1913 ರಲ್ಲಿ ಪ್ರಾರಂಭಿಸಲಾದ ಕೃಷಿ ಇಲಾಖೆಯು ಕರ್ನಾಟಕ ರಾಜ್ಯದ ಹಳೆಯ ಇಲಾಖೆಗಳಲ್ಲಿ ಒಂದಾಗಿದೆ. ಸುಸ್ಥಿರ ಆಹಾರ ಉತ್ಪಾದನೆಯನ್ನು ಸಾಧಿಸುವ ಮೂಲಕ ರೈತ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಮಟ್ಟವನ್ನು ಸುಧಾರಿಸುವುದೇ ಇಲಾಖೆಯ ಮುಖ್ಯ ಉದ್ದೇಶವಾಗಿದೆ.
ಕೃಷಿ ವಿಶ್ವವಿದ್ಯಾನಿಲಯಗಳಿಂದ ಬಿಡುಗಡೆಯಾದ/ ಹೊಸ ತಂತ್ರಜ್ಞಾನವನ್ನು ರೈತ ಸಮುದಾಯಕ್ಕೆ ತಲುಪಿಸಿ ಅದನ್ನು ಅಳವಡಿಸುವಂತೆ ಮಾಡಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಕೃಷಿ ಸಹಾಯಕರ ನೆರವಿನೊಂದಿಗೆ ಹೆಚ್ಚಿನ ಉತ್ಪಾದನೆಯನ್ನು ಸಾಧಿಸುವುದು ಇಲಾಖೆಯ ಗುರಿಯಾಗಿದೆ.ತುಮಕೂರು ಜಿಲ್ಲೆ ಕೃಷಿ ವಲಯ 4, 5 ಮತ್ತು 6 ವ್ಯಾಪ್ತಿ ಪ್ರದೇಶದಲ್ಲಿರುತ್ತದೆ. ಜಿಲ್ಲೆಯ ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ತಾಲ್ಲೂಕುಗಳು ಮಧ್ಯದ ಒಣವಲಯ (ಕೃಷಿ ವಲಯ 4), ತುಮಕೂರು, ಗುಬ್ಬಿ ತಾಲ್ಲೂಕುಗಳು ಪೂರ್ವದ ಒಣ ವಲಯ (ಕೃಷಿ ವಲಯ 5) ಮತ್ತು ಕುಣಿಗಲ್ ಹಾಗೂ ತುರುವೇಕೆರೆ ತಾಲ್ಲೂಕುಗಳು ದಕ್ಷಿಣ ಒಣವಲಯಕ್ಕೆ (ಕೃಷಿ ವಲಯ 6) ಸೇರಿರುತ್ತವೆ.
ಜಿಲ್ಲೆಯ ವಾರ್ಷಿಕ ಮಳೆಯ ಪ್ರಮಾಣ 593.0 ಮಿ.ಮೀ ಆಗಿರುತ್ತದೆ. ಮುಂಗಾರು ಮಳೆ ಜೂನ್ ಮೊದಲನೇ ವಾರ ಪ್ರಾರಂಭಗೊಂಡು, ಸೆಪ್ಟೆಂಬರ್ ಮಾಹೆಯಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ.
ಜಿಲ್ಲೆಯಲ್ಲಿ ಮುಂಗಾರು ಮುಖ್ಯ ಬೆಳೆಗಳ ಹಂಗಾಮಾಗಿದ್ದು, ರಾಗಿ ಮತ್ತು ನೆಲಗಡಲೆ ಬೆಳೆಗಳು ಸುಮಾರು ಶೇ. 70 ರಷ್ಟು ವಿಸ್ತೀರ್ಣದಲ್ಲಿ ಮತ್ತು ಭತ್ತ, ಮುಸುಕಿನ ಜೋಳ, ತೊಗರಿ ಹಾಗೂ ಇತರೆ ಬೆಳೆಗಳು ಉಳಿದ ಪ್ರದೇಶದಲ್ಲಿ ಬೆಳೆಯಲಾಗುತ್ತವೆ. ಜಿಲ್ಲೆಯ ಕೃಷಿ ಬೆಳೆಗಳ ಒಟ್ಟು ವಾಡಿಕೆ ಮುಂಗಾರು ವಿಸ್ತೀರ್ಣ 5.00 ಲಕ್ಷ ಹೆ. ನಷ್ಟಿರುತ್ತದೆ. ಸುಮಾರು 0.15 ಲಕ್ಷ ಹೆ. ನಷ್ಟು ಹಿಂಗಾರು ಮತ್ತು 0.30 ಲಕ್ಷ ಹೆ. ನಷ್ಟು ಬೇಸಿಗೆ ಹಂಗಾಮಿನ ಬೆಳೆಗಳು ಬೆಳೆಯಲಾಗುತ್ತವೆ. ಏಕದಳ ಧಾನ್ಯಗಳಲ್ಲಿ ಜಿಲ್ಲೆಯ ಜನಸಂಖ್ಯೆಯ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದ ಉತ್ಪಾದನೆ (3.87 ಲಕ್ಷ ಟನ್ನು) ಸಾಧಿಸಲಾಗುತ್ತಿದ್ದು, ದ್ವಿದಳ ಮತ್ತು ಎಣ್ಣೆ ಕಾಳು ಬೆಳೆಗಳ ಉತ್ಪಾದನೆಯು ಜಿಲ್ಲೆಯ ಅವಶ್ಯಕತೆಗಿಂತ ಕ್ರಮವಾಗಿ 0.306 ಮತ್ತು 1.06 ಲಕ್ಷ ಟನ್ನುಗಳು ಕಡಿಮೆ ಇದೆ.
ಇಲಾಖೆಯ ದೃಷ್ಠಿಕೋನ:
ಕೃಷಿ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಿ, ಹೆಚ್ಚಿನ ಉತ್ಪಾದನೆಯಿಂದ ರೈತ ಸಮುದಾಯಕ್ಕೆ ಆದಾಯವನ್ನು ಹೆಚ್ಚಿಸುವುದು ಮತ್ತು ಜನ ಸಮುದಾಯಕ್ಕೆ ಆಹಾರ ಭದ್ರತೆಯನ್ನು ಒದಗಿಸುವುದು.
ಇಲಾಖೆಯ ಉದ್ದೇಶ :
ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗಡೆಯಾಗಿರುವ ಹೊಸ ತಂತ್ರಜ್ಞಾನವನ್ನು ರೈತ ಸಮುದಾಯಕ್ಕೆ ತಲುಪಿಸಿ, ಅಳವಡಿಸುವ ಕ್ರಮವನ್ನು ತೆಗೆದುಕೊಳ್ಳುವುದು.
ರೈತರಿಗೆ ಅವಶ್ಯಕವಿರುವ ಕೃಷಿ ಪರಿಕರಗಳನ್ನು ಸರಬರಾಜು ಮಾಡುವುದು.
ಕೃಷಿ ಪರಿಕರಗಳ ಗುಣಮಟ್ಟದ ಬಗ್ಗೆ ಉಸ್ತುವಾರಿ ಮಾಡುವುದು.
ಇಲಾಖೆಯ ಕಾರ್ಯಕ್ರಮ/ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.
ಇಲಾಖೆಯ ಕಾರ್ಯಕ್ರಮಗಳು / ಯೋಜನೆಗಳ ಮುಖ್ಯಾಂಶಗಳು :
ಪ್ರತಿ ವರ್ಷ ಹಂಗಾಮುವಾರು ಬೆಳೆವಾರು ವಿವಿಧ ಬಿತ್ತನೆ ಬೀಜಗಳನ್ನು ಬೀಜಬದಲಿಕೆ ಆಧಾರದಂತೆ ಪ್ರಮಾಣಿತ/ಗುಣ ಮಟ್ಟದ ಬೀಜಗಳ ವಿತರಣೆಯನ್ನು ಸಹಾಯಧನದಲ್ಲಿ ಪೂರೈಸಲು ಕ್ರಮಕೈಗೊಳ್ಳುವುದು.ಜಿಲ್ಲೆಯಲ್ಲಿನ ವಿವಿಧ ಬೀಜ ವಿತರಣಾ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಗೆ ವಿವಿಧ ಬೆಳೆಗಳ ವಿತ್ತನೆ ಬೀಜಗಳ ಲಭ್ಯತೆ ಪಡೆದು ಜಿಲ್ಲೆಯಾದ್ಯಂತ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿಯಲ್ಲಿ ವಿತರಣೆಯನ್ನು ಕೈಗೊಳ್ಳುವುದು.ಪ್ರಮಾಣಿತ/ ನಿಜಚೀಟಿ ಬಿತ್ತನೆಯನ್ನು ಎಲ್ಲಾ ವರ್ಗದ ರೈತರಿಗೂ ಮತ್ತು ಅಧಿಕ ಬೆಲೆಯ ಬಿತ್ತನೆ ಬೀಜಗಳಾದ ಹತ್ತಿ, ಸೂರ್ಯಕಾಂತಿ, ಮುಸುಕಿನ ಜೋಳ ಬಿತ್ತನೆಯನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗರಿಷ್ಟ ಮಿತಿಗೊಳಪಟ್ಟಂತೆ ಸಹಾಯಧನದಲ್ಲಿ ವಿತರಿಸಲಾಗುವುದು.
ಜಿಲ್ಲೆಗೊಂದರಂತೆ ಮಣ್ಣು ಆರೋಗ್ಯ ಕೇಂದ್ರವಿದ್ದು, ಜಿಲ್ಲೆಯ ರೈತರ ಮಣ್ಣಿನ ಆರೋಗ್ಯವನ್ನು ತಿಳಿಯಪಡಿಸಲು ಬೇಕಾದ ಪರಿಕರಗಳಿಗಾಗಿ ಈ ಯೋಜನೆಯಲ್ಲಿ ಕಾರ್ಯಾಗತಗೂಳಿಸಲಾಗಿವುದಿಲ್ಲ. ಮಣ್ಣು ಪರೀಕ್ಷೆ, ನೀರಾವರಿಗಾಗಿ ಬಳಸುವ ನೀರಿನ ಪರೀಕ್ಷೆ, ಲಘು ಪೋಷಕಾಂಶಗಳ ಪರೀಕ್ಷೆಯನ್ನು ನಿರ್ವಹಿಸಲು ಬೇಕಾದ ರಾಸಾಯನಿಕ ವಸ್ತುಗಳು ಹಾಗೂ ಪರಿಕರಗಳನ್ನು ವ್ಯವಸ್ಥೆಗಾಗಿ ಸದರಿ ಯೋಜನೆಯನ್ನು ಕಲ್ಪಿಸಲಾಗಿದೆ.
ಜಿಲ್ಲೆಯ ರೈತರಿಗೆ ಬೇಕಾದ ಜೈವಿಕ ಪೀಡೆನಾಶಕ, ಜೈವಿಕ ನಿಯಂತ್ರಣಕಾರಕಗಳ ವಿತರಣೆ ಮತ್ತು ಸುಧಾರಿತ ಧಾನ್ಯ ಸಂಗ್ರಹಣಾ ಪಟ್ಟಿಗೆಗಳ ವಿತರಣೆಯನ್ನು ಶೇ.50 ರಿಯಾಯಿತಿಯಲ್ಲಿ ವಿತರಿಸಲಾಗಿವುದು. ಅಲ್ಲದೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಮಾದರಿಗಳನ್ನು ತೆಗೆಯಲು ಬೇಕಾದ ವಸ್ತುಗಳನ್ನು ಖರೀದಿಸಲು ಹಾಗೂ ಕಳಪೆಮಟ್ಟದ ಕೃಷಿ ಪರಿಕರ ಮಾರಾಟಗಾರರ ಮೋಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಈ ಯೋಜನೆಯ ಅನುಧಾನವನ್ನು ಬಳಸಲಾಗುವುದು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪ್ರಗತಿ ಪರ ರೈತರನ್ನು/ ರೈತ ಮಹಿಳೆಯರು ಕೃಷಿಯಲ್ಲಿನ ಇತ್ತೀಚಿನ ಸಂಶೋಧನೆಗಳ ಮತ್ತು ಹೊಸ ಅವಿಷ್ಕಾರಗಳ ಫಲಿತಾಂಶಗಳನ್ನು ಪ್ರತ್ಯಕ್ಷವಾಗಿ ದರ್ಶಿಸಲು, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಮತ್ತು ವಿ.ಸಿ.ಫಾರಂ, ಮಂಡ್ಯ ಸ್ಥಳಗಳಿಗೆ ಸಂದರ್ಶಿಸಿ ತಾಂತ್ರಿಕ ಜ್ಞಾನ/ ಪರಿಕರ ಲಭ್ಯತೆ ಬಗ್ಗೆ ಮಾಹಿತಿ ನೀಡಲಾಗುವುದು.
ಇದೇ ರೀತಿ ಜಿಲ್ಲೆಯಲ್ಲಿನ ಪ್ರಮುಖ ವಸ್ತು ಪ್ರದರ್ಶನಗಳಾದ ಶ್ರೀ ಸಿದ್ಧಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ಪಟ್ಟನಾಯಕನಹಳ್ಳಿಯಲ್ಲಿ ಇತ್ತೀಚಿನ ವಿವಿಧ ಬೆಳೆಗಳ ಹಾಗೂ ತಳಿಗಳ ಜೀವಂತ ಪ್ರದರ್ಶನ ಮತ್ತು ಸಂಬಂಧಪಟ್ಟ ಮಾಹಿತಿಯನ್ನು ಲಕ್ಷಾಂತರ ಜನ ರೈತರು ಅಲ್ಪಾವಧಿಯಲ್ಲಿ ವೀಕ್ಷಿಸುವಂತೆ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರಿಗೆ ಅವಶ್ಯವಿರುವ ಕೃಷಿ ಮಾಹಿತಿಯನ್ನು ಹಾಗು ಕಾಲಕಾಲಕ್ಕೆ ಬೀಳುವ ಕೀಟರೋಗಗಳ ನಿವಾರಣಾ ಕ್ರಮಗಳನ್ನು, ಬೆಳೆವಿಮಾ, ಹೊಸಯೋಜನೆಗಳ ವಿವರಗಳನ್ನು ತಿಳಿಯಪಡಿಸುವ ಕರಪತ್ರಗಳನ್ನು ಸ್ಥಳೀಯ ಪ್ರಾಂತ್ಯಗಳಿಗನುಗುಣವಾಗುವಂತೆ ಮುದ್ರಿಸಿ ರೈತರಿಗೆ ವಿತರಿಸಲಾಗುವುದು. ಅಲ್ಲದೇ ಕೆಲವು ಬಹು ಮುಖ್ಯ ಯೋಜನಾಂಶಗಳನ್ನು ಹಾಗೂ ಮಾರ್ಗಸೂಚಿಗಳನ್ನು ಪೋಸ್ಟರ್ ಗಳ ಮೂಲಕ ಬಿತ್ತರಿಸಲು ಕ್ರಮ ಕೈಗೊಳ್ಳಲಾಗುವುದು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪರಿಶಿಷ್ಟ ವರ್ಗದ ರೈತರ ಆರ್ಥಿಕ ಅಭಿವೃದ್ಧಿಗಾಗಿ ಕೃಷಿಗೆ ಸಂಬಂಧಿಸಿದ ಪರಿಕರ ಪ್ರಾತ್ಯಕ್ಷಿಕೆಗಳು, ಕೃಷಿ ಉಪಕರಣಗಳು, ಸಸ್ಯ ಸಂರಕ್ಷಣಾ ಉಪಕರಣಗಳು, ಡೀಸಲ್/ ಕೆರೋಸಿನ್ ಇಂಜಿನ್ಗಳು, ಸಬ್ ಮರ್ಸಿಬಲ್ ಪಂಪ್ಸೆಟ್ ಗಳು ನೀರಾವರಿ ಉಪಕರಣಗಳು,ಹೈಟೆಕ್ ಕೃಷಿಯಂತ್ರೋಪಕರಣಗಳು ಮತ್ತು ಕುಯಿಲೋತ್ತರ ಸಂಗ್ರಹಣಾ ಉಪಕರಣಗಳನ್ನು ಶೇ.75 ಸಹಾಯಧನದಲ್ಲಿ ನೀಡಲಾಗುವುದು. ಪ್ರಾತ್ಯಕ್ಷಿಕೆಗಳನ್ನು ಶೇ. 100 ಸಹಾಯಧನದಲ್ಲಿ ಏರ್ಪಡಿಸುವುದು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪರಿಶಿಷ್ಟ ಜಾತಿ ರೈತರ ಆರ್ಥಿಕ ಅಭಿವೃದ್ಧಿಗಾಗಿ ಕೃಷಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳನ್ನು ಶೇ.100 ರ ಸಹಾಯಧನದಲ್ಲಿ ಕೈಗೊಳ್ಳಲಾಗುವುದು. ಮುಂದುವರಿದಂತೆ ಕೃಷಿಉಪಕರಣಗಳು ಸಸ್ಯ ಸಂರಕ್ಷಣಾ ಉಪಕರಣ ಗಳು, ಡೀಸಲ್ / ಕೆರೋಸಿನ್ ಇಂಜಿನ್ಗಳು, ಸಬ್ ಮರ್ಸಿಬಲ್ ಪಂಪ್ಸೆಟ್ ಗಳು ನೀರಾವರಿ ಉಪಕರಣಗಳು, ಹೈಟೆಕ್ ಕೃಷಿಯಂತ್ರೋಪಕರಣಗಳು ಮತ್ತು ಕುಯಿಲೋತ್ತರ ಸಂಗ್ರಹಣಾ ಉಪಕರಣಗಳನ್ನು ಶೇ.75 ರ ರಿಯಾಯಿತಿಯಲ್ಲಿ ನೀಡಲಾಗುವುದು.
ಕೃಷಿ ಸಾಲದ ಹೊರೆಯಿಂದ ಆತ್ಮಹತ್ಯೆಮಾಡಿಕೊಂಡ ರೈತರಿಗೆ ಪರಿಹಾರವನ್ನು ಅವರ ಅವಲಂಬಿತರಿಗೆ ರೂ.1.00 ಲಕ್ಷ ಹಣವನ್ನು ಪರಿಹಾರವಾಗಿ ನೀಡಲಾಗುವುದು. ರೈತರ ಆತ್ಮಹತೈಗೆ ಸಾಲ ನೀಡುವ ಸಂಸ್ಥೆಗಳಿಂದ ಪಡೆದ ಸಾಲದ ಹೊರೆಯೇ ಕಾರಣವೆಂಬ ವಿಷಯವನ್ನು ಖಾತರಿ ಮಾಡಿಕೊಂಡು ಧೃಢೀಕರಣ ಪತ್ರವನ್ನು ಸಮಿತಿಯಿಂದ ಪಡೆದುಕೊಂಡ ನಂತರ ಪರಿಹಾರವನ್ನು ನೀಡಲಾಗುವುದು.
ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಮತ್ತು ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಕೃಷಿ ಉತ್ಪಾದನಾ ಬಹುಮಾನಗಳ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲೆಯ ಪ್ರಮುಖ ನಿಗಧಿತ ಬೆಳೆಗಳಲ್ಲಿ ಕೃಷಿ ಉತ್ಪಾದನಾ ಬಹುಮಾನಗಳ ಯೋಜನೆಯನ್ನು ಜಾರಿಗೆ ತರಲಾಗಿದೆ. ತಾಲ್ಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಬೆಳೆ ಸ್ಪರ್ಧೆಗೆ ಮುಂಗಾರು ಹಂಗಾಮಿನಲ್ಲಿ ನಿಗಧಿತ ವೇಳೆಯೊಳಗೆ ನಿಗದಿತ ಶುಲ್ಕಭರಿಸಿ ಸ್ಪರ್ಧೆಗೆ ರೈತರು ನೊಂದಾಯಿಸಿಕೊಳ್ಳಬೇಕು. ಮಾರ್ಗಸೂಚಿಯಂತೆ ಕಟಾವಾದ ಬೆಳೆಗಳ ಪೈಕಿ ಅತಿ ಹೆಚ್ಚಿನ ಇಳುವರಿ ಪಡೆದ ಪ್ರಥಮ,ದ್ವಿತೀಯ ಮತ್ತು ತೃತಿಯ ಬಹುಮಾನಗಳನ್ನು ಜಿಲ್ಲಾ ಮಟ್ಟದ ಸಮಿತಿಯಲ್ಲಿ ತೀರ್ಮಾನಿಸಿ ನಿರ್ಧರಿಸಿ ಬಹುಮಾನವನ್ನು ವಿತರಿಸಲಾಗುವುದು.
ಜಿಲ್ಲೆಯ ಮಣ್ಣಿನ ಆರೋಗ್ಯ ಸುಧಾರಿಸಲು ಮತ್ತು ಯತೇಚ್ಚವಾಗಿ ರಾಸಾಯನಿಕಗಳ ಬಳಕೆಯಿಂದ ಆದ ದುಷ್ಪರಿಣಾಮಗಳನ್ನು ತಡೆಗಟ್ಟಲು,ಹಾಗೂ ಕೃಷಿಯಲ್ಲಿ ಸುಸ್ಥಿರತೆಯನ್ನು ಕಾಪಾಡಲು ಸಾವಯವ ಕೃಷಿ ಯೋಜನೆಯನ್ನು ತರಲಾಗಿದೆ. ಈ ಯೋಜನೆಯಲ್ಲಿ ರೈತರಿಗೆ ಶೇ.50 ರ ರಿಯಾಯಿತಿಯಲ್ಲಿ ಅಗ್ರಿಗೋಲ್ಢ್ ಸಂಪದ್ಭರಿತ ಗೊಬ್ಬರವನ್ನು ಮತ್ತು ಎರೆಹುಳು ಗೊಬ್ಬರವನ್ನು ವಿತರಿಸಲಾಗುವುದು.ಅಲ್ಲದೆ ಸಾವಯವ ಪೂರಕವಾದ ಸಾವಯವ ಪರಿಕರಗಳನ್ನು ಉತ್ಪಾದಿಸುವ ಘಟಕಗಳ ಸ್ಥಾಪನೆಗೆ ಶೇ.50 ಸಹಾಯಧನ ನೀಡಲಾಗುವುದು.
ಜಿಲ್ಲೆಯಲ್ಲಿ ಉತ್ಪಾದಿಸಿದ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಉತ್ಪಾದಕರಿಗೆ ಹೆಚ್ಚಿನ ಆದಾಯವನ್ನು ಕಲ್ಪಿಸಲಾಗುವುದು. ರೈತರು ಖರೀದಿಸುವ ಕೃಷಿ ಉತ್ಪನ್ನಗಳ ಸಂಸ್ಕರಣಾ ಉಪಕರಣಗಳಿಗೆ ಶೇ. 50 ಸಹಾಯಧನ ನೀಡಲಾಗುವುದು.
ಜಿಲ್ಲೆಯ ಕೃಷಿ ಉತ್ಪಾದನೆಯಲ್ಲಿ ಇರುವ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಹಾಗೂ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಲು ರೈತರು ಕೃಷಿ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು. ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವ ರೈತರಿಗೆ ಶೇ . 50 ಸಹಾಯಧನವನ್ನು ಗರಿಷ್ಠ ಮಿತಿಗೊಳ್ಪಟ್ಟು ವಿತರಿಸುವುದು.
ಖುಷ್ಕಿ ಪ್ರಧಾನ್ಯ ಜಿಲ್ಲೆಯ ಮುಖ್ಯ ಬೆಳೆಗಳಲ್ಲಿ ತಾಂತ್ರಿಕತೆಗಳನ್ನು ಅಳವಡಿಸಿ ಶೇ.20 ರಷ್ಟು ಉತ್ಪಾದಕತೆ ಹೆಚ್ಚಿಸುವುದು, ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರ ಮತ್ತು ಲಘು ಪೋಷಕಾಂಶಗಳನ್ನು ಬಳಸಿ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೂಂಡು ಮಿಶ್ರಬೆಳೆ, ಅಂತರ ಬೆಳೆ ಬಗ್ಗೆ ಒತ್ತುನೀಡಿ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯಿಂದ ಖುಷ್ಕಿ ಪ್ರದೇಶಗಳ ಉತ್ಪಾದಕತೆಯನ್ನು ಹೆಚ್ಚಿಸುವುದು.
ಜಿಲ್ಲೆಯ ರೈತರಿಗೆ ಹಾವು ಕಡಿತದಿಂದ, ಮರದಿಂದ ಬಿದ್ದು ಮತ್ತು ಆಕಸ್ಮಿಕ ಬೆಂಕೆಯಿಂದ ಸಾವು ಸಂಬವಿಸಿದ್ದಲ್ಲಿ, ಸಾವಿನ ಬಗ್ಗೆ ಖಚಿತ ಪಡಿಸಿಗೊಂಡು, ಸಮಿತಿಯು ತೀರ್ಮಾನಿಸಿದ್ದಲ್ಲಿ, ರೂ 1.00 ಲಕ್ಷ ಪರಿಹಾರವನ್ನು ಸತ್ತ ರೈತರ ಅವಲಂಬಿತರಿಗೆ ಪರಿಹಾರ ನೀಡಲಾಗುವುದು.
“ರೈತರಿಂದ, ರೈತರಿಗಾಗಿ ಮತ್ತು ರೈತರಿಗೋಸ್ಕರ” ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಮತ್ತು ಹೋಬಳಿ ಮಟ್ಟದಲ್ಲಿ ಉತ್ಸವಗಳನ್ನು ಆಚರಿಸಲು ಕಾರ್ಯಾಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವಗಳಲ್ಲಿ ಎಲ್ಲಾ ವರ್ಗದ ವಿವಿಧ ಗ್ರಾಮಗಳ ಆಯ್ಕೆಯಾದ ರೈತರನ್ನು ಆಹ್ವಾನಿಸಲಾಗುವುದು. ನಂತರ ಸ್ಥಳೀಯ ಬೆಳೆಗಳ ವೈವಿದ್ಯತೆ, ತಾಂತ್ರಿಕತೆ ಮತ್ತು ತಂತ್ರಜ್ಞಾನಗಳನ್ನು ಬಿಂಬಿಸುವ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ವಿಜ್ಞಾನಿಗಳಿಂದ ರೈತರ ಜೊತೆ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಮಸ್ಯೆಗಳ ಮತ್ತು ನವೀನ ತಾಂತ್ರಕತೆಗಳ ಬಗ್ಗೆ ‘ರೈತ-ವಿಜ್ಞಾನಗಳ’ ನೇರ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು.
ಸಮರ್ಥ ನೀರಿನ ಬಳಕೆಯಿಂದ ಗರಿಷ್ಠ ಉತ್ಪಾದಕತೆಯನ್ನು ಪಡೆಯಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಸದರಿ ಯೋಜನೆಯಡಿಯಲ್ಲಿ ರೈತರಿಗೆ ಶೇ 50 ದರದಲ್ಲಿ ತುಂತುರು ನೀರಾವರಿ ಉಪಕರಣಗಳನ್ನು ನೀಡಬಹುದಾಗಿದೆ. ಬೆಳೆಗಳ ಸಂದಿಗ್ಧ ಪರಿಸ್ಥಿತಿಯಲ್ಲಿ ಗರಿಷ್ಠ ಉತ್ಪಾದನೆ ಪಡೆಯಬಹುದಾಗಿದೆ.
ರೈತ ಸಮುದಾಯಕ್ಕೆ ಅತ್ಯಂತ ನಿಕಟಪೂರ್ವ ಕೃಷಿ ಇಲಾಖೆ ಕಛೇರಿಯೇ ‘ರೈತ ಸಂಪರ್ಕ ಕೇಂದ್ರ’. ಕೃಷಿ ಅಧಿಕಾರಿಯು ಈ ಕೇಂದ್ರದ ಮುಖ್ಯಸ್ಥರಾಗಿರುತ್ತಾರೆ. ಈ ಯೋಜನೆಯಲ್ಲಿ ಸ್ಥಳೀಯ ಅವಶ್ಯಕತೆಗಳಿಗನುಗುಣವಾಗಿ ತೆಗೆದುಕೊಳ್ಳಬೇಕಾದ ಪ್ರಾತ್ಯಕ್ಷಿಕೆಗಳನ್ನು ತೆಗೆದುಕೊಳ್ಳಲಾಗುವುದು ಹಾಗೂ ಈ ಯೋಜನೆಯಲ್ಲಿ ಕಛೇರಿ ನಿರ್ವಹಣೆ ಕೆಲಸಗಳಾದ, ಶುಚಿತ್ವ, ದೂರವಾಣಿ ಬಿಲ್ಲು, ವಿದ್ಯುಚ್ಛಕ್ತಿ ಬಿಲ್ಲು, ವೃತ್ತ ಪತ್ರಿಕೆ ಮತ್ತು ಅವಶ್ಯವಾದ ಕೆಲವು ಲೇಖನಾ ಸಾಮಗ್ರಿಗಳಿಗೆ ಅನುದಾನವನ್ನು ಭರಿಸಬಹುದಾಗಿದೆ.
ಬೇಸಾಯ ಸಂಬಂಧಿತ ಚಟುವಟಿಕೆಗಳ ರೈತರ/ರೈತ ಮಹಿಳೆಯರ ತರಬೇತಿಗೆ ಬರುವ ಶಿಕ್ಷಣಾರ್ಥಿಗಳಿಗೆ ಪ್ರಯಾಣಭತ್ಯೆ, ದಿನಭತ್ಯೆ, ವಸತಿ, ಶೈಕ್ಷಣಿಕ ಪ್ರವಾಸ, ಹಾಗೂ ತರಬೇತಿದಾರರ ಗೌರವಧನ ಹಾಗೂ ತರಬೇತಿಯಲ್ಲಿ ಬಳಸಬೇಕಾದ ಲೇಖನ ಸಾಮಗ್ರಿಗಳಿಗೆ ಈ ಯೋಜನೆಯನ್ನು ಮೀಸಲಿರಿಸಿ ಶಿಕ್ಷಣಾರ್ಥಿಗಳ ತಾಂತ್ರಿಕಜ್ಞಾನವನ್ನು ಹೆಚ್ಚಿಸಿ ಇಳುವರಿಯನ್ನು ಪಡೆದು ಆರ್ಥಿಕತೆಯನ್ನು ಹೆಚ್ಚಿಸಲು ಸಹಕಾರಿಯಾಗಿರಯತ್ತದೆ.
ಜಿಲ್ಲೆಯ ಕೃಷಿ ಉತ್ಪಾದನೆಯಲ್ಲಿ ಇರುವ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಮತ್ತು ಕೆಲವು ಬೇಸಾಯ ಕ್ರಮಗಳಲ್ಲಿ ಕಾಲ ಉಳಿತಾಯವನ್ನು ಮಾಡಲು ಹಾಗೂ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಪೂರೈಸಲು ಮತ್ತು ಕೃಷಿ ಯಂತ್ರೋಪಕರಣವನ್ನು ರೈತರು ಅಳವಡಿಸಿಕೊಳ್ಳುಲು ಹಾಗೂ ಪ್ರೋತ್ಸಾಹಿಸಲು ವಿವಿಧ ರೀತಿಯ ಕೃಷಿ ಯಂತ್ರೋಪಕರಣಗಳು, ಡೀಸಲ್ ಪಂಪ್ ಸೆಟ್, ಟ್ರಾಕ್ಟರ್, ಪವರ್ ಟಿಲ್ಲರ್, ಮತ್ತು ಇಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಉಪಕರಣವನ್ನು, ಕೃಷಿ ಯಂತ್ರೋಪಕರಣಗಳನ್ನು ಶೇ.50 ಸಹಾಯಧನದಲ್ಲಿ ವಿತರಿಸಲಾಗುವುದು.
ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹೆಚ್ಚಿನ ಜಮೀನು ಇಲ್ಲದಿರುವುದರಿಂದ ಅವರು ಪ್ರತ್ಯೇಕವಾಗಿ ಒಕ್ಕಣೆಕಣ ನಿರ್ಮಾಣ ಮಾಡಿಕೊಳ್ಳಲು ಅಶಕ್ತರಾಗಿರುತ್ತಾರೆ. ಇದನ್ನು ನಿವಾರಿಸಲು ಸಾಮೂಹಿಕ ಒಕ್ಕಣೆ ಕಣಗಳನ್ನು ನಿರ್ಮಿಸಲು ಇಲಾಖೆ ಶೇ. 75ರ ಸಹಾಯಧನವನ್ನು ನೀಡುವುದು. ಒಕ್ಕಣೆಕಣ ನಿರ್ಮಿಸಲು ಬೇಕಾದ ಸ್ಥಳವನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳು ಉದಾರವಾಗಿ ನೀಡಬಹುದಾಗಿದೆ ಮತ್ತು ಕಣ ನಿರ್ಮಾಣದ ಅಂದಾಜುಪಟ್ಟಿಯನ್ನು ಯಾವುದೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನೀಡಬಹುದಾಗಿದೆ.
ಅಲ್ಲದೆ ಒಕ್ಕಣೆಗೆ ಬಳಸುವಂತಹ ಟಾರ್ಪಾಲಿನ್/ ಪ್ಲಾಸ್ಟಿಕ್ ಶೀಟನ್ನು ನೀಡಲು ಸಹ ಶೇ. 50 ರ ಸಹಾಯಧನವನ್ನು ನೀಡಲಾಗುವುದು.
ಜಿಲ್ಲೆಯ ಮಣ್ಣಿನ ಆರೋಗ್ಯ ಸುಧಾರಿಸಲು ಮತ್ತು ರಾಸಾಯನಿಕಗಳ ಯತೇಚ್ಚ ಬಳಕೆಯಿಂದಾದ ದುಷ್ಪರಿಣಾಮಗಳನ್ನು ತಡೆಗಟ್ಟಲು ಹಾಗು ಕೃಷಿಯಲ್ಲಿ ಸುಸ್ಥಿರತೆ ಕಾಪಾಡಲು ಸಾವಯವ ಗೊಬ್ಬರ ಯೋಜನೆಯನ್ನು ತರಲಾಗಿದೆ. ಸದರಿ ಯೋಜನೆಯಡಿ ರೈತರಿಗೆ ಶೇ.50 ರ ರಿಯಾಯಿತಿಯಲ್ಲಿ ‘ ಅಗ್ರಿಗೋಲ್ಡ್’ ಸಂಸದ್ಭರಿತ ಗೊಬ್ಬರ ಮತ್ತು ಎರೆಹುಳು ಗೊಬ್ಬರಗಳನ್ನು ವಿತರಿಸಲಾಗುವುದು.
ಈ ಯೋಜನೆಯಲ್ಲಿ ಪೈರನ್ನು/ಗಿಡಗಳನ್ನು ಕೀಟಗಳಿಂದ / ರೋಗದಿಂದ ಮುಕ್ತಗೂಳಿಸಲು ಶೇ. 50 ರಿಯಾಯಿತಿಯಲ್ಲಿ ಕೀಟನಾಶಕ/ರೋಗನಾಶಕ ಔಷಧಿಗಳನ್ನು ಶೇ. 50 ರ ರಿಯಾಯಿತಿ ದರದಲ್ಲಿ ಪೂರೈಸಲಾಗುವುದು. ಅಲ್ಲದೇ ಸಸ್ಯ ಸಂರಕ್ಷಣಾ ಉಪಕರಣಗಳನ್ನು ಸಹ ಶೇ.50 ರ ರಿಯಾಯಿತಿಯಲ್ಲಿ ಪೂರೈಸಲಾಗುವುದು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪ್ರಗತಿಪರ ರೈತರನ್ನು/ರೈತ ಮಹಿಳೆಯರನ್ನು ಕೃಷಿಯಲ್ಲಿನ ಇತ್ತೀಚಿನ ಸಂಶೋಧನೆಗಳ ಫಲಿತಾಂಶ ಮತ್ತು ಹೂಸ ಅವಿಷ್ಕಾರಗಳ ಪರಿಚಯಕ್ಕಾಗಿ ಪ್ರತ್ಯಕ್ಷವಾಗಿ ದರ್ಶಿಸಲು, ಜಿ.ಕೆ.ವಿ.ಕೆ.ಬೆಂಗಳೂರು ಮತ್ತು ವಿ.ಸಿ.ಫಾರಂ ಮಂಡ್ಯ ಸ್ಥಳಗಳಲ್ಲಿ ನಿಗದಿತ ದಿನದಂದು ಕರೆದೊಯ್ಯಲಾಗುವುದು. ನಂತರ ಅಳವಡಿಸಿಕೊಳ್ಳಲು ಬೇಕಾದ ತಾಂತ್ರಕಜ್ಞಾನ/ ಪರಿಕರ ಲಭ್ಯತೆ ಬಗ್ಗೆ ಮಾಹಿತಿ ನೀಡಲಾಗುವುದು. ಇದೇ ರೀತಿ ಜಿಲ್ಲೆಯಲ್ಲಿರುವ ಪ್ರಮುಖ ವಸ್ತು ಪ್ರದರ್ಶನಗಳಾದ ಶ್ರೀ ಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಪಟ್ಟನಾಯ್ಕನಹಳ್ಳಿ ವಸ್ತು ಪ್ರದರ್ಶನಗಳಲ್ಲಿ ಇತ್ತೀಚಿನ ವಿವಿಧ ಬೆಳೆಗಳ ತಳಿಗಳ ಜೀವಂತ ಪ್ರದರ್ಶನ ಮತ್ತು ಸಂಬಂದಪಟ್ಟ ಮಾಹಿತಿಯನ್ನು ಲಕ್ಷಾಂತರ ಜನ ರೈತರು ಅಲ್ಪಾವಧಿಯಲ್ಲಿ ವೀಕ್ಷಿಸುವಂತೆ ವಸ್ತು ಪ್ರದರ್ಶನಗಳನ್ನು ಏರ್ಪಡಿಸಲಾಗುವುದು.
ಎಣ್ಣೆ ಕಾಳು ಬೆಳೆಗಾರರಿಗೆ ವಿವಿಧ ಕೃಷಿ ಪರಿಕರಗಳನ್ನು ಮತ್ತು ಉಪಕರಣಗಳನ್ನು ರಿಯಾಯಿತಿ ದರದಲ್ಲಿ ನೀಡುವ ಮುಖಾಂತರ ಎಣ್ಣೆಕಾಳು ಉತ್ಪಾದನೆಯನ್ನು ಹೆಚ್ಚಿಸಲು ಈ ಯೋಜನೆಯು ಸಹಕಾರಿಯಾಗಿದೆ. ದೃಢೀಕೃತ/ ನಿಜ ಚೀಟಿ ಬಿತ್ತನೆ ಬೀಜಗಳನ್ನು ರಿಯಾಯಿತಿಯಲ್ಲಿ ಪೂರೈಸಲು, ಎಣ್ಣೆಕಾಳು ಬೆಳೆಗಳ ಬೀಜೋತ್ಪಾದನೆಗೆ ಪ್ರೋತ್ಸಾಹಧನವನ್ನು ನೀಡುವುದು, ದೊಡ್ಡ ಪ್ರಮಾಣದ ಪ್ರಾತ್ಯಕ್ಷತೆ, ಸಮಗ್ರ ಪೀಡೆ ನಿರ್ವಹಣೆ ಪ್ರಾತ್ಯಕ್ಷತೆ, ಸಮಗ್ರ ಪೋಷಕಾಂಶ ನಿರ್ವಹಣೆ ಪ್ರಾತ್ಯಕ್ಷತೆಗಳನ್ನು ಶೇ.50 ರಿಯಾಯಿತಿಯಲ್ಲಿ ಆಯ್ದ ರೈತರಿಗೆ ಒದಗಿಸಿ ಹೆಚ್ಚಿನ ಉತ್ಪಾದನೆಯನ್ನು ಕೈಗೊಳ್ಳುವಂತದ್ದಾಗಿದೆ. ಮುಂದುವರಿದಂತೆ ಈ ಯೋಜನೆಯಲ್ಲಿ ಶೇ.50 ರಿಯಾಯಿತಿ ದರದಲ್ಲಿ ನೀರಾವರಿ ಉಪಕರಣಗಳು, ಕೃಷಿ ಉಪಕರಣಗಳು, ಸಸ್ಯ ಸಂರಕ್ಷಣಾ ಉಪಕರಣಗಳು, ಸಸ್ಯ ಸಂರಕ್ಷಣಾ ಔಷಧಿ, ಲಘುಪೋಷಕಾಂಶಗಳು ಮತ್ತು ಸಾವಯವ ಗೊಬ್ಬರಗಳನ್ನು ವಿತರಿಸಲಾಗುವುದು. ಅಲ್ಲದೇ ಇತ್ತೀಚಿನ ಸಂಶೋಧನಾ ಫಲಶೃತಿಗಳನ್ನು ರೈತರಿಗೆ ತರಬೇತಿ ಮುಖಾಂತರ ನೀಡುವುದರಿಂದ ಹೆಚ್ಚಿನ ಉತ್ಪಾದನೆಯನ್ನು ಪಡೆಯಬಹುದಾಗಿದೆ.
ಈ ಯೋಜನೆಯು ಏಕದಳಧಾನ್ಯ ಅಭಿವೃದ್ಧಿಗಾಗಿ ಮೀಸಲಾಗಿದೆ. ಏಕದಳಧಾನ್ಯಗಳು ಅದರಲ್ಲೂ ಹೆಚ್ಚು ಪೋಷಕಾಂಶಗಳನ್ನೊಳಗೊಂಡ ತೃಣಧಾನ್ಯಗಳ ಉತ್ಪಾದಕತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಶೇ.50 ರಿಯಾಯಿತಿ ದರದಲ್ಲಿ ತೃಣಧಾನ್ಯಗಳ ಪ್ರಾತ್ಯಕ್ಷತೆಗೆ ಬೇಕಾದ ಕೃಷಿ ಪರಿಕರಗಳನ್ನು ನೀಡಿ ತೃಣ ಧಾನ್ಯಗಳ ಗರಿಷ್ಠ ಉತ್ಪಾದನೆಯನ್ನು ಪಡೆಯುವುದು ಆದ್ಯತೆಯ ಕಾರ್ಯಕ್ರಮವಾಗಿರುತ್ತದೆ.
ಮುಸುಕಿನಜೋಳದ ಗರಿಷ್ಠ ಉತ್ಪಾದನೆಗಾಗಿ ಈ ಯೋಜನೆಯಡಿಯಲ್ಲಿ ಎಲ್ಲಾ ಸಹಕಾರವನ್ನು ಸರ್ಕಾರ ನೀಡುತ್ತದೆ. ಪ್ರಾತ್ಯಕ್ಷಿಕೆಗಳು ಮತ್ತು ಸಮಗ್ರ ಪೀಡೆ ನಿರ್ವಹಣೆ ಪ್ರಾತ್ಯಕ್ಷಿಕೆಗಳನ್ನು ಶೇ.50 ರ ರಿಯಾಯಿತಿಯಲ್ಲಿ ಏರ್ಪಡಿಸಿ ಮುಸುಕಿನಜೋಳ ದ ಗರಿಷ್ಠ ಉತ್ಪಾದನೆಗೆ ಆಧುನಿಕ ತಾಂತ್ರಿಕತೆಗಳನ್ನು ನೀಡಿ ಹೆಚ್ಚಿನ ಇಳುವರಿ ಪಡೆಯುವಂತೆ ಮಾಡಲಾಗುವುದು. ಅಲ್ಲದೇ ಶೇ.50 ರ ರಿಯಾಯಿತಿ ದರದಲ್ಲಿ ಕೃಷಿ ಉಪಕರಣಗಳು, ಸಸ್ಯ ಸಂರಕ್ಷಣಾ ಉಪಕರಣಗಳು, ಸಾವಯವ ಗೊಬ್ಬರಗಳು, ಸಸ್ಯ ಸಂರಕ್ಷಣಾ ಔಷಧಿಗಳು, ನೀರು ಹಾಯಿಸುವ ಪೈಪುಗಳು ಇವುಗಳನ್ನೆಲ್ಲ ಅವಶ್ಯವಿರುವ ರೈತರಿಗೆ ನೀಡಿ ಉತ್ಪಾದನೆಯ ಹೆಚ್ಚಳವನ್ನು ಗಮನಿಸಲಾಗುವುದ. ಅದರಂತೆ ರೈತರಿಗೆ ಮತ್ತು ಅಧಿಕಾರಿಗಳಿಗೆ ಇತ್ತೀಚಿನ ಮುಸುಕಿನಜೋಳದ ಅಧುನಿಕ ತಂತ್ರಜ್ಷಾನದ ಬಗ್ಗೆ ತರಬೇತಿ ನೀಡಲಾಗುವುದು.
ಜಿಲ್ಲೆಯ ಕೃಷಿ ಉತ್ಪಾದನೆಯಲ್ಲಿ ಇರುವ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಮತ್ತು ಕೆಲವು ಬೇಸಾಯ ಕ್ರಮಗಳಲ್ಲಿ ಕಾಲ ಉಳಿತಾಯ ಮಾಡಲು ಹಾಗೂ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಪೂರೈಸಲು ಮತ್ತು ಕೃಷಿ ಯಾಂತ್ರೀಕರಣವನ್ನು ರೈತರು ಅಳವಡಿಸಿಕೊಳ್ಳಲು ಹಾಗೂ ಪ್ರೋತ್ಸಾಹಿಸಲು ವಿವಿಧ ರೀತಿಯ ಕೃಷಿ ಯಂತ್ರೋಪಕರಣಗಳು, ಡೀಸಲ್ ಪಂಪ್ ಸೆಟ್, ಟ್ರಾಕ್ಟರ್, ಪವರ್ ಟಿಲ್ಲರ್ ಮತ್ತು ಇಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಉಪಕರಣಗಳು ಮತ್ತು ಕೃಷಿ ಯಂತ್ರೋಪಕರಣಗಳನ್ನು ಶೇ.50 ಸಹಾಯಧನದಲ್ಲಿ ವಿತರಿಸಲಾಗುವುದು.
ಕರ್ನಾಟಕ ಬೀಜ ಅಭಿಯಾನ
ಗದಲ್ಲಿ ಜಿಲ್ಲೆಗೆ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ಲಭ್ಯತೆ ಪಡೆದು ಜಿಲ್ಲೆಯಾದ್ಯಂತ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿಯಲ್ಲಿ ವಿತರಣೆಯನ್ನು ಕೈಗೊಳ್ಳಲಾಗುವುದು.
ಭೂ ಚೇತನ ಯೋಜನೆ
ಜಿಲ್ಲೆಯ ಖುಷ್ಕಿ ಪ್ರಧಾನ ಬೆಳೆಗಳಾದ ರಾಗಿ ಮತ್ತು ನೆಲಗಡಲೆ ಬೆಳೆಗಳಲ್ಲಿ ತಾಂತ್ರಿಕತೆಗಳನ್ನು ಅಳವಡಿಸಿ ಸರಾಸರಿ ಶೇ.20 ರಷ್ಟು ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ರೈತರ ಜೀವನ ಮಟ್ಟವನ್ನು ಹೆಚ್ಚಿಸುವುದು. ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರ ಮತ್ತು ಲಘುಪೋಷಕಾಂಶಗಳ ಬಳಕೆ, ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳನ್ನು ಅಳವಡಿಸಿ, ಮಿಶ್ರಬೆಳೆ, ಅಂತರ ಬೆಳೆ ಬಗ್ಗೆ ಹೆಚ್ಚು ಒತ್ತು ನೀಡಿ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯಿಂದ ಖುಷ್ಕಿ ಪ್ರದೇಶಗಳ ಉತ್ಪಾದಕತೆಯನ್ನು ಹೆಚ್ಚಿಸುವುದು.
ರೈತ ಶಕ್ತಿ ಗುಂಪುಗಳು
ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಒಂದರಂತೆ 25 ರಿಂದ 30 ಮಂದಿ ರೈತರು, ರೈತಮಹಿಳೆಯರು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ದುರ್ಬಲ ವರ್ಗದ ರೈತರನ್ನೊಳಗೊಂಡ ಸ್ವಇಚ್ಚೆಯಿಂದ ಪರಸ್ಪರ ಆಸಕ್ತಿ ಹಾಗೂ ಸಹಭಾಗಿತ್ವ ಆಧಾರದ ಮೇಲೆ ಗುಂಪುಗಳನ್ನು ರಚಿಸಿ ಕೃಷಿ ಮತ್ತು ಸಂಬಂದಿತ ಕ್ಷೇತ್ರಗಳಲ್ಲಿ ಅವರ ಕರ್ತವ್ಯವನ್ನು ಹೆಚ್ಚಿಸಿ, ಬಹುಮೂಲಗಳಿಂದ ಆದಾಯೋತ್ಪನ್ನ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಿ ಅವರ ಮೂಲಕ ಅವರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಕೃಷಿ ಬಗ್ಗೆ ಬದಲಾವಣೆ ಹರಿಕಾರರಾಗಿ ಕಾರ್ಯನಿರ್ವಹಿಸುವಂತೆ ತಯಾರು ಮಾಡುವುದು.
ರಾಷ್ಟೀಯ ಆಹಾರ ಭದ್ರತಾ ಯೋಜನೆ
ದ್ವಿದಳ ಧಾನ್ಯ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವುದು ಬೀಜೋತ್ಪಾದನೆ ಮಾಡಿದ ರೈತರಿಗೆ ಪ್ರತಿ ಕ್ವಿಂಟಾಲಿಗೆ ರೂ.1000/- ಪೋತ್ಸಾಹಧನ ನೀಡುವುದು ಹಾಗೂ ಪ್ರಮಾಣಿತ ಬೀಜದ ವಿತರಣೆಗಾಗಿ ಶೇ.50 ರಷ್ಟು ಅಥವಾ ರೂ. 1200/ಕ್ಕೆ ಯಾವುದು ಕಡಿಮೆಯೋ ಅದಕ್ಕೆ ಸಹಾಯಧನ ನೀಡುವುದು.
ಅಲ್ಲದೆ ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ಪೀಡೆ ನಿರ್ವಹಣೆ, ತುಂತುರು ನೀರಾವರಿ ಘಟಕಕ್ಕೆ ಶೇ.50 ರ ರಿಯಾಯ್ತಿ ಅಥವಾ ನಿಗದಿ ಪಡಿಸಿದ ಗರಿಷ್ಟ ಮಿತಿಯಂತೆ ಸಹಾಯಧನದಲ್ಲಿ ನೀಡಲಾಗುವುದು.
ಆತ್ಮ ಯೋಜನೆ
ಕೃಷಿ ಮತ್ತು ಕೃಷಿ ಸಂಬಂದಿತ ಇಲಾಖೆಗಳ ಪ್ರತಿ ನಿರ್ದೇಶಕರು, ಸಂಶೋದನಾ ಕ್ಷೇತ್ರದಲ್ಲಿ ತೊಡಗಿರುವವರು ಕೃಷಿ ವಿಜ್ಞಾನ ಕೇಂದ್ರದ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ರೈತ ಪ್ರತಿನಿಧಿಗಳು ಮತ್ತು ಇತರೆ ಪಾಲುದಾರರು ಸಮಿತಿಯಲ್ಲಿರುತ್ತಾರೆ. ಇದೊಂದು ಸ್ವಯಂ ಪ್ರೇರಿತ ಸಂಸ್ಥೆ. ರಾಜ್ಯ ಮಟ್ಟದಿಂದ ಹಿಡಿದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದವರೆಗೂ ಪ್ರತ್ಯೇಕ ಸಮಿತಿಗಳನ್ನು ರಚಿಸುವ ಮೂಲಕ ಯೋಜನೆ ರೂಪಿಸಿರುವ ಹಿಂದಿನ ಉದ್ದೇಶಗಳನ್ನು ಕ್ಷೇತ್ರಮಟ್ಟಕ್ಕಿಳಿಸುವುದು ಇದರ ತಿರುಳು. ಆಧುನಿಕ ಕೃಷಿ ಪದ್ದತಿಯಲ್ಲಿ ರೈತರಿಗೆ ಬೇಕಾದ ಕೃಷಿ ತಂತ್ರಜ್ಷಾನ ಮತ್ತು ಕೃಷಿ ಪರಿಕರಗಳ ಅವಶ್ಯಕತೆ ಪೂರೈಸಲು, ವೈವಿದ್ಯ ಮಾರುಕಟ್ಟೆ ಬೇಡಿಕೆ, ರಪ್ತು ಹಾಗೂ ಮಾಹಿತಿ ತಂತ್ರಜ್ನಾನದಲ್ಲಾಗುತ್ತಿರುವ ಬೆಳವಣಿಗೆ ಪರಿಚಯಿಸುವ ದೃಷ್ಟಿಯಿಂದ ಕೃಷಿ ಅಭಿವೃದ್ದಿಯಲ್ಲಿನ ವಿವಿಧ ಸಮಸೈಗಳಿಗೆ ಪರಿಹಾರ ಕಂಡು ಕೊಳ್ಳುವುದಕ್ಕಾಗಿ, ಪರಿಣಾಮಕಾರಿಯಾದ ವಿಸ್ತರಣಾ ಸೇವೆಯನ್ನು ಬಲಗೊಳಿಸುವುದಕ್ಕಾಗಿ ಆತ್ಮ ಎನ್ನುವ ವಿನೂತನ ಮಾದರಿಯ ಏಜೆನ್ಸಿ ಯನ್ನು ರಾಜ್ಯದಲ್ಲಿ 2005-06 ರಿಂದ ಮತ್ತು ತುಮಕೂರು ಜಿಲ್ಲೆಯಲ್ಲಿ 2007-08 ರಿಂದ ಪ್ರಾರಂಭಿಸಲಾಗಿದೆ.
1.ಕಂದಾಯ ಉಪವಿಭಾಗಗಳು |
... |
3 |
2. ಹೋಬಳಿಗಳು (ಸಂಖ್ಯೆ) |
... |
50 |
3. ತಾಲ್ಲೂಕುಗಳು (ಸಂಖ್ಯೆ) |
... |
10 |
4. ಗ್ರಾಮಗಳು – ಅ. ಜನ ವಸತಿ ಇರುವ ಗ್ರಾಮಗಳು |
... |
2574 |
5. ಗ್ರಾಮ ಪಂಚಾಯತ್ ಗಳು |
... |
321 |
6. ಕೆರೆಗಳು |
... |
1335 |
7. ಜನ ಸಂಖ್ಯೆ (2001 ರ ಜನಗಣತಿ ) |
|
|
a) ಒಟ್ಟು |
... |
2584711 |
b) ಗ್ರಾಮೀಣ |
... |
2077509 |
c) ನಗರ |
... |
507202 |
d) ಪರಿಶಿಷ್ಟ ಜಾತಿ |
... |
474044 |
e) ಪರಿಶಿಷ್ಟ ಪಂಗಡ |
... |
193819 |
8. ಭೌಗೋಳಿಕ ವಿಸ್ತೀರ್ಣ |
... |
1064755 ಹೆ. |
9. ಕೃಷಿ ಭೂ ಹಿಡುವಳಿಗಳು (2005.06 ರ ಕೃಷಿ ಗಣತಿ ಪ್ರಕಾರ) |
|
422603 |
ಅ) ಸಣ್ಣ ರೈತರು (ಸಂಖ್ಯೆ) |
... |
107924 |
ಆ) ಅತಿ ಸಣ್ಣ ರೈತರು (ಸಂಖ್ಯೆ) |
... |
206989 |
ಇ) ಇತರೆ ರೈತರು (ಸಂಖ್ಯೆ) |
|
107690 |
10. ವಿಸ್ತೀರ್ಣ (ಹೆ.ಗಳಲ್ಲಿ): |
|
|
ಅ) ಸಣ್ಣ ರೈತರು |
... |
154043 |
ಆ) ಅತಿ ಸಣ್ಣ ರೈತರು |
... |
99015 |
ಇ) ಇತರೆ ರೈತರು |
|
451950 |
11. ಸರಾಸರಿ ಹಿಡುವಳಿ (ಹೆ.ಗಳಲ್ಲಿ) |
... |
1.65 |
12. ಮಳೆ (ಮಿ.ಮೀ): |
|
|
ಅ) ವಾರ್ಷಿಕ ಸರಾಸರಿ ಮಳೆ |
... |
593.0 |
ಆ) ಮುಂಗಾರು ಹಂಗಾಮು (ಏಪ್ರಿಲ್ – ಸೆಪ್ಟೆಂಬರ್) |
... |
408.7 |
ಇ) ಹಿಂಗಾರು ಹಂಗಾಮು ( ಅಕ್ಟೋಬರ್ - ಡಿಸೆಂಬರ್) |
... |
173.9 |
ಈ) ಬೇಸಿಗೆ ( ಜನವರಿ – ಮಾರ್ಚ್) |
... |
10.4 |
13. ಸಾಗುವಳಿ ವಿಸ್ತೀರ್ಣ (ಹೆ.ಗಳಲ್ಲಿ) (2008.09) |
|
|
ಅ) ಒಟ್ಟು ಸಾಗುವಳಿ ವಿಸ್ತೀರ್ಣ |
... |
684415 |
ಆ) ನಿವ್ವಳ ಸಾಗುವಳಿ ವಿಸ್ತೀರ್ಣ |
... |
615074 |
14. ನೀರಾವರಿ ವಿಸ್ತೀರ್ಣ (ಹೆ.ಗಳಲ್ಲಿ) |
|
161404 |
15.ಜಿಲ್ಲಾ ಕೃಷಿ ತರಬೇತಿ ಕೇಂದ್ರ |
... |
1 |
16. ಬೀಜೋತ್ಪಾದನಾ ಕೇಂದ್ರಗಳು |
... |
2 |
17. ಮಣ್ಣು ಆರೋಗ್ಯ ಕೇಂದ್ರ |
... |
1 |
ಜಂಟಿ ಕೃಷಿ ನಿರ್ದೇಶಕರು:
ಇವರು ಜಿಲ್ಲಾ ಮಟ್ಟದಲ್ಲಿ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಇಲಾಖೆಯ ಕಾರ್ಯಕ್ರಮ/ಯೋಜನೆಗಳ ಅನುಷ್ಟಾನ ಹಾಗೂ ಉಸ್ತುವಾರಿ ಮಾಡಲು ಜವಾಬ್ಧಾರರಾಗಿರುತ್ತಾರೆ.
ಉಪ ಕೃಷಿ ನಿರ್ದೇಶಕರು(ಕೇಂದ್ರ) ಮತ್ತು ಸಹಾಯಕ ಕೃಷಿ ನಿರ್ದೇಶಕರು (ಕೇಂದ್ರ): ಇವರುಗಳು ಜಿಲ್ಲಾ ಕೇಂದ್ರ ಕಚೇರಿಯಲ್ಲಿದ್ದು ಜಂಟಿ ಕೃಷಿ ನಿರ್ದೇಶಕರು ಅನುಷ್ಟಾನ ಗೊಳಿಸುವ ಹಾಗೂ ಉಸ್ತುವಾರಿ ಮಾಡುವ ಎಲ್ಲಾ ಇಲಾಖಾ ಕಾರ್ಯಕ್ರಮಗಳಿಗೆ ಸಹಕರಿಸುವುದು.
ಸಹಾಯಕ ಕೃಷಿ ನಿರ್ದೇಶಕರು (ವಿಷಯ ತಜ್ಷರು):
ಇವರು ಜಂಟಿ ಕೃಷಿ ನಿರ್ದೇಶಕರಿಗೆ ಇಲಾಖಾ ಕಾರ್ಯಕ್ರಮಗಳ ಆನುಷ್ಟಾನಕ್ಕೆ ಮತ್ತು ಉಸ್ತುವಾರಿಗೆ ಸಹಕರಿಸುವುದಲ್ಲದೇ ಪರಿಕರ ಗುಣ ನಿಯಂತ್ರಣದ ಬಗ್ಗೆ ವಿಶೇಷ ಗಮನವಹಿಸುವರು.
ಸಹಾಯಕ ಕೃಷಿ ನಿರ್ದೇಶಕರು (ರೈತ ಮಹಿಳೆ):
ಇವರು ಜಿಲ್ಲೆಯಲ್ಲಿ ರೈತಮಹಿಳೆಯರನ್ನೊಳಗೊಂಡು ಕಾರ್ಯಗತಗೊಳಿಸುವ ಇಲಾಖಾ ಕಾರ್ಯಕ್ರಮಗಳಲ್ಲಿ ಜಂಟಿ ಕೃಷಿ ನಿರ್ದೇಶಕರಿಗೆ ಸಹಕರಿಸುವುದು.
ತಾಲ್ಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರು:
ಇವರು ತಾಲ್ಲೂಕು ಮಟ್ಟದಲ್ಲಿ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಇವರು ತಾಲ್ಲೂಕು ಮಟ್ಟದಲ್ಲಿ ಇಲಾಖಾ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವ ಮತ್ತು ಉಸ್ತುವಾರಿ ವಹಿಸುವ ಜವಾಬ್ಧಾರಿಹೊಂದಿರುತ್ತಾರೆ.
ಕೃಷಿ ಅಧಿಕಾರಿ :
ಇವರು ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರಾಗಿರುತ್ತಾರೆ. ಇಲಾಖೆಯ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ತಾಂತ್ರಿಕತೆಗಳ ವರ್ಗಾವಣೆಯ ಮೂಲಭೂತ ಕೇಂದ್ರವಾಗಿರುತ್ತದೆ.
2010-11 ನೇ ಸಾಲಿನಲ್ಲಿ ಇಕ್ರಿಸ್ಯಾಟ್, ಹೈದರಾಬಾದ್ ಸಹಯೋಗದೊಂದಿಗೆ ಇಲಾಖೆಯು ‘ಭೂ ಚೇತನಾ’ ಎಂಬ ಹೊಸ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಈ ಯೋಜನೆಯು 1,10,000 ಹೆಕ್ಟೇರುಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ರಾಗಿಯಲ್ಲಿ ಶೇ. 27 ರಷ್ಟು ಮತ್ತು ನೆಲಗಡಲೆಯಲ್ಲಿ ಶೇ. 32 ರಷ್ಟು ಇಳುವರಿ ಹೆಚ್ಚಿರುವುದು ಕಂಡುಬಂದಿರುತ್ತದೆ. 2011-12 ನೇ ಸಾಲಿನಲ್ಲಿ ಈ ಕಾರ್ಯಕ್ರಮವನ್ನು 2,85,000 ಹೆಕ್ಟೇರು ಪ್ರದೇಶದಲ್ಲಿ ಕೈಗೊಳ್ಳಲು ಯೋಜಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಸಣ್ಣ ಅತಿಸಣ್ಣ ರೈತರ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಐಸೋಪಾಂ ಮತ್ತು ಇತರೆ ಯೋಜನೆಗಳಿಂದ ಒಟ್ಟು 73,828 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ಸಹಾಯಧನದಲ್ಲಿ ವಿತರಿಸಲಾಗಿದೆ.
ಕೃಷಿ ಉತ್ಸವ :
ಜಿಲ್ಲೆಯ ಎಲ್ಲಾ ವರ್ಗದ ರೈತರಿಗೆ ಆಧುನಿಕ ಕೃಷಿ ತಾಂತ್ರಿಕತೆಗಳನ್ನು ತಿಳಿಸಲು ಹಾಗೂ ಅಳವಡಿಸಲು ಸಾಧ್ಯವಾಗುವಂತೆ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕೃಷಿ ಉತ್ಸವವನ್ನು ಏರ್ಪಡಿಸಲಾಗಿದೆ.
2010-11 ನೇ ಸಾಲಿನ ಕೃಷಿ ಯಂತ್ರೋಪಕರಣಗಳ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 585 ಪವರ್ ಟಿಲ್ಲರ್, 211 ಡೀಸಲ್ ಇಂಜಿನ್ ಮತ್ತು 913 ಒಕ್ಕಣೆಯಂತ್ರಗಳು ಹಾಗೂ ಹೈಟೆಕ್ ಕೃಷಿ ಯಂತ್ರೋಪಕರಣಗಳನ್ನು ರಿಯಾಯಿತಿಯಲ್ಲಿ ವಿತರಿಸಲಾಗಿದೆ.
ಜಂಟಿ ಕೃಷಿ ನಿರ್ದೇಶಕರು, ತುಮಕೂರು
ಕ್ರ. ಸಂ. |
ಅಧಿಕಾರಿ/ನೌಕರರ ಹೆಸರು/ಕಛೇರಿ ಹೆಸರು |
ಹುದ್ದೆ |
ಜಿಲ್ಲೆ/ತಾಲ್ಲೂಕು/ಹೋಬಳಿ/ಗ್ರಾಮ ಪಂಚಾಯ್ತಿ |
ದೂರವಾಣಿ ನಂ. |
ಮೊಬೈಲ್ ಸಂಖ್ಯೆ |
1 |
ಬಿ.ಎ.ಶ್ರೀರಾಮರೆಡ್ಡಿ, |
ಜಂಟಿ ಕೃಷಿ ನಿರ್ದೇಶಕರು |
ತುಮಕೂರು |
0816-2278474 |
9008353536 |
2 |
ಭಾಗ್ಯಮ್ಮ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಸಹಾಯಕಕೃಷಿ ನಿರ್ದೇಶಕರು [ಕೇಂದ್ರ] |
ತುಮಕೂರು |
0816-2278474 |
9448882710 |
3 |
ಎನ್.ಸಿ.ನಾಗರಾಜು, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಸಹಾಯಕಕೃಷಿ ನಿರ್ದೇಶಕರು [ವಿಷಯ ತಜ್ಞ] |
ತುಮಕೂರು |
0816-2278474 |
9008011334 |
4 |
ಇ.ಎಸ್.ಬಾಲರಾಜು, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಸಹಾಯಕಕೃಷಿ ನಿರ್ದೇಶಕರು [ವಿಷಯ ತಜ್ಞ] |
ತುಮಕೂರು |
0816-2278474 |
9480407034 |
5 |
ಬಿ.ಲತಾ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಸಹಾಯಕಕೃಷಿ ನಿರ್ದೇಶಕರು [ರೈತ ಮಹಿಳೆ] |
ತುಮಕೂರು |
0816-2278474 |
9449024442 |
6 |
ಹೆಚ್.ಎಸ್.ಕೃಷ್ಣಪ್ಪ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಕೃಷಿ ಅಧಿಕಾರಿ [ತಾಂ-1] |
ತುಮಕೂರು |
0816-2278474 |
9964352657 |
7 |
ಎಸ್.ಟಿ.ವೆಂಕಟಾಚಲ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಕೃಷಿ ಅಧಿಕಾರಿ [ತಾಂ-2] |
ತುಮಕೂರು |
0816-2278474 |
9980592659 |
8 |
ಕೆ.ಮುರುಡಪ್ಪ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಕೃಷಿ ಅಧಿಕಾರಿ [ತಾಂ-3] |
ತುಮಕೂರು |
0816-2278474 |
9980973620 |
9 |
ಎಸ್.ಇ.ರವೀಂದ್ರನಾಥ್ ಕುಮಾರ್ , ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಅಧೀಕ್ಷಕರು |
ತುಮಕೂರು |
0816-2278474 |
9448268037 |
10 |
ಎನ್.ಜಿ.ಗಂಗಯ್ಯ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಅಧೀಕ್ಷಕರು |
ತುಮಕೂರು |
0816-2278474 |
9480026167 |
11 |
ಎಸ್.ಬಿ.ಗಲಗಲಿ, |
ಅಧೀಕ್ಷಕರು |
ತುಮಕೂರು |
0816-2278474 |
9739173287 |
12 |
ಟಿ.ಶಿವಕುಮಾರ್ , |
ಪ್ರಥಮ ದರ್ಜೆ ಸಹಾಯಕ |
ತುಮಕೂರು |
0816-2278474 |
9844064580 |
13 |
ಜಿ.ಅನಂತಯ್ಯ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಪ್ರಥಮ ದರ್ಜೆ ಸಹಾಯಕ |
ತುಮಕೂರು |
0816-2278474 |
9901672980 |
14 |
ಕೆ.ಎಸ್.ಪಂಕಜ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಪ್ರಥಮ ದರ್ಜೆ ಸಹಾಯಕ |
ತುಮಕೂರು |
0816-2278474 |
9448173561 |
15 |
ಜಿ.ಕೆ.ದೇವರಾಜು, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಪ್ರಥಮ ದರ್ಜೆ ಸಹಾಯಕ |
ತುಮಕೂರು |
0816-2278474 |
9632959297 |
16 |
ಮಂಜುನಾಥ್ ಹೆಚ್ಚ ಚಚಡಿ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಪ್ರಥಮ ದರ್ಜೆ ಸಹಾಯಕ |
ತುಮಕೂರು |
0816-2278474 |
9036343157 |
17 |
ಡಿ.ನಾಗರಂಗಪ್ಪ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ದ್ವಿತೀಯ ದರ್ಜೆ ಸಹಾಯಕ |
ತುಮಕೂರು |
0816-2278474 |
9480250567 |
18 |
ಹೆಚ್.ನಾರಾಯಣಮೂರ್ತಿ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ದ್ವಿತೀಯ ದರ್ಜೆ ಸಹಾಯಕ |
ತುಮಕೂರು |
0816-2278474 |
9986692723 |
19 |
ಪಿ.ಚಂದ್ರಯ್ಯ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ದ್ವಿತೀಯ ದರ್ಜೆ ಸಹಾಯಕ |
ತುಮಕೂರು |
0816-2278474 |
9972126897 |
20 |
ಡಿ.ಎಸ್.ನಟರಾಜು, |
ದ್ವಿತೀಯ ದರ್ಜೆ ಸಹಾಯಕ |
ತುಮಕೂರು |
0816-2278474 |
9945676428 |
21 |
ಎಫ್.ಫರಾಹ್ನ ಅಹಮದ್, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ದ್ವಿತೀಯ ದರ್ಜೆ ಸಹಾಯಕ |
ತುಮಕೂರು |
0816-2278474 |
9481789867 |
22 |
ಕೆ.ಚಂದ್ರಶೇಖರ್, |
ಶೀಘ್ರಲಿಪಿಗಾರರು |
ತುಮಕೂರು |
0816-2278474 |
9916320099 |
23 |
ಹೆಚ್.ಜಯಲಕ್ಷ್ಮಿ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಹಿರಿಯ ಬರಳಚ್ಚುಗಾರರು |
ತುಮಕೂರು |
0816-2278474 |
9902874810 |
24 |
ವಿ.ಪಿ.ಗೀತಾದೇವಿ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಬೆರಳಚ್ಚುಗಾರರು |
ತುಮಕೂರು |
0816-2278474 |
9880487685 |
25 |
ರೇಣುಕಮ್ಮ. ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಬೆರಳಚ್ಚುಗಾರರು |
ತುಮಕೂರು |
0816-2278474 |
|
26 |
ಎಂ.ಎನ್.ಮೋಹನಮಲ್ಲೇಶ್ವರಿ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಬೆರಳಚ್ಚುಗಾರರು |
ತುಮಕೂರು |
0816-2278474 |
9620082137 |
27 |
ಎನ್.ರಘುವೀರ್ |
ಸಹಾಯಕ ಸಾಂಖ್ಯಕ ಅಧಿಕಾರಿ |
ತುಮಕೂರು |
0816-2278474 |
9449968828 |
28 |
ಅಬ್ದುಲ್ ಅಜೀಜ್ ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ವಾಹನ ಚಾಲಕ |
ತುಮಕೂರು |
0816-2278474 |
9686216060 |
29 |
ಎಸ್.ಜಯರಾಜು, |
ವಾಹನ ಚಾಲಕ |
ತುಮಕೂರು |
0816-2278474 |
9916863577 |
30 |
ರಂಗಸ್ವಾಮಯ್ಯ ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಡಿ ದರ್ಜೆ ನೌಕರರು |
ತುಮಕೂರು |
0816-2278474 |
|
31 |
ಕೆ.ಸಿ.ರವೀಶ್ ಕುಮಾರ್, |
ಡಿ ದರ್ಜೆ ನೌಕರರು |
ತುಮಕೂರು |
0816-2278474 |
|
32 |
ಮಲ್ಲಿಕಾರ್ಜುನಯ್ಯ, ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಡಿ ದರ್ಜೆ ನೌಕರರು |
ತುಮಕೂರು |
0816-2278474 |
|
33 |
ಕಮಲಮ್ಮ |
ಡಿ ದರ್ಜೆ ನೌಕರರು |
ತುಮಕೂರು |
0816-2278474 |
|
34 |
ಎಲ್.ಲಕ್ಷ್ಮೀನಾರಾಯಣರಾಜು , ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ತುಮಕೂರು. |
ಬೈಂಡರ್ |
ತುಮಕೂರು |
0816-2278474 |
|
ಕೊನೆಯ ಮಾರ್ಪಾಟು : 5/28/2020