অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಎರೆ ಹುಳು ಗೊಬ್ಬರ

ಎರೆ ಹುಳು ಗೊಬ್ಬರವು ಹೆಚ್ಚಿನ ಉತ್ಪನ್ನ ಮತ್ತು ಆದಾಯವನ್ನುತರುವುದು- ಸಣ್ಣ ರೈತನೊಬ್ಬನು ತೋರಿದ ದಾರಿ

ಇದು ಸಣ್ಣ ರೈತನೊಬ್ಬನ ಸುದ್ದಿ ಅವನು ವಿಭಿನ್ನ ಮಾದರಿ ಸಂಪನ್ಮೂಲವನ್ನು ಆರಿಸಿದ. ಬರಡಾದ ಒಣ ಭೂಮಿಯ ಬಡ ರೈತರು ಬದುಕಲು ಬವಣೆ ಪಡುತ್ತಾರೆ. ಅವನ ಆಳವಾದ “ ಜೀವನ ಪ್ರೀತಿಯು” ಅವನಿಗೆ ಉತ್ತಮ ಜೀವನ ನೀಡಿತಲ್ಲದೆ , ಮುಖ್ಯವಾಗಿ ಇತರರು ಅವನನ್ನು ಅನುಕರಿಸಲು ಸ್ಪೂರ್ತಿ ನೀಡಿತು.ಯುವ ರೈತನಾದ ಚಂದ್ರಣ್ಣನು , ಈಗ ” ನರ್ಸರಿ ಚಂದ್ರಣ್ಣ’ ಎಂದು ಮೊದಲು ಹೆಸರಾಗಿದ್ದ. ನಂತರ “ ಎರೆ ಗೊಬ್ಬರ” ದ ಚಂದ್ರಣ್ಣ ನೆಂದು ಖ್ಯಾತನಾಗಿದ್ದಾನೆ. ಅವನು ಮೂರು ವರ್ಷದಲ್ಲಿ ಎರೆಗೊಬ್ಬರ ಮತ್ತು ಎರೆಹುಳು ಮರಾಟದಿಂದ . 1.4 ಲಕ್ಷ ರೂಪಾಯಿ ಸಂಪಾದಿಸಿದ್ದಾನೆ. ವರ್ಷದಲ್ಲಿ15000.ರುಪಾಯಿ ಸರಾಸರಿ ಆದಾಯ ಪಡೆಯುವ ಅವನ ಸಾಹಸವು ಈ ಪ್ರದೇಶದಲ್ಲಿ ಕಥೆಯಾಗಿದೆ.

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿನ ಮೊಳಕಾಲ್ಮುರು ತಾಲೂಕಿನ ಒಂದು ಗ್ರಾಮ ತುಮುಕೂರಲಹಳ್ಳಿ. ಅಲ್ಲಿ 650 ಮನೆಗಳಿವೆ. ಅದು ಬರಪೀಡಿತ ಪ್ರದೇಶದ ಒಂದು ಕುಗ್ರಾಮ. ಅಲ್ಲಿ ಹಿಂದುಳಿದ ಜನಾಂಗವರೇ ಹೆಚ್ಚು – 410 ಪ. ಜಾತಿ ಕುಟುಂಬಗಳು, 100 ಮುಸ್ಲಿಮರು ಮತ್ತು 100 ಲಿಂಗಾಯಿತ ಕುಟುಂಬಗಳಿವೆ. ಒಟ್ಟು ಜನ ಸಂಖ್ಯೆ 3800. ಗ್ರಾಮದಲ್ಲಿ ಸುಮಾರು 3322 ಹೆ. ಭೂಮಿಯಿದೆ. 15% ಒಣ ಭೂಮಿ ಮತ್ತು 3.5% ಭೂಮಿಗೆ ಕೊಳವೆ ಬಾವಿಯಿಂದ ನೀರುಪಡೆಯು ವರು ಉಳಿದ 2695 ಹೆ.. (81.5%) ಭೂಮಿಯು ಗ್ರಾಮದ ಎಲ್ಲರಿಗೂ ಸೇರಿದ್ದು. ಪಾಳು ಭೂಮಿ, ಗೋಮಾಳ ಮತ್ತು ಅಗಾಗ ಕಾಣುವ ಚಿಕ್ಕ ಮರ ಗಿಡ, ಪೊದೆಗಳಿರುವ “ಕಾಯ್ದಿರಿಸಿದ ಕಾಡು”. ಈ ಭೂಮಿಯು ಸಾಧಾರಣವಾಗಿ ಕೆಂಪು ಮರಳು ಮಿಶ್ರಿತ ಮಣ್ಣು ಹೊಂದಿದೆ. ಅಲ್ಲ್ಲಲ್ಲಿ ಕಲ್ಲುಗಂಡುಗಳು ಹರಡಿವೆ.ಒಟ್ಟಿನಲ್ಲಿ ಇದು ಲಾಭದಾಯಕ ಕೃಷಿಗೆ ಯೋಗ್ಯವಲ್ಲದ ಭೂಮಿಯಿರುವ ಗ್ರಾಮ. ಇಲ್ಲಿ ವಾರ್ಷಿಕ ಸರಾಸರಿ ಮಳೆ 500ಮಿಮಿ ಗಿಂತಲೂ ಕಡಿಮೆ. ರೈತರು ಸೇಂಗಾ ಬೆಳೆಯ ಜೂಜಾಟದಲ್ಲಿ ತೊಡಗುವರು. ಇದೊಂದೆ ವಾಣಿಜ್ಯ ಬೆಳೆಯನ್ನೂ ಪ್ರತಿವರ್ಷ ವೂ ಹಾಕುವರು. ಕಳೆದ ಮೂವತ್ತು ವರ್ಷದಿಂದ ಒಂದೆ ಬೆಳೆಹಾಕಿದ ಪರಿಣಾಮವಾಗಿ ಇಳುವರಿಯು ಕನಿಷ್ಠ ಮಟ್ಟಕ್ಕೆ ಇಳಿದಿದೆ. ಒಂದು ಎಕರೆಗೆ 8 ಕ್ವಿಂಟಲ್ ಇಳುವರಿ ಬರುವುದೂ ಕಷ್ಟ.. ಕೃಷಿಯು ಲಾಭದಾಯಕವಲ್ಲದಿದ್ದರೂ ಬಹುತೇಕ ಜನರು ಕೃಷಿಯನ್ನೆ ಮತ್ತು ದಿನ ಗೂಲಿಯನ್ನೆ ಅವಲಂಬಿಸಿದ್ದಾರೆ. ಸಹಜವಾಗಿ ಗಂಡಸರು ವರ್ಷದಲ್ಲಿ ಬಹುಕಾಲು ವಲಸೆಹೋಗುತ್ತಾರೆ.

ಚಿಕ್ಕ ರೈತ ದೊಡ್ಡ ಭರವಸೆ

ಗ್ರಾಮದಲ್ಲಿ ಕೃಷಿಯು ಸಾಧಾರಣವಾಗಿ ಅಚ್ಚರಿ ಮೂಡಿಸುವುದಿಲ್ಲ.ಆತ್ಮ ವಿಶ್ವಾಸ ಮತ್ತು ಅತೀವ ಅಸಕ್ತಿಯು ಕೃಷಿಯನ್ನು ನಂಬಲು ಅರ್ಹವಾದ ಉದ್ಯಮವಾಗಿಸುವುದು ಎಂಬುದನ್ನು ಚಂದ್ರಣ್ಣನ ಸಾಧನೆ ಎತ್ತಿಹೇಳುತ್ತದೆ. ಅದು ದಿನ ಬೆಳಗಾಗುವದರಲ್ಲಿ ಯಶ ದೊರಕಿದ ಕಥೆಯಲ್ಲ. ಗ್ರಾಮದಲ್ಲಿ ವಿವಿಧ ಏಜನ್ಸಿಗಳಿಂದ ದೊರಕಿದ ಅವಕಾಶಗಳನ್ನು ಕ್ರಮಬದ್ದವಾಗಿ ಬಳಸಿಕೊಂಡು ಮಾಡಿದ ವ್ಯವಸ್ಥಿತ ಪ್ರಯತ್ನ.

ಚಂದ್ರಣ್ಣನು ಬಡ ಕುಟುಂಬದಿಂದ ಬಂದವನು. ಅವನಿಗೆ ತಂದೆಯಿಂದ 3 ಎಕರೆ ಒಣ ಭೂಮಿ ಬಂದಿತ್ತು. ಅದರಲ್ಲಿ ಒಂದು ಎಕರೆ ಸಾಗುವಳಿ ಮಾಡಲಾಗದ ಬಂಜರು ಭೂಮಿ. ಆದ್ಧರಿಂದ ದಿನ ಗೂಲಿಯೇ ಅವರ ಕುಟುಂಬ ಪೋಷಣೆಗೆ ಆಧಾರ. ಎರಡು ಎಕರೆ ಭೂಮಿಯಲ್ಲಿ ಮಾಡುವ ಕೃಷಿ ಆದಾಯ ಯಾವುದಕ್ಕೂ ಸಾಲದು.ಅವನ ತಾಯಿ ತಂದೆಯರು ತಮ್ಮ ಮಗ ಸುಶಿಕ್ಷಿತನಾಗಲಿ ಎಂದು ಬಯಸಿದ್ದರು.. ಆದರೆ ಅವನಿಗೆ ಬಡತನದಿಂದಾಗಿ ಪಿಯುಸಿ ದಾಟುವುದು ಆಗಲೆ ಇಲ್ಲ ಅವನು ಮನೆಯಲ್ಲಿ ತನ್ನ ತಾಯಿತಂದೆಯರಿಗೆ ಕೃಷಿಕೆಲಸದಲ್ಲಿ ಸಹಾಯ ಮಾಡಲು ಶಾಲೆ ಬಿಡಬೇಕಾಯಿತು. ಎ ಎಮ್ ಇ ಪುದುವಟ್ಟು ಸಂಪನ್ಮೂಲ ಏಜೆನ್ಸಿಯಾಗಿರುವ ಕರ್ನಾಟಕ ವಾಟರ್ ಷೆಡ್ ಡೆವಲಪ್ ಮೆಂಟ್ ಯೋಜನೆ ಅಡಿಯಲ್ಲಿ ನ, ಸ್ವಯಂ ಸಹಾಯಕ ಸಂಘವನ್ನು  ಚಂದ್ರಣ್ಣ ಸೇರಿದ.

ಬದಲಾವಣೆಯ ಕ್ಷಣ

ಚಂದ್ರಣ್ಣನು 2000 ರಲ್ಲಿ ಬಿ ಎ ಇ ಎಫ್,ಇನಸ್ಟಿಟ್ಯೂಟ್ ಅಫ್ ರೂರಲ್ ಡೆವಲಪ್ ಮೆಂಟ್ ಕರ್ನಾಟಕ , ತಿಪಟೂರು , ಇವರು ನಡೆಸಿದ ನರ್ಸರಿ ಬೆಳೆಸುವ ತರಬೇತಿಯಲ್ಲಿ ಭಾಗವಹಿಸಿದ. ಆದರೆ ಅವನಿಗೆ ಅದೆ ಸಮಯದಲ್ಲಿ ಅಲ್ಲಿ ಇನ್ನೊಂದು ರೈತರ ಗುಂಪಿಗೆ ನೀಡುತ್ತಿದ್ದ ಎರೆಹುಳ ಗೊಬ್ಬರ ( ವರ್ಮಿ ಕಾಂಪೋಸ್ಟಿಂಗ್) ನಲ್ಲಿ ಕುತೂಹಲ ಮೂಡಿತು. ಅವಕಾಶ ಸಿಕ್ಕಾಗಲೆಲ್ಲ ಅವನು ಆ ಗುಂಪನ್ನು ಸೇರುತ್ತಿದ್ದ. ಅವನಿಗೆ ಎರೆಹುಳು ಬೆಳೆಸುವ ಮತ್ತು ಕಾಂಪೋಸ್ಟು ತಯಾರಿಸುವ ವಿಧಾನ ಬಹಳ ಆಸಕ್ತಿದಾಯಕವಾಗಿತ್ತು.ನರ್ಸರಿ ತರಬೇತಿ ಮುಗಿಸಿಬಂದ ಮೇಲೆ ಅವನ ಗುಂಪಿಗೆ 15,000 ಸಸಿಗಳನ್ನು ಬೆಳೆಸುವ ಅವಕಾಶ ದೊರೆಯಿತು. ಇದರ ಜವಾಬ್ದಾರಿಯನ್ನು ಚಂದ್ರಣ್ಣನಿಗೆ ನೀಡಲಾಯಿತು. ಅವನು2000ನೆ ಇಸ್ವಿಯಿಂದ ಸತತವಾಗಿ ಮೂರುವರ್ಷ ನರ್ಸರಿ ಬೆಳೆಸಿದ. ಅವನ ನರ್ಸರಿಗೆ 2003 ರಲ್ಲಿ ವಾಟರ್ ಷೆಡ್ ಯೋಜನೆಯಲ್ಲಿನ ಸರ್ವ ಶ್ರೇಷ್ಟ ಪ್ರಶಸ್ತಿ ಸಿಕ್ಕಿತು. ಚಂದ್ರಣ್ಣ ನು “ ನರ್ಸರಿ ಚಂದ್ರಣ್ಣ” ಎಂದೆ ಹೆಸರಾದ.ಕಿರಿದಾಗಿ ಪ್ರಾರಂಬಿಸಿ ಹಿರಿದಾದ ಹೆಸರು ಪಡೆದ. ಅವನ ಎರೆಹುಳು ಕಾಂಪೋಸ್ಟನ ಕುತೂಹಲ ಹೆಚ್ಚಾಗುತ್ತಾ ಹೋಯಿತು ತರಬೇತಿಯಲ್ಲಿದ್ದಾಗಿನ ತನ್ನ ತುಸು ತಿಳುವಳಿಕೆಯಿಂದಲೆ ತೆಂಗಿನ ಚಿಪ್ಪಿನಲ್ಲಿ ಸ್ಥಳೀಯ ಎರೆಹುಳು ಸಾಕಲು ಶುರು ಮಾಡಿದ. ಆದರೆ ಅವು ಬದುಕಲೆ ಇಲ್ಲ.ಚಂದ್ರಣ್ಣನು 2003 ರಲ್ಲಿ ನಾಲಕ್ಕು ವರ್ಮಿ ಕಾಂಪೋಸ್ಟು 6x3x3 ಘ. ಅಡಿ ಗುಂಡಿಗಳನ್ನು ತೋಡಿದ. ಅದಕ್ಕೆ KAWAD ಯೋಜನೆಯ ಸಹಾಯ ಪಡೆದ. ಅ ಗುಂಡಿಗಳನ್ನು ಹೇಗೆ ಬಳಸಬೆಕೆಂಬ ಮಾಹಿತಿ ಅವನಿಗೆ ಇರಲಿಲ್ಲ. ಚಂದ್ರಣ್ಣನು GUARD ಸಿಬ್ಬಂದಿಯೊಬ್ಬರಿಂದt 2 ಕೆಜಿ ಎರೆಹುಳುಗಳನ್ನು . 300 ರೂಪಾಯಿಗಳಿಗೆ ಕೊಂಡ.ಅದರಿಂದ 20 ಕ್ವಿ ಎರೆಗೊಬ್ಬರ ವನ್ನು ಉತ್ಪಾದಿಸಿದ. ಅದನ್ನು ತನ್ನ ಎರಡು ಎಕರೆ ಹೊಲದಲ್ಲಿ ಬೆಳೆದ ರಾಗಿ ಪೈರಿಗೆ ಹಾಕಿದ. ಅದು ವರೆಗೂ ತುಮುಕೂರು ಹಳ್ಳಿಯಲ್ಲಿ ಯಾರೂ ರಾಗಿ ಬೆಳೆ ಹಾಕಿರಲಿಲ್ಲ. ಅವನಿಗೆ ಎರಡು ಎಕರೆಗೆ 14 ಕ್ವಿಂ ರಾಗಿ ಫಸಲು ಬಂದಿತು.ಪುನಃ 2004 ರಲ್ಲಿ ಅವನು 6 ಕ್ವಿಂ ಉತ್ತಮ ಎರೆಗೊಬ್ಬರ ಮತ್ತು ಎರಡು ಟ್ರಾಕ್ಟರ್ ( 2ಟನ್ ) ಸಗಣಿ ಗೊಬ್ಬರ ಜತೆಗೆ ಒಂದು ಚೀಲ ಡಿ ಎ ಪಿ ಯನ್ನು ತನ್ನ ಎರಡು ಎಕರೆ ಹೊಲಕ್ಕೆ ಹಾಕಿ ಸೇಂಗಾ ಬಿತ್ತಿದ. ಅದರಿಂದ ಅವನಿಗೆ 20 ಚೀಲ ಫಸಲು ಬಂದಿತು. ಅದು 9 ಕ್ವಿ. ತೂಗಿತು.ಮರ ಆಧಾರಿತ ಕೃಷಿ ವ್ಯವಸ್ಥೆಯನ್ನಯ ಭೇಟಿ ನೀಡಿ ಪರಿಶೀಲಿಸಿದ.ಕಾಂಪೋಸ್ಟು ಮತ್ತು ವರ್ಮೀ ಕಾಂಪೋಸ್ಟು ಗಳನ್ನು ಯಶಸ್ವಿಯಾಗಿ ಮಾಡುತ್ತಿರುವ ರೈತರೊಂದಿಗೆ ಸಂವಾದ ನೆಡಿಸಿ ಸುಸ್ಥಿರ ಕೃಷಿಯಬಗ್ಗೆ ಸ್ಥೂಲ ಪರಿಚಯ ಮಾಡಿಕೊಂಡ.. ಅವನು ಹತ್ತಿರದ ಹಳ್ಳಿಯ ಇನ್ನೊಬ್ಬ ಬಿಜಿ. ಕೆರೆಯ ಗ್ರಾಮದ ಪ್ರಗತಿ ಪರ ರೈತನಿಂದ ವರ್ಮಿ ಕಾಂಪೋಸ್ಟ ಬಗೆಗೆ ಹೆಚ್ಚಿನ ವಿವರ ಸಂಗ್ರಹಿಸಿದ.ಚಂದ್ರಣ್ಣನು 2005 ನೆ ವರ್ಷದಲ್ಲಿ 6 ಕ್ವಿಂ. ವರ್ಮಿ ಕಾಂಪೋಸ್ಟ ಅನ್ನು ಒಂದು ಎಕರೆ ಪಿಟಿ ಡಿ ಪ್ಲಾಟಿಗೆ ಹಾಕಿದ. ಅದರ ಜೊತೆಗೆ , ಬೇಸಿಗೆಯ ಉಳುಮೆ, ಬಯೋ ಎಜೆಂಟು ಗಳಾಧ( ಟ್ರಿಚೊಡರ್ಮ ಮತ್ತು ರಿಝೋಬಿಯಂ )ಬಳಸಿ ಬಿಜೋಪಚಾರ ಮಾಡಿದ .ಜಿಪ್ಸಂ (50 ಕೆಜಿ.), ಹೆಚ್ಚುವರಿ ಬೀಜದರ (45 ಕೆಜಿ.), ಮಧ್ಯಂತರ ಬೆಳೆ ಮತ್ತು ಬದುವಿನ ಬೆಳೆಗಳನ್ನು ಹಾಕಿದ. ಅವನಿಗೆ ಫಸಲು ಒಂದು ಎಕರೆಗೆ 13 ಚೀಲ ಸೇಂಗಾ ಬಂದಿತು ಅದು ಸುಮಾರು 6.5 ಕ್ವಿಂ ಅಯಿತು.. ಅದು ರೈತನು ಒಂದು ಎಕರೆ ಭೂಮಿಯಲ್ಲಿ ಕಳೆದ ನಾಲಕ್ಕು ವರ್ಷಗಳಲ್ಲಿ ಎ ಎಮ್ ಇ ಎಫ್ ಕಾರ್ಯ ನಿರ್ವಹಿಸುವ ಆ ಪ್ರದೇಶದಲ್ಲಿ ಪಡೆದ ಅತ್ಯಧಿಕ ಇಳುವರಿಯಾಗಿತ್ತು. ಪ್ರತಿ ಚೀಲದ ತೂಕವು ಗಣನೀಯವಾಗಿತ್ತು. ಪ್ರತಿ ಚಿಲವೂ 50 ರಿಂದ 6ಕೆಜಿ ಇದ್ದವು ಚಂದ್ರ ಣ್ಣನ 25 ಚೀಲಗಳು13 ಕ್ವಿಂ. ತೂಗಿದರೆ ಅವನ ನೆರೆಯ ತಿಪ್ಪೆಸ್ವಾಮಿಯ 40 ಚೀಲಗಳು 13 ಕ್ವಿಂ. ಮಾತ್ರ ತೂಗಿದವು. ಖರೀದಿ ಮಾಡಿದ ವ್ಯಾಪಾರಿಗಳು ಇದನ್ನು ನಂಬಲಾಗದೆ ಹೋದರು. ಒಬ್ಬ ವ್ಯಾಪಾರಿಯು ಚಂದ್ರಣ್ಣನಿಗೆ ಚೀಲದಲ್ಲಿನ ಎಲ್ಲ ಸೇಂಗಾವನ್ನು ಕೆಳಗೆ ಸುರಿಸಿ ಒಳಗೆ ಕಲ್ಲು ಗಿಲ್ಲು ಇಟ್ಟಿದ್ದಾನೆ ಏನೋ ಎಂದು ಪರೀಕ್ಷಿಸಿದ. ಒಂದು ಚೀಲ ಸೇಂಗಾವು 50 ಕೆಜಿ ಗಿಂತ ಹೆಚ್ಚು ತೂಕವಿರುವುದ ಅಸಾಧಾರಣ ವಾಗಿತ್ತು. ಒಂದೆ ರೀತಿಯ ಬಲಿತ ಬೀಜಗಳು ಮತ್ತು.ಎಲ್ಲವೂ ಸಮೃದ್ಧಿಯಾಗಿರುವುದು ಸೇಂಗಾದ ಗುಣ ಮಟ್ಟ ಉತ್ತಮವಾಗಿರಲು ಕಾರಣವಾಗಿದ್ದವು.

ವರ್ಮಿ ಕಾಂಪೋಸ್ಟಿಂಗ್ ಒಂದು ಲಾಭದಾಯಕ ಉದ್ಯಮ

ಚಂದ್ರಣ್ಣನು ಎರೆ ಗೊಬ್ಬರ ತಯಾರಿಸಿ ಅದನ್ನು ತನ್ನ ಹೊಲಕ್ಕೆ ಬಳಸಿ ಸುಮ್ಮನಾಗಲಿಲ್ಲ . ಅವನು 2004 ರಿಂದ ಎರೆಹುಳು ಮತ್ತು ಎರೆಗೊಬ್ಬರ ಮಾರಲು ಪ್ರಾರಂಭಿಸಿದ..ಚಂದ್ರಣ್ಣ 2004 ರಲ್ಲಿ 124 ಕೆಜಿ ಎರೆ ಹುಳು ಮಾರಿದ. ಕೆಜಿ ಒಂದಕ್ಕೆ ರೂ. 150 ನಂತೆ ಒಟ್ಟು ರೂ. 18,600. ಗಳಿಸಿದ . ಅವನು ಇನ್ನೂ. 7500 ರುಪಾಯಿಗಳನ್ನು 15 ಕ್ವಿಂ ಎರೆ ಗೊಬ್ಬರ ಮಾರಿಗಳಿಸಿದ. ಅದರ ದರ ಕ್ವಿಂಟಲ್ ಒಂದಕ್ಕೆ ರೂ.. 500/ರೂ . ಒಟ್ಟಿನಲ್ಲಿ ಅವನು ರೂ.. 26,100 ಲಾಭ ಮಾಡಿದ. ಇದು ಶೆಂಗಾ ಬೆಳೆಯ ಆದಾಯಕ್ಕಿಂತ ಹೆಚ್ಚುಲಾಭ ತಂದಿತು. ಅವನು ಖುಷಿಯಾಗಿ 2005 ರಲ್ಲಿ ಎರೆಹುಳುಗಳ ಮತ್ತು ಎರೆಗೊಬ್ಬರದ ಉತ್ಪಾದನೆ ಮತ್ತು ಮಾರಾಟವನ್ನು ತೀವ್ರ ಗೊಳಿಸಿದ .ಈ ಪ್ರಕ್ರಿಯೆಯಲ್ಲಿ ಹಲವು ಕಠಿನ ಪಾಠಗಳನ್ನೂ ಕಲಿತ. ಒಂದು ಸಲ ಮಾರಾಟವಾದ 30 ಕೆಜಿ ಎರೆಹುಳುಗಳನ್ನು ಮಣ್ಣಿನ ಕಲ್ಚರ್ ನಲ್ಲಿ ಪ್ಯಾಕ್ ಮಾಡಿದ. ಆದರೆ ಅವು ಕಳುಹಿಸುವ ಮೊದಲೆ ಸತ್ತು ಹೋದವು. ನಂತರ ಹುಳುಗಳನ್ನು ಸೆಗಣಿಯಲ್ಲಿ ಪ್ಯಾಕ್ ಮಾಡಿದರೆ ಸಾಯುವುದಿಲ್ಲ ಎಂಬುದನ್ನು ಅರಿತುಕೊಂಡ. ವಾಟರ್ ಷೆಡ್ ಪ್ರಾಜೆಕ್ಟ್ ತನ್ನ ಅಂತಿಮ ವರ್ಷದಲ್ಲಿ ಬಹಳ ಮಂದಿ ರೈತರಿಗೆ ಎರೆಹುಳು, ಕಾಂಪೋಸ್ಟು ಗುಂಡಿಗಳನ್ನು ತೋಡಲು ಸಹಾಯ ಮಾಡಿತು. ಇದರಿಂದ ಎರೆಹುಳುಗಳ ಬೇಡಿಕೆ ಹೆಚ್ಚಾಯಿತು.ಅವನು278 ಕೆಜಿ ಹುಳು ಮಾರಿ. 41,700 ರೂಪಾಯಿ ಸಂಪಾದಿಸಿದ.( ರೂ. 150/ ಕೆಜಿ ದರದಲ್ಲಿ ) ಮತ್ತು 11,500 ರೂಪಾಯಿಗಳನ್ನು 23 ಕ್ವಿಂ ಎರೆಗೊಬ್ಬರ ಮಾರಿ ಪಡೆದ(. 500/ಕ್ವಿಂ). ಅದು ಅವನಿಗೆ 2005 ರಲ್ಲಿ ನಿವ್ವಳ ಲಾಭ . 53,200 ರೂಪಾಯಿ ಬಂದಿತು. ಅವನು ಮತ್ತೆ ಕಾಂಪೋಸ್ಟು ಗುಂಡಿಗಳ ಸಂಖ್ಯೆಯನ್ನು ಹೆಚ್ಚಿಸಿದ.. ಹೊರಗಿನಿಂದ ಕೃಷಿ ತ್ಯಾಜ್ಯ ಮತ್ತು ತರಗು ಸೊಪ್ಪು ಪಡೆಯಲು ತೊಡಗಿದ. ತನ್ನ ಹೊಲದಲ್ಲೆ ಇದ್ದ ನಾಲಕ್ಕು ಹೊಂಗೆ ಮರಗಳ ಸೊಪ್ಪು , ಕಾಲುವೆಯ ಪಕ್ಕದಲ್ಲಿನ ಮರಗಳ ಜೈವಿಕ ಸಾಮಗ್ರಿ,ನೀಲಗಿರಿ ಮರದ ಉದುರಿದ ಎಲೆಗಳು, ಕಾಂಪೋಸ್ಟು ಗುಂಡಿಗೆ ಕಚ್ಚಾ ಸಾಮಗ್ರಿಗಳಾದವು. ಅದಕ್ಕೆ ಸೆಗಣಿಯ ಅಗತ್ಯವನ್ನು ಮನಗಂಡು ಒಂದು ಜತೆ ಎತ್ತುಗಳನ್ನು . ಹಸುವನ್ನು ಮತ್ತು ಇಪ್ಪತ್ತು ಕೋಳಿಗಳನ್ನು ಸಾಕತೊಡಗಿದ. ಇದರಿಂದ ಅವನಿಗೆ ಸತತವಾಗಿ ಹೆಚ್ಚಿನ ಗೊಬ್ಬರ ಸಿಗತೊಡಗಿತು. ಕಳೆದ 50 ವರ್ಷದಲ್ಲಿ ಕಾಣದ ಬರ 2006 ನೆ ಇಸ್ವಿಯಲ್ಲಿ ಬಂದಿತು. ಆದರೂ ಚಂದ್ರಣ್ಣನು . 58,750 ರೊಪಾಯಿ ಸಂಪಾದಿಸಿದ.. 285 ಕೆಜಿ ಎರೆ ಹುಳು ಮತ್ತು 32ಕ್ವಿಂ. ಎರೆಗೊಬ್ಬರ ಮಾರಲಾಯಿತು. ಅವನು 2003 ರಿಂದ ಈಚೆಗೆ . 1,38,050.ರೂಪಾಯಿ ವರಮಾನ ಪಡೆದಿದ್ದ. ಅವನ ಆದಾಯ ಇನ್ನೂ ಹೆಚ್ಚಿರಬಹುದು. ಅವನು ರಶೀತಿ ಇಟ್ಟು ಮಾಡಿದ ವ್ಯವಹಾರವೆ . 1.4 ಲಕ್ಷ ರುಪಾಯಿಗಳು. ಅವನ ಗ್ರಾಹಕರೆಲ್ಲ ಬಹುತೇಕ ಸ್ವ ಸಹಾಯ ಗುಂಪಿನವರು SHGs ಮತ್ತು ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ ಮತ್ತು ಬಿಜಾಪುರ ,ಜಿಲ್ಲೆಯ ಸರಕಾರೇತರ ಸಂಸ್ಥೆಗಳವರು. ಅವರು ಮಾತ್ರ ರಸೀತಿ ಬೇಕೆ ಬೇಕು ಎನ್ನುವರು. ಅನೇಕ ವೈಯುಕ್ತಿಕ ರೈತರು ಎರೆಹುಳುಗಳನ್ನು , ಎರೆ ಗೊಬ್ಬರವನ್ನೂ ಕೊಂಡಿದ್ದಾರೆ. ಅದರೆ ಅವರು ರಸೀತಿ ಪಡೆಯುವುದೆ ಇಲ್ಲ ಇಂಥಹ ವ್ಯವಹಾರದಲ್ಲಿ ಯಾವುದೆ ದಾಖಲೆ ಇರುವುದಿಲ್ಲ. ಚಂದ್ರಣ್ಣನು ಸ್ವ ಸಹಾಯ ಗುಂಪಿನ ವರಿಗೆ ವಿಶೇಷ ರಿಯಾಯತಿ ನೀಡುವನು. ಅವರಿಗೆ ಕೆ ಜಿಗೆ 150 ರುಪಾಯಿಯ ಬದಲು 100 ರೂಪಾಯಿ ಬೆಲೆಗೆ ಮಾರುವನು. ಸುತ್ತಮುತ್ತಲಿನ ಗ್ರಾಹಕರಿಗೆ ಇನ್ನೂ ಒಂದು ಸೌಲಭ್ಯ ನೀಡುವನು. ಮಾರಾಟದ ನಂತರದ ಸೇವೆಯು ಇದೆ. ಅವರ ಹೊಲಕ್ಕೆ ಹೋಗಿ ನೊಡಿದಾಗ ಹುಳುಗಳು ಏನಾದರೂ ಸತ್ತು ಹೋಗಿದ್ದರೆ, ಬೆಳವಣಿಗೆ ಸರಿಯಾಗಿ ಅಗದಿದ್ದರೆ ಹೆಚ್ಚುವರಿಯಾಗಿ ಉಚಿತವಾಗಿ ಹುಳುಗಳನ್ನು ಕೊಡುತ್ತಾನೆ.

ನಿರಾಶರಾದವರಿಗೆ ಭರವಸೆಯ ದಾರಿದೀಪ

ನರ್ಸರಿ ಚಂದ್ರಣ್ಣ “ ಎಂಬ ಜನಪ್ರಿಯ ಹೆಸರು ಈಗ” ಎರೆಗೊಬ್ಬರದ ಚಂದ್ರಣ್ಣ” ಎಂದು ಬದಲಾಯಿತು. ಚಿಕ್ಕದಾದ ಮಣ್ಣಿನ ಮನೆಯನ್ನು ಈಗ ಸಿಮೆಂಟ್ ಗೋಡೆಗಳಿಂದ ವಿಸ್ತರಿಸಲಾಗಿದೆ. ಜೊತೆಗೆ ಹಿತ್ತಲಿನಲ್ಲಿ ಎರೆಹುಳುಗಳ ಗುಂಡಿಗಳೂ ಹೆಚ್ಚಿವೆ. ಈಗಾಗಲೇ ತನ್ನ ಗ್ರಾಮದಲ್ಲಿ ಅನೇಕ ರೈತರಿಗೆ ಪರ್ಯಾಯ ಕೃಷಿ ಹವ್ಯಾಸಗಳನ್ನು ಸಾಮನ್ಯವಾಗಿ ಮತ್ತು ಎರೆಹುಳು ಕಾಂಪೋಸ್ಟನ್ನು ನಿರ್ಧಿಷ್ಟವಾಗಿ ಕೈಗೆತ್ತಿಕೊಳ್ಳಲು ಸ್ಪೂರ್ತಿ ನೀಡಿದ್ದಾನೆ.ತನ್ನ ಚಿಕ್ಕ ಗೆಲವನ್ನು ಒಂದು ಸಮೂಹದ ಅಭಿಯಾನ ವಾಗಿಸಿದ್ದಾನೆ. ಈ ರೀತಿಯಾಗಿ ಅನೇಕ ಬಡ ರೈತರು ಸರಿಯಾದ ರೀತಿಯ ಪ್ರೇರಣೆ ಪಡೆದರೆ ತಮ್ಮ ಮಿತಿಯನ್ನು ದಾಟಿ ಮತ್ತು ಯಾವುದೆ ಅಡೆತಡೆಗಳು ಬಂದರೂ ಗೆಲ್ಲುವರು.

ಮೂಲ:AME Foundation(http://www.amefound.org/)

ಕೊನೆಯ ಮಾರ್ಪಾಟು : 7/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate