অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾಮೂಹಿಕ ಕೆಲಸದ ಲಾಭ

ಸಾಮೂಹಿಕ ಕೆಲಸದ ಲಾಭ

ಸಾಮೂಹಿಕ ಕೆಲಸವು ಲಾಭ ತರುವುದು

ಪಶ್ಚಿಮ ಬಂಗಾಳದ ರಾಜ್ಯದ ಪೂರ್ವ ಬಾಗದಲ್ಲಿನ ಪುರುಲಿಯಾ ಜಿಲ್ಲೆಯ ಕಾಶಿಪುರ ವಲಯದ ದಲ್ಲಿ ಭಾಲುಕ್ಜಾ ಗುಜರ್ ಗ್ರಾಮವಿದೆ. ಇಲ್ಲಿನ ಭೂಮಿ ಕಲ್ಲುಗಳಿಂದ ಕೂಡಿದ್ದು ನೀರು ಹಿಡಿದಿಡುವ ಸಾಮರ್ಥ್ಯ ಕಡಿಮೆ ಇರುವುದು. ವಾರ್ಷಿಕ ಮಳೆಯು 1200 ರಿಂದ 1400 ಮಿಮಿ ಇರುವುದು. ಆದರೆ ಈ ಎಲ್ಲ ಮಳೆಯು ವರ್ಷದ ಎರಡು ತಿಂಗಳಲ್ಲಿ ಮಾತ್ರ ಬರುವುದು. ಇಲ್ಲಿನ ಎಲ್ಲ ಅರೆ ಶುಷ್ಕ ಪ್ರದೇಶದಲ್ಲಿ ಮಳೆ ಆಧಾರಿತ ಏಕ ಬೆಳೆಯನ್ನು ಮಾತ್ರ ಹಾಕುವರು. ಉಳಿದ t 8 – 9 ತಿಂಗಳಲ್ಲಿ ಯಾವ ಬೆಳೆಯನ್ನು ನೀರಿನ ಕೊರತೆಯಿಂದ ಬೆಳೆಯಲಾಗುವುದಿಲ್ಲ. ಮಳೆಯಾಧಾರಿತ ಬೆಳೆಯೂ ಸಹಾ ಇತ್ತೀಚಿನ ಬದಲಾದ ವತಾವರಣದಿಂದಾಗಿ ತೊಂದರೆ ಅನುಭವಿಸುತ್ತಿದೆ.

ಅದರಿಂದ ತುಂಬ ವರ್ಷದಿಂದ ಬಹಳಷ್ಟು ಭೂಮಿಯು ಬಳಕೆಯಾಗದೆ ಹಾಗೆ ಇರುವುದು. ಆಹಾರದ ಕೊರತೆಯಿಂದ ಸದೃಢರಾದ ಗಂಡಸರು ಮತ್ತು ಮಹಿಳೆಯರು ಪಕ್ಕದ ಸಮೃದ್ಧ ಜಿಲ್ಲೆಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಾರೆ. ಹೀಗೆ ಪಾಳು ಬಿದ್ದ ಜಮೀನುಗಳಿಗೆ ಆ ಗ್ರಾಮದಲ್ಲಿ ಕೊರತೆ ಇಲ್ಲ.

ಆದರೆ ಭಾಲುಕ್ಜರ್ ನ ರೈತರ ಗುಂಪು ಏಕ ಬೆಳೆಯ ಪ್ರಧೇಶವನ್ನು ಎರಡು ಮತ್ತು ಮೂರು ಬೆಳೆಯ ಪ್ರದೇಶಗಳಾಗಿ300-350 ಭಿಗಾ ಜಮೀನನ್ನು ಪರಿವರ್ತಿಸಿದ್ಧಾರೆ. ಗ್ರಾಮದ ಹತ್ತಿರವೆ ದ್ವಾರಕೇಶ್ವರ ನದಿಯು ಹರಿಯುತ್ತದೆ. ರೈತರು ಅದರ ದಂಡೆಯ ಮೇಲೆ ಬಾವಿಗಳನ್ನು ತೋಡಿ ಕಾಲವೆಗಳ ಮೂಲಕ ನದಿಗೆ ಸಂಪರ್ಕಿಸಿರುವರು.ಮಳೆಗಾಲದಲ್ಲಿ ನದಿಯಲ್ಲಿ ಉಕ್ಕಿ ಹರಿಯುವ ನೀರು ಕಾಲುವೆಯ ಮೂಲಕ ಬಾವಿಯನ್ನು ಸೇರಿ ಅದನ್ನು ತುಂಬುತ್ತವೆ. ಅವರು ಈ ನೀರನ್ನು ಅಕ್ಕಪಕ್ಕದ ಹೊಲಗಳಿಗೆ ಬೇಸಗೆಯಲ್ಲಿ ಬಳಸಿ ಹತ್ತಿರದ ಹೊಲಗಳಿಗೆ ನೀರು ಹಾಯಿಸುತ್ತಾರೆ.

ಇದನ್ನು ತೋಡುವ ಮುನ್ನ ಅವರು ಬಹಳ ಜನರ ತೊಂದರೆ ಎದುರಿಸಿದರು. ಅನೇಕ ತೊಡಕುಗಳನ್ನು ಎದುರಿಸಿ 15 ಅಡಿ ಆಳದ 16 ಅಡಿ ಸುತ್ತಳತೆಯ ಬಾವಿ ತೋಡಿಸಿದರು.. 10 ಎಚ್ ಪಿ ಪಂಪಿನ ಸಹಾಯದಿಂದ ಅವರು ಬಾವಿಯ ಸುತ್ತಲಿನ 300 ಭಿಗಾ ಜಮೀನಿಗೆ ನೀರು ಒದಗಿಸಲು ಶಕ್ತರಾದರು.ಮಳೆ ಆಧಾರಿತ ಭತ್ತವನ್ನಲ್ಲದೆ , ಇನ್ನೂ ಎರಡು ಬೆಳೆಗಳನ್ನು ನದಿ ನೀರಿನ್ನು ಏತ ನೀರಾವರಿಯಿಂದ ಪಡೆದರು. ಈ ಗುಂಪಿನ ಬಹುತೇಕ ಸದಸ್ಯರು ಭೂರಹಿತ ಕಾರ್ಮಿಕರಾಗಿದ್ದರು.ಅವರು ಕಾರ್ಮಿಕರ ಗುಂಪು ಮಾಡಿಕೊಂಡು ಭೂಮಾಲಿಕರೊಂದಿಗೆ ಒಪ್ಪಂದ ಮಾಡಿಕೊಂಡರು .

ಅದರಂತೆ ಭೂ ಮಾಲಿಕರು ಮಳೆಗಾಲದಲ್ಲಿ ಭತ್ತದ ಸಾಗು ಮಾಡುತ್ತಿದ್ದರು. ಉಳಿದ ಸಮಯದಲ್ಲಿ ಕಾರ್ಮಿಕರು ಸಾಗುವಳಿ ಮಾಡಿಕೊಳ್ಳ ಬಹುದಿತ್ತು.. ಕಳೆದ ವರ್ಷ ಅವರು ಚಳಿಗಾಲದಲ್ಲಿ ಗೋಧಿ,ಹರಳು ಹುರುಳಿ , ಕುಂಬಳ ಲೆಂಟಿಲ್, ಬಟಾಣಿ, ಟೊಮೇಟೋ, ಬದನೆ , ಈರುಳ್ಳಿ ಇತ್ಯಾದಿಗಳನ್ನು ಬೆಳೆದರು ಅವರು 110 ಕ್ವಿಂಟಲ್ , 700 ಕೆಜಿ ಹರಳು 35 ಕೆಜಿ ಲೆಂಟಿಲ್ 10 ಕೆಜಿ 10 ಕೆಜಿ ಲ್ಯಾತಿರಸ್ , 55 ಕೆಜಿ ಚಿಕ್ಕ ಬಟಾಣಿa, 5 ಕೆಜಿ ಲಿನ್ ಸೀಡ., 210 ಕೆಜಿ ಟೊಮೆಟೊ, 22 ಕೆಜಿ ಹೀರೆ ಕಾಯಿ , 400 ಕೆಜಿ ಕುಂಬಳಕಾಯಿ ಇತ್ಯಾದಿಗಳನ್ನು ಬೆಳೆಯಲಾಯಿತು. ಒಟ್ಟು ಆದಾಯ. 120,000/- ರೂಪಾಯಿ.. ಇನ್ನು ಎರಡು ಮೂರು ವರ್ಷ ದಲ್ಲಿ ಈ ಗುಂಪಿನ ಸದಸ್ಯರು ಯಾರೂ ವಲಸೆ ಹೋಗುವ ಅಗತ್ಯ ಬೀಳದು ಎಂಬ ಭರವಸೆ ಇದೆ.

ಮೂಲ: DRCSC News letter, Issue No. 1 April - August, 2008

 

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate