- ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯಕ್ಕೆ ಪ್ರವೇಶಿಸಲು/ಚಾರಣ ಮಾಡಲು ಅನುಮತಿಗಾಗಿ ಯಾರನ್ನು ಸಂಪರ್ಕಿಸಬೇಕು?
ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಕ್ಕೆ ಪ್ರವೇಶಿಸಲು/ಚಾರಣ ಮಾಡಲು ಅನುಮತಿ ಪಡೆಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಅಥವಾ ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯಗಳ ಉಸ್ತುವಾರಿ ಹೊಂದಿರುವ ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕು.
- ರಾಷ್ಟ್ರೀಯ ಉದ್ಯಾನವನದೊಳಕ್ಕೆ ಯಾವ ಉದ್ದೇಶಕ್ಕೆ ಪ್ರವೇಶ ನೀಡಲಾಗುತ್ತದೆ?
ಕೆಳಕಂಡ ಎಲ್ಲಾ ಅಥವಾ ಯಾವುದೇ ಒಂದು ಕಾರಣಕ್ಕಾಗಿ ಅಭಯಾರಣ್ಯವನ್ನು ಪ್ರವೇಶಿಸಲು ಅಥವಾ ಅಲ್ಲಿ ವಾಸಿಸಲು ಯಾವುದೇ ವ್ಯಕ್ತಿಗೆ ಮುಖ್ಯ ವನ್ಯಜೀವಿ ವಾರ್ಡನ್ ರವರು ಅನುಮತಿ ನೀಡಬಹುದು; ಅವುಗಳೆಂದರೆ :
- ವನ್ಯಜೀವಿಗಳ ಶೋಧನೆ ಅಥವಾ ಅಧ್ಯಯನ ಮತ್ತು ಅದಕ್ಕೆ ಅನುಗುಣವಾದ ಅಥವಾ ಸಾಂದರ್ಭಿಕವಾದ ಉದ್ದೇಶಗಳಿಗಾಗಿ.
- ಛಾಯಗ್ರಹಣ
- ವೈಜ್ಞಾನಿಕ ಸಂಶೋಧನೆ
- ಪ್ರವಾಸೋದ್ಯಮ
- ಅಭಯಾರಣ್ಯದಲ್ಲಿ ವಾಸಿಸುತ್ತಿರುವ ಯಾವುದೇ ವ್ಯಕ್ತಿಯ ಜೊತೆ ಕಾನೂನುಬದ್ಧ ವ್ಯಾಪಾರ ವ್ಯವಹಾರ ನಡೆಸಲು.
- ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಕ್ಕೆ ಪ್ರವೇಶಿಸಲು ಅನುಮತಿ ಪಡೆಯುವುದರಿಂದ ಯಾರಿಗೆ ವಿನಾಯಿತಿ ಇರುತ್ತದೆ?
- ಸಾರ್ವಜನಿಕ ಸೇವಾ ಕರ್ತವ್ಯದ ಮೇಲಿರುವವರು.
- ಅಭಯಾರಣ್ಯದ ಪರಿಮಿತಿಯೊಳಗೆ ವಾಸಿಸಲು ಮುಖ್ಯ ವನ್ಯಜೀವಿ ವಾರ್ಡನ್ ಅಥವಾ ಅಧಿಕೃತ ಅಧಿಕಾರಿಯಿಂದ ಅನುಮತಿ ನೀಡಲ್ಪಟ್ಟಿರುವ ವ್ಯಕ್ತಿ.
- ಅಭಯಾರಣ್ಯದ ಪರಿಮಿತಿಯೊಳಗಿನ ಸ್ಥಿರ ಆಸ್ತಿಯ ಮೇಲೆ ಯಾವುದೇ ಹಕ್ಕನ್ನು ಹೊಂದಿರುವ ವ್ಯಕ್ತಿ.
- dependants of the person referred to in clause (a), clause (b) or clause (c.)ಉಪವಾಕ್ಯ (ಅ), ಉಪವಾಕ್ಯ (ಆ) ಅಥವಾ ಉಪವಾಕ್ಯ (ಇ) ಗಳಲ್ಲಿ ಉಲ್ಲೇಖಿಸಿರುವ ವ್ಯಕ್ತಿಯ ಮೇಲೆ ಅವಲಂಬಿತರಾಗಿರುವವರು.
- ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು?
ಪ್ರತಿ ವ್ಯಕ್ತಿಯೂ ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ವಾಸಿಸುವಷ್ಟು ಕಾಲವೂ ಈ ಕೆಳಕಂಡ ಅಂಶಗಳಿಗೆ ಬದ್ಧನಾಗಿರತಕ್ಕದ್ದು :
- ಅಭಯಾರಣ್ಯದಲ್ಲಿ ಈ ಕಾಯಿದೆಯ ವಿರುದ್ಧವಾದ ಯಾವುದೇ ಅಪರಾಧ ನಡೆಯುವುದನ್ನು ತಡೆಯುವುದು.
- ಅಭಯಾರಣ್ಯದಲ್ಲಿ ಈ ಕಾಯಿದೆಗೆ ವಿರುದ್ಧವಾದ ಅಂತಹ ಯಾವುದೇ ಅಪರಾಧಗಳು ನಡೆದಿದೆ ಎಂದು ನಂಬಲು ಕಾರಣವಿದ್ದಲ್ಲಿ, ಅಪರಾಧಿಯನ್ನು ಕಂಡುಹಿಡಿಯಲು ಮತ್ತು ಬಂಧಿಸಲು ಸಹಾಯ ಮಾಡುವುದು.
- ಯಾವುದೇ ಕಾಡು ಪ್ರಾಣಿಯ ಸಾವನ್ನು ವರದಿ ಮಾಡುವುದು ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಅಥವಾ ಅಧಿಕೃತ ಅಧಿಕಾರಿಯು ಉಸ್ತುವಾರಿ ವಹಿಸುವವರೆಗೂ ಅದರ ದೇಹವನ್ನು ರಕ್ಷಿಸುವುದು.
- ತನ್ನ ಅರಿವಿಗೆ ಅಥವಾ ಮಾಹಿತಿಗೆ ಬರುವ ಅಂತಹ ಅಭಯಾರಣ್ಯದಲ್ಲಿನ ಯಾವುದೇ ಬೆಂಕಿಯನ್ನು ನಂದಿಸುವುದು ಮತ್ತು ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಯಾವುದೇ ವಿಧಾನದಿಂದ ಅದು ಹರಡದಂತೆ ತಡೆಯುವುದು ಮತ್ತು
- ಈ ಕಾಯಿದೆಯ ವಿರುದ್ಧವಾಗಿ ನಡೆಯುವ ಅಪರಾಧಗಳನ್ನು ತಡೆಯಲು ಅಥವಾ ಅಂತಹ ಯಾವುದೇ ಅಪರಾಧದ ತನಿಖೆಯಲ್ಲಿ ಅರಣ್ಯ ಅಧಿಕಾರಿ, ಮುಖ್ಯ ವನ್ಯಜೀವಿ ವಾರ್ಡನ್, ವನ್ಯಜೀವಿ ವಾರ್ಡನ್ ಅಥವಾ ನೀತಿ ನಿರೂಪಕ ಅಧಿಕಾರಿಯು ಸಹಾಯ ಕೇಳಿದಲ್ಲಿ ಅವರಿಗೆ ಸಹಕರಿಸುವುದು.
- ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ಪ್ರವೇಶಿಸಲು ಯಾವುದಾದರೂ ಪ್ರವೇಶ ಶುಲ್ಕವಿದೆಯೆ; ವಿಧಿಸಲು ಇರುವ ನಿಯಮಗಳು?
ಹೌದು, ವನ್ಯಜೀವಿ (ರಕ್ಷಣೆ) ಕಾಯಿದೆಯ ಸೆಕ್ಷನ್ 28ರ ಅನ್ವಯ ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ಹೋಗಲು ಪ್ರವೇಶ ಶುಲ್ಕವಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಪ್ರವೇಶ ಶುಲ್ಕವನ್ನು ನಿರ್ಧರಿಸುತ್ತಾರೆ.
- ಚಿಲ್ಲರೆ ದರದಲ್ಲಿ ಶ್ರೀಗಂಧವನ್ನು ಪಡೆಯಲು ಯಾರು ಅರ್ಹರಾಗಿರುತ್ತಾರೆ?
- ಯಾವುದೇ ಖಾಸಗಿ ವ್ಯಕ್ತಿ/ಧಾರ್ಮಿಕ ಸಂಘಸಂಸ್ಥೆಗಳು/ಖಾಸಗಿ ವಲಯದ ಸಂಸ್ಥೆಗಳು/ಸಂಘಸಂಸ್ಥೆಗಳು ಚಿಲ್ಲರೆ ದರದಲ್ಲಿ ಶ್ರೀಗಂಧಕ್ಕಾಗಿ ಅರ್ಜಿ ಸಲ್ಲಿಸಬಹುದು.
ಕೊನೆಯ ಮಾರ್ಪಾಟು : 3/5/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.