್ಯಂತ ಸೂಕ್ತವಾದುದು. ಉತ್ತಮಬೆಳೆಯೊಂದರಿಂದ ಎಕರೆಗೆ 30 ರಿಂದ 35 ಕ್ವಿಂಟಾಲ್ ಇಳುವರಿ ಪಡೆಯಬಹುದು.

ಐ.ಇ.ಟಿ-8116: ಸೋನಾ ಮತ್ತು ಆಂಡ್ರೋಸಾಲಿ ತಳಿಗಳ ಸಂಕರಣದಿಂದ ಅಭಿವೃದ್ಧಿ ಪಡಿಸಲಾಗಿರುವ ಈ ತಳಿಯುಕಂದು ಜಿಗಿ ಹುಳುವಿಗೆ (ಬಿ.ಪಿ.ಹೆಚ್) ನಿರೋಧಕ ಶಕ್ತಿಯನ್ನು ಹೊಂದಿದೆ. ಆದುದರಿಂದ ಕಂದು ಜಿಗಿ ಹುಳುವಿನ ಬಾಧೆಕಂಡುಬರುವ ಪ್ರದೇಶಗಳಿಗೆ ಈ ತಳಿಯು ಅತ್ಯಂತ ಸೂಕ್ತವಾದುದು. ಜಯ ಭತ್ತದಂತೆ ದಪ್ಪಕಾಳನ್ನು ಹೊಂದಿರುವ ಇದುಜಯಕ್ಕಿಂತ ಸ್ವಲ್ಪ ಎತ್ತರ ಬೆಳೆಯುತ್ತದೆ. 140 ದಿನಗಳಲ್ಲಿ ಕಟಾವಿಗೆ ಬರುವ ಈ ತಳಿಯ ಬಿತ್ತನೆಗೆ ಜೂನ್ ತಿಂಗಳು ಅತ್ಯಂತಸೂಕ್ತವಾದುದು. ಎಕರೆಗೆ 30 ರಿಂದ 35 ಕ್ವಿಂಟಾಲ್ ಕಾಳಿನ ಇಳುವರಿ ನೀಡುವ ಇದು ಹೆಚ್ಚಿನ ಹುಲ್ಲನ್ನೂ ಕೊಡುತ್ತದೆ.

ಜಯ: ಈ ತಳಿಯನ್ನು ಟಿ.ಎನ್-1 ಮತ್ತು ಟಿ-141 ತಳಿಗಳ ಸಂಕರಣದಿಂದ ಉತ್ಪಾದಿಸಲಾಗಿದೆ. 140 ರಿಂದ 145ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುವ ಈ ತಳಿಯನ್ನು ಜೂನ್ ತಿಂಗಳ ಕೊನೆಯ ವಾರದಲ್ಲಿ ಬಿತ್ತನೆ ಮಾಡಿ ಜುಲೈ ತಿಂಗಳಮೂರನೇ ವಾರದೊಳಗೆ ನಾಟಿ ಮಾಡುವುದು ಸೂಕ್ತ. ಬಿತ್ತನೆ ಹಾಗೂ ನಾಟಿಯ ಮುಂದೂಡುವಿಕೆ ಇಳುವರಿಯ ಮೇಲೆಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ. ಮುಂಗಾರು ಹಂಗಾಮಿನಲ್ಲಿ ಬೆಂಕಿರೋಗ ಹಾಗೂ ಕಂದು ಜಿಗಿ ಹುಳುವಿನ ಭಾಧೆಗೆತುತ್ತಾಗುವ ಈ ತಳಿಯು ಬೇಸಿಗೆ ಹಂಗಾಮಿಗೆ ಹೆಚ್ಚು ಸೂಕ್ತವಾದುದು. ಈ ತಳಿಯ ಪೈರು ಗಿಡ್ಡವಾಗಿದ್ದು ಕಾಳುದಪ್ಪವಾಗಿರುತ್ತದೆ. ಎಕರೆಗೆ 30 ರಿಂದ 32 ಕ್ವಿಂಟಾಲ್ ಇಳುವರಿ ಸಾಮಥ್ರ್ಯ ಹೊಂದಿರುವ ಈ ತಳಿಯು ಎಲ್ಲಾ ಪ್ರದೇಶಗಳಿಗೂಹೊಂದಿಕೊಂಡು ಬೆಳೆಯುವ ವಿಶೇಷ ಗುಣ ಹೊಂದಿದೆ.

ಅಲ್ಪಾವಧಿ ತಳಿಗಳು

ಎಂ.ಟಿ.ಯು-1010: ಬಿತ್ತನೆಯಿಂದ ಕೊಯ್ಲಿಗೆ 120 ರಿಂದ 125 ದಿನಗಳನ್ನು ತೆಗೆದುಕೊಳ್ಳುವ ಈ ತಳಿಯ ಕಾಳುಗಳು ಸಣ್ಣದಾಗಿ ಉದ್ದವಾಗಿರುತ್ತದೆ. ಸುಮಾರು ಎರಡರಿಂದ ಎರಡುವರೆ ಅಡಿ ಎತ್ತರ ಬೆಳೆಯುವ ಇದು ಕಡಿಮೆ ನೀರಿನ ಲಭ್ಯತೆಯಲ್ಲಿ ಬೆಳೆಯಲು ಹೆಚ್ಚು ಅನುಕೂಲ. ಭತ್ತವು ಹೆಚ್ಚು ಮಾಗಿದರೆ ಕಾಳು ಉದುರುತ್ತದೆ. ಆದ್ದರಿಂದ ಪ್ರತಿ ಗೊನೆಯ ತಳಭಾಗದ ಕಾಳು ಇನ್ನೂ ಸ್ವಲ್ಪ ಹಸಿರಾಗಿರುವಾಗಲೆ ಕಟಾವು ಮಾಡಬೇಕು. ಉತ್ತಮ ಬೆಳೆಯೊಂದರಿಂದ ಎಕರೆಗೆ 24 ರಿಂದ 26 ಕ್ವಿಂಟಾಲ್ ಇಳುವರಿ ಪಡೆಯಬಹುದು.

ಜ್ಯೋತಿ: ಈ ತಳಿಯು 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವ ಒಂದು ಅಲ್ಪಾವಧಿ ತಳಿ. ಭತ್ತವು ದಪ್ಪವಾಗಿ ಉದ್ದವಾಗಿದ್ದು ಅಕ್ಕಿಯು ಕೆಂಪಗಿರುತ್ತದೆ. ಮುಂಗಾರಿನಲ್ಲಿ ಜುಲೈ ಕೊನೆಯವರೆಗೂ ಉಪಯೋಗಿಸಬಹುದು. ಈ ತಳಿಯು ಊದುಭತ್ತ ರೋಗ, ದುಂಡಾಣು ರೋಗ ಹಾಗೂ ಎಲೆ ಕವಚ ಕೊಳೆ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತದೆ. ಆದುದರಿಂದ ರೈತರು ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅತೀ ಅವಶ್ಯಕ. ಉತ್ತಮ ಬೆಳೆಯೊಂದರಿಂದ ಎಕರೆಗೆ 18 ರಿಂದ 20 ಕ್ವಿಂಟಾಲ್ ಇಳುವರಿ ಪಡೆಯಬಹುದು.

ತೆಲ್ಲಹಂಸ: ಈ ತಳಿಯು ಸಹ 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವ ಒಂದು ಅಲ್ಪಾವಧಿ ತಳಿಯಾಗಿದ್ದು ಅಕ್ಕಿಯು ಬೆಳ್ಳಗಿರುತ್ತದೆ. ಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ಸೂಕ್ತವಾದ ಈ ತಳಿಯ ಭತ್ತವು ಮಧ್ಯಮ ಸಣ್ಣದಾಗಿದ್ದು ಊಟಕ್ಕೆ ಹೆಚ್ಚು ರುಚಿಯಾಗಿರುತ್ತದೆ. ಎಕರೆಗೆ 18 ರಿಂದ 20 ಕ್ವಿಂಟಾಲ್‍ಗಳವರೆಗೂ ಇಳುವರಿ ನೀಡುವ ಈ ತಳಿಯನ್ನು ಜುಲೈ ಕೊನೆಯವರೆಗೂ ಬಿತ್ತನೆ ಮಾಡಬಹುದು.

ರಾಶಿ: ರಾಷ್ಟ್ರಮಟ್ಟದಲ್ಲಿ ಐ.ಇ.ಟಿ-1444 ಮತ್ತು ಪ್ರಾದೇಶಿಕವಾಗಿ ಭರಣಿ ಎಂಬ ಹೆಸರುಗಳಿಂದ ಪ್ರಸಿದ್ಧಿಯಾಗಿರುವ ಈ ತಳಿಯನ್ನು ಟಿ.ಎನ್-1 ಮತ್ತು ಸಿಓ-29 ಎಂಬ ತಳಿಗಳ ಸಂಕರಣದಿಂದ ಆಬಿವೃದ್ಧಿ ಪಡಿಸಲಾಗಿದೆ. 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವ ಈ ತಳಿಯು ಬರ ನಿರೋಧಕ ಶಕ್ತಿಯನ್ನು ಹೊಂದಿದೆ. ಆದುದರಿಂದ ನೀರಿನ ತೊಂದರೆ ಇರುವ ಕಾಲುವೆಯ ಕೊನೇ ಪ್ರದೇಶಗಳಿಗೆ ಹಾಗೂ ಪುಣಜಿ ಬೇಸಾಯಕ್ಕೆ ಇದು ಅತ್ಯಂತ ಸೂಕ್ತ ತಳಿ. ಕಾಳು ಮಧ್ಯಮ ದಪ್ಪವಾಗಿದ್ದು ಎಕರೆಗೆ 22 ರಿಂದ 24 ಕ್ವಿಂಟಾಲ್ ಇಳುವರಿ ಸಾಮಥ್ರ್ಯ ಪಡೆದಿದೆ.

ಮಂಗಳ: ಇದು ಒಂದು ಅತ್ಯಂತ ಅಲ್ಪಾವಧಿ ತಳಿ, 110 ರಿಂದ 115 ದಿನಗಳಲ್ಲಿ ಕೊಯ್ಲಿಗೆ ಸಿದ್ದವಾಗುತ್ತದೆ. ತುಂಬಾ ಬೇಗ ಕಟಾವಿಗೆ ಬರುವುದರಿಂದ ನೀರಿನ ಲಭ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿ ವಿಶೇಷವಾಗಿ ಕೆರೆ ಆಶ್ರಯಗಳಲ್ಲಿ ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆಯಲು ಇದು ಅತ್ಯಂತ ಸೂಕ್ತ ತಳಿ. ಸ್ವಲ್ಪ ಮಟ್ಟಿಗೆ ಚಳಿ ಹಾಗೂ ಚೌಳು ನಿರೋಧಕ ಶಕ್ತಿಯನ್ನೂ ಹೊಂದಿದೆ. ಮುಂಗಾರಿನಲ್ಲಿ ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಒಟ್ಲು ಹಾಕಿ ಸೆಪ್ಟಂಬರ್ ಮೊದಲ ವಾರದೊಳಗೆ ನಾಟಿ ಮಾಡಬೇಕು. ಈ ತಳಿಯ ಕಾಳುಗಳು ಮಧ್ಯಮ ದಪ್ಪವಾಗಿದ್ದು ಉತ್ತಮ ನಿರ್ವಹಣೆಯಲ್ಲಿ ಎಕರೆಗೆ 16 ರಿಂದ 18 ಕ್ವಿಂಟಾಲ್ ಇಳುವರಿ ಕೊಡುತ್ತದೆ.

ರಕ್ಷಾ : ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ತಳಿಯು 110-115 ದಿನಗಳಲ್ಲಿ ಕಟಾವಿಗೆ ಸಿದ್ದವಾಗುತ್ತದೆ. ಇದನ್ನು ಮುಂಗಾರಿನಲ್ಲಿ ಆಗಸ್ಟ್ ತಿಂಗಳ ಕೊನೆಯವರೆಗೂ ಮತ್ತು ಬೇಸಿಗೆಯಲ್ಲಿ ಫೆಬ್ರವರಿ ಮೊದಲ ವಾರದವರೆಗೂ ಬಿತ್ತನೆ ಮಾಡಬಹುದು. ಬೆಂಕಿರೋಗಕ್ಕೆ ಸಹಿಷ್ಣತೆ ಹೊಂದಿರುವ ಈ ತಳಿಯ ಕಾಳುಗಳು ಸಣ್ಣದಾಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿದೆ. ನೀರಾವರಿ ಲಭ್ಯತೆ ಕಡಿಮೆ ಇರುವ ಕಾಲುವೆ ಕೊನೆ ಭಾಗಗಳು, ಬಾವಿ ನೀರಾವರಿ ಪ್ರದೇಶಗಳು ಹಾಗೂ ಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ಈ ತಳಿಯು ಹೆಚ್ಚು ಅನುಕೂಲ. ಮಧ್ಯಮ ಎತ್ತರ ಬೆಳೆಯುವ ಉತ್ತಮ ಬೆಳೆಯೊಂದರಿಂದ ಎಕರೆಗೆ 22-24 ಕ್ವಿಂಟಾಲ್ ಇಳುವರಿ ಪಡೆಯಬಹುದು.

ಮಧ್ಯಮಾವಧಿ ತಳಿಗಳು

ತನು: ಈ ತಳಿಯನ್ನು ಮಂಡ್ಯ ವಿಜಯ ಮತ್ತು ಬಿಳಿಮುಕ್ತಿ ತಳಿಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಮಸ್ಸೂರಿ ಭತ್ತದಂತೆ ಉತ್ಕೃಷ್ಟ ಅಕ್ಕಿಯ ಗುಣ ಹೊಂದಿರುವ ಈ ತಳಿ 130 ರಿಂದ 135 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಈತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು. ಆಕರ್ಷಕ ಬಣ್ಣ ಹೊಂದಿರುವ ಇದು ಮಧ್ಯಮಎತ್ತರದಿಂದ ಕೂಡಿದ್ದು ಅಧಿಕ ಧಾನ್ಯ ಮತ್ತು ಹುಲ್ಲಿನ ಇಳುವರಿ ನೀಡುತ್ತದೆ. ಉತ್ತಮ ಬೆಳೆಯೊಂದರಿಂದ ಎಕರೆಗೆ 26 ರಿಂದ 28ಕ್ವಿಂಟಾಲ್ ಇಳುವರಿ ಪಡೆಯಬಹುದು.

ಎಂ.ಟಿ.ಯು-1001: ವಿಜೇತ ಎಂದು ಕರೆಯಲ್ಪಡುವ ಈ ತಳಿಯೂ ಸಹ 130 ರಿಂದ 135 ದಿನಗಳಲ್ಲಿ ಕೊಯ್ಲಿಗೆಸಿದ್ಧವಾಗುತ್ತದೆ. ಈ ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು. ಮಧ್ಯಮ ಎತ್ತರದ ಈತಳಿಯು ಕಂದು ಜಿಗಿ ಹುಳುವಿಗೆ ಸಹಿಷ್ಣತೆ ಹೊಂದಿದೆ. ಇದರ ಕಾಳು ದಪ್ಪವಾಗಿದ್ದು ಎಕರೆಗೆ 28 ರಿಂದ 30 ಕ್ವಿಂಟಾಲ್ ಇಳುವರಿಸಾಮಥ್ರ್ಯ ಹೊಂದಿದೆ.

ವಿಕಾಸ್: ಈ ತಳಿಯೂ ಸಹ ಬಿತ್ತನೆಯಿಂದ ಕಟಾವಿಗೆ 130 ರಿಂದ 135 ದಿನಗಳನ್ನು ತೆಗೆದುಕೊಳ್ಳುತ್ತದೆ. ಸಸಿಮಡಿಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತ. ಮದ್ಯಮ ಎತ್ತರ ಬೆಳೆಯುವ, ಉದ್ದವಾದ ಸಣ್ಣ ಕಾಳಿನ ಗುಣ ಹೊಂದಿರುವ ಈತಳಿಯು ಚೌಳು ಮತ್ತು ಕರಲು ಮಣ್ಣಿಗೆ ಸಹಿಷ್ಣುತೆಯನ್ನು ಹೊಂದಿದೆ. ಆದುದರಿಂದ ಇದನ್ನು ಚೌಳು ಮತ್ತು ಕರಲು ಮಣ್ಣಿನಪ್ರದೇಶಗಳಲ್ಲಿ ಯಶಸ್ವಿಯಾಗಿ ಬೆಳೆಯಬಹುದು. ಉತ್ತಮ ಬೆಳೆಯೊಂದರಿಂದ ಆರೋಗ್ಯವಂತ ಮಣ್ಣಿನಲ್ಲಿ ಎಕರೆಗೆ 24 ರಿಂದ 26ಹಾಗೂ ಚೌಳು ಮತ್ತು ಕರಲು ಮಣ್ಣಿನಲ್ಲಿ 14 ರಿಂದ 16 ಕ್ವಿಂಟಾಲ್ ಇಳುವರಿ ಪಡೆಯಬಹುದು.

ಐ.ಆರ್-30864: ಇದನ್ನು ಐ.ಆರ್-1738, ಐ.ಆರ್-7801, ಐ.ಆರ್-46 ಮತ್ತು ಕವಾಲೊ ಎಂಬ ನಾಲ್ಕು ವಿವಿಧತಳಿಗಳ ಸಂಕರಣದಿಂದ ಪಡೆಯಲಾಗಿದೆ. 130 ರಿಂದ 135 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುವ ಈ ತಳಿಯ ಸಸಿಮಡಿ ಬಿತ್ತನೆಗೆಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು. ಈ ತಳಿಯು ಚೌಳು ನಿರೋಧಕತೆ ಹೊಂದಿರುವುದರಿಂದ ಚೌಳು ಭೂಮಿಯಲ್ಲಿಬೆಳೆಯಲು ಅತ್ಯಂತ ಸೂಕ್ತವಾಗಿದೆ. ಇದರ ಕಾಳು ಮಧ್ಯಮ ಸಣ್ಣದಾಗಿದ್ದು ಗಿರಣಿಯಲ್ಲಿ ಉತ್ತಮ ಅಕ್ಕಿಯ ಅಧಿಕ ಇಳುವರಿಸಿಗುತ್ತದೆ ಹಾಗೂ ಈ ತಳಿಯ ಅಕ್ಕಿಯು ಅನ್ನ ಮಾಡಲು ಅತ್ಯಂತ ಸೂಕ್ತವಾಗಿದೆ. ಉತ್ತಮ ಬೆಳೆಯೊಂದರಿಂದ ಎಕರೆಗೆ 28 ರಿಂದ 30 ಕ್ವಿಂಟಾಲ್ ಇಳುವರಿ ಪಡೆಯಬಹುದು.

ಐ.ಆರ್-20: 130 ರಿಂದ 135 ದಿನಗಳಲ್ಲಿ ಕೊಯ್ಲಿಗೆ ಬರುವ ಈ ತಳಿಯನ್ನು ಐ.ಆರ್-26 ಮತ್ತು ಟಿ.ಕೆ.ಎಂ-6 ತಳಿಗಳನ್ನು ಉಪಯೋಗಿಸಿ ಅಭಿವೃದ್ಧಿ ಪಡಿಸಲಾಗಿದೆ. ಜುಲೈ ತಿಂಗಳ ಎರಡನೇ ವಾರದವರೆಗೂ ಬಿತ್ತನ ಮಾಡಬಹುದಾದ ಈ ತಳಿಯು ಜಯ ಮತ್ತು ವಿಕಾಸ್ ತಳಿಯಂತೆ ಗಿಡ್ಡವಾಗಿರುತ್ತದೆ. ಮಧ್ಯಮ ಸಣ್ಣ ಗಾತ್ರದ ಕಾಳನ್ನು ಹೊಂದಿರುವ ಇದು ಅನ್ನ ಮಾಡಲು ಅತ್ಯಂತ ಸೂಕ್ತವಾಗಿದ್ದು ಗಿರಣಿಯಲ್ಲಿ ಹೆಚ್ಚು ನುಚ್ಚಾಗುವುದಿಲ್ಲ. ಈ ತಳಿಯ ಉತ್ತಮ ಬೆಳೆಯೊಂದರಿಂದ ಎಕರೆಗೆ 24 ರಿಂದ 26 ಕ್ವಿಂಟಾಲ್ ಕಾಳಿನ ಇಳುವರಿ ಪಡೆಯಬಹುದು.

ಐ.ಆರ್-64: ಫಿಲಿಫೈನ್ಸ್ ದೇಶದಲ್ಲಿರುವ ಅಂತರರಾಷ್ಟ್ರೀಯ ಭತ್ತದ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಇದು ಒಂದು ಅಂತರರಾಷ್ಟ್ರೀಯ ಭತ್ತದ ತಳಿ. 125-130 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುವ ಈ ತಳಿಯನ್ನು ಮುಂಗಾರು ಹಂಗಾಮಿನಲ್ಲಿ ಜುಲೈ ಎರಡನೇ ವಾರದವರೆಗೂ ಬಿತ್ತನೆ ಮಾಡಬಹುದು. ಈ ತಳಿಯ ಕಾಳು ಮಧ್ಯಮ ಗಾತ್ರದಿಂದ ಕೂಡಿದ್ದು ಉದ್ದವಾಗಿರುತ್ತದೆ. ಈ ತಳಿಗೆ ಬೆಂಕಿ ರೋಗದ ಬಾಧೆ ಕಂಡುಬರುವುದರಿಂದ ರೈತರು ಇದರ ಬಗೆಗೆ ವಿಶೇಷ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಉತ್ತಮ ಬೆಳೆಯೊಂದರಿಂದ ಎಕರೆಗೆ 24 ರಿಂದ 26 ಕ್ವಿಂಟಾಲ್‍ಗಳಷ್ಟು ಕಾಳಿನ ಇಳುವರಿ ಪಡೆಯಬಹುದು.

ಕೆ.ಸಿ.ಪಿ-1 : ಈ ತಳಿಯು 130-135 ದಿನಗಳಲ್ಲಿ ಕಟಾವಿಗೆ ಸಿದ್ದವಾಗುತ್ತದೆ. ಈ ತಳಿಯನ್ನು ಜುಲೈ ತಿಂಗಳ ಎರಡನೇ ವಾರದಲ್ಲಿ ಬಿತ್ತನೆ ಮಾಡಿ ಆಗಸ್ಟ್ ತಿಂಗಳ ಎರಡನೇ ವಾರದೊಳಗೆ ನಾಟಿ ಮಾಡುವುದು ಸೂಕ್ತ. ಬೇಸಿಗೆ ಹಂಗಾಮಿನಲ್ಲಿ ಈ ತಳಿಯನ್ನು ಬಿತ್ತನೆ ಮಾಡಲು ಜನವರಿ 2 ನೇ ವಾರ ಅತ್ಯಂತ ಸೂಕ್ತವಾದದ್ದು, ಭತ್ತವು ದಪ್ಪವಾಗಿದ್ದು, ಜಯ ತಳಿಯನ್ನು ಹೊಲುತ್ತದೆ. ಗಿಡವು ಎತ್ತರವಾಗಿ ಬೆಳೆಯುವುದರಿಂದ ಸಾರಜನಕದ ಗೊಬ್ಬರವನ್ನು ಶಿಫಾರಸ್ಸಿಗಿಂತ ಹೆಚ್ಚು ಬಳಸಬಾರದು. ಉತ್ತಮ ಬೆಳೆಯೊಂದರಿಂದ ಎಕರೆಗೆ 26-28 ಕ್ವಿಂಟಾಲ್ ಇಳುವರಿ ಪಡೆಯಬಹುದಾಗಿದೆ.

ಚಳಿ ನಿರೋಧಕ ತಳಿಗಳು

ಭತ್ತವು ಹೂ ಬಿಡುವ ಸಂದರ್ಭದಲ್ಲಿ ಚಳಿ ಹೆಚ್ಚಾಗಿ ವಾತಾವರಣದಲ್ಲಿನ ಉಷ್ಣಾಂಶವು ಕಡಿಮೆಯಾದರೂ ಸಹಜ ಪರಾಗಸ್ಪರ್ಶ ಕ್ರಿಯೆಯೊಡನೆ ಉತ್ತಮ ಕಾಳಿನ ಇಳುವರಿ ನೀಡುವ ತಳಿಗಳನ್ನು ಚಳಿ ನಿರೋಧಕ ತಳಿಗಳೆಂದು ಕರೆಯಲಾಗುತ್ತದೆ. ಪ್ರಸ್ತುತ ಕರ್ನಾಟಕದ ದಕ್ಷಿಣ ಪ್ರದೇಶಗಳಿಗೆ ಎರಡು ಚಳಿ ನಿರೋಧಕ ತಳಿಗಳನ್ನು ಬಿಡುಗಡೆ ಮಾಡಲಾಗಿದೆ.

ಮುಕ್ತಿ (ಸಿ.ಟಿ.ಹೆಚ್-1): ಇದನ್ನು ಎಸ್.ಐ.ರೆನ್ಹ ಮೆಹ್ರಾ ಮತ್ತು ಐ.ಆರ್-2153 ತಳಿಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ. ಈ ತಳಿಯ ಕಾಳು ದಪ್ಪವಾಗಿದ್ದು ಅಕ್ಕಿಯು ಕೆಂಪಾಗಿರುತ್ತದೆ. 125 ರಿಂದ 130 ದಿನಗಳಲ್ಲಿ ಕೊಯ್ಲಿಗೆ ಬರುವ ಈ ತಳಿಯನ್ನು ಆಗಸ್ಟ್ ಕೊನೆಯವರೆಗೂ ಬಿತ್ತನೆ ಮಾಡಿ ಸೆಪ್ಟಂಬರ್ ಕೊನೆಯವರೆಗೂ ನಾಟಿ ಮಾಡಬಹುದು. ಇದು ಎಕರೆಗೆ 18 ರಿಂದ 20 ಕ್ವಿಂಟಾಲ್ ಇಳುವರಿ ನೀಡುತ್ತದೆ.

ಬಿಳಿಮುಕ್ತಿ (ಸಿ.ಟಿ.ಹೆಚ್-3): ಮುಕ್ತಿ ತಳಿಯಿಂದ ಪುನರಾಯ್ಕೆ ಮಾಡಲ್ಪಟ್ಟಿರುವ ಈ ತಳಿಯು 120 ರಿಂದ 125 ದಿನಗಳಲ್ಲಿ ಕೊಯ್ಲಿಗೆ ಸಿದ್ದವಾಗುತ್ತದೆ. ಇದು ಮುಕ್ತಿ ತಳಿಗಿಂತ ಸ್ವಲ್ಪ ಕಡಿಮೆ ಎತ್ತರ ಬೆಳೆಯುತ್ತದೆ. ಕಾಳು ಮುಕ್ತಿ ಭತ್ತದಂತೆ ದಪ್ಪವಾಗಿರುತ್ತದೆಯಾದರೂ ಅಕ್ಕಿ ಬೆಳ್ಳಗಿರುತ್ತದೆ. ಆಗಸ್ಟ್ ತಿಂಗಳ ಕೊನೆಯವರೆಗೂ ಬಿತ್ತನೆ ಮಾಡಿ ಸೆಪ್ಟಂಬರ್ ಕೊನೆಯವರೆಗೆ ನಾಟಿ ಮಾಡಬಹುದು. ಎಕರೆಗೆ 20 ಕ್ವಿಂಟಾಲ್ ಗಳವರೆಗೂ ಇಳುವರಿ ಸಾಮಥ್ರ್ಯ ಹೊಂದಿರುವ ಈ ತಳಿಯನ್ನು ತಡವಾದ ಮುಂಗಾರಿನಲ್ಲಿ ಮುಕ್ತಿ ತಳಿಯ ಬದಲಿಗೆ ಉಪಯೋಗಿಸಬಹುದು.

ಹೈಬ್ರಿಡ್ ತಳಿಗಳು

ಕೆ.ಆರ್.ಹೆಚ್-2: ಈ ತಳಿಯನ್ನು ಐ.ಆರ್-58025 ಎ ಮತ್ತು ಕೆ.ಎಂ.ಆರ್-3ಆರ್ ಎಂಬ ತಳಿಗಳ ಸಂಕರಣದಿಂದ ಉತ್ಪಾದನೆ ಮಾಡಲಾಗುತ್ತದೆ. 130-135 ದಿನಗಳಲ್ಲಿ ಕಟಾವಿಗೆ ಸಿದ್ದವಾಗುವ ಈ ಹೈಬ್ರಿಡ್ ತಳಿಯು ಎಕರೆಗೆ ಸರಾಸರಿ 35-40 ಕ್ವಿಂಟಾಲ್ ಇಳುವರಿ ಕೊಡುವ ಸಾಮಥ್ರ್ಯ ಹೊಂದಿದೆ. ಜಯ ತಳಿಗಿಂತ ಹೆಚ್ಚು ಎತ್ತರ ಬೆಳೆಯುವುದರಿಂದ ಅಧಿಕ ಹುಲ್ಲನ್ನೂ ಸಹ ಕೊಡುವ ಈ ಹೈಬ್ರಿಡ್ ಭತ್ತಕ್ಕೆ ಬೆಂಕಿ ರೋಗದ ಬಾಧೆಯೂ ಕಡಿಮೆ.

ಕೆ.ಆರ್.ಹೆಚ್-4: ಈ ತಳಿಯು ಸಂಕರಣ ತಳಿಯಾಗಿದ್ದು ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿ ಪಡಿಸಲಾಗಿದೆ. ಈ ಸಂಕರಣ ತಳಿಯು 130-135 ದಿನಗಳಲ್ಲಿ ಕಟಾವಿಗೆ ಸಿದ್ದವಾಗುತ್ತದೆ. ಈ ತಳಿಯಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು. ಬೇಸಿಗೆ ಹಂಗಾಮಿನಲ್ಲಿ ಈ ತಳಿಯನ್ನು ಬಿತ್ತನೆ ಮಾಡಲು ಜನವರಿ 2 ನೇ ವಾರ ಅತ್ಯಂತ ಸೂಕ್ತವಾದದ್ದು. ಈ ತಳಿಯ ಕಾಳು ಮಧ್ಯಮ ಸಣ್ಣದಾಗಿದ್ದು, ಅಕ್ಕಿಯು ಅನ್ನ ಮಾಡಲು ಅತ್ಯಂತ ಸೂಕ್ತವಾಗಿದೆ. ಈ ಸಂಕರಣ ತಳಿಯು ಎಕರೆಗೆ 34-36 ಕ್ವಿಂಟಾಲ್ ಇಳುವರಿ ಸಾಮರ್ಥ್ಯ ಹೊಂದಿದೆ.

ಮೇಲೆ ತಿಳಿಸಿರುವ ಎಲ್ಲಾ ತಳಿಗಳು ಮತ್ತು ಹೈಬ್ರಿಡ್ ಭತ್ತವನ್ನು ಬೇಸಿಗೆ ಹಂಗಾಮಿನಲ್ಲಿಯೂ ಬೆಳೆಯಬಹುದು. ರೈತರು ತಮಗೆ ದೊರೆಯುವ ನೀರಿನ ಪ್ರಮಾಣ ಹಾಗೂ ಮುಂಗಾರು ಹಂಗಾಮಿನ ಬೆಳೆ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಅನುಸಾರವಾಗಿ ಸೂಕ್ತ ಅವಧಿಯ ತಳಿಯನ್ನು ಆಯ್ಕೆ ಮಾಡಿಕೊಂಡು ಬೆಳೆಯಬೇಕು.ಜನವರಿ 3 ಮತ್ತು 4ನೇ ವಾರ ಸಸಿಮಡಿ ತಯಾರಿಕೆಗೆ ಹಾಗೂ ಫೆಬ್ರವರಿ 2 ಮತ್ತು 3ನೇ ವಾರ ನಾಟಿ ಮಾಡಲು ಸೂಕ್ತ ಕಾಲ. ಸಾಮಾನ್ಯವಾಗಿ ಬೇಸಿಗೆ ಬೆಳೆಯಲ್ಲಿ ಎಲ್ಲಾ ತಳಿಗಳು 8-10 ದಿನ ತಡವಾಗಿ ಕೊಯ್ಲಿಗೆ ಬರುತ್ತವೆ.

ಮೂಲ :ಸುಧಾರಿತ ಭತ್ತದ ತಳಿಗಳು ಕರ್ನಾಟಕ (ದಕ್ಷಿಣ ಮೈದಾನ ಪ್ರದೇಶ),ಭತ್ತದ ತಳಿ ಅಬಿವೃದ್ಧಿ ವಿಭಾಗ,ವಲಯ ಕೃಷಿ ಸಂಶೋಧನಾ ಕೇಂದ್ರ,ವಿ.ಸಿ.ಫಾರಂ, ಮಂಡ್ಯ-571405

ಭತ್ತದ ಕೀಟಪೀಡೆಗಳ ಸಮಗ್ರ ನಿರ್ವಹಣೆ

ಭತ್ತದ ಕೀಟಪೀಡೆಗಳ ಸಮಗ್ರ ನಿರ್ವಹಣೆ ಭತ್ತ ಕರ್ನಾಟಕ ರಾಜ್ಯದ ಬಹು ಮುಖ್ಯ ಆಹಾರ ಬೆಳೆ.  ರಾಜ್ಯದಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ.  ಭತ್ತಕ್ಕೆ ಕರ್ನಾಟಕದಾದ್ಯಂತ 24 ಹೆಚ್ಚು ಕೀಟಗಳು ಕಂಡುಬಂದರೂ, ಕೆಲವೇ ಕೀಟಗಳು ಪ್ರಮುಖಪೀಡೆಗಳಾಗಿವೆ. ಈ ಬೆಳೆಗೆ ಬಿತ್ತನೆ ಮಾಡಿದಾಗಿನಿಂದ ಹಿಡಿದು ಕಟಾವಾಗುವವರೆಗೂ ಒಂದಲ್ಲ ಒಂದು ರೀತಿಯ ಕೀಟ ಬಾದೆ ಇದ್ದೆಇರುತ್ತದೆ. ಕೀಟಗಳ ಭಾದೆ ಸಸಿ ಮಡಿಯಲ್ಲಿರಬಹುದು. ತೆಂಡೆಯೊಡೆಯುವ ಸಮಯದಲ್ಲಿರಬಹುದು ಅಥವಾ ಕಾಳು ಕಟ್ಟುವಸಮಯದಲ್ಲಿರಬಹುದು. ಆದ್ದರಿಂದ  ಈ ಕೀಟಗಳ  ಹಾವಳಿಯನ್ನು ಅರಿತು ಸಮರ್ಪಕ ಹತೋಟಿ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯ.

ಭತ್ತದ ಕೀಟಗಳನ್ನು ಬೆಳೆಯನ್ನು ಬಾಧಿಸುವ ಹಂತದ ಆನುಗುಣವಾಗಿ ಮುಖ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು

ಸಸಿ ಮಡಿಯಲ್ಲಿ ಬರುವ ಕೀಟಗಳು : ಥ್ರಿಪ್ಸ್ ನುಸಿ, ಗರಿಜಿಗಿ ಹುಳು ಹಾಗೂ ಹಳದಿ ಕಾಂಡ ಕೊರಕ.
ಸಸ್ಯ ಬೆಳವಣಿಗೆ / ತೆಂಡೆಯೊಡೆಯುವ ಹ0ತದಿ0ದ ಕಾಳು ಕಟ್ಟುವ ಹ0ತದವರಗೆ ಬರುವ ಕೀಟಗಳು : ಹಳದಿ ಕಾಂಡ ಕೊರಕ.ಕೊಳವೆ ಹುಳು, ಗರಿ ಸುತ್ತುವ ಹುಳ, ಕಂದು ಜಿಗಿಹುಳ, ಮುಳ್ಳುಚಿಪ್ಪಿನ ದುಂಬಿ,ಕಂದುಜಿಗಿಹುಳು, ತೆನೆ ತಿಗಣೆ
ಸಸಿ ಮಡಿಯಲ್ಲಿ ಬರುವ ಕೀಟಗಳು

ಥ್ರಿಪ್ಸ್ ನುಸಿ

ಈ ಕೀಟವು ತುಂಬಾ ಚಿಕ್ಕದಾಗಿದ್ದು (1-2 ಮಿ.ಮಿ.) ಎಲೆಯ ಮೇಲಿದ್ದುಕೊಂಡು ರಸವನ್ನು ಹೀರುತ್ತದೆ.  ಇವುಗಳು ಇತರೆ ಬೆಳೆಗಳಮೇಲೆ ಬರುವ ಥ್ರಿಪ್ಸ್ ನುಸಿಗಿಂತ ಸ್ವಲ್ಪ ದೊಡ್ಡದಾಗಿರುತ್ತವೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸಸಿ ಮಡಿಯಲ್ಲಿಕಾಣಿಸಿಕೊಳ್ಳುತ್ತವೆ. ಮರಿ ಮತ್ತು ಪ್ರೌಢ ಕೀಟಗಳೆರಡು ಎಲೆಗಳ ರಸವನ್ನು ಹೀರುವುದರಿಂದ ಎಲೆಗಳು ಮೊದಲು ಹಳದಿ ಬಣ್ಣಕ್ಕೆತಿರುಗಿ ನಂತರ ಸುಟ್ಟು ಹೋದಂತಾಗುತ್ತವೆ.  ಎಲೆ ಒಣಗುವಿಕೆ ಮೊದಲು ತುದಿಯಿಂದ ಆರಂಭವಾಗಿ ನಂತರ ಇಡೀ ಎಲೆಗಳಿಗೆವ್ಯಾಪಿಸಿ ಎಲೆಯು ನೀಳವಾಗಿ ಮಡಚಿಕೊಳ್ಳುತ್ತದೆ.  ಮಡಚಿದ ಎಲೆ ಈರುಳ್ಳಿಯ ಎಲೆಯನ್ನು ಹೋಲುತ್ತದೆ ಹಾಗೂ ಇಡಿಎಲೆ0iÉುೀ ಒಣಗಿ ಹೋಗುತ್ತದೆ.

ಗರಿಜಿಗಿ ಹುಳು

ಪ್ರೌಢ ಮತ್ತು ಮರಿಕೀಟಗಳು ಗರಿಗಳಿಂದ  ರಸ ಹೀರುತ್ತವೆ. ಇದರಿಂದಾಗಿ ಗರಿಗಳ ಮೇಲೆ ಅಲ್ಲಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.  ಹುಳುಗಳ ಬಾದೆ ಹೆಚ್ಚಾದಂತೆ ಗರಿಗಳು  ಸುಟ್ಟಂತೆ ಕಾಣುತ್ತವೆ.  ಕೀಟಗಳಿರುವುದನ್ನು ವೀಕ್ಷಿಸುವುದುಸುಲಭ.  ಸಸಿಗಳನ್ನು ಕೈಯಿಂದಲೋ ಅಥವಾ ಒಂದು ಕೋಲಿಂದಲೋ ಅಲುಗಾಡಿಸಿದರೆ ಪ್ರೌಢ ಕೀಟಗಳು ಹಾರುವುದು ಅಥವ  ಜಿಗಿಯುತ್ತಿರುವುದನ್ನು ನೋಡಬಹುದು. ಈ ಕೀಟದ ಬಾಧೆ ಹೆಚ್ಚಾಗಿ ಸಸಿ ಮಡಿಯಲ್ಲಿ ನೀರಿನ ಅಭಾವ ಇದ್ದಾಗಉಲ್ಭಣಗೊಳ್ಳುತ್ತದೆ.  ಆದ್ದರಿಂದ ಸಸಿಮಡಿಯಲ್ಲಿ ಸಮರ್ಪಕವಾಗಿ ನೀರು ಇರುವಂತೆ ನೋಡಿಕೊಳ್ಳಬೇಕು.  ಈ ಕೀಟವು ಬದುವಿನಮೇಲಿರುವ ಕಸಗಳಿಂದ ಭತ್ತಕ್ಕೆ ಬರುವುದರಿಂದ ಬದುವನ್ನು ಸ್ವಚ್ಚವಾಗಿಡುವುದು ಒಳಿತು.

ಹಳದಿ ಕಾಂಡ ಕೊರೆಕ

ಈ ಕೀಟವು ಭತ್ತದ ಪ್ರಮುಖ ಪೀಡೆಯಾಗಿದ್ದು, ಮುಂಗಾರು ಮತ್ತು ಹಿಂಗಾರಿ ಭತ್ತ ಎರಡರಲ್ಲೂ ಕಂಡುಬರುತ್ತದೆ.  ಕೀಟದ ಪತಂಗಹಳದಿ ಬಣ್ಣದ್ದಾಗಿದ್ದು, ಹೆಣ್ಣಿನ ಹೊಟ್ಟೆಯ ತುದಿಯಲ್ಲಿ ಕಂದು ಬಣ್ಣದ ಬಿರುಗೂದಲಿನ ಸಮೂಹ ಮತ್ತು ಮುಂಬದಿಯ ರೆಕ್ಕಗಳಲ್ಲಿಒಂದೊಂದು ಕಪ್ಪು ಚುಕ್ಕೆ ಇರುತ್ತದೆ.   ಗಂಡು ಪತಂಗದಲ್ಲಿ ಈ ಕಪ್ಪು ಚುಕ್ಕೆಗಳು ಕಾಣುವುದಿಲ್ಲ.  ಹೆಣ್ಣು ಪತಂಗ ಗಂಡುಪತಂಗಕ್ಕಿಂತ ಗಾತ್ರದಲ್ಲಿ ದೊಡ್ದದು.  ಪತಂಗಗಳು ರಾತ್ರಿ ವೇಳೆಯಲ್ಲಿ  ದೀಪದ ಬೆಳಕಿಗೆ ಆಕರ್ಷಿಸಲ್ಪಡುತ್ತವೆ.  ತಂಪಾದವೇಳೆಯಲ್ಲಿ ಅಂದರೆ ಬೆಳಗಿನ ಮತ್ತು ಸಾಯಂಕಾಲದ ವೇಳೆಯಲ್ಲಿ ಭತ್ತದ ಸಸಿ ಮಡಿಗಳಲ್ಲಿ ಪೈರಿನ ಗರಿಗಳ ಮೇಲೆ ಕುಳಿತಿರುತ್ತವೆಮತ್ತು ಹಾರಾಡುತ್ತಿರುವ ದೃಶ್ಯವನ್ನು  ಸಹ ನೋಡಬಹುದು.  ಬಿಸಿಲಿನ ತಾಪ ಹೆಚ್ಚಾದಂತೆಲ್ಲ ಪತಂಗಗಳು ಸಸಿಗಳ ಗರಿಗಳತಳಭಾಗಕ್ಕೆ ಸರಿಯುತ್ತವೆ.

ಹೆಣ್ಣು ಪತಂಗ ತನ್ನ ಮೊಟ್ಟೆಗಳನ್ನು ಗರಿಗಳ ಹಿ0ಬಾಗದ ಮೇಲ್ತುದಿಯಲ್ಲ್ಲಿ ಗುಂಪು ಗುಂಪಾಗಿಡುತ್ತದೆ.  ಒಂದು ಗುಂಪಿನಲ್ಲಿ 8-15ಮೊಟ್ಟೆಗಳಿದ್ದು,  ಕಂದು ಬಣ್ಣದ ಬಿರುಗೂದಲಿನ ಸಮೂಹದಿಂದ ಮುಚ್ಚಿಲ್ಪಟ್ಟಿರುತ್ತವೆ.  ಮೊಟ್ಟೆಯಿಂದ ಹೊರಬಂದ ಮರಿಕೀಡೆಪೈರಿನ ಕಾಂಡದ ತಳಭಾಗವನ್ನು ಕೊರೆದು ಒಳ ಸೇರುತ್ತದೆ.  ಇದರಿಂದಾಗಿ ಪೈರಿನ ತಳ ಗರಿ ಹಳದಿ ಬಣ್ಣಕ್ಕೆ ತಿರುಗಿ  ಒಣಗಿದಂತೆಕಾಣುತ್ತವೆ.  ಈ ರೀತಿ ಹಳದಿ ಬಣ್ಣಕ್ಕೆ ತಿರುಗಿದಾಗ ರೈತರು  ಸಾರಜನಕದ ಕೊರತೆ ಇರಬಹುದೆಂದು ತಪ್ಪು ತಿಳಿದು ಯೂರಿಯಾಹಾಕುವುದು ಸರ್ವೇ ಸಾಮಾನ್ಯ.  ಹಳದಿ ಬಣ್ಣಕ್ಕೆ ತಿಗುರಿದ  ಪ್ಶೆರನ್ನು ಕಿತ್ತು ನೋಡಿದರೆ ಕಾಂಡದ ತಳಭಾಗದಲ್ಲಿ ಸಣ್ಣರಂಧ್ರವಿರುತ್ತದೆ ಮತ್ತು ಹುಳು ಬಿದ್ದ ಪೈರಿನ ಸುಳಿ ಬಾಡಿ ಒಣಗುತ್ತದೆ.  ಬೆಳೆಯು ತೆನೆ ಬಿಡುವ ಅಥವಾ ತೆನೆಗಳು ಹಾಲು ತುಂಬುವಹಂತದಲ್ಲಿದ್ದರೆ, ಮರಿಹುಳುಗಳು ತೆನೆಯ ಬುಡವನ್ನು ಕತ್ತರಿಸುವುದರಿಂದ ಒಣಗಿ ಹೋಗುತ್ತವೆ.  ಇದನ್ನು ಬಿಳಿ ತೆನೆ ಅಥವಾ ಬೆಪ್ಪುಒಡೆ ಎನ್ಮ್ನತ್ತಾರೆ.  ಅಂತಹ ಸುಳಿಗಳನ್ನು/ತೆನೆಗಳು ಕೈಯಿಂದ ಎಳೆದರೆ ಸುಲಭವಾಗಿ ಬರುತ್ತವೆ.

ಸಸ್ಯ ಬೆಳವಣಿಗೆ / ತೆಂಡೆಯೊಡೆಯುವ ಹ0ತದಿ0ದ ಕಾಳು ಕಟ್ಟುವ ಹ0ತದವರಗೆ ಬರುವ ಕೀಟಗಳು:

ಗರಿಸುತ್ತುವ ಹುಳು / ಗರಿ ಮಡುಚುವ ಹುಳು:

ಮುಂಗಾರು ಮತ್ತು ಬೇಸಿಗೆ ಬೆಳೆಗಳಲ್ಲಿ ಈ ಕಾಲದ ಬಾಧೆ ಕಾಣಿಸಿಕೊಳ್ಳುತ್ತದೆ. ನಾಟಿ ಮಾಡಿದ ಪೈರಿನಿಂದಪ್ರಾರಂಭಿಸಿ ಬೆಳೆ ಕೊಯ್ಯುಲಿನವರೆಗೂ ಈ ಕೀಟವು ಕಂಡುಬರುತ್ತದೆ. ಪ್ರಾರಂಭದಲ್ಲಿ ಎಳೆಯ ಮರಿಗಳು ಎಲೆಯ ನರಗಳ ಹಸಿರುಭಾಗವನ್ನು ಕೆರೆದು ತಿಂದು ಬೆಳೆಯುತ್ತವೆ. ನಂತರ ಎರಡು ಅಥವಾ ಮೂರು ಎಲೆಗಳ ಅಂಚುಗಳನ್ನು ರೇಷ್ಮೇ ದಾರದಿಂದ ಅಂಟಿಸಿ,ಗೂಡಿನ ಒಳಸೇರಿ ಕೆರೆದು ತಿನ್ನುತ್ತದೆ. ಪೈರಿಗೆ ಪೈರಿನ ಗರಿಗಳನ್ನು ಕೆರೆದು ತಿಂದ ಮೇಲೆ ಮತ್ತೊಂದು ಹೊಸ ಹುಳು ವಲಸೆಹೋಗುತ್ತದೆ. ಹುಳುಗಳು ತಿಂದ ಭಾಗವು ಮೊದಲು ಬಿಳಿಯಾಗಿ ನಂತರ ಒಣಗಿ ಕಂದು ಬಣ್ಣಕ್ಕೆ ತಿರುಗುತ್ತದೆ.

ಕೊಳವೆ ಹುಳು

ಈ ಕೀಟವು ಹೆಚ್ಚು ಮಳೆ ಬೀಳುವ ಮತ್ತು ತಡವಾಗಿ ನಾಟಿ ಮಾಡಿದ ಜೌಗು ಪ್ರದೇಶಗಳಲ್ಲಿ ಕಂಡುಬರುತ್ತದೆ. ಪತಂಗವು ಹಾಲಿನಚಿತೆ ಬಿಳುಪು, ರೆಕ್ಕೆಗಳ ಮೇಲೆ ಸಣ್ಣ ಸಣ್ಣ ಕಂದು ಮಚ್ಚೆಗಳಿರುತ್ತವೆ. ನಾಟಿ ಮಾಡಿದ 10-15 ದಿನಗಳ ನಂತರಮರಿಹುಳುಗಳು ಎಲೆಗಳ ತುದಿ ಭಾಗವನ್ನು ಕತ್ತರಿಸಿ ಕೊಳವೆಗಳನ್ನು  ಮಾಡಿಕೊಳ್ಳ್ಳುತ್ತವೆ.  ಮರಿಹುಳುಗಳು ಕೊಳವೆಯಿಂದತಲೆಯನ್ನು ಚಾಚಿ ಎಲೆಗಳ ಮೇಲ್ಭಾಗದ ಹಸಿರನ್ನು ಕೆರೆದು ತಿನ್ನುವುದರಿಂದ ಎಲೆಗಳು ಬಿಳಿಯ ಹಂದರದಂತೆ ಅಥವಾಏಣಿಯಂತೆ ಕಾಣುತ್ತವೆ. ಕೊಳವೆಗಳು ನೀರಿನ ಮೇಲೆ ತೇಲಾಡುತ್ತಿರುವುದು ಸರ್ವೆಸಾಮಾನ್ಯ.  ಇವು ಗಾಳಿ ಮತ್ತು ನೀರಿನಸಹಾಯದಿಂದ ಇತರ ಗದ್ದೆಗಳಿಗೆ ಹರಡುತ್ತವೆ.

ಕಂದು ಜಿಗಿಹುಳು

ಈ ಕೀಟವು ಭತ್ತದ ಬೆಳೆ ಹಾನಿ ಮಾಡುವಲ್ಲಿ ಮೊದಲನೇ ಸ್ಥಾನದಲ್ಲಿದೆ. 1975 ರಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿಕಾಣಿಸಿಕೊಂಡ ಈರೀತಿ ಇಂದು ಕರ್ನಾಟಕದ ಎಲ್ಲಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಕಂಡುಬರುತ್ತದೆ.   ಪ್ರೌಢಹುಳು ಮತ್ತುಅಪ್ಸರೆಗಳು ಗಿಡದ ಬುಡದಲ್ಲಿದ್ದು ರಸ ಹೀರುತ್ತವೆ.  ನಾಟಿ ಮಾಡಿದ ಒಂದು ತಿಂಗಳಿಂದ ಹಾವಳಿ ಆರಂಭ. ಬೆಳೆಯುಎಳೆಯದಿರುವಾಗ ಅಲ್ಪಸಂಖ್ಯೆಯಲ್ಲಿ ಕಾಣಿಸಿಕೊಂಡು ಬೆಳೆ ಬೆಳೆದಂತೆ ಕೀಟಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರತಿ ಗಿಡದ ಬುಡದಲ್ಲಿ500-600 ಹುಳುಗಳು ಕಂಡು ಬರುತ್ತವೆ. ಸೆಪ್ಟೆಂಬರ್‍ನಿಂದ ನವೆಂಬರ್‍ತನಕ ಇವುಗಳ ಸಂಖ್ಯೆ ಹೆಚ್ಚಾಗುವುದು. ಆರ್ದ್ರತೆಹೆಚ್ಚಿರುವ ವಾತಾವರಣ ಮತ್ತು 25-32 ಡಿಗ್ರಿ ಉಷ್ಣತಾಮಾನವು ಇವುಗಳ ಸಂತಾನಾಭಿವೃದ್ಧಿಗೆ ಪೂರಕವಾಗಿರುತ್ತದೆ.ಬೇಸಿಗೆಯಲ್ಲಿ ಇವುಗಳ ಸಂಖ್ಯೆ ತುಂಬಾ ಕಡಿಮೆ ಇರುವುದಲ್ಲದೆ ಅಕಸ್ಮಾತ್ ವೃದ್ಧಿ ಆದರೆ ಫೆಬ್ರುವರಿ ಮತ್ತು ಮಾರ್ಚ್‍ನಲ್ಲಿ ಮಾತ್ರಆಗುತ್ತದೆ.

ಭತ್ತವನ್ನೇ ಎರಡು ಮೂರು ಬೆಳೆಯಾಗಿ ಬೆಳೆಯುವುದು, ಕಂದು ಜಿಗಿಹುಳುಗಳಿಗೆ ಹೆಚ್ಚು ತುತ್ತಾಗುವ ಕೆಲವು ಭತ್ತದ ತಳಿಗಳನ್ನುಬೆಳೆಯುವುದು, ಶಿಫಾರಸ್ಸಿಗಿಂತ ಮಿತಿಮೀರಿ ಸಾರಜನಕ ಗೊಬ್ಬರವನ್ನು ಬೆಳೆಗೆ ಕೊಡುವುದು, ವಿವೇಚನೆ ಇಲ್ಲದೆ ಕೀಟನಾಶಕಗಳಬಳಕೆ ಮತ್ತು ಬೆಳೆಗೆ ಹೆಚ್ಚು ನೀರು ಕೊಡುವುದು ಇವೇ ಮುಂತಾದವುಗಳಿಂದ ಕಂದು ಜಿಗಿ ಹುಳುಗಳು ಹೆಚ್ಚು ವೃದ್ಧಿಯಾಗಲುಪ್ರಮುಖ ಕಾರಣಗಳು.

ಕೀಟಗಳು ಭತ್ತದ ಬುಡಭಾಗದಲ್ಲಿ ಕುಳಿತು ಕಾಂಡದಿಂದ ರಸಹೀರುವುದರಿಂದಾಗಿ ಮೊದಲಿಗೆ ಗರಿಗಳ ಅಂಚು ಹಳದಿಬಣ್ಣಕ್ಕೆತಿರುಗಿ, ಕ್ರಮೇಣ ಅಲ್ಲಲ್ಲಿ0iÉುೀ ವೃತ್ತಾಕಾರದಲ್ಲಿ ಬೆಳೆ ಸುಟ್ಟಂತಾಗುತ್ತದೆ.  ಇದನ್ನು “ಹಾಪರ್ ಬರ್ನ್” ಅ ಅಥವಾ “ಜಿಗಿಸುಡು”ಎಂದು ಕರೆಯುತ್ತಾರೆ.  ಈ ಹಾಪರ್ ಬರ್ನ್‍ನಿಂದಾಗಿ ಭತ್ತದ ತೆನೆಗಳಲ್ಲಿನ ಹಾಲು ನಾಶವಾಗುತ್ತದೆ.  ಕಾಳುಗಳು ಜಳ್ಳಾಗುವುದೇಅಲ್ಲದೆ ಹುಲ್ಲು ಸಹ ಕೊಳೆತುಹೋಗುತ್ತದೆ.  ಹುಳುವಿನ ಸಂಖ್ಯೆ ಹೆಚ್ಚಾದಾಗ ಭತ್ತದ ಬುಡಭಾಗದಲ್ಲಿ ಕಪ್ಪು ಬೂಷ್ಟು ಕಟ್ಟುತ್ತದೆ. ಕಂದು ಜಿಗಿಹುಳುಗಳು ರಸಹೀರಿ ಬೆಳೆಯನ್ನು ಹಾಳು ಮಾಡುವುದೇ ಅಲ್ಲದೆ ಕೆಲವು ಬಗೆಯ ನಂಜು ರೋಗಗಳನ್ನು ಸಹಹರಡುತ್ತವೆ. ಸದ್ಯಕ್ಕೆ ಅಂತಹ ನಂಜುರೋಗಗಳ ಬಾಧೆ ನಮ್ಮ ರಾಜ್ಯದಲ್ಲಿ ಎಲ್ಲೂ ಕಂಡುಬಂದಿಲ್ಲ.

ಕಣೆನೊಣ

ತೀರ ಪ್ರದೇಶದಲ್ಲಿ ಬೆಳೆಯುವ ಮುಂಗಾರಿನ ಬೆಳೆಗೆ ಕಾಟ ಹೆಚ್ಚು.  ಇತ್ತೀಚಿನ ದಿನಗಳಲ್ಲಿ ತಡವಾಗಿ ನಾಟಿ ಮಾಡಿ ಮೊಡ ಕವಿದವಾತಾವರಣ ಮತ್ತು ತುಂತುರು ಮಳೆ ಇದ್ದಲ್ಲಿ ಕಣೆ ನೊಣದ ಬಾಧೆ ಗಣನೀಯವಾಗಿ ಕಂಡುಬರುತ್ತಿದೆ.

ನಾಟಿ ಮಾಡಿದ 10-15 ದಿನಗಳ ನಂತರ ಹಾನಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಮಾಗಟ್ ಕಾಂಡ ಮತ್ತು ಗರಿಕವಚದನಡುವೆ ಹರಿದು ಬುಡಭಾಗವನ್ನು ಸೇರಿ, ಬೆಳೆಯುವ ಸುಳಿಯನ್ನು ಉಜ್ಜಿ ತಿನ್ನುವುದರಿಂದ ಪೈರಿನ ಸುಳಿ ಈರುಳ್ಳಿ ಎಲೆ ಆಕಾರದಕೊಳವೆಯಾಗಿ ಮಾರ್ಪಾಡಾಗುತ್ತದೆ. ಅಂತಹ ಪೈರಿನಿಂದ ತೆನೆ ಬರುವುದಿಲ್ಲ. ಇದಕ್ಕೆ ಕಣೆ ಅಥವಾ ಆನೆಕೊಂಬು ಎನ್ನುತ್ತಾರೆ.

ಮುಳ್ಳುಚಿಪ್ಪಿನ ದುಂಬಿ

ಈ ಕೀಟದ ಹಾನಿಯು ಸಸಿಮಡಿಯಲ್ಲಿಯೇ ಶುರುವಾಗಿ ತೆಂಡೆಯೊಡೆಯುವವರೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡುತ್ತದೆ.ಪ್ರೌಢಕೀಟ ಕಪ್ಪು ಮೈಮೇಲೆಲ್ಲಾ ಮುಳ್ಳಿನಾಕಾರ.  ದುಂಬಿಗಳು ಗರಿಗಳ ಪತ್ರಹರಿತ್ತನ್ನು ಕೆರೆದು ತಿನ್ನುವುದರಿಂದ ಹಾನಿಗೊಳಗಾದಗರಿಗಳಲ್ಲಿ ಮೊದಲು ಅಗಲವಾದ ಸಮನಾಂತರ ಗೆರೆಗಳು ಕಾಣಿಸಿಕೊಂಡು ತದನಂತರ ಗರಿಗಳು ಬೆಳ್ಳಗಾಗಿ ಒಣಗಿ ಹೋದಂತೆಕಾಣುತ್ತವೆ. ಮರಿಹುಳುಗಳು ಸುರಂಗ ಮಾಡುವುದರಿಂದ ಗರಿಗಳಲ್ಲಿ ಕಂದು ಮಚ್ಚೆಗಳು ಕಾಣಿಸುತ್ತವೆ

ಹಸಿರು ಕೊಂಬಿನ ಹುಳು

ಈ ಹುಳು ಭತ್ತದ ಮೇಲೆ ಬರುವ ಚಿಟ್ಟೆ ಕೀಟವಾಗಿದೆ. ಇವುಗಳ ಮರಿ ಹುಳುಗಳು ಹಸಿರು ಬಣ್ಣವನ್ನು ಹೊಂದಿದ್ದುತಲೆಯ ಮೇಲೆ ಎರಡು ಕೊಂಬುಗಳಿರುವುದರಿಂದ ಇವುಗಳಿಗೆ ಹಸಿರು ಕೊಂಬಿನ ಹುಳವೆ0ದು ಕರೆಯುತ್ತಾರೆ. ಮರಿಹುಳುಎಲೆಗಳನ್ನು ಕತ್ತರಿಸಿ ತಿನ್ನುತ್ತವೆ. ಇದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇವುಗಳ ಬಾಧೆ ಸೈನಿಕ ಹುಳುವಿನಬಾಧೆಯನ್ನು ಹೋಲುತ್ತದೆ. ಈ ಕೀಟ ಎಲೆಯ ಎರಡು ಕಡೆಗಳಲ್ಲಿ ಅಂಗಾಂಶವನ್ನು ಮತ್ತು ಎಲೆಯ ನರಗಳನ್ನು ತಿನ್ನುತ್ತದೆ.ಇವುಗಳ ಸಂಖ್ಯೆ ತೀರ ಹೆಚ್ಚಾದಾಗ ಅಂದರೆ ಸುಮಾರು 50 ರಷ್ಟು ಗಿಡಗಳ ಮೇಲೆ ಕಂಡು ಬಂದರೆ ಮಾತ್ರ ಕೀಟ ನಾಶಕವನ್ನುಬಳಸಬೇಕು. ಅದಲ್ಲದೆ ಅಲ್ಪ ಸ್ವಲ್ಪವಿದ್ದರೆ ಈ ಕೀಟದಿಂದ ಯಾವುದೇ ಹಾನಿ ಇರುವುದಿಲ್ಲ.

ಜಿಗಿಯುವ ಚಿಟ್ಟೆ

ಇವುಗಳು ಮಳೆಯಾಶ್ರಿತ ಚಿತ್ರದ ಭತ್ತದ ಪರಿಸರದಲ್ಲಿ ಬಹಲ ಹೆಚ್ಚಾಗಿ ಕಂಡುಬರುವುದು. ಪ್ರಬುದ್ಧ ಮತ್ತುಮರಿಹುಳುಗಳು ಎಲೆಯ ಮೇಲಿದ್ದುಕೊಂಡು ಎಲೆಯ ಅಂಗಾಂಶವನ್ನು ಮತ್ತು ನರಗಳನ್ನು ತಿನ್ನುತ್ತವೆ. ಈ ಕೀಟಬಾಧೆಯಲಕ್ಷಣಗಳು ಸುಮಾರು ಹಸಿರು ಕೊಂಬಿನ ಹುಳಬಾಧೆಯನ್ನು ಹೋಲುತ್ತದೆ. ಇವುಗಳು ಎಲೆಯ ತುದಿಯನ್ನು ಬಾಗಿಸಿ ಅಥವಾಎಲೆಯ ಎರಡು ಬದಿಗಳನ್ನು ಸೇರಿಸಿಕೊಂಡು ಸಣ್ಣಕೋಶವನ್ನು ಮಾಡಿಕೊಳ್ಳೂತ್ತವೆ. ವಾತಾವರಣದಲ್ಲಿನ ತೇವಾಂಶ ಮತ್ತುಕಡಿಮೆ ತಾಪಮಾನ ಇವುಗಳ ಅಭಿವೃದ್ಧಿಗೆ ಪೂರಕವಾದ ಅಂಶಗಳು.

ನೀಲಿ ದುಂಬಿ

ಈ ಕೀಟವು ಮುಖ್ಯವಾಗಿ ಮಲೆನಾಡಿನಲ್ಲಿ ಮುಂಗಾರಿನಲ್ಲಿ ಹಾಗೂ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರಿಭತ್ತದಲ್ಲಿ ಕಂಡು ಬರುತ್ತದೆ. ಈ ದುಂಬಿಗಳು ಬಣ್ಣ ನೀಲಿ ಇರುವುದರಿಂದ ಅದೇ ಹೆಸರನ್ನು ಅವುಗಳಿಗೆ ಇಡಲಾಗಿದೆ. ಪ್ರಬುದ್ಧ ಮತ್ತುಮರಿಹುಳಗಳು ಎಲೆಯ ಮೇಲಿದ್ದುಕೊಂಡು ಪತ್ರಹರಿತ್ತನ್ನು ಮೇಯಿತ್ತವೆ ಇವುಗಳ ಬಾಧೆಗೊಳಗಾದ ಎಲೆಗಳ ಮೇಲೆ ಉದ್ದನೆಯಸಮಾನಾಂತರ ರೇಖೆಗಳು ಕಂಡುಬರುವುದು. ಈ ರೀತಿ ಬಾಧೆಗೊಳಗಾದ ಎಲೆಗಳು ಮೇಲಕ್ಕೆ ಮುದುರಿಕೊಳ್ಳೂವುದನ್ನುಕಾಣಬಹುದು. ಮಳೆಯಾಶ್ರಿತ ಎತ್ತರದ ಭತ್ತದ ಗದ್ದೆಗಳು, ಅತಿವೃಷ್ಠಿ, ಕೀಟನಾಶಕಗಳ ದುರ್ಬಳಕೆ, ಮಿತ್ರಕೀಟಗಳು ಕಡಿಮೆಇರುವುದು ಮತ್ತು ಬೆಳವಣಿಗೆ ಹಚಿತದಲ್ಲಿರುವ ಬೆಳೆ ಈ ಕೀಟಗಳ ಬೆಳವಣಿಗೆಗೆ ಪೂರಕವಾದ ಅಂಶಗಳು.

ತೆನೆ ತಿಗಣೆ

ರಾಜ್ಯದ ತೀರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಬೆಳೆಗೆ ಹಾನಿ ಹೆಚ್ಚು.  ಇತ್ತೀಚಿನ ದಿನಗಳಲ್ಲಿ ಮೈದಾನ ಪ್ರದೇಶದಕೆಲವು ಭಾಗಗಳಲ್ಲಿಯೂ ಇವುಗಳ ಕಾಟ ಕಂಡುಬರುತ್ತಿದೆ.ಪ್ರೌಢ ಮತ್ತು ಅಪ್ಸರೆ ಕೀಟಗಳು ತೆನೆ ಹಾಲು ತುಂಬುವ ಕಾಲದಲ್ಲಿ ರಸಹೀರುತ್ತವೆ.  ಅಂತಹ ತೆನೆಗಳಲ್ಲಿ ಕಾಳು ಜೊಳ್ಳಾಗುತ್ತವೆ.

ಸಮಗ್ರ ಹತೋಟಿ ಕ್ರಮಗಳು

ನಾಟಿ ಮಾಡುವಾಗ ಸಸಿಗಳ ಎಲೆಯ ತುದಿಯನ್ನು ಚಿವುಟಿ ನಾಟಿಮಾಡಬೇಕು. ಇದರಿಂದ ಸಸಿಗಳ ಎಲೆಯ ತುದಿಯಲ್ಲಿಟ್ಟಿರುವಹುಳದ ತತ್ತಿಗಳನ್ನು ನಾಶ ಮಾಡಿದಂತಾಗುತ್ತದೆ. ಈ ಕೀಟವು ಪ್ರತಿ ವರ್ಷವೂ ಕಂಡುಬರುವ ಪ್ರದೇಶದಲ್ಲಿ ಬೆಳೆ ಕಟಾವಾದನಂತರ ಉಳಿದ ಬೆಳೆಯ ಅವಶೇಷವನ್ನು ಬೆಂಕಿಹಚ್ಚಿ ಸುಡಬೇಕು. ಮಾಗಿ ಉಳುಮೆ ಮಾಡುವುದರಿಂದ ಕೋಶಾವಸ್ತೆಯಲ್ಲಿರುವಕೀಟಗಳು ನಾಶಹೊಂದುವವು

ಥ್ರಿಪ್ಸ್ ಮತ್ತು  ಗರಿಜಿಗಿ ಹುಳ ಬೆಳೆಯ ಮೇಲೆ ಕಾಣಿಸಿಕೊಂಡ ತಕ್ಷಣ ಪ್ರತಿ ಲೀಟರ್ ನೀರಿಗೆ 1.0 ಮಿ.ಲೀ. ಬೇವಿನ ಎಣ್ಣೆಯನ್ನುಅಥವಾ ಕೀಟದ ಹಾವಳಿ ತೀರ ಹೆಚ್ಚಾದಾಗ 1.5 ಮಿ.ಲೀ. ಮೊನೊಕ್ರೊಟೊಫಾಸ್ ಆಥವಾ 2.0 ಮಿ.ಲೀ.ಕ್ಲೋರೋಪೈರಿಫಾಸನ್ನು ಒಂದು ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು. ಒಂದು  ವೇಳೆ ಸಿಂಪಡಿಸಲು ಸಾಧ್ಯವಾಗದಿದ್ದರೆ, ಸಸಿಗಳ ನಾಟಿಗೆ ಇನ್ನೂ 10-12 ದಿನಗಳಿದ್ದರೆ ಪ್ರತೀ ಒಂದು ಗುಂಟೆ ಸಸಿ ಮಡಿಗೆ 300 ಗ್ರಾಂ. ಶೇ. 3 ಕಾರ್ಬೋಪುರಾನ್ ಅಥವಾ  250 ಗ್ರಾಂ. ಶೇ. 10 ಹರಳು ರೂಪದ ಕೀಟನಾಶಕವನ್ನು ಪೈರಿಗೆ ಎರಚುವುಧು.   ಈ ಹರಳು ರೂಪದ ಕೀಟನಾಶಕಗಳನ್ನು ಕೆಸರು ಸಸಿಮಡಿಗೆ ಹಾಕುವಾಗ ಸ್ವಲ್ಪ  ಪ್ರಮಾಣದಲ್ಲಿ ನೀರಿದ್ದರೆ ಸಾಕು.  24 ರಿಂದ 36 ಗಂಟೆಗಳ ಕಾಲ ನೀರು ಸಸಿ ಮಡಿಗೆ ಬರುವುದುಅಥವಾ ಹೊರ ಹೋಗದಂತೆ ಎಚ್ಚರಿಕೆ ವಹಿಸಿ.

ಸಸಿಗಳನ್ನು ನಾಟಿ ಮಾಡುವ ಪೂರ್ವದಲ್ಲಿ ಕ್ಲೋರ್‍ಪೈರಿಫಾಸ್ 20 ಇ.ಸಿ. 2 ಮಿ.ಲೀ. ಪ್ರತಿ ಲೀಟರ್ ದ್ರಾವಣದಲ್ಲಿ ಒಂದು ರಾತ್ರಿಇಟ್ಟು ನಂತರ ನಾಟಿ ಮಾಡಿದಲ್ಲಿ ಪ್ರಾರಂಭಿಕ ಹಂತದ ಕೀಟಗಳನ್ನು ಹತೋಟಿ ಮಾಡಬಹುದು.

ಬದುಗಳ ಹಾಗೂ ನೀರು ಕಾಲುವೆಯ ಮೇಲೆ ಬೆಳೆಯುತ್ತಿರುವ ಹುಲ್ಲುಗಳನ್ನು ಇತರೇ ಸಸ್ಯಗಳನ್ನು ನಾಶ ಮಾಡಬೇಕು. ಇದರಿಂದ ಹುಲ್ಲುಗಳ ಮೇಲೆ ವೃದ್ಧಿಗೊಳ್ಳುವ ನುಶಿ, ಮುಳ್ಳು ಚಿಪ್ಪಿನ ದುಂಬಿ ಹಾಗೂ ಇತರ ಕೀಟಗಳನ್ನು ಕಡಿಮೆ ಮಾಡಬಹುದು

ಕಾಂಡ ಕೊರೆಯುವ ಹುಳದ ಹತೋಟಿಗಾಗಿ ಹೆಕ್ಟೇರಿಗೆ 20 ಲಿಂಗಾಕರ್ಷಕಗಳ ಬಲೆಗಳನ್ನು ನಾಟಿ ಮಾಡಿದ 20 ದಿನಗಳವರೆಗೆಉಪಯೋಗಿಸಿ ಪತಂಗಗಳನ್ನು ಆಕರ್ಷಿಸಿ ಕೊಲ್ಲುವುದು ತಿಳಿದು ಬಂದಿದೆ

ಭತ್ತದ ಕಾಂಡ ಕೊರೆಯುವ ಹುಳು ಮತ್ತು ಗರಿ ಮುಡಿಸುವ ಹುಳುಗಳ ನಿಯಂತ್ರಣಕ್ಕೆ  0.3 ಮಿ.ಲೀ. ಇ0ಡಾಕ್ಸಕಾರ್ಬ್ 14.5ಎಸ್.ಸಿ. ಅಥವಾ 0.3 ಗ್ರಾಂ  20 ಡಬ್ಲುಡಿಜಿ ಅಥವಾ 0.1 ಮಿ.ಲೀ.  48 ಎಸ್.ಸಿ.ಅಥವಾ 2.0 ಮಿ.ಲೀ. ಕ್ಲೋರೋಪ್ಶೆರಿಪಾಸ್ ಅಥವಾ 2.0 ಮಿ.ಲೀ. ಕ್ವಿನಾಲಪಾಸ್ ಅಥವಾ 2.0 ಮೀ.  ಅಥವಾ1.3 ಮಿ.ಲೀ ಮೊನೋಕ್ರೋಟೋಫಾಸ್ ಅಥವಾ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಹರಳುರೂಪದ ಕೀಟನಾಶಕಗಳಾದಲ್ಲಿ, ಪಿಫೆರ್Çನಿಲ್ ಹರಳುಗಳನ್ನು ಪ್ರತಿ ಹೆಕ್ಟೇರಿಗೆ 1.5 ಕಿ.ಗ್ರಾಂ. ನಂತೆ ಅಥವಾ ಶೇ.3ರಕಾರ್ಬೊಫ್ಯೂರಾನ್ ಹರಳನ್ನು ಹೆಕ್ಟೇರಿಗೆ 19 ಕಿ.ಗ್ರಾಂ. ನಂತೆ ಅಥವಾ ಶೇ.4ರ ಕಾರ್‍ಟಾಫ್ ಹೈಡ್ರೋಕ್ಲೋರೈಡ್ ಹರಳುಗಳನ್ನುಒಂದು ಹೆಕ್ಟೇರಿಗೆ 25 ಕಿ.ಗ್ರಾಂ. ನಷ್ಟು ಬಳಸಬೇಕು

ಗದ್ದೆಯಲ್ಲಿ ನೀರು ನಿಲ್ಲಿಸಿ ತೆಳುವಾದ ಸೀಮೆ ಎಣ್ಣೆಯ ಪೆÇರೆಯನ್ನು ಮಾಡಿ, ಹಗ್ಗವನ್ನು ತೆಂಡೆಗಳಿಗೆ ತಾಕಿಸಿ ಎಳೆಯುವದರಿಂದತಂಡೆಗಳ ಕೆಳಭಾಗದಲ್ಲಿ ಜೊತ್ತು ಬಿದ್ದಿರುವ ಕೊಳವೆ ಹುಳುಗಳನ್ನು ನೀರಿಗೆ ಬೀಳಿಸಿ ನಾಶಮಾಡಬಹುದು ಹಾಗೂ  ಪೈರನ್ನುಅಲ್ಲಾಡಿಸಿದರೆ ಮುಳ್ಳುಚಿಪ್ಪಿನ ದುಂಬಿಗಳು ನೀರಿಗೆ ಬಿದ್ದು ನಾಶಹೊಂದುತ್ತವೆ.

ಕಂದು ಜಿಗಿಹುಳದ ಹತೋಟಿಗಾಗಿ

ನೀರು ನಿರ್ವಹಣೆ: ಕಂದು ಜಿಗಿಹುಳುಗಳ ಕಾಟವಿರುವ ಪ್ರದೇಶಗಳಲ್ಲಿ ಭತ್ತವನ್ನು ನಾಟಿಮಾಡಿದ 60 ದಿನಗಳ ನಂತರ ಬೆಳೆಗೆಯಾವಾಗಲು ನೀರು ಹರಿಸುವ ಬದಲು, ಭೂಮಿಯನ್ನು ಆಗಿಂದಾಗ್ಗೆ ಒಣಗಿಸಿ ನೀರು ಕೊಡುವುದು ಉತ್ತಮ.  ಇದರಿಂದ ಕಂದುಜಿಗಿಹುಳುಗಳು ವೃದ್ಧಿಯಾಗುವುದು ಕುಂಟಿತವಾಗುತ್ತದೆ.

ಕಂದು ಜಿಗಿಹುಳುಗಳ ಸ್ವಾಭಾವಿಕ ಶತ್ರುಗಳಿಗೆ ಉತ್ತೇಜನ: ಕಂದು ಜಿಗಿಹುಳುಗಳಿಗೆ ಭತ್ತದ ಪರಿಸರದಲ್ಲಿ ಅನೇಕ ಬಗೆಯಸ್ವಾಭಾವಿಕ ಶತ್ರುಗಳಾದ  ಹಸಿರು ತಿಗಣೆ, ಗುಲಗಂಜಿಹುಳು, ಮೀರಿಡ್ ತಿಗಣೆ, ಮೊಟ್ಟೆಗಳಲ್ಲಿನ ವಿವಿಧ ಬಗೆಯ ಪರತಂತ್ರಜೀವಿಗಳು, ಜಂತುಹುಳುಗಳು ಮತ್ತು ವಿವಿಧ ಬಗೆಯ ಜೇಡಗಳು ಕ0ಡುಬರುತ್ತವೆ. ಆದ್ದರಿ0ದ, ವಿವೇಚನೆ ಇಲ್ಲದೆಕೀಟನಾಶಕಗಳನ್ನು ಬಳಸಿ ಸ್ವಾಭಾವಿಕ ಶತ್ರುಗಳ ನಾಶಮಾಡದೆ ಅವುಗಳ ವೃದ್ಧಿಗೆ ಉತ್ತೇಜನ ಕೊಡುವುದು ಉತ್ತಮ.

ಕೀಟನಾಶಕಗಳ ಬಳಕೆ: ಭತ್ತವನ್ನು ನಾಟಿ ಮಾಡಿದ 60-70 ದಿನಗಳ ನಂತರ ವಾರಕೊಮ್ಮೆಯಾದರು ಭತ್ತದ ಗದ್ದೆಗಳಲ್ಲಿಕೆಲವಾರು ಕಡೆ ತೆಂಡೆಯ ಬುಡಭಾಗವನ್ನು ವೀಕ್ಷೀಸಿ ಕಂದು ಜಿಗಿಹುಳುಗಳುಗಳಿರುವುದನ್ನು ಗುರುತಿಸಬೇಕು.  ಒಂದು ವೇಳೆಪ್ರತೀ ತೆಂಡೆಗೆ 5-10 ಕಂದು ಜಿಗಿಹುಳುಗಳಿದ್ದು, ಮೊದಲೆ ತಿಳಿಸಿದ ಸ್ವಾಭಾವಿಕ ಶತ್ರುಗಳ ಚಟುವಟಿಕೆ ಹೆಚ್ಚಾಗಿದ್ದರೆ,ಕೀಟನಾಶಕಗಳನ್ನು ಉಪಯೋಗಿಸುವುದು ಬೇಡ.  ಒಂದು ವೇಳೆ ಪ್ರತಿ ಭತ್ತದ ತೆಂಡೆಯಲ್ಲಿ ಕಂದುಜಿಗಿ ಹುಳುಗಳಿದ್ದು ಸ್ವಾಭಾವಿಕಶತ್ರುಗಳ ಸಂಖ್ಯೆ ಬಹಳ ಕಡಿಮೆ ಇದ್ದರೆ ಈ ಕೆಳಗೆ ಸೂಚಿಸಿದ ಕೀಟನಾಶಕಗಳನ್ನು ಉಪಯೋಗಿಸಿ ಕಂದು ಜಿಗಿಹುಳುಗಳನ್ನುಹತೋಟಿ ಮಾಡಬಹುದು.

ಸಿಂಪರಣಾ ರೂಪದ ಕೀಟನಾಶಕಗಳ ಬಳಕೆ: 25.20 ಎಸ್.ಸಿ. ಅಥವಾ ಥಯೋಮೆಥಾಕ್ಸಮ್  3.60ಗ್ರಾ0 ಅಥವಾ ಇಮಿಡಾಕ್ಲೋಪ್ರಿಡ್ 5.40 ಮಿ.ಲೀ. ಅಥವಾ 23 ಮಿ.ಲೀ. ಮೊನೊಕ್ರೋಟೋಫಾಸ್ ಅಥವಾ 36 ಮಿ.ಲೀ.ಕ್ಲೋರೋಪೈರಿಫಾಸ್ ಅಥವಾ 36 ಗ್ರಾಂ. ಕಾರ್ಬರಿಲ್ ಪುಡಿಯನ್ನು 18 ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕು.  ಸಿಂಪರಣಾದ್ರಾವಣ ಭತ್ತದ ಬುಡಭಾಗಕ್ಕೆ ಬೀಳುವಂತೆ ಸಿಂಪಡಿಸಬೇಕು.  ಎಕರೆಗೆ 300-350 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ.

ಹರಳುರೂಪದ ಕೀಟನಾಶಕಗಳ ಬಳಕೆ: ಹರಳು ರೂಪದ ಕೀಟನಾಶಕಗಳನ್ನು ಬಳಸಿದ್ದೇ ಆದರೆ ಎಕರೆಗೆ 8 ಕೆ.ಜಿ.ಕಾರ್ಬೋಪುರಾನ್ 3 ಜಿ. ಉತ್ತಮ ಈ ಕೀಟನಾಶಕ ಉಪಯೋಗಿಸುವಾಗ ಗದ್ದೆಗಳಲ್ಲಿ ಚುಮಕು ನೀರಿದ್ದರೆ ಸಾಕು.  ನೀರು ಒಂದುಗದ್ದೆಯಿಂದ ಬೇರೊಂದು ಗದ್ದೆಗೆ ಕನಿಷ್ಟ 36 ಗಂಟೆಗಳ ಕಾಲ ಹರಿದಾಡಬಾರದು ಮತ್ತು ಈ ಕೀಟನಾಶಕ ಉಪಯೋಗಿಸಿದ 20ದಿನಗಳ ನಂತರ ಕಟಾವು ಮಾಡಬೇಕು.  ಕಾರ್ಬೊಪುರಾನ್ 3 ಜಿ. ಉಪಯೋಗಿಸಿದ್ದಲ್ಲಿ ಕಂದುಜಿಗಿ ಹುಳುಗಳ ಸ್ವಾಭಾವಿಕಶತ್ರುಗಳಿಗೆ ಹೆಚ್ಚು ಅಪಾಯಕಾರಿಯಲ್ಲ.

ಬೆಳೆ ಪರಿವರ್ತನೆ: ಭತ್ತವನ್ನೇ 2-3 ಬೆಳೆಯಾಗಿ ಬೆಳೆಯುವುದು ಸೂಕ್ತವಲ್ಲ.  ಭತ್ತ-ರಾಗಿ, ಭತ್ತ-ದ್ವಿದಳಧಾನ್ಯ, ಭತ್ತ-ಕಬ್ಬು ಅಥವಾಯಾವುದೇ ಬೇರೆ ಬೆಳೆಗಳ ಪರಿವರ್ತನೆ ಅಗತ್ಯ.  ಭತ್ತವನ್ನೇ 2 ಬೆಳೆಯಾಗಿ ಬೆಳೆಯಬೇಕೆಂದಿರುವ ರೈತರು ಜಯ, ರಾಶಿ,ಐ.ಆರ್.-20 ತಳಿಗಳ ಬದಲು ಕಂದುಜಿಗಿ ನಿರೋಧಕ ಶಕ್ತಿ ಇರುವ ತಳಿಗಳನ್ನು ಬೆಳೆಸುವುದು ಉತ್ತಮ.

ಮಿತವಾಗಿ ಸಾರಜನಕ ಗೊಬ್ಬರಗಳ ಬಳಕೆ: ಮಿತಿಮೀರಿ ಸಾರಜನಕದ ಗೊಬ್ಬರ ಬಳಸುವುದು ಬೇಡ.  ಶಿಫಾರಸ್ಸಿನಲ್ಲಿರುವಷ್ಟುಗೊಬ್ಬರ ಬಳಕೆ ಅಗತ್ಯ ಮತ್ತು ಕಂದು ಜಿಗಿಪೀಡಿತ ಪ್ರದೇಶಗಳಲ್ಲಿ ಭತ್ತವನ್ನು ಅತಿ ಹೊತ್ತಾಗಿ ನಾಟಿ ಮಾಡುವುದು ಬೇಕಿಲ್ಲ.

ಕಂದು ಜಿಗಿಹುಳು ನಿರೋಧಕ ಭತ್ತದ ತಳಿಗಳು: ಅನೇಕ ಭತ್ತದ ತಳಿಗಳು ಕಂದು ಜಿಗಿಹುಳುಗಳ ನಿರೋಧಕ ಶಕ್ತಿಯನ್ನುಹೊಂದಿರುತ್ತವೆ.  ಕಂದು ಜಿಗಿಪೀಡಿತ ಪ್ರದೇಶಗಳಲ್ಲಿ ಅಂತಹ ತಳಿಗಳಾದ ಐ.ಇ.ಟಿ.7575 ಮತ್ತು ಐ.ಇ.ಟಿ.8116 ಬಳಕೆ ಅಗತ್ಯಮತ್ತು ಸಸ್ಯಸಂರಕ್ಷಣೆಯ ಹೊಣೆಯೂ ಸಹ ಕಡಿಮೆ.

ಮೂಲ :ಡಾII ಡಿ.ಕೆ.ಸಿದ್ದೇಗೌಡ

ಎಲೆ ಕವಚ ಕೊಳೆ ರೋಗ, ಕುತ್ತಿಗೆ ಬೆಂಕಿ ರೋಗ ಹಾಗೂ ಕಂದು ಜಿಗಿ ಹುಳುಗಳ ಹತೋಟಿ ಕ್ರಮಗಳು ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ನಂಜನಗೂಡು ಹಾಗೂ ಟಿ.ನರಸೀಪುರ ಭಾಗದಲ್ಲಿ ಬೆಳೆದಿರುವ ಭತ್ತದ ಗದ್ದೆಗಳಲ್ಲಿ ಎಲೆಗಳ ಮೇಲೆ ಕಂದು ಮಚ್ಚೆಗಳು ಕಂಡು ಬಂದಿದ್ದು, ಎಲೆಗಳು ಕೆಂಪು ಹಳದಿ ಬಣ್ಣಕ್ಕೆ ತಿರುಗಿದ್ದು, ಒಣಗಿದಂತೆ ಕಾಣುತ್ತಿದೆ. ಇದು ಕವಚ ಕೊಳೆ ರೋಗದ ಚಿಹ್ನೆಯಾಗಿದೆ. ಇಂತಹ ಚಿಹ್ನೆ ಕಂಡು ಬಂದಾಗ ಕೆಳಗೆ ಸೂಚಿಸಿರುವ ನಿರ್ವಹಣಾ ಕ್ರಮಗಳನ್ನು ರೈತರು ಕೈಗೊಳ್ಳಬೇಕಾಗುತ್ತದೆ.

  1. ತಾಕಿನಲ್ಲಿ ಅವಶ್ಯಕತೆಗಿಂತ ಹೆಚ್ಚಾಗಿರುವ ನೀರನ್ನು ಬಸಿಯುವುದು
  2. ಬೆಳೆಗೆ ಅಥವಾ ಹೆಕ್ಸಾಕೋನಾಝೋಲಾ ಔಷಧಿಯನ್ನು 1 ಲೀ ನೀರಿಗೆ 1 ಮಿ.ಲೀ. ಪ್ರಮಾಣದಲ್ಲಿ ಬೆರೆಸಿ ಗಿಡಗಳು ಸಂಪೂರ್ಣವಾಗಿ ನೆನೆಯುವಂತೆ ಸಿಂಪಡಿಸಬೇಕು. ಎಕರೆಗೆ 150 ರಿಂದ 200 ಲೀ ಸಿಂಪರಣಾ ದ್ರಾವಣ ಬೇಕಾಗುತ್ತದೆ.
  3. ಕುತ್ತಿಗೆ ಬೆಂಕಿ ರೋಗದ ಬಾಧೆಗೆ ಮುನ್ನೆಚ್ಚರಿಕೆಯಾಗಿ ಟ್ರೈಸೈಕ್ಲೋಝೋಲ್ ಔಷಧಿಯನ್ನು 6 ಗ್ರಾಂ ಪ್ರತಿ 10 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.
  4. ಕಂದು ಜಿಗಿ ಹುಳುಗಳ ಹತೋಟಿಗಾಗಿ ಗದ್ದೆಯಲ್ಲಿನ ನೀರು ಬಸಿಯುವುದು, ಇಕ್ಕಲು ತೆಗೆಯುವುದು ಹಾಗೂ ಇಮಿಡಾಕ್ಲೋಪ್ರಿಡ್ ಔಷಧಿಯನ್ನು ಪ್ರತಿ ಲೀಟರ್ ನೀರಿಗೆ 0.5 ಮಿ.ಲೀ. ಪ್ರಮಾಣದಲ್ಲಿ ಸೇರಿಸಿ ಸಿಂಪರಣೆ ಮಾಡುವುದು.
  5. ಎಲೆ ಕವಚ ಕೊಳೆ ರೋಗ Sheath blight ಇಲ್ಲದ ಕೇವಲ ಎಲೆಗಳ ಬಣ್ಣ ಕೆಂಪು - ಹಳದಿ ಬಣ್ಣಕ್ಕೆ ತಿರುಗಿದ್ದರೆ ಹಾಗೂ ಬೆಳೆಯು ಇನ್ನು ತೆಂಡೆಹೊಡೆಯುವ ಹಂತದಲ್ಲಿದ್ದರೆ ಅಂತಹ ತಾಕುಗಳಿಗೆ, ಕಬ್ಬಿಣ, ಸತು, ಮ್ಯಾಂಗನೀಸ್ ಯುಕ್ತ ಲಘು ಸಿಂಪಡಿಸಬೇಕು.

ಮೂಲ : ಆರ್ ಕೆ ಯುಂ ಪಿ

ಕೊನೆಯ ಮಾರ್ಪಾಟು : 2/15/2020

© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate