ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಸುಸ್ಥಿರ ಕೃಷಿ / ಒಣ ಭೂಮಿಯಲ್ಲಿ ಲಾಭದಾಯಕ ಹತ್ತಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಒಣ ಭೂಮಿಯಲ್ಲಿ ಲಾಭದಾಯಕ ಹತ್ತಿ

ಒಣ ಭೂಮಿಯಲ್ಲಿ ಲಾಭದಾಯಕ ಹತ್ತಿ ಬೆಳೆಯುವ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಒಣ ಭೂಮಿಯಲ್ಲಿ ಲಾಭದಾಯಕ ಹತ್ತಿ ಬೆಳೆಗೆ ಪರ್ಯಾಯಪದ್ದತಿ

ರಾಯಚೂರು ತಾಲೂಕಿನ ಗಧ ರ ಗ್ರಾಮದಲ್ಲಿ ಹತ್ತಿಯು ಮುಖ್ಯವಾದ ಹಣದ ಬೆಳೆ. ಬಹುತೇಕ ರೈತರು ತಮ್ಮ ಜೀವನಕ್ಕಾಗಿ ಒಣ ಭೂಮಿ ಕೃಷಿಯನ್ನೆ ಅವಲಂಬಿಸಿದ್ದಾರೆ. ಕೆಲವರಿಗೆ ಮಾತ್ರ ತೆರೆದ ಬಾವಿಯ ನೀರಾವರಿ ಸೌಲಭ್ಯವಿದೆ.ಆ ಊರಲ್ಲಿ 450 ಮನೆಗಳಿವೆ ಏಕ ಬೆಳೆ ಪದ್ದತಿಯು ಇಲ್ಲಿ ಮಾತ್ರ ಅಲ್ಲ , ಅಲ್ಲಿನ ಎಲ್ಲ ಪ್ರದೇಶದಲ್ಲೂ ಜಾರಿಯಲ್ಲಿತ್ತು. ಹತ್ತಿಯ ಬೆಳೆಯು ಕೆಲವು ವರ್ಷಗಳ ಹಿಂದೆ ಬಹಳ ಲಾಭದಾಯಕವಾಗಿತ್ತು. ಅವನು ಹೊರಗಿನ ಸಾಮಗ್ರಿಗಳನ್ನು ಕೊಂಡುತಂದು ಹೊಲಕ್ಕೆ ಹಾಕುತ್ತಿದ್ದುದರಿಂದ ಅದಾಯ ಕುಸಿಯತೊಡಗಿತು..ಹೊಲಗಳಿಗೆ ಹಾಕುವ ಎಲ್ಲವನ್ನೂ ವ್ಯಾಪಾರಿಗಳು ಹೇಳಿದಂತೆ ಕೊಳ್ಳುತ್ತಿದರು ಅಲ್ಲದೆ ರೈತರು ಬೀಜಗಳನ್ನು ಚಿಲ್ಲರೆಯಾಗಿ ಅಂಗಡಿಯಲ್ಲಿ ಕೊಳ್ಳುತ್ತಿದ್ದರು. ಕಾಲ ಕಳೆದಂತೆ ಉತ್ಪಾದನಾ ವೆಚ್ಚವವು ಹೆಚ್ಚಾಗುತ್ತಾಹೋಯಿತು.ಮಣ್ಣು ತನ್ನ ಸಾರ ಕಳೆದು ಕೊಳ್ಳತೊಡಗಿತು . ಇಳುವರಿಯು ಕುಸಿಯುತ್ತಾ ಹೋಯಿತು.

ಬದಲಾವಣೆ ಯತ್ತ

ರಾಯಚೂರಿನ ಎ ಎಮ್ ಇ ಪ್ರಾದೇಶಿಕ ಘಟಕವು ಅಲ್ಲಿನ ರೈತರ ಬದುಕಿನ ಬವಣೆಯನ್ನು ಗಮನಿಸಿ , ಅಲ್ಲಿನ ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಸುಸ್ಥಿರ ಬೆಳೆಉತ್ಪನ್ನಕ್ಕಾಗಿ ರೈತರು ಪರ್ಯಾಯ ಕೃಷಿಪದ್ದತಿಯನ್ನು ಅಳವಡಿಸಿಕೊಳ್ಳಲು ಮತ್ತು ಹೊರಗೆ ಕೊಂಡ ಪರಿಕರಗಳನ್ನು ಬಳಸುವುದನ್ನು ಕಡಿಮೆ ಮಾಡಲು ಮುಂದೆ ಬಂದಿತು

ರೈತರೊಡಗಿನ ಚರ್ಚೆಯು ಅವರಿಗಿರುವ ಕೀಟಬಾಧೆಯನ್ನು ಅದರಲ್ಲೂ ಹೀರುವ ಹುಳುಗಳಮತ್ತು ಬೊಲ್ ಹುಳುವಿನಿಂದ ಹತ್ತಿ ಯ ಬೆಳೆಗೆ ಆಗುವ ತೊಂದರೆಯನ್ನು ಅರಿತರು. ಬೆಳೆಯ ಅವಧಿಯಲ್ಲಿ 9 ಬಾರಿ ಔಷಧಿ ಸಿಂಪಡಿಸುತ್ತಿದ್ದರು ಅದರಲ್ಲಿ ಹೆಲಿಯೋ ತಿಸ್ ನಿಯಂತ್ರಿಸಲು ಐದು ಬಾರಿ ಮತ್ತು ಉಳಿದವನ್ನು ಹತೋಟಿಗೆ ತರಲು ನಾಲಕ್ಕು ಬಾರಿ ಔಷಧಿ ಹೊಡೆಯಬೇಕಾಗಿತ್ತು.ಮೂರು ಬಾರಿ ಸರಾಸರಿ ಹತ್ತಿಯ ಬೆಳೆಯ ಇಳುವರಿ 3.5 ಕ್ವಿ/ ಎಕರೆ ಬರುತ್ತಿತ್ತು. ಅದು ಸಾಧಾರಣ ವಾಗಿ ಪಡೆಯುಬಹುದಾಗಿದ್ದಕ್ಕಿಂತ 6 ಕ್ವಿ/ ಎ ಗಿಂತ ಕಡಿಮೆಯಾಗಿತ್ತು. ಇಳುವರಿಯ ಮೇಲೆ ಪರಿಣಾಮ ಬೀರುವ ಇತರೆ ಅಂಶಗಳಾಧ ಕಳಪೆ ಬೀಜಗಳು, ತಡವಾದ ಬಿತ್ತನೆ ,ಸರಿಹೊಂದದ ಮಣ್ಣು ಮತ್ತು ನೀರಿನ ನಿರ್ವಹಣಾ ಪದ್ದತಿಗಳು ಮತ್ತು ಸಾವಯವ ಗೊಬ್ಬರದ ಬಳಕೆಯ ಕೊರತೆ ಮೊದಲಾದ ಕಾರಣಗಳು ಇದ್ದವು.

ರೈತರು ಈಗಿರುವ ಬೆಳೆಯನ್ನು ಪರಿಸರ ಪದ್ದತಿಯೊಟ್ಟಿಗೆ ಗಮನಿಸಲು ಮತ್ತು ಪ್ರತ್ಯೇಕವಾಗಿ ಪರಿಶೀಲಿಸದಿರಲು ಕಲಿಯಬೆಕಾಗಿತ್ತು. ಕಂಡು ಹಿಡಿದು ಕಲಿಯುವ ಪ್ರಕ್ರಿಯೆಯು ಬಹು ಸೂಕ್ತವಾದ ಸಾಧನವೆಂದು ಕೃಷಿ ಕ್ಷೇತ್ರ ಶಾಲೆಗಳು (FFS), ಅರಿತವು ಅದನ್ನು 2005 ರಲ್ಲಿ ಜೂನ್ ನಿಂದ ಡಿಸೆಂಬರ್ ಬೆಳೆ ಹಂಗಾಮದಲ್ಲಿ ಆಚರಣೆಗೆ ತಂದವು.

ಶ್ರಿ ಪ್ರತಾಪ ರೆಡ್ಡಿಯವರ ಸಾಧನೆಯ ವಿವರ ಇಲ್ಲಿದೆ. ಇದು AMEF’ನ ಮಧ್ಯ ವರ್ತನೆ ಮತ್ತು ವಿಶೇಷವಾಗಿ ಹತ್ತಿ ಬೆಳೆಯಲ್ಲಿ FFS ವಿಶೇಷ ಸಹಾಯದಿಂದ ಸಾಧ್ಯವಾಯಿತು..ಇದು ರೈತನೊಬ್ಬ ಪರ್ಯಾಯ ಪದ್ದತಿಗಳನ್ನು ಅಳವಡಿಸಿ ಕೊಂಡ ಕಥೆ . ಇದು ವ್ಯಕ್ತಿಯೊಬ್ಬನು ಸ್ವ ಪ್ರಯತ್ನದಿಂದ ಪರ್ಯಾಯ ಪದ್ದತಿಗಳನ್ನುಅಳವಡಿಸಿಕೊಂಡು ಮತ್ತು ಆವಿಧಾನವನ್ನು ತನ್ನ ಗುಂಪಿನ ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ನಿದರ್ಶನವಾಗಿದೆ.

ಪರ್ತಾಪ ರೆಡ್ಡಿಯು ಅಜಮಾಸು 35 ವರ್ಷದ ಪ್ರಾಯದವನು. ಅವನು SSLC. ವರೆಗೆ ಓದಿದ್ದಾನೆ.ಅವನು 16 ಎಕರೆ ಭೂಮಿ ಹೊಂದಿದ್ದಾನೆ.ಅವನು ಲಿಂಗಾಯಿತ ಸಮುದಾಯವನು.ಮದುವೆಯಾಗಿದೆ. ಎರಡು ಮಕ್ಕಳೂ ಇವೆ.. ತನ್ನ ಹೊಲವನ್ನು ಕೂಲಿಗಳ ಸಹಾಯದಿಂದ ಸಾಗು ಮಾಡುತ್ತಾನೆ. ರೆಡ್ಡಿಯು ಅನೇಕ ವರ್ಷಗಳಿಂದ ಹತ್ತಿ ಬೆಳೆಯುತ್ತಿದ್ದನು ಹತ್ತಿ ಬೆಳೆಯ ಸಾಗುವಳಿ ಮಾಡುವಾಗ ಅನೇಕ ಚಟುವಟಿಕೆಗಳನ್ನು ಯಾಂತ್ರಿಕವಾಗಿ ಮಾಡುವನು. ಬೀಜವನ್ನು ನೇರವಾಗಿ ಮಾರಾಟಗಾರನಿಂದ ಕೊಳ್ಳುವನು. ಬೆಳೆಯಲ್ಲಿ ಕೀಟಗಳ ಇರುವಿಕೆ ಕಂಡ ತಕ್ಷಣ ಕೀಟನಾಶಕವನ್ನು ಸಿಂಪಡಿಸುವನು.ಯಥಾರೀತಿ ರಸಗೊಬ್ಬರ ಹಾಕುವನು ಗುಂಪಿನ ಸದಸ್ಯನಾಗಿ ಹತ್ತಿ ಎಫ್ ಎಫ್ ಎಸ್ ನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವನು ಅವನು 0.75ಎಕರೆ ಭೂಮಿಯನ್ನು ಎಫ್ ಎಫ್ ಎಸ್ ಚಟುವಟಿಕೆಯಲ್ಲಿ ತೊಡಗಿಸಿರುವನು. ಅದರಲ್ಲಿ 0.50 ಎಕರೆ ಭೂಮಿಯಲ್ಲಿ ಪರ್ಯಾಯ ಪದ್ದತಿ ಅನುಸರಿಸಿ ಉಳಿದ 0.25 ಎಕರೆ ಯಲ್ಲಿ ಹಿಂದಿನ ಪದ್ದತಿಯಂತರ ಕೃಷಿ ಮಾಡುವನು. ನಿಯಂತ್ರಿತ ಕೃಷಿಯಂದಾಗಿ ಪ್ರಯೋಗ ಮಾಡುತ್ತಾ ಹತ್ತಿ ಕೃಷಿಯಲ್ಲಿ ಪರ್ಯಾಯ ಪದ್ದತಿಯ ಬಗ್ಗೆ ಬಹಳ ವಿಷಯಗಳನ್ನು ಕಲಿತನು..

ಅಳವಡಿಸಿ ಕೊಂಡ ಪರ್ಯಾಯ ಕೃಷಿ ಪದ್ದತಿಗಳು

ಕೌ ಬೀನ್ಸನ್ನು ಬದುವಿನ ಬೆಳೆ ಯಾಗಿ , ಬೆಂಡೆ ಮತ್ತು ಚಂಡುಹೂವನ್ನು ಅಂತರಬೆಳೆ ಯಾಗಿ 1:10 ಪ್ರಮಾಣದಲ್ಲಿ ಹಾಕಿದನು. ಬೀಜಗಳನ್ನು ಬಿತ್ತನೆಗೆ ಮೊದಲು ಕೆಳಗಿನಂತೆ ಫಾಸ್ಫೋಬ್ಯಾಕ್ಟೀರಿಯಾ ಮತ್ತುಅಜಸ್ಪಿರಿಲಮ್ ಗಳಿಂದ ಉಪಚಾರ ಮಾಡಲಾಯಿತು.

750ಗ್ರಾಂ ಹತ್ತಿಯ ಬೀಜಗಳಿಗೆ :

 

  • 20 ಗ್ರಾಂ ಬೆಲ್ಲ
  • 50 ಗ್ರಾಂ ಫಾಸ್ಫೋ ಬ್ಯಾಕ್ಟೀರಿಯಾ
  • 50 ಗ್ರಾಂ ಅಜೊಸ್ಪಿರಿಲಮ್

ಬೀಜಗಳನ್ನು ಒಂದು ಹಾಳೆಯ ಮೇಲೆ ಅಥವ ಚೀಲದ ಮೇಲೆ ಹರಡಬೇಕು. ಅದರ ಮೇಲೆ ಬೆಲ್ಲದ ನೀರು ಹಾಕಿ. ಅದರ ಮೇಲೆ ಬಯೋ ಏಜೆಂಟಗಳನ್ನು ಚಿಮುಕಿಸಿ. ಅರ್ಧ ಗಂಟೆ ನೆರಳಿನಲ್ಲಿ ಒಣಗಿಸಿ. ನೇರವಾಗಿ ಬಿತ್ತನೆ ಮಾಡಬಹುದು (ಒಂದು ಎಕರೆಗೆ ಶಿಫಾರಸ್ಸು ಮಾಡಿದ ಜೈವಿಕ ಗೊಬ್ಬರವು 200 ಗ್ರಾಂ ಆಗಿದ್ದರೂ ರೈತರು ತಮ್ಮ ಅನುಭವದಿಂದ ಒಂದು ಎಕರೆ ಹತ್ತಿ ಬಿತ್ತನೆ ಬೀಜಕ್ಕೆ 50 ಗ್ರಾಂ ಸಾಕು ಎಂದು ಕಂಡುಕೊಂಡಿದ್ದಾರೆ).

ಕೀಟ ನಿರ್ವಹಣೆ : ಬಲೆ ಬೆಳೆಗಳಾದ ಕೌ ಪೀ, ಬೆಂಡೆ ಮತ್ತು ಚಂಡು ಹೂ ಗಳನ್ನು ಬೆಳೆದು ಕೀಟಾಣುಗಳಾಧ ಹೆಲಿಯೊತಿಸ್ ಮತ್ತು ಬೋಲ್ ವರ್ಮ ನಿಯಂತ್ರಿಸಲಾಯಿತು.ಅವನಿಗೆ ಉಪಕಾರಿ ಕೀಟಗಳಾದ ಟ್ರಕೊಗ್ರಾಮ ,ಮತ್ತು.ಮೊಟ್ಟೆಯ ಮೇಲಿನ ಪರೋಪಜೀವಿಯಾದ ಹೆಲಯೋ ತಿಸಲ್ ನಿರ್ವಹಿಸುವ ಪಾತ್ರಗಳ ಬಗ್ಗೆ ತಿಳುವಳಿಕೆ ಬಂದಿತು.. ಕೆಲವು ಕೀಟಗಳು ತನ್ನ ಬೆಳೆಗೆ ಉಪಕಾರ ಮಾಡಬಹುದು ಎಂಬ ಮಾಹಿತಿಯು ಅವನಿಗೆ ಈ ವರೆಗೆ ಇರಲಿಲ್ಲ. ಎನ್ ಪಿ ವಿ ಜೈವಿಕ ಎಜೆಂಟ್ ಮತ್ತು ಒಂದು ರಸಾಯನಿಕ ಕೀಟನಾಶಕವನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಸಿಂಪಡಿಸಲಾಯತು. ಮೊದಲು ಲಾರ್ವ ಅಥವ ಕೀಟವು ಹೊಲದಲ್ಲಿ ಕಂಡಾಗ ಕೀಟನಾಶಕ ಬಳಸುತ್ತಿದ್ದರು. ಈ ಹೊಸ ವಿಧಾನದಿಂದ ಮೊದಲವರ್ಷದಲ್ಲೆ ಕೀಟನಾಶಕ ಸಿಂಪರಣೆಯನ್ನು 9 ರಿಂದ 4 ಸಲಕ್ಕೆ ಇಳಿಸಲು ಸಹಾಯವಾಯಿತು. ಮತ್ತು 4 ರಿಂದ 1 ಸಲಕ್ಕೆ ಎರಡನೆ ವರ್ಷದಲ್ಲಿ ಇಳಿಸಲಾಯಿತು. ಕೀಟನಾಶಕದ ಬಳಕೆಯು 75% ಕಡಿಮೆಯಾಯಿತು. ಈ ಹಿಂದೆ ಅದೆ ದೊಡ್ಡ ಖರ್ಚಿನ ಬಾಬ್ತು ಆಗಿತ್ತು.ಪೋಷಕತೆಯನಿರ್ವಹಣೆ : ರಸಗೊಬ್ಬರಮತ್ತು ಕೀಟನಾಶಕಗಳನ್ನು ಬಳಸುವುದರಲ್ಲಿ ಒಂದು ರೀತಿಯ ಸ್ಪರ್ಧೆಯೇ ಆಗುತ್ತಿತ್ತು. ಒಬ್ಬ ರೈತನು 10 ಚೀಲ ರಸಗೊಬ್ಬರ ಹೊಲಕ್ಕೆ ಹಾಕಿದರೆ ಪಕ್ಕದ ಹೊಲದವನು 12 ಚೀಲ ಹಾಕುತ್ತಿದ್ದನು.. ಮೊದಲ ಹಂಗಾಮಿನಲ್ಲಿಸ ಪ್ರತಾಪ ರೆಡ್ಡಿಯು ರಸಗೊಬ್ಬರದ ಪ್ರಮಾಣವನ್ನು ಕಡಿಮೆ ಮಾಡಲಿಲ್ಲ. ಆದರೆ ಅವನು ಕೊಟ್ಟಿಗೆ ಗೊಬ್ಬರವನ್ನು ಹೆಚ್ಚುವರಿಯಾಗಿ ಎಕರೆಗೆ 2 ಟನ್ ನಿಂದ 3ಟನ್ ಮತ್ತು ಎರೆಗೊಬ್ಬರವನ್ನು(2 ಕ್ವಿ/ಎ). ಹಾಕಿದ. ಈಗ , ಅವನು ರಸಗೊಬ್ಬರದ ಜತೆ ತಾನು ಹೊಲದಲ್ಲಿ ಉತ್ಪಾದಿಸುವ ಕಾಂಪೋಸ್ಟನ್ನು ಹಾಕುವನು. ಹತ್ತಿಯ ಬೆಳೆಯು ಮತ್ತೆ ಲಾಭ ನೀಡತೊಡಗಿತು. ಪರ್ಯಾಯ ಪದ್ದತಿಯಿಂದ ಹತ್ತಿಯ ಇಳುವರಿಯು 20% ಹೆಚ್ಚಿದೆ. ನಿವ್ವಳ ಆದಾಯವು ರಸ ಗೊಬ್ಬರದಿಂದ ಪರ್ಯಾಯ ಪದ್ದತಿಗೆ , ಪರಿಸರ ಸ್ನೇಹಿ ಪದ್ದತಿಗೆ ಬದಲಾದ ಮೊದಲ ವರ್ಷದಲ್ಲೆ 44% ಹೆಚ್ಚಾಗಿದೆ. ಉತ್ಪಾದನಾ ವೆಚ್ಚವು ಅವನು ಸಾವಯವ ಗೊಬ್ಬರ ವನ್ನು ಹೊರಗೆ ಖರೀದಿ ಮಾಡಿದ್ದರಿಂದ ಹೆಚ್ಚಿತು. ಪ್ರತಾಪ ರೆಡ್ಡಿಯು ಸಾವಯವ ಗೊಬ್ಬರವನ್ನು ತನ್ನ ಹೊಲದಲ್ಲೆ ಉತ್ಪಾದಿಸಲು ಪ್ರಾರಂಭಿಸಿದಾಗ ಮುಂಬರುವ ವರ್ಷಗಳಲ್ಲಿ ಉತ್ಪಾದನಾ ವೆಚ್ಚವು ಕಡಿಮೆಯಾಗುವ ಸಂಭವ ಇದೆ.

ವೆಚ್ಚ ಮತ್ತು ಆದಾಯ ರೂ/ ಎಕರೆ ಯ

ಕ್ರ. ಸಂ

ವಸ್ತು ವಿವರ

ರೈತನ ತಾಕು

ಎಫ್ ಎಫ್ ಎಸ್ ತಾಕು

% ವ್ಯತ್ಯಾಸ

a

ಪರಿಕರ ಖರ್ಚು

 

ಬೀಜ ಮತ್ತು ಬೀಜೋಪಚಾರ

280

290

-

 

ಸಾವಯವ ಗೊಬ್ಬರ

1500

2650

76.6%

 

ಗೊಬ್ಬರ

555

555

-

 

ಕೀಟನಾಶಕಗಳು

1030

240

- 75.2%

 

ಸಸ್ಯಗಳಗಾಗಿ

-

304

 

 

ಮೊತ್ತ

2365

4039

70.7%

b

ಕಾರ್ಮಿಕರ ಖರ್ಚು

2475

2250

- 9.0%

1

ಉತ್ಪಾದನ ವೆಚ್ಚ

5840

6289

7.6%

2

ಇಳುವರಿ (ಕೆಜಿ)

500

600

20.0%

3

ಒಟ್ಟು ಆದಾಯ

9800

12000

22.4%

4

ನಿವ್ವಳ ಆದಾಯ

3960

5711

44.2%

ಸಮಗ್ರ ಕೃಷಿ ಪದ್ದತಿಯಡೆಗೆ

ಎ ಎಂ ಇ ಎಫ್ ನೊಡನೆ ನಿಯಮಿತವಾದ ಸಂವಾದ ನೆಡಸಿ ಮತ್ತು ಗುಂಪಿನೊಳಗೆ ಚರ್ಚೆಯು ಪ್ರತಾಪರೆಡ್ಡಿಗೆ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಗಮನ ಕೇಂದ್ರಿಕರಿಸುವ ಮತ್ತು ಕೃಷಿ ತ್ಯಾಜ್ಯವನ್ನು ಮರು ಬಳಕೆ ಮಾಡುವ ಅಗತ್ಯದತ್ತದ ಮನವರಿಕೆಯಾಯಿತು. ಎಲ್ ಇ ಐ ಎಸ್ ಎ ತೋಟಕ್ಕೆ ಅಧ್ಯಯನ ಪ್ರವಾಸಕ್ಕೆ ಹೋದಾಗ ತನ್ನ ಹೊಲದಲ್ಲೆ ಹೆಚ್ಚುವರಿಯಾದ ಬಯೊ ಮಾಸ್ ಪ್ಲಾಂಟ ನಿಂದ ಹೆಚ್ಚು ಸಾವಯವ ಗೊಬ್ಬರ ಉತ್ಪಾದನೆ ಮಾಡವಲ್ಲಿನ ನಿರ್ಣಾಯಕ ಪಾತ್ರ ವಹಿಸುವುದೆಂದ ಅರಿತನು. ಅದಕ್ಕಾಗಿ 10000 ಬಹು ಉದ್ಧೇಶದ ಸಸಿಗಳನ್ನು ಬೆಳಸಿದನು ಇದರಿಂದ ಹೆಚ್ಚು ಜೈವಿಕ ಸಾಮಗ್ರಿ ದೊರಕಿತು. ಅವನ್ನು ಹೊಲದ ಬದುವಿನ ಮೇಲೆ ನೆಟ್ಟನು.ಹತ್ತಿರದ ಹೊಂಡದ ದಡದಲ್ಲೂ ನೆಟ್ಟನು ಅಲ್ಲದ ಕೆಲವು ಹಣ್ಣಿನ ಮರಗಳಾಧ ಮಾವು, ಹುಣಿಸೆ, ಸಪೋಟ ಗಿಡಗಳನ್ನು ಹಾಕಿದನು.ಜೈವಿಕ ಸಾಮಗ್ರಿಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡ ಮೇಲೆ ಸೂರ್ಯ ಕಾಂತಿ ಕಡ್ಡಿಗಳನ್ನು ಮತ್ತು ಇತರೆ ಬೆಳೆಗಳ ತ್ಯಾಜ್ಯಗಳನ್ನು ಸುಡುವುದನ್ನು ಬಿಟ್ಟನು.ಅದರ ಬದಲು ಅವನ್ನು ಮ ಣ್ಣಿನಲ್ಲಿ ಸೇರಿಸ ತೊಡಗಿದ.

ಪ್ರತಾಪರೆಡ್ಡಿಯು ಬೆಂಬಲ ಚಟುವಟಿಕೆಗಳಾದ ಎರೆ ಹುಳ ಸಾಕಣೆ, ಮತ್ತು ಕೈತೋಟ ಗಳನ್ನೂ ಶುರು ಮಾಡಿದ. ಅಲ್ಲಿ ಬದನೆ, ಕುಂಬಳ, ಟೊಮೇಟೋ, ಹೀರೆಕಾಯಿ ಗಳನ್ನು ಮನೆಯ ಹತ್ತಿರಬೆಳೆದರೆ ಹೊಲದಲ್ಲಿ ಬೆಂಡೆಕಾಯಿ ಯನ್ನು ಹತ್ತಿಯ ಹೊಲದಲ್ಲಿ ಬೆಳೆದ. ಈಗ ಅವನಿಗೆ ಮನೆ ಬಳಕೆಗೆ ಸಾಕಾಗುವಷ್ಟು ತರಕಾರಿ ಸಿಗುತ್ತಿದೆ. ಅವನು ನೀರನ್ನು ಸಂಗ್ರಹಿಸಲು 12 ಅಡಿ ಆಳದ ಕೃಷಿ ಹೊಂಡವನ್ನು ತೋಡಿದ. ಮುಂದೆ ಅಲ್ಲಿ ನೀರು ಇದ್ದರೆ ಮೀನು ಸಾಕುವ ಯೋಜನೆ ಇದೆ.

ಮೂಲ:AME Foundation(http://www.amefound.org/)

3.05555555556
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top