অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬನಮಾಲಿದಾಸ್

ಬನಮಾಲಿದಾಸ್

 

ಬನಮಾಲಿದಾಸ್ , ಪಶ್ಚಿಮ ಬಂಗಾಲದ 24 ಪರಗಣ ಜಿಲ್ಲೆಯಲ್ಲಿನ ಗಯಾಧಾಮ ಗ್ರಾಮದ ನಿವಾಸಿ. ಅವನು 5 ಸದಸ್ಯರೊಂದಿಗೆ ಸಮಗ್ರ ಕೃಷಿ ಮಾಡುತ್ತಾನೆ. ಅವನು ಮೊದಲು 0.25 ಎಕರೆ ಭೂಮಿ, ಒಂದು ಹೊಂಡ, ಕೈತೋಟ ಮತ್ತು 0.33 ಎಕರೆ ತಗ್ಗಿನ ಭೂಮಿ ಹೊಂದಿರುವನು

ಅವನ ಹೊಲವು ಸುಂದರಬನ ನದಿ ಮುಖಜ ಭೂಮಿಯಲ್ಲಿದೆ. ಅದು ನದಿಯ ಪಕ್ಕದಲ್ಲಿರುವುದರಿಂದ ಆಗಾಗ ನೆರೆ ಹಾವಳಿಗೆ ಒಳಗಾಗತ್ತದೆ. ತಗ್ಗಿನ ಭೂಮಿಯಲ್ಲಿ ಬನಮಾಲಿಯು ಮುಂಗಾರಿನಲ್ಲಿ ಭತ್ತ ಮತ್ತು ಹಿಂಗಾರಿನಲ್ಲಿ ಆಲೂಗಡ್ಡೆಮತ್ತು ಲ್ಯಾತಿರಸ್ ಬೆಳೆಯುತ್ತಾನೆ. ಕೈ ತೋಟದಲ್ಲಿ ಹಣ್ಣು ಮತ್ತು ಹಸಿರು ಎಲೆ ತರಕಾರಿ, ಸೊಪ್ಪು ಬೇಳೆಯುವನು . ಆದರೂ ಮಾರುಕಟ್ಟೆಯ ಮೇಲಿನ ಅವನ ಅವಲಂಬನೆ ಕಡಿಮೆಯಾಗಿರಲಿಲ್ಲ.ಅವನು ಮೀನನ್ನೂ ಸಾಕುತ್ತಿದ್ದ. ಆದರೆ ಆದಾಯ ಹೆಚ್ಚಿರಲಿಲ್ಲ.ಹಸುವಿ ಸೆಗಣಿ ಮತ್ತು ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಗೊಬ್ಬರವಾಗಿ ಸೇರಿಸುತ್ತಿದ್ದ .

ಮಧ್ಯ ವರ್ತನೆ

ಅವನ ಭೂಮಿಯ ಮೂಲೆಯಲ್ಲಿ ಚಿಕ್ಕ ಹೊಂಡವನ್ನು ತೋಡಲಾಯಿತು. ಅದರಂದ ಬಂದ ಮಣ್ಣನ್ನು ಪ್ರಾಯೋಗಿಕ ತಾಕಿನ ಮಟ್ಟ ಹೆಚ್ಚಿಸಲು ಉಪಯೋಗಿಸಲಾಯಿತು.ಈ ತಾಕಿನ ಗಡಿಯ ಒಳ ಭಾಗದಲ್ಲಿ ಕಾಲುವೆ ತೋಡಲಾಯಿತು..ಇದರಿಂದ ವರ್ಷ ಪೂರ್ತಿ ನೀರಾವರಿ ಸಾಧ್ಯವಾಯಿತು. ಹೊರಗಿನ ಗಡಿ ಪ್ರದೇಶದಲ್ಲಿ ಎತ್ತರದ ನೀಲಗಿರಿ, ಬೇವು, ಸುಬಾಬುಲ್ , ರೈನ್ ಟ್ರೀ, ಬೊಂಬು ಇತ್ಯಾದಿಗಳನ್ನು ಬೆಳೆಸಬಹುದು.ಬಹು ವಾರ್ಷಿಕ ಬೆಳೆಗಳಾದ ಬಾಳೆ , ಸೀಬೆ ,ನಿಂಬೆ , ವಾಟರ್ ಯಾಪಲ್, ಮಾವು , ತೆಂಗನ್ನು ಹಾಕಲಾಯಿತು. ವರ್ಷ ಪೂರ್ತಿ 25-30 ವಿಧದ ತರಕಾರಿ ಬೆಳೆಸಿದ , ಮಿಶ್ರ ಬೆಳೆ ತಂತ್ರವನ್ನು ಬಳಸಿ ಬೇರೆ ಬೇರೆ ಸಂಯೋಜನೆ ಮಾಡಿ ಬನಮಾಲಿದಾಸನು ತನ್ನ ಹಿತ್ತಿಲಿನಲ್ಲಿ ಇತ್ತೀಚೆಗೆ ಜೈವಿಕ ರಿಜಿಸ್ಟರ್ ಅನ್ನು ನಿರ್ಮಿಸಿರುವನು.ಅಲ್ಲಿ ಜೈವಿಕ ಅನಿಲ ಯಂತ್ರ ಸ್ಥಾಪಿಸಿ ಜೈವಿಕ ಅನಿಲ ಮತ್ತು ಸ್ಲರ್ರಿ ಯನ್ನು ಉತ್ಪಾದಿಸುತ್ತಿರುವನು.,

ಅವನಲ್ಲಿ ಹಸು, ಬಾತು ಮತ್ತು ಕೋಳಿಗಳೂ ಇವೆ. ಅವನು ಸೂಕ್ತವಾದ ಸಂಕೀರ್ಣ ಕೃಷಿ ವಿನ್ಯಾಸಮಾಡಿ ಮುಂಗಾರಿನಲ್ಲಿ ರೈಸ್ ಫಿಷ್- ಬಾತು ಅಝೋಲ ಪಡೆಯುವನು. ಅವನ ಪ್ರಾಯೋಗಿಕ ತೋಟವು ಯಾವುದೆ ರಸಾಯನಿಕಗಳಿಂದ ಮುಕ್ತವಾಗಿದೆ. ಅವನು ರೋಹು, ಕಲ್ಟ, ಬಟ ಕಿರು ಕ್ರಾಪ್ ಮತ್ತು ಕ್ಯಟ್ ಫಿಷ್ ಜಾತಿಯ ಮೀನುಗಳನ್ನು ಹೊಂಡದಲ್ಲಿ ಸಾಕುತ್ತಾನೆ. ಅದು ಕೂಡಾ ಉತ್ತಮ ಉತ್ಪಾದಕತೆ ನೀಡಿದೆ.

ಮೀನುಗಳ ಆಹಾರವಾಗಿ ಅವನು ಉಳಿದ ಮೇವು ,ತ್ಯಜ್ಯ ಆಹಾರ , ಕುರುಳು ಮತ್ತು ಎಳ್ಳಿನ ಕಡ್ಡಿಗಳನ್ನು ಉಪಯೋಗಿಸುವನು.. ಅವನಲ್ಲಿ 5 ಹಸುಗಳು, 8 ಬಾತುಕೋಳಿಗಳು 4 ಕೋಳಿಗಳುಮತ್ತು 14 ಕೋಳಿಮರಿಗಳು ಇವೆ.. ಅವುಗಳಿಗೆ ಆಹಾರವಾಗಿ ಹುಲ್ಲು , ದಂಟು ಮತ್ತು ಇತರ ಬೆಳೆಗಳ ತ್ಯಾಜ್ಯಗಳನ್ನು ಬಳಸುವನು. ಕೋಳಿಗಳಿಗೆ ಮತ್ತು ಬಾತುಗಳಿಗೆ ಅಕ್ಕಿ ಕಾಳು, ಹೊಟ್ಟು , ಮತ್ತು ಹೊಂಡದಲ್ಲಿನನ ಚಿಕ್ಕಚಿಕ್ಕ ಬಸವನ ಹುಳುಗಳನ್ನು ಕೊಡುವನು.

ಅವನು ವರ್ಮಿ ಕಾಂಪೋಸ್ಟ ಮತ್ತು ಕಾಂಪೊಸ್ಟನ್ನು ತಾನೆ ತಯಾರಿಸಿಕೊಳ್ಳುವನು. ಅವನು ಎಳ್ಳಿನ ಹಿಂಡಿಯನ್ನು ಮತ್ತು ಜೈವಿಕ ಅನಿಲದ ಸ್ಲರಿಯನ್ನು ಜೈವಿಕ ಗೊಬ್ಬರವಾಗಿ ಬಳಸುವನು.ಅವನು ಬೇವಿನ ರಸ, ಬೆಳ್ಳುಳ್ಳಿಪೇಸ್ಟು ಮತ್ತು ಸೀಮೆ ಎಣ್ಣೆಯ ಮಿಶ್ರಣವನ್ನು ಕೀಟ ನಿರೋಧಕವಾಗಿ ಬಳಸುವನು. ಬಹುತೇಕ ಹಿಂದಿನ ವರ್ಷ ಬೆಳೆದ ದಾನ್ಯವನ್ನೆ ಬೀಜಕ್ಕಾಗಿ ಬಳಸುವನು. ಕೆಲವೆ ಕೆಲವು ಹಂಗಾಮಿನಲ್ಲಿ ಬರುವ ಮತ್ತು ಹಣದ ಬೆಳೆಗಳಾದ ಗಡ್ಡೆಕೋಸು, ಹೂ ಕೋಸು, ಎಲೆ ಕೋಸು ಗಳನ್ನು ಸ್ಥಳಿಯ ಮಾರುಕಟ್ಟೆಯಲ್ಲಿ ಕೊಳ್ಳುತ್ತಾನೆ.ಅವನು ಕೆಲ ಸಮಯದ ನಂತರ ತನ್ನಲ್ಲಿನ ಬೀಜಗಳನ್ನು ವಿನಿಮಯ ಮಾಡಿಕೊಳ್ಳುತ್ತಾನೆ ಅವನ ಪ್ರಾಯೋಗಿಕ ತಾಕು ಮತ್ತು ಕೈತೋಟವು ವಿಸ್ತಾರವಾಗಿದ್ದು ಚೆನ್ನಾಗಿ ನಿರ್ವಹಣೆಯಾಗುತ್ತಿದೆ.ಅವನು ಮಿಶ್ರಬೆಳೆ ಕೃಷಿಯನ್ನು ಮಾಡುತ್ತಾನೆ (ಬದನೆ, ಮೂಲಂಗಿ ಪಾಲಕ್, ಆಲೂ ಗಡ್ಡೆ +, ಕುಂಬಳ, ಈರುಳ್ಳಿ+ಬಸೆಲಲ್ ಗಳನ್ನು ಬೆಳೆಯುವನು.

ಅವನು ಎರೆಹುಳುವಿನ ಗೊಬ್ಬರದ ಗುಂಡಿಯನ್ನು ಹೊಂದಿದ್ದು ಅಲ್ಲಿಂದ ಹೊಲಕ್ಕೆ ಮತ್ತು ತೋಟಕ್ಕೆ ಬೇಕಾದ ಸಾವಯವ ಅಗತ್ಯಗಳನ್ನು ಪಡೆಯುತ್ತಾನೆ.ಅವನು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿ ಕೊಂಡಿದ್ದಾನೆ.ಬಾತು ಭತ್ತದ ಗದ್ದೆಯಲ್ಲಿ ಗಾಳಿಯಾಡುವಂತೆ ಮಾಡುತ್ತದೆ. ಕೋಳಿಯು ಕೀಟಗಳನ್ನು ತಿಂದು ಹಾಕುತ್ತದೆ.ಈ ಬೆಳೆಗಳ ಸಂಯೋಜನೆಯಿಂದ ಅವನು ಪ್ರಾಯೋಗಿಕ ತಾಕಿನಲ್ಲಿ 2004 ಸಾಲಿನ ಮುಂಗಾರಿನ ಏಕ ಬೆಳೆಯ ಬದಲು ಸೊಯೋಜಿತವಾದ 9 ಬೆಳೆ ಗಳನ್ನು 200 ರಲ್ಲಿ ಪಡೆದಿದ್ದಾನೆ. ಅವನು ಕೋಳಿಗೂಡನ್ನುಹೊಂಡದ ಮೇಲೆ ಬರುವಂತೆ ವರ್ಗಾಯಿಸಿ ಕೋಳಿಯ ಹಿಕ್ಕೆಯುನೇರವಾಗಿ ಹೊಂಡದಲ್ಲೆ ಬೀಳುವ ವ್ಯವಸ್ಥೆ ಮಾಡಿರುವನು. ಕೋಳಿಯ ವಿಸರ್ಜನೆಯಲ್ಲಿ ಝೂಪ್ಲಾಂಕಟನ್& ಫೈಟೋ ಪ್ಲಾಂಕ್ಟನ್ ಗಳಿಂದಾಅವು ಮೀನಿಗೆ ಉತ್ತಮ ಆಹಾರ ವಾಗುತ್ತವೆ

ಹೊಂಡದ ದಡವನ್ನು ಎಲೆ ಪಲ್ಯ ಬೆಳೆಯಲು ಉಪಯೋಗಿಸುವನು. ಅವನು ಖರ್ಚು ಮಾಡಿದ . 12235.75/-ರೂಪಾಯಿ (ತನ್ನ ಕೂಲಿ ಮೌಲ್ಯಬಿಟ್ಟು) ಗಳಲ್ಲಿ ಆಂತರಿಕ ಪರಿಕರಗಳ ಮೌಲ್ಯ . 9497.75/-ರೂಪಾಯಿ ಯಾಗಿದೆ.. ಇದರ ಅರ್ಥ ಅವನು ತೊಡಗಿಸಿದ ಒಟ್ಟು ಬಂಡವಾಳದ ಸುಮಾರು 77.62% ಭಾಗವು ಅಂತರಿಕವಾಗಿಯೇ ಬಂದಿದೆ. ಇತ್ತೀಚಿನ ಮೂರುವರ್ಷಗಳಲ್ಲಿ ಮಣ್ಣಿನಲ್ಲಿನ ಸಾವಯವ ಇಂಗಾಲದ ಪ್ರಮಾಣವು ಹೆಚ್ಚಿದೆ.

ನಾವು ಬನಮಾಲಿಯ ತಾಕನ್ನು ಸಾಂಪ್ರದಾಯಿಕ ತಾಕಿನೊಂದಿಗೆ ಹೋಲಿಕೆ ಮಾಡಿದರೆ ಅವನ ಪಳೆಯುಳಿಕೆ ಇಂಧನಗಳ ಅವಲಂಬನೆಯು ಶೂನ್ಯವಾಗಿದೆ ಏಕೆಂದರೆ ಅದಕ್ಕ ಹಾಕುವ ಎಲ್ಲ ಪರಿಕರಗಳೂ ತೋಟದಲ್ಲೆ ತಯಾರಾದವುಗಳಾಗಿವೆ. ಅವನ್ನು ಉತ್ಪಾದನೆ ಮಾಡಲುಅಗತ್ಯವಾಧ ಮಾನವ ಶಕ್ತಿಒಯನ್ನು ರೈತ ಮತ್ತು ಅವನ ಕುಟುಂಬದವರು ನೀಡಿದ್ದಾರೆ. ಹಾಗಿದ್ದರೂ ಅವನು ತನ್ನ ತೋಟದ ಕೆಲಸವನ್ನು ಬೇಸರವಾಗದ ರೀತಿಯಲ್ಲಿ ರೂಪಿಸಿರುವನು. ಈಗ ಬನಮಾಲಿದಾಸನು ತನ್ನ ತೋಟವನ್ನು ದಕ್ಷತೆಯಿಂದ ನಿರ್ವಹಿಸುವನು.ಅದರಿಂದ ಪರಿಸರದ, ಆರ್ಥಿಕ, ಮತ್ತು ಸಾಮಾಜಿಕ ಅನುಕೂಲಗಳನ್ನುನಪಡೆದಿದ್ದಾನೆ.

ಬನಮಾಲಿದಾಸನ ಯಶಸ್ಸನ್ನು ನೋಡಿದ ಅನೇಕ ರೈತರು ಈಗ ಸಮಗ್ರ ಕೃಷಿಯತ್ತ ವಾಲುತ್ತಿದ್ದಾರೆ.. ಬನಮಾಲಿಯು ಸಮಗ್ರ ಕೃಷಿಯಿಂದಾಗಿ ಪರಿಕರಗಳನ್ನು ತಾನೆ ಸಿದ್ಧಪಡಿಸಿದನು . ಅಲ್ಲದೆ ಮಾರುಕಟ್ಟೆಯ.ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ.ಅಲ್ಲದೆ ಬಂದ ಉತ್ಪನ್ನವನ್ನು ತನ್ನ ಬಳಕೆಗೆ ಉಪಯೋಗಿಸಿ ಉಳಿದಿದ್ದನ್ನು ಮಾರಿ ಲಾಭ ಗಳಿಸಿದ ಸಮನ್ವಯಿತ ಸಾವಯವ ಕೃಷಿ ಪದ್ದತಿಯು ಕುಟುಂಬಕ್ಕೆ ಆಹಾರ ಭದ್ರತೆ ಒದಗಿಸಿದೆ.ಅವನ ಈ ವಿಧಾನವು ಮಾರುಕಟ್ಟೆಯ ಮೇಲಿನ ಕೃಷಿ ಪರಿಕರಗಳ ಅವಲಂಬನೆ ತಗ್ಗಿಸಿವೆ. ಹೆಚ್ಚಿನಪಾಲು ತನ್ನ ತೋಟದಲ್ಲೆ ಉತ್ಪಾದಿಸುತ್ತಾನೆ .

ಮೂಲ: DRCSC, Kolkata

ಕೊನೆಯ ಮಾರ್ಪಾಟು : 5/31/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate