ನೀರು ಮತ್ತು ಮಣ್ಣು ಸಂರಕ್ಷಣೆಯಲ್ಲಿ ಎಲ್ಲಾ ಕ್ರಮಗಳನ್ನು ಅನುಸರಿಸಿದಾಗ್ಯೂ ಬಹಳಷ್ಟು ಪ್ರಮಾಣದಲ್ಲಿ ಮಳೆಯ ನೀರು ಹೊಲದಿಂದ ಹೊರಗೆ ಹರಿದು ಹೋಗುತ್ತದೆ. ಹೀಗೆ ಅನಾವಶ್ಯಕವಾಗಿ ಹೊರಗೆ ಹರಿದು ಹೋಗುವ ನೀರನ್ನು ಹೊಲದಲ್ಲಿಯೇ ನಿರ್ಮಿಸಿದ ಚಿಕ್ಕ ಹೊಂಡಗಳಲ್ಲಿ ಶೇಖರಿಸಿ, ಬೆಳೆಗಳಿಗೆ ತೇವಾಂಶದ ಕೊರತೆ ಆದ ಸಂದರ್ಭದಲ್ಲಿ ಒಂದೆರಡು ಬಾರಿ ನೀರು ಕೊಟ್ಟು ಬೆಳೆಗಳ ಇಳುವರಿಯನ್ನು ಹೆಚ್ಚಿಸಬಹುದು. ಹೊರಗೆ ಹೋಗುವ ನೀರನ್ನು ಅರ್ಧದಷ್ಟನ್ನು ಹಿಡಿದಿಟ್ಟುಕೊಳ್ಳಲು ನಿರ್ಮಿಸಬೇಕಾದ ಹೊಂಡದ ನಿರ್ಮಾಣದ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ.
1. ಹೊಂಡದ ಸ್ಥಳವು ನೈಸರ್ಗಿಕ ತಗ್ಗುಗಳು, ಕಣಿವೆ ಪ್ರದೇಶ ಮತ್ತು ಕಡಿಮೆ ಅಗೆತ ಹಾಗೂ ಸಹಜ ನೀರಾವರಿಗೆ ಅನುಕೂಲ ಸ್ಥಳ.
2. ಹೊಂಡದ ಸಾಮಥ್ರ್ಯ 150 ಘನ ಮೀ. ಪ್ರತಿ ಹೆಕ್ಟೇರ್ ಇಳಿಮೇಡು ಪ್ರದೇಶಕ್ಕೆ (ಕ್ಯಾಚಮೆಂಟ್ ಏರಿಯಾ)
3. ಹೊಂಡದ ಆಲ 2.5 ರಿಂದ 3.0 ಮೀ.
4. ಮಗ್ಗುಲಿನ ಇಳಿಜಾರು 1.5 : 1.0 ಪ್ರಮಾಣ
5. ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಸಣ್ಣ ಕ್ಷೇತ್ರ ಹೊಂಡಗಳನ್ನು ಪ್ರತಿ 2-3 ಹೆಕ್ಟೇರಿಗೆ ಒಂದರಂತೆ ನಿರ್ಮಿಸುವುದು ಉತ್ತಮ.
6. ಹೊಂಡದಲ್ಲಿ ರೇವೆ ಶೇಖರಣೆ ತಡೆಗಟ್ಟಲು, ನೀರು ಹೊಂಡದೊಳಗೆ ಬರುವುದಕ್ಕೆ ಮುಂಚೆ ಸೂಕ್ತ ಗಾತ್ರದ ರೇವೆ ಶೇಖರಣ ಗುಂಡಿಗಳನ್ನು (ಸಿಲ್ಟಟ್ರ್ಯಾಪ್) ನಿರ್ಮಿಸಬೇಕು.
7. ಹೊಂಡವು ತುಂಬಿದಾಗ ನೀರನ್ನು ಉಪಯೋಗಿಸುವುದರಿಂದ ಪುನಃ ಹರಿದು ಬರುವ ನೀರಿನ ಶೇಖರಣೆಗೆ ಅನುಕೂಲವಾಗುತ್ತದೆ.
8. ಕೆಂಪು ಜಮೀನಿನಲ್ಲಿ ಹೊಂಡದಲ್ಲಿಂದ ನೀರು ಇಂಗಿ ಹೋಗುವ ನಷ್ಟವನ್ನು ತಡೆಗಟ್ಟಲು ಹೊಂಡದ ಒಳಮ್ಮೆಗೆ ಸಿಮೆಂಟ್ ಮತ್ತು ಉಸುಕಿನಿಂದ (1:8 ಪ್ರಮಾಣದಲ್ಲಿ) 5.ಸೆಂ.ಮೀ. ದಪ್ಪ ಗಿಲಾಯಿ ಮಾಡಬೇಕು.
9. ಹೊಂಡದ ಮಗ್ಗಲು ಮತ್ತು ದಂಟೆಯನ್ನು ಭದ್ರ ಪಡಿಸಲು ಹುಲ್ಲು ಮತ್ತು ಗಿಡಗಳನ್ನು ಬೆಳೆಯಬೇಕು.
10. ಸಾಮಾನ್ಯವಾಗಿ ಒಂದು ಕ್ಷೇತ್ರ ಹೊಂಡದಿಂದ ಅದರ ಇಳಿಮೇಡು ಕ್ಷೇತ್ರದ ಶೇ. 25 ರಿಂದ ಶೇ. 33 ರಷ್ಟು ಕ್ಷೇತ್ರಕ್ಕೆ 2 ಸಲ ನೀರು ಒದಗಿಸಬಹುದು.
11. ಆಳವಾದ ಕಪ್ಪು ಭೂಮಿಯಲ್ಲಿ ಕೃಷಿ ಹೊಂಡದಿಂದ 2-3 ಸಲ ನೀರು ಕೊಟ್ಟು ಚಿಕ್ಕು, ಪೇರಲ ಮತ್ತು ಬಾರೆ ಹಣ್ಣಿನ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು.
Source : ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 , ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು
ಮೂಲ : ಉಅಸ್ರ್ ಆಗ್ರೋ ಪೀಡಿಯಾ
ಕೊನೆಯ ಮಾರ್ಪಾಟು : 7/2/2020