ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಕೋಶ / ಒಣ ಹೂವುಗಳ ಉತ್ಪಾದನೆ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಒಣ ಹೂವುಗಳ ಉತ್ಪಾದನೆ

ಹೂವುಗಳನ್ನು ಏಕೆ ಒಣಗಿಸ ಬೇಕು

ಹೂವುಗಳನ್ನು ಏಕೆ ಒಣಗಿಸ ಬೇಕು

 • ಒಣ ಹೂವುಳಿಗೆ ಭಾರತೀಯ ಮತ್ತು ಅಂತರಾಷ್ಟ್ರೀಯ ಮಾರಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಭಾರತದಿಂದ ಯು. ಎಸ್ ಎ, ಜಪಾನ್, ಮತ್ತು ಯುರೋಪು ಮೊದಲಾದ ರಾಷ್ಟ್ರಗಳಿಗೆ ಹೂವು ರಫ್ತಾಗುತ್ತಿದೆ
 • ಭಾರತವು ಒಣ ಹೂವು ರಫ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಾರಣ ಇಲ್ಲಿ ಬಹು ವೈವಿದ್ಯಮಯವಾದ ಸಸ್ಯಗಳು ಇವೆ
 • ಒಣ ಹೂ ಎಂದರೆ ಬರಿ ಹೂವು ಮತ್ತು ಅದರ ಭಾಗಗಳು ಮಾತ್ರ ಅಲ್ಲ.ಅದರ ಒಣಗಿದ , ಕುಡಿಗಳು,ಬೀಜಗಳು ಮತ್ತು ಸಿಪ್ಪೆ ಇತ್ಯಾದಿಗಳೂ ಸೇರಿವೆ.
 • ಭಾರತದಿಂದ ಒಣ ಹೂವು ಮತ್ತು ಸಸ್ಯಗಳ ರಫ್ತಿನಿಂದ ಸುಮಾರು100ಕೋಟಿ ರೋಪಾಯಿ ವಾರ್ಷಿಕ ಆದಾಯವಿದೆ.ಈ ಉದ್ಯಮವು 500 ವಿಧದ ಹೂವುಗಳನ್ನು 20 ದೇಶಗಳಿಗೆ ರಫ್ತು ಮಾಡುತ್ದದೆ.
 • ಇವನ್ನು ಕೈ ನಿಂದ ಮಾಡುವ ಕಾಗದ, ಲ್ಯಾಂಪ್ ಷೇಡು,ಮೇಣದ ಬತ್ತಿ ಸ್ಟ್ಯಾಂಡು, ಸಣಬಿನ ಚೀಲ. ಫೊಟೊ ಚೌಕಟ್ಟು, ಪೆಟ್ಟಿಗೆಗಳು, ಪುಸ್ತಕಗಳು, ಗೋಡೆ ಹಾಸುಗಳು, ಶುಭಾಶಯ ಪತ್ರಗಳು ಹಗೂ ಇನ್ನೂ ಅನೇಕವಸ್ತುಗಳ ತಯಾರಿಕೆಯಲ್ಲಿ ಬಳಸಬಹುದು. ಅವುಗಳ ನೋಟ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ.

ಒಣ ಹೂವು ನಿರ್ಮಾಣದ ವಿಧಾನಗಳು

ಒಣ ಹೂವುಗಳ ತಯರಿಕೆಯು ಎರಡು ಮುಖ್ಯ ಹಂತಗಳನ್ನು ಹೊಂದಿದೆ

 • ಒಣಗಿಸುವುದು
 • ಬಣ್ಣಹಾಕುವುದು

ಒಣಗಿಸುವುದು

ಹೂವುಗಳನ್ನು ಒಣಗಿಲಿಕ್ಕಾಗಿ ಕತ್ತರಿಸಲು ಉತ್ತಮ ಅವಧಿ.

ಹೂವುಗಳನ್ನು ಬೆಳಗಿನ ಹೊತ್ತಿನಲ್ಲಿ ಅವುಗಳ ಮೇಲಿನ ಮಂಜು ಹೋದ ನಂತರ ಕೀಳ ಬೇಕು. ಕತ್ತರಿಸಿದ ಮೇಲೆ ಅವುಗಳನ್ನು ರಬ್ಬರ್ ಬ್ಯಾಂಡು ಹಾಕಿ ಗೊಂಚಲಾಗಿ ಕಟ್ಟಿಇಡಬೇಕು . ಮತ್ತು ಸಾಧ್ಯವಾದಷ್ಟು ಬೇಗ ಸೂರ್ಯನ ಬೆಳಕಿನಿಂದ ದೂರವಿಡಿ.ಬಿಸಲಲ್ಲಿ ಒಣಗಿಸುವುದು

 • ಬಿಸಿಲಿನಲ್ಲಿ ಒಣಗಿಸುವುದು ಸುಲಭವಾದ ಅಗ್ಗದ ವಿಧಾನ.ಆದರೆ ಮಳೆಗಾಲದಲ್ಲಿ ಈ ವಿಧಾನ ಬಳಸಲಾಗುವುದಿಲ್ಲ.
 • ಹೂವಿನ ಗೊಂಚಲನ್ನು ತಲೆ ಕೆಳಗಾಗಿ ಹಗ್ಗಕ್ಕೆ ಇಲ್ಲವೆ ಗಳದ ಮೇಲೆ ನೆತುಹಾಕಬೇಕು.
 • ಯಾವದೆ ರಸಾಯನಿಕಗಳನ್ನು ಬಳಸುವುದಿಲ್ಲ.ಚೆನ್ನಾಗಿ ಗಾಳಿ ಯಾಡುವದು ಅತಿ ಅಗತ್ಯ..
 • ಈ ವಿಧಾನದಲ್ಲಿ ಬೂಷ್ಟು ಹಿಡಿಯುವ ಸಂಬವ ಬಹಳ ಹೆಚ್ಚು.

ತಂಪು ಮಾಡಿ ಒಣಗಿಸುವುದು

 • ಇದು ಬಿಸಿಲಿನಲ್ಲಿ ಒಣಗಿಸುವುದಕ್ಕಿಂತ ಸುಧಾರಿಸಿದ ವಿಧಾನ
 • ಹೆಪ್ಪುಗಟ್ಟಿಸಿ ಒಣಗಿಸುವ ಉಪಕರಣಗಳು ತುಂಬ ದುಬಾರಿ. ಅದರೆ ಹೂವುಗಳ ಗುಣ ಮಟ್ಟವು ಉತ್ತಮವಾಗಿರುವುದು. ಒಳ್ಳೆಯ ಬೆಲೆ ಸಿಕ್ಕುವುದು

ಒತ್ತಡಕ್ಕೊಳಪಡಿಸುವುದು

 • ಹೀರು ಕಾಗದ ಅಥವ ಸಾಧಾರಣ ಕಾಗದ ಬಳಕೆ ಮಾಡಲಾಗುವುದು.
 • ಹೂವು ಚಪ್ಪಟೆಯಾಗುವುದು ಮತ್ತು ಹೂವಿಗೆ ಹಾನಿಯಾಗುವ ಅವಕಾಶಗಳು ಹೆಚ್ಚು.

ಗ್ಲಿಸಿರಿನ್ ವಿಧಾನ

 • ಹೂವುಗಳಲ್ಲಿನ ತೇವಾಂಶ ತೆಗೆದ ಮೇಲೆ ಗ್ಲಿಸರಿನ್ ತುಂಬಲಾಗುವುದು
 • ಬಹು ಉತ್ತಮ ಗುಣ ಮಟ್ಟದ ಉತ್ಪನ್ನವನ್ನು ಈ ವಿಧಾನದಿಂದ ಪಡೆಯಲಾಗುವುದು.

ಪಾಲಿಸೆಟ್ ಪಾಲಿಮರ್

 • ಪಾಲಿಸೆಟ್ ಪಾಲಿಮರ್ ಸ್ಪ್ರೇ ಮಾಡುವುದರಿಂದ ಹೂಗಳು ಒಣಗುತ್ತವೆ
 • ಈ ವಿಧಾನದಲ್ಲಿ ಕಡಿಮೆ ಸಮಯ ಸಾಕು.
 • ಅಂತಿಮ ಉತ್ಪನ್ನದ ಬಣ್ಣ ತುಂಬ ಚೆನ್ನಾಗಿರುವುದು

ಸಿಲಿಕಾ ಡ್ರೈಅರ್

 • ಸಿಲಿಕಾ ಅಥವ ಸಿಲಿಕಾ ಜೆಲ್ ಬಳಸಿ , ನಾವು ಹೂಗಳ ಗುಣ ಮಟ್ಟ ಸುಧಾರಿಸಬಹುದು. ಮತ್ತು ಅವು ಹೂಗಳನ್ನು ಒಟ್ಟಾಗಿ ಇರಿಸುತ್ತವೆ..
 • ಬಹು ನಾಜೂಕಾದ ಹೂಗಳನ್ನು ಈವಿಧಾನದಲ್ಲಿ ಒಣಗಿಸುವರು

ಬಣ್ಣ ಹಾಕುವುದು

 • “ಪ್ರೊಸಿಯನ್ “ವಿವಿಧದ ಬಣ್ಣಗಳ ಒಣ ಹೂಗಳಿಗೆ ಅತ್ಯುತ್ತಮ .
 • ಬಣ್ಣದ ಪುಡಿ 4 ಕೆಜಿ ಯನ್ನು 20ಲೀಟರ್ ನೀರಿನೊಡನೆ ಬೆರಸಿ
 • ಈ ದ್ರಾವಣವನ್ನು 800 ಲಿಟರ್ ಬಿಸಿ ನೀರಿನಲ್ಲಿ ಸೇರಿಸಿರಿ.
 • ಅದರಲ್ಲಿ 2 ಲೀಟರ್ ಅಸಿಟಿಕ್ ಆಮ್ಲ ಮಿಶ್ರ ಮಾಡಿ
 • ಎಲ್ಲ ಮೃದು ಹೂಗಳನ್ನು ಮೆಗ್ನೀಷಿಯಂ ಕ್ಲೋರೈಡನ್ನು ಬಣ್ಣ ಗಾಢ ವಾಗಿಸುವುದು.
 • ಒಣ ಹೂಗಳನ್ನು ದ್ರಾವಣದಲ್ಲಿ ಅವು ಬಣ್ಣವನ್ನು ಹೀರುವವರೆಗೆ ಅದ್ದಿರಿ

ವಾಣಿಜ್ಯ ಒಣ ಹೂವಿನ ಉತ್ಪನ್ನಗಳು

ಹೂಗಳು ಮತ್ತು ಸಸ್ಯದ ಭಾಗಗಳು

 • ಕಾಕ್ಸ ಕೂಂಬು , ಮಲ್ಲಿಗೆ, ಅಮರಾಂತಸ್ , ಅಡಿಕೆ ಮತ್ತು ತೆಂಗಿನ ಗರಿ ಮತ್ತು ಕತ್ತರಿಸಿದ ಹೂಗಳು ಈ ವಿಭಾಗದಲ್ಲಿ ಬರುವವು. ಅಲ್ಲದೆ ಒಣ ಎಲೆ, ಮತ್ತು ಚಿಗುರುಗಳನ್ನು ಫಿಲ್ಲರ್ ಗಳಾಗಿ ಬಳಸುವರು.
 • ಕಳೆದ 20ವರ್ಷದಿಂದ ಭಾರತವು ಈ ವಿಧದ ಸಾಮಗ್ರಿಗಳನ್ನು ರಫ್ತು ಮಾಡುತ್ತಾಇದೆ.

ಪಾಟ್ ಪುರಿ

 • ಇದು ಸುವಾಸನೆ ನೀಡಿದ ಒಣಗಿದ ವಿವಿಧ ಬಿಡಿ ಹೂಗಳು ಇರುವ ಪಾಲಿತಿನ್ ಚೀಲ.
 • ಸಾಧಾರಣವಾಗಿ ಅಲಮೇರಾ, ಡ್ರಾಯರ್ ಮತ್ತು ಬಚ್ಚಲ ಮನೆಯಲ್ಲಿ ಇರಿಸುವರು
 • ಈ ವಿಧಾನದಲ್ಲಿ 300ಕ್ಕೂ ಹೆಚ್ಚಿನ ಸಸ್ಯಗಳನ್ನು ಬಳಸಲಾಗುವುದು.
 • ಬ್ಯಚಲರ್ ಬಟನ್,ಕಾಕ್ಸ ಕೂಂಬ್, ಮಲ್ಲಿಗೆ, ಗುಲಾಬಿದಳಗಳು, ಬೊಗನ್ ವಿಲ್ಲಾ ಹೂಗಳು, ಬೇವಿನ ಎಲೆ,ಹಣ್ಣುಗಳ ಬೀಜಗಳು ಸಾಮಾನ್ಯವಾಗಿ ಪಾಟ್ ಪುರಿ ರಚನೆಗೆ ಭಾರತದಲ್ಲಿ ಉಪಯೋಗಿಸುವರು..
 • ನಮ್ಮ ಮುಖ್ಯ ಗ್ರಾಹಕ ಇಂಗ್ಲೆಂಡ್

ಒಣ ಹೂವಿನ ಕುಂಡಗಳು

 • ಒಣಗಿದ ಕಾಂಡ ಮತ್ತು ಕುಡಿಗಳನ್ನು ಉಪಯೋಗಿಸುವರು
 • ಇದಕ್ಕೆ ಮಾರಕಟ್ಟೆ ಜಾಸ್ತಿ ಇಲ್ಲ. ಆದರೆ ಒಳ್ಳೆಯ ಬೆಲೆ ಇದೆ. .ಅಧಿಕ ಆದಾಯವರ್ಗದ ಜನ ಇದಕ್ಕೆ ಆದ್ಯತೆ ಕೊಡುವರು.
 • ಸಾಮಾನ್ಯವಾಗಿ ಬಳಸುವ ಸಾಮಗ್ರಿ ಎಂದರೆ ಒಣಗಿಸಿದ ಹತ್ತಿಯ ಸಿಪ್ಪೆ, ಒಣಗಿದ ಸೋರೆಕಾಯಿ, ಪೈನ್ ಪುಷ್ಪಗಳು, ಒಣ ಮೆಣಸಿನಕಾಯಿ, ಕೋಲು ಮಲ್ಲಿಗೆ, ಅಸ್ಪರಾಗಸ್ ಎಲೆಗಳು , ಬಾಡದ ಹೂಗಳು, ಫರ್ನಎಲೆಗಳು ಮರದ ತೊಗಟೆ ಮತ್ತು ರೆಂಬೆಗಳು.

 

ಒಣ ಹೂವಿನ ಕರಕುಶಲತೆ

 • ಒಣ ಹೂಗಳ ಮಾರುಕಟ್ಟೆಯಲ್ಲಿ ಇತ್ತೀಚಿನ ಬೆಳವಣಿಗೆ .
 • ಕಟ್ಟು ಹಾಕಿದ ಒಣಹೂವಿನ ಚಿತ್ರಗಳು, ಶುಭಾಶಯ ಪತ್ರಗಳು, ಲಕೋಟೆಗಳು , ಪುಷ್ಪ ಗುಚ್ಷಗಳು, ಕ್ಯಂಡಲ್ ಸ್ಟ್ಯಾಂಡುಗಳು, ಗಾಜಿನ ಪಾತ್ರಗಳನ್ನು ವಿವಿಧ ಬಣ್ಣದ ಒಣ ಹೂಗಳ ಸಾಮಗ್ರಿಗಳಿಂದ ಮಾಡಲಾಗುವುದು.

ಮೂಲ :ಡಾಕ್ಟರ . ಆರ್. ಸ್ವರ್ನಪ್ರಿಯ  ಮತ್ತು ಡಾಕ್ಟರ. ಎಂ. ಜಯಸೆಕರ್ , ಹ್ರಸ್, ಪೆಚಿಪರೈ , ತಮಿಳ್  ನಾಡು

 

2.92857142857
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top