ಸರ್ಕಾರಿ ಆದೇಶ ಸಂಖ್ಯೆ ಎಫ್ಇಇ 259 ಎಫ್ಡಬ್ಲ್ಯೂಎಲ್ 2006 ದಿನಾಂಕ 17-01-2007ರ ಸರ್ಕಾರಿ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಿ.
ಆತನು ಅರಣ್ಯ ಪ್ರದೇಶದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲದೇ ಇದ್ದಲ್ಲಿ ಕಾಡು ಮೃಗದಿಂದ ಗಾಯಗೊಳ್ಳುವ ವ್ಯಕ್ತಿಗೆ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಮಂಜೂರು ಮಾಡಲಾಗುವುದು. ಸ್ಪಷ್ಟನೆ : ಕಾಡು ಮೃಗ ಎಂಬುದು ಯಾವುದನ್ನು ಒಳಗೊಂಡಿರುತ್ತದೆ ಎಂಬುದನ್ನು ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ ಸೆಕ್ಷನ್ 2 (36)ರಲ್ಲಿ ಹೇಳಿರುವ ವಿವರಣೆಗೆ ಅನುಗುಣವಾಗಿ ಅರ್ಥೈಸಿಕೊಳ್ಳಬೇಕು. ಈ ವಿವರಣೆಯ ಪ್ರಕಾರ ‘ಕಾಡು ಮೃಗ’ ಎಂದರೆ ಷೆಡ್ಯೂಲ್ I ರಿಂದ Iಗಿ ರಲ್ಲಿ ನಿರ್ದಿಷ್ಟಪಡಿಸಿರುವ ಹಾಗೂ ಸ್ವಭಾವದಲ್ಲಿ ಕ್ರೂರವಾದುದೆಂದು ಕಂಡುಬರುವ ಯಾವುದೇ ಪ್ರಾಣಿ.
ಶಾಶ್ವತ ವಿಕಲತೆಯ ಪ್ರಕರಣದಲ್ಲಿ ಗರಿಷ್ಠ 20,000 ರೂಪಾಯಿಗಳ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ನೀಡಲಾಗುತ್ತದೆ.
ಇಲ್ಲ. ಅರ್ಜಿ ಸಲ್ಲಿಸಲು ಯಾವುದೇ ನಿಗದಿತ ನಮೂನು ಇರುವುದಿಲ್ಲ. ಆದಾಗ್ಯೂ, ಭಾದಿತ ವ್ಯಕ್ತಿಯ ಸಹಿ ಅಥವಾ ಎಡಗೈ ಹೆಬ್ಬೆಟ್ಟಿನ ಗುರುತನ್ನು ಹೊಂದಿರುವ ಅರ್ಜಿಯನ್ನು ಓದಲು ಸಾಧ್ಯವಾಗುವಂತೆ ಖಾಲಿ ಕಾಗದದ ಮೇಲೆ ಸ್ಪಷ್ಟವಾಗಿ ಬರೆದಿರಬೇಕು ಅಥವಾ ಬೆರಳಚ್ಚು ಮಾಡಿರಬೇಕು.
ಕಾಡು ಮೃಗದ ದಾಳಿಯಿಂದ ವ್ಯಕ್ತಿಯು ಗಾಯಗೊಳ್ಳುವ ಪ್ರಕರಣದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪಡೆಯಲು ಅರ್ಜಿಯ ಜೊತೆ ಲಗತ್ತಿಸಬೇಕಾದ ದಾಖಲಾತಿಗಳೆಂದರೆ :
ವೈದ್ಯರಿಂದ ಚಿಕಿತ್ಸೆ ಪಡೆದಿರುವ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ.
ಅರ್ಜಿಯನ್ನು ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗೆ ಸಲ್ಲಿಸಬೇಕು.
ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ 5000/- ರೂಪಾಯಿಗಳವರೆಗೆ ಮಂಜೂರು ಮಾಡಲು ಅಧಿಕಾರ ನೀಡಲಾಗಿದೆ. ಕಾಡು ಮೃಗದ ದಾಳಿಯಿಂದ ಮನುಷ್ಯನು ಗಾಯಗೊಳ್ಳುವ ಪ್ರಕರಣದಲ್ಲಿ ಗರಿಷ್ಠ 20,000 ರೂಪಾಯಿಗಳ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಮಂಜೂರು ಮಾಡಲು ವ್ಯಾಪ್ತಿ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿಗೆ ಅಧಿಕಾರ ನೀಡಲಾಗಿದೆ.
ಕೆಲವು ಸಂದರ್ಭಗಳಲ್ಲಿ ಆ ಉದ್ದೇಶಕ್ಕಾಗಿ ಸಾಕಷ್ಟು ನಿಧಿಯ ಅಲಭ್ಯತೆಯ ಕಾರಣದಿಂದಾಗಿ ವಿಳಂಬವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವೈದ್ಯರಿಂದ ವೈದ್ಯಕೀಯ ಪ್ರಮಾಣಪತ್ರ ಪಡೆಯುವಂತಹ ಪ್ರಕ್ರಿಯಾ ಕಾರಣಗಳಿಂದಾಗಿ ಸಹ ವಿಳಂಬವಾಗುತ್ತದೆ.
ಮೂಲ : ಅರಣ್ಯ ಇಲಾಖೆ
ಕೊನೆಯ ಮಾರ್ಪಾಟು : 11/5/2019
ದಾಳಿಯ ಸಂದರ್ಭದಲ್ಲಿ ಆತನು ಅರಣ್ಯ ಪ್ರದೇಶದಲ್ಲಿ ಯಾವುದೇ ಕಾ...
ಕಾಡು ಮೃಗಗಳಿಂದ ಮನುಷ್ಯನ ಸಾವು ಸಂಭವಿಸಿದಲ್ಲಿ ಕೃಪಾಧನ (ಎಕ...
ಕಾಡು ಮೃಗಗಳಿಂದ ಬೆಳೆ ಹಾನಿ ಸಂಭವಿಸಿದಲ್ಲಿ ಕೃಪಾಧನ (ಎಕ್ಸ್...
ಕಾಡು ಮೃಗಗಳಿಂದ ಜಾನುವಾರು ಸಾವಿಗೆ