অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸುಗಂಧ ಭತ್ತದ ಬಳಕೆ

ಸುಗಂಧ ಭತ್ತದ ಬಳಕೆ

ಒಂದೂವರೆ ಎಕರೆಜಾಗ. ಬೆಳೆಯುವ ಬೆಳೆ ಭತ್ತ.ಒಂದಲ್ಲ, ಎರಡಲ್ಲಬರೋಬ್ಬರಿ 70 ದೇಶೀತಳಿಗಳು! ಸಣ್ಣ ಕಾಳು,ದೊಡ್ಡ ಕಾಳು, ಕಪ್ಪು ಕಾಳು,ಬಂಗಾರದಂತಹ ಭತ್ತದಕಾಳು ನಳನಳಿಸುವತಾಕುಗಳು. ಯಾವ ಕೃಷಿವಿಶ್ವವಿದ್ಯಾಲಯಗಳಲ್ಲೂಕಾಣ ಸಿಗದಿರುವಂತಹಜೀವಂತ ದೃಶ್ಯ ಕಣ್ಣಿಗೆ ಹಿತನೀಡುತ್ತದೆ. ಇದು ಮಂಡ್ಯಹತ್ತಿರದ ಶಿವಳ್ಳಿಯ ರೈತ ಬೋರೇಗೌಡರ ಹೊಲ.

ಹೈಬ್ರೀಡ್ ಭತ್ತ, ಗೊಬ್ಬರದ ಭರಾಟೆಯಲ್ಲಿ ನಮ್ಮ ನೆಲ ಮೂಲದ ದೇಶೀ ಭತ್ತದತಳಿಗಳು ಕಣ್ಮರೆಯಾಗುತ್ತವೆ. 'ದೇಶೀ ಭತ್ತ ಉಳಿಸಿ' ಆಂದೋಲನಕ್ಕೆ ಮೂರ್ತ ರೂಪದಲ್ಲಿಹೋರಾಟ ಮಾಡುತ್ತಿರುವ ರೈತ ಇವರು. ಎಲ್ಲರಂತೆ ಇವರೂ ರಾಸಾಯನಿಕ ಗೊಬ್ಬರಬಳಸಿ ಬೇಸಾಯ ಮಾಡುತ್ತಿದ್ದರು. ಇದರಿಂದ ಬೆಳೆಯ ಇಳುವರಿ ವರ್ಷದಿಂದ ವರ್ಷಕ್ಕೆಕಡಿಮೆಯಾಗುತ್ತಲೇ ಬಂತು. ಉತ್ಪಾದನೆಯ ವೆಚ್ಚಕ್ಕೂ ಹುಟ್ಟುವಳಿಗೂ ಸಮನಾಗತೊಡಗಿತು.

ಇಂತಹ ಸಮಯದಲ್ಲಿ ಇವರನ್ನು ಪಾಳೇಕರ್ ಕೃಷಿ ಪದ್ಧತಿ ಸೆಳೆಯಿತು.ಇದರೊಂದಿಗೆ ಸಾವಯವ ಕೃಷಿಯ ಕುರಿತು ಪತ್ರಿಕೆಗಳಲ್ಲಿ ಬರುವ ಲೇಖನಗಳು ಇವರನ್ನುಆಕಷರ್ಿಸಿತು.

ಸಾವಯವ ಕೃಷಿ ಮಾಡಲು ಪ್ರಾರಂಭಿಸಿದರು. ಹೈಬ್ರೀಡ್ ಭತ್ತದ ಬೆಳೆಗೆಸಾವಯವ ಕೃಷಿ ಅಳವಡಿಸಿಕೊಳ್ಳಲು ಯತ್ನಿಸಿದರು. ಆದರೆ ಪ್ರಯೋಜನ ಶೂನ್ಯ.ಸಾವಯವ ಕೃಷಿ ಯಶ ಕಾಣಬೇಕಿದ್ದರೆ ನಮ್ಮ ನೆಲದ ಭತ್ತದ ತಳಿಗಳಿಗೆ ಸೂಕ್ತ ಎಂದುಮನಗಂಡರು. ದೇಶೀ ಭತ್ತದ ತಳಿಗಳ ಹುಟುಕಾಟಕ್ಕೆ ಪ್ರಾರಂಭಿಸಿದರು. ಆಗಪರಿಚವಾದವರು ಬೆಳ್ತಂಗಡಿ ಹತ್ತಿರದ ಕಿಲ್ಲೂರು ದೇವರಾಯರು. ಇವರು ಕೂಡಾಅಪರೂಪದ ಭತ್ತದ ಸಂರಕ್ಷಕರು. ಇವರಲ್ಲಿಗೆ ಹೋಗಿ ನಾಲ್ಕೈದು ತಳಿಯ ಭತ್ತವನ್ನುತಲಾ 200 ಗ್ರಾಂ ಭತ್ತದ ಬೀಜಗಳನ್ನು ತಂದು ನಾಟಿ ಮಾಡಿದರು. 2003ನೇ ಸಾಲಿನಲ್ಲಿ30 ಗುಂಟೆ ಜಮೀನಿನಲ್ಲಿ 26 ತಳಿಗಳನ್ನು ಬೆಳೆದರು. ಇದರ ಪರಿಣಾಮ ಇಂದು 70 ಭತ್ತದತಳಿಗಳನ್ನು ಬೆಳೆಯಲಿಕ್ಕೆ ಪ್ರೇರಕವಾಯಿತು.

ಇವರಲ್ಲಿರುವ ಭತ್ತದ ತಳಿಗಳು: ಸಿಪ್ಪಾಗಂಗ್, ಗಿಡ್ಡ ಬಾಸ್ಮತಿ, ಕಲನಮಕ್,ಅಂಬೆಮೋರ್, ಹೊಳೆಸಾಲು ಚಿಪ್ಪಿಗ, ಪರಿಮಳಸಣ್ಣ, ಮುಕ್ಕಣ್ಣುಸಣ್ಣ, ಕೃಷ್ಣಲೀಲಾ,ಬಾಸ್ಮತಿ ಸುಗಂಧ, ಗಂಧಸಾಲೆ, ಎಚ್ಎಂಟಿ, ಜೀರಿಗೆ ಸಾಂಬಾ, ರತ್ನಚೂಡಿ, ನಾಗಾಭತ್ತ,ಗೌರಿಸಣ್ಣ, ಬಂಗಾರಸಣ್ಣ, ನವರ, ಬಾದ್ಷಾ ಬೋಗ್, ಬೋರೇಗೌಡ 1, 2, 3, 4, 5, 6, 7,ಮಾಲ್ಗುಡಿಸಣ್ಣ, ರಾಜ್ ಬೋಗ್, ಕಪ್ಪು ಬಾಸ್ಮತಿ, ಕುರಿಗೆ ನೆಲ್ಲು, ದೆಹಲಿ ಬಾಸ್ಮತಿ,ಮೆಹಾಡಿ, ಚೋಮಲ್, ಎಂಎನ್ನೆಸ್-2, ಜಿರಿಗೆ ಸಣ್ಣ, ಸೇಲಂಸಣ್ಣ, ಮಲ್ಲಾನ್ಛೆನ್ನಾ, ತೊಂಡಿ,ತೊನ್ನುರು ರಾಮಾತೊಂಡಿ, ಜಿರಿಗೆ ಸಾಲಾ, ಅಚ್ಯುತನ್, ಮುಲ್ಲಾಪುಂಡಿ, ಕಲಾದ್ಯಾನ್,ರಾಯಚೂರು ಸಣ್ಣ, ಆನಂದನೂರ್ಸಣ್ಣ, ಬಿಳಿನೆಲ್ಲು, ಆಂದಾನೂರ ಸಣ್ಣ, ಚಿನ್ನಾಪೊನ್ನಿಕರಿಗಿಜಿಬಿಲಿ, ಕಾಲಾಜಿರಾ, ಬಮರ್ಾಬ್ಲಾಕ್, ರಸದ್ಕಂ ಮುಂತಾದ ತಳಿಗಳನ್ನುಬೋರೇಗೌಡರು ಬೆಳೆಸುತ್ತಿದ್ದಾರೆ. ಇವುಗಳಲ್ಲಿ ಔಷಧಿಯ ಗುಣ ಮತ್ತು ಸುಗಂಧ ಭರಿತಭತ್ತದ ತಳಿಗಳು ಇವೆ.

ಹಸಿರು ಗೊಬ್ಬರ, ಜೀವಾಮೃತ ಕೃಷಿ: ಈ ಎಲ್ಲ ಭತ್ತದ ತಳಿಗಳು ಸರಿಯಾಗಿಬೆಳೆಯಲು ರಾಸಾಯನಿಕ ಗೊಬ್ಬರ ಖರೀದಿ ಮಾಡುವುದನ್ನು ನಿಲ್ಲಿಸಿದ ಬೋರೇಗೌಡರು.ಮಳೆಗಾಲ ಪ್ರಾರಂಭಕ್ಕೂ ಮುನ್ನ ಹುರುಳಿ, ಅಲಸಂಡೆ, ಡಾಯಂಚಾ, ಸೆಣಬು, ಎಳ್ಳುಇವುಗಳನ್ನು ಹಸಿರೆಲೆ ಗೊಬ್ಬರವಾಗಿ ಬೆಳೆಸಿದರು. ಹೊಲ ಹದ ಮಾಡುವ ಸಮಯದಲ್ಲಿಇವುಗಳನ್ನು ಸೇರಿಸಿ ಉಳುಮೆ ಮಾಡಿದರು. ನಂತರ ಭೂಮಿ ಮತ್ತಷ್ಟು ಫಲವತ್ತಾಗಲುಜೀವಾಮೃತ ಬಳಸಲು ಪ್ರಾರಂಭಿಸಿದರು. ಇದರಿಂದ ಭೂಮಿಯ ಫಲವತ್ತತೆದ್ವಿಗುಣವಾಗಿ, ಇಳುವರಿಯು ಹೆಚ್ಚಾಯಿತು.

ಸುಗಂಧ ಭತ್ತದ ಬಳಕೆ

ಸುಗಂಧ ಭತ್ತಗಳ ಅಕ್ಕಿಯನ್ನು ಮಾತ್ರ ಅಡುಗೆಗೆ ಬಳಸಬಾರದು. ಒನ್ನೊಮ್ಮೆಕೇವಲ ಸುಗಂಧ ಭತ್ತಗಳನ್ನು ಬಳಸಿದರೆ ಸೆಂಟಿನ ಬಾಟಲಿ ಪೂರ್ಣ ಮೈಮೇಲೆಸುರಿದುಕೊಂಡ ಹಾಗಾಗುತ್ತದೆ. ಅದನ್ನೇ ಹಿತಮಿತವಾಗಿ ಬಳಸಿದರೆ ಎಲ್ಲರಿಗೂ ಹಿತ.ಹಾಗೆಯೇ ಸುಗಂಧ ಅಕ್ಕಿ ಬಳಸುವ ವೇಳೆ ಸಾದಾ ಅಕ್ಕಿಯ ಜೊತೆ ಒಂದು ಮುಷ್ಠಿ

ಸುಗಂಧಅಕ್ಕಿಯನ್ನುಬಳಸಿರೆಬಹಳಚೆನ್ನಾಗಿರುತ್ತದೆ ಎನ್ನುವ ಮಾಹಿತಿಯನ್ನು ಬೋರೇಗೌಡರು ನೀಡುತ್ತಾರೆ.

ರಾಸಾಯನಿಕ ಕೃಷಿ, ಹೈಬ್ರೀಡ್ ಭತ್ತದಲ್ಲಿ ಬರುವ ಲಾಭಕ್ಕಿಂತ ಹೆಚ್ಚಿನ ಲಾಭಸಾವಯವ ಕೃಷಿ ಮತ್ತು ದೇಶೀ ಭತ್ತದ ಬೆಳೆಯಿಂದ ಬರುತ್ತದೆ ಎನ್ನುವುದುಬೋರೇಗೌಡರ ಅಭಿಮತ. ಇವರು ನಾಲ್ಕು ವರ್ಷಗಳಿಂದ ಸುಮಾರು 150 ಕ್ವಿಂಟಾಲ್ಭತ್ತದ ಬೀಜ ಮಾರಾಟ ಮಾಡಿದ್ದಾರೆ. ಈ ರೀತಿಯಲ್ಲಿ ದೇಶೀ ಭತ್ತದ ತಳಿಗಳನ್ನುರಕ್ಷಿಸುತ್ತಿರುವ ಬೋರೇಗೌಡರು ಕಾರ್ಯ ಶ್ಲಾಘನೀಯ.

ಭತ್ತದ ತಳಿಗಳ ಬಗ್ಗೆ ಮಾಹಿತಿಗಾಗಿ ಬೋರೇಗೌಡ-9986381167, ಎಸ್.ಶಂಕರ್- 9886853858

ಮೂಲ: ನಾಗರಾಜ ಮತ್ತಿಗಾರ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate