ಆರೋಗ್ಯಕಾರಿ ತರಕಾರಿಗಳನ್ನು ಕೈತೋಟದಲ್ಲೇ ಬೆಳೆಸಬಹುದಲ್ಲವೇ?
ಮನೆಯ ಕೈತೋಟದಲ್ಲೇ ಚಿಕ್ಕ ಪುಟ್ಟ ತರಕಾರಿ ಗಿಡಗಳನ್ನು ಬೆಳೆದರೆ ತೋಟವೂ ಸುಂದರವಾಗಿರುತ್ತೆ, ತಿಂದರೆ ಆರೋಗ್ಯವೂ ಚೆನ್ನಾಗಿರುತ್ತೆ. ಗಗನದೆತ್ತರಕ್ಕೆ ಏರಿರುವ ತರಕಾರಿ ಬೆಲೆ ನೋಡಿದರೆ ತಮ್ಮ ಪುಟ್ಟ ತೋಟದಲ್ಲೇ ತರಕಾರಿ ಬೆಳೆಯುವ ಮನಸ್ಸನ್ನು ಎಷ್ಟೋ ಮಂದಿ ಮಾಡಿರುತ್ತಾರೆ. ಆದರೆ ಹೇಗೆ ಬೆಳೆಯಬೇಕು ಎಂಬುದರ ಬಗ್ಗೆ ಮಾಹಿತಿ ಇರೋದಿಲ್ಲ. ಬನ್ನಿ ನಿಮ್ಮ ಕೈ ತೋಟದಲ್ಲಿ ಸುಲಭವಾಗಿ ಬೆಳೆಸಬಹುದಾದ ತರಕಾರಿಗಳನ್ನು ಪರಿಚಯಿಸಿದ್ದೇವೆ ನೋಡೋಣ ಬನ್ನಿ.
ಸಾಮಾನ್ಯವಾಗಿ ಟೊಮೇಟೊ ಗಿಡಕ್ಕೆ ಬೆಳೆಗೆ ತುಸು ಹೆಚ್ಚಾಗಿಯೇ ಸೂರ್ಯನ ಬೆಳಕು ಅಗತ್ಯ. ಚಳಿಗಾಲದಲ್ಲಿ ಸೂರ್ಯನ ಬೆಳಕು ಟೊಮೇಟೊಗೆ ಸಾಕಾಗುವುದಿಲ್ಲ ಹಾಗಾಗಿ ಕನಿಷ್ಠ ಪ್ರಾರಂಭಿಕ ಹಂತದಲ್ಲಿ ಬೆಳಕು ಸಾಕಷ್ಟು ಅಗತ್ಯವಿದೆ. ಈ ಸಮಯದಲ್ಲಿ ನೀವು ಪ್ರತಿ ದಿನ 10-12 ಬಾರಿ ಸಸಿಗಳಿಗೆ ಕೃತಕ ಬೆಳಕನ್ನು ನೀಡಬಹುದು. ಸಾಕಷ್ಟು ಬೆಳಕಿನ ಪ್ರಮಾಣ ಈ ಸಸ್ಯದ ಮೇಲೆ ಬಿದ್ದರೆ ಇದರ ಬೆಳವಣಿಗೆ ಹೆಚ್ಚುತ್ತದೆ. ಸಸ್ಯ, ಸಸಿ ಹಂತದಿಂದ ಬೆಳೆಯುತ್ತಿದ್ದಂತೆ ಒಮ್ಮೆ ಸೂರ್ಯನ ಉತ್ತಮ ಬೆಳಕು ಈ ಸಸಿಯ ಮೇಲೆ ಬೀಳುವಂತೆ ಮನೆಯ ವರಾಂಡಕ್ಕೆ ಸ್ಥಳಾಂತರಿಸಬೇಕು.
ಬೀಜ ಹಾಕಿದ ನಂತರ ತುಂಬಾ ನೀರನ್ನು ಸುರಿಯಬಾರದು. ಚಿಗುರೊಡೆದ ನಂತರವೂ ಕೆಲ ದಿನಗಳ ಕಾಲ ಸ್ವಲ್ಪ ನೀರು ಮಾತ್ರ ಸಿಂಪಡಿಸಬೇಕು.
ಕ್ಯಾರೆಟ್ ಬೆಳೆಸುವ ಮೊದಲು ಮಾಡಬೇಕಾದ ಸಿದ್ಧತೆಗಳ ಬಗ್ಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ, ಮೊದಲು ನಿಮ್ಮ ಬೆಳೆಯನ್ನು ಬೆಳೆಸಲು ಹೊರಟಿರುವ ಪ್ರದೇಶ ಉತ್ತಮ ಇಳುವರಿಯನ್ನು ಕೊಡುವಂತಿರಬೇಕು. ಕಲ್ಲುಗಳಿಲ್ಲದ ನುಣುಪಾದ ಮಣ್ಣಿನ ಪ್ರದೇಶವು ಕ್ಯಾರೆಟ್ ಬೆಳವಣಿಗೆಗೆ ಅನುಕೂಲವಾಗಿರುತ್ತದೆ.
ನೀರನ್ನು ನಿಯಮಿತವಾಗಿ ಕೊಡುವುದು ಕ್ಯಾರೆಟ್ ಬೆಳವಣಿಗೆಗೆ ಉತ್ತಮ.
ಮೂಲ : ಬೋಲ್ಡ್ ಸ್ಕೈ
ಕೊನೆಯ ಮಾರ್ಪಾಟು : 6/4/2020
ವಾಸ್ತವದಲ್ಲಿ ಕುಂಬಳ ಕಾಯಿಯಲ್ಲಿರುವ ಪೋಷಕಾಂಶಗಳು ಮತ್ತು ಮು...