ವಲಯ 1,2,3 ಮತ್ತು 8 ರ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಬೀಳುವ ಮಳೆ ಕಡಿಮೆ ಮತ್ತು ಅನಿಶ್ಚಿತವಾದರೂ ಅತೀ ರಭಸವಾಗಿರುವುದರಿಂದ ಬಿದ್ದ ಮಳೆ ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ ಮತ್ತು ಬೆಳೆಗಳ ಇಳುವರಿ ಕಡಿಮೆಯಾಗಿರುವುದು. ಬೆಳೆಗಳ ಉತ್ಪಾದನೆಯಲ್ಲಿ ನಿರಂತರ ಹೆಚ್ಚಳಕ್ಕಾಗಿ ಹರಿದುಹೋಗುವ ಮಣ್ಣನ್ನು ತಡೆಗಟ್ಟುವುದು, ಮಳೆ ನೀರನ್ನು ಬಿದ್ದ ಸ್ಥಳದಲ್ಲಿಯೇ ಸಂರಕ್ಷಣೆ ಮಾಡುವುದು ಹಾಗೂ ಹರಿದು ಹೋಗುವ ನೀರನ್ನು ಹೆಚ್ಚು ಭೂಸವಕಳಿ ಆಗದಂತೆ ಶೇಖರಿಸಿ ಉಪಯೋಗಿಸುವುದರಿಂದ, ಬಿದ್ದ ಮಳೆ ನೀರಿನ ಸಮರ್ಥ ನಿರ್ವಹಣೆಯಾಗುವುದು.
ಭೂ ಅಭಿವೃದ್ಧಿ ಮಾಡಲು ಲೇಸರ್ ಲೆವಲರ್ ತಂತ್ರಜ್ಞಾನ ಬಳಸಿ ಭೂಮಿಯನ್ನು ಅತ್ಯಂತ ನಿಖರವಾಗಿ ಮಟ್ಟ ಮಾಡಬಹುದು. ಇದರಿಂದ ನೀರಿನ ಸಮನಾದ ಹಂಚಿಕೆಯ ಜೊತೆಗೆ ಮಣ್ಣು ಮತ್ತು ನೀರನ್ನು ಸಂರಕ್ಷಿಸಬಹುದು ಹಾಗೂ ಸುಮಾರು 15 ರಿಂದ 20 ಪ್ರತಿಶತ ನೀರನ್ನು ಉಳಿತಾಯ ಮಾಡಬಹುದು.
ಖುಷ್ಕಿ ಬೇಸಾಯ ತಂತ್ರಜ್ಞಾನದ ಮುಖ್ಯ ವೈಶಿಷ್ಟ್ಯಗಳು ಈ ಕೆಳಗಿನಂತಿವೆ
Source : ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 , ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು
ಮೂಲ : ಉಅಸ್ರ್ ಆಗ್ರೋ ಪೀಡಿಯಾ
ಕೊನೆಯ ಮಾರ್ಪಾಟು : 2/15/2020