অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ

ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ

  1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.-
  2. ಪರಿಭಾಷೆಗಳು.-
  3. ಕೀಟಗಳು, ಸಸ್ಯರೋಗಗಳು ಅಥವಾ ಹಾನಿಕರ ಕಳೆಗಳಿಂದ ಬಾಧಿತವಾದ ಪ್ರದೇಶಗಳ ಬಗ್ಗೆ ರಾಜ್ಯ ಸರ್ಕಾರದ
  4. ನಿರ್ದೇಶನಗಳನ್ನು ನೀಡುವ ಅಧಿಕಾರ.-
  5. 4ನೇ ಪ್ರಕರಣದ ಮೇರೆಗೆ ನೋಟೀಸು ಜಾರಿಯಾದ ಮೇಲೆ ಅಧಿಭೋಗದಾರನ ಕರ್ತವ್ಯಗಳು.-
  6. ಭೂಮಿ ಅಥವಾ ಆವರಣಗಳನ್ನು ಪ್ರವೇಶಿಸಲು ಅಧಿಕಾರ.-
  7. ಸಸ್ಯಗಳನ್ನು ಕಿತ್ತುಹಾಕುವುದು ಅಥವಾ ನಾಶಗೊಳಿಸುವುದೂ ಸೇರಿದಂತೆ ಕೀಟಗಳು ಅಥವಾ ಸಸ್ಯರೋಗಗಳನ್ನು ನಿರ್ಮೂಲನಗೊಳಿಸಲು ನಿಯಮಿಸಲಾದ ಕ್ರಮಗಳಿರುವಲ್ಲಿ ಪ್ರಕ್ರಿಯೆ.-
  8. ಪರಿಹಾರ ಅಥವಾ ಪ್ರತಿಬಂಧಕ ಕ್ರಮ ಕೈಗೊಳ್ಳುವುದಕ್ಕೆ ಅಧಿಭೋಗದಾರನಿಗೆ ನೋಟೀಸು.-
  9. ಅಧಿಭೋಗದಾರನು ತನ್ನ ಮೇಲೆ ಜಾರಿಮಾಡಿದ ನೋಟೀಸನ್ನು ಪಾಲಿಸಲು ತಪ್ಪುವುದು ಒಂದು ಅಪರಾಧ ಮಾಡಿದಂತಾಗುವುದು.-
  10. ವೆಚ್ಚಗಳ ವಸೂಲಿ.-
  11. ವೆಚ್ಚಗಳ ವಿರುದ್ಧ ಅಪೀಲು.-
  12. ಕ್ರಿಮಿ, ಕೀಟಗಳು, ಸಸ್ಯರೋಗಗಳು ಅಥವಾ ಹಾನಿಕರ ಕಳೆಗಳ ಬಗ್ಗೆ ವರದಿ ಮಾಡುವುದು ಗ್ರಾಮಾಧಿಕಾರಿಗಳ ಹೊಣೆ.-
  13. ದಂಡಗಳು.-
  14. ಅಪರಾಧಗಳ ಸಂಜ್ಞೇಯತೆ-
  15. ಕಂಪನಿಗಳಿಂದ ಅಪರಾಧಗಳು.-
  16. ಈ ಅಧಿನಿಯಮದ ಮೇರೆಗೆ ಕೈಗೊಂಡ ಕ್ರಮದ ರಕ್ಷಣೆ.-
  17. ಪರಿಶೀಲನಾಧಿಕಾರಿಗಳ ನೇಮಕ.-
  18. ಅಧಿಕಾರಗಳ ಪ್ರತ್ಯಾಯೋಜನೆ.-
  19. ರಾಜ್ಯ ಸರ್ಕಾರದಿಂದ ನಿರ್ದೇಶನಗಳು.-
  20. ನಿಯಮ ರಚನಾಧಿಕಾರ.-
  21. ನಿರಸನ ಮತ್ತು ಉಳಿಸುವಿಕೆಗಳು.-

ಪ್ರಕರಣಗಳ ಅನುಕ್ರಮಣಿಕೆ

ಪ್ರಕರಣಗಳು:

  1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ
  2. ಪರಿಭಾಷೆಗಳು
  3. ಕೀಟಗಳು, ಸಸ್ಯರೋಗಗಳು ಅಥವಾ ಹಾನಿಕರ ಕಳೆಗಳಿಂದ ಬಾಧಿತವಾದ ಪ್ರದೇಶಗಳ ಬಗ್ಗೆ ರಾಜ್ಯ ಸರ್ಕಾರದ ಅಧಿಸೂಚನೆ.
  4. ನಿರ್ದೇಶನಗಳನ್ನು ನೀಡುವ ಅಧಿಕಾರ
  5. 4ನೇ ಪ್ರಕರಣದ ಮೇರೆಗೆ ನೋಟೀಸು ಜಾರಿಯಾದ ಮೇಲೆ ಅಧಿಭೋಗದಾರನ ಕರ್ತವ್ಯಗಳು
  6. ಭೂಮಿ ಅಥವಾ ಆವರಣಗಳನ್ನು ಪ್ರವೇಶಿಸಲು ಅಧಿಕಾರ
  7. ಸಸ್ಯಗಳನ್ನು ಕಿತ್ತುಹಾಕುವುದು ಅಥವಾ ನಾಶಗೊಳಿಸುವುದೂ ಸೇರಿದಂತೆ
  8. ಕೀಟಗಳು ಅಥವಾ ಸಸ್ಯರೋಗಗಳನ್ನು ನಿರ್ಮೂಲನಗೊಳಿಸಲು ನಿಯಮಿಸಲಾದ ಕ್ರಮಗಳಿರುವಲ್ಲಿ ಪ್ರಕ್ರಿಯೆ.
  9. ಪರಿಹಾರ ಅಥವಾ ಪ್ರತಿಬಂಧಕ ಕ್ರಮ ಕೈಗೊಳ್ಳುವುದಕ್ಕೆ ಅಧಿಭೋಗದಾರನಿಗೆ ನೋಟೀಸು
  10. ಅಧಿಭೋಗದಾರನು ತನ್ನ ಮೇಲೆ ಜಾರಿಮಾಡಿದ ನೋಟೀಸನ್ನು ಪಾಲಿಸಲು ತಪ್ಪುವುದು ಒಂದು ಅಪರಾಧ ಮಾಡಿದಂತಾಗುವುದು
  11. ವೆಚ್ಚಗಳ ವಸೂಲಿ
  12. ವೆಚ್ಚಗಳ ವಿರುದ್ಧ ಅಪೀಲು
  13. ಕ್ರಿಮಿ, ಕೀಟಗಳು, ಸಸ್ಯರೋಗಗಳು ಅಥವಾ ಹಾನಿಕರ ಕಳೆಗಳ ಬಗ್ಗೆ ವರದಿಮಾಡುವುದು ಗ್ರಾಮಾಧಿಕಾರಿಗಳ ಹೊಣೆ
  14. ದಂಡಗಳು
  15. ಅಪರಾಧಗಳ ಸಂಜ್ಞೇಯತೆ
  16. ಕಂಪನಿಗಳಿಂದ ಅಪರಾಧಗಳು
  17. ಈ ಅಧಿನಿಯಮದ ಮೇರೆಗೆ ಕೈಗೊಂಡ ಕ್ರಮದ ರಕ್ಷಣೆ
  18. ಪರಿಶೀಲನಾಧಿಕಾರಿಗಳ ನೇಮಕ
  19. ಅಧಿಕಾರಗಳ ಪ್ರತ್ಯಾಯೋಜನೆ
  20. ರಾಜ್ಯ ಸರ್ಕಾರದಿಂದ ನಿರ್ದೇಶನಗಳು
  21. ನಿಯಮ ರಚನಾಧಿಕಾರ
  22. ನಿರಸನ ಮತ್ತು ಉಳಿಸುವಿಕೆಗಳು

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

1969ರ ಅಧಿನಿಯಮ 1.- ಎಲ್ಲಾ ಬಗೆಯ ಕøಷಿ ಬೆಳೆಗಳಿಗೆ ವಿವಿಧ ರೀತಿಯ ಕೀಟಗಳು ಮತ್ತು ಸಸ್ಯರೋಗಗಳು

ತಗಲುತ್ತಿದ್ದು, ಅವುಗಳನ್ನು ತಡೆಗಟ್ಟದೆ ಇದ್ದರೆ ಬೆಳೆಯುತ್ತಿರುವ ಬೆಳೆಗಳಿಗೆ ಹಾನಿಯುಂಟಾಗಿ ಇಳುವರಿಯು ನಷ್ಟವಾಗುತ್ತದೆ.

ಆದಕಾರಣ, ಅಂಥ ಕೀಟಗಳು ಮತ್ತು ರೋಗಗಳ ನಿಯಂತ್ರಣ ರಾಷ್ಟ್ರದ ಕøಷಿ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖವೆನಿಸುತ್ತದೆ

ಮತ್ತು ಅದರಿಂದ ದೇಶಕ್ಕೆ ಭಾರಿ ನಷ್ಟವಾಗಬಹುದಾದಂಥ ಕøಷಿ ಉತ್ಪನ್ನವನ್ನು ಗಣನೀಯವಾಗಿ ರಕ್ಷಿಸಲು ಸಾಧ್ಯವಾಗುತ್ತದೆ.

ಕೀಟಗಳು ಮತ್ತು ರೋಗಗಳ ವಿರುದ್ಧ ಸರಿಯಾದ ಮತ್ತು ಪರಿಣಾಮಕಾರಿಯಾದ ಪ್ರತಿಬಂಧಕ ಮತ್ತು ನಿವಾರಕ ಕ್ರಮಗಳನ್ನು

ಕೈಗೊಳ್ಳುವ ಉದ್ದೇಶದಿಂದ ಈ ಶಾಸನವನ್ನು ಪ್ರಸ್ತಾಪಿಸಲಾಗಿದೆ. ಪ್ರಸ್ತುತ, ಮುಂಬಯಿ ಕøಷಿ ಸಂಬಂಧಿ ಕೀಟಗಳು ಮತ್ತು

ರೋಗಗಳ ಅಧಿನಿಯಮ, 1947, ಕೊಡಗು ಕøಷಿ ಸಂಬಂಧೀ ಕೀಟಗಳು ಮತ್ತು ರೋಗಗಳ ಅಧಿನಿಯಮ, 1933,

ಹೈದರಾಬಾದ್ ಕøಷಿ ಸಂಬಂಧೀ ಕೀಟಗಳು ಮತ್ತು ರೋಗಗಳ ವಿನಿಯಮ, 1352 ಫಸಲಿ, ಮದ್ರಾಸು ವಿನಾಶಕಾರಿ ಕ್ರಿಮಿಗಳು

ಮತ್ತು ಕೀಟಗಳ ಅಧಿನಿಯಮ, 1917 - ಇವುಗಳು ರಾಜ್ಯ ವಿವಿಧ ಪ್ರದೇಶಗಳಲ್ಲಿ ಜಾರಿಯಲ್ಲಿವೆ. ಈ ಅಧಿನಿಯಮಗಳ

ಉಪಬಂಧಗಳು ಏಕರೂಪದಲ್ಲಿರುವುದಿಲ್ಲ ಮತ್ತು ಇಡೀ ರಾಜ್ಯಕ್ಕೆ ಏಕರೂಪದ ಕಾನೂನನ್ನು ಅನ್ವಯ ಮಾಡುವುದು

ಅವಶ್ಯಕವಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯ ಪತ್ರ (ವಿಶೇಷ ಸಂಚಿಕೆ) ಭಾಗ- Iಗಿ 2ಎ, ದಿನಾಂಕ 22.6.1967, ಪುಟ 93ರಲ್ಲಿ ಪ್ರಕಟಿಸಲಾಗಿದೆ).

1969ರ 1

[ಕರ್ನಾಟಕ ಅಧಿನಿಯಮ]1

ಸಂ. 1

(1969ರ ಜನವರಿ ಇಪ್ಪತ್ಮೂರನೇ ದಿನದಂದು 1

[ಕರ್ನಾಟಕ ರಾಜಪತ್ರ]1 ದಲ್ಲಿ ಮೊದಲು ಪ್ರಕಟವಾಗಿದೆ)

[ಕರ್ನಾಟಕ]1

ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1968

(1969ರ ಜನವರಿ ಹತ್ತನೇ ದಿನದಂದು ರಾಜ್ಯಪಾಲರ ಒಪ್ಪಿಗೆಯನ್ನು ಪಡೆದಿದೆ)

[ಕರ್ನಾಟಕ ರಾಜ್ಯ]1

ದಲ್ಲಿ ಬೆಳೆಗಳು, ಸಸ್ಯಗಳು ಅಥವಾ ಮರಗಳಿಗೆ ಅಪಾಯಕಾರಿ ಕೀಟಗಳು, ಸಸ್ಯರೋಗಗಳು ಮತ್ತು

ಹಾನಿಕರ ಕಳೆಗಳು ಕಾಣಿಸಿಕೊಳ್ಳುವುದನ್ನು, ಹರಡುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ತಡೆಗಟ್ಟುವ ಅಧಿನಿಯಮ.

[ಕರ್ನಾಟಕ ರಾಜ್ಯ]

1. ದೊಳಗೆ ಬೆಳೆಗಳು, ಸಸ್ಯಗಳು ಅಥವಾ ಮರಗಳಿಗೆ ಅಪಾಯಕಾರಿಯಾದ ಅಥವಾ ನೀರು

ಸರಬರಾಜಿಗೆ ಅಥವಾ ಜಲಮಾರ್ಗಗಳಿಗೆ ತಡೆಯೊಡ್ಡುವ ಕೀಟಗಳು, ಸಸ್ಯ ರೋಗಗಳು ಮತ್ತು ಹಾನಿಕರ ಕಳೆಗಳು

ಕಾಣಿಸಿಕೊಳ್ಳುವುದನ್ನು, ಹರಡುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ತಡೆಗಟ್ಟಲು ಮತ್ತು ಅದಕ್ಕೆ ಸಂಬಂಧಿಸಿದ

ಇತರ ವಿಷಯಗಳಿಗಾಗಿ ಉಪಬಂಧ ಕಲ್ಪಿಸಲು ಕ್ರಮಗಳನ್ನು ಕೈಗೊಳ್ಳುವುದು ವಿಹಿತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಹತ್ತೊಂಬತ್ತನೇ ವರ್ಷದಲ್ಲಿ 1

[ಕರ್ನಾಟಕ]

1 ರಾಜ್ಯ ವಿಧಾನ ಮಂಡಲದಿಂದ ಈ

ಕೆಳಕಂಡಂತೆ ಅಧಿನಿಯಮಿತವಾಗತಕ್ಕದ್ದು:-

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.-

(1) ಈ ಅಧಿನಿಯಮವನ್ನು [ಕರ್ನಾಟಕ] ಕøಷಿ ಸಂಬಂಧಿ ಕೀಟಗಳ

ಮತ್ತು ರೋಗಗಳ ಅಧಿನಿಯಮ, 1968 ಎಂದು ಕರೆಯತಕ್ಕದ್ದು.

(2) ಇದು ಇಡೀ 1

[ಕರ್ನಾಟಕ ರಾಜ್ಯ]

1 ಕ್ಕೆ ವ್ಯಾಪ್ತವಾಗತಕ್ಕದ್ದು.

(3) ಇದು, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ 2

[ದಿನಾಂಕ]

2 ದಂದು

ಜಾರಿಗೆ ಬರತಕ್ಕದ್ದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

2. ಅಧಿನಿಯಮವು 13.10.1971 ರಿಂದ ಅಧಿಸೂಚನೆಯ ಮೂಲಕ ಜಾರಿಗೆ ಬಂದಿದೆ. ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯ ಭಾಗದಲ್ಲಿದೆ.

ಪರಿಭಾಷೆಗಳು.-

ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(1) ``ಬಾಧಿತ ಪ್ರದೇಶ'' ಎಂದರೆ, 3ನೇ ಪ್ರಕರಣದ ಮೇರೆಗೆ ಅಧಿಸೂಚನೆಯ ಮೂಲಕ ಬಾಧಿತ ಪ್ರದೇಶವೆಂದು

ಘೋಷಿತವಾದ ಯಾವುದೇ ಪ್ರದೇಶ;

(2) ``ಕøಷಿ ನಿರ್ದೇಶಕರು'' ಎಂದರೆ, ರಾಜ್ಯ ಸರ್ಕಾರದಿಂದ ಕøಷಿ ನಿರ್ದೇಶಕರಾಗಿ ನೇಮಕಗೊಂಡ ಯಾರೇ

ಅಧಿಕಾರಿ ಮತ್ತು ಇದು ತೋಟಗಾರಿಕಾ ನಿರ್ದೇಶಕರು ಮತ್ತು ಸಂದರ್ಭಾನುಸಾರ ಕøಷಿ ನಿರ್ದೇಶಕರ ಅಥವಾ ತೋಟಗಾರಿಕಾ

ನಿರ್ದೇಶಕರ ಹುದ್ದೆಯ ಕರ್ತವ್ಯಗಳನ್ನು ತತ್ಕಾಲದಲ್ಲಿ ನಿರ್ವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಒಳಗೊಳ್ಳುತ್ತದೆ;

(3) ``ಕøಷಿ ಉಪ-ನಿರ್ದೇಶಕರು'' ಎಂದರೆ, ಜಿಲ್ಲೆಯ ಕøಷಿ ಉಪ-ನಿರ್ದೇಶಕರು ಅಥವಾ ಜಿಲ್ಲೆಯ ತೋಟಗಾರಿಕಾ

ಅಧಿಕಾರಿಯಾಗಿ ರಾಜ್ಯ ಸರ್ಕಾರದಿಂದ ನೇಮಕಗೊಂಡ ಅಧಿಕಾರಿ ಮತ್ತು ಸಂದರ್ಭಾನುಸಾರ, ಕøಷಿ ಉಪ-ನಿರ್ದೇಶಕರ

ಅಥವಾ ಜಿಲ್ಲಾ ತೋಟಗಾರಿಕಾ ಅಧಿಕಾರಿಯ ಕರ್ತವ್ಯಗಳನ್ನು ತತ್ಕಾಲದಲ್ಲಿ ನಿರ್ವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿ;

(4) ``ಪರಿಶೀಲನಾಧಿಕಾರಿ'' ಎಂದರೆ, 17ನೇ ಪ್ರಕರಣದ ಮೇರೆಗೆ ನೇಮಕಗೊಂಡ ಅಧಿಕಾರಿ;

(5) ``ಅಧಿಸೂಚನೆ'' ಎಂದರೆ, ರಾಜ್ಯಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆ;

(6) ``ಅಧಿಸೂಚಿತ ಪ್ರದೇಶ'' ಎಂದರೆ 3ನೇ ಪ್ರಕರಣದ ಮೇರೆಗೆ ಯಾವ ಪ್ರದೇಶಕ್ಕೆ ಸಂಬಂಧಪಟ್ಟಂತೆ

ಅಧಿಸೂಚನೆಯನ್ನು ಹೊರಡಿಸಲಾಗಿದೆಯೋ ಆ ಪ್ರದೇಶ;

(7) ``ಹಾನಿಕರ ಕಳೆ'' ಎಂದರೆ, 3ನೇ ಪ್ರಕರಣದ ಮೇರೆಗೆ ಅಧಿಸೂಚನೆಯ ಮೂಲಕ ಹಾನಿಕರ ಕಳೆಯೆಂದು

ಘೋಷಿಸಲಾದ ಯಾವುದೇ ಕಳೆ;

(8) ``ಅಧಿಭೋಗದಾರ'' ಎಂದರೆ, ಯಾವುದೇ ಭೂಮಿಯ, ಆವರಣದ ಅಥವಾ ನೀರಿನ ಅಧಿಭೋಗದ ಹಕ್ಕನ್ನು

ತತ್ಕಾಲದಲ್ಲಿ ಹೊಂದಿರುವ ವ್ಯಕ್ತಿ, ಅಥವಾ ಭೂಮಿಯ, ಆವರಣದ ಅಥವಾ ನೀರಿನ ವಾಸ್ತವಿಕ ಅಧಿಭೋಗದಲ್ಲಿರುವ ಅವನ

ಅಧಿಕøತ ಏಜೆಂಟ್ ಅಥವಾ ಯಾರೇ ವ್ಯಕ್ತಿ ಮತ್ತು ಇದು ಅಂಥ ಅಧಿಭೋಗದ ಹಕ್ಕನ್ನು ಹೊಂದಿರುವ ಅಥವಾ ಅಂಥ

ವಾಸ್ತವಿಕ ಅಧಿಭೋಗದಲ್ಲಿರುವ ಸ್ಥಳೀಯ ಪ್ರಾಧಿಕಾರವನ್ನು ಒಳಗೊಳ್ಳುತ್ತದೆ;

(9) ``ಪರೋಪಜೀವಿ'' ಎಂದರೆ, 3ನೇ ಪ್ರಕರಣದ ಮೇರೆಗೆ ಅಧಿಸೂಚನೆಯ ಮೂಲಕ ಪರೋಪಜೀವಿಯೆಂದು

ಘೋಷಿಸಲಾದ ಮತ್ತು ಯಾವುದೇ ಕøಷಿಬೆಳೆ, ಸಸ್ಯ, ಮರ, ಪೆÇದೆ ಅಥವಾ ಗಿಡಮೂಲಿಕೆಯ ಮೇಲೆ ಪೂರ್ಣವಾಗಿ ಅಥವಾ

ಭಾಗಶಃ ಜೀವಿಸುತ್ತಿರುವ ಯಾವುದೇ ಸಸ್ಯ ಅಥವಾ ಪ್ರಾಣಿ;

(10) ``ಕೀಟ'' ಎಂದರೆ, 3ನೇ ಪ್ರಕರಣದ ಮೇರೆಗೆ ಅಧಿಸೂಚನೆಯ ಮೂಲಕ ಕೀಟವೆಂದು ಘೋಷಿತವಾಗಿರುವ

ಯಾವುದೇ ಕ್ರಿಮಿ ಅಥವಾ ಕಶೇರುಕ ಅಥವಾ ಅಕಶೇರುಕ ಪ್ರಾಣಿ;

(11) ``ಸಸ್ಯ'' ಎಂಬುದರಲ್ಲಿ ಎಲ್ಲಾ ತೋಟಗಾರಿಕೆಯ ಅಥವಾ ಕøಷಿ ಬೆಳೆಗಳು, ಮರಗಳು, ಪೆÇದೆಗಳು ಅಥವಾ

ಗಿಡಮೂಲಿಕೆಗಳು ಒಳಗೊಳ್ಳುತ್ತವೆ ಮತ್ತು ಹಣ್ಣು, ಎಲೆ, ಕಾಂಡ, ಬೇರು, ತೊಗಟೆ ಅಥವಾ ಕತ್ತರಿಸಿದ ಸಸ್ಯಭಾಗ ಅಥವಾ

ಅದರ ಯಾವುದೇ ಭಾಗವನ್ನು ಒಳಗೊಳ್ಳುತ್ತದೆ. ಆದರೆ, ಅದು ಬೀಜವನ್ನು ಒಳಗೊಳ್ಳುವುದಿಲ್ಲ:

ಪರಂತು, ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ ಯಾವುದೇ ನಿರ್ದಿಷ್ಟ ಸಸ್ಯದ ಬೀಜವನ್ನು ಸಸ್ಯವೆಂದು

ಭಾವಿಸತಕ್ಕದ್ದೆಂದು ನಿರ್ದೇಶಿಸಬಹುದು;

(12) ``ಸಸ್ಯರೋಗ'' ಎಂದರೆ, ಯಾವುದೇ ಶಿಲೀಂದ್ರ, ಬ್ಯಾಕ್ಟೀರಿಯಲ್, ವೈರಸ್, ಸಸ್ಯಸಂಬಂಧಿ ರೋಗಾಣುಜೀವಿ,

ಪರೋಪಜೀವಿ ರೋಗ ಅಥವಾ 3ನೇ ಪ್ರಕರಣದ ಮೇರೆಗೆ ಅಧಿಸೂಚನೆಯ ಮೂಲಕ ಸಸ್ಯರೋಗವೆಂದು ಘೋಷಿತವಾದ

ಯಾವುದೇ ಇತರ ರೋಗ;

(13) ``ನಿಯಮಿಸಲಾದುದು'' ಎಂದರೆ, ಈ ಅಧಿನಿಯಮದ ಮೇರೆಗೆ ರಚಿಸಿದ ನಿಯಮಗಳ ಮೂಲಕ

ನಿಯಮಿಸಲಾದುದು.


ಕೀಟಗಳು, ಸಸ್ಯರೋಗಗಳು ಅಥವಾ ಹಾನಿಕರ ಕಳೆಗಳಿಂದ ಬಾಧಿತವಾದ ಪ್ರದೇಶಗಳ ಬಗ್ಗೆ ರಾಜ್ಯ ಸರ್ಕಾರದ

ಅಧಿಸೂಚನೆ.-

ಯಾವುದೇ ಪ್ರದೇಶದಲ್ಲಿ ಸಸ್ಯಗಳಿಗೆ ಯಾವುದೇ ರೋಗ, ಕೀಟ, ಪರೋಪಜೀವಿ ಅಥವಾ ಕಳೆಯು

ಅಪಾಯಕಾರಿಯೆಂದು ಮತ್ತು ಅಂಥ ರೋಗ, ಪರೋಪಜೀವಿ, ಕೀಟ ಅಥವಾ ಕಳೆಯನ್ನು ನಿರ್ಮೂಲಮಾಡಲು, ಅಥವಾ

ಅವುಗಳು ಕಾಣಿಸಿಕೊಳ್ಳುವುದನ್ನು, ಹರಡುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವ

ಅಗತ್ಯವಿದೆಯೆಂದು ರಾಜ್ಯ ಸರ್ಕಾರಕ್ಕೆ ಕಂಡುಬಂದಲ್ಲಿ, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ, ಅಂಥ

ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಗಾಗಿ ಅಂಥ ಪ್ರದೇಶವನ್ನು ಬಾಧಿತ ಪ್ರದೇಶವೆಂದು

ಘೋಷಿಸಬಹುದು; ಮತ್ತು ಅಂಥ ಪ್ರದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಂಥ ಅಧಿಸೂಚನೆಯ ಮೂಲಕ,-

(ಎ) ಈ ಅಧಿನಿಯಮದ ಉದ್ದೇಶಗಳಿಗಾಗಿ, ಯಾವುದೇ ರೋಗ, ಪರೋಪಜೀವಿ, ಕೀಟ ಅಥವಾ ಕಳೆಯನ್ನು

ಸಸ್ಯರೋಗ, ಪರೋಪಜೀವಿ, ಕೀಟ ಅಥವಾ ಹಾನಿಕರ ಕಳೆಯೆಂದು ಸಹ ಘೋಷಿಸಬಹುದು;

(ಬಿ) ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಯಾವುದೇ ಸಸ್ಯ, ಮಣ್ಣು ಅಥವಾ ಗೊಬ್ಬರವನ್ನು ಸಾಗಿಸುವುದು

ಅಥವಾ ಅಲ್ಲಿಂದ ಅದನ್ನು ತೆಗೆದುಹಾಕುವುದನ್ನು ನಿಷೇಧಿಸಬಹುದು ಅಥವಾ ನಿರ್ಬಂಧಿಸಬಹುದು ಅಥವಾ ಅಂಥ ಕೀಟ,

ರೋಗ ಅಥವಾ ಕಳೆಯ ಸಂಬಂಧದಲ್ಲಿ ಅವಶ್ಯವಿರಬಹುದಾದಂಥ ಇತರ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ಸಹ

ನಿಯಮಿಸಬಹುದು;

(ಸಿ) ಯಾವುದೇ ಹಾನಿಕರ ಕಳೆ, ಪರೋಪಜೀವಿ, ಕೀಟ ಅಥವಾ ಸಸ್ಯರೋಗವು ಕಾಣಿಸಿಕೊಳ್ಳುವುದನ್ನು,

ಹರಡುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ನಿವಾರಿಸಲು, ನಾಶಪಡಿಸಲು ಅಥವಾ ತಡೆಗಟ್ಟಲು

ನಿರ್ದಿಷ್ಟಪಡಿಸಬಹುದಾದಂಥ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ಕೈಗೊಳ್ಳತಕ್ಕದ್ದೆಂದು ಸಹ ನಿರ್ದೇಶಿಸಬಹುದು;

(ಡಿ) ನಿರ್ದಿಷ್ಟಪಡಿಸಲಾದ ಪ್ರದೇಶದಲ್ಲಿ ಇತರ ಬೆಳೆಗಳಿಗೆ ಹಾನಿಯುಂಟುಮಾಡುವ ಸಂಭವವಿರುವ, ಯಾವುದೇ ಸಸ್ಯ

ನೆಡುವುದನ್ನು ಅಥವಾ ಬೆಳೆಯುವುದನ್ನು ಸಹ ನಿರ್ದಿಷ್ಟಪಡಿಸಬಹುದಾದ ಪ್ರದೇಶದೊಳಗೆ ನಿಷೇಧಿಸಬಹುದು.


ನಿರ್ದೇಶನಗಳನ್ನು ನೀಡುವ ಅಧಿಕಾರ.-

(1) 3ನೇ ಪ್ರಕರಣದ ಮೇರೆಗೆ ಅಧಿಸೂಚನೆ ಹೊರಡಿಸಿದ ಮೇಲೆ ಕøಷಿ ಉಪ-ನಿರ್ದೇಶಕರು ನೋಟೀಸಿನ ಮೂಲಕ,-

(i) ಯಾವುದೇ ಸಸ್ಯರೋಗ, ಕೀಟ, ಪರೋಪಜೀವಿ ಅಥವಾ ಹಾನಿಕರ ಕಳೆಯು ಕಾಣಿಸಿಕೊಳ್ಳುವುದನ್ನು,

ಹರಡುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ನಿವಾರಿಸಲು, ನಾಶಪಡಿಸಲು ಅಥವಾ ತಡೆಗಟ್ಟಲು

ನೋಟೀಸಿನಲ್ಲಿ ತಾನು ನಿರ್ದಿಷ್ಟಪಡಿಸಬಹುದಾದಂಥ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು (ರೋಗ

ಪೀಡಿತವಾದ ಅಥವಾ ರೋಗ ತಗಲುವ ಸಂಭವವಿರುವ ಸಸ್ಯಗಳನ್ನು ಕಿತ್ತುಹಾಕುವುದು ಅಥವಾ ನಾಶ

ಪಡಿಸುವುದೂ ಸೇರಿದಂತೆ) ಜಾರಿಗೆ ತರುವಂತೆ ಬಾಧಿತ ಪ್ರದೇಶದೊಳಗಿನ ಪ್ರತಿಯೊಬ್ಬ

ಅಧಿಭೋಗದಾರನಿಗೆ ನಿರ್ದೇಶನ ನೀಡಬಹುದು.

(ii) ಹದಿನೆಂಟು ವರ್ಷಗಳಿಗಿಂತ ಕಡಿಮೆ ವಯಸ್ಸಿನವನಲ್ಲದ ಮತ್ತು ಸದರಿ ಪ್ರದೇಶದೊಳಗೆ ವಾಸಿಸುತ್ತಿರುವ

ಯಾರೇ ವ್ಯಕ್ತಿಯನ್ನು (1)ನೇ ಖಂಡದಲ್ಲಿ ಉಲ್ಲೇಖಿಸಲಾದ ಕ್ರಮಗಳನ್ನು ಜಾರಿಗೆ ತರಲು ನೋಟೀಸಿನಲ್ಲಿ

ನಿರ್ದಿಷ್ಟಪಡಿಸಬಹುದಾದಂಥ ನೆರವನ್ನು ನೀಡುವಂತೆ ಕೋರಬಹುದು:

ಪರಂತು,-

(ಎ) ಒಮ್ಮೆಗೆ ಏಳು ದಿನಗಳನ್ನು ಮಿÁರುವ ಪೂರ್ಣಾವಧಿ ಸೇವೆಯನ್ನು ಸಲ್ಲಿಸಲು ಅಧಿಭೋಗದಾರನಲ್ಲದ

ಯಾರೇ ವ್ಯಕ್ತಿಯನ್ನು ಕೋರತಕ್ಕದ್ದಲ್ಲ ಮತ್ತು ಯಾರೇ ವ್ಯಕ್ತಿಯು ಈಗಾಗಲೇ ಅಂಥ ಸೇವೆಯನ್ನು ಸಲ್ಲಿಸಿದ್ದರೆ, ಆ

ತರುವಾಯ ಪೂರ್ಣಾವಧಿ ಸೇವೆ ಸಲ್ಲಿಸುವುದಕ್ಕೆ ಅವನನ್ನು ಕೋರುವ ಮೊದಲು ತೊಂಭತ್ತು ದಿನಗಳಿಗಿಂತ

ಕಡಿಮೆಯಿಲ್ಲದ ಮಧ್ಯಂತರವಿರತಕ್ಕದ್ದು; ಮತ್ತು

(ಬಿ) ವøದ್ಧಾಪ್ಯದ ಕಾರಣದಿಂದಾಗಿ, ದೈಹಿಕ ಅಸಮರ್ಥತೆ ಅಥವಾ ಇತರ ಯಾವುದೇ ಯುಕ್ತ

ಕಾರಣದಿಂದಾಗಿ, ನೆರವು ನೀಡಲು ಅಸಮರ್ಥನಾಗಿರುವ ಅಥವಾ ಸಹಾಯವನ್ನು ನೀಡುವ ಉದ್ದೇಶಕ್ಕಾಗಿ

ಇರಬೇಕೆಂದು ಅಗತ್ಯಪಡಿಸಲಾದ ಸ್ಥಳದಿಂದ 8 ಕಿ.ವಿೂ. ಗಿಂತ ಹೆಚ್ಚು ದೂರದಲ್ಲಿ ವಾಸಿಸುತ್ತಿರುವ ಯಾರೇ

ವ್ಯಕ್ತಿಯನ್ನು ಅಂಥ ನೆರವು ನೀಡುವಂತೆ ಕೋರತಕ್ಕದ್ದಲ್ಲ; ಮತ್ತು

(iii) (i)ನೇ ಖಂಡದಲ್ಲಿ ಉಲ್ಲೇಖಿಸಲಾದ ಕ್ರಮಗಳನ್ನು ಯಾವ ಪ್ರದೇಶದೊಳಗೆ ಮತ್ತು ಯಾವ ಅವಧಿಯೊಳಗೆ

ಕಾರ್ಯಗತಗೊಳಿಸಬೇಕೆಂದು ನಿರ್ದಿಷ್ಟಪಡಿಸಬಹುದು.

(2) (1)ನೇ ಉಪ-ಪ್ರಕರಣದ (i)ನೇ ಖಂಡದ ಮೇರೆಗೆ ಪ್ರತಿಯೊಬ್ಬ ಅಧಿಭೋಗದಾರನಿಗೆ ಅಥವಾ ಸದರಿ

ಉಪ-ಪ್ರಕರಣದ (ii)ನೇ ಖಂಡದ ಮೇರೆಗೆ ಯಾರ ನೆರವನ್ನು ಅಗತ್ಯಪಡಿಸಲಾಗಿದೆಯೋ ಆ ಪ್ರತಿಯೊಬ್ಬ ಇತರ ವ್ಯಕ್ತಿಗೆ

ತಿಳಿಸುವುದು ಅಗತ್ಯವಾಗಿರತಕ್ಕದ್ದಲ್ಲ ಮತ್ತು ಆ ಪ್ರದೇಶ, ಗ್ರಾಮ ಅಥವಾ ಸ್ಥಳದಲ್ಲಿ ಡಂಗುರ ಹೊಡೆಸುವ ಮೂಲಕ ಅಥವಾ

ಇತರ ರೂಢಿಗತ ಪದ್ಧತಿಯ ಮೂಲಕ ಮಾಡಿದ ಘೋಷಣೆಯು ಆ ಪ್ರದೇಶ, ಗ್ರಾಮ ಅಥವಾ ಸ್ಥಳದಲ್ಲಿ ವಾಸಿಸುತ್ತಿರುವ

ಎಲ್ಲಾ ಬಾಧಿತ ವ್ಯಕ್ತಿಗಳಿಗೆ ನೀಡಿದ ಸಾಕಷ್ಟು ತಿಳಿವಳಿಕೆಯೆಂದು ಭಾವಿಸತಕ್ಕದ್ದು.


4ನೇ ಪ್ರಕರಣದ ಮೇರೆಗೆ ನೋಟೀಸು ಜಾರಿಯಾದ ಮೇಲೆ ಅಧಿಭೋಗದಾರನ ಕರ್ತವ್ಯಗಳು.-

4ನೇ ಪ್ರಕರಣದ

ಮೇರೆಗೆ ನೋಟೀಸು ಜಾರಿಯಾದ ಮೇಲೆ,-

(i) ಅಂಥ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು

ಕಾರ್ಯಗತಗೊಳಿಸುವುದು ಬಾಧಿತ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಅಧಿಭೋಗದಾರನ

ಕರ್ತವ್ಯವಾಗಿರತಕ್ಕದ್ದು; ಮತ್ತು

(ii) ನೋಟೀಸಿನಲ್ಲಿ ನಿರ್ದಿಷ್ಟಪಡಿಸಿರುವಂಥ ರೀತಿಯಲ್ಲಿ ನೆರವು ನೀಡುವುದು ಸದರಿ ಪ್ರದೇಶದೊಳಗೆ ವಾಸಿಸುವ

ಪ್ರತಿಯೊಬ್ಬನ ಕರ್ತವ್ಯವಾಗಿರತಕ್ಕದ್ದು.


ಭೂಮಿ ಅಥವಾ ಆವರಣಗಳನ್ನು ಪ್ರವೇಶಿಸಲು ಅಧಿಕಾರ.-

ಪರಿಶೀಲನಾ ಅಧಿಕಾರಿಯು, ಅಧಿಭೋಗದಾರ ಅಥವಾ ಪ್ರಭಾರದಲ್ಲಿರುವ ಇತರ ವ್ಯಕ್ತಿಗೆ ಯುಕ್ತ ನೋಟೀಸನ್ನು ನೀಡಿದ ತರುವಾಯ, ಅಧಿಸೂಚಿತ ಪ್ರದೇಶದಲ್ಲಿನ ಯಾವುದೇ ಭೂಮಿ, ನೀರು ಅಥವಾ ಆವರಣದೊಳಗೆ,-

(i) ಅಂಥ ಭೂಮಿ, ನೀರು ಅಥವಾ ಆವರಣದ ಮೇಲೆ ಯಾವುದೇ ಹಾನಿಕರ ಕಳೆ, ಪರೋಪಜೀವಿ, ಕೀಟ

ಅಥವಾ ಸಸ್ಯರೋಗ ಇವೆಯೇ ಅಥವಾ ಇಲ್ಲವೇ ಎಂಬುದನ್ನು; ಮತ್ತು

(ii) ಕಾರ್ಯಗತಗೊಳಿಸಬೇಕೆಂದು ನಿರ್ದೇಶಿಸಲಾದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು

ಕಾರ್ಯಗತಗೊಳಿಸಲಾಗಿದೆಯೆ ಅಥವಾ ಇಲ್ಲವೇ

- ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶಕ್ಕಾಗಿ ಪ್ರವೇಶಿಸಬಹುದು.


ಸಸ್ಯಗಳನ್ನು ಕಿತ್ತುಹಾಕುವುದು ಅಥವಾ ನಾಶಗೊಳಿಸುವುದೂ ಸೇರಿದಂತೆ ಕೀಟಗಳು ಅಥವಾ ಸಸ್ಯರೋಗಗಳನ್ನು ನಿರ್ಮೂಲನಗೊಳಿಸಲು ನಿಯಮಿಸಲಾದ ಕ್ರಮಗಳಿರುವಲ್ಲಿ ಪ್ರಕ್ರಿಯೆ.-

3ನೇ ಪ್ರಕರಣದ ಮೇರೆಗಿನ ಅಧಿಸೂಚನೆಯ ಮೂಲಕ

ಕಾರ್ಯಗತಗೊಳಿಸಬೇಕೆಂದು ನಿರ್ದೇಶಿಸಲಾದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳಲ್ಲಿ, ಯಾವುದೇ ಕೀಟಗಳು ಅಥವಾ

ಸಸ್ಯರೋಗಗಳು ಕಾಣಿಸಿಕೊಳ್ಳುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ನಿವಾರಿಸುವ ಅಥವಾ ತಡೆಗಟ್ಟುವ ದøಷ್ಟಿಯಿಂದ

ಯಾವುದೇ ಸಸ್ಯವನ್ನು ಕಿತ್ತುಹಾಕುವುದು ಅಥವಾ ನಾಶಗೊಳಿಸುವುದೂ ಸೇರಿರುವಲ್ಲಿ ಅಂಥ ಅಧಿಸೂಚನೆಯಲ್ಲಿ

ನಿರ್ದಿಷ್ಟಪಡಿಸಲಾದ ದಿನಾಂಕದಂದು ಅಥವಾ ಅದಕ್ಕೂ ಮುಂಚೆ ಅಂಥ ಸಸ್ಯವನ್ನು ಕಿತ್ತುಹಾಕಲು ಅಥವಾ ನಾಶಗೊಳಿಸಲು

ತಪ್ಪುವ ಯಾರೇ ಅಧಿಭೋಗದಾರನನ್ನು ಈ ಅಧಿನಿಯಮದ ಮೇರೆಗೆ ಅಪರಾಧ ಮಾಡಿದ್ದಾನೆಂದು ಭಾವಿಸತಕ್ಕದ್ದು ಮತ್ತು

ಅಂಥ ಸಸ್ಯವನ್ನು ಕಿತ್ತುಹಾಕುವ ಅಥವಾ ನಾಶಪಡಿಸುವ ಕಾರ್ಯವನ್ನು ಪರಿಶೀಲನಾ ಅಧಿಕಾರಿಯು ಮಾಡಬಹುದು ಅಥವಾ

ಅವನ ಮೇಲ್ವಿಚಾರಣೆಯಲ್ಲಿ ಅದನ್ನು ಕಾರ್ಯಗತಗೊಳಿಸಬಹುದು.


ಪರಿಹಾರ ಅಥವಾ ಪ್ರತಿಬಂಧಕ ಕ್ರಮ ಕೈಗೊಳ್ಳುವುದಕ್ಕೆ ಅಧಿಭೋಗದಾರನಿಗೆ ನೋಟೀಸು.-

(1) ಯಾವುದೇ ಭೂಮಿ, ನೀರು ಅಥವಾ ಆವರಣವನ್ನು ಪರಿಶೀಲನೆ ಮಾಡಿದ ತರುವಾಯ, 3ನೇ ಪ್ರಕರಣದ ಮೇರೆಗೆ ನಿರ್ದಿಷ್ಟಪಡಿಸಿದ

ಪ್ರತಿಬಂಧ ಅಥವಾ ಪರಿಹಾರ ಕ್ರಮಗಳನ್ನು ನಿರ್ದೇಶಿಸಲಾದಂತೆ ಕಾರ್ಯಗತಗೊಳಿಸಲಾಗಿಲ್ಲವೆಂದು ಪರಿಶೀಲನಾಧಿಕಾರಿಗೆ

ಕಂಡುಬಂದಲ್ಲಿ, ಪರಿಶೀಲನಾಧಿಕಾರಿಯು, ನಿಯಮಿಸಲಾದ ಅಧಿಕಾರಿಯ ಯಾವುದೇ ಸಾಮಾನ್ಯ ಅಥವಾ ವಿಶೇಷ ಆದೇಶಕ್ಕೆ

ಒಳಪಟ್ಟು ಅಂಥ ನೋಟೀಸಿನಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಕಾಲದೊಳಗೆ, ನಿರ್ದೇಶಿಸಲಾದ ಪ್ರತಿಬಂಧಕ ಅಥವಾ

ಪರಿಹಾರ ಕ್ರಮಗಳನ್ನು ಕಾರ್ಯಗತಗೊಳಿಸುವಂತೆ ಲಿಖಿತ ನೋಟೀಸಿನ ಮೂಲಕ ಅಧಿಭೋಗದಾರನಿಗೆ ತಿಳಿಸಬಹುದು.

(2) ಅಧಿಭೋಗದಾರನು, ತನಗೆ ಅಂಥ ನೋಟೀಸು ಜಾರಿಯಾದ 7 ದಿನಗಳೊಳಗೆ ನಿಯಮಿಸಲಾದ ಅಧಿಕಾರಿಗೆ

ಅಪೀಲು ಸಲ್ಲಿಸಬಹುದು.

(3) (2)ನೇ ಉಪ-ಪ್ರಕರಣದ ಮೇರೆಗಿನ ಅಪೀಲನ್ನು ಸ್ವೀಕರಿಸಿದ ಮೇಲೆ ನಿಯಮಿಸಲಾದ ಅಧಿಕಾರಿಯು,

ಅಪೀಲುದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟ ತರುವಾಯ, ಅದರ ಮೇಲೆ ತಾನು ಸೂಕ್ತವೆಂದು

ಭಾವಿಸಬಹುದಾದಂಥ ಆದೇಶವನ್ನು ಹೊರಡಿಸತಕ್ಕದ್ದು ಮತ್ತು ಅಂಥ ಆದೇಶದ ಕಾರಣದಿಂದಾಗಿ ಅಪೀಲುದಾರನು

ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ಕಾರ್ಯಗತಗೊಳಿಸಬೇಕಾಗಿರುವಲ್ಲಿ, ಅಂಥ ಕ್ರಮಗಳನ್ನು ಯಾವ

ಸಮಯದೊಳಗೆ ಕಾರ್ಯಗತಗೊಳಿಸತಕ್ಕದ್ದೆಂಬುದನ್ನು ಸಹ ಆ ಆದೇಶದಲ್ಲಿ ನಿರ್ದಿಷ್ಟಪಡಿಸತಕ್ಕದ್ದು.

(4) 3ನೇ ಪ್ರಕರಣದ ಮೇರೆಗೆ ಹೊರಡಿಸಿದ ಆದೇಶವು ಅಂತಿಮ ಮತ್ತು ನಿರ್ಣಾಯಕ ವಾಗಿರತಕ್ಕದ್ದು ಮತ್ತು

ಅದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸತಕ್ಕದ್ದಲ್ಲ.


ಅಧಿಭೋಗದಾರನು ತನ್ನ ಮೇಲೆ ಜಾರಿಮಾಡಿದ ನೋಟೀಸನ್ನು ಪಾಲಿಸಲು ತಪ್ಪುವುದು ಒಂದು ಅಪರಾಧ ಮಾಡಿದಂತಾಗುವುದು.-

8ನೇ ಪ್ರಕರಣದ ಮೇರೆಗೆ ಯಾವ ಅಧಿಭೋಗದಾರನ ಮೇಲೆ ನೋಟೀಸನ್ನು

ಜಾರಿಮಾಡಲಾಗಿದೆಯೋ, ಆ ಯಾರೇ ಅಧಿಭೋಗದಾರನು ಪರಿಶೀಲನಾ ಅಧಿಕಾರಿಯು ನಿರ್ದಿಷ್ಟಪಡಿಸಿದ ಕಾಲದೊಳಗೆ

ನೋಟೀಸನ್ನು ಪಾಲಿಸಲು ತಪ್ಪಿದರೆ ಅಥವಾ ಅಪೀಲನ್ನು ಸಲ್ಲಿಸಿದ್ದು, ನಿರ್ದಿಷ್ಟಪಡಿಸಿದ ಕಾಲದೊಳಗೆ ಪ್ರತಿಬಂಧಕ ಅಥವಾ

ಪರಿಹಾರ ಕ್ರಮಗಳನ್ನು ಪಾಲಿಸುವಂತೆ ಅಪೀಲು ಆದೇಶವು ಅಗತ್ಯಪಡಿಸಿರುವ ಸಂದರ್ಭಗಳಲ್ಲಿ, ಅಂಥ ಕಾಲದೊಳಗೆ ಅಂಥ

ಕ್ರಮಗಳನ್ನು ಕಾರ್ಯಗತಗೊಳಿಸಲು ತಪ್ಪಿದರೆ, ಈ ಅಧಿನಿಯಮದ ಮೇರೆಗೆ ಅವನು ಅಪರಾಧ ಮಾಡಿದ್ದಾನೆಂದು

ಭಾವಿಸತಕ್ಕದ್ದು ಮತ್ತು ಕಾರ್ಯಗತಗೊಳಿಸಬೇಕೆಂದು ನಿರ್ದೇಶಿಸಲಾದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು

ಪರಿಶೀಲನಾಧಿಕಾರಿಯು ತಾನೇ ಅಥವಾ ತನ್ನ ಮೇಲ್ವಿಚಾರಣೆಯಲ್ಲಿ ಕಾರ್ಯಗತಗೊಳಿಸಬಹುದು.


ವೆಚ್ಚಗಳ ವಸೂಲಿ.-

ಪರಿಶೀಲನಾಧಿಕಾರಿಯು ತಾನೇ ಅಥವಾ ತನ್ನ ಮೇಲ್ವಿಚಾರಣೆಯಲ್ಲಿ, 7ನೇ ಪ್ರಕರಣದ

ಅಥವಾ 9ನೇ ಪ್ರಕರಣದ ಮೇರೆಗೆ ಕಾರ್ಯಗತಗೊಳಿಸಿದ ಯಾವುದೇ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳ ವೆಚ್ಚವನ್ನು

ಅಧಿಭೋಗದಾರನಿಂದ ಭೂಕಂದಾಯದ ಬಾಕಿಯಂತೆ ವಸೂಲುಮಾಡತಕ್ಕದ್ದು.


ವೆಚ್ಚಗಳ ವಿರುದ್ಧ ಅಪೀಲು.-

(1) 10ನೇ ಪ್ರಕರಣದಲ್ಲಿ ಉಲ್ಲೇಖಿಸಲಾದ ಯಾರೇ ಅಧಿಭೋಗದಾರನು,-

(i) ಆ ವೆಚ್ಚಗಳಲ್ಲಿ ಕಾರ್ಮಿಕ, ಸಾಮಗ್ರಿ ಅಥವಾ ಉಪಕರಣಗಳ ಬಳಕೆಯ ವೆಚ್ಚಗಳನ್ನು ಹೊರತುಪಡಿಸಿದ

ಇತರ ಬಾಬುಗಳ ವೆಚ್ಚಗಳು ಒಳಗೊಂಡಿದೆ;

(ii) ಕಾರ್ಮಿಕ, ಸಾಮಗ್ರಿಯ ಅಥವಾ ಉಪಕರಣಗಳ ಬಳಕೆಯ ವೆಚ್ಚಗಳು ಅನುಚಿತವಾಗಿ ಹೆಚ್ಚಾಗಿವೆ ಅಥವಾ

ವಾಸ್ತವಿಕವಾಗಿ ಮಾಡಿದ ಖರ್ಚಿಗಿಂತ ಹೆಚ್ಚಾಗಿದೆ;

- ಎಂಬ ಕಾರಣಗಳ ಮೇಲೆ ಅಂಥ ವೆಚ್ಚಗಳನ್ನು ಸಂದಾಯ ಮಾಡುವಂತೆ ಮೊದಲು ತಗಾದೆಮಾಡಿದ

ದಿನಾಂಕದಿಂದ ಮೂವತ್ತು ದಿನಗಳೊಳಗೆ ನಿಯಮಿಸಲಾದ ಅಧಿಕಾರಿಗೆ ಅಪೀಲು ಸಲ್ಲಿಸಬಹುದು.

(2) (1)ನೇ ಉಪ-ಪ್ರಕರಣದ ಮೇರೆಗೆ ಅಪೀಲನ್ನು ಸ್ವೀಕರಿಸಿದ ಮೇಲೆ, ನಿಯಮಿಸಲಾದ ಅಧಿಕಾರಿಯು

ಅಧಿಭೋಗದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ಕೊಟ್ಟ ತರುವಾಯ, ಅದರ ಮೇಲೆ ತಾನು

ಸೂಕ್ತವೆಂದು ಭಾವಿಸಬಹುದಾದಂಥ ಆದೇಶವನ್ನು ಹೊರಡಿಸಬಹುದು.

(3) (2)ನೇ ಉಪ-ಪ್ರಕರಣದ ಮೇರೆಗೆ ಹೊರಡಿಸಿದ ಆದೇಶವು ಅಂತಿಮ ಮತ್ತು ನಿರ್ಣಾಯಕವಾಗಿರತಕ್ಕದ್ದು ಮತ್ತು

ಅದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸತಕ್ಕದ್ದಲ್ಲ.


ಕ್ರಿಮಿ, ಕೀಟಗಳು, ಸಸ್ಯರೋಗಗಳು ಅಥವಾ ಹಾನಿಕರ ಕಳೆಗಳ ಬಗ್ಗೆ ವರದಿ ಮಾಡುವುದು ಗ್ರಾಮಾಧಿಕಾರಿಗಳ ಹೊಣೆ.-

ಕ್ರಿಮಿಕೀಟ, ಸಸ್ಯರೋಗ ಅಥವಾ ಹಾನಿಕರ ಕಳೆಯನ್ನು ಹೋಲುವ ಕೀಟಗಳು, ರೋಗಗಳು ಅಥವಾ ಹಾನಿಕರ

ಕಳೆಯು ಯಾವ ಅಧಿಸೂಚಿತ ಪ್ರದೇಶದ ಪರಿಮಿತಿಯೊಳಗೆ ಕಂಡುಬರುವುದೋ ಆ ಅಧಿಸೂಚಿತ ಪ್ರದೇಶದ ಪಕ್ಕದಲ್ಲಿರುವ

ಗ್ರಾಮದ ಪ್ರತಿಯೊಬ್ಬ ಗ್ರಾಮಾಧಿಕಾರಿಯು ಈ ಸಂಬಂಧ ರಾಜ್ಯ ಸರ್ಕಾರವು, ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದಂಥ

ಅಧಿಕಾರಿಗಳಿಗೆ ಅದನ್ನು ವರದಿ ಮಾಡತಕ್ಕದ್ದು.

ವಿವರಣೆ.- ಈ ಪ್ರಕರಣದ ಉದ್ದೇಶಗಳಿಗಾಗಿ, ``ಗ್ರಾಮಾಧಿಕಾರಿ'' ಎಂಬ ಪದವು ಗ್ರಾಮಲೆಕ್ಕಿಗ, ಗ್ರಾಮ ಪಂಚಾಯಿತಿ

ಕಾರ್ಯದರ್ಶಿ ಮತ್ತು ಗ್ರಾಮ ಸೇವಕ ಇವರನ್ನು ಒಳಗೊಳ್ಳುತ್ತದೆ.


ದಂಡಗಳು.-

(1) 3ನೇ ಪ್ರಕರಣದ ಮೇರೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಿದ ಯಾವುದೇ ನಿಷೇಧ,

ನಿರ್ಬಂಧ ಅಥವಾ ನಿರ್ದೇಶನವನ್ನು ಉಲ್ಲಂಘಿಸುವ ಯಾರೇ ಆಗಲಿ ಅಪರಾಧ ನಿರ್ಣಯವಾದ ಮೇಲೆ ಐವತ್ತು

ರೂಪಾಯಿಗಳವರೆಗಿನ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.

(2) ಈ ಅಧಿನಿಯಮದ 7ನೇ ಪ್ರಕರಣ ಅಥವಾ 9ನೇ ಪ್ರಕರಣದ ಮೇರೆಗೆ ಅಪರಾಧ ಮಾಡಿದ್ದಾನೆಂದು

ಭಾವಿಸಲಾಗುವ ಯಾರೇ ಅಧಿಭೋಗದಾರನನ್ನು, ಅಪರಾಧ ನಿರ್ಣಯವಾದ ಮೇಲೆ, ಐವತ್ತು ರೂಪಾಯಿಗಳವರೆಗಿನ

ಜುಲ್ಮಾನೆಯಿಂದ ದಂಡಿಸತಕ್ಕದ್ದು.

(3) 20ನೇ ಪ್ರಕರಣದ ಮೇರೆಗೆ ರಚಿಸಿದ ಯಾವುದೇ ನಿಯಮದ ಉಪಬಂಧಗಳನ್ನು ಉಲ್ಲಂಘಿಸುವ ಯಾರೇ

ಆಗಲಿ ಅಪರಾಧ ನಿರ್ಣಯವಾದ ಮೇಲೆ ಐವತ್ತು ರೂಪಾಯಿವರೆಗಿನ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.

(4) (ಎ) ಈ ಅಧಿನಿಯಮದ ಉಪಬಂಧಗಳ ಮೂಲಕ ಅಥವಾ ಅದಕ್ಕೆ ಅನುಸಾರವಾಗಿ ತನಗೆ ಪ್ರದತ್ತವಾದ

ಯಾವುವೇ ಅಧಿಕಾರಗಳನ್ನು ಚಲಾಯಿಸುವ ಅಥವಾ ವಿಧಿಸಲಾದ ಯಾವುವೇ ಕರ್ತವ್ಯಗಳನ್ನು ನಿರ್ವಹಿಸುವ ಅಥವಾ ಅನ್ಯಥಾ

ಈ ಅಧಿನಿಯಮದ ಉಪಬಂಧಗಳ ಮೇರೆಗೆ ಅಥವಾ ಅದರ ಮೇರೆಗೆ ಮಾಡಿದ ಅಥವಾ ನೀಡಿದ ಯಾವುವೇ ಆದೇಶಗಳು

ಅಥವಾ ನಿರ್ದೇಶನಗಳ ಮೇರೆಗೆ ಕೈಗೊಂಡ ಅಥವಾ ಕೈಗೊಳ್ಳಬೇಕಾದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳಿಗೆ

ಸಂಬಂಧಿಸಿದ ಯಾವುದೇ ಪ್ರಕಾರ್ಯಗಳನ್ನು ನಿರ್ವಹಿಸುವ ಯಾರೇ ಅಧಿಕಾರಿ ಅಥವಾ ವ್ಯಕ್ತಿಗೆ; ಅಥವಾ

(ಬಿ) ಮೇಲೆ ಹೇಳಿದ ಯಾರೇ ಅಧಿಕಾರಿಯ ಅಥವಾ ವ್ಯಕ್ತಿಯ ಆದೇಶಗಳನ್ನು ಅಥವಾ ನಿರ್ದೇಶನಗಳನ್ನು

ಕಾರ್ಯಗತಗೊಳಿಸುವ ಯಾರೇ ವ್ಯಕ್ತಿಗೆ ಅಥವಾ ಅನ್ಯಥಾ ಈ ಅಧಿನಿಯಮದ ಅಥವಾ ಅದರ ಮೇರೆಗೆ ಮಾಡಿದ ಯಾವುವೇ

ಆದೇಶಗಳನ್ನು ಅಥವಾ ನೀಡಲಾದ ಯಾವುವೇ ನಿರ್ದೇಶನಗಳನ್ನು ಪಾಲಿಸುವಾಗ ತನ್ನ ಕರ್ತವ್ಯಕ್ಕನುಸಾರವಾಗಿ

ಕಾರ್ಯನಿರ್ವಹಿಸುವ ಯಾರೇ ವ್ಯಕ್ತಿಗೆ;

- ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವ ಅಥವಾ ಯಾವುದೇ ಪ್ರತಿರೋಧ ಒಡ್ಡುವ ಅಥವಾ ಅಡಚಣೆ ಮಾಡುವ

ಅಥವಾ ಅನ್ಯಥಾ ಹಸ್ತಕ್ಷೇಪ ಮಾಡುವ ಯಾರೇ ಆಗಲಿ ಅಪರಾಧ ನಿರ್ಣಯವಾದ ಮೇಲೆ ಐದುನೂರು

ರೂಪಾಯಿಗಳವರೆಗಿನ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.


ಅಪರಾಧಗಳ ಸಂಜ್ಞೇಯತೆ-

ಕøಷಿ ಉಪ-ನಿರ್ದೇಶಕರು, ಅಥವಾ ಅವರ ಅಧಿಕಾರ ಪತ್ರದ ಮೇರೆಗೆ ನೀಡಿದ

ದೂರನ್ನುಳಿದು ಯಾವುದೇ ನ್ಯಾಯಾಲಯವು ಈ ಅಧಿನಿಯಮದ ಮೇರೆಗೆ ದಂಡನೀಯವಾದ ಯಾವುದೇ ಅಪರಾಧವನ್ನು

ಸಂಜ್ಞಾನಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ.


ಕಂಪನಿಗಳಿಂದ ಅಪರಾಧಗಳು.-

(1) ಈ ಅಧಿನಿಯಮದ ಮೇರೆಗಿನ ಯಾವುದೇ ಅಪರಾಧವನ್ನು ಮಾಡುವ

ವ್ಯಕ್ತಿಯು ಕಂಪನಿಯಾಗಿದ್ದರೆ, ಆ ಅಪರಾಧವು ನಡೆದ ಕಾಲದಲ್ಲಿ ಆ ಕಂಪನಿಯ ಪ್ರಭಾರವನ್ನು ಹೊಂದಿದ್ದ ಮತ್ತು ಕಂಪನಿಯ

ವ್ಯವಹಾರವನ್ನು ನಡೆಸಲು ಕಂಪನಿಗೆ ಜವಾಬ್ದಾರನಾಗಿದ್ದ ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಕಂಪನಿಯನ್ನು ಸಹ ಆ ಅಪರಾಧದ

ತಪ್ಪಿತಸ್ಥರೆಂದು ಭಾವಿಸತಕ್ಕದ್ದು ಮತ್ತು ತನ್ನ ವಿರುದ್ಧ ವ್ಯವಹರಣೆಗೆ ಅವರು/ಅದು ಗುರಿಯಾಗತಕ್ಕದ್ದು ಮತ್ತು ತದನುಸಾರವಾಗಿ

ದಂಡಿತವಾಗತಕ್ಕದ್ದು:

ಪರಂತು, ಅಂಥ ಯಾವನೇ ವ್ಯಕ್ತಿಯು ತನಗೆ ತಿಳಿಯದಂತೆ ಆ ಅಪರಾಧವು ನಡೆಯಿತೆಂದು ಅಥವಾ ಅಂಥ

ಅಪರಾಧ ನಡೆಯುವುದನ್ನು ತಡೆಗಟ್ಟಲು ಎಲ್ಲಾ ಯುಕ್ತ ಜಾಗರೂಕತೆಯನ್ನು ವಹಿಸಿದ್ದೆನೆಂದು ಅವನು ರುಜುವಾತುಪಡಿಸಿದರೆ,

ಈ ಉಪ-ಪ್ರಕರಣದಲ್ಲಿರುವುದಾವುದೂ ಅವನನ್ನು ಅಂಥ ಯಾವುದೇ ದಂಡನೆಗೆ ಗುರಿಪಡಿಸತಕ್ಕದ್ದಲ್ಲ.

(2) (1)ನೇ ಉಪ-ಪ್ರಕರಣದಲ್ಲಿ ಏನೇ ಇದ್ದರೂ, ಈ ಅಧಿನಿಯಮದ ಮೇರೆಗಿನ ಅಪರಾಧವನ್ನು ಕಂಪನಿಯು

ಮಾಡಿದ್ದರೆ ಮತ್ತು ಆ ಅಪರಾಧವನ್ನು ಯಾರೇ ನಿರ್ದೇಶಕನ, ವ್ಯವಸ್ಥಾಪಕನ, ಕಾರ್ಯದರ್ಶಿಯ ಅಥವಾ ಕಂಪನಿಯ ಇತರ

ಅಧಿಕಾರಿಯ ಸಮ್ಮತಿಯಿಂದ ಅಥವಾ ಪರೋಕ್ಷ ಸಮ್ಮತಿಯಿಂದ ಮಾಡಲಾಗಿದೆಯೆಂದು ರುಜುವಾತಾದರೆ ಅಥವಾ ಅವರ

ಯಾವುದೇ ನಿರ್ಲಕ್ಷ ್ಯದಿಂದ ಸಂಭವಿಸಿತೆಂದು ಆರೋಪಿಸಬಹುದಾದರೆ ಅಂಥ ನಿರ್ದೇಶಕನನ್ನು, ವ್ಯವಸ್ಥಾಪಕನನ್ನು,

ಕಾರ್ಯದರ್ಶಿಯನ್ನು ಅಥವಾ ಇತರ ಅಧಿಕಾರಿಯನ್ನು ಸಹ ಆ ಅಪರಾಧದ ತಪ್ಪಿತಸ್ಥರೆಂದು ಭಾವಿಸತಕ್ಕದ್ದು ಮತ್ತು ಅವರು

ತಮ್ಮ ವಿರುದ್ಧದ ವ್ಯವಹರಣೆಗೆ ಗುರಿಯಾಗತಕ್ಕದ್ದು ಮತ್ತು ತದನುಸಾರವಾಗಿ ದಂಡಿತರಾಗತಕ್ಕದ್ದು.

ವಿವರಣೆ.- ಈ ಪ್ರಕರಣದ ಉದ್ದೇಶಗಳಿಗಾಗಿ,-

(ಎ) ``ಕಂಪನಿ'' ಎಂದರೆ ಒಂದು ನಿಗಮಿತ ನಿಕಾಯ ಮತ್ತು ಅದು ಒಂದು ಫರ್ಮನ್ನು ಅಥವಾ ವ್ಯಕ್ತಿಗಳ ಇತರ

ಸಂಘವನ್ನು ಒಳಗೊಳ್ಳುತ್ತದೆ;

(ಬಿ) ಫರ್ಮಿನ ಸಂಬಂಧದಲ್ಲಿ ``ನಿರ್ದೇಶಕ'' ಎಂದರೆ ಫರ್ಮಿನ ಪಾಲುದಾರ.


ಈ ಅಧಿನಿಯಮದ ಮೇರೆಗೆ ಕೈಗೊಂಡ ಕ್ರಮದ ರಕ್ಷಣೆ.-

ಈ ಅಧಿನಿಯಮದ ಮೇರೆಗೆ ಸದ್ಭಾವನೆಯಿಂದ

ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಯಾವುದೇ ಕಾರ್ಯದ ಸಂಬಂಧದಲ್ಲಿ ಅಥವಾ ಈ ಅಧಿನಿಯಮದ

ಉಪಬಂಧಗಳನ್ನು ಕಾರ್ಯಗತಗೊಳಿಸುವಲ್ಲಿ ಸದ್ಭಾವನೆಯಿಂದ ಕೈಗೊಂಡ ಯಾವುದೇ ಕ್ರಮದಿಂದ ಉಂಟಾದ ಯಾವುದೇ

ಹಾನಿಗಾಗಿ ರಾಜ್ಯ ಸರ್ಕಾರ ಅಥವಾ ಯಾರೇ ಅಧಿಕಾರಿಯ ವಿರುದ್ಧ ಯಾವುದೇ ದಾವೆ, ಪ್ರಾಸಿಕ್ಯೂಷನ್ ಅಥವಾ ಇತರ

ಕಾನೂನು ವ್ಯವಹರಣೆಗಳನ್ನು ಹೂಡಲು ಅವಕಾಶವಿರತಕ್ಕದ್ದಲ್ಲ.


ಪರಿಶೀಲನಾಧಿಕಾರಿಗಳ ನೇಮಕ.-

ಈ ಅಧಿನಿಯಮದ ಮೇರೆಗೆ ಪರಿಶೀಲನಾಧಿಕಾರಿಯ ಅಧಿಕಾರಗಳನ್ನು ಚಲಾಯಿಸುವ ಮತ್ತು ಕರ್ತವ್ಯಗಳನ್ನು ನಿರ್ವಹಿಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಅಧಿಸೂಚನೆ ಹೊರಡಿಸಿ, ಪರಿಶೀಲನಾಧಿಕಾರಿಗಳನ್ನು ನೇಮಿಸಬಹುದು.


ಅಧಿಕಾರಗಳ ಪ್ರತ್ಯಾಯೋಜನೆ.-

ರಾಜ್ಯ ಸರ್ಕಾರವು, ಅಧಿಸೂಚನೆ ಹೊರಡಿಸಿ, ಅಂಥ ಅಧಿಸೂಚನೆಯಲ್ಲಿ

ನಿರ್ದಿಷ್ಟಪಡಿಸಬಹುದಾದಂಥ ನಿರ್ಬಂಧಗಳು ಮತ್ತು ಷರತ್ತುಗಳಿಗೊಳಪಟ್ಟು ಕøಷಿ ನಿರ್ದೇಶಕನಿಗೆ ಅಥವಾ ಯಾರೇ ಇತರ

ಅಧಿಕಾರಿಗೆ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರಕ್ಕೆ 18 ಮತ್ತು 19ನೇ ಪ್ರಕರಣಗಳ ಮೂಲಕ ತನಗೆ ಪ್ರದತ್ತವಾದ

ಅಧಿಕಾರಗಳನ್ನು ಹೊರತುಪಡಿಸಿ, ಈ ಅಧಿನಿಯಮದ ಮೇರೆಗಿನ ಅದರ ಎಲ್ಲಾ ಅಥವಾ ಯಾವುದೇ ಅಧಿಕಾರಗಳನ್ನು

ಪ್ರತ್ಯಾಯೋಜಿಸಬಹುದು:

ಪರಂತು, ಕøಷಿ ನಿರ್ದೇಶಕರನ್ನು ಹೊರತುಪಡಿಸಿ ಯಾರೇ ಅಧಿಕಾರಿಗೆ ಅಥವಾ ಪ್ರಾಧಿಕಾರಕ್ಕೆ 3ನೇ ಪ್ರಕರಣದ

ಮೇರೆಗಿನ ಅಧಿಕಾರಗಳ ಪ್ರತ್ಯಾಯೋಜನೆಯನ್ನು ಮಾಡತಕ್ಕದ್ದಲ್ಲ.

ರಾಜ್ಯ ಸರ್ಕಾರದಿಂದ ನಿರ್ದೇಶನಗಳು.-

ರಾಜ್ಯ ಸರ್ಕಾರವು, ಸಾಮಾನ್ಯ ಅಥವಾ ವಿಶೇಷ ಆದೇಶಗಳ ಮೂಲಕ, ಈ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ ಆ ಅಧಿಕಾರಿಗಳಿಗೆ ಪ್ರದತ್ತವಾದ ಅಧಿಕಾರಗಳನ್ನು ಅಂಥ ಆದೇಶಗಳಲ್ಲಿ

ನಿರ್ದಿಷ್ಟ ಪಡಿಸಬಹುದಾದಂಥ ಪ್ರದೇಶಗಳಲ್ಲಿ ಅಥವಾ ಅಂಥ ಬೆಳೆಗಳ ಸಂಬಂಧದಲ್ಲಿ ಅಂಥ ಅಧಿಕಾರಿಗಳು

ಚಲಾಯಿಸತಕ್ಕದ್ದೆಂದು ನಿರ್ದೇಶಿಸಬಹುದು.

ನಿಯಮ ರಚನಾಧಿಕಾರ.-

(1) ರಾಜ್ಯ ಸರ್ಕಾರವು, ಈ ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಪೂರ್ವ ಪ್ರಕಟಣೆಯ ತರುವಾಯ, ಅಧಿಸೂಚನೆ ಹೊರಡಿಸಿ ನಿಯಮಗಳನ್ನು ರಚಿಸಬಹುದು.

(2) ಈ ಅಧಿನಿಯಮದ ಮೇರೆಗೆ ರಚಿಸಿದ ಪ್ರತಿಯೊಂದು ನಿಯಮವನ್ನು, ಅದನ್ನು ರಚಿಸಿದ ತರುವಾಯ ಆದಷ್ಟು ಬೇಗನೆ, ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಅದು ಅಧಿವೇಶನದಲ್ಲಿರುವಾಗ, ಒಂದು ಅಧಿವೇಶನದಲ್ಲಿ ಅಥವಾ ಎರಡು ಅಥವಾ ಹೆಚ್ಚಿನ ಅನುಕ್ರಮ ಅಧಿವೇಶನಗಳಲ್ಲಿ ಅಡಕವಾಗಬಹುದಾದ ಒಟ್ಟು ಮೂವತ್ತು ದಿವಸಗಳ ಅವಧಿಯವರೆಗೆ ಇಡತಕ್ಕದ್ದು ಮತ್ತು ಅದನ್ನು ಹಾಗೆ ಇಡಲಾದ ಅಧಿವೇಶನ ಅಥವಾ ಮೇಲೆ ಹೇಳಿದ ಅನುಕ್ರಮದ ಅಧಿವೇಶನಗಳು ಮುಕ್ತಾಯವಾಗುವುದಕ್ಕೆ ಮುಂಚೆ ಆ ನಿಯಮಗಳಲ್ಲಿ ಯಾವುದೇ ಮಾರ್ಪಾಟನ್ನು ಮಾಡಬೇಕೆಂದು ಎರಡೂ ಸದನಗಳು ಒಪ್ಪಿದರೆ ಅಥವಾ ಆ ನಿಯಮವನ್ನು ಮಾಡಕೂಡದೆಂದು ಎರಡೂ ಸದನಗಳು ಒಪ್ಪಿದರೆ, ಆ ತರುವಾಯ, ಆ ನಿಯಮವು ಸಂದರ್ಭಾನುಸಾರ ಹಾಗೆ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಪರಿಣಾಮಕಾರಿಯಾಗತಕ್ಕದ್ದಲ್ಲ. ಆದಾಗ್ಯೂ, ಯಾವುದೇ ಅಂಥ ಮಾರ್ಪಾಟು ಅಥವಾ ರದ್ದಿಯಾತಿಯು ಆ ನಿಯಮದ ಮೇರೆಗೆ ಈ ಹಿಂದೆ ಮಾಡಿದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧಕವನ್ನುಂಟು ಮಾಡತಕ್ಕದ್ದಲ್ಲ.

ನಿರಸನ ಮತ್ತು ಉಳಿಸುವಿಕೆಗಳು.-

[ಕರ್ನಾಟಕ ರಾಜ್ಯದ]

ವಿವಿಧ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಮುಂಬಯಿ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1947 (1947ರ ಮುಂಬಯಿ ಅಧಿನಿಯಮ ಸಂಖ್ಯೆ 43),  ಕೊಡಗು ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1933 (1933ರ ಕೊಡಗು ಅಧಿನಿಯಮ ಸಂಖ್ಯೆ

ಹೈದರಾಬಾದ್ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ವಿನಿಮಯ, 1352 ಫಸಲಿ, ಮದರಾಸು ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1919 (1919ರ ಮದ್ರಾಸು ಅಧಿನಿಯಮ ಸಂಖ್ಯೆ

ಮತ್ತು ಕರ್ನಾಟಕ ವಿನಾಶಕಾರಿ ಕ್ರಿಮಿಗಳು ಮತ್ತು ಕೀಟಗಳ ಅಧಿನಿಯಮ, 1917 (ಕರ್ನಾಟಕ ಅಧಿನಿಯಮ 1917ರ

- ಇವುಗಳನ್ನು ಈ ಮೂಲಕ ನಿರಸನಗೊಳಿಸಲಾಗಿದೆ: ಪರಂತು, ೧ [ಕರ್ನಾಟಕ ಸಾಮಾನ್ಯ ಖಂಡಗಳ ಅಧಿನಿಯಮ, 1899 (ಕರ್ನಾಟಕ ಅಧಿನಿಯಮ 1899ರ 3)]

ರ 6ನೇ ಪ್ರಕರಣವು ಅಂಥ ನಿರಸನಕ್ಕೆ ಅನ್ವಯವಾಗತಕ್ಕದ್ದು ಮತ್ತು ಸದರಿ ಅಧಿನಿಯಮದ 8 ಮತ್ತು 24ನೇ ಪ್ರಕರಣಗಳು ಸದರಿ ಅಧಿನಿಯಮಗಳನ್ನು ಈ ಅಧಿನಿಯಮದ ಮೂಲಕ ನಿರಸನಗೊಳಿಸಿ ಪುನರ್ ಅಧಿನಿಯಮಿತಿಗೊಳಿಸಿದ್ದರೆ ಹೇಗೋ ಹಾಗೆ ಅನ್ವಯವಾಗತಕ್ಕದ್ದು.  1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

ಅಧಿಸೂಚನೆ

ಬೆಂಗಳೂರು, ದಿನಾಂಕ 13ನೇ ಅಕ್ಟೋಬರ್ 1971 [ಕ್ರಮಾಂಕ ಎಎಫ್. 142 ಎಎಂಎಸ್ 69]

ಎಸ್.ಓ. 1734 ಎ.- ಮೈಸೂರು ಕøಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968 (1969ರ

ಮೈಸೂರು ಅಧಿನಿಯಮ ಸಂ.1)ರ 1ನೇ ಪ್ರಕರಣದ (3)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು

ಚಲಾಯಿಸಿ, ಮೈಸೂರು ಸರ್ಕಾರವು 1971ರ ಅಕ್ಟೋಬರ್ 13ನೇ ದಿನವನ್ನು ಸದರಿ ಅಧಿನಿಯಮವು ಜಾರಿಗೆ ಬರತಕ್ಕ

ದಿನಾಂಕವೆಂದು ಈ ಮೂಲಕ ಗೊತ್ತುಪಡಿಸಿದೆ.

ಭಾರತದ ರಾಷ್ಟ್ರಪತಿಯವರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್.ಎ. ನಾಯಕ್,

ಸರ್ಕಾರದ ಕಾರ್ಯದರ್ಶಿ,

ಕøಷಿ ಮತ್ತು ಅರಣ್ಯ ಇಲಾಖೆ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ Iಗಿ-2ಸಿ (ii), ದಿನಾಂಕ 13-10-1971ರಲ್ಲಿ ಸಂಖ್ಯೆ 142 ಎಂದು

ಪ್ರಕಟಿಸಲಾಗಿದೆ.)

ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ನಿಯಮಗಳು, 1971

ವಿಷಯಾನುಕ್ರಮಣಿಕೆ

1. ಹೆಸರು ಮತ್ತು ಪ್ರಾರಂಭ

2. ಪರಿಭಾಷೆಗಳು

3. ನೋಟೀಸುಗಳು

4. ಪ್ರತಿಬಂಧಕ ಮತ್ತು ಪರಿಹಾರ ಕ್ರಮಗಳ ವೆಚ್ಚ

5. ಅಪೀಲುಗಳು

6. ನಮೂನೆ 1 ರಿಂದ 6

ಕøಷಿ ಮತ್ತು ಅರಣ್ಯ ಸಚಿವಾಲಯ

ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ನಿಯಮಗಳು, 1971

(ಜಿಎಸ್‍ಆರ್ 260, ದಿನಾಂಕ 3-8-1974

ಮತ್ತು ಜಿಎಸ್‍ಆರ್ 294, ದಿನಾಂಕ 29-9-1980ರ

ಮೂಲಕ ತಿದ್ದುಪಡಿಯಾದಂತೆ)

ಜಿ.ಎಸ್.ಆರ್. 325. ಕರ್ನಾಟಕ ಕøಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968ರ 20ನೇ

ಪ್ರಕರಣದ ಮೂಲಕ ಅಗತ್ಯಪಡಿಸಿದಂತೆ, ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ನಿಯಮಗಳು, 1971

ಇದರ ಕರಡನ್ನು, ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ 1971ರ ಆಗಸ್ಟ್ 31ರಂದು ಅಥವಾ ಅದಕ್ಕೂ

ಮೊದಲು ಆಕ್ಷೇಪಗಳು ಮತ್ತು ಸಲಹೆಗಳನ್ನು ಆಹ್ವಾನಿಸಿ, ಅಧಿಸೂಚನೆ ಸಂ.ಜಿ.ಎಸ್.ಆರ್ 224 (ಎಎಫ್ 142 ಎಎಮ್‍ಎಸ್

69) ದಿನಾಂಕ 14:16ನೇ ಜುಲೈ 1971ರಲ್ಲಿ 22ನೇ ಜುಲೈ 1971ರ ದಿನಾಂಕದ ಕರ್ನಾಟಕ ರಾಜಪತ್ರದಲ್ಲಿ ಪ್ರಕಟಿಸಿದ್ದರಿಂದ;

ಮತ್ತು ಸದರಿ ರಾಜಪತ್ರವನ್ನು 1971ರ ಜುಲೈ 22 ರಂದು ಸಾರ್ವಜನಿಕರಿಗೆ ದೊರಕುವಂತೆ ಮಾಡಿದ್ದರಿಂದ;

ಮತ್ತು, ಸದರಿ ಕರಡಿಗೆ ಆಕ್ಷೇಪಗಳು ಅಥವಾ ಸಲಹೆಗಳು ಬಾರದೆ ಇದ್ದುದರಿಂದ;

ಈಗ ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1968 (1969ರ ಕರ್ನಾಟಕ

ಅಧಿನಿಯಮ ಸಂಖ್ಯೆ 1)ರ 20ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ

ಮೂಲಕ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-

1. ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ

ನಿಯಮಗಳು, 1971 ಎಂದು ಕರೆಯತಕ್ಕದ್ದು.

(2) ಅವು ಈ ಕೂಡಲೇ ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು.- ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(ಎ) ``ಅಧಿನಿಯಮ'' ಎಂದರೆ ಕರ್ನಾಟಕ ಕøಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968;

(ಬಿ) ``ನಮೂನೆ'' ಎಂದರೆ, ಈ ನಿಯಮಗಳಿಗೆ ಲಗತ್ತಿಸಲಾದ ನಮೂನೆ;

(ಸಿ) ``ಪ್ರಕರಣ'' ಎಂದರೆ ಈ ಅಧಿನಿಯಮದ ಪ್ರಕರಣ.

3. ನೋಟೀಸುಗಳು.- (1) 6ನೇ ಪ್ರಕರಣದ ಮೇರೆಗಿನ ನೋಟೀಸು ನಮೂನೆ 1 ರಲ್ಲಿರತಕ್ಕದ್ದು ಮತ್ತು

ಪರಿಶೀಲನಾಧಿಕಾರಿಯು 6ನೇ ಪ್ರಕರಣದ ಮೇರೆಗೆ ಕೊಡಲಾದ ನೋಟೀಸುಗಳ ರಿಜಿಸ್ಟರನ್ನು ನಮೂನೆ 4 ರಲ್ಲಿ ಇಡತಕ್ಕದ್ದು.

(2) 8ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ನೋಟೀಸು ನಮೂನೆ 2 ರಲ್ಲಿರತಕ್ಕದ್ದು ಮತ್ತು

ಪರಿಶೀಲನಾಧಿಕಾರಿಯು 8ನೇ ಪ್ರಕರಣದ ಮೇರೆಗೆ ಕೊಡಲಾದ ನೋಟೀಸುಗಳ ರಿಜಿಸ್ಟರನ್ನು ನಮೂನೆ 5 ರಲ್ಲಿ ಇಡತಕ್ಕದ್ದು.

(3) 7ನೇ ಪ್ರಕರಣ ಅಥವಾ 9ನೇ ಪ್ರಕರಣದ ಮೇರೆಗಿನ ಯಾವುದೇ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳ

ವೆಚ್ಚಗಳ ತಗಾದೆ ನೋಟೀಸು ನಮೂನೆ 3ರಲ್ಲಿರತಕ್ಕದ್ದು.

(4) 8ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ನೋಟೀಸನ್ನು ಮತ್ತು 10ನೇ ಪ್ರಕರಣದ ಮೇರೆಗಿನ

ತಗಾದೆ ನೋಟೀಸನ್ನು, ನೋಟೀಸಿನ ದ್ವಿಪ್ರತಿಗಳಲ್ಲೊಂದನ್ನು ಅಧಿಭೋಗದಾರನಿಗೆ ಖುದ್ದಾಗಿ ತಲುಪಿಸುವ ಅಥವಾ ಕೊಡುವ

ಮೂಲಕ, ಅಥವಾ ಅವನ ಕುಟುಂಬದ ಯಾರೇ ಒಬ್ಬ ವಯಸ್ಕ ಪುರುಷ ಸದಸ್ಯನ ಅಥವಾ ಒಬ್ಬ ಅಧಿಕøತ ಏಜಂಟನ ಬಳಿ

ನಕಲುಗಳಲ್ಲಿ ಒಂದನ್ನು ಕೊಡುವ ಮೂಲಕ ಅಥವಾ ಅಧಿಭೋಗದಾರನು ಸಾಮಾನ್ಯವಾಗಿ ವಾಸಿಸುವ ಮನೆಯ ಯಾವುದೇ

ಎದ್ದುಕಾಣುವ ಭಾಗದ ಮೇಲೆ ನೋಟೀಸಿನ ನಕಲುಗಳಲ್ಲಿ ಒಂದನ್ನು ಅಂಟಿಸುವ ಮೂಲಕ ಜಾರಿ ಮಾಡತಕ್ಕದ್ದು ಮತ್ತು ಆ

ತರುವಾಯ ನೋಟೀಸನ್ನು ಅಧಿಭೋಗದಾರನಿಗೆ ಕ್ರಮಬದ್ಧವಾಗಿ ಜಾರಿಮಾಡಲಾಗಿದೆಯೆಂದು ಭಾವಿಸತಕ್ಕದ್ದು.

1

[(5) 7ನೇ ಮತ್ತು 9ನೇ ಪ್ರಕರಣಗಳ ಮೇರೆಗೆ ಕೈಗೊಂಡ ಪ್ರತಿಬಂಧಕ ಅಥವಾ ಪರಿಹಾರಗಳ, 10ನೇ ಪ್ರಕರಣದ

ಮೇರೆಗೆ ಭೂಕಂದಾಯದ ಬಾಕಿಯಂತೆ ವಸೂಲು ಮಾಡಬಹುದಾದ, ವೆಚ್ಚದ ತಗಾದೆಯನ್ನು ತೋರಿಸುವ ತಃಖ್ತೆಯು 6ನೇ

ನಮೂನೆಯಲ್ಲಿರತಕ್ಕದ್ದು.]

1

1. ``ಕೃಷಿ ನಿರ್ದೇಶಕರು'' ಎಂಬ ಪದಗಳಿಗೆ ಬದಲಾಗಿ ಜಿ.ಎಸ್.ಆರ್ 260 ದಿನಾಂಕ 3.8.1974ರ ಮೂಲಕ 19.9.1974 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

4. ಪ್ರತಿಬಂಧಕ ಮತ್ತು ಪರಿಹಾರ ಕ್ರಮಗಳ ವೆಚ್ಚ.- 7ನೇ ಪ್ರಕರಣದ ಅಥವಾ 9ನೇ ಪ್ರಕರಣದ ಮೇರೆಗೆ

ಕಾರ್ಯಗತಗೊಳಿಸಲಾದ ಯಾವುದೇ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳ ವೆಚ್ಚವನ್ನು ನಿರ್ಧರಿಸುವ ಉದ್ದೇಶಕ್ಕಾಗಿ

ಪ್ರಚಲಿತ ಮಾರುಕಟ್ಟೆ ದರಗಳಲ್ಲಿ ಮಜೂರಿಗಳು, ಸಾಮಗ್ರಿ, ಉಪಕರಣಗಳ ಬಳಕೆ ಮತ್ತು ಅಂಥ ಇತರ ಸಂಬಂಧಪಟ್ಟ

ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು.

5. ಅಪೀಲುಗಳು.- (1) 1

[ಸಂಬಂಧಪಟ್ಟ ಕøಷಿ ವಿಭಾಗೀಯ ಜಂಟಿ ನಿರ್ದೇಶಕರು]

1 8 ಮತ್ತು 11ನೇ ಪ್ರಕರಣಗಳ

ಉದ್ದೇಶಗಳಿಗಾಗಿ ನಿಯಮಿಸಲಾದ ಪ್ರಾಧಿಕಾರಿಯಾಗಿರತಕ್ಕದ್ದು.

1. ``ಕೃಷಿ ನಿರ್ದೇಶಕರು'' ಎಂಬ ಪದಗಳಿಗೆ ಬದಲಾಗಿ ಜಿ.ಎಸ್.ಆರ್ 260 ದಿನಾಂಕ 3.8.1974ರ ಮೂಲಕ 19.9.1974 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

(2) 8ನೇ ಪ್ರಕರಣದ ಮೇರೆಗಿನ ಅಪೀಲು, ಪರಿಶೀಲನಾಧಿಕಾರಿಯು ಅಪೀಲುದಾರನ ಮೇಲೆ ಜಾರಿಮಾಡಿದ ಮೂಲ

ನೋಟೀಸಿನ ಜೊತೆಗೆ ಇರತಕ್ಕದ್ದು.

(3) 11ನೇ ಪ್ರಕರಣದ ಮೇರೆಗಿನ ಅಪೀಲು, ಅಧಿಭೋಗದಾರನ ಮೇಲೆ ಜಾರಿಮಾಡಿದ ಮೂಲ ತಗಾದೆ ನೋಟೀಸಿನ

ಜೊತೆಗೆ ಇರತಕ್ಕದ್ದು.

(4) ಅಪೀಲು ಪ್ರಾಧಿಕಾರವು, ಅಪೀಲುದಾರನಿಗೆ 8ನೇ ಪ್ರಕರಣದ (3)ನೇ ಉಪ-ಪ್ರಕರಣ ಮತ್ತು 11ನೇ ಪ್ರಕರಣದ

(2)ನೇ ಉಪ-ಪ್ರಕರಣದ ಮೇರೆಗೆ ತಾನು ಹೊರಡಿಸಿದ ಆದೇಶದ ಒಂದು ಪ್ರತಿಯನ್ನು ಕೊಡತಕ್ಕದ್ದು.

* * *

ನಮೂನೆ - 1

(3ನೇ ನಿಯಮವನ್ನು ನೋಡಿ)

ಗೆ,

.....................

ಕರ್ನಾಟಕ ಕøಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968 (1969ರ ಕರ್ನಾಟಕ ಅಧಿನಿಯಮ

ಸಂ.1)ರ 3ನೇ ಪ್ರಕರಣದ ಮೇರೆಗೆ ಹೊರಡಿಸಿದ ................. ದಿನಾಂಕ .................... ಕ್ರಮಾಂಕದ ಮತ್ತು .....................

ದಿನಾಂಕದ ರಾಜಪತ್ರದಲ್ಲಿ ಪ್ರಕಟಿಸಲಾದಂಥ ಅಧಿಸೂಚನೆಯಲ್ಲಿ ನಮೂದಿಸಲಾದಂತೆ.-

(i) ಅಂಥ ಭೂಮಿ, ನೀರು ಅಥವಾ ಆವರಣದಲ್ಲಿ ಯಾವುದೇ ಹಾನಿಕರ ಕಳೆ, ಪರೋಪಜೀವಿ, ಉಪದ್ರವ ಕೀಟಗಳು

ಅಥವಾ ಸಸ್ಯರೋಗವು ಕಾಣಿಸಿ ಕೊಂಡಿದೆಯೇ; ಮತ್ತು

(ii) ಪಾಲಿಸಬೇಕೆಂದು ನಿರ್ದೇಶಿಸಲಾದ ಪ್ರತಿಬಂಧಕ ಅಥವಾ ಪರಿಹಾರಕ ಕ್ರಮಗಳನ್ನು ಪಾಲಿಸಲಾಗಿದೆಯೇ ಇಲ್ಲವೇ

- ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶಕ್ಕಾಗಿ ನಿಮ್ಮ ಮೇಲೆ ನೋಟೀಸನ್ನು ಜಾರಿಮಾಡಿದ ಕಾಲದಿಂದ

(ಕಾಲದ ಅವಧಿಯನ್ನು ನಿರ್ದಿಷ್ಟಪಡಿಸಿ) ................... ರ ತರುವಾಯ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಭೂಮಿ

ಅಥವಾ ಆವರಣದ ಮೇಲೆ ಈ ಕೆಳಗೆ ಸಹಿಮಾಡಿರುವವರು ಪ್ರವೇಶಿಸುತ್ತಾರೆ ಎಂದು ಸದರಿ ಅಧಿನಿಯಮದ 6ನೇ ಪ್ರಕರಣದ

ಮೇರೆಗೆ ಈ ನೋಟೀಸಿನ ಮೂಲಕ ತಿಳಿಸಲಾಗಿದೆ.

ಅನುಸೂಚಿ

(* * *)

(* * *) ಇಲ್ಲಿ ಭೂಮಿ ಅಥವಾ ಆವರಣದ ವಿವರಗಳನ್ನು ನಮೂದಿಸಿ.

ದಿನಾಂಕ ................... ಪರಿಶೀಲನಾಧಿಕಾರಿ.

ನಮೂನೆ - 2

(3ನೇ ನಿಯಮವನ್ನು ನೋಡಿ)

ಗೆ,

....................

ತಮ್ಮ ಭೂಮಿ ಅಥವಾ ಆವರಣವನ್ನು ಪರಿಶೀಲಿಸಿದ ಮೇಲೆ,

(1) ತಮ್ಮ ಸದರಿ ಭೂಮಿ ಅಥವಾ ಆವರಣದ ಮೇಲೆ ....................... (ಇಲ್ಲಿ ಕೀಟಗಳ, ಸಸ್ಯರೋಗಗಳ ಅಥವಾ

ಹಾನಿಕರ ಕಳೆಗಳ ಹೆಸರನ್ನು ನಮೂದಿಸಿ) ಕಾಣಿಸಿ ಕೊಂಡಿದೆಯೆಂಬುದು;

(2) ಕರ್ನಾಟಕ ಕøಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968 (1969ರ ಕರ್ನಾಟಕ ಅಧಿನಿಯಮ

ಸಂ.1)ರ 3ನೇ ಪ್ರಕರಣದ ಮೇರೆಗೆ ಹೊರಡಿಸಲಾದ .................. ದಿನಾಂಕದ ..................... ಕ್ರಮಾಂಕದ ಮತ್ತು

................... ದಿನಾಂಕದ ರಾಜ್ಯಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆಯಲ್ಲಿ ನಮೂದಿಸಿದ ಪ್ರತಿಬಂಧಕ ಅಥವಾ ಪರಿಹಾರ

ಕ್ರಮಗಳನ್ನು ತಾವು ಕೈಗೊಂಡಿಲ್ಲವೆಂಬುದು ಗಮನಕ್ಕೆ ಬಂದಿರುವುದರಿಂದ;

ಈಗ, ಸದರಿ ಅಧಿನಿಯಮದ 8ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು

ಚಲಾಯಿಸಿ, ಈ ನೋಟೀಸನ್ನು ಸ್ವೀಕರಿಸಿದ ................ ದಿನಗಳೊಳಗಾಗಿ ಈ ಕೆಳಕಂಡ ಪ್ರತಿಬಂಧಕ ಅಥವಾ ಪರಿಹಾರ

ಕ್ರಮಗಳನ್ನು ಕೈಗೊಳ್ಳಬೇಕೆಂದು ನಾನು ಈ ಮೂಲಕ ಈಗ ತಮ್ಮನ್ನು ಅಗತ್ಯಪಡಿಸುತ್ತಿದ್ದೇನೆ, ಎಂದರೆ,

(ಇಲ್ಲಿ ಸಂದರ್ಭಾನುಸಾರ, ಪ್ರತಿಬಂಧಕ / ಪರಿಹಾರ ಕ್ರಮಗಳ ಸ್ವರೂಪವನ್ನು ನಮೂದಿಸಿ)

ದಿನಾಂಕ: ಪರಿಶೀಲನಾಧಿಕಾರಿ.

ನಮೂನೆ - 3

(3ನೇ ನಿಯಮವನ್ನು ನೋಡಿ)

ಗೆ, ....................

................... ದಿನಾಂಕದ ನೋಟೀಸು ಸಂಖ್ಯೆ .................. ರ ಮೂಲಕ ಸದರಿ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ

ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ತಮಗೆ ಅಗತ್ಯಪಡಿಸಿದ್ದುದರಿಂದ;

ಮತ್ತು, ಸದರಿ ನೋಟೀಸಿನಲ್ಲಿ ಅಥವಾ ತಾವು ಸಲ್ಲಿಸಿದ ಅಪೀಲಿನ ಮೇಲೆ ಮಾಡಿದ ಆದೇಶದಲ್ಲಿ ನಿರ್ದಿಷ್ಟಪಡಿಸಿದ

ಕಾಲದೊಳಗೆ ಸದರಿ ನೋಟೀಸನ್ನು ತಾವು ಪಾಲಿಸದೆ ಇರುವುದರಿಂದ;

ಮತ್ತು, ಸದರಿ ನೋಟೀಸು ಅಥವಾ ಆದೇಶದಲ್ಲಿ ನಮೂದಿಸಿದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು

ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1968 (1969ರ ಕರ್ನಾಟಕ ಅಧಿನಿಯಮ ಸಂ.1)ರ

7 ಅಥವಾ 9ನೇ ಪ್ರಕರಣಗಳ ಮೂಲಕ ಅಗತ್ಯಪಡಿಸಲಾದಂತೆ ಕೆಳಗೆ ಸಹಿಮಾಡಿದವರು ಅಥವಾ ಕೆಳಗೆ ಸಹಿ ಮಾಡಿದವರ

ಮೇಲ್ವಿಚಾರಣೆಯಲ್ಲಿ ಕೈಗೊಂಡಿರುವುದರಿಂದ;

ಮತ್ತು, ಸದರಿ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳಿಗೆ ವೆಚ್ಚವಾಗಿರುವ ........ ರೂ. ಗಳನ್ನು ತಾವು ಸಂದಾಯ

ಮಾಡಬೇಕಾಗಿರುವುದರಿಂದ; (ಅದರ ವಿವರಗಳನ್ನು ಈ ಕೆಳಗೆ ನೀಡಲಾಗಿದೆ)

ಈಗ, ಸದರಿ ಅಧಿನಿಯಮದ 10ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ಈ ನೋಟೀಸಿನ ದಿನಾಂಕದಿಂದ

................ ದಿನಗಳೊಳಗಾಗಿ ................ ರೂ. ಗಳ ಸದರಿ ಮೊತ್ತವನ್ನು ಸಂದಾಯ ಮಾಡುವಂತೆ ತಮ್ಮನ್ನು ಈ ಮೂಲಕ

ಅಗತ್ಯಪಡಿಸಲಾಗಿದೆ.

(ಇಲ್ಲಿ ಪ್ರತಿಬಂಧಕ ಅಥವಾ ಪರಿಹಾರ ಕ್ರಮದ ವೆಚ್ಚಗಳ ತಗಾದೆಯ ವಿವರಗಳನ್ನು ನಿರ್ದಿಷ್ಟಪಡಿಸಿ).

ದಿನಾಂಕ: ಪರಿಶೀಲನಾಧಿಕಾರಿ.

ನಮೂನೆ - 4

(3ನೇ ನಿಯಮವನ್ನು ನೋಡಿ)

ಕ್ರಮ ಸಂಖ್ಯೆ:

1. ಗ್ರಾಮ

2. ಹೋಬಳಿ, ತಾಲೂಕು

3. ನೋಟೀಸಿಗೆ ಸಂಬಂಧಿಸಿದ ಸರ್ವೆ ನಂ. ಉಪ-ವಿಭಾಗ ಸಂ.

4. ಅಧಿಭೋಗದಾರನ ಹೆಸರು

5. ನಾಶಪಡಿಸಬೇಕಾದ ಸಸ್ಯಗಳು ಅಥವಾ ಸಸ್ಯಗಳ ಭಾಗಗಳು ಅಥವಾ ಕ್ರಿಮಿಕೀಟಗಳ ವಿವರಣೆ

6. ನೋಟೀಸನ್ನು ಜಾರಿ ಮಾಡಿದ ದಿನಾಂಕ

7. ಜಾರಿ ಮಾಡಿದವರು

8. ಅಪೀಲು ಅವಧಿಯ ಮುಕ್ತಾಯದ ದಿನಾಂಕ

9. ಅಪೀಲು ಅಧಿಕಾರಿಯ ಆದೇಶ

10. ಪರಿಶೀಲನಾಧಿಕಾರಿಯು ಅನುಮತಿಸಿದ ಅವಧಿಯ ಅಥವಾ ಅಪೀಲಿನ ಸಂದರ್ಭದಲ್ಲಿ ಅಪೀಲು ಅಧಿಕಾರಿಯು

ನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯದ ದಿನಾಂಕ

11. ನಿಯಮಿಸಲಾದ ಕ್ರಮಗಳನ್ನು ಅಧಿಭೋಗದಾರನು ಕಾರ್ಯಗತಗೊಳಿಸಿರುವನೇ ಅಥವಾ ಪರಿಶೀಲನಾಧಿಕಾರಿಯು

ಕಾರ್ಯಗತಗೊಳಿಸಿರುವನೇ ಮತ್ತು ಪರಿಶೀಲನಾಧಿಕಾರಿಯು ಕಾರ್ಯಗತಗೊಳಿಸಿರುವಲ್ಲಿ ಕಾರ್ಯಗತಗೊಳಿಸಿದ

ದಿನಾಂಕ

12. ಷರಾ.

ನಮೂನೆ - 5

(3ನೇ ನಿಯಮವನ್ನು ನೋಡಿ)

1. ಗ್ರಾಮ

2. ಸರ್ವೆ ಮತ್ತು ಉಪ-ವಿಭಾಗದ ಸಂಖ್ಯೆ

3. ಅಧಿಭೋಗದಾರನ ಹೆಸರು

4. ಕ್ರಮವನ್ನು ಕಾರ್ಯಗತಗೊಳಿಸಲು ಪರಿಶೀಲನಾಧಿಕಾರಿಯು ನೀಡಿದ ನೋಟೀಸಿನ ಸಂ. ಮತ್ತು ದಿನಾಂಕ

5. ಪರಿಶೀಲನಾಧಿಕಾರಿಯು ಪರಿಹಾರ ಕ್ರಮಗಳನ್ನು ಕಾರ್ಯಗತಗೊಳಿಸಿದ ದಿನಾಂಕ

6. ತೆಗೆದುಕೊಂಡ ಕ್ರಮದ ಖರ್ಚುಗಳ ವಿವರಗಳು

7. ಡೆಪ್ಯುಟಿ ಕವಿೂಷನರ್, ಡಿ.ಡಿ.ಎ ಮತ್ತು ತಹಸೀಲ್ದಾರರ ಕಚೇರಿಗೆ ತಗಾದೆ ನೋಟೀಸನ್ನು ರವಾನೆ ಮಾಡಿದ ದಿನಾಂಕ

8. ತಹಸೀಲ್ದಾರರ ಕಚೇರಿಯಿಂದ ತಗಾದೆ ನೋಟೀಸಿನ ಪ್ರತಿಯನ್ನು ಪಡೆದ ದಿನಾಂಕ

9. ಷರಾ.

1

[ನಮೂನೆ - 6

[3(5)ನೇ ನಿಯಮವನ್ನು ನೋಡಿ]

ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1968ರ 10ನೇ ಪ್ರಕರಣದ ಮೇರೆಗೆ

ಭೂಕಂದಾಯದ ಬಾಕಿಯಂತೆ ವಸೂಲುಮಾಡಬಹುದಾದ ಮತ್ತು 7ನೇ ಅಥವಾ 9ನೇ ಪ್ರಕರಣಗಳ ಮೇರೆಗೆ ಕೈಗೊಂಡ

ಪ್ರತಿಬಂಧಕ ಅಥವಾ ಪರಿಹಾರದ ಕ್ರಮಗಳ ವೆಚ್ಚದ ತಗಾದೆ ತಃಖ್ತೆ]1

1. 6ನೇ ನಮೂನೆಯನ್ನು ಜಿಎಸ್‍ಆರ್ 294, ದಿನಾಂಕ: 29.9.1980ರ ಮೂಲಕ 9.10.1980 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.


ಪ್ರಕರಣಗಳ ಅನುಕ್ರಮಣಿಕೆಪ್ರಕರಣಗಳು: 1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ 2. ಪರಿಭಾಷೆಗಳು 3. ಕೀಟಗಳು, ಸಸ್ಯರೋಗಗಳು ಅಥವಾ ಹಾನಿಕರ ಕಳೆಗಳಿಂದ ಬಾಧಿತವಾದ ಪ್ರದೇಶಗಳ ಬಗ್ಗೆ ರಾಜ್ಯ ಸರ್ಕಾರದ ಅಧಿಸೂಚನೆ. 4. ನಿರ್ದೇಶನಗಳನ್ನು ನೀಡುವ ಅಧಿಕಾರ 5. 4ನೇ ಪ್ರಕರಣದ ಮೇರೆಗೆ ನೋಟೀಸು ಜಾರಿಯಾದ ಮೇಲೆ ಅಧಿಭೋಗದಾರನ ಕರ್ತವ್ಯಗಳು 6. ಭೂಮಿ ಅಥವಾ ಆವರಣಗಳನ್ನು ಪ್ರವೇಶಿಸಲು ಅಧಿಕಾರ 7. ಸಸ್ಯಗಳನ್ನು ಕಿತ್ತುಹಾಕುವುದು ಅಥವಾ ನಾಶಗೊಳಿಸುವುದೂ ಸೇರಿದಂತೆ ಕೀಟಗಳು ಅಥವಾ ಸಸ್ಯರೋಗಗಳನ್ನು ನಿರ್ಮೂಲನಗೊಳಿಸಲು ನಿಯಮಿಸಲಾದ ಕ್ರಮಗಳಿರುವಲ್ಲಿ ಪ್ರಕ್ರಿಯೆ. 8. ಪರಿಹಾರ ಅಥವಾ ಪ್ರತಿಬಂಧಕ ಕ್ರಮ ಕೈಗೊಳ್ಳುವುದಕ್ಕೆ ಅಧಿಭೋಗದಾರನಿಗೆ ನೋಟೀಸು 9. ಅಧಿಭೋಗದಾರನು ತನ್ನ ಮೇಲೆ ಜಾರಿಮಾಡಿದ ನೋಟೀಸನ್ನು ಪಾಲಿಸಲು ತಪ್ಪುವುದು ಒಂದು ಅಪರಾಧ ಮಾಡಿದಂತಾಗುವುದು 10. ವೆಚ್ಚಗಳ ವಸೂಲಿ 11. ವೆಚ್ಚಗಳ ವಿರುದ್ಧ ಅಪೀಲು 12. ಕ್ರಿಮಿ, ಕೀಟಗಳು, ಸಸ್ಯರೋಗಗಳು ಅಥವಾ ಹಾನಿಕರ ಕಳೆಗಳ ಬಗ್ಗೆ ವರದಿಮಾಡುವುದು ಗ್ರಾಮಾಧಿಕಾರಿಗಳ ಹೊಣೆ 13. ದಂಡಗಳು 14. ಅಪರಾಧಗಳ ಸಂಜ್ಞೇಯತೆ 15. ಕಂಪನಿಗಳಿಂದ ಅಪರಾಧಗಳು 16. ಈ ಅಧಿನಿಯಮದ ಮೇರೆಗೆ ಕೈಗೊಂಡ ಕ್ರಮದ ರಕ್ಷಣೆ 17. ಪರಿಶೀಲನಾಧಿಕಾರಿಗಳ ನೇಮಕ 18. ಅಧಿಕಾರಗಳ ಪ್ರತ್ಯಾಯೋಜನೆ 19. ರಾಜ್ಯ ಸರ್ಕಾರದಿಂದ ನಿರ್ದೇಶನಗಳು 20. ನಿಯಮ ರಚನಾಧಿಕಾರ 21. ನಿರಸನ ಮತ್ತು ಉಳಿಸುವಿಕೆಗಳು* * *ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ 1969ರ ಅಧಿನಿಯಮ 1.- ಎಲ್ಲಾ ಬಗೆಯ ಕøಷಿ ಬೆಳೆಗಳಿಗೆ ವಿವಿಧ ರೀತಿಯ ಕೀಟಗಳು ಮತ್ತು ಸಸ್ಯರೋಗಗಳುತಗಲುತ್ತಿದ್ದು, ಅವುಗಳನ್ನು ತಡೆಗಟ್ಟದೆ ಇದ್ದರೆ ಬೆಳೆಯುತ್ತಿರುವ ಬೆಳೆಗಳಿಗೆ ಹಾನಿಯುಂಟಾಗಿ ಇಳುವರಿಯು ನಷ್ಟವಾಗುತ್ತದೆ.ಆದಕಾರಣ, ಅಂಥ ಕೀಟಗಳು ಮತ್ತು ರೋಗಗಳ ನಿಯಂತ್ರಣ ರಾಷ್ಟ್ರದ ಕøಷಿ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖವೆನಿಸುತ್ತದೆಮತ್ತು ಅದರಿಂದ ದೇಶಕ್ಕೆ ಭಾರಿ ನಷ್ಟವಾಗಬಹುದಾದಂಥ ಕøಷಿ ಉತ್ಪನ್ನವನ್ನು ಗಣನೀಯವಾಗಿ ರಕ್ಷಿಸಲು ಸಾಧ್ಯವಾಗುತ್ತದೆ.ಕೀಟಗಳು ಮತ್ತು ರೋಗಗಳ ವಿರುದ್ಧ ಸರಿಯಾದ ಮತ್ತು ಪರಿಣಾಮಕಾರಿಯಾದ ಪ್ರತಿಬಂಧಕ ಮತ್ತು ನಿವಾರಕ ಕ್ರಮಗಳನ್ನುಕೈಗೊಳ್ಳುವ ಉದ್ದೇಶದಿಂದ ಈ ಶಾಸನವನ್ನು ಪ್ರಸ್ತಾಪಿಸಲಾಗಿದೆ. ಪ್ರಸ್ತುತ, ಮುಂಬಯಿ ಕøಷಿ ಸಂಬಂಧಿ ಕೀಟಗಳು ಮತ್ತುರೋಗಗಳ ಅಧಿನಿಯಮ, 1947, ಕೊಡಗು ಕøಷಿ ಸಂಬಂಧೀ ಕೀಟಗಳು ಮತ್ತು ರೋಗಗಳ ಅಧಿನಿಯಮ, 1933,ಹೈದರಾಬಾದ್ ಕøಷಿ ಸಂಬಂಧೀ ಕೀಟಗಳು ಮತ್ತು ರೋಗಗಳ ವಿನಿಯಮ, 1352 ಫಸಲಿ, ಮದ್ರಾಸು ವಿನಾಶಕಾರಿ ಕ್ರಿಮಿಗಳುಮತ್ತು ಕೀಟಗಳ ಅಧಿನಿಯಮ, 1917 - ಇವುಗಳು ರಾಜ್ಯ ವಿವಿಧ ಪ್ರದೇಶಗಳಲ್ಲಿ ಜಾರಿಯಲ್ಲಿವೆ. ಈ ಅಧಿನಿಯಮಗಳಉಪಬಂಧಗಳು ಏಕರೂಪದಲ್ಲಿರುವುದಿಲ್ಲ ಮತ್ತು ಇಡೀ ರಾಜ್ಯಕ್ಕೆ ಏಕರೂಪದ ಕಾನೂನನ್ನು ಅನ್ವಯ ಮಾಡುವುದುಅವಶ್ಯಕವಾಗಿದೆ. ಆದ್ದರಿಂದ ಈ ವಿಧೇಯಕ.(ಕರ್ನಾಟಕ ರಾಜ್ಯ ಪತ್ರ (ವಿಶೇಷ ಸಂಚಿಕೆ) ಭಾಗ- Iಗಿ 2ಎ, ದಿನಾಂಕ 22.6.1967, ಪುಟ 93ರಲ್ಲಿ ಪ್ರಕಟಿಸಲಾಗಿದೆ). 1969ರ 1[ಕರ್ನಾಟಕ ಅಧಿನಿಯಮ]1 ಸಂ. 1 (1969ರ ಜನವರಿ ಇಪ್ಪತ್ಮೂರನೇ ದಿನದಂದು 1[ಕರ್ನಾಟಕ ರಾಜಪತ್ರ]1 ದಲ್ಲಿ ಮೊದಲು ಪ್ರಕಟವಾಗಿದೆ)1[ಕರ್ನಾಟಕ]1 ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1968(1969ರ ಜನವರಿ ಹತ್ತನೇ ದಿನದಂದು ರಾಜ್ಯಪಾಲರ ಒಪ್ಪಿಗೆಯನ್ನು ಪಡೆದಿದೆ)1[ಕರ್ನಾಟಕ ರಾಜ್ಯ]1 ದಲ್ಲಿ ಬೆಳೆಗಳು, ಸಸ್ಯಗಳು ಅಥವಾ ಮರಗಳಿಗೆ ಅಪಾಯಕಾರಿ ಕೀಟಗಳು, ಸಸ್ಯರೋಗಗಳು ಮತ್ತುಹಾನಿಕರ ಕಳೆಗಳು ಕಾಣಿಸಿಕೊಳ್ಳುವುದನ್ನು, ಹರಡುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ತಡೆಗಟ್ಟುವ ಅಧಿನಿಯಮ. 1[ಕರ್ನಾಟಕ ರಾಜ್ಯ]1ದೊಳಗೆ ಬೆಳೆಗಳು, ಸಸ್ಯಗಳು ಅಥವಾ ಮರಗಳಿಗೆ ಅಪಾಯಕಾರಿಯಾದ ಅಥವಾ ನೀರುಸರಬರಾಜಿಗೆ ಅಥವಾ ಜಲಮಾರ್ಗಗಳಿಗೆ ತಡೆಯೊಡ್ಡುವ ಕೀಟಗಳು, ಸಸ್ಯ ರೋಗಗಳು ಮತ್ತು ಹಾನಿಕರ ಕಳೆಗಳುಕಾಣಿಸಿಕೊಳ್ಳುವುದನ್ನು, ಹರಡುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ತಡೆಗಟ್ಟಲು ಮತ್ತು ಅದಕ್ಕೆ ಸಂಬಂಧಿಸಿದಇತರ ವಿಷಯಗಳಿಗಾಗಿ ಉಪಬಂಧ ಕಲ್ಪಿಸಲು ಕ್ರಮಗಳನ್ನು ಕೈಗೊಳ್ಳುವುದು ವಿಹಿತವಾಗಿರುವುದರಿಂದ; ಇದು ಭಾರತ ಗಣರಾಜ್ಯದ ಹತ್ತೊಂಬತ್ತನೇ ವರ್ಷದಲ್ಲಿ 1[ಕರ್ನಾಟಕ]1 ರಾಜ್ಯ ವಿಧಾನ ಮಂಡಲದಿಂದ ಈಕೆಳಕಂಡಂತೆ ಅಧಿನಿಯಮಿತವಾಗತಕ್ಕದ್ದು:-1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ. 1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು 1[ಕರ್ನಾಟಕ]1 ಕøಷಿ ಸಂಬಂಧಿ ಕೀಟಗಳಮತ್ತು ರೋಗಗಳ ಅಧಿನಿಯಮ, 1968 ಎಂದು ಕರೆಯತಕ್ಕದ್ದು. (2) ಇದು ಇಡೀ 1[ಕರ್ನಾಟಕ ರಾಜ್ಯ]1ಕ್ಕೆ ವ್ಯಾಪ್ತವಾಗತಕ್ಕದ್ದು. (3) ಇದು, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ 2[ದಿನಾಂಕ]2 ದಂದುಜಾರಿಗೆ ಬರತಕ್ಕದ್ದು.1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.2. ಅಧಿನಿಯಮವು 13.10.1971 ರಿಂದ ಅಧಿಸೂಚನೆಯ ಮೂಲಕ ಜಾರಿಗೆ ಬಂದಿದೆ. ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯ ಭಾಗದಲ್ಲಿದೆ. 2. ಪರಿಭಾಷೆಗಳು.- ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,- (1) ``ಬಾಧಿತ ಪ್ರದೇಶ'' ಎಂದರೆ, 3ನೇ ಪ್ರಕರಣದ ಮೇರೆಗೆ ಅಧಿಸೂಚನೆಯ ಮೂಲಕ ಬಾಧಿತ ಪ್ರದೇಶವೆಂದುಘೋಷಿತವಾದ ಯಾವುದೇ ಪ್ರದೇಶ; (2) ``ಕøಷಿ ನಿರ್ದೇಶಕರು'' ಎಂದರೆ, ರಾಜ್ಯ ಸರ್ಕಾರದಿಂದ ಕøಷಿ ನಿರ್ದೇಶಕರಾಗಿ ನೇಮಕಗೊಂಡ ಯಾರೇಅಧಿಕಾರಿ ಮತ್ತು ಇದು ತೋಟಗಾರಿಕಾ ನಿರ್ದೇಶಕರು ಮತ್ತು ಸಂದರ್ಭಾನುಸಾರ ಕøಷಿ ನಿರ್ದೇಶಕರ ಅಥವಾ ತೋಟಗಾರಿಕಾನಿರ್ದೇಶಕರ ಹುದ್ದೆಯ ಕರ್ತವ್ಯಗಳನ್ನು ತತ್ಕಾಲದಲ್ಲಿ ನಿರ್ವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಒಳಗೊಳ್ಳುತ್ತದೆ; (3) ``ಕøಷಿ ಉಪ-ನಿರ್ದೇಶಕರು'' ಎಂದರೆ, ಜಿಲ್ಲೆಯ ಕøಷಿ ಉಪ-ನಿರ್ದೇಶಕರು ಅಥವಾ ಜಿಲ್ಲೆಯ ತೋಟಗಾರಿಕಾಅಧಿಕಾರಿಯಾಗಿ ರಾಜ್ಯ ಸರ್ಕಾರದಿಂದ ನೇಮಕಗೊಂಡ ಅಧಿಕಾರಿ ಮತ್ತು ಸಂದರ್ಭಾನುಸಾರ, ಕøಷಿ ಉಪ-ನಿರ್ದೇಶಕರಅಥವಾ ಜಿಲ್ಲಾ ತೋಟಗಾರಿಕಾ ಅಧಿಕಾರಿಯ ಕರ್ತವ್ಯಗಳನ್ನು ತತ್ಕಾಲದಲ್ಲಿ ನಿರ್ವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿ; (4) ``ಪರಿಶೀಲನಾಧಿಕಾರಿ'' ಎಂದರೆ, 17ನೇ ಪ್ರಕರಣದ ಮೇರೆಗೆ ನೇಮಕಗೊಂಡ ಅಧಿಕಾರಿ; (5) ``ಅಧಿಸೂಚನೆ'' ಎಂದರೆ, ರಾಜ್ಯಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆ; (6) ``ಅಧಿಸೂಚಿತ ಪ್ರದೇಶ'' ಎಂದರೆ 3ನೇ ಪ್ರಕರಣದ ಮೇರೆಗೆ ಯಾವ ಪ್ರದೇಶಕ್ಕೆ ಸಂಬಂಧಪಟ್ಟಂತೆಅಧಿಸೂಚನೆಯನ್ನು ಹೊರಡಿಸಲಾಗಿದೆಯೋ ಆ ಪ್ರದೇಶ; (7) ``ಹಾನಿಕರ ಕಳೆ'' ಎಂದರೆ, 3ನೇ ಪ್ರಕರಣದ ಮೇರೆಗೆ ಅಧಿಸೂಚನೆಯ ಮೂಲಕ ಹಾನಿಕರ ಕಳೆಯೆಂದುಘೋಷಿಸಲಾದ ಯಾವುದೇ ಕಳೆ; (8) ``ಅಧಿಭೋಗದಾರ'' ಎಂದರೆ, ಯಾವುದೇ ಭೂಮಿಯ, ಆವರಣದ ಅಥವಾ ನೀರಿನ ಅಧಿಭೋಗದ ಹಕ್ಕನ್ನುತತ್ಕಾಲದಲ್ಲಿ ಹೊಂದಿರುವ ವ್ಯಕ್ತಿ, ಅಥವಾ ಭೂಮಿಯ, ಆವರಣದ ಅಥವಾ ನೀರಿನ ವಾಸ್ತವಿಕ ಅಧಿಭೋಗದಲ್ಲಿರುವ ಅವನಅಧಿಕøತ ಏಜೆಂಟ್ ಅಥವಾ ಯಾರೇ ವ್ಯಕ್ತಿ ಮತ್ತು ಇದು ಅಂಥ ಅಧಿಭೋಗದ ಹಕ್ಕನ್ನು ಹೊಂದಿರುವ ಅಥವಾ ಅಂಥವಾಸ್ತವಿಕ ಅಧಿಭೋಗದಲ್ಲಿರುವ ಸ್ಥಳೀಯ ಪ್ರಾಧಿಕಾರವನ್ನು ಒಳಗೊಳ್ಳುತ್ತದೆ;  (9) ``ಪರೋಪಜೀವಿ'' ಎಂದರೆ, 3ನೇ ಪ್ರಕರಣದ ಮೇರೆಗೆ ಅಧಿಸೂಚನೆಯ ಮೂಲಕ ಪರೋಪಜೀವಿಯೆಂದುಘೋಷಿಸಲಾದ ಮತ್ತು ಯಾವುದೇ ಕøಷಿಬೆಳೆ, ಸಸ್ಯ, ಮರ, ಪೆÇದೆ ಅಥವಾ ಗಿಡಮೂಲಿಕೆಯ ಮೇಲೆ ಪೂರ್ಣವಾಗಿ ಅಥವಾಭಾಗಶಃ ಜೀವಿಸುತ್ತಿರುವ ಯಾವುದೇ ಸಸ್ಯ ಅಥವಾ ಪ್ರಾಣಿ; (10) ``ಕೀಟ'' ಎಂದರೆ, 3ನೇ ಪ್ರಕರಣದ ಮೇರೆಗೆ ಅಧಿಸೂಚನೆಯ ಮೂಲಕ ಕೀಟವೆಂದು ಘೋಷಿತವಾಗಿರುವಯಾವುದೇ ಕ್ರಿಮಿ ಅಥವಾ ಕಶೇರುಕ ಅಥವಾ ಅಕಶೇರುಕ ಪ್ರಾಣಿ; (11) ``ಸಸ್ಯ'' ಎಂಬುದರಲ್ಲಿ ಎಲ್ಲಾ ತೋಟಗಾರಿಕೆಯ ಅಥವಾ ಕøಷಿ ಬೆಳೆಗಳು, ಮರಗಳು, ಪೆÇದೆಗಳು ಅಥವಾಗಿಡಮೂಲಿಕೆಗಳು ಒಳಗೊಳ್ಳುತ್ತವೆ ಮತ್ತು ಹಣ್ಣು, ಎಲೆ, ಕಾಂಡ, ಬೇರು, ತೊಗಟೆ ಅಥವಾ ಕತ್ತರಿಸಿದ ಸಸ್ಯಭಾಗ ಅಥವಾಅದರ ಯಾವುದೇ ಭಾಗವನ್ನು ಒಳಗೊಳ್ಳುತ್ತದೆ. ಆದರೆ, ಅದು ಬೀಜವನ್ನು ಒಳಗೊಳ್ಳುವುದಿಲ್ಲ: ಪರಂತು, ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ ಯಾವುದೇ ನಿರ್ದಿಷ್ಟ ಸಸ್ಯದ ಬೀಜವನ್ನು ಸಸ್ಯವೆಂದುಭಾವಿಸತಕ್ಕದ್ದೆಂದು ನಿರ್ದೇಶಿಸಬಹುದು; (12) ``ಸಸ್ಯರೋಗ'' ಎಂದರೆ, ಯಾವುದೇ ಶಿಲೀಂದ್ರ, ಬ್ಯಾಕ್ಟೀರಿಯಲ್, ವೈರಸ್, ಸಸ್ಯಸಂಬಂಧಿ ರೋಗಾಣುಜೀವಿ,ಪರೋಪಜೀವಿ ರೋಗ ಅಥವಾ 3ನೇ ಪ್ರಕರಣದ ಮೇರೆಗೆ ಅಧಿಸೂಚನೆಯ ಮೂಲಕ ಸಸ್ಯರೋಗವೆಂದು ಘೋಷಿತವಾದಯಾವುದೇ ಇತರ ರೋಗ; (13) ``ನಿಯಮಿಸಲಾದುದು'' ಎಂದರೆ, ಈ ಅಧಿನಿಯಮದ ಮೇರೆಗೆ ರಚಿಸಿದ ನಿಯಮಗಳ ಮೂಲಕನಿಯಮಿಸಲಾದುದು. 3. ಕೀಟಗಳು, ಸಸ್ಯರೋಗಗಳು ಅಥವಾ ಹಾನಿಕರ ಕಳೆಗಳಿಂದ ಬಾಧಿತವಾದ ಪ್ರದೇಶಗಳ ಬಗ್ಗೆ ರಾಜ್ಯ ಸರ್ಕಾರದಅಧಿಸೂಚನೆ.- ಯಾವುದೇ ಪ್ರದೇಶದಲ್ಲಿ ಸಸ್ಯಗಳಿಗೆ ಯಾವುದೇ ರೋಗ, ಕೀಟ, ಪರೋಪಜೀವಿ ಅಥವಾ ಕಳೆಯುಅಪಾಯಕಾರಿಯೆಂದು ಮತ್ತು ಅಂಥ ರೋಗ, ಪರೋಪಜೀವಿ, ಕೀಟ ಅಥವಾ ಕಳೆಯನ್ನು ನಿರ್ಮೂಲಮಾಡಲು, ಅಥವಾಅವುಗಳು ಕಾಣಿಸಿಕೊಳ್ಳುವುದನ್ನು, ಹರಡುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವಅಗತ್ಯವಿದೆಯೆಂದು ರಾಜ್ಯ ಸರ್ಕಾರಕ್ಕೆ ಕಂಡುಬಂದಲ್ಲಿ, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ, ಅಂಥಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಗಾಗಿ ಅಂಥ ಪ್ರದೇಶವನ್ನು ಬಾಧಿತ ಪ್ರದೇಶವೆಂದುಘೋಷಿಸಬಹುದು; ಮತ್ತು ಅಂಥ ಪ್ರದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಂಥ ಅಧಿಸೂಚನೆಯ ಮೂಲಕ,- (ಎ) ಈ ಅಧಿನಿಯಮದ ಉದ್ದೇಶಗಳಿಗಾಗಿ, ಯಾವುದೇ ರೋಗ, ಪರೋಪಜೀವಿ, ಕೀಟ ಅಥವಾ ಕಳೆಯನ್ನುಸಸ್ಯರೋಗ, ಪರೋಪಜೀವಿ, ಕೀಟ ಅಥವಾ ಹಾನಿಕರ ಕಳೆಯೆಂದು ಸಹ ಘೋಷಿಸಬಹುದು; (ಬಿ) ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಯಾವುದೇ ಸಸ್ಯ, ಮಣ್ಣು ಅಥವಾ ಗೊಬ್ಬರವನ್ನು ಸಾಗಿಸುವುದುಅಥವಾ ಅಲ್ಲಿಂದ ಅದನ್ನು ತೆಗೆದುಹಾಕುವುದನ್ನು ನಿಷೇಧಿಸಬಹುದು ಅಥವಾ ನಿರ್ಬಂಧಿಸಬಹುದು ಅಥವಾ ಅಂಥ ಕೀಟ,ರೋಗ ಅಥವಾ ಕಳೆಯ ಸಂಬಂಧದಲ್ಲಿ ಅವಶ್ಯವಿರಬಹುದಾದಂಥ ಇತರ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ಸಹನಿಯಮಿಸಬಹುದು; (ಸಿ) ಯಾವುದೇ ಹಾನಿಕರ ಕಳೆ, ಪರೋಪಜೀವಿ, ಕೀಟ ಅಥವಾ ಸಸ್ಯರೋಗವು ಕಾಣಿಸಿಕೊಳ್ಳುವುದನ್ನು,ಹರಡುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ನಿವಾರಿಸಲು, ನಾಶಪಡಿಸಲು ಅಥವಾ ತಡೆಗಟ್ಟಲುನಿರ್ದಿಷ್ಟಪಡಿಸಬಹುದಾದಂಥ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ಕೈಗೊಳ್ಳತಕ್ಕದ್ದೆಂದು ಸಹ ನಿರ್ದೇಶಿಸಬಹುದು; (ಡಿ) ನಿರ್ದಿಷ್ಟಪಡಿಸಲಾದ ಪ್ರದೇಶದಲ್ಲಿ ಇತರ ಬೆಳೆಗಳಿಗೆ ಹಾನಿಯುಂಟುಮಾಡುವ ಸಂಭವವಿರುವ, ಯಾವುದೇ ಸಸ್ಯನೆಡುವುದನ್ನು ಅಥವಾ ಬೆಳೆಯುವುದನ್ನು ಸಹ ನಿರ್ದಿಷ್ಟಪಡಿಸಬಹುದಾದ ಪ್ರದೇಶದೊಳಗೆ ನಿಷೇಧಿಸಬಹುದು. 4. ನಿರ್ದೇಶನಗಳನ್ನು ನೀಡುವ ಅಧಿಕಾರ.- (1) 3ನೇ ಪ್ರಕರಣದ ಮೇರೆಗೆ ಅಧಿಸೂಚನೆ ಹೊರಡಿಸಿದ ಮೇಲೆ ಕøಷಿಉಪ-ನಿರ್ದೇಶಕರು ನೋಟೀಸಿನ ಮೂಲಕ,- (i) ಯಾವುದೇ ಸಸ್ಯರೋಗ, ಕೀಟ, ಪರೋಪಜೀವಿ ಅಥವಾ ಹಾನಿಕರ ಕಳೆಯು ಕಾಣಿಸಿಕೊಳ್ಳುವುದನ್ನು,ಹರಡುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ನಿವಾರಿಸಲು, ನಾಶಪಡಿಸಲು ಅಥವಾ ತಡೆಗಟ್ಟಲುನೋಟೀಸಿನಲ್ಲಿ ತಾನು ನಿರ್ದಿಷ್ಟಪಡಿಸಬಹುದಾದಂಥ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು (ರೋಗಪೀಡಿತವಾದ ಅಥವಾ ರೋಗ ತಗಲುವ ಸಂಭವವಿರುವ ಸಸ್ಯಗಳನ್ನು ಕಿತ್ತುಹಾಕುವುದು ಅಥವಾ ನಾಶಪಡಿಸುವುದೂ ಸೇರಿದಂತೆ) ಜಾರಿಗೆ ತರುವಂತೆ ಬಾಧಿತ ಪ್ರದೇಶದೊಳಗಿನ ಪ್ರತಿಯೊಬ್ಬಅಧಿಭೋಗದಾರನಿಗೆ ನಿರ್ದೇಶನ ನೀಡಬಹುದು. (ii) ಹದಿನೆಂಟು ವರ್ಷಗಳಿಗಿಂತ ಕಡಿಮೆ ವಯಸ್ಸಿನವನಲ್ಲದ ಮತ್ತು ಸದರಿ ಪ್ರದೇಶದೊಳಗೆ ವಾಸಿಸುತ್ತಿರುವಯಾರೇ ವ್ಯಕ್ತಿಯನ್ನು (1)ನೇ ಖಂಡದಲ್ಲಿ ಉಲ್ಲೇಖಿಸಲಾದ ಕ್ರಮಗಳನ್ನು ಜಾರಿಗೆ ತರಲು ನೋಟೀಸಿನಲ್ಲಿನಿರ್ದಿಷ್ಟಪಡಿಸಬಹುದಾದಂಥ ನೆರವನ್ನು ನೀಡುವಂತೆ ಕೋರಬಹುದು:  ಪರಂತು,- (ಎ) ಒಮ್ಮೆಗೆ ಏಳು ದಿನಗಳನ್ನು ಮಿÁರುವ ಪೂರ್ಣಾವಧಿ ಸೇವೆಯನ್ನು ಸಲ್ಲಿಸಲು ಅಧಿಭೋಗದಾರನಲ್ಲದಯಾರೇ ವ್ಯಕ್ತಿಯನ್ನು ಕೋರತಕ್ಕದ್ದಲ್ಲ ಮತ್ತು ಯಾರೇ ವ್ಯಕ್ತಿಯು ಈಗಾಗಲೇ ಅಂಥ ಸೇವೆಯನ್ನು ಸಲ್ಲಿಸಿದ್ದರೆ, ಆತರುವಾಯ ಪೂರ್ಣಾವಧಿ ಸೇವೆ ಸಲ್ಲಿಸುವುದಕ್ಕೆ ಅವನನ್ನು ಕೋರುವ ಮೊದಲು ತೊಂಭತ್ತು ದಿನಗಳಿಗಿಂತಕಡಿಮೆಯಿಲ್ಲದ ಮಧ್ಯಂತರವಿರತಕ್ಕದ್ದು; ಮತ್ತು (ಬಿ) ವøದ್ಧಾಪ್ಯದ ಕಾರಣದಿಂದಾಗಿ, ದೈಹಿಕ ಅಸಮರ್ಥತೆ ಅಥವಾ ಇತರ ಯಾವುದೇ ಯುಕ್ತಕಾರಣದಿಂದಾಗಿ, ನೆರವು ನೀಡಲು ಅಸಮರ್ಥನಾಗಿರುವ ಅಥವಾ ಸಹಾಯವನ್ನು ನೀಡುವ ಉದ್ದೇಶಕ್ಕಾಗಿಇರಬೇಕೆಂದು ಅಗತ್ಯಪಡಿಸಲಾದ ಸ್ಥಳದಿಂದ 8 ಕಿ.ವಿೂ. ಗಿಂತ ಹೆಚ್ಚು ದೂರದಲ್ಲಿ ವಾಸಿಸುತ್ತಿರುವ ಯಾರೇವ್ಯಕ್ತಿಯನ್ನು ಅಂಥ ನೆರವು ನೀಡುವಂತೆ ಕೋರತಕ್ಕದ್ದಲ್ಲ; ಮತ್ತು(iii) (i)ನೇ ಖಂಡದಲ್ಲಿ ಉಲ್ಲೇಖಿಸಲಾದ ಕ್ರಮಗಳನ್ನು ಯಾವ ಪ್ರದೇಶದೊಳಗೆ ಮತ್ತು ಯಾವ ಅವಧಿಯೊಳಗೆಕಾರ್ಯಗತಗೊಳಿಸಬೇಕೆಂದು ನಿರ್ದಿಷ್ಟಪಡಿಸಬಹುದು. (2) (1)ನೇ ಉಪ-ಪ್ರಕರಣದ (i)ನೇ ಖಂಡದ ಮೇರೆಗೆ ಪ್ರತಿಯೊಬ್ಬ ಅಧಿಭೋಗದಾರನಿಗೆ ಅಥವಾ ಸದರಿಉಪ-ಪ್ರಕರಣದ (ii)ನೇ ಖಂಡದ ಮೇರೆಗೆ ಯಾರ ನೆರವನ್ನು ಅಗತ್ಯಪಡಿಸಲಾಗಿದೆಯೋ ಆ ಪ್ರತಿಯೊಬ್ಬ ಇತರ ವ್ಯಕ್ತಿಗೆತಿಳಿಸುವುದು ಅಗತ್ಯವಾಗಿರತಕ್ಕದ್ದಲ್ಲ ಮತ್ತು ಆ ಪ್ರದೇಶ, ಗ್ರಾಮ ಅಥವಾ ಸ್ಥಳದಲ್ಲಿ ಡಂಗುರ ಹೊಡೆಸುವ ಮೂಲಕ ಅಥವಾಇತರ ರೂಢಿಗತ ಪದ್ಧತಿಯ ಮೂಲಕ ಮಾಡಿದ ಘೋಷಣೆಯು ಆ ಪ್ರದೇಶ, ಗ್ರಾಮ ಅಥವಾ ಸ್ಥಳದಲ್ಲಿ ವಾಸಿಸುತ್ತಿರುವಎಲ್ಲಾ ಬಾಧಿತ ವ್ಯಕ್ತಿಗಳಿಗೆ ನೀಡಿದ ಸಾಕಷ್ಟು ತಿಳಿವಳಿಕೆಯೆಂದು ಭಾವಿಸತಕ್ಕದ್ದು. 5. 4ನೇ ಪ್ರಕರಣದ ಮೇರೆಗೆ ನೋಟೀಸು ಜಾರಿಯಾದ ಮೇಲೆ ಅಧಿಭೋಗದಾರನ ಕರ್ತವ್ಯಗಳು.- 4ನೇ ಪ್ರಕರಣದಮೇರೆಗೆ ನೋಟೀಸು ಜಾರಿಯಾದ ಮೇಲೆ,- (i) ಅಂಥ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನುಕಾರ್ಯಗತಗೊಳಿಸುವುದು ಬಾಧಿತ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಅಧಿಭೋಗದಾರನಕರ್ತವ್ಯವಾಗಿರತಕ್ಕದ್ದು; ಮತ್ತು (ii) ನೋಟೀಸಿನಲ್ಲಿ ನಿರ್ದಿಷ್ಟಪಡಿಸಿರುವಂಥ ರೀತಿಯಲ್ಲಿ ನೆರವು ನೀಡುವುದು ಸದರಿ ಪ್ರದೇಶದೊಳಗೆ ವಾಸಿಸುವಪ್ರತಿಯೊಬ್ಬನ ಕರ್ತವ್ಯವಾಗಿರತಕ್ಕದ್ದು. 6. ಭೂಮಿ ಅಥವಾ ಆವರಣಗಳನ್ನು ಪ್ರವೇಶಿಸಲು ಅಧಿಕಾರ.- ಪರಿಶೀಲನಾ ಅಧಿಕಾರಿಯು, ಅಧಿಭೋಗದಾರ ಅಥವಾಪ್ರಭಾರದಲ್ಲಿರುವ ಇತರ ವ್ಯಕ್ತಿಗೆ ಯುಕ್ತ ನೋಟೀಸನ್ನು ನೀಡಿದ ತರುವಾಯ, ಅಧಿಸೂಚಿತ ಪ್ರದೇಶದಲ್ಲಿನ ಯಾವುದೇಭೂಮಿ, ನೀರು ಅಥವಾ ಆವರಣದೊಳಗೆ,- (i) ಅಂಥ ಭೂಮಿ, ನೀರು ಅಥವಾ ಆವರಣದ ಮೇಲೆ ಯಾವುದೇ ಹಾನಿಕರ ಕಳೆ, ಪರೋಪಜೀವಿ, ಕೀಟಅಥವಾ ಸಸ್ಯರೋಗ ಇವೆಯೇ ಅಥವಾ ಇಲ್ಲವೇ ಎಂಬುದನ್ನು; ಮತ್ತು (ii) ಕಾರ್ಯಗತಗೊಳಿಸಬೇಕೆಂದು ನಿರ್ದೇಶಿಸಲಾದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನುಕಾರ್ಯಗತಗೊಳಿಸಲಾಗಿದೆಯೆ ಅಥವಾ ಇಲ್ಲವೇ - ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶಕ್ಕಾಗಿ ಪ್ರವೇಶಿಸಬಹುದು. 7. ಸಸ್ಯಗಳನ್ನು ಕಿತ್ತುಹಾಕುವುದು ಅಥವಾ ನಾಶಗೊಳಿಸುವುದೂ ಸೇರಿದಂತೆ ಕೀಟಗಳು ಅಥವಾ ಸಸ್ಯರೋಗಗಳನ್ನುನಿರ್ಮೂಲನಗೊಳಿಸಲು ನಿಯಮಿಸಲಾದ ಕ್ರಮಗಳಿರುವಲ್ಲಿ ಪ್ರಕ್ರಿಯೆ.- 3ನೇ ಪ್ರಕರಣದ ಮೇರೆಗಿನ ಅಧಿಸೂಚನೆಯ ಮೂಲಕಕಾರ್ಯಗತಗೊಳಿಸಬೇಕೆಂದು ನಿರ್ದೇಶಿಸಲಾದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳಲ್ಲಿ, ಯಾವುದೇ ಕೀಟಗಳು ಅಥವಾಸಸ್ಯರೋಗಗಳು ಕಾಣಿಸಿಕೊಳ್ಳುವುದನ್ನು ಅಥವಾ ಪುನಃ ಕಾಣಿಸಿಕೊಳ್ಳುವುದನ್ನು ನಿವಾರಿಸುವ ಅಥವಾ ತಡೆಗಟ್ಟುವ ದøಷ್ಟಿಯಿಂದಯಾವುದೇ ಸಸ್ಯವನ್ನು ಕಿತ್ತುಹಾಕುವುದು ಅಥವಾ ನಾಶಗೊಳಿಸುವುದೂ ಸೇರಿರುವಲ್ಲಿ ಅಂಥ ಅಧಿಸೂಚನೆಯಲ್ಲಿನಿರ್ದಿಷ್ಟಪಡಿಸಲಾದ ದಿನಾಂಕದಂದು ಅಥವಾ ಅದಕ್ಕೂ ಮುಂಚೆ ಅಂಥ ಸಸ್ಯವನ್ನು ಕಿತ್ತುಹಾಕಲು ಅಥವಾ ನಾಶಗೊಳಿಸಲುತಪ್ಪುವ ಯಾರೇ ಅಧಿಭೋಗದಾರನನ್ನು ಈ ಅಧಿನಿಯಮದ ಮೇರೆಗೆ ಅಪರಾಧ ಮಾಡಿದ್ದಾನೆಂದು ಭಾವಿಸತಕ್ಕದ್ದು ಮತ್ತುಅಂಥ ಸಸ್ಯವನ್ನು ಕಿತ್ತುಹಾಕುವ ಅಥವಾ ನಾಶಪಡಿಸುವ ಕಾರ್ಯವನ್ನು ಪರಿಶೀಲನಾ ಅಧಿಕಾರಿಯು ಮಾಡಬಹುದು ಅಥವಾಅವನ ಮೇಲ್ವಿಚಾರಣೆಯಲ್ಲಿ ಅದನ್ನು ಕಾರ್ಯಗತಗೊಳಿಸಬಹುದು. 8. ಪರಿಹಾರ ಅಥವಾ ಪ್ರತಿಬಂಧಕ ಕ್ರಮ ಕೈಗೊಳ್ಳುವುದಕ್ಕೆ ಅಧಿಭೋಗದಾರನಿಗೆ ನೋಟೀಸು.- (1) ಯಾವುದೇಭೂಮಿ, ನೀರು ಅಥವಾ ಆವರಣವನ್ನು ಪರಿಶೀಲನೆ ಮಾಡಿದ ತರುವಾಯ, 3ನೇ ಪ್ರಕರಣದ ಮೇರೆಗೆ ನಿರ್ದಿಷ್ಟಪಡಿಸಿದ ಪ್ರತಿಬಂಧ ಅಥವಾ ಪರಿಹಾರ ಕ್ರಮಗಳನ್ನು ನಿರ್ದೇಶಿಸಲಾದಂತೆ ಕಾರ್ಯಗತಗೊಳಿಸಲಾಗಿಲ್ಲವೆಂದು ಪರಿಶೀಲನಾಧಿಕಾರಿಗೆಕಂಡುಬಂದಲ್ಲಿ, ಪರಿಶೀಲನಾಧಿಕಾರಿಯು, ನಿಯಮಿಸಲಾದ ಅಧಿಕಾರಿಯ ಯಾವುದೇ ಸಾಮಾನ್ಯ ಅಥವಾ ವಿಶೇಷ ಆದೇಶಕ್ಕೆಒಳಪಟ್ಟು ಅಂಥ ನೋಟೀಸಿನಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಕಾಲದೊಳಗೆ, ನಿರ್ದೇಶಿಸಲಾದ ಪ್ರತಿಬಂಧಕ ಅಥವಾಪರಿಹಾರ ಕ್ರಮಗಳನ್ನು ಕಾರ್ಯಗತಗೊಳಿಸುವಂತೆ ಲಿಖಿತ ನೋಟೀಸಿನ ಮೂಲಕ ಅಧಿಭೋಗದಾರನಿಗೆ ತಿಳಿಸಬಹುದು. (2) ಅಧಿಭೋಗದಾರನು, ತನಗೆ ಅಂಥ ನೋಟೀಸು ಜಾರಿಯಾದ 7 ದಿನಗಳೊಳಗೆ ನಿಯಮಿಸಲಾದ ಅಧಿಕಾರಿಗೆಅಪೀಲು ಸಲ್ಲಿಸಬಹುದು. (3) (2)ನೇ ಉಪ-ಪ್ರಕರಣದ ಮೇರೆಗಿನ ಅಪೀಲನ್ನು ಸ್ವೀಕರಿಸಿದ ಮೇಲೆ ನಿಯಮಿಸಲಾದ ಅಧಿಕಾರಿಯು,ಅಪೀಲುದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟ ತರುವಾಯ, ಅದರ ಮೇಲೆ ತಾನು ಸೂಕ್ತವೆಂದುಭಾವಿಸಬಹುದಾದಂಥ ಆದೇಶವನ್ನು ಹೊರಡಿಸತಕ್ಕದ್ದು ಮತ್ತು ಅಂಥ ಆದೇಶದ ಕಾರಣದಿಂದಾಗಿ ಅಪೀಲುದಾರನುಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ಕಾರ್ಯಗತಗೊಳಿಸಬೇಕಾಗಿರುವಲ್ಲಿ, ಅಂಥ ಕ್ರಮಗಳನ್ನು ಯಾವಸಮಯದೊಳಗೆ ಕಾರ್ಯಗತಗೊಳಿಸತಕ್ಕದ್ದೆಂಬುದನ್ನು ಸಹ ಆ ಆದೇಶದಲ್ಲಿ ನಿರ್ದಿಷ್ಟಪಡಿಸತಕ್ಕದ್ದು. (4) 3ನೇ ಪ್ರಕರಣದ ಮೇರೆಗೆ ಹೊರಡಿಸಿದ ಆದೇಶವು ಅಂತಿಮ ಮತ್ತು ನಿರ್ಣಾಯಕ ವಾಗಿರತಕ್ಕದ್ದು ಮತ್ತುಅದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸತಕ್ಕದ್ದಲ್ಲ. 9. ಅಧಿಭೋಗದಾರನು ತನ್ನ ಮೇಲೆ ಜಾರಿಮಾಡಿದ ನೋಟೀಸನ್ನು ಪಾಲಿಸಲು ತಪ್ಪುವುದು ಒಂದು ಅಪರಾಧಮಾಡಿದಂತಾಗುವುದು.- 8ನೇ ಪ್ರಕರಣದ ಮೇರೆಗೆ ಯಾವ ಅಧಿಭೋಗದಾರನ ಮೇಲೆ ನೋಟೀಸನ್ನುಜಾರಿಮಾಡಲಾಗಿದೆಯೋ, ಆ ಯಾರೇ ಅಧಿಭೋಗದಾರನು ಪರಿಶೀಲನಾ ಅಧಿಕಾರಿಯು ನಿರ್ದಿಷ್ಟಪಡಿಸಿದ ಕಾಲದೊಳಗೆನೋಟೀಸನ್ನು ಪಾಲಿಸಲು ತಪ್ಪಿದರೆ ಅಥವಾ ಅಪೀಲನ್ನು ಸಲ್ಲಿಸಿದ್ದು, ನಿರ್ದಿಷ್ಟಪಡಿಸಿದ ಕಾಲದೊಳಗೆ ಪ್ರತಿಬಂಧಕ ಅಥವಾಪರಿಹಾರ ಕ್ರಮಗಳನ್ನು ಪಾಲಿಸುವಂತೆ ಅಪೀಲು ಆದೇಶವು ಅಗತ್ಯಪಡಿಸಿರುವ ಸಂದರ್ಭಗಳಲ್ಲಿ, ಅಂಥ ಕಾಲದೊಳಗೆ ಅಂಥಕ್ರಮಗಳನ್ನು ಕಾರ್ಯಗತಗೊಳಿಸಲು ತಪ್ಪಿದರೆ, ಈ ಅಧಿನಿಯಮದ ಮೇರೆಗೆ ಅವನು ಅಪರಾಧ ಮಾಡಿದ್ದಾನೆಂದುಭಾವಿಸತಕ್ಕದ್ದು ಮತ್ತು ಕಾರ್ಯಗತಗೊಳಿಸಬೇಕೆಂದು ನಿರ್ದೇಶಿಸಲಾದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನುಪರಿಶೀಲನಾಧಿಕಾರಿಯು ತಾನೇ ಅಥವಾ ತನ್ನ ಮೇಲ್ವಿಚಾರಣೆಯಲ್ಲಿ ಕಾರ್ಯಗತಗೊಳಿಸಬಹುದು. 10. ವೆಚ್ಚಗಳ ವಸೂಲಿ.- ಪರಿಶೀಲನಾಧಿಕಾರಿಯು ತಾನೇ ಅಥವಾ ತನ್ನ ಮೇಲ್ವಿಚಾರಣೆಯಲ್ಲಿ, 7ನೇ ಪ್ರಕರಣದಅಥವಾ 9ನೇ ಪ್ರಕರಣದ ಮೇರೆಗೆ ಕಾರ್ಯಗತಗೊಳಿಸಿದ ಯಾವುದೇ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳ ವೆಚ್ಚವನ್ನುಅಧಿಭೋಗದಾರನಿಂದ ಭೂಕಂದಾಯದ ಬಾಕಿಯಂತೆ ವಸೂಲುಮಾಡತಕ್ಕದ್ದು. 11. ವೆಚ್ಚಗಳ ವಿರುದ್ಧ ಅಪೀಲು.- (1) 10ನೇ ಪ್ರಕರಣದಲ್ಲಿ ಉಲ್ಲೇಖಿಸಲಾದ ಯಾರೇ ಅಧಿಭೋಗದಾರನು,- (i) ಆ ವೆಚ್ಚಗಳಲ್ಲಿ ಕಾರ್ಮಿಕ, ಸಾಮಗ್ರಿ ಅಥವಾ ಉಪಕರಣಗಳ ಬಳಕೆಯ ವೆಚ್ಚಗಳನ್ನು ಹೊರತುಪಡಿಸಿದಇತರ ಬಾಬುಗಳ ವೆಚ್ಚಗಳು ಒಳಗೊಂಡಿದೆ; (ii) ಕಾರ್ಮಿಕ, ಸಾಮಗ್ರಿಯ ಅಥವಾ ಉಪಕರಣಗಳ ಬಳಕೆಯ ವೆಚ್ಚಗಳು ಅನುಚಿತವಾಗಿ ಹೆಚ್ಚಾಗಿವೆ ಅಥವಾವಾಸ್ತವಿಕವಾಗಿ ಮಾಡಿದ ಖರ್ಚಿಗಿಂತ ಹೆಚ್ಚಾಗಿದೆ; - ಎಂಬ ಕಾರಣಗಳ ಮೇಲೆ ಅಂಥ ವೆಚ್ಚಗಳನ್ನು ಸಂದಾಯ ಮಾಡುವಂತೆ ಮೊದಲು ತಗಾದೆಮಾಡಿದದಿನಾಂಕದಿಂದ ಮೂವತ್ತು ದಿನಗಳೊಳಗೆ ನಿಯಮಿಸಲಾದ ಅಧಿಕಾರಿಗೆ ಅಪೀಲು ಸಲ್ಲಿಸಬಹುದು. (2) (1)ನೇ ಉಪ-ಪ್ರಕರಣದ ಮೇರೆಗೆ ಅಪೀಲನ್ನು ಸ್ವೀಕರಿಸಿದ ಮೇಲೆ, ನಿಯಮಿಸಲಾದ ಅಧಿಕಾರಿಯುಅಧಿಭೋಗದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ಕೊಟ್ಟ ತರುವಾಯ, ಅದರ ಮೇಲೆ ತಾನುಸೂಕ್ತವೆಂದು ಭಾವಿಸಬಹುದಾದಂಥ ಆದೇಶವನ್ನು ಹೊರಡಿಸಬಹುದು. (3) (2)ನೇ ಉಪ-ಪ್ರಕರಣದ ಮೇರೆಗೆ ಹೊರಡಿಸಿದ ಆದೇಶವು ಅಂತಿಮ ಮತ್ತು ನಿರ್ಣಾಯಕವಾಗಿರತಕ್ಕದ್ದು ಮತ್ತುಅದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸತಕ್ಕದ್ದಲ್ಲ. 12. ಕ್ರಿಮಿ, ಕೀಟಗಳು, ಸಸ್ಯರೋಗಗಳು ಅಥವಾ ಹಾನಿಕರ ಕಳೆಗಳ ಬಗ್ಗೆ ವರದಿ ಮಾಡುವುದು ಗ್ರಾಮಾಧಿಕಾರಿಗಳಹೊಣೆ.- ಕ್ರಿಮಿಕೀಟ, ಸಸ್ಯರೋಗ ಅಥವಾ ಹಾನಿಕರ ಕಳೆಯನ್ನು ಹೋಲುವ ಕೀಟಗಳು, ರೋಗಗಳು ಅಥವಾ ಹಾನಿಕರಕಳೆಯು ಯಾವ ಅಧಿಸೂಚಿತ ಪ್ರದೇಶದ ಪರಿಮಿತಿಯೊಳಗೆ ಕಂಡುಬರುವುದೋ ಆ ಅಧಿಸೂಚಿತ ಪ್ರದೇಶದ ಪಕ್ಕದಲ್ಲಿರುವಗ್ರಾಮದ ಪ್ರತಿಯೊಬ್ಬ ಗ್ರಾಮಾಧಿಕಾರಿಯು ಈ ಸಂಬಂಧ ರಾಜ್ಯ ಸರ್ಕಾರವು, ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದಂಥಅಧಿಕಾರಿಗಳಿಗೆ ಅದನ್ನು ವರದಿ ಮಾಡತಕ್ಕದ್ದು. ವಿವರಣೆ.- ಈ ಪ್ರಕರಣದ ಉದ್ದೇಶಗಳಿಗಾಗಿ, ``ಗ್ರಾಮಾಧಿಕಾರಿ'' ಎಂಬ ಪದವು ಗ್ರಾಮಲೆಕ್ಕಿಗ, ಗ್ರಾಮ ಪಂಚಾಯಿತಿಕಾರ್ಯದರ್ಶಿ ಮತ್ತು ಗ್ರಾಮ ಸೇವಕ ಇವರನ್ನು ಒಳಗೊಳ್ಳುತ್ತದೆ.  13. ದಂಡಗಳು.- (1) 3ನೇ ಪ್ರಕರಣದ ಮೇರೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಿದ ಯಾವುದೇ ನಿಷೇಧ,ನಿರ್ಬಂಧ ಅಥವಾ ನಿರ್ದೇಶನವನ್ನು ಉಲ್ಲಂಘಿಸುವ ಯಾರೇ ಆಗಲಿ ಅಪರಾಧ ನಿರ್ಣಯವಾದ ಮೇಲೆ ಐವತ್ತುರೂಪಾಯಿಗಳವರೆಗಿನ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು. (2) ಈ ಅಧಿನಿಯಮದ 7ನೇ ಪ್ರಕರಣ ಅಥವಾ 9ನೇ ಪ್ರಕರಣದ ಮೇರೆಗೆ ಅಪರಾಧ ಮಾಡಿದ್ದಾನೆಂದುಭಾವಿಸಲಾಗುವ ಯಾರೇ ಅಧಿಭೋಗದಾರನನ್ನು, ಅಪರಾಧ ನಿರ್ಣಯವಾದ ಮೇಲೆ, ಐವತ್ತು ರೂಪಾಯಿಗಳವರೆಗಿನಜುಲ್ಮಾನೆಯಿಂದ ದಂಡಿಸತಕ್ಕದ್ದು. (3) 20ನೇ ಪ್ರಕರಣದ ಮೇರೆಗೆ ರಚಿಸಿದ ಯಾವುದೇ ನಿಯಮದ ಉಪಬಂಧಗಳನ್ನು ಉಲ್ಲಂಘಿಸುವ ಯಾರೇಆಗಲಿ ಅಪರಾಧ ನಿರ್ಣಯವಾದ ಮೇಲೆ ಐವತ್ತು ರೂಪಾಯಿವರೆಗಿನ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು. (4) (ಎ) ಈ ಅಧಿನಿಯಮದ ಉಪಬಂಧಗಳ ಮೂಲಕ ಅಥವಾ ಅದಕ್ಕೆ ಅನುಸಾರವಾಗಿ ತನಗೆ ಪ್ರದತ್ತವಾದಯಾವುವೇ ಅಧಿಕಾರಗಳನ್ನು ಚಲಾಯಿಸುವ ಅಥವಾ ವಿಧಿಸಲಾದ ಯಾವುವೇ ಕರ್ತವ್ಯಗಳನ್ನು ನಿರ್ವಹಿಸುವ ಅಥವಾ ಅನ್ಯಥಾಈ ಅಧಿನಿಯಮದ ಉಪಬಂಧಗಳ ಮೇರೆಗೆ ಅಥವಾ ಅದರ ಮೇರೆಗೆ ಮಾಡಿದ ಅಥವಾ ನೀಡಿದ ಯಾವುವೇ ಆದೇಶಗಳುಅಥವಾ ನಿರ್ದೇಶನಗಳ ಮೇರೆಗೆ ಕೈಗೊಂಡ ಅಥವಾ ಕೈಗೊಳ್ಳಬೇಕಾದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳಿಗೆಸಂಬಂಧಿಸಿದ ಯಾವುದೇ ಪ್ರಕಾರ್ಯಗಳನ್ನು ನಿರ್ವಹಿಸುವ ಯಾರೇ ಅಧಿಕಾರಿ ಅಥವಾ ವ್ಯಕ್ತಿಗೆ; ಅಥವಾ (ಬಿ) ಮೇಲೆ ಹೇಳಿದ ಯಾರೇ ಅಧಿಕಾರಿಯ ಅಥವಾ ವ್ಯಕ್ತಿಯ ಆದೇಶಗಳನ್ನು ಅಥವಾ ನಿರ್ದೇಶನಗಳನ್ನುಕಾರ್ಯಗತಗೊಳಿಸುವ ಯಾರೇ ವ್ಯಕ್ತಿಗೆ ಅಥವಾ ಅನ್ಯಥಾ ಈ ಅಧಿನಿಯಮದ ಅಥವಾ ಅದರ ಮೇರೆಗೆ ಮಾಡಿದ ಯಾವುವೇಆದೇಶಗಳನ್ನು ಅಥವಾ ನೀಡಲಾದ ಯಾವುವೇ ನಿರ್ದೇಶನಗಳನ್ನು ಪಾಲಿಸುವಾಗ ತನ್ನ ಕರ್ತವ್ಯಕ್ಕನುಸಾರವಾಗಿಕಾರ್ಯನಿರ್ವಹಿಸುವ ಯಾರೇ ವ್ಯಕ್ತಿಗೆ; - ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವ ಅಥವಾ ಯಾವುದೇ ಪ್ರತಿರೋಧ ಒಡ್ಡುವ ಅಥವಾ ಅಡಚಣೆ ಮಾಡುವಅಥವಾ ಅನ್ಯಥಾ ಹಸ್ತಕ್ಷೇಪ ಮಾಡುವ ಯಾರೇ ಆಗಲಿ ಅಪರಾಧ ನಿರ್ಣಯವಾದ ಮೇಲೆ ಐದುನೂರುರೂಪಾಯಿಗಳವರೆಗಿನ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು. 14. ಅಪರಾಧಗಳ ಸಂe್ಞÉೀಯತೆ.- ಕøಷಿ ಉಪ-ನಿರ್ದೇಶಕರು, ಅಥವಾ ಅವರ ಅಧಿಕಾರ ಪತ್ರದ ಮೇರೆಗೆ ನೀಡಿದದೂರನ್ನುಳಿದು ಯಾವುದೇ ನ್ಯಾಯಾಲಯವು ಈ ಅಧಿನಿಯಮದ ಮೇರೆಗೆ ದಂಡನೀಯವಾದ ಯಾವುದೇ ಅಪರಾಧವನ್ನುಸಂಜ್ಞಾನಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ. 15. ಕಂಪನಿಗಳಿಂದ ಅಪರಾಧಗಳು.- (1) ಈ ಅಧಿನಿಯಮದ ಮೇರೆಗಿನ ಯಾವುದೇ ಅಪರಾಧವನ್ನು ಮಾಡುವವ್ಯಕ್ತಿಯು ಕಂಪನಿಯಾಗಿದ್ದರೆ, ಆ ಅಪರಾಧವು ನಡೆದ ಕಾಲದಲ್ಲಿ ಆ ಕಂಪನಿಯ ಪ್ರಭಾರವನ್ನು ಹೊಂದಿದ್ದ ಮತ್ತು ಕಂಪನಿಯವ್ಯವಹಾರವನ್ನು ನಡೆಸಲು ಕಂಪನಿಗೆ ಜವಾಬ್ದಾರನಾಗಿದ್ದ ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಕಂಪನಿಯನ್ನು ಸಹ ಆ ಅಪರಾಧದತಪ್ಪಿತಸ್ಥರೆಂದು ಭಾವಿಸತಕ್ಕದ್ದು ಮತ್ತು ತನ್ನ ವಿರುದ್ಧ ವ್ಯವಹರಣೆಗೆ ಅವರು/ಅದು ಗುರಿಯಾಗತಕ್ಕದ್ದು ಮತ್ತು ತದನುಸಾರವಾಗಿದಂಡಿತವಾಗತಕ್ಕದ್ದು: ಪರಂತು, ಅಂಥ ಯಾವನೇ ವ್ಯಕ್ತಿಯು ತನಗೆ ತಿಳಿಯದಂತೆ ಆ ಅಪರಾಧವು ನಡೆಯಿತೆಂದು ಅಥವಾ ಅಂಥಅಪರಾಧ ನಡೆಯುವುದನ್ನು ತಡೆಗಟ್ಟಲು ಎಲ್ಲಾ ಯುಕ್ತ ಜಾಗರೂಕತೆಯನ್ನು ವಹಿಸಿದ್ದೆನೆಂದು ಅವನು ರುಜುವಾತುಪಡಿಸಿದರೆ,ಈ ಉಪ-ಪ್ರಕರಣದಲ್ಲಿರುವುದಾವುದೂ ಅವನನ್ನು ಅಂಥ ಯಾವುದೇ ದಂಡನೆಗೆ ಗುರಿಪಡಿಸತಕ್ಕದ್ದಲ್ಲ. (2) (1)ನೇ ಉಪ-ಪ್ರಕರಣದಲ್ಲಿ ಏನೇ ಇದ್ದರೂ, ಈ ಅಧಿನಿಯಮದ ಮೇರೆಗಿನ ಅಪರಾಧವನ್ನು ಕಂಪನಿಯುಮಾಡಿದ್ದರೆ ಮತ್ತು ಆ ಅಪರಾಧವನ್ನು ಯಾರೇ ನಿರ್ದೇಶಕನ, ವ್ಯವಸ್ಥಾಪಕನ, ಕಾರ್ಯದರ್ಶಿಯ ಅಥವಾ ಕಂಪನಿಯ ಇತರಅಧಿಕಾರಿಯ ಸಮ್ಮತಿಯಿಂದ ಅಥವಾ ಪರೋಕ್ಷ ಸಮ್ಮತಿಯಿಂದ ಮಾಡಲಾಗಿದೆಯೆಂದು ರುಜುವಾತಾದರೆ ಅಥವಾ ಅವರಯಾವುದೇ ನಿರ್ಲಕ್ಷ ್ಯದಿಂದ ಸಂಭವಿಸಿತೆಂದು ಆರೋಪಿಸಬಹುದಾದರೆ ಅಂಥ ನಿರ್ದೇಶಕನನ್ನು, ವ್ಯವಸ್ಥಾಪಕನನ್ನು,ಕಾರ್ಯದರ್ಶಿಯನ್ನು ಅಥವಾ ಇತರ ಅಧಿಕಾರಿಯನ್ನು ಸಹ ಆ ಅಪರಾಧದ ತಪ್ಪಿತಸ್ಥರೆಂದು ಭಾವಿಸತಕ್ಕದ್ದು ಮತ್ತು ಅವರುತಮ್ಮ ವಿರುದ್ಧದ ವ್ಯವಹರಣೆಗೆ ಗುರಿಯಾಗತಕ್ಕದ್ದು ಮತ್ತು ತದನುಸಾರವಾಗಿ ದಂಡಿತರಾಗತಕ್ಕದ್ದು. ವಿವರಣೆ.- ಈ ಪ್ರಕರಣದ ಉದ್ದೇಶಗಳಿಗಾಗಿ,- (ಎ) ``ಕಂಪನಿ'' ಎಂದರೆ ಒಂದು ನಿಗಮಿತ ನಿಕಾಯ ಮತ್ತು ಅದು ಒಂದು ಫರ್ಮನ್ನು ಅಥವಾ ವ್ಯಕ್ತಿಗಳ ಇತರಸಂಘವನ್ನು ಒಳಗೊಳ್ಳುತ್ತದೆ; (ಬಿ) ಫರ್ಮಿನ ಸಂಬಂಧದಲ್ಲಿ ``ನಿರ್ದೇಶಕ'' ಎಂದರೆ ಫರ್ಮಿನ ಪಾಲುದಾರ. 16. ಈ ಅಧಿನಿಯಮದ ಮೇರೆಗೆ ಕೈಗೊಂಡ ಕ್ರಮದ ರಕ್ಷಣೆ.- ಈ ಅಧಿನಿಯಮದ ಮೇರೆಗೆ ಸದ್ಭಾವನೆಯಿಂದಮಾಡಿದ ಅಥವಾ ಮಾಡಲು ಉದ್ದೇಶಿಸಿದ ಯಾವುದೇ ಕಾರ್ಯದ ಸಂಬಂಧದಲ್ಲಿ ಅಥವಾ ಈ ಅಧಿನಿಯಮದಉಪಬಂಧಗಳನ್ನು ಕಾರ್ಯಗತಗೊಳಿಸುವಲ್ಲಿ ಸದ್ಭಾವನೆಯಿಂದ ಕೈಗೊಂಡ ಯಾವುದೇ ಕ್ರಮದಿಂದ ಉಂಟಾದ ಯಾವುದೇ ಹಾನಿಗಾಗಿ ರಾಜ್ಯ ಸರ್ಕಾರ ಅಥವಾ ಯಾರೇ ಅಧಿಕಾರಿಯ ವಿರುದ್ಧ ಯಾವುದೇ ದಾವೆ, ಪ್ರಾಸಿಕ್ಯೂಷನ್ ಅಥವಾ ಇತರಕಾನೂನು ವ್ಯವಹರಣೆಗಳನ್ನು ಹೂಡಲು ಅವಕಾಶವಿರತಕ್ಕದ್ದಲ್ಲ. 17. ಪರಿಶೀಲನಾಧಿಕಾರಿಗಳ ನೇಮಕ.- ಈ ಅಧಿನಿಯಮದ ಮೇರೆಗೆ ಪರಿಶೀಲನಾಧಿಕಾರಿಯ ಅಧಿಕಾರಗಳನ್ನುಚಲಾಯಿಸುವ ಮತ್ತು ಕರ್ತವ್ಯಗಳನ್ನು ನಿರ್ವಹಿಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಅಧಿಸೂಚನೆ ಹೊರಡಿಸಿ,ಪರಿಶೀಲನಾಧಿಕಾರಿಗಳನ್ನು ನೇಮಿಸಬಹುದು. 18. ಅಧಿಕಾರಗಳ ಪ್ರತ್ಯಾಯೋಜನೆ.- ರಾಜ್ಯ ಸರ್ಕಾರವು, ಅಧಿಸೂಚನೆ ಹೊರಡಿಸಿ, ಅಂಥ ಅಧಿಸೂಚನೆಯಲ್ಲಿನಿರ್ದಿಷ್ಟಪಡಿಸಬಹುದಾದಂಥ ನಿರ್ಬಂಧಗಳು ಮತ್ತು ಷರತ್ತುಗಳಿಗೊಳಪಟ್ಟು ಕøಷಿ ನಿರ್ದೇಶಕನಿಗೆ ಅಥವಾ ಯಾರೇ ಇತರಅಧಿಕಾರಿಗೆ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರಕ್ಕೆ 18 ಮತ್ತು 19ನೇ ಪ್ರಕರಣಗಳ ಮೂಲಕ ತನಗೆ ಪ್ರದತ್ತವಾದಅಧಿಕಾರಗಳನ್ನು ಹೊರತುಪಡಿಸಿ, ಈ ಅಧಿನಿಯಮದ ಮೇರೆಗಿನ ಅದರ ಎಲ್ಲಾ ಅಥವಾ ಯಾವುದೇ ಅಧಿಕಾರಗಳನ್ನುಪ್ರತ್ಯಾಯೋಜಿಸಬಹುದು: ಪರಂತು, ಕøಷಿ ನಿರ್ದೇಶಕರನ್ನು ಹೊರತುಪಡಿಸಿ ಯಾರೇ ಅಧಿಕಾರಿಗೆ ಅಥವಾ ಪ್ರಾಧಿಕಾರಕ್ಕೆ 3ನೇ ಪ್ರಕರಣದಮೇರೆಗಿನ ಅಧಿಕಾರಗಳ ಪ್ರತ್ಯಾಯೋಜನೆಯನ್ನು ಮಾಡತಕ್ಕದ್ದಲ್ಲ. 19. ರಾಜ್ಯ ಸರ್ಕಾರದಿಂದ ನಿರ್ದೇಶನಗಳು.- ರಾಜ್ಯ ಸರ್ಕಾರವು, ಸಾಮಾನ್ಯ ಅಥವಾ ವಿಶೇಷ ಆದೇಶಗಳ ಮೂಲಕ,ಈ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ ಆ ಅಧಿಕಾರಿಗಳಿಗೆ ಪ್ರದತ್ತವಾದ ಅಧಿಕಾರಗಳನ್ನು ಅಂಥ ಆದೇಶಗಳಲ್ಲಿನಿರ್ದಿಷ್ಟ ಪಡಿಸಬಹುದಾದಂಥ ಪ್ರದೇಶಗಳಲ್ಲಿ ಅಥವಾ ಅಂಥ ಬೆಳೆಗಳ ಸಂಬಂಧದಲ್ಲಿ ಅಂಥ ಅಧಿಕಾರಿಗಳುಚಲಾಯಿಸತಕ್ಕದ್ದೆಂದು ನಿರ್ದೇಶಿಸಬಹುದು. 20. ನಿಯಮ ರಚನಾಧಿಕಾರ.- (1) ರಾಜ್ಯ ಸರ್ಕಾರವು, ಈ ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸಲುಪೂರ್ವ ಪ್ರಕಟಣೆಯ ತರುವಾಯ, ಅಧಿಸೂಚನೆ ಹೊರಡಿಸಿ ನಿಯಮಗಳನ್ನು ರಚಿಸಬಹುದು. (2) ಈ ಅಧಿನಿಯಮದ ಮೇರೆಗೆ ರಚಿಸಿದ ಪ್ರತಿಯೊಂದು ನಿಯಮವನ್ನು, ಅದನ್ನು ರಚಿಸಿದ ತರುವಾಯ ಆದಷ್ಟುಬೇಗನೆ, ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಅದು ಅಧಿವೇಶನದಲ್ಲಿರುವಾಗ, ಒಂದುಅಧಿವೇಶನದಲ್ಲಿ ಅಥವಾ ಎರಡು ಅಥವಾ ಹೆಚ್ಚಿನ ಅನುಕ್ರಮ ಅಧಿವೇಶನಗಳಲ್ಲಿ ಅಡಕವಾಗಬಹುದಾದ ಒಟ್ಟು ಮೂವತ್ತುದಿವಸಗಳ ಅವಧಿಯವರೆಗೆ ಇಡತಕ್ಕದ್ದು ಮತ್ತು ಅದನ್ನು ಹಾಗೆ ಇಡಲಾದ ಅಧಿವೇಶನ ಅಥವಾ ಮೇಲೆ ಹೇಳಿದ ಅನುಕ್ರಮದಅಧಿವೇಶನಗಳು ಮುಕ್ತಾಯವಾಗುವುದಕ್ಕೆ ಮುಂಚೆ ಆ ನಿಯಮಗಳಲ್ಲಿ ಯಾವುದೇ ಮಾರ್ಪಾಟನ್ನು ಮಾಡಬೇಕೆಂದು ಎರಡೂಸದನಗಳು ಒಪ್ಪಿದರೆ ಅಥವಾ ಆ ನಿಯಮವನ್ನು ಮಾಡಕೂಡದೆಂದು ಎರಡೂ ಸದನಗಳು ಒಪ್ಪಿದರೆ, ಆ ತರುವಾಯ, ಆನಿಯಮವು ಸಂದರ್ಭಾನುಸಾರ ಹಾಗೆ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾಪರಿಣಾಮಕಾರಿಯಾಗತಕ್ಕದ್ದಲ್ಲ. ಆದಾಗ್ಯೂ, ಯಾವುದೇ ಅಂಥ ಮಾರ್ಪಾಟು ಅಥವಾ ರದ್ದಿಯಾತಿಯು ಆ ನಿಯಮದಮೇರೆಗೆ ಈ ಹಿಂದೆ ಮಾಡಿದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧಕವನ್ನುಂಟು ಮಾಡತಕ್ಕದ್ದಲ್ಲ. 21. ನಿರಸನ ಮತ್ತು ಉಳಿಸುವಿಕೆಗಳು.- 1[ಕರ್ನಾಟಕ ರಾಜ್ಯದ]1 ವಿವಿಧ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಮುಂಬಯಿಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1947 (1947ರ ಮುಂಬಯಿ ಅಧಿನಿಯಮ ಸಂಖ್ಯೆ 43),ಕೊಡಗು ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1933 (1933ರ ಕೊಡಗು ಅಧಿನಿಯಮ ಸಂಖ್ಯೆ 2),ಹೈದರಾಬಾದ್ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ವಿನಿಮಯ, 1352 ಫಸಲಿ, ಮದರಾಸು ಕøಷಿ ಸಂಬಂಧಿಕೀಟಗಳು ಮತ್ತು ರೋಗಗಳ ಅಧಿನಿಯಮ, 1919 (1919ರ ಮದ್ರಾಸು ಅಧಿನಿಯಮ ಸಂಖ್ಯೆ 3) ಮತ್ತು ಕರ್ನಾಟಕವಿನಾಶಕಾರಿ ಕ್ರಿಮಿಗಳು ಮತ್ತು ಕೀಟಗಳ ಅಧಿನಿಯಮ, 1917 (ಕರ್ನಾಟಕ ಅಧಿನಿಯಮ 1917ರ 6) - ಇವುಗಳನ್ನು ಈಮೂಲಕ ನಿರಸನಗೊಳಿಸಲಾಗಿದೆ: ಪರಂತು, 1[ಕರ್ನಾಟಕ ಸಾಮಾನ್ಯ ಖಂಡಗಳ ಅಧಿನಿಯಮ, 1899 (ಕರ್ನಾಟಕ ಅಧಿನಿಯಮ 1899ರ 3)]1 ರ6ನೇ ಪ್ರಕರಣವು ಅಂಥ ನಿರಸನಕ್ಕೆ ಅನ್ವಯವಾಗತಕ್ಕದ್ದು ಮತ್ತು ಸದರಿ ಅಧಿನಿಯಮದ 8 ಮತ್ತು 24ನೇ ಪ್ರಕರಣಗಳು ಸದರಿಅಧಿನಿಯಮಗಳನ್ನು ಈ ಅಧಿನಿಯಮದ ಮೂಲಕ ನಿರಸನಗೊಳಿಸಿ ಪುನರ್ ಅಧಿನಿಯಮಿತಿಗೊಳಿಸಿದ್ದರೆ ಹೇಗೋ ಹಾಗೆಅನ್ವಯವಾಗತಕ್ಕದ್ದು.1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.* * * ಅಧಿಸೂಚನೆಬೆಂಗಳೂರು, ದಿನಾಂಕ 13ನೇ ಅಕ್ಟೋಬರ್ 1971 [ಕ್ರಮಾಂಕ ಎಎಫ್. 142 ಎಎಂಎಸ್ 69] ಎಸ್.ಓ. 1734 ಎ.- ಮೈಸೂರು ಕøಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968 (1969ರಮೈಸೂರು ಅಧಿನಿಯಮ ಸಂ.1)ರ 1ನೇ ಪ್ರಕರಣದ (3)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನುಚಲಾಯಿಸಿ, ಮೈಸೂರು ಸರ್ಕಾರವು 1971ರ ಅಕ್ಟೋಬರ್ 13ನೇ ದಿನವನ್ನು ಸದರಿ ಅಧಿನಿಯಮವು ಜಾರಿಗೆ ಬರತಕ್ಕದಿನಾಂಕವೆಂದು ಈ ಮೂಲಕ ಗೊತ್ತುಪಡಿಸಿದೆ.

ಭಾರತದ ರಾಷ್ಟ್ರಪತಿಯವರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,ಆರ್.ಎ. ನಾಯಕ್,ಸರ್ಕಾರದ ಕಾರ್ಯದರ್ಶಿ,ಕøಷಿ ಮತ್ತು ಅರಣ್ಯ ಇಲಾಖೆ.(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ Iಗಿ-2ಸಿ (ii), ದಿನಾಂಕ 13-10-1971ರಲ್ಲಿ ಸಂಖ್ಯೆ 142 ಎಂದುಪ್ರಕಟಿಸಲಾಗಿದೆ.) ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ನಿಯಮಗಳು, 1971ವಿಷಯಾನುಕ್ರಮಣಿಕೆ 1. ಹೆಸರು ಮತ್ತು ಪ್ರಾರಂಭ 2. ಪರಿಭಾಷೆಗಳು 3. ನೋಟೀಸುಗಳು 4. ಪ್ರತಿಬಂಧಕ ಮತ್ತು ಪರಿಹಾರ ಕ್ರಮಗಳ ವೆಚ್ಚ 5. ಅಪೀಲುಗಳು 6. ನಮೂನೆ 1 ರಿಂದ 6 ಕøಷಿ ಮತ್ತು ಅರಣ್ಯ ಸಚಿವಾಲಯಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ನಿಯಮಗಳು, 1971(ಜಿಎಸ್‍ಆರ್ 260, ದಿನಾಂಕ 3-8-1974ಮತ್ತು ಜಿಎಸ್‍ಆರ್ 294, ದಿನಾಂಕ 29-9-1980ರಮೂಲಕ ತಿದ್ದುಪಡಿಯಾದಂತೆ) ಜಿ.ಎಸ್.ಆರ್. 325. ಕರ್ನಾಟಕ ಕøಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968ರ 20ನೇಪ್ರಕರಣದ ಮೂಲಕ ಅಗತ್ಯಪಡಿಸಿದಂತೆ, ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ನಿಯಮಗಳು, 1971ಇದರ ಕರಡನ್ನು, ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ 1971ರ ಆಗಸ್ಟ್ 31ರಂದು ಅಥವಾ ಅದಕ್ಕೂಮೊದಲು ಆಕ್ಷೇಪಗಳು ಮತ್ತು ಸಲಹೆಗಳನ್ನು ಆಹ್ವಾನಿಸಿ, ಅಧಿಸೂಚನೆ ಸಂ.ಜಿ.ಎಸ್.ಆರ್ 224 (ಎಎಫ್ 142 ಎಎಮ್‍ಎಸ್69) ದಿನಾಂಕ 14:16ನೇ ಜುಲೈ 1971ರಲ್ಲಿ 22ನೇ ಜುಲೈ 1971ರ ದಿನಾಂಕದ ಕರ್ನಾಟಕ ರಾಜಪತ್ರದಲ್ಲಿ ಪ್ರಕಟಿಸಿದ್ದರಿಂದ; ಮತ್ತು ಸದರಿ ರಾಜಪತ್ರವನ್ನು 1971ರ ಜುಲೈ 22 ರಂದು ಸಾರ್ವಜನಿಕರಿಗೆ ದೊರಕುವಂತೆ ಮಾಡಿದ್ದರಿಂದ; ಮತ್ತು, ಸದರಿ ಕರಡಿಗೆ ಆಕ್ಷೇಪಗಳು ಅಥವಾ ಸಲಹೆಗಳು ಬಾರದೆ ಇದ್ದುದರಿಂದ; ಈಗ ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1968 (1969ರ ಕರ್ನಾಟಕಅಧಿನಿಯಮ ಸಂಖ್ಯೆ 1)ರ 20ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈಮೂಲಕ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:- 1. ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳನಿಯಮಗಳು, 1971 ಎಂದು ಕರೆಯತಕ್ಕದ್ದು. (2) ಅವು ಈ ಕೂಡಲೇ ಜಾರಿಗೆ ಬರತಕ್ಕದ್ದು. 2. ಪರಿಭಾಷೆಗಳು.- ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,- (ಎ) ``ಅಧಿನಿಯಮ'' ಎಂದರೆ ಕರ್ನಾಟಕ ಕøಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968; (ಬಿ) ``ನಮೂನೆ'' ಎಂದರೆ, ಈ ನಿಯಮಗಳಿಗೆ ಲಗತ್ತಿಸಲಾದ ನಮೂನೆ; (ಸಿ) ``ಪ್ರಕರಣ'' ಎಂದರೆ ಈ ಅಧಿನಿಯಮದ ಪ್ರಕರಣ. 3. ನೋಟೀಸುಗಳು.- (1) 6ನೇ ಪ್ರಕರಣದ ಮೇರೆಗಿನ ನೋಟೀಸು ನಮೂನೆ 1 ರಲ್ಲಿರತಕ್ಕದ್ದು ಮತ್ತುಪರಿಶೀಲನಾಧಿಕಾರಿಯು 6ನೇ ಪ್ರಕರಣದ ಮೇರೆಗೆ ಕೊಡಲಾದ ನೋಟೀಸುಗಳ ರಿಜಿಸ್ಟರನ್ನು ನಮೂನೆ 4 ರಲ್ಲಿ ಇಡತಕ್ಕದ್ದು. (2) 8ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ನೋಟೀಸು ನಮೂನೆ 2 ರಲ್ಲಿರತಕ್ಕದ್ದು ಮತ್ತುಪರಿಶೀಲನಾಧಿಕಾರಿಯು 8ನೇ ಪ್ರಕರಣದ ಮೇರೆಗೆ ಕೊಡಲಾದ ನೋಟೀಸುಗಳ ರಿಜಿಸ್ಟರನ್ನು ನಮೂನೆ 5 ರಲ್ಲಿ ಇಡತಕ್ಕದ್ದು. (3) 7ನೇ ಪ್ರಕರಣ ಅಥವಾ 9ನೇ ಪ್ರಕರಣದ ಮೇರೆಗಿನ ಯಾವುದೇ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳವೆಚ್ಚಗಳ ತಗಾದೆ ನೋಟೀಸು ನಮೂನೆ 3ರಲ್ಲಿರತಕ್ಕದ್ದು. (4) 8ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ನೋಟೀಸನ್ನು ಮತ್ತು 10ನೇ ಪ್ರಕರಣದ ಮೇರೆಗಿನತಗಾದೆ ನೋಟೀಸನ್ನು, ನೋಟೀಸಿನ ದ್ವಿಪ್ರತಿಗಳಲ್ಲೊಂದನ್ನು ಅಧಿಭೋಗದಾರನಿಗೆ ಖುದ್ದಾಗಿ ತಲುಪಿಸುವ ಅಥವಾ ಕೊಡುವಮೂಲಕ, ಅಥವಾ ಅವನ ಕುಟುಂಬದ ಯಾರೇ ಒಬ್ಬ ವಯಸ್ಕ ಪುರುಷ ಸದಸ್ಯನ ಅಥವಾ ಒಬ್ಬ ಅಧಿಕøತ ಏಜಂಟನ ಬಳಿನಕಲುಗಳಲ್ಲಿ ಒಂದನ್ನು ಕೊಡುವ ಮೂಲಕ ಅಥವಾ ಅಧಿಭೋಗದಾರನು ಸಾಮಾನ್ಯವಾಗಿ ವಾಸಿಸುವ ಮನೆಯ ಯಾವುದೇಎದ್ದುಕಾಣುವ ಭಾಗದ ಮೇಲೆ ನೋಟೀಸಿನ ನಕಲುಗಳಲ್ಲಿ ಒಂದನ್ನು ಅಂಟಿಸುವ ಮೂಲಕ ಜಾರಿ ಮಾಡತಕ್ಕದ್ದು ಮತ್ತು ಆತರುವಾಯ ನೋಟೀಸನ್ನು ಅಧಿಭೋಗದಾರನಿಗೆ ಕ್ರಮಬದ್ಧವಾಗಿ ಜಾರಿಮಾಡಲಾಗಿದೆಯೆಂದು ಭಾವಿಸತಕ್ಕದ್ದು.  1[(5) 7ನೇ ಮತ್ತು 9ನೇ ಪ್ರಕರಣಗಳ ಮೇರೆಗೆ ಕೈಗೊಂಡ ಪ್ರತಿಬಂಧಕ ಅಥವಾ ಪರಿಹಾರಗಳ, 10ನೇ ಪ್ರಕರಣದಮೇರೆಗೆ ಭೂಕಂದಾಯದ ಬಾಕಿಯಂತೆ ವಸೂಲು ಮಾಡಬಹುದಾದ, ವೆಚ್ಚದ ತಗಾದೆಯನ್ನು ತೋರಿಸುವ ತಃಖ್ತೆಯು 6ನೇನಮೂನೆಯಲ್ಲಿರತಕ್ಕದ್ದು.]11. ``ಕೃಷಿ ನಿರ್ದೇಶಕರು'' ಎಂಬ ಪದಗಳಿಗೆ ಬದಲಾಗಿ ಜಿ.ಎಸ್.ಆರ್ 260 ದಿನಾಂಕ 3.8.1974ರ ಮೂಲಕ 19.9.1974 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 4. ಪ್ರತಿಬಂಧಕ ಮತ್ತು ಪರಿಹಾರ ಕ್ರಮಗಳ ವೆಚ್ಚ.- 7ನೇ ಪ್ರಕರಣದ ಅಥವಾ 9ನೇ ಪ್ರಕರಣದ ಮೇರೆಗೆಕಾರ್ಯಗತಗೊಳಿಸಲಾದ ಯಾವುದೇ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳ ವೆಚ್ಚವನ್ನು ನಿರ್ಧರಿಸುವ ಉದ್ದೇಶಕ್ಕಾಗಿಪ್ರಚಲಿತ ಮಾರುಕಟ್ಟೆ ದರಗಳಲ್ಲಿ ಮಜೂರಿಗಳು, ಸಾಮಗ್ರಿ, ಉಪಕರಣಗಳ ಬಳಕೆ ಮತ್ತು ಅಂಥ ಇತರ ಸಂಬಂಧಪಟ್ಟಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು. 5. ಅಪೀಲುಗಳು.- (1) 1[ಸಂಬಂಧಪಟ್ಟ ಕøಷಿ ವಿಭಾಗೀಯ ಜಂಟಿ ನಿರ್ದೇಶಕರು]1 8 ಮತ್ತು 11ನೇ ಪ್ರಕರಣಗಳಉದ್ದೇಶಗಳಿಗಾಗಿ ನಿಯಮಿಸಲಾದ ಪ್ರಾಧಿಕಾರಿಯಾಗಿರತಕ್ಕದ್ದು.1. ``ಕೃಷಿ ನಿರ್ದೇಶಕರು'' ಎಂಬ ಪದಗಳಿಗೆ ಬದಲಾಗಿ ಜಿ.ಎಸ್.ಆರ್ 260 ದಿನಾಂಕ 3.8.1974ರ ಮೂಲಕ 19.9.1974 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. (2) 8ನೇ ಪ್ರಕರಣದ ಮೇರೆಗಿನ ಅಪೀಲು, ಪರಿಶೀಲನಾಧಿಕಾರಿಯು ಅಪೀಲುದಾರನ ಮೇಲೆ ಜಾರಿಮಾಡಿದ ಮೂಲನೋಟೀಸಿನ ಜೊತೆಗೆ ಇರತಕ್ಕದ್ದು. (3) 11ನೇ ಪ್ರಕರಣದ ಮೇರೆಗಿನ ಅಪೀಲು, ಅಧಿಭೋಗದಾರನ ಮೇಲೆ ಜಾರಿಮಾಡಿದ ಮೂಲ ತಗಾದೆ ನೋಟೀಸಿನಜೊತೆಗೆ ಇರತಕ್ಕದ್ದು. (4) ಅಪೀಲು ಪ್ರಾಧಿಕಾರವು, ಅಪೀಲುದಾರನಿಗೆ 8ನೇ ಪ್ರಕರಣದ (3)ನೇ ಉಪ-ಪ್ರಕರಣ ಮತ್ತು 11ನೇ ಪ್ರಕರಣದ(2)ನೇ ಉಪ-ಪ್ರಕರಣದ ಮೇರೆಗೆ ತಾನು ಹೊರಡಿಸಿದ ಆದೇಶದ ಒಂದು ಪ್ರತಿಯನ್ನು ಕೊಡತಕ್ಕದ್ದು.* * *ನಮೂನೆ - 1(3ನೇ ನಿಯಮವನ್ನು ನೋಡಿ)ಗೆ,..................... ಕರ್ನಾಟಕ ಕøಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968 (1969ರ ಕರ್ನಾಟಕ ಅಧಿನಿಯಮಸಂ.1)ರ 3ನೇ ಪ್ರಕರಣದ ಮೇರೆಗೆ ಹೊರಡಿಸಿದ ................. ದಿನಾಂಕ .................... ಕ್ರಮಾಂಕದ ಮತ್ತು .....................ದಿನಾಂಕದ ರಾಜಪತ್ರದಲ್ಲಿ ಪ್ರಕಟಿಸಲಾದಂಥ ಅಧಿಸೂಚನೆಯಲ್ಲಿ ನಮೂದಿಸಲಾದಂತೆ.- (i) ಅಂಥ ಭೂಮಿ, ನೀರು ಅಥವಾ ಆವರಣದಲ್ಲಿ ಯಾವುದೇ ಹಾನಿಕರ ಕಳೆ, ಪರೋಪಜೀವಿ, ಉಪದ್ರವ ಕೀಟಗಳುಅಥವಾ ಸಸ್ಯರೋಗವು ಕಾಣಿಸಿ ಕೊಂಡಿದೆಯೇ; ಮತ್ತು (ii) ಪಾಲಿಸಬೇಕೆಂದು ನಿರ್ದೇಶಿಸಲಾದ ಪ್ರತಿಬಂಧಕ ಅಥವಾ ಪರಿಹಾರಕ ಕ್ರಮಗಳನ್ನು ಪಾಲಿಸಲಾಗಿದೆಯೇ ಇಲ್ಲವೇ - ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶಕ್ಕಾಗಿ ನಿಮ್ಮ ಮೇಲೆ ನೋಟೀಸನ್ನು ಜಾರಿಮಾಡಿದ ಕಾಲದಿಂದ(ಕಾಲದ ಅವಧಿಯನ್ನು ನಿರ್ದಿಷ್ಟಪಡಿಸಿ) ................... ರ ತರುವಾಯ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಭೂಮಿಅಥವಾ ಆವರಣದ ಮೇಲೆ ಈ ಕೆಳಗೆ ಸಹಿಮಾಡಿರುವವರು ಪ್ರವೇಶಿಸುತ್ತಾರೆ ಎಂದು ಸದರಿ ಅಧಿನಿಯಮದ 6ನೇ ಪ್ರಕರಣದಮೇರೆಗೆ ಈ ನೋಟೀಸಿನ ಮೂಲಕ ತಿಳಿಸಲಾಗಿದೆ.ಅನುಸೂಚಿ(* * *) (* * *) ಇಲ್ಲಿ ಭೂಮಿ ಅಥವಾ ಆವರಣದ ವಿವರಗಳನ್ನು ನಮೂದಿಸಿ.ದಿನಾಂಕ ................... ಪರಿಶೀಲನಾಧಿಕಾರಿ. ನಮೂನೆ - 2(3ನೇ ನಿಯಮವನ್ನು ನೋಡಿ)ಗೆ,....................ತಮ್ಮ ಭೂಮಿ ಅಥವಾ ಆವರಣವನ್ನು ಪರಿಶೀಲಿಸಿದ ಮೇಲೆ, (1) ತಮ್ಮ ಸದರಿ ಭೂಮಿ ಅಥವಾ ಆವರಣದ ಮೇಲೆ ....................... (ಇಲ್ಲಿ ಕೀಟಗಳ, ಸಸ್ಯರೋಗಗಳ ಅಥವಾಹಾನಿಕರ ಕಳೆಗಳ ಹೆಸರನ್ನು ನಮೂದಿಸಿ) ಕಾಣಿಸಿ ಕೊಂಡಿದೆಯೆಂಬುದು; (2) ಕರ್ನಾಟಕ ಕøಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968 (1969ರ ಕರ್ನಾಟಕ ಅಧಿನಿಯಮಸಂ.1)ರ 3ನೇ ಪ್ರಕರಣದ ಮೇರೆಗೆ ಹೊರಡಿಸಲಾದ .................. ದಿನಾಂಕದ ..................... ಕ್ರಮಾಂಕದ ಮತ್ತು................... ದಿನಾಂಕದ ರಾಜ್ಯಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆಯಲ್ಲಿ ನಮೂದಿಸಿದ ಪ್ರತಿಬಂಧಕ ಅಥವಾ ಪರಿಹಾರಕ್ರಮಗಳನ್ನು ತಾವು ಕೈಗೊಂಡಿಲ್ಲವೆಂಬುದು ಗಮನಕ್ಕೆ ಬಂದಿರುವುದರಿಂದ; ಈಗ, ಸದರಿ ಅಧಿನಿಯಮದ 8ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನುಚಲಾಯಿಸಿ, ಈ ನೋಟೀಸನ್ನು ಸ್ವೀಕರಿಸಿದ ................ ದಿನಗಳೊಳಗಾಗಿ ಈ ಕೆಳಕಂಡ ಪ್ರತಿಬಂಧಕ ಅಥವಾ ಪರಿಹಾರಕ್ರಮಗಳನ್ನು ಕೈಗೊಳ್ಳಬೇಕೆಂದು ನಾನು ಈ ಮೂಲಕ ಈಗ ತಮ್ಮನ್ನು ಅಗತ್ಯಪಡಿಸುತ್ತಿದ್ದೇನೆ, ಎಂದರೆ, (ಇಲ್ಲಿ ಸಂದರ್ಭಾನುಸಾರ, ಪ್ರತಿಬಂಧಕ / ಪರಿಹಾರ ಕ್ರಮಗಳ ಸ್ವರೂಪವನ್ನು ನಮೂದಿಸಿ)ದಿನಾಂಕ: ಪರಿಶೀಲನಾಧಿಕಾರಿ.ನಮೂನೆ - 3(3ನೇ ನಿಯಮವನ್ನು ನೋಡಿ)ಗೆ, .................... ................... ದಿನಾಂಕದ ನೋಟೀಸು ಸಂಖ್ಯೆ .................. ರ ಮೂಲಕ ಸದರಿ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ತಮಗೆ ಅಗತ್ಯಪಡಿಸಿದ್ದುದರಿಂದ; ಮತ್ತು, ಸದರಿ ನೋಟೀಸಿನಲ್ಲಿ ಅಥವಾ ತಾವು ಸಲ್ಲಿಸಿದ ಅಪೀಲಿನ ಮೇಲೆ ಮಾಡಿದ ಆದೇಶದಲ್ಲಿ ನಿರ್ದಿಷ್ಟಪಡಿಸಿದಕಾಲದೊಳಗೆ ಸದರಿ ನೋಟೀಸನ್ನು ತಾವು ಪಾಲಿಸದೆ ಇರುವುದರಿಂದ; ಮತ್ತು, ಸದರಿ ನೋಟೀಸು ಅಥವಾ ಆದೇಶದಲ್ಲಿ ನಮೂದಿಸಿದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನುಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1968 (1969ರ ಕರ್ನಾಟಕ ಅಧಿನಿಯಮ ಸಂ.1)ರ7 ಅಥವಾ 9ನೇ ಪ್ರಕರಣಗಳ ಮೂಲಕ ಅಗತ್ಯಪಡಿಸಲಾದಂತೆ ಕೆಳಗೆ ಸಹಿಮಾಡಿದವರು ಅಥವಾ ಕೆಳಗೆ ಸಹಿ ಮಾಡಿದವರಮೇಲ್ವಿಚಾರಣೆಯಲ್ಲಿ ಕೈಗೊಂಡಿರುವುದರಿಂದ; ಮತ್ತು, ಸದರಿ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳಿಗೆ ವೆಚ್ಚವಾಗಿರುವ ........ ರೂ. ಗಳನ್ನು ತಾವು ಸಂದಾಯಮಾಡಬೇಕಾಗಿರುವುದರಿಂದ; (ಅದರ ವಿವರಗಳನ್ನು ಈ ಕೆಳಗೆ ನೀಡಲಾಗಿದೆ) ಈಗ, ಸದರಿ ಅಧಿನಿಯಮದ 10ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ಈ ನೋಟೀಸಿನ ದಿನಾಂಕದಿಂದ................ ದಿನಗಳೊಳಗಾಗಿ ................ ರೂ. ಗಳ ಸದರಿ ಮೊತ್ತವನ್ನು ಸಂದಾಯ ಮಾಡುವಂತೆ ತಮ್ಮನ್ನು ಈ ಮೂಲಕಅಗತ್ಯಪಡಿಸಲಾಗಿದೆ. (ಇಲ್ಲಿ ಪ್ರತಿಬಂಧಕ ಅಥವಾ ಪರಿಹಾರ ಕ್ರಮದ ವೆಚ್ಚಗಳ ತಗಾದೆಯ ವಿವರಗಳನ್ನು ನಿರ್ದಿಷ್ಟಪಡಿಸಿ).ದಿನಾಂಕ: ಪರಿಶೀಲನಾಧಿಕಾರಿ. ನಮೂನೆ - 4(3ನೇ ನಿಯಮವನ್ನು ನೋಡಿ)ಕ್ರಮ ಸಂಖ್ಯೆ: 1. ಗ್ರಾಮ 2. ಹೋಬಳಿ, ತಾಲೂಕು 3. ನೋಟೀಸಿಗೆ ಸಂಬಂಧಿಸಿದ ಸರ್ವೆ ನಂ. ಉಪ-ವಿಭಾಗ ಸಂ. 4. ಅಧಿಭೋಗದಾರನ ಹೆಸರು 5. ನಾಶಪಡಿಸಬೇಕಾದ ಸಸ್ಯಗಳು ಅಥವಾ ಸಸ್ಯಗಳ ಭಾಗಗಳು ಅಥವಾ ಕ್ರಿಮಿಕೀಟಗಳ ವಿವರಣೆ 6. ನೋಟೀಸನ್ನು ಜಾರಿ ಮಾಡಿದ ದಿನಾಂಕ 7. ಜಾರಿ ಮಾಡಿದವರು 8. ಅಪೀಲು ಅವಧಿಯ ಮುಕ್ತಾಯದ ದಿನಾಂಕ 9. ಅಪೀಲು ಅಧಿಕಾರಿಯ ಆದೇಶ 10. ಪರಿಶೀಲನಾಧಿಕಾರಿಯು ಅನುಮತಿಸಿದ ಅವಧಿಯ ಅಥವಾ ಅಪೀಲಿನ ಸಂದರ್ಭದಲ್ಲಿ ಅಪೀಲು ಅಧಿಕಾರಿಯುನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯದ ದಿನಾಂಕ 11. ನಿಯಮಿಸಲಾದ ಕ್ರಮಗಳನ್ನು ಅಧಿಭೋಗದಾರನು ಕಾರ್ಯಗತಗೊಳಿಸಿರುವನೇ ಅಥವಾ ಪರಿಶೀಲನಾಧಿಕಾರಿಯುಕಾರ್ಯಗತಗೊಳಿಸಿರುವನೇ ಮತ್ತು ಪರಿಶೀಲನಾಧಿಕಾರಿಯು ಕಾರ್ಯಗತಗೊಳಿಸಿರುವಲ್ಲಿ ಕಾರ್ಯಗತಗೊಳಿಸಿದದಿನಾಂಕ 12. ಷರಾ.ನಮೂನೆ - 5(3ನೇ ನಿಯಮವನ್ನು ನೋಡಿ) 1. ಗ್ರಾಮ 2. ಸರ್ವೆ ಮತ್ತು ಉಪ-ವಿಭಾಗದ ಸಂಖ್ಯೆ 3. ಅಧಿಭೋಗದಾರನ ಹೆಸರು 4. ಕ್ರಮವನ್ನು ಕಾರ್ಯಗತಗೊಳಿಸಲು ಪರಿಶೀಲನಾಧಿಕಾರಿಯು ನೀಡಿದ ನೋಟೀಸಿನ ಸಂ. ಮತ್ತು ದಿನಾಂಕ 5. ಪರಿಶೀಲನಾಧಿಕಾರಿಯು ಪರಿಹಾರ ಕ್ರಮಗಳನ್ನು ಕಾರ್ಯಗತಗೊಳಿಸಿದ ದಿನಾಂಕ 6. ತೆಗೆದುಕೊಂಡ ಕ್ರಮದ ಖರ್ಚುಗಳ ವಿವರಗಳು 7. ಡೆಪ್ಯುಟಿ ಕವಿೂಷನರ್, ಡಿ.ಡಿ.ಎ ಮತ್ತು ತಹಸೀಲ್ದಾರರ ಕಚೇರಿಗೆ ತಗಾದೆ ನೋಟೀಸನ್ನು ರವಾನೆ ಮಾಡಿದ ದಿನಾಂಕ 8. ತಹಸೀಲ್ದಾರರ ಕಚೇರಿಯಿಂದ ತಗಾದೆ ನೋಟೀಸಿನ ಪ್ರತಿಯನ್ನು ಪಡೆದ ದಿನಾಂಕ 9. ಷರಾ. 1[ನಮೂನೆ - 6[3(5)ನೇ ನಿಯಮವನ್ನು ನೋಡಿ]ಕರ್ನಾಟಕ ಕøಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1968ರ 10ನೇ ಪ್ರಕರಣದ ಮೇರೆಗೆಭೂಕಂದಾಯದ ಬಾಕಿಯಂತೆ ವಸೂಲುಮಾಡಬಹುದಾದ ಮತ್ತು 7ನೇ ಅಥವಾ 9ನೇ ಪ್ರಕರಣಗಳ ಮೇರೆಗೆ ಕೈಗೊಂಡಪ್ರತಿಬಂಧಕ ಅಥವಾ ಪರಿಹಾರದ ಕ್ರಮಗಳ ವೆಚ್ಚದ ತಗಾದೆ ತಃಖ್ತೆ]11. 6ನೇ ನಮೂನೆಯನ್ನು ಜಿಎಸ್‍ಆರ್ 294, ದಿನಾಂಕ: 29.9.1980ರ ಮೂಲಕ 9.10.1980 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

ಕೊನೆಯ ಮಾರ್ಪಾಟು : 7/7/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate