ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕೆಂಪು ಹೂಗಳು

ಈ ಕೆಂಪು ಹೂಗಳು ನಿಮ್ಮ ಗಾರ್ಡನ್ ನಲ್ಲಿ ಇದೆಯೇ?

ಈ ಕೆಂಪು ಹೂಗಳು ನಿಮ್ಮ ಗಾರ್ಡನ್ ನಲ್ಲಿ ಇದೆಯೇ?

ರೆಡ್ ಟ್ಯೂಲಿಪ್

ಇದನ್ನು ನೆಟ್ಟು ಬೆಳೆಸುವುದು ಸುಲಭ. ತುಂಬಾ ಆರೈಕೆ ಮಾಡುವ ಅಗತ್ಯವಿಲ್ಲ. ನೀರು ಬೆಳಕು ಚೆನ್ನಾಗಿ ಸಿಕ್ಕಿದರೆ ಸಾಕು, ಸೊಗಸಾಗಿ ಬೆಳೆಯುತ್ತದೆ ಈ ಗಿಡ.

ಗ್ಲೋರಿಯಾ ಲಿಲ್ಲಿ

ಇದು ಅಪರೂಪದ ಹೂ ಆಗಿದ್ದು ಸಿಕ್ಕಿದ್ದರೆ ನಿಮ್ಮ ಗಾರ್ಡನ್ ನಲ್ಲಿ ನೆಡಿ. ಈ ಹೂ ಬೇಸಿಗೆಯಲ್ಲಿ ಬಿಡುತ್ತದೆ. ನೀರು ಸ್ವಲ್ಪ ಹೆಚ್ಚಾಗಿಯೇ ಬೇಕು, ಈ ಗಿಡದ ಆರೈಕೆಗೆ.

ಡೈಲಿಯಾ

ಡೈಲಿಯಾ ಗಿಡದ ಗಟ್ಟೆಯನ್ನು ತಂದು ನೆಟ್ಟರೆ ಸಾಕು ಪ್ರತೀವರ್ಷ ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ಹೂ ಬಿಡುತ್ತದೆ. ನಂತರ ಗಿಡ ಮಾಯವಾಗುವುದು, ನಂತರ ಮಾರನೆಯ ವರ್ಷ ಅದೇ ಜಾಗದಲ್ಲಿ ಗಿಡ ಮೊಳೆತು ಡೈಲಿಯಾ ಹೂ ಬಿಡಲಾರಂಭಿಸುತ್ತದೆ. ಇದಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿಲ್ಲ.

ಚಿಟ್ಟೆ ರೋಸ್

ಗೊಂಚಲು-ಗೊಂಚಲುವಾಗಿ ಬೆಳೆಯುವ ಚಿಟ್ಟೆ ರೋಸ್ ನೆಟ್ಟರೆ ವರ್ಷ ಪೂರ್ತಿ ಗಿಡದಲ್ಲಿ ಹೂವಿರುತ್ತದೆ.

ಕೆಂಪು ಗುಲಾಬಿ

ಪ್ರೇಮದ ಸಂಕೇತವಾದ ಕೆಂಪು ಗುಲಾಬಿ ಹೂವನ್ನು ಕೂಡ ಸುಲಭವಾಗಿ ಬೆಳೆಸಬಹುದು, ಆದರೆ ಹೂ ಬಿಡುವ ಸಮಯದಲ್ಲಿ ಕ್ರಿಮಿಗಳು ಆಕ್ರಮಣ ಮಾಡದಿರಲು ಮದ್ದು ಸಿಂಪಡಿಸುವುದು ಒಳ್ಳೆಯದು.

ರೆಡ್ ಫ್ಲವರ್

ತುಂಬಾ ತಂಪಾದ ಪ್ರದೇಶದಲ್ಲೂ ಈ ಹೂ ಚೆನ್ನಾಗಿ ಬರುತ್ತದೆ. ಇದನ್ನು ಚಿಕ್ಕ ಹೂ ಕುಂಡದಲ್ಲೂ ಕೂಡ ಬೆಳೆಸಬಹುದು.

ರೆಡ್ ಪೋಪ್ಪೀಸ್

ಈ ಹೂವನ್ನು ಹೂ ಕುಂಡದಲ್ಲಿ ನೆಡಬಾರದು, ನೆಲದಲ್ಲಿ ನೆಟ್ಟರೆ ಅನೇಕ ಗಿಡಗಳು ಹುಟ್ಟಿಕೊಂಡು ಸೊಗಸಾಗಿ ಬೆಳೆಯುತ್ತದೆ.

ಮೂಲ : ಬೋಲ್ಡ್ ಸ್ಕೈ

2.94392523364
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top