ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಕೋಶ / ಸಸಿಗಳ ಖರೀದಿ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಸಿಗಳ ಖರೀದಿ

ಅರಣ್ಯ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತದೆ; ಅವುಗಳನ್ನು ಅಲ್ಲಿಂದ ಪಡೆದುಕೊಳ್ಳಬಹುದು.

 1. ನಾನು ಅರಣ್ಯ ಇಲಾಖೆಯಿಂದ ಎಲ್ಲಿ ಸಸಿಗಳನ್ನು ಪಡೆದುಕೊಳ್ಳಬಹುದು
 2. ಅರಣ್ಯ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತದೆ; ಅವುಗಳನ್ನು ಅಲ್ಲಿಂದ ಪಡೆದುಕೊಳ್ಳಬಹುದು.

 3. ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದುಕೊಳ್ಳಲು ಯಾರು ಮನವಿ ಸಲ್ಲಿಸಬಹುದು
 4. ಯಾವುದೇ ರೈತ/ಸಾಮಾನ್ಯ ವ್ಯಕ್ತಿ/ಸಂಘಸಂಸ್ಥೆಗಳು ಅರಣ್ಯ ಇಲಾಖೆಯಿಂದ ಸಸಿಗಳಿಗಾಗಿ ಮನವಿ ಮಾಡಬಹುದು.

 5. ಸಸಿಗಳನ್ನು ಪಡೆದುಕೊಳ್ಳಲು ಯಾರನ್ನು ಸಂಪರ್ಕಿಸಬೇಕು<
 6. ಸಸಿಗಳನ್ನು ಪಡೆದುಕೊಳ್ಳಲು ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕು.

 7. ಸಸಿಗಳ ಉಚಿತ ವಿತರಣೆ ಇದೆಯೇ
 8. ನರೇಗಾ (ಎನ್ಆರ್ಇಜಿಎ) ಅಡಿಯಲ್ಲಿ ಕಾರ್ಯಕ್ರಮವು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಿಂದ ಅನುಮೋದಿಸಲ್ಪಟ್ಟಿದ್ದಲ್ಲಿ, ಸಸಿಗಳನ್ನು ಇಲಾಖೆಯ ನರ್ಸರಿಗಳಲ್ಲಿ ಬೆಳೆಸಲಾಗುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಡಲು ರೈತರಿಗೆ ಸಸಿಗಳನ್ನು ನೆಡುವ ಮತ್ತು ನಿರ್ವಹಿಸುವ ವೆಚ್ಚವನ್ನು ನೀಡಲಾಗುವುದು. ಆದಾಗ್ಯೂ, ರಾಜ್ಯ ವಲಯ/ಜಿಲ್ಲಾ ವಲಯ ಯೋಜನೆ ಅಡಿಯಲ್ಲಿ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದಿಲ್ಲ.

 9. ವಿವಿಧ ರೀತಿಯ ಸಸಿಗಳಿಗೆ ಅನ್ವಯವಾಗುವ ದರಗಳು ಏನು
 10. ದಿನಾಂಕ 25-02-2009ರ ಸರ್ಕಾರದ ಆದೇಶದಂತೆ ವಿವಿಧ ರೀತಿಯ ಸಸಿಗಳಿಗೆ ಅನ್ವಯವಾಗುವ ದರಗಳು ಕೆಳಕಂಡಂತಿವೆ :

  ಕ್ರ ಸಂ.

  ಪಾಲಿಥೀನ್ ಚೀಲದ ಗಾತ್ರ

  2008-09ರಿಂದ ಅನ್ವಯವಾಗುವ ದರಗಳು

  1

  4” x 6”

  ಪ್ರತಿ ಸಸಿಗೆ ರೂ. 1.00

  2

  5” x 6”

  ಪ್ರತಿ ಸಸಿಗೆ ರೂ. 1.50

  3

  8” x 12”

  ಪ್ರತಿ ಸಸಿಗೆ ರೂ. 3.00

 11. ಸಾರ್ವಜನಿಕ ವಿತರಣೆಗಾಗಿ ಯಾವ ಯೋಜನೆಗಳ ಅಡಿಯಲ್ಲಿ ಸಸಿಗಳನ್ನು ಬೆಳೆಸಲಾಗುತ್ತದೆ
 12. ಪ್ರಾಂತೀಯ ವಿಭಾಗಗಳು - ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಆರ್ಎಸ್ಪಿಡಿ) – ರಾಜ್ಯ ವಲಯ ಯೋಜನೆ. 

  ಸಾಮಾಜಿಕ ಅರಣ್ಯೀಕರಣ ವಿಭಾಗಗಳು - ಎನ್ಆರ್ಇಜಿಎ (ನರೇಗಾ).

 13. ಸಸಿಗಳನ್ನು ಬೆಳೆಸಲು ಯಾವುದೇ ಸಂಘಸಂಸ್ಥೆಯು ಇಲಾಖೆಯಲ್ಲಿ ಹಣವನ್ನು ಠೇವಣಿ ಇಡಬಹುದೆ
 14. ಹೌದು. ಯಾವುದೇ ಸಂಘಸಂಸ್ಥೆಗೆ ಸಸಿಗಳ ಅಗತ್ಯವಿದ್ದಲ್ಲಿ ಅದು ಅವಶ್ಯಕವಾದ ಹಣವನ್ನು ಸಂಬಂಧಪಟ್ಟ ಅರಣ್ಯ ವಿಭಾಗದಲ್ಲಿ ಠೇವಣಿಯಾಗಿ ಇಡಬಹುದು. ಆದಾಗ್ಯೂ, ಸಸಿಗಳನ್ನು ಬೆಳೆಸಲು ಕನಿಷ್ಠ 10 ರಿಂದ 12 ತಿಂಗಳುಗಳು ಬೇಕಾಗುವುದರಿಂದ ಒಂದು ವರ್ಷ ಮುಂಚಿತವಾಗಿ ಹಣವನ್ನು ಠೇವಣಿಯಾಗಿ ಇಡಬೇಕು.

 15. ವಿವಿಧ ಸಂಘಸಂಸ್ಥೆಗಳಿಗೆ ಅಗತ್ಯವಿರುವ ಸಾಕಷ್ಟು ಸಂಖ್ಯೆಯ ಸಸಿಗಳು ಏಕೆ ಲಭ್ಯವಿಲ್ಲ

ನಿಧಿಯ ಹಂಚಿಕೆಯ ಆಧಾರದ ಮೇಲೆ ವಿವಿಧ ವಿಭಾಗಗಳು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಸಸಿಗಳನ್ನು ಬೆಳೆಸುತ್ತವೆ. ಮುಖ್ಯವಾಗಿ ಮಳೆಗಾಲದಲ್ಲಿ ಸಸಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಹಾಗೂ ಇದರಿಂದಾಗಿ ಸಸಿಗಳು ಬಹು ಬೇಗನೆ ಉಪಯೋಗಿಸಲ್ಪಡುತ್ತವೆ. ಆದ್ದರಿಂದ ಸಸಿಗಳ ಅವಶ್ಯಕತೆಯ ಬೇಡಿಕೆಗಳನ್ನು ಒಂದು ವರ್ಷ ಮುಂಗಡವಾಗಿ ಸಲ್ಲಿಸಲು ಸಲಹೆ ಮಾಡಲಾಗಿದೆ.

2.80909090909
ನಿತಿನ್ ಶೆಟ್ಟಿ Jun 08, 2019 08:58 PM

ಕ್ರಷಿಯನ್ನು ಹೆಚ್ಚು ಅವಲಂಬನೆ ಮಾಡುವ ಸವಲತ್ತುಗಳನ್ನು ಉಪಯೋಗಿಸುವುದು ಉತ್ತಮ

Praveen H Jan 09, 2019 05:51 PM

ಒಳ್ಳೆಯ ಮಾಹಿತಿ ದೊರೆತಿದೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top