অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾಮೂಹಿಕ ಕಾರ್ಯದ ನಿದರ್ಶನ

ತಮಿಳುನಾಡಿನ ಪೆರಂಬೂರು ಜಿಲ್ಲೆಯ ಒಣ ಭೂಮಿಯಲ್ಲಿ ವಿಸ್ತಾರವಾದ ಮೆಕ್ಕೆ ಜೋಳದ ಬೆಳೆ ಕಾಣುವುದು ಈಗ ಸಾಮಾನ್ಯ ಸಂಗತಿ. ಈ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಹತ್ತಿ ಮತ್ತು ಸೆಂಗಾ ಬೆಳೆಯುತ್ತಿದ್ದರು . ಅನೇಕ ಕಾರಣಗಳಿಂದಾಗಿ ರೈತರು ಮೆಕ್ಕೆಜೋಳ ಬೆಳೆಯಲು ಪ್ರಾರಂಭಿಸಿದರು. ಹತ್ತಿ ಬೆಳೆಯು ಲಾಭದಾಯಕವಾಗಿರಲಿಲ್ಲ, ಅದಕ್ಕೆ ಹೆಚ್ಚಿನ ಪ್ರಮಾಣದ ಕೀಟನಾಶಕಗಳನ್ನು ಬಳಸಬೇಕಿತ್ತು ಮಾನಸೂನು ತಡವಾಗಿ ಬಂದುದರಿಂದ ಶೇಂಗಾದ ಬಿತ್ತನೆಗೆ ತೊಂದರೆಯಾಗುತ್ತಿತ್ತು. ಸಕಾಲದಲ್ಲಿ ಬಿತ್ತನೆ ಯಾಗದಿದ್ದರೆ ಇಳುವರಿ ಕಡಿಮೆಯಾಗುತ್ತಿತ್ತು. ಇದರಿಂದಾಗಿ ಮೆಕ್ಕೆಜೋಳವು ಸುಲಭವಾದ, ನಂಬಬಹುದಾದ ಬೆಳೆ ಅನಿಸಿತು. ಅಲ್ಲದೆ ಪಶು ಆಹಾರ ತಯಾರಿಕೆಗಾಗಿ ಅದಕ್ಕೆ ಬೇಡಿಕೆ ಸದಾ ಇತ್ತು. ಈ ಹಿನ್ನೆಲೆಯಲ್ಲಿ ಎ. ಎಮ. ಇ ಫೌಂಡೇಷನ್ನಿನ ತಿರುಚಿ ಘಟಕವು ಪೆರಂಬೂರು ಜಿಲ್ಲೆಯ ,ಕುನ್ನಂ ತಾಲೂಕಿನ ರೈತರ ಗುಂಪಿನೊಂದಿಗೆ ಮೇ, 2005 ರಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು ಅದರ ಮಧ್ಯ ವರ್ತನೆಯ ಉದ್ದೇಶ ಮೆಕ್ಕೆ ಜೋಳದ ಇಳುವರಿಯನ್ನು ಹೆಚ್ಚಿಸುವುದು ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದೆ ಆಗಿತ್ತು. ರೈತರೊಂದಿಗೆ ಚರ್ಚೆ ನಡೆಸುವಾಗ ಹೆಚ್ಚುತ್ತಿರುವ ಉತ್ಪಾದನ ವೆಚ್ಚವಲ್ಲದೆ , ಉತ್ಪನ್ನದ ಮಾರಾಟವು ಸಹಾ ರೈತರ ಆದಾಯ ಕಡಿಮೆಯಾಗಲು ಕಾರಣ ಎಂದು ತಿಳಿಯಿತು.ಹೀಗಾಗಿ ಮೆಕ್ಕೆ ಜೋಳವನ್ನು ಕೃಷಿ ಉತ್ಪನ್ನವೆಂದು ಮಾರುಕಟ್ಟೆಯಲ್ಲಿ ಬಿಂಬಿಸುವತ್ತ ಗಮನ ಹರಿಸಲಾಯಿತು.

ಚಾಲತಿಯಲ್ಲಿದ್ದ ಮಾರುಕಟ್ಟೆಯ ಪದ್ದತಿಗಳು

ರೈತರು ತಮ್ಮ ಉತ್ಪನ್ನಗಳನ್ನು ವ್ಯಾಪಾರಿಗಳಿಗೆ ತಮ್ಮೂರಲ್ಲೆ ಮಾರುತ್ತಿದ್ದರು. ಸುಗ್ಗಿಯ ಹಂಗಾಮಿನಲ್ಲಿ ಪೆರಂಬೂರಿನಿಂದ ವ್ಯಾಪಾರಿಗಳು ಉತ್ಪನ್ನವನ್ನು ಕೊಳ್ಳಲು ಹಳ್ಳಿಗಳಿಗೆ ಬರುತ್ತಿದ್ದರು. ತೂಕದ ಯಂತ್ರ, ಗೋಣಿಚೀಲ ಗಳನ್ನು ಅವರೆ ತರುತ್ತಿದ್ದರು. ಮೆಕ್ಕೆ ಜೋಳವನ್ನು ತಮ್ಮ ನಗರಕ್ಕೆ ತಕ್ಷಣ ಸಾಗಿಸುವ ಹೊಣೆ ಅವರದೆ ಆಗಿರುತ್ತಿತ್ತು. ಅವರು ಉತ್ಪನ್ನವನ್ನು ತೂಕಹಾಕಿ 100 ಕೆಜಿ ಚೀಲಗಳಲ್ಲಿ ತುಂಬಿ ಲಾರಿಗಳಲ್ಲಿ ಪೆರಂಬೂರಿಗೆ ಸಾಗಣಿಕೆ ಮಾಡುತ್ತಿದ್ದರು. ಮೆಕ್ಕೆ ಜೋಳದ ಪ್ರಮಾಣ ವು ಹೆಚ್ಚಾಗಿರಲಿ , ಕಡಿಮೆಯೆ ಇರಲಿ ಪ್ರಕ್ರಿಯೆಯು ಒಂದೆ ಆಗಿರುತ್ತಿತ್ತು. ಅವರು ನೀಡುವ ಬೆಲೆಯು ಅಯಾ ಹಂಗಾಮಿನ ಮೇಲೆ ಅವಲಂಬಿಸಿರುತ್ತಿತ್ತು. ಸುಗ್ಗಿಯ ಹಂಗಾಮಾದ ಫೆಬ್ರವರಿ ಮತ್ತು ಮಾರ್ಚ ತಿಂಗಳಲ್ಲಿ ಬೆಲೆ ಕಡಿಮೆ ಇರುತ್ತಿತ್ತು. ರೈತರು ಸುಗ್ಗಿಯ ಸಮಯದಲ್ಲೆ ಮಾರಿದರೆ ಹೆಚ್ಚಿನ ಪ್ರಮಾಣದ ಮಾಲಿನಿಂದಾಗಿ ಮಾರುಕಟ್ಟೆಯಲ್ಲಿ ಮಿತಿ ಮೀರಿದ ಸರಬರಾಜು ಆಗುತ್ತಿತ್ತು. ಹಾಗಾಗಿ ಅವರಿಗೆ ಕಡಿಮೆ ಬೆಲೆಸಿಗುತ್ತಿತ್ತು. ಅದರೂ ರೈತರಿಗೆ ಉತ್ಪನ್ನವನ್ನು ಸಂಗ್ರಹಿಸಲು ಅನುಕೂಲವಿಲ್ಲದೆ ಇರುವುದರಿಂದ . ಕಡಿಮೆ ಬೆಲೆಗೆ ಅವರು ಮಾರಲೇ ಬೇಕಿತ್ತು. ಅದಲ್ಲದೆ ಅವರು ತಮ್ಮ ದನಕರುಗಳಿಗಾಗಿ ಮೆಕ್ಕೆ ಜೊಳದಿಂದಲೆ ತಯಾರಾದ ಪಶು ಆಹಾರ ಕೊಳ್ಳಲು ಹೆಚ್ಚಿನ ಬೆಲೆ ತೆರುತ್ತಿದ್ದರು. ರೈತರಿಗೆ ಅನ್ಯಾಯವಾಗುತ್ತಿದ್ದುದು ಮೆಕ್ಕೆ ಜೋಳದ ತೂಕದ ವಿಷಯದಲ್ಲಿ. ತೂಕ ಮಾಡುವಾಗ ಅನೇಕ ಅಕ್ರಮಗಳಾಗುತ್ತಿದ್ದವು. ರೈತರಿಗೆ ಅವು ಗೊತ್ತಾಗುತ್ತಲೆ ಇರಲಿಲ್ಲ. ಆದರೆ ಬಹಳ ಸಂದರ್ಭದಲ್ಲಿ ರೈತರು ಅಸಹಾಯಕ,ಮೂಕ ಪ್ರೇಕ್ಷಕರಾಗಿ ಉಳಿಯುತ್ತಿದ್ದರು.ಈ ವಂಚನೆಯು ನಿಯಂತ್ರಿತ ಮಾರುಕಟ್ಟೆಯಲ್ಲೂ ಜರುಗುತಿತ್ತು. ಮಧ್ಯವರ್ತಿಗಳು14 ಟನ್ನಿನ ಒಂದು ಲೋಡಿಗೆ 10000 ರೂಪಾಯಿ ಗಳಿಸುತ್ತಿದ್ದರು. ಈ ರೀತಿಯಾಗಿ ಹೆಚ್ಚುವರಿ ಮೆಕ್ಕೆ ಜೋಳ ಅವರಿಗೆ ಹೋಗುತಿತ್ತು. ರೈತರು ಈ ಸಮಸ್ಯೆಯನ್ನು ತಮ್ಮದೆ ಆದ ರೀತಿಯಲ್ಲಿ ಪರಿಹರಿಲು ಯತ್ನಿಸಿದರು. ಅವರು ತಂಬಿದ ಚಿಲಗಳನ್ನು ಮೊದಲೆ ತೂಕಮಾಡಿ ಇಡುತ್ತಿದ್ದರು. ಆದರೆ ವ್ಯಾಪಾರಿಗಳು ಕೊಳ್ಳಲು ಆ ಹಳ್ಳಿಗಳಿಗೆ ಬರುತ್ತಲೇ ಇರಲಿಲ್ಲ.

ಮೆಕ್ಕೆ ಜೋಳದ ತೂಕದಲ್ಲಿನ ಸಾಮಾನ್ಯ ಅಕ್ರಮಗಳು

  • ವ್ಯಾಪಾರಿಗಳು ಚೀಲಕ್ಕೆ ಅರ್ಧ/ ಒಂದು ಕಿಲೊ ನಷ್ಟ ಎಂದು ಸಂಗ್ರಹಿಸುತ್ತಿದ್ದರು. ಅದನ್ನು ಸಾಮಾನ್ಯವಾಗಿ ಯಾವುದೆ ರೈತರು ವಿರೋಧಿಸುತ್ತಿರಲಿಲ್ಲ.
  • ದೋಷಯುಕ್ತ ತೂಕದ ಯಂತ್ರ ಬಳಸಿ ಒಂದು ಚಿಲಕ್ಕೆ ಕನಿಷ್ಟ 1 ಕೆಜಿ ವ್ಯತ್ಯಾಸ ಬರುವಂತೆ ಮಾಡುತ್ತಿದ್ದರು.
  • ತೂಕ ಮಾಡುವಾಗ ಕೈವಾಡ ನೆಡೆಸಿ ಚಿಲಗಳನ್ನು ಸರಿಯಾಗಿ ಇಡದೆ ಚೀಲ ಒಂದಕ್ಕೆ 2ರಿಂದ 8 ಕಜಿ ವ್ಯತ್ಯಾಸ ಬರುವಂತೆ ಮಾಡುತ್ತಿದ್ದರು.
  • ತೂಕವನ್ನು ಸಾಮನ್ಯವಾಗಿ ಬೆಳಕು ಕಡಿಮೆ ಇರುವ ಸಂಜೆಯ ಸಮಯದಲ್ಲಿಯೇ ಮಾಡುತ್ತಿದ್ದರು. ತೂಕ ಸ್ಪಷ್ಟವಾಗಿ ಕಾಣದೆ ಅವರು ಹೇಳಿದ್ದನ್ನೆ ನಂಬ ಬೇಕಾಗುತ್ತಿತ್ತು. ತೂಕ ಮಾಡಿದ ಮೇಲೆ ಕಡಿಮೆ ಯಾದುದನ್ನು ಸರಿಪಡಿಸುವ ನೆವದಲ್ಲಿ ಹೆಚ್ಚುಪ್ರಮಾಣದ ಧಾನ್ಯ ಸೇರಿಸುತ್ತಿದ್ದರು.
  • ಅವರ ಜನರೆ ತೂಕ ಮಾಡುತ್ತಿದ್ದರು. ರೈತರಿಗೆ ತೂಕ ಮಾಡಲು ಬಿಡುತ್ತಿರಲಿಲ್ಲ.

ವ್ಯಾಪಾರಿಗಳ ಈ ಶೋಷಣೆಗೆ ರೈತರೆ ಬಹು ಮಟ್ಟಿಗೆ ಹೊಣೆಗಾರರು. ರೈತರು ಅವರು “ಹೆಚ್ಚಿನ ಬೆಲೆಕೊಡುವೆವು ಮತ್ತು ಉಚಿತ ಚೀಲಕೊಡುವೆವು “ ಎಂಬ ಸ್ಥಳಿಯ ವ್ಯಾಪಾರಿಗಳ ಮಾತಿಗೆ ಮರುಳಾಗುತ್ತಿದ್ದರು. ಅವರು ಸಕ್ರಮವಲ್ಲದ ಅಳತೆಯಿಂದ ಆಗುವ ನಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ಸಣ್ಣ ರೈತರು ಬಹಳ ಕಡಿಮೆ ಪ್ರಮಾಣದ ಉತ್ಪನ್ನಹೊಂದಿರುವುದರಿಂದ ಚೌಕಸಿ ಮಾಡಲಾಗುತ್ತಿರಲಿಲ್ಲ.ಅಲ್ಲದೆ ತಕ್ಷಣ ಬೇಕಾದ ಹಣದ ಅವಶ್ಯಕತೆಯ ಒತ್ತಡದಿಂದ ಪರಿಸ್ಥಿತಿ ಇನ್ನೂ ಹದಗೆಡುತ್ತಿತ್ತು.. ಅವರು ಮಾತ್ರ ಅಲ್ಲ ಹೆಚಿನ ಪ್ರಮಾಣದ ಮೆಕ್ಕೆಜೋಳ ಹೊಂದಿದವರೂ , ಅವನ್ನು ಸಂಗ್ರಹಿಸಲು ಚೀಲಗಳಿಲ್ಲದೆ . ಸ್ಥಳ ಗ ಇಲ್ಲದೆ ಬಂದ ಬೆಲೆಗೆ ಮಾರಲೇ ಬೇಕಿತ್ತು.

ಮೊದಲ ಹೆಜ್ಜೆ ಮುಂದಿಡುವುದು

ಪೆರ್ಮತ್ತು ಕುಡಕಾಡು ಗ್ರಾಮದ ವಿನಾಯಗ ಗುಂಪಿನ ರೈತರು ತಮ್ಮ ಮೆಕ್ಕೆಜೋಳವನ್ನು ನಾಮ್ಮಕಲ್ನಲ್ಲಿನ ಕೋಳಿ ಸಾಕಣೆ ಘಟಕಕ್ಕೆ ನೇರವಾಗಿ ಮಾರಲು ನಿರ್ಧರಿಸಿದರು. ಅವರಿಗೆ ತಮ್ಮ ಗುಂಪಿನ ಮತ್ತು ಎ. ಎಮ .ಇ ಎಫ್ ನ ಸಹಾಯದಿಂದ ಅದು ಸಾಧ್ಯವಾಯಿತು. ಈ ಘಟಕವು ಗ್ರಾಮದಿಂದ 160 ಕಿಮಿ ದೂರದಲ್ಲಿದೆ. ಮೊದಲಿಗೆ ಇಬ್ಬರು ರೈತರು 14 ಟನ್ (ಒಂದು ಲೋಡು) ಮೆಕ್ಕೆ ಜೋಳವನ್ನು ನಮ್ಮಕಲ್ ನ ಪಶು ಆಹಾರ ಘಟಕಕ್ಕೆ ತೆಗೆದು ಕಂಡುಹೋದರು.ನೇರ ಮಾರಾಟದ ಅನುಭವ ಇಲ್ಲದೆ ಇರುವುದರಿಂದ ಅವರಿಗೆ ಅನೇಕ ಸಮಸ್ಯೆಗಳು ಎದುರಾದವು. ಮೊದಲನೆಯದಾಗಿ ಹಮಾಲಿಗಳು ರೈತರ ಅಸಹಾಯಕ ಸ್ಥಿತಿಯನ್ನು ಗಮನಿಸಿ ತಮ್ಮ ಕೂಲಿಯನ್ನು ಚೀಲ ಒಂದಕ್ಕೆ 5 ರೂಪಾಯಿನಿಂದ 10 ರೂಪಾಯಿಗೆ ಏರಿಸಿದರು. ಅವರದೆ ಒಂದು ಸಂಘ ಇರುವುದರಿಂದ ಹೊಸಬರು ಯಾರಾದರೂ ಮಂದರೆ ಅದರ ಲಾಭ ಪಡೆಯುತ್ತಿದ್ದರು. ಬೇರೆಯವರನ್ನು ಅವರು ಚೀಲವನ್ನು ಏರಿಳಿಸಲು ಬಿಡುತ್ತಿರಲಿಲ್ಲ.ಅದು ಅಲ್ಲದೆ ಬೇಡಿಕೆ ಬಹಳ ವಾಗಿರುವುದರಿಂದ ಸಾಗಣಿಕೆ ವೆಚ್ಚವು 25% ಹೆಚ್ಚು ನೀಡಬೇಕಾಯಿತು. ಜತೆಗೆ ಕಂಪನಿಯವರು ತೇವಾಂಶ ಇದೆಎಂದು ಕಡಿಮೆ ಬೆಲೆ ಕೊಡುವುದಾಗಿ ತಿಳಿಸಿದರು. . ಅದು ಸುಗ್ಗಿಯ ಹಂಗಾಮವಾದ್ದರಿಂದ ಗೋಣಿ ಚೀಲದ ಬೆಲೆಯನ್ನೂ 50% ಹೆಚ್ಚಿಗೆ ಮಾಡಿದರು ಅದರೆ ಈ ಎಲ್ಲ ಸಮಸ್ಯೆಗಳು ಕಂಪನೆಯ ಮಾಲಕರೆ ರೈತರಿಗೆ ಸಹಾಯ ಮಾಡಲು ವೈಯುಕ್ತಿಕ ಆಸಕ್ತಿ ತೋರಿಸಿದ್ದರಿಂದ ನಿವಾರಣೆಯಾದವು., ಮಳೆಯಿಂಧ ಹಾಳಾಗುವುದು, ಸಾರಿಗೆಯಿಂದ ತಡವಾಗುವುದು, ವ್ಯಾಪಾರಿಗಳು ಮಾರುಕಟ್ಟೆಗೆ ಇತರ ಪ್ರದೇಶದಿಂದ ಹೆಚ್ಚು ಮಾಲು ಬಂದುದರಿಂದ ಬೆಲೆ ಕಡಿಮೆಯಾಗಿದೆ ಎಂದು ಇವರದನ್ನು ಖರೀದಿಸಲು ನಿರಾಕರಿಸುವುದು , ಹಾದಿಯಲ್ಲಿ ಲಾರಿ ಕೆಟ್ಟುನಿಲ್ಲುವುದು, ಅಪಘಾತ ಇತ್ಯಾದಿ ಇತರೆ ಆತಂಕಗಳೂ ಇದ್ದವು . ಆದರೆ ರೈತರ ದೃಢ ನಿರ್ಧಾರವು ಈ ಎಲ್ಲ ಎಡರು ತೊಡರುಗಳನ್ನು ಬಗೆ ಹರಿಸಿತು ಈ ಎಲ್ಲ ಮಿತಿಗಳಿದ್ದಾಗಲೂ ಕೂಡಾ ರೈತರಿಗೆ ಸಾಕಷ್ಟು ಲಾಭ ಬಂದಿತು. ತೂಕ ಮಾಡುವ ಯಂತ್ರ ಒಂದರಿಂದಲೆ 14 ಟನ್ ಇರುವ ಒಂದು ಲೋಡಿಗೆ 610 ಕೆಜಿ ಧಾನ್ಯ ಉಳಿತಾಯವಾಯಿತು. ಅಂದರೆ ಅವರಿಗೆ 3385ರೂಪಾಯಿ ಹೆಚ್ಚಾಗಿ ಬಂದಿತು.ಅಲ್ಲದೆ ಬೆಲೆಯಲ್ಲೂ ಅವರಿಗೆ ಅನುಕೂಲವಾಯಿತು. ಹಳ್ಳಿಯಲ್ಲಿ ಅವರಿಗೆ ಕ್ವಿಂಟಲ್ಲಿಗೆ 500 ರೂಪಾಯಿ ದೊರೆತರೆ ಇಲ್ಲಿ 550 ರೂಪಾಯಿ ಬೆಲೆ ಸಿಕ್ಕಿತು. ರೈತರು ಮಾರಾಟ ಮಾಡಲು ಹಣ ಖರ್ಚು ಮಾಡ ಬೇಕಾಗಿ ಬಂದರೂ ಅವರ ನಿವ್ವಳ ಆದಾಯದಲ್ಲಿ 3.2%. ಏರಿಕೆಯಾಗಿತ್ತು. ಅಂದರೆ ಅವರಿಗೆ ಈ ಕ್ರಮದಿಂದ ಒಂದು ಚೀಲಕ್ಕೆ.13.30 ರುಪಾಯಿ ಹೆಚ್ಚು ಬೆಲೆ ದೊರೆಯಿತು. ರೈರು ಗೋಣಿಚೀಲಗಳನ್ನು ಸುಗ್ಗಿಯ ಹಂಗಾಮು ಇಲ್ಲದಾಗ ಖರೀದಿಸಿದರೆ ಮತ್ತು ಲಾರಿಗಳನ್ನು ಮತ್ತು ಹಮಾಲರನ್ನು ಮೊದಲೆ ಗೊತ್ತು ಮಾಡಿಕೊಂಡರೆ 50% ಹೆಚ್ಚು ಲಾಭ ದ ಅವಕಾಶ ಇದೆ ಎನಿಸಿತು. ಇದೆಲ್ಲಕ್ಕಿಂತ ಹೆಚ್ಚಾಗಿ ರೈತರಿಗೆ ಈ ಕ್ರಮದಿಂದ ಸಿಕ್ಕಿದ ಅನುಭವ ಮುಖ್ಯವಾಗಿತ್ತು.

ಹೆಜ್ಜೆಗಳನ್ನು ಅನುಸರಿಸಿ

ಇಬ್ಬರು ರೈತರು ತೆಗೆದುಕೊಂಡ ಧೈರ್ಯದ ಕ್ರಮದಿಂದ ಉತ್ತೇಜಿತರಾದ ಗುಂಪಿನಲ್ಲಿನ ಇತರೆ ರೈತರು ಅವರನ್ನೆ ಅನುಸರಿಸಿದರು. ದುರ್ದೈವದಿಂದ ಹಕ್ಕಿ ಜ್ವರದ ಕಾರಣದಿಂದ ನಾಮ್ಮಕಲ್ಲಿನ ಅನೇಕ ಕೋಳಿ ಸಾಕಣೆ ಕೇಂದ್ರಗಳು ಮುಚ್ಚಿಹೋದವು. ಇದರಿಂದಾಗಿ ಮೆಕ್ಕೆಜೋಳದ ಬೆಲೆ ಕುಸಿಯಿತು ರೈತರು ಧೈರ್ಯಗೆಡದೆ ಪರ್ಯಾಯ ಮಾರ್ಗ ಹುಡುಕಲು ಯತ್ನಿಸಿದರು.ರೈತರು ತಮ್ಮ ಗುಂಪಿನ ಸಭೆಯಲ್ಲಿ ಬೆಲೆಯು ಸ್ಥಿರಗೊಳ್ಳುವವರೆಗೆ ಕಾಯಲು ನಿರ್ಧರಿಸಿದರು. ಗುಂಪಿನ ಸದಸ್ಯರು ತಮ್ಮಲ್ಲಿ ಹಣದ ಅಗತ್ಯವಿದ್ದವರಿಗೆ ಸಹಾಯ ಮಾಡಿದರು. ಸುಮಾರು ಐವತ್ತು ಜನ ರೈತರು ಒಳ್ಳೆಯ ಬೆಲೆ ಬರುವವರೆಗೆ ಕಾಯಲು ನಿರ್ಧರಿಸಿದರು. ಅವರು ಮಾರಾಟವನ್ನು ಎರಡು ತಿಂಗಳ ವರೆಗೆ ಮುಂದೂಡಿದರು.ನಂತರ ಸ್ಥಳಿಯ ವರ್ತಕರಿಗೆಗೆ ಮಾರಿದಾಗ ಇದರಿಂದ ಅವರಿಗೆ ಪ್ರತಿ ಚೀಲ ಒಂದಕ್ಕೆ 10 ರುಪಾಯಿ ಹೆಚ್ಚಿನ ಬೆಲೆಸಿಕ್ಕಿತು. ಸರಸರಿ300 ರುಪಾಯಿ ಹೆಚ್ಚಿನ ಆದಾಯ ಸಿಕ್ಕಿತು. ತೂಕ ಮತ್ತು ಇತರ ಅಕ್ರಮಗಳನ್ನು ಆದಷ್ಟು ಕಡಿಮೆ ಮಾಡಲು ಸಾಧ್ಯವಾಯಿತು.ದನಕರುಗಳಿದ್ದ ರೈತರು ತಮ್ಮ ಉತ್ಪನ್ನವನ್ನು ತಾವೆ ಬಳಸಿ ಪಶು ಆಹಾರ ತಯಾರಿಸಲು ಮುಂದಾದರು. ರೈತರು. ಪಶು ಅಹಾರ ತಯಾರಿಕೆಯ ತರಬೆತಿ ಪಡೆದರು. ಮೆಕ್ಕೆ ಜೋಳ, ಜೋಳ, ಸೇಂಗಾ ,ಎಳ್ಳು ಮತ್ತು ಅಲ್ಲಿಯೆ ದೊರೆಯುವ ಇತರ ವಸ್ತುಗಳನ್ನು ಬಳಸಿ ಪಶು ಆಹಾರ ತಯಾರಿಸಿದರು. ನಾಲಕ್ಕು ಗುಂಪಿನ 30 ರೈತರು ಪಶು ಆಹಾರವನ್ನು ಹೊರಗಿನಿಂದ ಕೊಳ್ಳುವ ಬದಲು ತಾವೆ ತಯಾರಿಸಲು ಮೊದಲು ಮಾಡಿದರು. ಅವರ ರು ತಯರಿಸಿದ ಪಶು ಆಹಾರವು ಕೆ.ಜಿಗೆ 8 ರುಪಾಯಿ ಬೆಲೆಯಾಗುತಿತ್ತು. ಅದೆ ಹೊರಗೆ ಕರಜಿಗೆ 13 ರುಪಾಯಿ ಕೊಡಬೇಕಾಗುತ್ತಿತ್ತು ಈ ಕ್ರಮದಿಂದಾಗಿ ರೈತರಿಗೆ ಒಂದು ಹಸು ಸಾಕಲು ತಿಂಗಳಿಗೆ ಅಗುತ್ತ ಇದ್ದ ಖರ್ಚಿನಲ್ಲಿ 200 ರೂಪಾಯಿ ಉಳಿತಾಯವಾಯಿತು. ಇದೂ ಅಲ್ಲದೆ ಹಾಲಿನ ಕೊಬ್ಬಿನ ಅಂಶದ ಲ್ಲಿ ಏರಿಕೆಯೂ ಆಯಿತು.

ನೇರ ಮಾರಾಟದ ವೆಚ್ಚ ಮತ್ತು ಆದಾಯ ರೂಪಾಯಿಗಳಲ್ಲಿ

ಕ್ರ.ಸಂo

ಚಟುವಟಿಕೆ

ಮೊದಲಿನ ಪದ್ದತಿ

ನೇರ ವ್ಯಪಾರ

ವ್ಯತ್ಯಾಸ

1

ತೂಗಿದ ಮೆಕ್ಕೆ ಜೊಳದ ಪ್ರಮಾಣ (ಕೆಜಿ)

14000.00

14610.00

4.3%

 

ಆದ ವೆಚ್ಚ

 

 

 

 

ಸಾಮಗ್ರಿಗಳು ( ಗೋಣಿಚಿಲಗಳು)

 

1667.50

 

 

ಲೋಡಿಂಗ್ ಖರ್ಚು

 

1450.00

 

 

ಸಾಗಣಿಕೆ

 

5440.00

 

 

ಇತರೆ

 

266.00

 

2

ಒಟ್ಟು ಖರ್ಚು

 

8823.00

 

3

ಒಟ್ಟು ಆದಾಯ

70000.00

81085.50

15.8%

4

ನಿವ್ವಳ ಅದಾಯ

70000.00

72262.00

3.2%

ಮೂಲAME Foundation(http://www.amefound.org/)

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate