ರಾಷ್ಟ್ರೀಯ ವ್ಯವಸಾಯ ವಿಮಾ ಯೋಜನೆ (ಎನ್ ಎ ಇ ಎಸ್)/ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ( ಆರ್ ಕೆ ಬಿ ವೈ)
- ವ್ಯಾಪ್ತಿಯ ಬೆಳೆಗಳು :
ಕೆಳಗಿನ ಸ್ಥೂಲ ಗುಂಪಿನಲ್ಲಿನ ಬೆಳೆಗಳನ್ನು ಅವುಗಳ i) ಈ ಹಿಂದಿನ ಬೆಳೆ ಕಟಾವಿನ ಪ್ರಯೋಗದ (ಸಿಸಿಇ) ಉತ್ಪನ್ನದ ಸಾಕಷ್ಟು ವರ್ಷದ ಅಂಕಿ ಅಂಶಗಳು ಮತ್ತು ii) ಅಗತ್ಯವಿದ್ದಷ್ಟು ಸಂಖ್ಯೆಯ ಸಿಸಿ ಇ ಗಳನ್ನು ಮಾಡಿ ಸದರಿ ವರ್ಷದ ಉತ್ಪನ್ನದ ಅಂದಾಜು ಮಾಡಲಾಗುವುದು.:
ಆಹಾರ ಬೆಳೆಗಳು (ಧಾನ್ಯಗಳು, ಕಿರುಧಾನ್ಯಗಳು & ಬೇಳೆಕಾಳುಗಳು)
ಎಣ್ಣೆ ಬೀಜಗಳು
ಕಬ್ಬು, ಹತ್ತಿ & ಆಲುಗಡ್ಡೆ ( ವಾರ್ಷಿಕ ವಾಣಿಜ್ಯ /ವಾರ್ಷಿಕ ತೋಟಗಾರಿಕೆ ಬೆಳೆಗಳು)
ಇತರ ವಾರ್ಷಿಕ ವಾಣಿಜ್ಯ /ವಾರ್ಷಿಕ ತೋಟಗಾರಿಕೆ ಬೆಳೆಗಳು, ಅವುಗಳ ಹಿಂದಿನ ಮೂರು ವರ್ಷಗಳ ಉತ್ಪನ್ನದ ದತ್ತಾಂಶವು ಲಭ್ಯವಿದ್ದರೆ ಅವುಗಳಿಗೆ ವಿಮೆ ನೀಡಲಾಗುವುದು. ಆದರೂ ಮುಂದಿನ ವರ್ಷ ವಿಮೆ ನೀಡ ಬೇಕೆಂದಿದ್ದರೆ ಸಧ್ಯದ ವರ್ಷದ ಕೊನೆಯೊಳಗೆ ಅದನ್ನು ಘೋಷಿಸಬೇಕು.
- ವ್ಯಾಪ್ತಿಗೆ ಒಳ ಪಡುವವು :
- ಈ ಯೋಜನೆಯು ಎಲ್ಲರಾಜ್ಯಗಳಿಗೂ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅವು ಬಯಸಿದರೆ ವಿಸ್ತರಿಸಲಾಗುವುದು.ಅವು ವಿಮಾವ್ಯಾಪ್ತಿಗೆ ಒಳಪಡುವ ಆ ವರ್ಷದ ಎಲ್ಲ ಬೆಳೆಗಳನ್ನು ಗುರುತಿಸಬೇಕಾಗುವುದು.
- ಹೊರ ಬರುವ ಷರತ್ತು : ಒಂದು ಸಲ ಅಯ್ಕೆ ಮಾಡಿದ ಮೇಲೆ ರಾಜ್ಯ / ಕೇಂದ್ರ ಆಡಳಿತ ಪ್ರದೇಶಗಳು ಕನಿಷ್ಟ ಮೂರು ವರ್ಷದವರೆಗೆ ಯೋಜನೆಯಲ್ಲಿ ಇರಲೇ ಬೇಕು.
- ವ್ಯಾಪ್ತಿಗೆ ಬರುವ ರೈತರು :
ಗುತ್ತಿಗೆ, ಬಾಡಿಗೆ ರೈತರು ಸೇರಿದಂತೆ ಸೂಚಿಸಿದ ಬೆಳೆ ಹಾಕಿರುವ ಎಲ್ಲ ರೈತರೂ ವಿಮಾ ವ್ಯಾಪ್ತಿಯೊಳಗೆ ಸೇರಲು ಅರ್ಹ ರಾಗಿರುತ್ತಾರೆ . ಈ ಯೋಜನೆಯು ಕೆಳ ಕಂಡ ಗುಂಪಿನ ರೈತರನ್ನು ಒಳಗೊಂಡಿರುವುದು :
ಕಡ್ಡಾಯ ಆಧಾರದ ಮೇಲೆ : ಪ್ರಕಟಿಸಿದ ಬೆಳೆ ಹಾಕಿರುವ ಮತ್ತು ಹಣಕಾಸು ಸಂಸ್ಥೆಗಳಿಂದ ಕೃಷಿ :ಚಟುವಟುಕೆಗಾಗಿ ಸಾಲ ಪಡೆದಿರುವ ಎಲ್ಲ ರೈತರು , ಅಂದರೆ ಸಾಲಗಾರ ರೈತರು
ಸ್ವಯಂ ಇಚ್ಛೆಯ ಆಧಾರದ ಮೇರೆಗೆ: ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡ , ಇನ್ನು ಇತರೆ ಪ್ರಕಟಿತ ಬೆಳೆ ಹಾಕಿರುವ ರೈತರು .
- ನಷ್ಟ ಪರಿಹಾರ &ವಿನಾಯತಿ
- ಸಮಗ್ರವಾದ ನಷ್ಟ ಪರಿಹಾರ ವಿಮೆಯನ್ನು ತಡೆಯಲಾಗದ ಅಪಾಯಗಳ ವಿರುದ್ಧ ಒದಗಿಸಲಾಗುವುದು. ಅವು ಕೆಳಗಿನಂತೆ ಇವೆ.:
- ನೈಸರ್ಗಿಕ ಬೆಂಕಿ ಮತ್ತು ಸಿಡಿಲು
- ಬಿರುಗಾಳಿ, ಆಲಿಕಲ್ಲುಗಳ ಮಳೆ, ಸೈಕ್ಲೋನು, ಸುಂಟರಗಾಳಿ, ಚಂಡ ಮಾರುತ , ತೂಫಾನು, ಸುಳಿಗಾಳಿ ಇತ್ಯಾದಿ
- ಪ್ರವಾಹ, ಮುಳುಗಡೆ ಮತ್ತು ಭೂಕುಸಿತ
- ಬರ , ಒಣ ಹವೆ
- ಕೀಟಗಳು/ ರೋಗಗಳು ಇತ್ಯಾದಿ.
- ಯುದ್ಧ & ಪರಮಾಣು ಅಪಾಯ, ದುರುದ್ದೇಶಪೂರಿತ ಹಾನಿ & ಇತರ ತಡೆಯಬಹುದಾದ ಅಪಾಯಗಳು ಇದರಲ್ಲಿ ಸೇರುವುದಿಲ್ಲ
- 5. ವಿಮಾ ಮೊತ್ತ / ವ್ಯಾಪ್ತಿಯ ಮಿತಿ
- ವಿಮಾ ಮೊತ್ತ ವನ್ನು ವಿಮೆ ಮಾಡಿಸಿದ ರೈತರ ಆಯ್ಕೆಯ ಮೇರಗೆ ವಿಮಾಗೆ ಒಳಪಡುವ ಬೆಳೆಯಿಂದ ಬರಬಹುದಾದ ಗರಿಷ್ಠ ಉತ್ಪನ್ನ ಕ್ಕೆ ವಿಸ್ತರಿಸಬಹುದು. ಹಾಗಿದ್ದರೂ ರೈತರು ತಮ್ಮ ಬೆಳೆಯ ಸರಾಸರಿ ಉತ್ಪನ್ನದ 150% ರಷ್ಟು ಮೊತ್ತಕ್ಕೆ ಪ್ರಕಟಿತ ಪ್ರದೇಶದಲ್ಲಿ ವಾಣಿಜ್ಯ ದರದಲ್ಲಿ ಪ್ರೀಮಿಯಮ್ ಕೊಟ್ಟು ವಿಮೆ ಮಾಡಿಸಬಹುದು..
- ಸಾಲಗಾರ ರೈತರ ವಿಷಯದಲ್ಲಿ ವಿಮಾ ಮೊತ್ತವು ಕನಿಷ್ಟ ಅವನು ಪಡೆದ ಸಾಲದಷ್ಟಾದರೂ ಇರಬೇಕು.
- ಸಾಲ ಪಡೆವ ರೈತನು ಅವನು ಪಡೆಯುವ ಸಾಲದ ಹೊರತಾಗಿ ವಿಮೆಯ ವೆಚ್ಚವನ್ನು ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ
- ಕೃಷಿ ಸಾಲ ಹಂಚಿಕೆಯ ಪ್ರಕ್ರಿಯೆಯಲ್ಲಿ ಆರ್ ಬಿ ಐ/ ನಬಾರ್ಡ ಗಳ ಮಾರ್ಗದರ್ಶಿ ಸೂತ್ರಗಳುಅಂತಿಮ.
- ಪ್ರಿಮಿಯಂ ದರ
ಕ್ರ.ಸಂ.
|
ಹಂಗಾಮು
|
ಬೆಳೆ
|
ಪ್ರಿಮಿಯಂ ದರ
|
1
|
ಮುಂಗಾರು
|
ಸೆಜ್ಜೆ & ಎಣ್ಣೆ ಕಾಳು
|
ಯಾಕ್ಚುರಿಯಲ್ (ತಜ್ಞರು ನಿರ್ಧರಿಸಿದ ಮೌಲ್ಯ) ದರದ ಅಥವ ವಿಮೆಗೆ ಒಳಪಟ್ಟ ದರ (ಸಮ್ ಇನ್ಸುರ್ಡ್) 3.5% ಯಾವುದು ಕಡಿಮೆಯೋ ಅದು
|
|
|
ಇತರ ಬೆಳೆಗಳು (ಧಾನ್ಯಗಳು ಇತರ ಮಿಲೆಟ್ಸ & ಬೇಳೆಗಳು)
|
ಯಾಕ್ಚುರಿಯಲ್ ದರದ ಅಥವ ಸಮ್ ಇನ್ಸುರ್ಡ್ ನ 2.5% ಯಾವುದು ಕಡಿಮೆಯೋ ಅದು
|
2
|
ಹಿಂಗಾರು
|
ಗೋಧಿ
|
ಯಾಕ್ಚುರಿಯಲ್ ದರದ ಅಥವ ಸಮ್ ಇನ್ಸುರ್ಡ್ ನ 1.5% ಯಾವುದು ಕಡಿಮೆಯೋ ಅದು
|
|
|
ಇತರ ಬೆಳೆಗಳು (ಇತರ ಧಾನ್ಯಗಳು, ಮಿಲಟ್ಸ, ಬೇಳೆ ಮತ್ತು ಎಣ್ಣೆ ಬೀಜಗಳು)
|
ಯಾಕ್ಚುರಿಯಲ್ ದರದ ಅಥವ ಸಮ್ ಇನ್ಸುರ್ಡ್ ನ 2.0% ಯಾವುದು ಕಡಿಮೆಯೋ ಅದು
|
3
|
ಮುಂಗಾರು &ಹಿಂಗಾರು.
|
ವಾಷಿಕ ವಾಣಿಜ್ಯ / ವಾರ್ಷಿಕ ತೋಟಗಾರಿಕೆ ಬೆಳೆಗಳು.
|
ಯಾಕ್ಚುರಿಯಲ್ ದರಗಳು
|
- ಧಾನ್ಯಗಳು, ಮಿಲೆಟ ಗಳು &ಎಣ್ಣೆ ಕಾಳುಗಳು ಯಾಕ್ಚುರಿಯಲ್ ಆಡಳಿತಕ್ರಮಕ್ಕೆ ಸಾಗಲು ಐದುರ್ಷದ ಅವಧಿಯ ಯಿದೆ. ಯಾಕ್ಚುರಿಯಲ್ ದರಗಳು ಜಿಲ್ಲೆ/ ಪ್ರದೇಶ/ ರಾಜ್ಯ ಮಟ್ಟದಲ್ಲಿ ಅನ್ವಯಮಾಡುವುದು ರಾಜ್ಯ ಸರ್ಕಾರ / ಕೇಂ. ಆ. ಪ್ರ. ಗಳ ಆಯ್ಕೆಗೆ ಬಿಡಲಾಗಿದೆ
- ಪ್ರಿಮಿಯಂ ಸೋಡಿ
- ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪ್ರಿಮಿಯಂ ನಲ್ಲಿ 50% ಸೋಡಿ ನೀಡಲಾಗುವುದು. ಅದನ್ನು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಮನಾಗಿ ಹಂಚಿಕೊಳ್ಳುವವು. ಪ್ರಿಮಿಯಂ ಸೋಡಿಯನ್ನು ಸೂರ್ಯಆಸ್ತಮಾನದ ರೀತಿಯಲ್ಲಿ ಮೂರರಿಂದ ಐದುವರ್ಷದ ಅವಧಿಯಲ್ಲಿ ನಿಲ್ಲಿಸಲಾಗುವುದು. ಯೋಜನೆ ಅನುಷ್ಠಾನದ ಮೊದಲವರ್ಷದ ರೈತರ ಸ್ಪಂದನೆ ಮತ್ತು ಆರ್ಥಿಕ ಫಲಿತಾಂಶಗಳನ್ನು ಪರಾಮರ್ಶಿಸಿ ಕ್ರಮ ತೆಗೆದು ಕೊಳ್ಳಲಾಗುವುದು.
- ಸಣ್ಣ ರೈತ ಮತ್ತು ಅತಿಸಣ್ಣ ರೈತರ ವ್ಯಾಖ್ಯಾನ ಈ ಕೆಳಗಿನಂತಿರುವುದು:
- ಸಣ್ಣ ರೈತ : ರಾಜ್ಯದ ಭೂಮಿತಿ ಶಾಸನದಲ್ಲಿ ತಿಳಿಸಿದಂತೆ 2 ಹೆಕ್ಟೇರ್ (5ಎಕರೆ) ಅಥವ ಕಡಿಮೆ ಭೂ ಹಿಡುವಳಿ ಹೊಂದಿರುವ ರೈತ
- ಅತಿಸಣ್ಣ ರೈತ :ಭೂ ಹಿಡುವಳಿಯನ್ನು 1 ಹೆಕ್ಟೇರ್ ಅಥವ ಕಡಿಮೆ (2.5 ಎಕರೆ ) ಹೊಂದಿರುವ ರೈತ.
- ಹಾನಿ ಗಂಡಾಂತರ ದ ಹಂಚಿಕೆ
- ಹಾನಿಯನ್ನು ಅನುಷ್ಠಾನಗೊಳಿಸುವ ಏಜೆನ್ಸಿ(ಐ ಎ ) ಮತ್ತು ಸರ್ಕಾರ ಕೆಳಗಿನ ಪ್ರಮಾಣದಲ್ಲಿ ಹಂಚಿಕೊಳ್ಳುತ್ತವೆ :
- ಆಹಾರ ಧಾನ್ಯಗಳು & ಎಣ್ಣೆ ಕಾಳುಗಳು: ಐದು ವರ್ಷದಲ್ಲಿ ಯಾಕ್ಚುರಿಯಲ್ ಆಡಳಿತಕ್ರಮಕ್ಕೆ ಮಾರ್ಪಾಡಾಗುವವರೆಗೆ 100% ಪ್ರೀಮಿಯಮ್ ಗಿ0ತ ಹೆಚ್ಚಾಗಿರುವ ಕ್ಳೆಮುಗಳ ಹಣವನ್ನು ಸರಕಾರ ಭರಿಸುವುದು. ತದನಂತರ, 3 ವರ್ಷಗಳವರೆಗೆ ಎಲ್ಲಾ ಸಮಾನ್ಯ ಕ್ಲೇಮುಗಳನ್ನು, ಅಂದರೆ, ಪ್ರೀಮಿಯಮ್ ಗಿಂತ 150% ವರೆಗಿನವುಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆ (ಐ.ಎ) ಹಾಗೂ ಇದಕ್ಕಿಂತ (150%) ಹೆಚ್ಚಿನ ಮೊತ್ತವನ್ನು ಮೂಲ ನಿಧಿಯಿಂದ ನೀಡಲಾಗುವುದು. 3 ವರ್ಷದ ನಂತರ 200% ವರೆಗಿನ ಕ್ಲೇಮಗಳನ್ನು ಐ.ಎ ಕೊಡಬೆಕು. ಅದಕ್ಕೂ ಹೆಚ್ಚಿನ ಹಣವಾದರೆ ಮೂಲ ನಿಧಿಯಿಂದ ಭರಿಸಬೇಕಾಗುತ್ತದೆ.
- ವಾರ್ಷಿಕ ವಾಣಿಜ್ಯ ಬೆಳೆಗಳು / ವಾರ್ಷಿಕ ತೊಟಗಾರಿಕೆ ಬೆಳೆಗಳು : ಅನುಷ್ಠಾನ ಗೊಳಿಸುವ ಏಜನ್ಸಿಯು ಎಲ್ಲ ಸಾಮಾನ್ಯ ಕ್ಲೇಮುಗಳನ್ನು ಭರಿಸುವುದು i.e. ಪ್ರೀಮಿಯಮ ನ 150% ವರೆಗಿನ ಮೊತ್ತ ವನ್ನು ಮೊದಲ ಮೂರುವರ್ಷದ ವರೆಗೆ ನಂತರ ಪ್ರಿಮಿಯಂನ 200% ಮೊತ್ತವನ್ನು ಮೂಲ ನಿಧಿಯಿಂದ ನೀಡುವುದು. ಆದರೂ ಮೂರು ವರ್ಷದ ನಿಗದಿತ ಅವಧಿಯನ್ನು ಅನುಷ್ಠಾನದ ಮೊದಲ ವರ್ಷದ ಆರ್ಥಿಕ ಫಲಿತಾಂಶ ಪರಿಶೀಲಿಸಿ. ಮತ್ತು ಅಗತ್ಯವೆನಿಸಿದರೆ ಐದು ವರ್ಷಗಳಿಗೆ ವಿಸ್ತರಿಸಲಾಗುವುದು
- ವಿಪತ್ತಿನಿಂದಾಗುವ ನಷ್ಟವನ್ನು ಭರಿಸಲು , ಮೂಲ ನಿಧಿಯನ್ನು ನಿರ್ಮಿ ಸಲಾಗುವುದು. ಇಂತಹ ವಿಪತ್ತು ನಿರ್ವಹಣಾ ನಿಧಿಗೆ ಭಾರತ ಸರ್ಕಾರ ಮತ್ತು ರಾಜ್ಯಸರ್ಕಾರ/ ಕೇ. ಆ. ಪ್ರ. ಗಳು 50:50 ಆಧಾರದಲ್ಲಿ ವಂತಿಗೆ ನೀಡುವವು. ಈ ನಿಧಿಯ ಸ್ವಲ್ಪ ಭಾಗವನ್ನು ಮೂಲನಿಧಿಗೆ ವಂತಿಗೆಯಾಗಿ ಉಪಯೋಗಿಸುವುದು.
- ಕ್ಷೇತ್ರವಾರು ಅನುಸಂಧಾನ ಮತ್ತು ವಿಮೆಯ ಘಟಕ
- ಈ ಯೋಜನೆಯು ಕ್ಷೇತ್ರವಾರು ಅನುಸಂಧಾನದ ಆಧಾರದ ಮೇಲೆ ಕಾರ್ಯ ನಿರ್ವಹಿಸುವುದು.’ i.e., ನಿಗದಿ ಪಡಿಸಿದ ಪ್ರದೇಶದ ಪ್ರಕಟಿತ ಬೆಳೆಗಳಿಗೆ ಬಹು ವ್ಯಾಪ್ತಿಯ ವಿಕೋಪಗಳು ಮತ್ತು ಸ್ಥಳಿಯವಾದ ಆಣೆ ಕಲ್ಲು, ಭೂಕುಸಿತ, ಸುಂಟರ ಗಾಳಿ ಮತ್ತು ನೆರೆ ಹಾವಳಿಗಳ ವಿರುದ್ಧ ವಿಮೆ ಇದೆ. ನಿರೂಪಿತ ಪ್ರದೇಶವು ( ವಿಮೆಯ ಘಟಕ ಪ್ರದೇಶ) ಗ್ರಾಮ ಪಂಚಾಯತಿ , ಮಂಡಳ, ಹೋಬಳಿ, ವೃತ್ತ, ಫಿರ್ಕಾ, ವಲಯ, ತಾಲೂಕು ಇತ್ಯಾದಿ ಆಗಿರಬಹುದು. ಆದರೂ ಭಾಗವಹಿಸುವ ಪ್ರತಿ ರಾಜ್ಯ / ಕೇಂ. ಆ, ಪ್ರ ವು ಮೂಲ ಘಟಕವಾದ ಗ್ರಾಮ ಪಂಚಾಯತಿ ಮಟ್ಟವನ್ನು ಗರಿಷ್ಟ ಮೂರು ವರ್ಷದಲ್ಲಿ ತಲುಪಬೇಕು
- ಸ್ಥಳೀಯ ವಿಕೋಪಕ್ಕೆ ಗುರಿಯಾಗಿರುವ ವೈಯುಕ್ತಿಕ ಮೌಲ್ಯಮಾಪನಗಳಿಗೆ ಸಂಬಂದಿಸಿದಂತೆ ಪ್ರಾರಂಭಿಕ ಹಂತದಲ್ಲಿ, ಸೀಮಿತ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಗೊಳಿಸಿ, ಅಲ್ಲಿನ ಅನುಭವದಿಂದ ವ್ಯಾಪ್ತಿಯನ್ನು ಹೆಚ್ಚಿಸಬಹುದಾಗಿದೆ. ಜಿಲ್ಲಾ ಆಡಳಿತವು ಅನುಷ್ಠಾನ ಏಜನ್ಸಿಗೆ ನಷ್ಟದ ಪ್ರಮಾಣ ಲೆಕ್ಕಹಾಕಲು ಸಹಾಯ ಮಾಡುವುದು
- ಹಂಗಾಮಿನ ಶಿಸ್ತುಬದ್ಧತೆ
- ಸಾಲ ಪಡೆದ ರೈತನು ಹಂಗಾಮಿನ ಶಿಸ್ತುಬದ್ಧತೆ ಈ ಕೆಳಗಿನಂತೆ ಅನುಸರಿಸಬೇಕಾಗುತ್ತದೆ
ಚಟುವಟಿಕೆ
|
ಮುಂಗಾರು
|
ಹಿಂಗಾರು
|
ಸಾಲ ಪಡೆವ ಅವಧಿ
|
ಏಪ್ರಿಲ್ ನಿಂದ ಸೆಪ್ಟೆಂಬರ್
|
ಅಕ್ಟೋಬರ್ ನಿಂದ ಮುಂದಿನ ಮಾರ್ಚವರೆಗೆ
|
ಘೋಷಣೆ ಪಡೆಯಲು ಕೊನೆಯ ದಿನಾಂಕ
|
ನವಂಬರ್
|
ಮೇ
|
ಉತ್ಪನ್ನದ ದತ್ತಾಂಶ ಪಡೆಯಲು ಕೊನೆಯ ದಿನಾಂಕ
|
ಜನವರಿ /ಮಾರ್ಚ
|
ಜುಲೈ / ಸೆಪ್ಟಂಬರ್
|
- ಸಾಲ ಪಡೆಯದ ರೈತರ ವಿಷಯದಲ್ಲಿ ಪ್ರಸ್ತಾವನೆಗಳನ್ನು ಪಡೆಯಲು ಕೊನೆಯ ದಿನಾಂಕಗಳು ಹೀಗಿವೆ
- ಮುಂಗಾರು ಹಂಗಾಮು : 31ನೆ ಜೂಲೈ
- ಹಿಂಗಾರು ಹಂಗಾಮು: 31ನೆ ಡಿಸೆಂಬರ್
- ಹಾಗಿದ್ದರೂ ಅಗತ್ಯ ಬಿದ್ದರೆ ಹಂಗಾಮಿನ ಶಿಸ್ತನ್ನು ಮಾರ್ಪಡಿಸಬಹುದು. ಭಾರತ ಸರ್ಕಾರ ಮತ್ತು ರಾಜ್ಯ / ಕೇ. ಪ್ರ . ಸರ್ಕಾರದೊಂದಿಗೆ ಸಮಾಲೋಚನೆ ಮಾಡಿ ಮಾರ್ಪಡಿಬಹುದಾಗಿದೆ.
- ರಾಜ್ಯ / ಕೇ. ಪ್ರ ಗಳು ಪ್ರಕಟಿತ ಬೆಳೆ ಕಟಾವು ಪ್ರಯೋಗವನ್ನು (ಸಿ.ಸಿ.ಇ) ಸಾಕಷ್ಟು ಸಂಖ್ಯೆಯಲ್ಲಿ ಮಾಡಲು ಯೋಜನೆ ಹಾಕಿಕೊಳ್ಳ ಬೇಕು. ಪ್ರಕಟಿಸಿದ ವಿಮಾ ಘಟಕಗಳಲ್ಲಿ ಸಿ ಸಿ ಇ ಮಾಡಿ ಬೆಳೆಯ ಉತ್ಪನ್ನದ ಅಂದಾಜು ಮಾಡಬೇಕು. .
- ರಾಜ್ಯ / ಕೇ. ಪ್ರ ಸರ್ಕಾರ ಸಿಸಿಇ ಗಳನ್ನು ಒಂದೆ ಸರಣಿಯಲ್ಲಿ ಮಾಡಬೇಕು. ಮತ್ತು ಬಂದ ಫಲಿತಾಂಶವು ಬೆಲೆ ಉತ್ಪನ್ನ ಅಂದಾಜು ಮತ್ತು ಬೆಳೆವಿಮೆ ಅಂದಾಜು ಆಗಿರುವುದು.
ವಿಮೆ
- ಬೆಲೆ ಕಟಾವು ಪ್ರಯೋಗಗಳನ್ನು (ಸಿಸಿಇ) ಘಟಕ ವಿಸ್ತೀರ್ಣ/ಪ್ರತಿ ಬೆಳೆಗೆ ಜಾರುವ ಅಳತೆ ಪಟ್ಟಿಯಮೇಲೆ ಈ ಕೆಳಗೆ ತೋರಿಸಿದಂತೆ ಮಾಡಬೇಕು
- ಬೆಳೆ ಉತ್ಪನ್ನದ ಅಂದಾಜು
ಕ್ರ. ಸಂ.
|
ಘಟಕ ವಿಸ್ತೀರ್ಣ
|
ಕನಿಷ್ಟ ಸಂಖ್ಯೆಯ ಸಿಸಿ.ಗಳನ್ನು ಮಾಡಬೇಕಾದದ್ದು
|
1.
|
ತಾಲೂಕು / ತಹಸಿಲ್ / ವಲಯ
|
16
|
2.
|
ಮಂಡಲ / ಫಿರ್ಕಾ /ಇನ್ನಿತರ ಚಿಕ್ಕ ಘಟಕ ವಿಸ್ತೀರ್ಣ 8-10 ಹಳ್ಳಿಗಳನ್ನು ಹೊಂದಿರುವುದು
|
10
|
3.
|
ಗ್ರಾಮ ಪಂಚಾಯತಿ 4-5 ಹಳ್ಳಿಗಳಿರುವುದು
|
08
|
- ತಾಂತ್ರಿಕ ಸಲಹಾ ಸಮಿತಿ (ಟಿ. ಎ, ಸಿ)ಯು ಎನ್. ಎಸ್ ಎಸ್ , ಕೃಷಿ ಸಚಿವಾಲಯ (ಜಿ.ಒ. ಐ) ಮತ್ತು ಐ ಎ ಒ ಗಳ ಪ್ರತಿನಿಧಿಗಳನ್ನು ಹೊಂದಿರುವುದು. ಇದು ಸಿಸಿಇ ಗಳ ಮಾದರಿ ಪ್ರಮಾಣ ಮತ್ತು ಇತರ ತಾಂತ್ರಿಕ ವಿಷಯಗಳನ್ನು ನಿರ್ಧರಿಸುವುದು
- ನಷ್ಟ ಪರಿಹಾರದ ಹಂತಗಳು &ಗರಿಷ್ಟ (ತ್ರೆಷೋಲ್ಡ್) ಉತ್ಪನ್ನ
- ಮೂರು ಹಂತದ ನಷ್ಟ ಪರಿಹಾರವನ್ನು viz., 90%, 80% & 60% ಎಲ್ಲ ಬೆಲೆಗಳಿಗೆ ಕಡಿಮೆ ಹಾನಿ, ಮಧ್ಯಮ ಹಾನಿ ಮತ್ತು ಬಹಳ ಹಾನಿ ಆಧಾರದ ಮೇಲೆ ನೀಡಲಾಗುವುದು (ಧಾನ್ಯಗಳು, ಕಿರುಧಾನ್ಯಗಳು ಮತ್ತು ಎಣ್ಣೆ ಕಾಳು ಮತ್ತು ವಾರ್ಷಿಕ ವಾಣಿಜ್ಯ ಬೆಳೆ/ ವಾರ್ಷಿಕ ತೋಟದ ಬೆಳೆ) ಸಿ.ವಿ ಆಧಾರಿತ ಕಳೆದ ವರ್ಷದ 10 ವರ್ಷದ ದತ್ತಾಂಶದ ಉತ್ಪನ್ನದ ಬದಲಾವಣೆ ಕೊಯಿಫಿಷಿಯಂಟ್ (ಸಿ.ವಿ )ಆಧಾರವಾಗಿರುವುದು. ಹಾಗಿದ್ದರೂ ವಿಮೆ ಮಾಡಿಸಿದ ಘಟಕ ಪ್ರದೇಶದ ರೈತರು ಯಾಕ್ಚೂರಿಯಲ್ ದರ ಆಧರಿಸಿ ಹೆಚ್ಚು ವರಿ ಪ್ರಿಮಿಯಂ ಪಾವತಿಸಿ ಹೆಚ್ಚಿನ ನಷ್ಟಪರಿಹಾರ ಪಡೆಯಬಹುದು
- ತ್ರೆಷೋಲ್ಡ್ ಉತ್ಪನ್ನ (TY) ಅಥವ ವಿಮಾ ಘಟಕದಲ್ಲಿ ಬೆಳೆಯ ಖಾತ್ರಿ ಉತ್ಪನ್ನದ ಮೂರುವರ್ಷದ ಮುಂದುವರೆದ ಸರಾಸರಿ ಉತ್ಪನ್ನದ ಆಧಾರದಮೇಲೆ ಅಕ್ಕಿ ಮತ್ತು ಗೋದಿಗೆ, ಇತರ ಬೆಳೆಗಳಿಗೆ ಐದು ವರ್ಷದ ಸರಾಸರಿ ಆದಾಯವನ್ನು ನಷ್ಟಪರಿಹಾರದ ಹಂತದಿಂದ ಗುಣಿಸಲಾಗುವುದು.
- 13. ವಿಮೆ ರಕ್ಷಣೆ ಮತ್ತು ನಷ್ಟಪರಿಹಾರ ವಿಧಾನ
- ನಿರೂಪಿತ ಪ್ರದೇಶದ ಲ್ಲಿ ವಿಮೆ ಮಾಡಿಸಿದ ಪ್ರತೀ ಹೆಕ್ಟೇರಿನ ‘ ವಾಸ್ತವ ಉತ್ಪನ್ನವು’ ( AY) [ವಿಮೆ ಮಾಡಿಸಿದ ಹಂಗಾಮಿನಲ್ಲಿ ಅಗತ್ಯವಾದ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ (CCEs)] ಗರಿಷ್ಟ ಉತ್ಪನ್ನ ಕಿಂತ’ (TY) ಕಡಿಮೆಯಾದರೆ , ಸದರಿ ಬೆಳೆ ಹಾಕಿ ವಿಮೆ ಇಳಿಸಿದ ಎಲ್ಲ ರೈತರು ಉತ್ಪನ್ನದ ಕೊರತೆಅನುಭವಿಸಿದ್ದಾರೆ ಎ0ದು ಪರಿಗಣಿಸಲಾಗುವುದು. ಯೋಜನೆಯು ಇಂಥಹ ಸಂದರ್ಭದಲ್ಲಿ ಸಹಯಮಾಡುವುದು.
- ‘ನಷ್ಟಪರಿಹಾರ’ ವನ್ನು ಕೆಳಗಿನ ಸೂತ್ರದ ಪ್ರಕಾರ ಲೆಕ್ಕ ಹಾಕಲಾಗುವುದು.: { ಉತ್ಪನ್ನದ ಕೊರತೆ / ಗರಿಷ್ಟ ಉತ್ಪನ್ನ ) X ರೈತನ ವಿಮೆಯ ಮೊತ್ತ {ಉತ್ಪನ್ನದ ಕೊರತೆ = ವ್ಯಾಖ್ಯಾನದಲ್ಲಿನ ಪ್ರದೇಶದಲ್ಲಿನ‘ಗರಿಷ್ಟ ಉತ್ಪನ್ನ (- ) ವಾಸ್ತವ ಉತ್ಪನ್ನ }.
ಸ್ಥಾನಿಕ ಹಾನಿಗಳಿಗೆ ನಷ್ಟಪರಿಹಾರ :
- ಆಣೆಕಲ್ಲಿನ ಮಳೆ, ಚಂಡಮಾರುತ, ಮಳೆ, ನೆರೆ ಬಂದಾಗ ಹಾನಿಯ ನಷ್ಟದ ಅಂದಾಜನ್ನು ವೈಯುಕ್ತಿಕವಾಗಿ ಮಾರ್ಪಡಿಸಿದ ವಿಧಾನದಲ್ಲಿ ಲೆಕ್ಕಹಾಕಲಾಗುವುದು. ಅನುಷ್ಠಾನ ಏಜನ್ಸಿ ಮತ್ತುರಾಜ್ಯ/ ಕೇ. ಆ. ಪ್ರ. ಗಳ ಸಹಯೋಗದಲ್ಲಿ ನಡೆಯುವುದು. .
- ಸ್ಥಳಿಯ ನಷ್ಟದ ಲೆಕ್ಕಾಚಾರವನ್ನು ಮಿತಿಯಾದ ಪ್ರದೇಶದಲ್ಲಿ ಪ್ರಾಯೊಗಿಕವಾಗಿ ಮಾಡಲಾಗುವುದು. ಈ ಕಾರ್ಯಾನುಭವವನ್ನು ವಿಸ್ತರಿಸಲಾಗುವುದು. ಜಿಲ್ಲಾ ಕಂದಾಯ ಅಡಳಿತವು ಅನುಷ್ಠಾನ ಏಜನ್ಸಿಗೆ ನಷ್ಟದ ಪ್ರಮಾಣ ಪತ್ತೆ ಮಾಡಲು ಸಹಾಯ ಮಾಡುವುದು.
- ಕ್ಲೆಮುಗಳ ಮಂಜೂರಾತಿ& ಇತ್ಯರ್ಥ ಪ್ರಕ್ರಿಯೆ
- ಉತ್ಪನ್ನಗಳ ದತ್ತಾಂಶವು ರಾಜ್ಯ/ ಕೇ.ಆ ಪ್ರ. ದಿಂದ ನಿಗದಿ ಪಡಿಸಿದ ಕೊನೆದಿನಾಂಕಗಳ ವರೆಗೆ ಬಂದ ಮೇಲೆ ಕ್ಲೇಮುಗಳನ್ನು ಪರಿಗಣಿಸಿ ಅನಷ್ಠಾನ ಏಜನ್ಸಿಯು ಇತ್ಯರ್ಥ ಮಾಡುವುದು.
- ಕ್ಲೈಮು ಚೆಕ್ಕುಗಳು ಕ್ಲೈಮು ವಿವರಗಳೊಂದಿಗೆ ಆಯಾ ನೊಡಲ್ ಬ್ಯಾಂಕಿಗೆ ಬಿಡುಗಡೆ ಮಾಡಲಾಗುವುದು.ಕೊನೆ ಹಂತದ ಬ್ಯಾಂಕಿನ ಶಾಖೆಯು ರೈತರ ವೈಯುಕ್ತಿಕ ಖಾತೆಗಳಿಗೆ ಹಣ ಜಮಾ ಮಾಡುವುದು. ಮತ್ತು ಫಲಾನುಭವಿಗಳ ವಿವರವನ್ನು ಸೂಚನಾ ಫಲಕದ ಮೇಲೆ ಪ್ರದರ್ಶಿಸಲಾಗುವುದು. .
- ಸ್ಥಳಿಯ ಘಟನೆಯಾಗಿದ್ದ ಸಂದರ್ಭದಲ್ಲಿ viz., ಆಲಿಕಲ್ಲು ಮಳೆ,ಭೂಕುಸಿತ, ಚಂಡಮಾರುತ. ನೆರೆ ,ಅನುಷ್ಠಾನ ಏಜನ್ಸಿಯು ಪ್ರತಿ ರೈತನಿಗೆ ಆದ ಆದ ನಷ್ಟವನ್ನು ಅಂದಾಜು ಮಾಡುವ ಪ್ರಕ್ರಿಯೆಯನ್ನು ಜಿಲ್ಲಾ ಅಡಳಿತ/ ರಾಜ್ಯ/ ಕೇ. ಆ. ಪ್ರ. ಗಳ ಸಹಯೋಗದಲ್ಲಿ ಪ್ರಾರಂಭಿಸುವುದು.
- ಈ ಪ್ರಕರಣಗಳ ಇತ್ಯರ್ಥವು ವಿಮಾದಾರ ಮತ್ತು ಅನುಷ್ಠಾನ ಎಜನ್ಸಿಗಳ ನಡುವೆ ವೈಯುಕ್ತಿಕ ನೆಲೆಯಲ್ಲಿ ಜರಗುವುದು.
- ಆಡಳಿತ ಮತ್ತು ನಿರ್ವಹಣೆಗೆ ಬೇಕಾಗುವ ಹಣಕಾಸಿನ ಬೆಂಬಲ
ಆ & ನಿ ವೆಚ್ಚವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಮನಾಗಿ ಹಂಚಿಕೊಳ್ಳುವವು. ಸುರ್ಯಾಸ್ತದ ಅನುಪಾತದ ಆಧಾರದ ಮೇಲೆ ಭರಿಸುವವು. [ ಮೊದಲ ವರ್ಷ 100% , ಎರಡನೆ ವರ್ಷr, 80% ಮೂರನೆ ವರ್ಷ 60% ನಾಲ್ಕನೆ ವರ್ಷ 40%, ಐದನೆ ವರ್ಷ, 20% ನಂತರ ‘ಸೊನ್ನೆ’ ].
- ಮೂಲ ನಿಧಿ
- ಅನಾಹುತದ ನಷ್ಟವನ್ನು ತುಂಬಿ ಕೊಡಲು, ಮೂಲ ನಿಧಿಯನ್ನು ನಿರ್ಮಿಸಲಾಗಿದೆ. ಕೇಂದ್ರ ಮತ್ತು ರಾಜ್ಯ / ಕೇ. ಆ. ಪ್ರ ಸರ್ಕಾರಗಳು50:50 ಆಧಾರದ ಮೆಲೆ ವಂತಿಗೆ ನೀಡುತ್ತವೆ. ಸಂಕಷ್ಟ ಪರಿಹಾರ ನಿಧಿಯ ಕೆಲ ಭಾಗವನ್ನು ಮೂಲ ನಿಧಿಗೆ ವಂತಿಗೆ ಯಾಗಿ ಬಳಸಲಾಗುವುದು. ಮೂಲ ನಿಧಿಯನ್ನು ಅನುಷ್ಠಾನ ಏಜನ್ಸಿಯು ನಿರ್ವಹಿಸುವುದು
- ಮರು ವಿಮೆ ರಕ್ಷಣೆ
ಅನುಷ್ಠಾನ ಎಜನ್ಸಿಯು ಸೂಕ್ತವಾದ ಮರು ವಿಮೆ ರಕ್ಷಣೆಯನ್ನು ಪ್ರಸ್ತಾವನೆ ಸಲ್ಲಿಸಿದ RKBY ಗೆ ಪಡೆಯಲು ಅಂತರಾಷ್ಟ್ರೀಯ ಮರುವಿಮಾ ಮಾರುಕಟ್ಟೆಯಿಂದ ಪಡೆದುಕೊಳ್ಳುವುದು
- ಯೋಜನೆಯ ನಿರ್ವಹಣೆ ,ಮೇ ಲುಸ್ತುವಾರಿ ಮತ್ತು ಪರಿಶೀಲನೆ
- ಸಾಲ ಪಡೆದ ರೈತರ ಪ್ರಕರಣಗಳಲ್ಲಿ, ಬ್ಯಾಂಕು, ಸಿಸಿಐಎಸ್ ನ0ತೆ ಪಾತ್ರ ವಹಿಸುವುದು.
- ಸಾಲ ಪಡೆಯದ ರೈತರಿಗೆ, ಬ್ಯಾಂಕುಗಳು ಘೋಷಣೆಯ ಜತೆ ಪ್ರಿಮಿಯಂ ಅನ್ನು ಸಂಗ್ರಹಿಸಿ ಅನುಷ್ಠಾನ ಎಜನ್ಸಿಗೆ ನಿಗದಿತ ಅವಧಿಯೊಳಗೆ ಕಳುಹಿಸುವುದು. ಅನಷ್ಠಾನ ಏಜನ್ಸಿಗೆ ಸಾಕಷ್ಟು ಮೂಲಭೂತ ಸೌಕರ್ಯಗಳು ಇದ್ದಲ್ಲಿ ,ಸಾಲ ಪಡೆಯದ ರೈತರು ಪ್ರಿಮಿಯಂ ಅನ್ನು ಘೋಷಣೆ ಜತೆ ನೇರವಾಗಿ ಅನುಷ್ಠಾನ ಏಜೆನ್ಸಿಗೆ ಸಮಯ ಮಿತಿಯೊಳಗೆ ಕಳುಹಿಸುವ ಅವಕಾಶವಿದೆ.
- ಬ್ಯಾಂಕುಗಳ ಆಯ್ಕೆಯು ಅರ್ ಬಿ ಐ ನ ಸೇವಾ ಪ್ರದೇಶ ಸೂತ್ರದ ಆಧಾರದ ಮೇಲೆ ಅಗುವುದು. ಅಥವ ಬ್ಯಾಂಕಿನ ಆಯ್ಕೆಗೆ ( ಸಹಕಾರಿ ಬ್ಯಾಂಕುಗಳ ಜಾಲವು ಉತ್ತಮವಾಗಿದ್ದಲ್ಲಿ) ಬಿಡಲಾಗುವುದು. ರಾಜ್ಯದ ಕೃಷಿ ಇಲಾಖೆ , ಕೃಷಿ ಅಂಕಿ ಅಂಕಿ ಅಂಶಗಳು, ಸಹಕಾರ ಇಲಾಖೆ , ಆರ್ಥಿಕ ಮತ್ತು ಅಂಕಿ ಅಂಶಗಳ ಇಲಾಖೆ , ಕಂದಾಯ ಇಲಾಖೆಗಳು ಯೋಜನೆಯ ಸುಗಮ ಅನುಷ್ಠಾನದಲ್ಲಿ ಸಕ್ರಿಯವಾಗಿ ಬಾಗವಹಿಸುವವು.
- ಈ ಯೊಜನೆಯನ್ನು ಅ.ಏಜನ್ಸಿಯು ಮತ್ತು ಕೃಷಿ, ಸಹಕಾರ ಇಲಾಖೆಗಳ ಸಲಹೆಯೊಂದಿಗೆ ತಯಾರಿಸಿದ ಕಾರ್ಯ ವಿಧಾನವನ್ನು ನಿರ್ಧರಿಸಿ ಅನುಷ್ಠಾಗೊಳಿಸಲಾಗುವುದು. .
- ಪ್ರತಿ ಬೆಳೆಯ ಹಂಗಾಮಿನಲ್ಲಿ , ಅನುಷ್ಠಾನ ಗೊಳಿಸಿದ ರಾಜ್ಯ ಮತ್ತು ಕೇ. ಆ. ಪ್ರ. ಗಳಲ್ಲಿ ಕೃಷಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ರಾಜ್ಯ ಮತ್ತು ಕೇ. ಆ. ಪ್ರ.ಗಳ ಕೃಷಿ ಇಲಾಖೆ ಮತ್ತು ಜಿಲ್ಲಾ ಆಡಳಿತಗಳು ಜಲ್ಲಾ ಮಟ್ಟದ ಮೇಲುಸ್ತುವಾರಿ ಸಮಿತಿಯನ್ನು ರಚಿಸುವರು, ಅದು ಕೃಷಿ ಪರಿಸ್ಥಿತಿ,ಯ ವರದಿಯನ್ನು ಬಿತ್ತನೆಯಾದ ವಿಸ್ತೀರ್ಣ,ಹವಾಮಾನ ಸ್ಥಿತಿ, ಕೀಟಗಳ ಬಾಧೆ, ಬೆಳೆ ನಷ್ಟದ ಪ್ರಮಾಣ ಇತ್ಯಾದಿ ಬಗ್ಗೆ ಪಾಕ್ಷಿಕ ವರದಿಯನ್ನು ನೀಡುವುದು.
- ಈ ಯೋಜನೆಯ ಕಾರ್ಯವನ್ನು ವಾರ್ಷಿಕವಾಗಿ ವಿಮರ್ಶಿಸಲಾಗುವುದು. ಅಗತ್ಯವಾದ. ಬದಲಾವಣೆಗಳನ್ನು ತರಲಾಗುವುದು. ಭಾರತ ಸರ್ಕಾರದ ಕೃಷಿ ಸಚಿವಾಲಯ/ ಅನುಷ್ಠಾನ ಏಜನ್ಸಿಗಳು ಯೋಜನೆಯ ಸ್ಥಿತಿಗತಿಯ ವರದಿ ತಯಾರಿಸುವವು.
- ಅನುಷ್ಠಾನ ಏಜೆನ್ಸಿ
- ಕಾಲಾನುಕ್ರಮದಲ್ಲಿ ಇದಕ್ಕಾಗಿಯೇ ಒಂದು ಎಜನ್ಸಿ ಸ್ಥಾಪಿಸಿ RKBY ಯ ಅನುಷ್ಠಾನವನ್ನು ಅದಕ್ಕೆ ವಹಿಸಲಾಗುವುದು. ಅಲ್ಲಿಯ ತನಕ ,‘ ಜಿ ಈ ಸಿ ಅಫ್ ಇಂಡಿಯಾ’ ಇದನ್ನು ಅನುಷ್ಠಾನ ಗೊಳಿಸುವ ಏಜನ್ಸಿಯಾಗಿರುವುದು.
- ಯೋಜನೆಯ ಲಾಭಗಳು
ಈ ಯೋಜನೆಯಿಂದ ಕೆಳಗಿನ0ತೆ ಸಾಧನೆಗಳನ್ನು ನಿರೀಕ್ಷಿಸಬಹುದು:
- ಬೆಳೆ ಉತ್ಪಾದನೆಯ ಕ್ಷೆತ್ರದಲ್ಲಿ, ರೈತರಿಗೆ ಬೆಳೆ ವಿಫಲತೆಯಾದಾಗ ಆರ್ಥಿಕ ಬೆಂಬಲ ಕೊಡುವ ಬಹು ಮುಖ್ಯವಾದ ಸಾಧನ ವಾಗಿರುವುದು
- ಕೃಷಿಯಲ್ಲಿ ಉನ್ನತವಾದ ತಾಂತ್ರಿಕತೆಯ ಬಳಕೆಗೆ , ಪ್ರಗತಿ ಪರ ಕೃಷಿಮಾಡಲು ಉತ್ತೇಜನ ನೀಡುವುದು.
- ಕೃಷಿ ಸಾಲದ ಹರಿವನ್ನು ನಿರ್ವಹಿಸಲು ಸಹಾಯ ಮಾಡುವುದು.
- ಬರಿ ವಿಮೆ ಇಳಿಸಿದ ರೈತರಿಗೆ ಮಾತ್ರವಲ್ಲ ಇತರರಿಗೂ ಸಾಕಷ್ಟು ಅನುಕೂಲಗಳನ್ನು ಒದಗಿಸುವುದು. ಪರ್ಯಾಯವಾಗಿ ಉಕ್ಕಿ ಬೀಳುವ ಮತ್ತು ಗುಣಿತವಾಗುವ ಪರಿಣಾಮಗಳಿಂದ ಉತ್ಪನ್ನ & ಉದ್ಯೋಗ ಸೃಷ್ಟಿ, ಮಾರುಕಟ್ಟೆ ಶುಲ್ಕ, ಮತ್ತು ತೆರಿಗೆ ಇತ್ಯಾದಿಗಳನ್ನು ಅಭಿವೃದ್ಧಿ ಮಾಡಿ ನಿವ್ವಳ ಆರ್ಥಿಕ ಬೆಳವಣಿಗೆಗೆ ಸಹಾಯಕ ವಾಗುವುದು
- ನಷ್ಟ ಮೌಲ್ಯ ಮಾಪನ ಪ್ರಕ್ರಿಯೆಯನ್ನು ಸುಗಮ ಗೊಳಿಸುವುದು. ಮತ್ತು ಬೆಳೆ ಉತ್ಪಾದನೆಯ ಬೃಹತ್ ಹಾಗೂ ನಿಖರ ಅಂಕಿ ಅಂಶಗಳ ಭಂಡಾರ ನಿರ್ಮಿಸುವುದು.
- ವಿಮೆ ಮೊತ್ತ ಮತ್ತು ಪ್ರಿಮಿಯಂಗಳ ಮಾದರಿ ಲೆಕ್ಕಾಚಾರ