ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬೆತ್ತ

ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟಿರುವ ಬೆತ್ತ ಆಧಾರಿತ ಸಣ್ಣ ಕೈಗಾರಿಕೆಯು ಬೆತ್ತ ಹಂಚಿಕೆಗೆ ಅರ್ಹವಾಗಿರುತ್ತದೆ.

 1. ಇಲಾಖೆಯಿಂದ ಬಿದಿರು ಹಂಚಿಕೆ ಪಡೆಯಲು ಯಾರು ಅರ್ಹರು?
 2. ತನ್ನ ಸ್ವಂತ ಉಪಯೋಗಕ್ಕಾಗಿ ಇಲಾಖೆಯಿಂದ ಬಿದಿರು ಪಡೆಯಲು ಯಾವುದೇ ವ್ಯಕ್ತಿಯು ಅರ್ಹನಾಗಿರುತ್ತಾನೆ. ಆದಾಗ್ಯೂ ಕುಶಲಕರ್ಮಿಗಳನ್ನು ಉತ್ತೇಜಿಸಲು ಮೇದಾರರಿಗೆ ರಿಯಾಯಿತಿ ದರದಲ್ಲಿ ಬಿದಿರು ಪೂರೈಸಲಾಗುವುದು.

 3. ಬಿದಿರು ಹಂಚಿಕೆ ಮಂಜೂರು ಮಾಡಲು ಯಾರಿಗೆ ಅಧಿಕಾರವಿದೆ?
 4. ಮಂಜೂರಾದ ದರದಲ್ಲಿ ಬಿದಿರನ್ನು ಹಂಚಿಕೆ ಮಾಡಲು ವಿವಿಧ ಹಂತಗಳ ಅಧಿಕಾರಿಗಳಿಗೆ ಕೆಳಕಂಡಂತೆ ಅಧಿಕಾರವಿರುತ್ತದೆ.

  ಪಿಸಿಸಿಎಫ್

  ಸಂಪೂರ್ಣ ಅಧಿಕಾರ


  ಎಪಿಸಿಸಿಎಫ್ (ಎಫ್ಆರ್ಎಂ)

  ಸಂಪೂರ್ಣ ಅಧಿಕಾರ


  ಸಿಎಫ್

  ಪ್ರತಿ ಪ್ರಕರಣದಲ್ಲಿ 1500 ಬಿದಿರುಗಳು


  ಡಿಸಿಎಫ್

  ಪ್ರತಿ ಪ್ರಕರಣದಲ್ಲಿ 600 ಬಿದಿರುಗಳು

  ಷರಾ : ಲಭ್ಯತೆ ಮತ್ತು ನೀತಿ ನಿರ್ಧಾರಗಳನ್ನು ದೃಷ್ಠಿಯಲ್ಲಿಟ್ಟುಕೊಂಡು, ಪ್ರತಿ ಪ್ರಕರಣಗಳಲ್ಲಿ ಹಂಚಿಕೆಯನ್ನು ಸೀಮಿತಗೊಳಿಸಬಹುದು.

 5. ಬಿದಿರು ಹಂಚಿಕೆಗೆ ಅರ್ಜಿ ಸಲ್ಲಿಸಲು ಯಾವುದಾದರೂ ನಿಗದಿತ ಅರ್ಜಿ ನಮೂನೆ ಇದೆಯೇ?
 6. ಇಲ್ಲ, ಅರ್ಜಿ ಸಲ್ಲಿಸಲು ಯಾವುದೇ ನಿರ್ದಿಷ್ಟ ನಮೂನೆ ಇರುವುದಿಲ್ಲ. ಒಂದು ಸಾಮಾನ್ಯವಾದ ಅರ್ಜಿ ಸಲ್ಲಿಸಬಹುದು.

 7. ಯಾರಿಗೆ ಅರ್ಜಿಯನ್ನು ಸಲ್ಲಿಸಬೇಕು?
 8. ಮೇದಾರ ಸಂಘಗಳ ಪ್ರಕರಣದಲ್ಲಿ ಹೆಚ್ಚಿನ ದಾಖಲೆಗಳಾದ ನೋಂದಣಿ ಪ್ರಮಾಣಪತ್ರವನ್ನು ಕೇಳಬಹುದಾದ ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು.

 9. ಯಾವ ದರದಲ್ಲಿ ಬಿದಿರನ್ನು ಹಂಚಿಕೆ ಮಾಡಲಾಗುತ್ತದೆ?
 10. The rates sanctioned for the year 2014-15 are as follows:

  ಕ್ರಮ ಸಂಖ್ಯೆ

  ಬಿದಿರನ ವಿಧ ಮತ್ತು ಉದ್ದ

  ತೆರಿಗೆ ಹೊರತುಪಡಿಸಿ ಮೇದಾರರಿಗೆ ನಿಗದಿ ಮಾಡಿರುವ ದರ (100 ಬಿದಿರುಗಳಿಗೆ) 
  ರೂ.ಗಳಲ್ಲಿ

  ತೆರಿಗೆ ಹೊರತುಪಡಿಸಿ ಮೇದಾರರಲ್ಲದವರಿಗೆ ನಿಗದಿ ಮಾಡಿರುವ ದರ (100 ಬಿದಿರುಗಳಿಗೆ) 
  ರೂ.ಗಳಲ್ಲಿ

  1

  ಡೌಗ (ದೊಡ್ಡದು) ಬಿದಿರು 18 ಅಡಿಗಿಂತ ಹೆಚ್ಚಿನದು

  4,272.00

  4,464.00

  2

  ಡೌಗ (ದೊಡ್ಡದು) ಬಿದಿರು 12 ಅಡಿಯಿಂದ 18 ಅಡಿ

  3,380.00

  3,572.00

  3

  ಸಣ್ಣ ಬಿದಿರು (8 ಅಡಿಗಿಂತ ಹೆಚ್ಚು ಉದ್ದ)

  2,145.00

  2,385.00

  4

  ಸಣ್ಣ ಬಿದಿರು (12 ಅಡಿಯಿಂದ 18 ಅಡಿ)

  1,967.00

  2,207.00

 11. ಮೇದಾರ ದರದಲ್ಲಿ ಬಿದಿರಿನ ಹಂಚಿಕೆ ಪಡೆಯಲು ಯಾರು ಅರ್ಹರು?
 12. ಮೇದಾರ ಸಂಘದಲ್ಲಿ (ಸಂಘಗಳ ನೋಂದಣಿ ಕಾಯಿದೆಯ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ ಒಂದು ಸಂಘ) ನೋಂದಾಯಿಸಲ್ಪಟ್ಟಿರುವ ಒಬ್ಬ ಕುಶಲಕರ್ಮಿಯು ಮೇದಾರರ ದರದಲ್ಲಿ ಬಿದಿರು ಪಡೆಯಲು ಅರ್ಜಿ ಸಲ್ಲಿಸಲು ಅರ್ಹನಾಗಿರುತ್ತಾನೆ.

  ಮೂಲ : ಅರಣ್ಯ ಇಲಾಖೆ

3.00884955752
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top