অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಸಿರು ಗೊಬ್ಬರಗಳು ಪ್ರಯೋಜನಗಳು

ಹಸಿರು ಗೊಬ್ಬರಗಳು ಪ್ರಯೋಜನಗಳು

  • ಇವು ದ್ವಿದಳ ಜಾತಿಗೆ ಸೇರಿರುವುದರಿಂದ ಸಾರಜನಕ ಸ್ಥಿರೀಕರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.
  • ಸಾರಜನಕವಲ್ಲದೇ ಮಣ್ಣಿನಲ್ಲಿರುವ ಸಾವಯವದ ಅಂಶ ಹೆಚ್ಚಿಸಲು ಸಹಕಾರಿ ಮತ್ತು ಮಣ್ಣಿನ ಫಲವತ್ತತೆ, ಭೌತಿಕ, ರಸಾಯನಿಕ ಮತ್ತು ಜೈವಿಕ ಗುಣಧರ್ಮ ಸುಧಾರಿಸಿ ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳಲು ಸಹಾಯವಾಗುತ್ತದೆ.
  • ಪ್ರಮುಖ ಬೆಳೆಗೆ ಲಭ್ಯವಾಗದೇ ಇರುವ ಮಣ್ಣಿನಲ್ಲಿನ ಪ್ರಧಾನ ಮತ್ತು ಲಘು ಪೋಷಕಾಂಶಗಳನ್ನು ಹಸಿರೆಲೆ ಗೊಬ್ಬರ ಬೆಳೆ ಹೀರಿಕೊಂಡು ಮರಳಿ ಮಣ್ಣಿಗೆ ಸೇರಿಸುವುದರಿಂದ ಅವನ್ನು ಲಭ್ಯವಾಗುವಂತೆ ಮಾಡುತ್ತವೆ.
  • ಹಸಿರೆಲೆ ಗೊಬ್ಬರದ ಪೊದೆ/ಗಿಡಗಳು ಪದೇ ಪದೇ ಕತ್ತರಿಸಿದರೂ ಕೂಡ ಹೊಸ ಚಿಗುರು ಬಿಟ್ಟು ಬೆಳೆಯುವ ಗುಣಧರ್ಮ ಹೊಂದಿವೆ.
  • ಹಸಿರು ಗೊಬ್ಬರದ ಬೆಳೆಗಳನ್ನು ಇಡೀ ಬೆಳೆಯಾಗಿ ಅಥವಾ ಅಂತರ ಬೆಳೆಯಾಗಿ ವಿವಿಧ ಬೆಳೆಗಳಲ್ಲಿ ಬೆಳೆಯಬಹುದು. ಉದಾ. ಹತ್ತಿ, ಕಬ್ಬು, ತಂಬಾಕು, ಮೆಣಸಿನಕಾಯಿ, ಗೋವಿನ ಜೋಳ, ಭತ್ತ, ಅಡಿಕೆ, ತೆಂಗು ಹಾಗೂ ಹಣ್ಣಿನ ಬೆಳೆಗಳು
  • ಹಸಿರು ಗೊಬ್ಬರ ಮುಗ್ಗು ಹೊಡೆಯುವುದರಿಂದ ಮಣ್ಣಿನಲ್ಲಿ ಉಪಯೋಗಿ ಜೀವಾಣುಗಳು ವೃದ್ಧಿಹೊಂದಿ ಜೈವಿಕ ಕ್ರಿಯೆಯನ್ನು ತ್ವರಿತಗೊಳಿಸುತ್ತವೆ.
  • ಮಣ್ಣಿನ ಕೆಳಸ್ಥರದಲ್ಲಿರುವ ಪೋಷಕಾಂಶಗಳನ್ನು ಹಸಿರು/ಹಸಿರೆಲೆ ಗೊಬ್ಬರದ ಬೆಳೆಗಳು ಹೀರಿಕೊಳ್ಳುವುದರಿಂದ, ಹಸಿರು ಗೊಬ್ಬರವನ್ನು ಮುಗ್ಗು ಹೊಡೆದಾಗ/ ಮಣ್ಣಿಗೆ ಸೇರಿಸಿದಾಗ, ಮಣ್ಣಿನಲ್ಲಿನ ಅಲಭ್ಯ ಪೋಷಕಾಂಶಗಳು ಬೆಳೆಗೆ ಲಭ್ಯವಾಗುತ್ತವೆ.

 

ಮೂಲ: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 , ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು

ಕೊನೆಯ ಮಾರ್ಪಾಟು : 4/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate