ಹಸಿರುಮನೆ ತಂತ್ರಜ್ಞಾನದ ಉದ್ದೇಶವು ಉತ್ತಮ ಗುಣಮಟ್ಟದ ಸಸ್ಯಗಳನ್ನು ವರ್ಷ ಪೂರ್ತಿ ಯಸಸ್ವಿಯಾಗಿ ಬೆಳೆಸಲು ಅಗತ್ಯವಾದ ವತಾವರಣವನ್ನು ಒದಗಿಸುವುದೆ ಆಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ವಾತಾವರಣವು ಸಾಧಾರಣವಾಗಿ ಹಿತಕರ ವಾಗಿರುವುದು ಹಣ್ಣು ಹೂವು ಮತ್ತು ತರಕಾರಿಗಳನ್ನು “ಪಾಲಿ ಹೌಸ” ನಲ್ಲಿ ಬೆಳೆಯುವದು ಸಾಮಾನ್ಯ ಅಭ್ಯಾಸ. ಹಸಿರು ಮನೆ ರಚನೆಗಳು ಹಂಗಾಮು ಇಲ್ಲದಾಗ ತೋಟಗಾರಿಕೆ ಬೆಳೆಗಳನ್ನು , ಸಾಧಾರಣ ಬೇಳೆಗೆ ಹವಾಗುಣ ಪೂರಕ ವಾಗಿಲ್ಲದಾಗ ಬೆಳೆಯುವರು ಹಸಿರು ಮನೆಯು ನಿರಂತರ ಹಣ್ಣಿನ , ಹೂವಿನ ಮತ್ತು ತರಕಾರಿ ಪೂರೈಕೆಯನ್ನು ವರ್ಷಪೂರ್ತಿ ಮಾಡಲು ಸಹಾಯಕ. ನಿಯಂತ್ರಿತ ಹವಾಮಾನ ತಂತ್ರ ಬಳಸುವರು., ಹಸಿರುಮನೆಯ ತರಹದವು ಕೃಷಿಯನ್ನು ವಿಶೇಷವಾಗಿ ವಿಭಿನ್ನ ವಾತಾವರಣ ವಿರುವ ದೇಶಗಳಲ್ಲಿ ಉಪಯುಕ್ತ.
ಹಸಿರು ಮನೆಯು ಪಾರದರ್ಶಕವಾದ ಸಾಮಗ್ರಿಗಳಾದ ಎಲ್.ಡಿ.ಪಿ.ಇ , ಎಫ್.ಆರ್.ಪಿ ಮತ್ತು ಪಾಲಿ ಕಾಬೊನೆಟ್ ಷೀಟುಗಳಿಂದ ಮಾಡಿದ ರಚನೆ ಅವು ಸೂರ್ಯನ ವಿಕಿರಣ ವನ್ನು ಹಾದುಹೋಗಲು ಬಿಡುತ್ತವೆ. ಆದರೆ ಒಳಗಿರುವ ವಸ್ತುಗಳ ಉಷ್ಣ ವಿಕಿರಣವನ್ನು ತಡೆಯುತ್ತವೆ.ಇದು ಸಸ್ಯಗಳ ಬೆಳವಣಿಗೆಗೆ ಪೂರಕ ವಾತಾವರಣವನ್ನು ಉಂಟು ಮಾಡುತ್ತದೆ. ಸೂರ್ಯ ನಿಂದ ಬಂದ ಶಕ್ತಿಯುಹಗಲಿನಲ್ಲಿ ಉಷ್ಣ ವಾಗಿ ಹಸಿರು ಮನೆಯಲ್ಲಿ ಪರಿವರ್ತನೆಯಾಗಿ ಜತೆಗೆ ಅವುಗಳ ಜಲವಿಸರ್ಜನೆಗೆ ಅನುವು ಮಾಡುತ್ತವೆ . ಸಸ್ಯದ ಬೆಳವಣಿಗೆಯ ಮೇಲೆಪರಿಣಾಮ ಬೀರುವ ಬೇರೆ ಬೇರೆ ಅಂಶಗಳಾದ ಬೆಳಕು, ಉಷ್ಣ, ಮತ್ತು ತೇವಾಂಶಗಳುaಇಲ್ಲಿ ನಿಯಂತ್ರಿತವಾಗುತ್ತವೆ.
ಮನೆಯ ಮೂಲ ರಚನೆಯ ಬೆಲೆಯು ಸಾಮಗ್ರಿಗಳ ಆಯ್ಕೆಯ ಮೇಲೆ ಅವಲಂಬಿಸಿದೆ ಶಾಶ್ವತ ಅಥವ ಸಾಧಾರಣ ಮಾಳಿಗೆ ಯು ಕಟ್ಟಡ ಸಾಮಗ್ರಿ ಗಳಾಧ .ಜಿ, ಐ ಕೊಳವೆಗಳು, ಎಂ ಎಸ್ ಯಾಂಗಲ್ ಗಳು ಫೈಬರ್ ಗ್ಲಾಸ್ ಹೆಣೆಯಲ್ಪಟ್ಟ ಪಾಲಿಸ್ಟರ್, ಗಾಜು, ಆಕ್ರೆಲಿಕ್ ಇತ್ಯಾದಿ.ಅಲ್ಲದೆ ಹಸಿರುಮನೆಯ ಸ್ಥಾಪನೆಯುಮೆಲು ಛಾವಣಿಯ ಸಾಮಗ್ರಿಯನ್ನು ಅವಲಂಬಿಸಿದೆ.
ಈ ರೀತಿಯಾಗಿ ಮೇಲೆ ನಮೂದಿಸಿದ ದುಬಾರಿ ಸಾಮಗ್ರಿಗಳನ್ನು ಬಳಸಿ ಕಟ್ಟಿದ ಹಸಿರು ಮನೆಗಳು ತುಂಬ ದುಬಾರಿಯಾಗಿದ್ದು ಸಾಧಾರಣ ಭಾರತೀಯ ರೈತರಿಗೆ ಹೊಂದುವುದು ಸಾಧ್ಯವೆಇಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ರೈತನ ಆರ್ಥಿಕ ಸ್ಥಿತಿಗೆ ಅನುಗುಣವಾದ ಕಡಿಮೆ ವೆಚ್ಚದ ಕಟ್ಟಿಗೆಯ ರಚನೆಯನ್ನು ವಿನ್ಯಾಸ ಮಾಡಲಾಗಿದೆ. ಈ ರಚನೆಗಳು ಯಾವದೆ ಮೇಲು ಛಾವಣಿಗೆ ಅನವು ಮಾಡಿಕೊಡುವವು. ಫಿಲ್ಮ ಪ್ಲಾಸಟಿಕ್ ಷೀಟುಗಳು, ನೆರಳು ನೀಡುವ ಪರದೆಗಳು, ಯುವಿ ಸ್ಥೀರಿಕರಣ ಗೊಳಿಸಿದ ಎಲ್.ಡಿ.ಪಿ.ಇ ಫಿಲ್ಮ ಷೀಟುಗಳು ಇತ್ಯಾದಿಈ ರೀತಿಯ ಹಸಿರುಮನೆ ಬಳಕೆ ದಾರನಿಗೆ ಬೇರೆ ಕೃಷಿ ಚಟುವಟಿಕೆ ನಡೆಸಲು ಅಗತ್ಯವಾದ ಸ್ಥಳ ಒದಗಿಸುವವು ಅದರ ನಿರ್ಮಾಣ ವಿವರವನ್ನು ಕೈಪಿಡಿಯಲ್ಲಿ ನೀಡಲಾಗಿದೆ.
ಈ ಹಸಿರು ಮನೆಯಲ್ಲಿ ಬೆಳೆದ ಸಸ್ಯಗಳ ತಂತ್ರಜ್ಞಾನದ ಬಳಕೆ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಾಧ್ಯ ಏಕೆಂದರೆ ಇದರಿಂದ ಹೆಚ್ಚು ಇಳುವರಿ ಮತ್ತು ಸುಗ್ಗಿಯಿಲ್ಲದಾಗಲೂ ತರಕಾರಿ ಬೆಳೆದು ಉತ್ತಮ ಬೆಲೆ ಪಡೆಯಬಹುದು.
ಬೇಕಾಗಿರುವ ಸಾಮಗ್ರಿಗಳು:
ಎರಡು ಅಳತೆಯ ಮರದ ಕಂಬಗಳನ್ನು ಸಾಮಾನ್ಯವಾಗಿ ಉಪಯೋಗಿಸುವರು. ಒಂದು ದಪ್ಪನೆಯದು ೭ ರಿಂದ ೧೦ ಸೆಮಿ ವ್ಯಾಸವಿರುವುದು. ಇನ್ನೊಂದು ತೆಳ್ಳನೆಯದು ೫ ಸೆಮಿ ವ್ಯಾಸವಿರುವುದು. ದಪ್ಪಗಿನ ವನ್ನು ಮುಖ್ಯ ರಚನೆಗೂ , ತೆಳುವಾದವನ್ನು ಆಧಾರ ರಚನೆಗಳಿಗೂ.ಬಳಸುವರು
ದಪ್ಪನಾದ ಕಂಬಗಳು:೨೧
ತೆಳುವಾದ ಕಂಬಗಳು:೩೪
ಬೇಕಾಗಿರುವ ಒಟ್ಟು ಕಂಬಗಳು:೫೫
೪ ಮಿಮಿ ವ್ಯಾಸದ ಜಿ ಯ ತಂತಿಗಳನ್ನು ಗಳುಗಳನ್ನು ಮುಖ್ಯ ರಚನೆಯಲ್ಲಿ ಕಟ್ಟಲು ಬಳಸುವರು. ೨ ಕೆಜಿ
ಉದ್ದನೆಯ ತಂತಿಯ ಮೊಳೆಗಳನ್ನು ಮರದ ಕಂಬಗಳನ್ನು ಆಧಾರದ ಕಂಬಗಳಿಗೆ ಬಂಧಿಸಲು ಮತ್ತು ಅವುಗಳನ್ನು ಕೀಲುಗಳಂತೆ ಜೋಡಿಸಲು ಬಳಸುವರು ಬೇಕಾದ ಮೊಳೆಗಳು ೭ ಸೆ, ಮಿ ಉದ್ದ:೩ ಕೆ ಜಿ
ಈ ರಚನೆಯು ಕೇವಲ ಮೃದುವಾದ ಆವರಣದ ಹೊದಿಕೆಯಿರುವ ಹಸಿರು ಮನೆಗೆ ಸೂಕ್ತವಾಗಿದೆ. ಎಲ್.ಡಿ.ಪಿ.ಇ ಫಿಲ್ಮು ಅನ್ನು ಸಾಮಾನ್ಯವಾಗಿ ಉಪಯೋಗಿಸುವರು.,ಅಲ್ಲದೆ ಅವು ಬಹು ಅಗ್ಗವಾಗವೆ.ಮತ್ತು ಸುಲಭ ವಾಗಿ ನಿಮಾಣ ಕಾರ್ಯಕ್ಕೆ ಬಳಸಬಹುದು. ಬಾರತದಲ್ಲಿ,ಎಲ್.ಡಿ.ಪಿ.ಇ ಫಿಲ್ಮಗಳನ್ನುಇಂಡಿಯನ್ ಪೆಟ್ರೊ ಚೆಮಿಕಲ್ ಲಿ. (ಐಪಿಸಿಎಲ್ )ಉತ್ಪಾದಿಸುವುದು. ಅವಕ್ಕೆ ಅನೇಕ ಗುಣಗಳಿವೆ ಮತ್ತುಮರದಿಂದ ಮಾಡಿದ ಹಸಿರುಮನೆಗೆ ಛಾವಣಿಯಸುವ ಸಾಮಗ್ರಿಯಾಗಿದೆ.ನಮ್ಮ ಅನುಭವದಲ್ಲಿ , ನಮಗೆ ಗೊತ್ತಿದ್ದಂತೆ ಐ.ಪಿ.ಸಿ.ಎಲ್ ಎಲ್.ಡಿ.ಪಿ.ಇಫಿಲ್ಮ ಅನೇಕ ಅನುಕೂಲಗಳನ್ನು ಹೊಂದಿದೆ. ಅದಕ್ಕೆ ಸಸ್ಯದ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಅನೇಕ ಸನ್ನಿವೇಶಗಳಾದ ಬೆಳಕು, ಉಷ್ಣ ಮತ್ತು ತೇವಾಂಶಗಳನ್ನು ಚೆನ್ನಾಗಿ ನಿರ್ವಹಿಸುವುದು.
ಒಟ್ಟು ಬೇಕಾದ ಫಿಲ್ಮು
ಬೇಕಾದ ಈ ಫಿಲ್ಮು (U.V. ಫಿಲ್ಮುಕಡಿಮೆ ಸಾಂದ್ರತೆಯ ಪಾಲಿತಿಲಿನ್ಫಿಲ್ಮು) ನೆಲದ ವಿಸ್ತೀರ್ಣದ ಸುಮಾರು 2.48ರಷ್ಟು ಹೆಚ್ಚಿರುವುದು. ಉದಾಹರಣೆ- ಒಂದು. ೩೫ ' x ೨೦' = ೭೦೦ ಚ.ಅಡಿ ಅಳತೆಯ ಹಸಿರು ಮನೆ ಕಟ್ಟಲು 1736ಚ. ಅಡಿಯ ಯುವಿಫಿಲ್ಮು, ಅಂದಾಜು 30 ಕಿ. ಗ್ರಾಂ ತೂಕದ 200ಮೈಕ್ರಾನ್ ದಪ್ಪದಯುವಿಫಿಲ್ಮು,ಬೇಕಾಗುವುದು.
ಎಲ್ ಪಿಡಿಇ ಫಿಲ್ಮ ರೋಲ್ (೧೦ ಸೆಮಿ ಅಗಲ)
ಸಾಧಾರಣ ಯುವಿ ಎಲ್.ಡಿ.ಪಿ.ಇ ಫಿಲ್ಮ ರೋಲು/ಉಳಿದ ಯುವಿ ಸ್ಥಿರಗೊಳಿಸಿದ ಎಲ್.ಡಿ.ಪಿ.ಇ ಫಿಲ್ಮು ರೋಲ್ ೧೦ ಸೆ. ಮಿ ಅಗಲದ್ದು ಎಲ್ಲ ಕಂಬಗಳನ್ನು ಸುತ್ತಲು ತಯಾರಿಸಬೇಕು.ಇದರಿಂದ ಜಾಯಿಂಟುಗಳು ಮತ್ತು ತಂತಿಗಳುಯುವಿ ಸ್ಥಿರಗೊಳಿಸಿದ ಎಲ್.ಡಿ.ಪಿ.ಇ ಫಿಲ್ಮ ನೇರ ಸಂಪರ್ಕಕ್ಕೆ ಬಾರದಂತೆ ತಡೆಯುವವು.ಒಟ್ಟು ಬೇಕಾದ ಫಿಲ್ಮುಕೆಜಿಗಳಲ್ಲಿ: ೩ ಕೆಜಿ ೭ ಪ್ಲಾಸ್ಟಿಕ್ ಹಗ್ಗ
ಪ್ಲಾಸ್ಟಿಕ್ ಹಗ್ಗವನ್ನು ಎಲ್.ಡಿ.ಪಿ.ಇ ಷೀಟುಗಳನ್ನು ರಚನೆಯ ಟ್ರಸ್ ನಡುವೆ ಬಂಧಿಸಲು ಬಳಸುವರು. ಇದರಿಂದ ಬಿರು ಗಾಳಿಗಯ ರಭಸಕ್ಕೆ ಷೀಟುಗಳು ಹರಿದು ಹೋಗುವ ಸಾಧ್ಯತೆ ಕಡಿಮೆಯಾಗುವುದು.
ಬೇಕಾದ ಪ್ಲಾಸ್ಟಿಕ್ ಹಗ್ಗ ೫ ಕೆಜಿ
ಬೊಂಬುಗಳನ್ನು ಸುತ್ತಲೂ ಜಾಯಿಂಟುಗಳನ್ನು ಸೇರಿಸುವಲ್ಲಿ ಛಾವಣಿಯ ಮೇಲೆ ಎಲ್.ಡಿ.ಪಿ.ಇ ಹಾಳೆಗಳನ್ನು ಬಂಧಿಸಲು ಬಳಸುವರು.
ಒಟ್ಟು ಬೇಕಾಗಿರುವ ಬೊಂಬುಗಳ ಸಂಖ್ಯೆ ೩೦
ಹಾಳೆಗಳಿನ ಛಾವಣಿಯುಳ್ಳ ಮರದ ೩೫ 'x ೨೦ ' ಹಸಿರುಮನೆಯ ನಿರ್ಮಾಣದ ವಿಧಾನ
ಹೆಜ್ಜೆ ೧
ಹಸಿರು ಮನೆ ನಿವೇಶನ ಆಯ್ಕೆ ಮತ್ತು ಅನುವು ಗೊಳಿಸುವಿಕೆ
ಮೆಟ್ಟಿಲು–೨
ಎಂ ಸಿ ಆರ್ ಸಿ ಯು ನಿಮರ್ಕಿಸಿದ ಹಸಿರುಮನೆ ರಚನೆಯು ಕೆಳಗಿನ ಅನುಕೂಲಗಳನ್ನು ಹೊಂದಿದೆ.
ಮೂಲ:ಶ್ರೀ ಅಮ್ಮ ಮುರುಗಪ್ಪ ಛೆತ್ತಿಅರ್ ರಿಸರ್ಚ್ ಸೆಂಟರ್ , ತರಮಣಿ , ಚೆನ್ನೈ – ೬೦೦ ೧೧೩ .
ಕೊನೆಯ ಮಾರ್ಪಾಟು : 7/1/2020