ತೋಟಗಾರಿಕೆಯಲ್ಲಿ ಹಲವಾರು ವಿಧಗಳಿವೆ. ಆದರೆ ಇಂದಿನ ದಿನಗಳಲ್ಲಿ ಹಿತ್ತಲ ತೋಟಗಾರಿಕೆ ಟ್ರೆಂಡ್ ಆಗುತ್ತಿದೆ. ಹೆಚ್ಚಿನ ಗೃಹಿಣಿಯರು ಇಂದಿನ ದಿನಗಳಲ್ಲಿ ಸಮಯ ಕಳೆಯಲು ಮತ್ತು ಒಳ್ಳೆಯ ಫಲಿತಾಂಶಕ್ಕಾಗಿ ತೋಟಗಾರಿಕೆಯಲ್ಲಿ ತೊಡಗುತ್ತಾರೆ. ಹಿತ್ತಲ ತೋಟಗಾರಿಕೆ ಎಂದರೆ ವಿವಿಧ ಬಗೆಯ ಹಣ್ಣು, ತರಕಾರಿ ಮತ್ತು ಇತರ ಮೆಣಸಿನ ಗಿಡಗಳನ್ನು ಮನೆಯ ಹಿತ್ತಲಿನಲ್ಲಿ ಬೆಳೆಸುವುದು. ಹೆಸರಿನಲ್ಲಿ ಏನಿದೆ ಎನ್ನವುದು ಸಹಜ. ಈ ವಿಷಯದಲ್ಲಿ ಕೂಡ ಹಾಗೆ. ಹಿತ್ತಲ ತೋಟಗಾರಿಕೆ ಎಂದರೆ ಅದು ಹಿತ್ತಲಿನಲ್ಲೇ ಆಗಬೇಕೆಂದಿಲ್ಲ. ಇದು ಅಡುಗೆಮನೆಯ ಹಿತ್ತಲಿನಲ್ಲಿ ಅಥವಾ ಅಡುಗೆ ಮನೆಯ ಗೋಡೆಯ ಪಕ್ಕದಲ್ಲೇ ಆಗಿರಬಹುದು.
ಹಿತ್ತಲ ತೋಟಗಾರಿಕೆಗೆ ಕೆಲವೊಂದು ಟಿಪ್ಸ್ ಗಳಿವೆ ಮತ್ತು ಇದರ ಮೂಲಕ ತರಕಾರಿಗಳನ್ನು ಬೆಳೆಸಬಹುದಾಗಿದೆ. ನಿಮ್ಮ ಹಿತ್ತಲಿನಲ್ಲಿ ಟೊಮೆಟೊ, ಮೆಣಸು, ಈರುಳ್ಳಿ, ಹುಣಸೆ, ತುಳಸಿ, ಕರಿಬೇವು, ನಿಂಬೆ ಇತ್ಯಾದಿಗಳನ್ನು ಬೆಳೆಸಬಹುದು. ತರಕಾರಿ ತೋಟದಲ್ಲಿ ನೀವು ಹಲವಾರು ರೀತಿಯ ಸಸ್ಯಗಳನ್ನು ಬೆಳೆಸಬಹುದು. ಇದು ಮಣ್ಣಿನ ಗುಣ, ಹವಾಮಾನ ಮತ್ತು ನಿಮ್ಮ ಬದ್ಧತೆ ಅವಲಂಬಿಸಿರುತ್ತದೆ. ಹಿತ್ತಲ ತೋಟಗಾರಿಕೆ ಬಗ್ಗೆ ಇಲ್ಲಿರುವ ಕೆಲವೊಂದು ಟಿಪ್ಸ್ ಗಳು ಆರಂಭದಿಂದ ನಿಮಗೆ ನೆರವಾಗಲಿದೆ. ಇದು ನಿಮ್ಮ ತೋಟ ತಯಾರಿಸಲು, ಸೂಕ್ತ ತರಕಾರಿಗಳು ಅಥವಾ ಹಣ್ಣುಗಳನ್ನು ಬೆಳೆಸಲು ಮತ್ತು ಅದನ್ನು ನಿರ್ವಹಿಸಲು ನೆರವಾಗಲಿದೆ.
ನಿರ್ದಿಷ್ಟ ಪ್ರಮಾಣದಲ್ಲಿ ಸೂರ್ಯನ ಬೆಳಕು ಬೀಳುವಂತಹ ಹಿತ್ತಲನ್ನು ಆಯ್ಕೆ ಮಾಡಿಕೊಳ್ಳಿ. ಸೂರ್ಯನ ಬೆಳಕು ಸಸ್ಯಗಳಿಗೆ ಶಕ್ತಿಯ ಮೂಲ ಮತ್ತು ಇದು ಗಿಡಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಿನದಲ್ಲಿ ಕನಿಷ್ಠ 5-6 ಗಂಟೆಗಳ ಕಾಲ ಸಸ್ಯಗಳಿಗೆ ಸೂರ್ಯನ ಬೆಳಕು ಸಿಗಬೇಕು. ತರಕಾರಿ ತೋಟ ಮಾಡಲು ನೆರಳಿನ ಪ್ರದೇಶ ಆಯ್ಕೆ ಮಾಡಬೇಡಿ.
ತರಕಾರಿ ತೋಟ ಮಾಡಲು ಆಯ್ಕೆ ಮಾಡುವಂತಹ ಮಣ್ಣಿನಲ್ಲಿ ಸರಿಯಾದ ಪ್ರಮಾಣದ ನೀರಿನಾಂಶವಿರಲಿ. ಇದು ನೈಸರ್ಗಿಕವಾಗಿ ಒಣಗಲಿ. ಅತಿಯಾದ ನೀರು ಮತ್ತು ಕಡಿಮೆ ನೀರು ಸಸ್ಯಗಳಿಗೆ ಒಳ್ಳೆಯದಲ್ಲ.
ತರಕಾರಿ ತೋಟ ಮಾಡಲು ಬಯಸುವ ಜಾಗದ ಮಣ್ಣನ್ನು ನೀವು ಹದಗೊಳಿಸಬೇಕು. ಅಲ್ಲಿರುವ ಕಲ್ಲುಗಳು ಮತ್ತು ಬಿರುಕು ಬಿಟ್ಟಿರುವ ಜಾಗವನ್ನು ಸರಿಪಡಿಸಬೇಕು. ಗೊಬ್ಬರ ಹಾಕಿ ತೋಟಗಾರಿಕೆಗೆ ಮಣ್ಣನ್ನು ಹದಗೊಳಿಸಿ.
ತೋಟಗಾರಿಕೆ ಮಾಡುವ ಮೊದಲು ನೀವು ಯಾವ ರೀತಿಯ ತರಕಾರಿ ಮತ್ತು ಹಣ್ಣುಗಳನ್ನು ಆಯ್ಕೆ ಮಾಡುತ್ತೀರಿ ಎಂದು ಮೊದಲು ನಿರ್ಧರಿಸಿ. ಮಣ್ಣಿನ ಗುಣ, ಹವಾಮಾನ ಮತ್ತು ಸಸ್ಯಕ್ಕೆ ಬೇಕಾಗಿರುವ ದೈನಂದಿನ ಅಗತ್ಯತೆಗಳನ್ನು ಗಮನಿಸಿ ಸಸ್ಯಗಳನ್ನು ಆಯ್ಕೆ ಮಾಡಿ.
ನಿಮ್ಮ ತರಕಾರಿ ತೋಟಗಾರಿಕೆಗೆ ಸೂಕ್ತ ವಿನ್ಯಾಸ ಮತ್ತು ಬೇಲಿ ಮಾಡಿ. ಯಾವ ಬೆಳೆ ಅಥವಾ ಸಸ್ಯಗಳನ್ನು ಆಯ್ಕೆ ಮಾಡಬೇಕು ಮತ್ತು ಇದನ್ನು ಎಲ್ಲಿ ಬಳಸಬೇಕು ಎಂಬ ಬಗ್ಗೆ ನಿಮಗೆ ಖಚಿತವಾಗಿರಲಿ. ತೋಟಕ್ಕೆ ಒಳ್ಳೆಯ ಬೇಲಿ ಹಾಕಿದರೆ ಆಗ ತೋಟ ತುಂಬಾ ಚೆನ್ನಾಗಿ ಕಾಣುತ್ತದೆ.
ಆರಂಭದ ಹಂತದಲ್ಲಿ ನಿಮ್ಮ ಗಿಡಗಳಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಪ್ರತಿಯೊಂದು ಗಿಡಕ್ಕೂ ಭಿನ್ನ ರೀತಿಯ ಆರೈಕೆ ಬೇಕಾಗುತ್ತದೆ. ನೀವು ಪ್ರತೀ ಗಿಡದ ಅಗತ್ಯತೆಗೆ ತಕ್ಕಂತೆ ಅದನ್ನು ಆರೈಕೆ ಮಾಡಬೇಕಾಗುತ್ತದೆ.
ಗಿಡಗಳಿಗೆ ನಿಯಮಿತವಾಗಿ ನೀರು ಸಿಂಪಡಿಸುವುದು ತುಂಬಾ ಮುಖ್ಯ. ಒಂದು ದಿನ ನೀರು ಕುಡಿಯದೆ ಉಳಿಯಲು ನಿಮಗೆ ಸಾಧ್ಯವೇ? ನಿಯಮಿತವಾಗಿ ನೀರು ಹಾಕದೆ ಇದ್ದರೆ ಗಿಡಗಳಿಗೂ ಇದೇ ಪರಿಸ್ಥಿತಿ ಉಂಟಾಗುತ್ತದೆ. ಗಿಡ ತುಂಬಾ ಸಣ್ಣದಿರುವಾಗ ಅದಕ್ಕೆ ನೀರು ಅಗತ್ಯವಾಗಿ ಬೇಕಾಗುತ್ತದೆ. ಯಾಕೆಂದರೆ ಅದರ ಬೇರುಗಳು ಆಳಕ್ಕೆ ಹೋಗಿ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವುದಿಲ್ಲ.
ಆವರ್ತನ ಬೇಸಾಯದಲ್ಲಿ ಬೆಳೆಗಳ ಆವರ್ತನವನ್ನು ಅನುಸರಿಸಿದಂತೆ ಪ್ರತೀ ಋತುವಿನಲ್ಲಿ ನೀವು ತರಕಾರಿ ಬೆಳೆಯನ್ನು ಬದಲಾಯಿಸಿ.ಇದರಿಂದ ಮಣ್ಣು ಫಲವತ್ತಾಗಿ ಇರುತ್ತದೆ. ನಿಮಗೆ ತರಕಾರಿ ಮತ್ತು ಹಣ್ಣಿನ ವೈವಿಧ್ಯತೆ ಸಿಗುತ್ತದೆ.
ತೋಟಗಾರಿಕೆ ನಿರ್ವಹಣೆ ಒಮ್ಮೆ ನೀವು ಸಸಿಗಳನ್ನು ನೆಟ್ಟ ಬಳಿಕ ಅದನ್ನು ಸರಿಯಾದ ರೀತಿ ನಿರ್ವಹಿಸಿ. ಪ್ರತೀ ಬೆಳೆಗೂ ಅದನ್ನು ಬೆಳೆಯುವ ಸಮಯವಿರುತ್ತದೆ. ಗಿಡಗಳನ್ನು ಬೆಳೆಸಿದಾಗ ಅವುಗಳಿಗೆ ಹಾನಿಯಾಗದಂತೆ ನಿರ್ವಹಣೆ ಮಾಡಿ. ಇದು ಹಿತ್ತಲಿನ ತೋಟಗಾರಿಕೆಗೆ ಒಳ್ಳೆಯ ಟಿಪ್ಸ್.
ನಿರಂತರ ಪ್ರಕ್ರಿಯೆ ಹಿತ್ತಲ ತೋಟಗಾರಿಕೆ ಕೇವಲ ಒಂದು ವಾರದ ಪ್ರಕ್ರಿಯೆಯಲ್ಲ. ಒಮ್ಮೆ ನೀವು ತೋಟಗಾರಿಕೆ ಆರಂಭಿಸಿದ ಬಳಿಕ ಅದರಲ್ಲಿರುವ ಸಸ್ಯಗಳನ್ನು ಮಕ್ಕಳಂತೆ ಆರೈಕೆ ಮಾಡಬೇಕು.
ಮೂಲ : ಬೋಲ್ಡ್ ಸ್ಕೈ
ಕೊನೆಯ ಮಾರ್ಪಾಟು : 7/28/2020
ಎನ್.ಡಿ.ಹೆಗಡೆ ಆನಂದಪುರಂ ರೈತ ಗಜಾನನ ಗೌಡ ಅವರ ಕೃಷಿಯಲ್ಲಿ ...
ವ್ಯವಸಾಯಕ್ಕೆ ಯೋಗ್ಯವಲ್ಲದ ಬರಡು ಜಮೀನುಗಳು, ಹಳ್ಳ ಸಾಲುಗಳು...
‘ಶ್ರೀ’ ಪಧ್ದತಿಯಲ್ಲಿ ಭತ್ತವನ್ನು ಆರೋಗ್ಯವಾಗಿ ಬೆಳೆಯುವ ಒಂ...
ತೋಟಗಾರಿಕೆಯನ್ನು ಹೆಚ್ಚಿನ ಜನರು ತುಂಬಾ ಇಷ್ಟಪಡುತ್ತಾರೆ. ಮ...