অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೀಟಗಳು

ಬಿಹಾರದ ಕಂಬಳಿ ಹುಳು

ಸ್ಪೈಲೊಸೋಮ ಒಬ್ಲಿಕ್ವ
ಮುಂಗಾರು ಮತ್ತು ಮುಂಗಾರಿನ ನಂತರ ಈ ಕೀಟದ ಹಾವಳಿ ಕಂಡುಬರುತ್ತದೆ. ಆಗಸ್ಟ್ ತಿಂಗಳಿನಿಂದ ಜನವರಿಯವರೆಗೆ ಇದರ ಹಾವಳಿ ಹೆಚ್ಚಾಗಿದ್ದು, ಮೈಸೂರು, ಬಳ್ಳಾರಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಹೆಣ್ಣುಪತಂಗವು ಸಾಮಾನ್ಯವಾಗಿ 1000 ದಿಂದ 2000 ಮೊಟ್ಟೆಗಳನ್ನು ಗುಂಪುಗಳಲ್ಲಿ ಎಲೆಯ ತಳಭಾಗದಲ್ಲಿಡುತ್ತದೆ. ಮರಿ ಹುಳುಗಳು ಗುಂಪಿನಲ್ಲಿ ಎಲೆಗಳ ಮೃದುಭಾಗವನ್ನು ತಿಂದು ಜಾಳು ಮಾಡುತ್ತವೆ. ಬೆಳೆದ ಹುಳುಗಳು ತೋಟದಲ್ಲಿ ಹರಡಿ ಎಲೆಗಳನ್ನು ಯಥೇಚ್ಛವಾಗಿ ತಿನ್ನುತ್ತವೆ. ಗಾಢ ಕಂದುಬಣ್ಣದ ಪ್ಯೂಪ 12 ಅಥವಾ 14 ದಿನಗಳ ನಂತರ ಪತಂಗವಾಗಿ ಹೊರಬರುತ್ತವೆ. ಜೀವನಚಕ್ರ 48 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಮರಿಗಳು ಗುಂಪಾಗಿ ಎಲೆಗಳ ತಳಭಾಗದಲ್ಲಿರುವುದರಿಂದ ಅಂತಹ ಎಲೆಗಳನ್ನು ಹುಳುಗಳ ಸಮೇತ ಕಿತ್ತು, ಸುಟ್ಟು ನಾಶಪಡಿಸಬೇಕು. ಶೇ.0.2 ರ ಡಿಡಿವಿಪಿ ಕೀಟನಾಶಕವನ್ನು ಸಿಂಪಡಿಸಬೇಕು.
ಸೂಚನೆ: 15 ದಿನಗಳವರೆಗೆ ಎಲೆಗಳನ್ನು ಹುಳುಗಳಿಗೆ ಉಪಯೋಗಿಸಬಾರದು.
ತುಕ್ರ

ಮ್ಯಾಕೊನೆಲ್ಲಿಕಾಕಸ್ ಹಿರ್‍ಸೂಟಸ್

ಮ್ಯಾಕೊನೆಲ್ಲಿಕಾಕಸ್ ಹಿರ್‍ಸೂಟಸ್ ಎಂಬ ಬೂಸ್ಟ್ ತಿಗಣೆಯು ಹಿಪ್ಪುನೇರಳೆ ಗಿಡವನ್ನು ಆಕ್ರಮಣ ಮಾಡುವುದರಿಂದ 'ತುಕ್ರ' ಉಂಟಾಗುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾವಳಿ ಹೆಚ್ಚಿದ್ದರೂ, ವರ್ಷವಿಡೀ ಕಂಡುಬರುತ್ತದೆ. ಬಿಳಿ ಹತ್ತಿಯಂತಹ ಈ ತಿಗಣೆಗಳು ಸಸ್ಯದ ತುದಿಭಾಗಗಳಲ್ಲಿ ಸೇರಿ ರಸವನ್ನು ಹೀರುತ್ತವೆ. ಇದರಿಂದ ಸಸ್ಯದ ಕುಡಿಭಾಗದ ಕಾಂಡ, ದಪ್ಪ ಇಲ್ಲವೆ ಚಪ್ಪಟೆಯಾಗಿ, ಎಲೆಗಳು ಸುಕ್ಕುಗಟ್ಟಿ ದಟ್ಟಹಸಿರು ಬಣ್ಣವನ್ನು ಹೊಂದುತ್ತವೆ. ಇದರಿಂದ ಸೊಪ್ಪಿನ ಇಳುವರಿ ಕಡಿಮೆಯಾಗುತ್ತದೆ.
ಹೆಣ್ಣು ಕೀಟವು ಸುಮಾರು 350-500 ಕಿತ್ತಳೆ ಬಣ್ಣದ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯೊಡೆದು ಹೊರಬಂದ ಮರಿಗಳು ತೆವಳುತ್ತಾ ಹರಿದಾಡಿ ಎಲೆಗಳ ರಸ ಹೀರುತ್ತವೆ.ಗಂಡು ಮತ್ತು ಹೆಣ್ಣು ಕ್ರಮವಾಗಿ 4 ಮತ್ತು 3 ಬಾರಿ ಪೊರೆ ಕಳಚಿ ಪ್ರೌಢಾವಸ್ಥೆ ತಲುಪುತ್ತವೆ. ಜೀವನಚಕ್ರ ಸುಮಾರು ಒಂದು ತಿಂಗಳಲ್ಲಿ ಮುಗಿಯುತ್ತದೆ.
ತುಕ್ರದ ಹಾವಳಿಗೆ ತುತ್ತಾದ ರೆಂಬೆಗಳನ್ನು ಕತ್ತರಿಸಿ ಸುಡಬೇಕು ಅಥವಾ ಶೇ.0.5 ರ ಸಾಬೂನು ದ್ರಾವಣದಲ್ಲಿ 3-4 ನಿಮಿಷ ಅದ್ದಿ ಬೂಸ್ಟ್ ತಿಗಣೆಯನ್ನು ನಾಶಪಡಿಸಬೇಕು. ಶೇ.0.15 ರ ಡಿಡಿವಿಪಿ (ಪ್ರತಿ ಲೀಟರ್ ನೀರಿಗೆ 1.5 ಮಿ.ಲೀ. ಡಿಡಿವಿಪಿ ಸೇರಿಸಬೇಕು) ಕೀಟನಾಶಕವನ್ನು ಶೇ.0.5 ರ ಸಾಬೂನು ದ್ರಾವಣದಲ್ಲಿ ತಯಾರಿಸಿ 10 ದಿನಗಳ ಅಂತರದಲ್ಲಿ 2 ಬಾರಿ ರೋಗಪೀಡಿತ ಸಸ್ಯಗಳ ತುದಿ ಭಾಗಗಳ ಮೇಲೆ ಚೆನ್ನಾಗಿ ಬೀಳುವಂತೆ ಸಿಂಪಡಿಸಬೇಕು. ಜೈವಿಕ ಕೀಟ ನಿಯಂತ್ರಣಕ್ಕೆ ಶೇ.4ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು.
ಸೂಚನೆ: ಡಿಡಿವಿಪಿ ಉಪಯೋಗಿಸಿದ 15 ದಿನಗಳವರೆಗೆ ಎಲೆಗಳನ್ನು ಹುಳು ಸಾಕಣೆಗೆ ಉಪಯೋಗಿಸಬಾರದು.

ಎಲೆ ಸುರಳಿ ಕೀಟ

ಡೈಯಫೇನಿಯ ಪಲ್ವೆರುಲೆಂಟಾಲಿಸ್
ಈ ಕೀಟಗಳ ಹಾವಳಿಯು ಹಿಪ್ಪುನೇರಳೆ ತೋಟಗಳಲ್ಲಿ 1995ನೇ ಸಾಲಿನಿಂದೀಚೆಗೆ ಹೆಚ್ಚಾಗಿರುವುದು ಕಂಡುಬಂದಿದೆ. ಈ ಕೀಟವು ಜೂನ್ ತಿಂಗಳಿನಿಂದ ಏಪ್ರಿಲ್‍ವರೆಗೆ ಕಂಡುಬಂದರೂ ಜುಲೈ ತಿಂಗಳಿನಿಂದ ನವೆಂಬರ್‍ವರೆಗೆ ಇದರ ಹಾವಳಿ ಅತಿ ಹೆಚ್ಚು. ಸುರುಳಿಕೀಟದ ಸಣ್ಣಮರಿಗಳು ಗಿಡದ ಕುಡಿಭಾಗ ಇಲ್ಲವೆ ಎಳೆಯ ಎಲೆಗಳ ಅಂಚಿನಲ್ಲಿ ಬಿಳಿಬಣ್ಣದ ಸೂಕ್ಷ್ಮದಾರದಿಂದ ಹೆಣೆದ ಚೀಲದ ಒಳಭಾಗದಲ್ಲಿ ಸೇರಿಕೊಂಡು ಎಲೆಯ ಹಸಿರುಭಾಗವನ್ನು ಕೆರೆದು ತಿನ್ನುತ್ತವೆ. ಎಲೆಯು ಸುರುಳಿ ಆಕಾರ ಹೊಂದುವುದರಿಂದ ಇದನ್ನು ಎಲೆ ಸುರುಳಿಕೀಟ ಎನ್ನುತ್ತಾರೆ. ಈ ಕೀಟಕ್ಕೆ ಗಂಟುರೋಗ ಮತ್ತು ಸುಣ್ಣಕಟ್ಟು ರೋಗಗಳು ಬರುವ ಸಾಧ್ಯತೆಗಳಿದ್ದು ಕಲುಷಿತಗೊಂಡ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ನೀಡಿದಲ್ಲಿ, ಈ ರೋಗಗಳು ಹರಡುವ ಸಾಧ್ಯತೆ ಇದೆ. ಹೆಣ್ಣು ಚಿಟ್ಟೆಯು ಸುಮಾರು 100 ಮೊಟ್ಟೆಗಳನ್ನಿಡುವ ಸಾಮಥ್ರ್ಯ ಹೊಂದಿರುತ್ತವೆ. ಸಸ್ಯದ ಕುಡಿಭಾಗದಲ್ಲಿ 1-2 ಮೊಟ್ಟೆಗಳನ್ನಿಡುತ್ತದೆ. 3-4 ದಿನಗಳಲ್ಲಿ ಮರಿಗಳು ಹೊರಬಂದು 10-15 ದಿನಗಳವರೆಗೆ ಸೊಪ್ಪನ್ನು ತಿಂದು ಬೆಳೆಯುತ್ತವೆ. ಕೋಶಾವಸ್ಥೆಯ ಅವಧಿ 8-10 ದಿನಗಳಾಗಿದ್ದು ಈ ಕೀಟಗಳು ತಮ್ಮ ಜೀವನಚಕ್ರವನ್ನು 21-29 ದಿನಗಳಲ್ಲಿ ಪೂರ್ಣಗೊಳಿಸುತ್ತವೆ.
ಬಾಧೆಗೊಳಪಟ್ಟ ಸಸ್ಯದ ಕುಡಿಭಾಗಗಳನ್ನು ಕಿತ್ತು ಶೇ.0.5 ರ ಸಾಬೂನು ದ್ರಾವಣದಲ್ಲಿ ಅದ್ದಿ ಮರಿಗಳನ್ನು ನಾಶಪಡಿಸಬೇಕು. ಇಲ್ಲವೇ ಸಸ್ಯದ ಕುಡಿಭಾಗವು ಪೂರ್ಣ ಒದ್ದೆಯಾಗುವಂತೆ ಶೇ.0.015ರ ಡಿಡಿವಿಪಿ ದ್ರಾವಣ (1.5ಮಿ.ಲೀ.ಡಿಡಿವಿಪಿ ಪ್ರತಿ ಲೀಟರ್ ನೀರಿಗೆ ಸೇರಿಸಿ) ಸಿಂಪಡಿಸಬೇಕು. ಹಾವಳಿ ಹೆಚ್ಚಾಗಿದ್ದಲ್ಲಿ 10 ದಿನಗಳ ನಂತರ ಮತ್ತೊಮ್ಮೆ ಕೀಟನಾಶಕ ಸಿಂಪಡಿಸಬೇಕು.

ಬಿಹಾರದ ಕಂಬಳಿ ಹುಳು ಸ್ಪೈಲೊಸೋಮ ಒಬ್ಲಿಕ್ವಮುಂಗಾರು ಮತ್ತು ಮುಂಗಾರಿನ ನಂತರ ಈ ಕೀಟದ ಹಾವಳಿ ಕಂಡುಬರುತ್ತದೆ. ಆಗಸ್ಟ್ ತಿಂಗಳಿನಿಂದ ಜನವರಿಯವರೆಗೆ ಇದರ ಹಾವಳಿ ಹೆಚ್ಚಾಗಿದ್ದು, ಮೈಸೂರು, ಬಳ್ಳಾರಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಹೆಣ್ಣುಪತಂಗವು ಸಾಮಾನ್ಯವಾಗಿ 1000 ದಿಂದ 2000 ಮೊಟ್ಟೆಗಳನ್ನು ಗುಂಪುಗಳಲ್ಲಿ ಎಲೆಯ ತಳಭಾಗದಲ್ಲಿಡುತ್ತದೆ. ಮರಿ ಹುಳುಗಳು ಗುಂಪಿನಲ್ಲಿ ಎಲೆಗಳ ಮೃದುಭಾಗವನ್ನು ತಿಂದು ಜಾಳು ಮಾಡುತ್ತವೆ. ಬೆಳೆದ ಹುಳುಗಳು ತೋಟದಲ್ಲಿ ಹರಡಿ ಎಲೆಗಳನ್ನು ಯಥೇಚ್ಛವಾಗಿ ತಿನ್ನುತ್ತವೆ. ಗಾಢ ಕಂದುಬಣ್ಣದ ಪ್ಯೂಪ 12 ಅಥವಾ 14 ದಿನಗಳ ನಂತರ ಪತಂಗವಾಗಿ ಹೊರಬರುತ್ತವೆ. ಜೀವನಚಕ್ರ 48 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಮರಿಗಳು ಗುಂಪಾಗಿ ಎಲೆಗಳ ತಳಭಾಗದಲ್ಲಿರುವುದರಿಂದ ಅಂತಹ ಎಲೆಗಳನ್ನು ಹುಳುಗಳ ಸಮೇತ ಕಿತ್ತು, ಸುಟ್ಟು ನಾಶಪಡಿಸಬೇಕು. ಶೇ.0.2 ರ ಡಿಡಿವಿಪಿ ಕೀಟನಾಶಕವನ್ನು ಸಿಂಪಡಿಸಬೇಕು.
ಸೂಚನೆ: 15 ದಿನಗಳವರೆಗೆ ಎಲೆಗಳನ್ನು ಹುಳುಗಳಿಗೆ ಉಪಯೋಗಿಸಬಾರದು.ತುಕ್ರ ಮ್ಯಾಕೊನೆಲ್ಲಿಕಾಕಸ್ ಹಿರ್‍ಸೂಟಸ್ಮ್ಯಾಕೊನೆಲ್ಲಿಕಾಕಸ್ ಹಿರ್‍ಸೂಟಸ್ ಎಂಬ ಬೂಸ್ಟ್ ತಿಗಣೆಯು ಹಿಪ್ಪುನೇರಳೆ ಗಿಡವನ್ನು ಆಕ್ರಮಣ ಮಾಡುವುದರಿಂದ 'ತುಕ್ರ' ಉಂಟಾಗುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾವಳಿ ಹೆಚ್ಚಿದ್ದರೂ, ವರ್ಷವಿಡೀ ಕಂಡುಬರುತ್ತದೆ. ಬಿಳಿ ಹತ್ತಿಯಂತಹ ಈ ತಿಗಣೆಗಳು ಸಸ್ಯದ ತುದಿಭಾಗಗಳಲ್ಲಿ ಸೇರಿ ರಸವನ್ನು ಹೀರುತ್ತವೆ. ಇದರಿಂದ ಸಸ್ಯದ ಕುಡಿಭಾಗದ ಕಾಂಡ, ದಪ್ಪ ಇಲ್ಲವೆ ಚಪ್ಪಟೆಯಾಗಿ, ಎಲೆಗಳು ಸುಕ್ಕುಗಟ್ಟಿ ದಟ್ಟಹಸಿರು ಬಣ್ಣವನ್ನು ಹೊಂದುತ್ತವೆ. ಇದರಿಂದ ಸೊಪ್ಪಿನ ಇಳುವರಿ ಕಡಿಮೆಯಾಗುತ್ತದೆ.ಹೆಣ್ಣು ಕೀಟವು ಸುಮಾರು 350-500 ಕಿತ್ತಳೆ ಬಣ್ಣದ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯೊಡೆದು ಹೊರಬಂದ ಮರಿಗಳು ತೆವಳುತ್ತಾ ಹರಿದಾಡಿ ಎಲೆಗಳ ರಸ ಹೀರುತ್ತವೆ.ಗಂಡು ಮತ್ತು ಹೆಣ್ಣು ಕ್ರಮವಾಗಿ 4 ಮತ್ತು 3 ಬಾರಿ ಪೊರೆ ಕಳಚಿ ಪ್ರೌಢಾವಸ್ಥೆ ತಲುಪುತ್ತವೆ. ಜೀವನಚಕ್ರ ಸುಮಾರು ಒಂದು ತಿಂಗಳಲ್ಲಿ ಮುಗಿಯುತ್ತದೆ.ತುಕ್ರದ ಹಾವಳಿಗೆ ತುತ್ತಾದ ರೆಂಬೆಗಳನ್ನು ಕತ್ತರಿಸಿ ಸುಡಬೇಕು ಅಥವಾ ಶೇ.0.5 ರ ಸಾಬೂನು ದ್ರಾವಣದಲ್ಲಿ 3-4 ನಿಮಿಷ ಅದ್ದಿ ಬೂಸ್ಟ್ ತಿಗಣೆಯನ್ನು ನಾಶಪಡಿಸಬೇಕು. ಶೇ.0.15 ರ ಡಿಡಿವಿಪಿ (ಪ್ರತಿ ಲೀಟರ್ ನೀರಿಗೆ 1.5 ಮಿ.ಲೀ. ಡಿಡಿವಿಪಿ ಸೇರಿಸಬೇಕು) ಕೀಟನಾಶಕವನ್ನು ಶೇ.0.5 ರ ಸಾಬೂನು ದ್ರಾವಣದಲ್ಲಿ ತಯಾರಿಸಿ 10 ದಿನಗಳ ಅಂತರದಲ್ಲಿ 2 ಬಾರಿ ರೋಗಪೀಡಿತ ಸಸ್ಯಗಳ ತುದಿ ಭಾಗಗಳ ಮೇಲೆ ಚೆನ್ನಾಗಿ ಬೀಳುವಂತೆ ಸಿಂಪಡಿಸಬೇಕು. ಜೈವಿಕ ಕೀಟ ನಿಯಂತ್ರಣಕ್ಕೆ ಶೇ.4ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು.
ಸೂಚನೆ: ಡಿಡಿವಿಪಿ ಉಪಯೋಗಿಸಿದ 15 ದಿನಗಳವರೆಗೆ ಎಲೆಗಳನ್ನು ಹುಳು ಸಾಕಣೆಗೆ ಉಪಯೋಗಿಸಬಾರದು.ಎಲೆ ಸುರಳಿ ಕೀಟ ಡೈಯಫೇನಿಯ ಪಲ್ವೆರುಲೆಂಟಾಲಿಸ್ಈ ಕೀಟಗಳ ಹಾವಳಿಯು ಹಿಪ್ಪುನೇರಳೆ ತೋಟಗಳಲ್ಲಿ 1995ನೇ ಸಾಲಿನಿಂದೀಚೆಗೆ ಹೆಚ್ಚಾಗಿರುವುದು ಕಂಡುಬಂದಿದೆ. ಈ ಕೀಟವು ಜೂನ್ ತಿಂಗಳಿನಿಂದ ಏಪ್ರಿಲ್‍ವರೆಗೆ ಕಂಡುಬಂದರೂ ಜುಲೈ ತಿಂಗಳಿನಿಂದ ನವೆಂಬರ್‍ವರೆಗೆ ಇದರ ಹಾವಳಿ ಅತಿ ಹೆಚ್ಚು. ಸುರುಳಿಕೀಟದ ಸಣ್ಣಮರಿಗಳು ಗಿಡದ ಕುಡಿಭಾಗ ಇಲ್ಲವೆ ಎಳೆಯ ಎಲೆಗಳ ಅಂಚಿನಲ್ಲಿ ಬಿಳಿಬಣ್ಣದ ಸೂಕ್ಷ್ಮದಾರದಿಂದ ಹೆಣೆದ ಚೀಲದ ಒಳಭಾಗದಲ್ಲಿ ಸೇರಿಕೊಂಡು ಎಲೆಯ ಹಸಿರುಭಾಗವನ್ನು ಕೆರೆದು ತಿನ್ನುತ್ತವೆ. ಎಲೆಯು ಸುರುಳಿ ಆಕಾರ ಹೊಂದುವುದರಿಂದ ಇದನ್ನು ಎಲೆ ಸುರುಳಿಕೀಟ ಎನ್ನುತ್ತಾರೆ. ಈ ಕೀಟಕ್ಕೆ ಗಂಟುರೋಗ ಮತ್ತು ಸುಣ್ಣಕಟ್ಟು ರೋಗಗಳು ಬರುವ ಸಾಧ್ಯತೆಗಳಿದ್ದು ಕಲುಷಿತಗೊಂಡ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ನೀಡಿದಲ್ಲಿ, ಈ ರೋಗಗಳು ಹರಡುವ ಸಾಧ್ಯತೆ ಇದೆ. ಹೆಣ್ಣು ಚಿಟ್ಟೆಯು ಸುಮಾರು 100 ಮೊಟ್ಟೆಗಳನ್ನಿಡುವ ಸಾಮಥ್ರ್ಯ ಹೊಂದಿರುತ್ತವೆ. ಸಸ್ಯದ ಕುಡಿಭಾಗದಲ್ಲಿ 1-2 ಮೊಟ್ಟೆಗಳನ್ನಿಡುತ್ತದೆ. 3-4 ದಿನಗಳಲ್ಲಿ ಮರಿಗಳು ಹೊರಬಂದು 10-15 ದಿನಗಳವರೆಗೆ ಸೊಪ್ಪನ್ನು ತಿಂದು ಬೆಳೆಯುತ್ತವೆ. ಕೋಶಾವಸ್ಥೆಯ ಅವಧಿ 8-10 ದಿನಗಳಾಗಿದ್ದು ಈ ಕೀಟಗಳು ತಮ್ಮ ಜೀವನಚಕ್ರವನ್ನು 21-29 ದಿನಗಳಲ್ಲಿ ಪೂರ್ಣಗೊಳಿಸುತ್ತವೆ.ಬಾಧೆಗೊಳಪಟ್ಟ ಸಸ್ಯದ ಕುಡಿಭಾಗಗಳನ್ನು ಕಿತ್ತು ಶೇ.0.5 ರ ಸಾಬೂನು ದ್ರಾವಣದಲ್ಲಿ ಅದ್ದಿ ಮರಿಗಳನ್ನು ನಾಶಪಡಿಸಬೇಕು. ಇಲ್ಲವೇ ಸಸ್ಯದ ಕುಡಿಭಾಗವು ಪೂರ್ಣ ಒದ್ದೆಯಾಗುವಂತೆ ಶೇ.0.015ರ ಡಿಡಿವಿಪಿ ದ್ರಾವಣ (1.5ಮಿ.ಲೀ.ಡಿಡಿವಿಪಿ ಪ್ರತಿ ಲೀಟರ್ ನೀರಿಗೆ ಸೇರಿಸಿ) ಸಿಂಪಡಿಸಬೇಕು. ಹಾವಳಿ ಹೆಚ್ಚಾಗಿದ್ದಲ್ಲಿ 10 ದಿನಗಳ ನಂತರ ಮತ್ತೊಮ್ಮೆ ಕೀಟನಾಶಕ ಸಿಂಪಡಿಸಬೇಕು.

ಮೂಲ : ಕರ್ನಾಟಕ  ರೇಷ್ಮೆ  ಇಲಾಖೆ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate