ಮನೆ ನಿರ್ಮಾಣದಂತಹ ಸ್ವಂತ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿಯು ಅರಣ್ಯ ಇಲಾಖೆಯಿಂದ ಮರಮುಟ್ಟುಗಳನ್ನು ಖರೀದಿಸಲು ಅರ್ಹನಾಗಿರುತ್ತಾನೆ.
ಕೆಳಕಂಡ ಹಂತದ ಇಲಾಖಾ ಅಧಿಕಾರಿಗಳು ಮಂಜೂರಾದ ದರದಲ್ಲಿ ಸ್ವಂತ ಉಪಯೋಗದ ಉದ್ದೇಶಕ್ಕಾಗಿ ಮರಮುಟ್ಟುಗಳನ್ನು ಹಂಚಿಕೆ ಮಾಡುವ ಅಧಿಕಾರ ಹೊಂದಿರುತ್ತಾರೆ :
ಪ್ರಬೇಧಗಳು |
ಅಧಿಕಾರದ ಮಿತಿಗಳು |
|||
ಪಿಸಿಸಿಎಫ್ |
ಎಪಿಸಿಸಿಎಫ್/ಸಿಸಿಎಫ್ |
ಸಿಎಫ್ |
ಡಿಸಿಎಫ್ |
|
ತೇಗದ ಮರ |
ಸಂಪೂರ್ಣ ಅಧಿಕಾರ |
5 ಕ್ಯು.ಮೀ. |
3 ಕ್ಯು.ಮೀ. |
- |
ಬೀಟೆ, ಶ್ರೀಗಂಧ ಮತ್ತು ಬಿಳಿ ದೇವದಾರು ಹೊರತುಪಡಿಸಿ ಇತರ ವಿಧಗಳು |
ಸಂಪೂರ್ಣ ಅಧಿಕಾರ |
10 ಕ್ಯು.ಮೀ. |
5 ಕ್ಯು.ಮೀ. |
3 ಕ್ಯು.ಮೀ. |
ತೆಳುಗೊಳಿಸಿದ ತೇಗದ ಕೋಲುಗಳು |
ಸಂಪೂರ್ಣ ಅಧಿಕಾರ |
250 ಕೋಲುಗಳು |
100 ಕೋಲುಗಳು |
50 ಕೋಲುಗಳು |
ತೆಳುಗೊಳಿಸಿದ ಕೋಲುಗಳು (ಇತರ ಕಾಡು ಮರಗಳು) |
ಸಂಪೂರ್ಣ ಅಧಿಕಾರ |
ಸಂಪೂರ್ಣ ಅಧಿಕಾರ |
ಸಂಪೂರ್ಣ ಅಧಿಕಾರ |
ಸಂಪೂರ್ಣ ಅಧಿಕಾರ |
ಷರಾ :ಲಭ್ಯತೆ ಮತ್ತು ನೀತಿ ನಿರ್ಧಾರಗಳನ್ನು ದೃಷ್ಠಿಯಲ್ಲಿಟ್ಟುಕೊಂಡು,ಪ್ರತಿ ಪ್ರಕರಣಗಳಲ್ಲಿ ಹಂಚಿಕೆಯನ್ನು ಸೀಮಿತಗೊಳಿಸಬಹುದು.
ಇಲ್ಲ, ಯಾವುದೇ ನಿಗದಿತ ನಮೂನೆ ಇರುವುದಿಲ್ಲ. ಅಗತ್ಯವಿರುವ ಮರಮುಟ್ಟುಗಳ ವಿಧ ಹಾಗೂ ಪ್ರಮಾಣ ಹಾಗೂ ಆಯ್ದ ಸರ್ಕಾರಿ ಮರಮುಟ್ಟುಗಳ ದಾಸ್ತಾನು ಉಗ್ರಾಣ/ವಿಭಾಗದ ಹೆಸರನ್ನು ವಿವರಿಸುವ ಸಾಮಾನ್ಯ ಅರ್ಜಿಯನ್ನು ಸಲ್ಲಿಸಬಹುದು. ಆದಾಗ್ಯೂ ಅರ್ಜಿಯ ಜೊತೆಯಲ್ಲಿ ಕೆಳಕಂಡ ದಾಖಲಾತಿಗಳನ್ನು ಲಗತ್ತಿಸುವುದು ಅಗತ್ಯ.
ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಅಗತ್ಯ ಬಿದ್ದಲ್ಲಿ ಅವರು ಹೆಚ್ಚಿನ ದಾಖಲಾತಿಗಳಿಗೆ ಹಾಗೂ ಸ್ಥಳ ಪರಿಶೀಲನೆಗೆ ವ್ಯವಸ್ಥೆ ಮಾಡಲು ಕೇಳಬಹುದು.
ವಿವಿಧ ವರ್ಗಗಳ ಮರಗಳಿಗೆ 2014-15ನೇ ಸಾಲಿನಲ್ಲಿ ಮಂಜೂರು ಮಾಡಿರುವ ದರಗಳ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ.
ಕೊನೆಯ ಮಾರ್ಪಾಟು : 2/15/2020