ಸರ್ಕಾರಿ ಆದೇಶ ಸಂಖ್ಯೆ ಎಫ್ಇಇ 143 ಎಫ್ಡಬ್ಲ್ಯೂಎಲ್ 2010 ದಿನಾಂಕ 03-08-2011ರ ಸರ್ಕಾರಿ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಿ.
ಪ್ರತಿಪಾದಕನ ಸಾಕು ಪ್ರಾಣಿಗಳು ಕೊಲ್ಲಲ್ಪಡುವುದಕ್ಕೆ ಪರಿಹಾರ ಮಂಜೂರು ಮಾಡುವ ಪ್ರದೇಶಗಳನ್ನು ಹೊರತುಪಡಿಸಿ ವನ್ಯಜೀವಿಗಳು ಮೇಯುವ ಪ್ರದೇಶಗಳನ್ನು ನಿಷೇಧಿಸಲಾಗಿದೆ.
ಸ್ಪಷ್ಟನೆ: ಕಾಡು ಮೃಗ ಎಂಬುದು ಯಾವುದನ್ನು ಒಳಗೊಂಡಿರುತ್ತದೆ ಎಂಬುದನ್ನು ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ ಸೆಕ್ಷನ್ 2 (36)ರಲ್ಲಿ ಹೇಳಿರುವ ವಿವರಣೆಗೆ ಅನುಗುಣವಾಗಿ ಅರ್ಥೈಸಿಕೊಳ್ಳಬೇಕು. ಈ ವಿವರಣೆಯ ಪ್ರಕಾರ ‘ಕಾಡು ಮೃಗ’ ಎಂದರೆ ಷೆಡ್ಯೂಲ್ I ರಿಂದ Iಗಿ ರಲ್ಲಿ ನಿರ್ದಿಷ್ಟಪಡಿಸಿರುವ ಹಾಗೂ ಸ್ವಭಾವದಲ್ಲಿ ಕ್ರೂರವಾದುದೆಂದು ಕಂಡುಬರುವ ಯಾವುದೇ ಪ್ರಾಣಿ.
ಸಾಕು ಪ್ರಾಣಿಯ ಸಾವಿನ ಪ್ರಕರಣದಲ್ಲಿ 2,500/- ರಿಂದ 3,000/- ರೂಪಾಯಿಗಳ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ನೀಡಲಾಗುತ್ತದೆ.
ಇಲ್ಲ. ಅರ್ಜಿ ಸಲ್ಲಿಸಲು ಯಾವುದೇ ನಿಗದಿತ ನಮೂನು ಇರುವುದಿಲ್ಲ. ಆದಾಗ್ಯೂ, ಕಾನೂನುಬದ್ಧ ವಾರಸುದಾರನ ಸಹಿ ಅಥವಾ ಎಡಗೈ ಹೆಬ್ಬೆಟ್ಟಿನ ಗುರುತನ್ನು ಹೊಂದಿರುವ ಅರ್ಜಿಯನ್ನು ಓದಲು ಸಾಧ್ಯವಾಗುವಂತೆ ಖಾಲಿ ಕಾಗದದ ಮೇಲೆ ಸ್ಪಷ್ಟವಾಗಿ ಬರೆದಿರಬೇಕು ಅಥವಾ ಬೆರಳಚ್ಚು ಮಾಡಿರಬೇಕು.
ಕಾಡು ಪ್ರಾಣಿಯ ದಾಳಿಯ ಕಾರಣದಿಂದ ಸಾಕು ಪ್ರಾಣಿಗಳು ಸಾವಿಗೀಡಾದ ಪ್ರಕರಣದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪಡೆಯಲು ಅರ್ಜಿಯ ಜೊತೆ ಲಗತ್ತಿಸಬೇಕಾದ ದಾಖಲಾತಿಗಳೆಂದರೆ :
ಕಾಡು ಮೃಗದ ದಾಳಿಯಿಂದ ಸಾಕುಪ್ರಾಣಿಯು ಸಾವಿಗೀಡಾಗಿದೆ ಎಂಬುದನ್ನು ಪ್ರಮಾಣೀಕರಿಸುವ ಮರಣೋತ್ತರ ಪರೀಕ್ಷಾ ವರದಿ. ಕಾನೂನುಬದ್ಧ ವಾರಸುದಾರನ ಪ್ರಮಾಣಪತ್ರ. ಪ್ರಕರಣದ ಪೆÇಲೀಸ್ ತನಿಖಾ ವರದಿ.
ಅರ್ಜಿಯನ್ನು ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗೆ ಸಲ್ಲಿಸಬೇಕು.
ಕಾಡು ಮೃಗದ ದಾಳಿಯಿಂದ ಮೃತಪಟ್ಟಿರುವ ವ್ಯಕ್ತಿಯ ಕಾನೂನುಬದ್ಧ ವಾರಸುದಾರನಿಗೆ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಸೌಲಭ್ಯವನ್ನು ಮಂಜೂರು ಮಾಡಲು ಸಂಬಂಧಪಟ್ಟ ಉಪ ಅರಣ್ಯ ಸಂರಕ್ಷಣಾಧಿಕಾರಿಳು ಮತ್ತು ಮೇಲ್ಕಂಡ ಸಂಬಂಧಪಟ್ಟ ವ್ಯಾಪ್ತಿ ಪ್ರದೇಶದ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಕೆಲವು ಸಂದರ್ಭಗಳಲ್ಲಿ ಆ ಉದ್ದೇಶಕ್ಕಾಗಿ ಸಾಕಷ್ಟು ನಿಧಿಯ ಅಲಭ್ಯತೆಯ ಕಾರಣದಿಂದಾಗಿ ವಿಳಂಬವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅಗತ್ಯ ದಾಖಲಾತಿಗಳಾದ ಮರಣೋತ್ತರ ಪರೀಕ್ಷಾ ವರದಿ, ಪೆÇಲೀಸ್ ವರದಿ ಅಥವಾ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ ಪಡೆಯುವಲ್ಲಿ ಆಗುವ ವಿಳಂಬದಿಂದ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತದೆ.
ಮೂಲ : ಅರಣ್ಯ ಇಲಾಖೆ
ಕೊನೆಯ ಮಾರ್ಪಾಟು : 1/28/2020
ಅರಣ್ಯ ಹಕ್ಕು ಮಾನ್ಯ ಮಾಡುವ ಕಾರ್ಯದಲ್ಲಿ ಅರಣ್ಯ ಹಕ್ಕು ಸಮಿ...
ಅರಣ್ಯ ಹಕ್ಕು ಕಾಯ್ದೆ 2006 ರ ಸಂಕ್ಷಿಪ್ತ ಮಾರ್ಗಸೂಚಿ
ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಕರ್ನಾಟಕ...
ಅರಣ್ಯ ಇಲಾಖೆಯು 11-01-1864 ರಂದು ಜನ್ಮತಾಳಿತು.