অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತೋಟಗಾರಿಕೆ

ಸಸಿ ಗಿಡಗಳ ನರ್ಸರಿ ಆಯ್ಕೆ

  • ವ್ಯವಸಾಯಕ್ಕೆ ಯೋಗ್ಯವಲ್ಲದ ಬರಡು ಜಮೀನುಗಳು, ಹಳ್ಳ ಸಾಲುಗಳು, ಕಲ್ಲು ಗುಡ್ಡಗಳ ಜಮೀನುಗಳಲ್ಲಿ ಹಲವಾರು ಖುಷ್ಕಿ ತೋಡದ ಬೆಳೆಗಳನ್ನು ಬೆಳೆದು ರೈತರು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಅವಕಾಶವಿದೆ. ಮಳೆಯಾಶ್ರಿತ ತೋಟಗಾರಿಕೆ ಬೆಳೆಗಳ ಪ್ರಮುಖ ಲಕ್ಷಣಗಳೇನಿಂದರೆ ವಾತಾವರಣ ಮತ್ತು ಮಣ್ಣಿನ ವೈಪರೀತ್ಯವನ್ನು ಸಹಿಸಿಕೊಂಡು ಉತ್ತಮ ಇಳುವರಿ ಕೊಡುವಂತಿರಬೇಕು.
  • ಅತಿ ಕಡಿಮೆ ತೇವಾಂಶವನ್ನು ಬಯಸುವಂತಹ ಗುಣಗಳನ್ನು ಹೊಂದಿರಬೇಕು. ಬೇಸಿಗೆಯಲ್ಲಿ ಸ್ವಲ್ಪ ಮಟ್ಟಿಗೆ ಎಲೆಗಳನ್ನು ಉದುರಿಸಿ ಭೂಮಿಯಲ್ಲಿರುವ ತೇವಾಂಶವನ್ನು ಉಳಿತಾಯ ಮಾಡುವಂಹ ಗುಣಗಳನ್ನು ಹೊಂದಿರಬೇಕು.
  • ಗಿಡದ ಎಲೆಗಳ ಮೇಲ್ಪದರಲ್ಲಿ ಕಡಿಮೆ ಪತ್ರ ರಂದ್ರಗಳು, ತುಪ್ಪಳದ ಹೊದಿಕೆ ಹಾಗು ಚಿಕ್ಕ ಗಾತ್ರದ ಎಲೆಗಳನ್ನು ಹೊಂದಿರುವಂತಹ ಗುಣ ಲಕ್ಷಣಗಳಿರುವ ಬೆಳೆಗಳಾಗಿರಬೇಕು.
  • ಆಯ್ಕೆ ಮಾಡುವಾಗ ಆಯಾ ವಲಯಕ್ಕೆ ಸೂಕ್ತವಾದ ಬೆಳೆ ಮತ್ತು ತಳಿಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಇಳುವರಿ ಪಡೆಯಬಹುದಾಗಿದೆ. ಮಾರುಕಟ್ಟೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬೆಳೆ ತಳಿಗಳನ್ನು ಆಯ್ಕೆ ಮಾಡುವುದು ಸೂಕ್ತ.
  • ತೋಟಗಾರಿಕೆ ಉಪಚಾರಗಳಿಗೆ ಬೇಕಾಗುವ ಉತ್ತಮ ಗುಣಮಟ್ಟದ ಬೆಳೆ ತಳಿಗಳನ್ನು ವಿವಿಧ ಮೂಲಗಳಿಂದ ಪೂರೈಸಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ತೊಟಗಾರಿಕೆ ಇಲಾಖೆಯ ನರ್ಸರಿಗಳು, ಕೃಷಿ / ತೋಟಗಾರಿಕೆ ವಿಶ್ವವಿದ್ಯಾಲಯಗಳು, ಕೃಷಿ / ತೋಟಗಾರಿಕೆ ಸಂಶೋಧನ ಕೇಂದ್ರಗಳು, ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆಗಳಿಂದ ಪೂರೈಸಿಕೊಳ್ಳುವುದು.
  • ಇದರಿಂದ ಗಿಡಗಳಲ್ಲಿನ ಗುಣಮಟ್ಟದ ವಿಶಿಷ್ಟತೆ ಹಾಗು ತಳಿ / ಬೆಳೆಗಳಲ್ಲಿನ ವ್ಯತ್ಯಾಸ ಲೋಪಗಳನ್ನು ನಿಯಂತ್ರಿಸಬಹುದಾಗಿದೆ. ಸರ್ಕಾರಿ ಇಲಾಖೆ / ಸಂಸ್ಥೆಗಳಿಂದ ವಿವಿಧ ತೋಟಗಾರಿಕೆ ಬೆಳೆಗಳ ಕಸಿ ಮತ್ತು ಸಸಿಗಳು ಲಭ್ಯವಿಲ್ಲದಿದ್ದಲ್ಲಿ ಸದರಿ ಇಲಾಖೆ / ಸಂಸ್ಥೆಗಳ ಮೇಲುಸ್ತುವಾರಿ ಅಧಿಕಾರಿ / ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಗಿಡಗಳು ಲಭ್ಯವಿಲ್ಲವೆಂದು ದೃಢೀಕರಣ ಪತ್ರ ಪಡೆದುಕೊಂಡು ನಂತರ ಸರ್ಕಾರೇತರ ಸಂಸ್ಥೆಗಳಿಂದ ಜಿಲ್ಲಾ ತಾಂತ್ರಿಕ ಸಮಿತಿಯ ಅನುಮೋದನೆ ನಂತರ ಪೂರೈಕೆ ಮಾಡಿಕೊಳ್ಳಬಹುದಾಗಿರುತ್ತದೆ. ಖಾಸಗಿ ಸಸ್ಯಗಾರಗಳಿಂದ, ಆಯಾ ಜಿಲ್ಲೆಯ ಜಲಾನಯನ ಕಾರ್ಯಕ್ರಮಗಳಿಗೆ ಗಿಡಗಳನ್ನು ಪೂರೈಕೆ ಮಾಡಿಕೊಳ್ಳುವಾಗ ಕೆಲವು ಮಾನದಂಡಗಳನ್ನು ಅನುಸರಿಸಬೇಕಾಗಿರುತ್ತದೆ

ಜಿಲ್ಲಾ ತಾಂತ್ರಿಕ ಸಮಿತಿ

ಜಿಲ್ಲಾ ತಾಂತ್ರಿಕ ಸಮಿತಿಯ ಸದಸ್ಯರುಗಳು

1.      ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳು:

ಅಧ್ಯಕ್ಷರು

2.     ಜಿಲ್ಲಾ ತೋಟಗಾರಿಕೆ ಉಪ

ಸದಸ್ಯರು

ನಿರ್ದೇಶಕರು:

 

3.    ಜಲಾನಯನ ಸಮಿತಿ

 

ಅಧ್ಯಕ್ಷರು:

ಸದಸ್ಯರು

4.     ಜಿಲ್ಲೆಯ ಕೃಷಿ ಸಂಶೋಧನೆ ಕೇಂದ್ರದ ತೋಟಗಾರಿಕೆ

 

5.   ವಿಜ್ಞಾನಿಗಳು/ಸಂಶೋಧಕರು/ವಿಷಯತಜ್ಞರು/ವಿಸ್ತರಣಾ ತಜ್ಞರು:

ಸದಸ್ಯರು

6.   ಜಿಲ್ಲೆಯ ಓರ್ವ ಪ್ರಗತಿ ಪರ ತೋಟಗಾರಿಕೆ ಬೆಳೆಗಾರ:

ಸದಸ್ಯರು

7.   ಹಿರಿಯ/ಸಹಾಯಕ ತೋಟಗಾರಿಕೆ ನಿರ್ದೇಶಕರು:

ಸದಸ್ಯಕಾರ್ಯದರ್ಶಿ

ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ:

(ಸಮಿತಿಯ ಅಧ್ಯಕ್ಷರು ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರೊಂದಿಗೆ ಚರ್ಚಿಸಿ ಪ್ರಗತಿ ಪರ ತೋಟಗಾರಿಕೆ ಬೆಳೆಗಾರರನ್ನು ಗುರ್ತಿಸುವುದು.)

ಗಿಡಗಳ ಪೂರೈಕೆಗೆ ಸಂಬಂಧಿಸಿದಂತೆ ಜಿಲ್ಲಾ ತಾಂತ್ರಿಕ ಸಮಿತಿಯ ಕಾರ್ಯಗಳು ಮತ್ತು ಜವಾಬ್ದಾರಿಗಳು

  1. ಜಲಾನಯನ ಅಭಿವೃದ್ಧಿಯ ಸಮುದಾಯ/ಸಂಘಟನೆಗಳು ಮತ್ತು ರೈತ ವರ್ಗಗಳ ಸಮನ್ವಯತೆಯೊಂದಿಗೆ, ಜಿಲ್ಲೆಯ ಜಲಾನಯನ ಕಾರ್ಯಕ್ರಮಗಳ ಅಡಿಯಲ್ಲಿ ತೋಟಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಗಿಡಗಳ ಪೂರೈಕೆ ಮೂಲಗಳನ್ನು ಗುರುತಿಸುವಿಕೆ. ಅವುಗಳ ತಪಾಸಣೆ/ಪರಿಶೀಲನೆ ಮತ್ತು ದೃಢೀಕರಣ, ಇಲಾಖೆ ನಿರ್ಧರಿಸಿದ ವೈಶಷ್ಟತೆಗಳನ್ನು ಗಿಡಗಳ ಪೂರೈಕೆ ಕ್ರಮಗಳಲ್ಲಿ ಅಳವಡನೆಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನ ಮತ್ತು ಉಸ್ತುವಾರಿ.
  2. ತೋಟಗಾರಿಕೆ ಅಭಿವೃದ್ಧಿಗೆ ಯೋಗ್ಯವಾದಂತೆ ಹೊಸ ಬೆಳೆ/ತಳಿಗಳ ಗುರುತಿಸುವಿಕೆ ಹಾಗೂ ಆಯಾ ವಲಯಕ್ಕೆ ಸೂಕ್ತವಿರುವ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಬೆಳೆ ಮತ್ತು ತಳಿಗಳನ್ನು ಆಯ್ಕೆ ಮಾಡುವುದು.
  3. ಗಿಡಗಳ ಗುಣ ಮಟ್ಟ ನಿಯಂತ್ರಣ ಮತ್ತು ದೃಢೀಕರಣ ಕ್ರಮಗಳನ್ನು ಕ್ಷೇತ್ರ ಮಟ್ಟದಲ್ಲಿ ಅಳವಡಿಸುವ ಬಗ್ಗೆ
  4. ಜಲಾನಯನ ಅಭಿವೃದ್ಧಿಯಲ್ಲಿ ಸಮುದಾಯ / ಸಂಘಟನೆಗಳಿಗೆ, ತೋಟಗಾರಿಕೆ ಬೆಳೆಗಳ ಸಮಗ್ರ ಅಭಿವೃದ್ಧಿ, ಬೆಳೆ ವೈವಿಧ್ಯತೆ ಕುರಿತಂತೆ ತಿಳುವಳಿಕೆ ಹಾಗೂ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಳ್ಳುವುದು.
  5. ತೋಟಗಾರಿಕೆ ಇಲಾಖೆಯ ಪ್ರಮುಖ ಸೌಲಭ್ಯಗಳಾದ ಹನಿ ನೀರಾವರಿ, ಸಮಗ್ರ ಕೀಟ ಮತ್ತು ಪೋಷಕಾಂಶ ನಿರ್ವಹಣೆ, ಸಾವಯವ ಕೃಷಿ ಕಾರ್ಯಕ್ರಮಗಳು, ಸಂಸ್ಕರಣೆ ಮತ್ತು ಮೌಲ್ಯಾಭಿವೃದ್ಧಿ, ತರಬೇತಿ, ಅನುತ್ಪಾದಕರ ತೋಟಗಳ ಪುನಶ್ಚೇತನ ಇತ್ಯಾದಿ ಕಾರ್ಯಕ್ರಮಗಳನ್ನು ಸಂಯೋಜಿತ ರೂಪದಲ್ಲಿ ಅಳವಡಿಸಿಕೊಳ್ಳುವುದು.
  6. ಅಂತರ್ ರಾಜ್ಯದಿಂದ ಸರ್ಕಾರಿ/ಖಾಸಗಿ ಮೂಲಗಳಿಂದ ಗಿಡಗಳ ಪೂರೈಸುವಿಕೆಯಲ್ಲಿ ನಿಯಂತ್ರಣ ಕ್ರಮಗಳನ್ನು ರೂಪಿಸುವುದು. ತಪಾಸಣೆ, ಪರಿಶೀಲನೆ, ದೃಢೀಕರಣ ಮಾಡುವುದು.
  7. ಜಲಾನಯನ ಅಭಿವೃದ್ಧಿ ಇಲಾಖೆಯ ತೋಟಗಾರಿಕೆ ಘಟಕದ ತಾಂತ್ರಿಕ ಸಮಿತಿಯ ನಿರ್ಧಾರಗಳನ್ನು ಸಮರ್ಪಕ ರೀತಿಯಲ್ಲಿ ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸುವುದು.
  8. ಜಿಲ್ಲೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿಗೆ ಅವಶ್ಯಕ ಸಂಯೋಜನೆ ಹಾಗೂ ಸಮನ್ವಯತೆ ರೂಪದ ಅನುಷ್ಠಾನ ಕ್ರಮಗಳನ್ನು ರೂಪಿಸಿ ನಿಯಮಾನುಸಾರ ಅಳವಡಿಸುವುದು.
  9. ಕನಿಷ್ಠ ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ತಾಂತ್ರಿಕ ಸಮಿತಿ ಸಭೆ ನಡೆಸಿ, ಯೋಜನಾವಾರು ಪೂರೈಸುವಂತಹ ಬೆಳೆ/ತಳಿವಾರು ಗಿಡಗಳ ಬೇಡಿಕೆ, ಯೋಜನೆಯ ಪ್ರಗತಿ ಹಾಗೂ ಸುಧಾರಣೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೈಗೊಂಡ ನಿರ್ಣಯಗಳ ಸಭಾ ನಡವಳಿಗಳನ್ನು ಕೇಂದ್ರ ಕಛೇರಿಗೆ ಸಲ್ಲಿಸುವುದು.
  10. ಜಿಲ್ಲಾ ತಾಂತ್ರಿಕ ಸಮಿತಿಯು ಗಿಡಗಳ ಪೂರೈಕೆ ಬಗ್ಗೆ ನಿರ್ಣಯಿಸಿದಂತೆ ಸರ್ಕಾರೇತರ ಸಸ್ಯಗಾರಗಳಿಂದ ಗಿಡಗಳನ್ನು ಪೂರೈಸಿಕೊಳ್ಳುವ ಪೂರ್ವದಲ್ಲಿ ಗಇಡಗಳ ಗುಣಮಟ್ಟದ ಹಾಗೂ ವಿಶಿಷ್ಟತೆಗಳ ಬಗ್ಗೆ ಜಿಲ್ಲಾ ತಾಂತ್ರಿ ಸಮಿತಿ, ನರ್ಸರಿಗಳನ್ನು ಪ್ರತ್ಯಕ್ಷ ಭೇಟಿ ಮಾಡಿ ಇಲಾಖೆ ಮಾರ್ಗಸೂಚಿಯಲ್ಲಿ ನೀಡಿರುವ ತೋಟಗಾರಿಕೆ ಕಸಿ/ಸಸಿ ಗಿಡಗಳ ವೈಶಿಷ್ಟತೆಗಳಿಗನು ಗುಣವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ದೃಢೀಕರಿಸಿ ತಪಾಸಣೆ ವರದಿಯ ಒಂದು ಪ್ರತಿಯನ್ನು ಜಿಲ್ಲಾ ಕಛೇರಿಯಲ್ಲಿ ಇಟ್ಟುಕೊಳ್ಳುವುದು. ವರದಿಯ ಒಂದು ಪ್ರತಿಯನ್ನು ಆಯುಕ್ತಾಲಯಕ್ಕೆ ಸಲ್ಲಿಸುವುದು.
  11. ಸರಬರಾಜುದಾರರು ನೀಡುವ ಅಧೀಕೃತ ಬಿಲ್ಲ್‍ನಲ್ಲಿ ಬೆಳೆ/ತಳಿ ಬಗ್ಗೆ ದೃಢೀಕರಿಸಿದ ನಂತರ ಪಾವತಿಗೆ ಪರಿಗಣಿಸುವುದು. ತಾಂತ್ರಿಕ ಪರಿಶೀಲನೆ, ದೃಢೀಕರಣ ಹಾಗೂ ಸಮಗ್ರ ರೀತಿಯ ಗಿಡಗಳ ಪೂರೈಕೆಯಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ತೋಟಗಾರಿಕೆ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗವು ವಿಶೇಷ ಕಾಳಜಿ ಮತ್ತು ಪಾಲ್ಗೊಳ್ಳುವಿಕೆಯ ಜವಾಬ್ದಾರಿಯೊಂದಿಗೆ ರೈತ ಸಮುದಾಯಗಳ ಜೊತೆಗೂಡಿ ಕ್ರಮವಹಿಸುವುದು. ದಾಸ್ತಾನು ವಹಿಯಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿ ಹಾಗೂ ತೋಟಗಾರಿಕೆ ಸಹಾಯಕರು ಬೆಳೆಗಳ /ತಳಿಗಳ ಬಗ್ಗೆ ಹಾಗೂ ಅವುಗಳ ವಿಶಿಷ್ಟತೆ ಬಗ್ಗೆ ಕಡ್ಡಾಯವಾಗಿ ದೃಢೀಕರಿಸಿ ಸಹಿ ಮಾಡಿರಬೇಕು.

 

ಅಳವಡಿಸಬೇಕಾದ ಅಂಶಗಳು

  1. ವಿವಿಧ ಬೆಳೆವಾರು ಗಿಡಗಳ ಸುಧಾರಿತ ವಿಶಿಷ್ಟತೆಗಳನ್ನು ಪರಾಮರ್ಶಿಸಿ ಖುಷ್ಕಿ ಆಧಾರಿತ ಜಲಾನಯನ ತೋಟಗಾರಿಕೆ ಅಭಿವೃದ್ಧಿಗೆ ಅನುಗುಣವಾಗುವ ಗಿಡಗಳ ವಯಸ್ಸು, ಬೇರಿನ ಪ್ರಮಾಣ ಮತ್ತು ಇತರೆ ವಿಶಿಷ್ಟತೆಗಳನ್ನು ಕ್ಷೇತ್ರ ಅನುಷ್ಟಾನಕ್ಕೆ ರೂಪಿಸಲಾಗಿದ್ದು ಅದರಂತೆ, ವಿವಿಧ ತೋಟಗಾರಿಕೆ ಸಸ್ಯಗಳಿಗೆ ನಿಗದಿಪಡಿಸಲಾದ ವಿಶಿಷ್ಟತೆಗಳ ಪ್ರಕಾರ ಅಳವಡಿಸಿಕೊಳ್ಳುವುದು ಹಾಗೂ ಇತರೆ ತೋಟದ ಬೆಳೆಗಳು, ಸಾಂಬಾರ ಪದಾರ್ಥ ಬೆಳೆಗಳು, ಹೂವಿನ ಬೆಳೆಗಗಳು ಹಾಗೂ ಔಷಧಿ ಮತ್ತು ಸುಗಂಧದ್ರವ್ಯ ಬೆಳೆಗಳಿಗೆ ಅನ್ವಯಿಸುವಂತಹ ವಿಶಿಷ್ಟತೆಗಳನ್ನು ಕೃಷಿ ವಿಶ್ವವಿದ್ಯಾಲಯದ ತಾಂತ್ರಿಕ ಕೈಪಿಡಿಯನ್ವಯ ರೂಪಿಸಿ ಜಲಾನಯನ ಅಭಿವೃದ್ಧಿ ಇಲಾಖೆಯ ಅನುಮೋದನೆ ಮೇರೆಗೆ ಅಳವಡಿಸಿಕೊಳ್ಳುವುದು.
  2. ಗಿಡಗಳ ಬೆಳೆ ಮತ್ತು ತಳಿಗಳನ್ನು ನಿರ್ಧಿಷ್ಟವಾಗಿ ಪ್ರತ್ಯೇಕಿಸಿ ಗುರ್ತಿಸುವಂತಹ ಸರಳ ವಿಧಾನವಾದ ತಳಿವಾರು ಬಣ್ಣದ ಸಂಕೇತ ಪದ್ಧತಿ (ಕಲರ್ ಕೋಡಿಂಗ್ ಪ್ರಾಕ್ಟೀಸ್) ಅಳವಡಿಸುವುದು. ಈ ಪದ್ಧತಿಯನ್ನು ರೈತ ಸಮೂಹಕ್ಕೆ ಮತ್ತು ಜಲಾನಯನ ಉಪ ಸಮಿತಿಗಳಿಗೆ ವ್ಯಾಪಕವಾಗಿ ತಿಳಿಸುವಂತಹ ಕ್ರಮಗಳನ್ನು ಕೈಗೊಳ್ಳುವುದು. ನಿರ್ಧಿಷ್ಟ ಬಣ್ಣಗಳಿಂದ ಗುರ್ತಿಸುವ ಕ್ರಮಗಳನ್ನು ಸಸ್ಯಗಳ ಪೂರೈಕೆದಾರರು ಕಡ್ಡಾಯವಾಗಿ ಅನುಸರಿಸಲು ತಿಳಿಸುವಂತಹ ಪ್ರಚಾರ ಕ್ರಮಗಳನ್ನು ಕೈಗೊಳ್ಳುವುದು. ಗಿಡಗಳ ತಳಿವಾರು ಮತ್ತು ಜಾತಿವಾರು ಗುರ್ತಿಸಿದ ಬಣ್ಣಗಳ ವಿವರಗಳ ಪ್ರಕಾರ ಅಳವಡಿಸುವುದು./li>
  3. ಪಾರದರ್ಶಕತೆ ಆಧಾರದ ಹಾಗೂ ರೈತ ಸಮೂಹದ ನಿರ್ಧಾರಗಳ ಮೇರೆಗೆ ವಿವಿಧ ಮೂಲಗಳಿಂದ ಪಡೆದುಕೊಳ್ಳುವಂತಹ ಗಿಡಗಳಲ್ಲಿನ ಗುಣಮಟ್ಟದ ವಿಶಿಷ್ಟತೆ ಹಾಗೂ ತಳಿ/ಬೆಳೆಗಳಲ್ಲಿನ ವ್ಯತ್ಯಾಸ/ ಲೋಪಗಳನ್ನು ನಿಯಂತ್ರಿಸುವ ಉದ್ದೇಶದಿಂದ, ಜಲಾನಯನ ಅಭಿವೃದ್ಧಿ ಇಲಾಖೆಯು ನೀಡಿದ ಮುಚ್ಚಳಿಕೆ ಮಾದರಿಯಂತೆ ಅಳವಡಿಸಿಕೊಳ್ಳುವುದು. (ಮುಚ್ಚಳಿಕೆಯ ಮಾದರಿಯನ್ನು ಅನುಬಂಧ-1 ರಲ್ಲಿ ಲಗತ್ತಿಸಿದೆ.)
  4. ಜಿಲ್ಲಾ ತಾಂತ್ರಿಕ ಸಮಿತಿಯು ಗುರ್ತಿಸಲಾದಂತಹ ಸರಬರಾಜು ಮೂಲಗಳಿಂದ ಕಡ್ಡಾಯವಾಗಿ ಸರಬರಾಜು ಬಿಲ್ಲ್‍ಗಳಲ್ಲಿ ವಿಶಿಷ್ಟತೆಗಳ ಮತ್ತು ಜಾತಿ / ತಳಿ ವಿವರಗಳನ್ನು ದೃಢೀಕರಿಸಿ ರೈತ ಫಲಾನುಭವಿಗಳ/ಸಮಿತಿಗೆ ನೀಡುವಂತಹ ನಿಯಮಗಳನ್ನು ಅಳವಡಿಸಲು ಮತ್ತು ಸಸ್ಯಗಳ ಪೂರೈಕೆ ವ್ಯವಸ್ಥೆಯಲ್ಲಿ ಘಟಕದ ಅಧಿಕಾರಿಗಳು ಸಂಘದ ವತಿಯಿಂದ ನೀಡಿದಂತಹ ವಿಶಿಷ್ಟತೆಗಳ ಪ್ರಕಾರ ಕಡ್ಡಾಯವಾಗಿ ದೃಢೀಕರಿಸುವುದು ಮತ್ತು ಯಾವುದೇ ರೀತಿಯ ತಾಂತ್ರಿಕ ಲೋಪದೋಷಗಳಿಗೆ ಅವಕಾಶ ನೀಡಬಾರದು.
  5. ಜಲಾನಯನ ಅಭಿವೃದ್ಧಿ ಇಲಾಖೆಯ ವತಿಯಿಂದ ಗುಣಮಟ್ಟ ನಿಯಂತ್ರಣ ಮತ್ತು ಪೂರೈಕೆ ಕ್ರಮಗಳಿಗೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ನೀಡಲಾಗುವ ಸೂಚನೆ ಮತ್ತು ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವುದು.
  6. ಆಯ್ತುಕಾಲವು ನೀಡುವ ಅನುಮೋದಿತ ದರದಂತೆ ತೋಟಗಾರಿಕೆ ಕಸಿ / ಸಸಿ ಗಿಡಗಳನ್ನು ಪೂರೈಸಿಕೊಳ್ಳುವುದು.

 

ಮುಚ್ಚಳಿಕೆ ಪತ್ರ(ಮಾದರಿ ನಮೂನೆ)

ಶ್ರೀ / ಶ್ರೀಮತಿ......................................................ವಿಳಾಸ......................................................................................................................................

ಫಲಾನುಭವಿಯಾದ ನಾನು.......................................ಯೋಜನೆಯಡಿಯಲ್ಲಿ ಸ್ವಯಂ ಗುರುತಿಸಿಕೊಂಡಂತೆ ಹಾಗು ಉಪ ಸಮಿತಿಯ ನಿರ್ಣಯ ಹಾಗು ಮಾರ್ಗದರ್ಶನದಂತೆ....................................ಬೆಳೆ ಮತ್ತು ...........ತಳಿಯ ಪ್ರದೇಶಾಭಿವೃದ್ಧಿ ಉಪಚಾರವನ್ನು.................ಹೆಕ್ಟೇರು ವಿಸ್ತೀರ್ಣದ.......ಸರ್ವೆ ನಂಬರಿನಲ್ಲಿ.................ಸಂಖ್ಯೆಯ ಗಿಡಗಳನ್ನೊಳಗೊಂಡಂತೆ.....ಘಿ.......ಅಳತೆಯ ಪಾಲಿಥೀನ್ ಚೀಲಗಳಲ್ಲಿ....................................................ಸಸ್ಯೋತ್ಪಾದನಾ ಮೂಲದಿಂದ ನನ್ನ ಅಭಿವೃದ್ದಿ ಹಿತದೃಷ್ಟಿಯಿಂದ ಪಡೆದುಕೊಳ್ಳಲು ಸ್ವ ಇಚ್ಚೆಯಿಂದ ಒಪ್ಪಿರುತ್ತೇನೆ. ಮುಂಬರುವ ಯಾವುದೇ ತಳಿಗಳ ವ್ಯತ್ಯಾಸ, ಹಾಗೂ ಇನ್ನಿತರೇ ಆಗು ಹೋಗುಗಳಿಗೆ ಜಲಾನಯನ ಅಭಿವೃದ್ದಿ ಇಲಾಖೆಯು ಹೊಣೆಗಾರರಾಗಿಲ್ಲವೆಂದು ತೆಳಿದು ನಾನು ಈ ಮೇಲೆ ನೀಡಿರುವ ಸ್ವಯಂ ಘೋಷಣೆ ಮುಖೇನ ಜವಾಬ್ದಾರನಾಗಿರುತ್ತೇನೆ.

ಜಲಾನಯನ ಅಭಿವೃದ್ಧಿ ಇಲಾಖೆ ನಿರ್ಧರಿಸಿರುವ ಗಿಡಗಳ ಗುಣಮಟ್ಟ ಹಾಗು ವಿಶಿಷ್ಟತೆಗಳ ಪ್ರಕಾರ ಹಾಗು ಇಲಾಖಾ ಅಧಿಕಾರಿಗಳ ಸೂಕ್ತ ದೃಢೀಕರಣಗಳಿಗೆ ಒಳಪಟ್ಟಂತೆ ಸಮಿತಿಯ ಮುಖೇನ ಮೇಲೆ ತಿಳಿಸಿದ ಸರಬರಾಜುದಾರರಿಗೆ ಅರ್ಹವಾದಂತಹ ಪಾವತಿ ಕ್ರಮಗಳನ್ನು ನಿಯಮಾನುಸಾರ ನೀಡಲು ಒಪ್ಪಿರುತ್ತೇನೆ.

 

ದಿನಾಂಕ:                                                                                                                                ಫಲಾನುಭವಿಯ ಸಹಿ ಮತ್ತು ಹೆಸರು

ದೃಢೀಕರಿಸಿದೆ:

ಅಧ್ಯಕ್ಷರು,

ಜಲಾನಯನ ಉಪ ಸಮಿತಿ

ಮೊದಲನೇ ಪ್ರತಿಯನ್ನು ಜಲಾನಯನ ಉಪ ಸಮಿತಿಯ ಕಛೇರಿಗೆ, ಎರಡನೇ ಪ್ರತಿಯನ್ನು ತೋಟಗಾರಿಕೆ ಘಟಕದ ಫಲಾನುಭವಿ ದಾಖಲಾತಿ ವಹಿಗೆ ಮತ್ತು ಮೂರನೇ ಪ್ರತಿಯನ್ನು ಫಲಾನುಭವಿಯ ಮಾಹಿತಿಗಾಗಿ ಪಡೆದು ಇಟ್ಟುಕೊಳ್ಳುವುದು.

ಯೋಜನೆ ಅನುಷ್ಟಾನ ವಿಧಾನ

  1. ಫಲಾನುಭವಿಗಳ ಆಯ್ಕೆಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿ ಜಲಾನಯನ ಅಭಿವೃದ್ಧಿ ಉಪ ಸಮಿತಿ ವತಿಯಿಂದ ಅನುಮೋದನೆ ಮತ್ತು ಸೂಕ್ತ ಸಭಾ ನಡುವಳಿ ಮೇರೆಗೆ ಅನುಷ್ಟಾನ ಪೂರ್ವವಾಗಿ ಪಡೆದು ಭೌತಿಕ ಉಪಚಾರ ಕೈಗೊಳ್ಳುವುದನ್ನು ಕಡ್ಡಾಯವಾಗಿ ಅನುಸರಿಸುವುದು.
  2. ಫಲಾನುಭವಿಗಳ ಅಪೇಕ್ಷಿತ ಗಿಡಗಳ ಪೂರೈಕೆಯನ್ನು ಕಡ್ಡಾಯವಾಗಿ ಸಮಿತಿ ವತಿಯಿಂದ ಕ್ರೋಡೀಕರಿಸಿ ಪೂರೈಸಿಕೊಳ್ಳುವುದು.
  3. ಮಾದರಿ ಬೆಳೆ ಉಪಚಾರದಲ್ಲಿನ ವಿವಿಧ ಅಂಶಗಳನ್ನು ಕ್ಷೇತ್ರದ ವಾಸ್ತವಿಕತೆಗೆ ಅನುಗುಣವಾದಂತೆ ಮಾತ್ರ ಪರಿಗಣಿಸಿ ಅನುದಾನ ಭರಿಸುವ ಅರ್ಹ ಕ್ರಮಗಳನ್ನು ಕೈಗೊಳ್ಳುವುದು.(ಉದಾ: ಕೃಷಿ ಯೋಗ್ಯ ಭೂಮಿಯಲ್ಲಿ ಭೂಮಿ ಸಿದ್ಧತೆಗೆ ಖರ್ಚು ಭರಿಸಲು ಅವಕಾಶವಿರುವುದಿಲ್ಲ).
  4. ಫಲಾನುಭವಿವಾರು ಕೈಗೊಳ್ಳುವ ಭೂಮಿ ಸಿದ್ಧತೆ, ಗಿಡ ನಾಟಿ ಮಾಡುವ ಕಾರ್ಯಗಳನ್ನು ಸರ್ವೆ ನಂಬರ್‍ಗಳನ್ನು ಭೂ ದಾಖಲಾತಿ ಆಧಾರದ ಮೇರೆಗೆ ಪರಿಶೀಲಿಸಿ ಕ್ರಮಗಳನ್ನು ಕೈಗೊಳ್ಳುವುದು.
  5. ಕಳೆದ / ಹಿಂದಿನ ವರ್ಷಗಳಲ್ಲಿ ಉಪಚರಿಸಿದ ಅಥವಾ ಗಿಡಗಳನ್ನು ಒದಗಿಸಿದ ಫಲಾನುಭವಿಗಳಿಗೆ ಹಾಲಿ ವರ್ಷದಲ್ಲಿ ಸೌಲಭ್ಯಗಳನ್ನು ಪುನರಾವರ್ತಿಸಬಾರದು. ಹಾಗು ಇತರೆ ಇಲಾಖೆಗಳಿಂದ ಇದೇ ಉದ್ದೇಶಕ್ಕಾಗಿ ಸೌಲಭ್ಯಗಳನ್ನು ಪಡೆದ ಫಲಾನುಭವಿಗಳನ್ನು ಪರಿಗಣಿಸಬಾರದು.
  6. ನಿಗದಿತ ಗಿಡಗಳ ಅಂತರದಲ್ಲಿ ಯಾವುದೇ ವ್ಯತ್ಯಾಸಗಳಿಗೆ ಅವಕಾಶ ನೀಡಬಾರದು.
  7. ತೋಟಗಾರಿಕೆ ಬೆಳೆಗಳೊಂದಿಗೆ ಇತರೇ ಅರಣ್ಯ ಬೆಳೆಗಳನ್ನು ಬೆಳೆವಣಿಗೆ ಆಧಾರಿತ ಮಾನದಂಡಗಳ ಮೇರೆಗೆ ಪರಿಶೀಲಿಸಿ ಗಿಡಗಳ ಬೆಳೆವಣಿಗೆಗೆ ದಕ್ಕೆ ಬರದಿರುವುದನ್ನು ಗಮನಿಸಿ ಅಳವಡಿಸುವುದು.
  8. ಜಮೀನಿನ ಅಂಚಿನ ಮತ್ತು ಬದುಗಳ ಮೇಲೆ ನಾಟಿ ಮಾಡುವ ಗಿಡಗಳಲ್ಲಿಯೂ ಸಹ ಬೆಳೆಗಳ ಬೆಳವಣಿಗೆಗೆ ದಕ್ಕೆ ಬರದಂತಹ ರೀತಿಯಲ್ಲಿ ಅಂತಹ ಬೆಳೆಗಳನ್ನು ಸೂಕ್ತ ಅಂತರದೊಂದಿಗೆ ಅಭಿವೃದ್ಧಿ ಪಡಿಸುವುದು.
  9. ಭೂಮಿ ಸಿದ್ದತೆ, ಗಿಡಗಳ ಸಾಗಾಣಿಕೆ ಮತ್ತು ಪಾತಿ ಮಾಡುವ ಉಪಚಾರ ಅಂಶಗಳಲ್ಲಿ ನಿರ್ಧಿಷ್ಟ ಪ್ರಮಾಣ, ದಿನಗೂಲಿ, ಅಳತೆ/ವಿನ್ಯಾಸಗಳ ವಿವರಗಳನ್ನು ಒಳಗೊಂಡಂತೆ ಮಾತ್ರ ಓಚರ್‍ಗಳನ್ನು ತಯಾರಿಸಿ ಸೂಕ್ತ ಅರ್ಹತಾ ಮಾನದಂಡಗಳ ಮೇರೆಗೆ ಪರಿಶೀಲಿಸಿ ಪಾವತಿಸುವ ಮತ್ತು ಮೇಲು ಸಹಿಗೆ ಅಂಗೀಕರಿಸುವ ಕ್ರಮಗಳನ್ನು ಅಳವಡಿಸಿಕೊಳ್ಳುವುದು.
  10. ಬೇಡಿಕೆ ಅನ್ವಯ ಸಂಘವು ಅಥವಾ ರೈತ ಫಲಾನುಭವಿ ಪಡೆದುಕೊಳ್ಳುವಂತಹ ಗಿಡ ಮತ್ತು ತಳಿಗಳನ್ನು ಇಲಾಖೆಯು ನಿರ್ಧರಿಸಿದ ವೈಶಿಷ್ಟತೆಗಳ ಮೇರೆಗೆ ದೃಡೀಕರಿಸಿ ಅರ್ಹವಾದಂತೆ ಮಾತ್ರ ಅಳತೆ ಪುಸ್ತಕದಲ್ಲಿ ದಾಖಲಿಸಿದ ನಂತರ ಪಾವತಿ ಕ್ರಮಗಳಿಗೆ ಪರಿಗಣಿಸುವುದು.
  11. ಇಲಾಖೆಯು ನಿರ್ಧರಿಸಿದ ವಿಶಿಷ್ಟತೆಗಳ ಅನುಸಾರವಾಗಿಯೇ ಅರ್ಹ ದರಗಳನ್ನು ಪಾವತಿಸಲು ದೃಡೀಕರಣ ನೀಡಬೇಕು.
  12. ಬಣ್ಣದ ಸಂಕೇತ ಆಧಾರಿತ ತಳಿಗಳನ್ನು ಗಿಡಗಳ ದೃಡೀಕರಣ ಸಮಯದಲ್ಲಿ ಗಮನಿಸಿ ಕಡ್ಡಾಯಗೊಳಿಸಿ ರೈತ ಫಲಾನುಭವಿಗೆ ಮನವರಿಕೆ ಮಾಡುವುದು.
  13. ಅಳತೆ ಪುಸ್ತಕ ಮತ್ತು ಓಚರ್‍ಗಳ ಸಾಖಲಾತಿಯಲ್ಲಿ ಕ್ಷೇತ್ರ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ದೃಡೀಕರಿಸುವುದು.
  14. ಖಾಸಗೀ ರೈತರ ಜಮೀನಿನಲ್ಲಿ ಕೈಗೊಳ್ಳುತ್ತಿರುವ ತೋಟಗಾರಿಕೆ ಉಪಚಾರಗಳು ಗುಲಾಬಿ ಬೆಳೆ ಬೇಸಾಯ ಹೊರತುಪಡಿಸಿ ವೆಚ್ಚ ಆಧಾರಿತ ಕೃಷಿ ಪದ್ಧತಿ ಅಡಿಯಲ್ಲಿ ಬರುವುದಿಲ್ಲ. ಆದ್ದರಿಂದ ಗುಲಾಬಿ ಬೆಳೆ ಬೇಸಾಯ ಉಪಚಾರಕ್ಕೆ ರೈತರ ವಂತಿಗೆಯನ್ನು ಸಾಲಾನ್ಯ ವರ್ಗದವರಾದರೆ ಕಾಮಗಾರಿ ವೆಚ್ಚದ ಶೇ.40 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ, ಸಣ್ಣ ಮತ್ತು ಅತಿಸಣ್ಣ ರೈತರ ವರ್ಗದ ಫಲಾನುಭವಿಗಳಾದರೆ ಶೇ.20 ರಷ್ಟು ಪಡೆಯುವುದು. ಉಳಿಸ ಉಪಚಾರಗಳಿಗೆ ಕಾಮಗಾರಿ ವೆಚ್ಚದ ಶೇ.10 ರಷ್ಟು ಸಾಮಾನ್ಯ ವರ್ಗದ ಮತ್ತು ಶೇ.5 ರಷ್ಟನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಸಣ್ಣ/ಅತೀ ಸಣ್ಣ ವರ್ಗದ ರೈತರಿಂದ ವಂತಿಗೆ ಪಡೆದು ಜಲಾನಯನ ಅಭಿವೃದ್ಧಿ ನಿಧಿಗೆ ಜಮೆ ಮಾಡುವುದು.
  15. ಫಲಾನುಭವಿಗಳ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಯಶೋಗಾಥೆಗಳೊಂದಿಗೆ ಆಯುಕ್ತಲಯಕ್ಕೆ ಸಲ್ಲಿಸುವುದು

ಅಳವಡಿಸಬೇಕಾದ ಅಂಶಗಳು

  1. ಕ್ರಿಯಾ ಯೋಜನೆಯಲ್ಲಿ ಉಪ ಹಾಗೂ ಕಿರು ಜಲಾನಯನದ ಹೆಸರು, ಹಾಗೂ ಉಪಚರಿಸುವ ಪ್ರದೇಶವನ್ನು ಗುರುತಿಸುವಂತಹ ನಕ್ಷೆಯ ಪ್ರತಿಯನ್ನು ಕಡ್ಡಾಯವಾಗಿ ನೀಡಬೇಕು.
  2. ಕ್ರಿಯಾ ಯೋಜನೆಯಲ್ಲಿ ಕಿರು ಜಲಾನಯನವಾರು, ಬೆಳೆವಾರು ಹಾಗೂ ತಳಿವಾರು ಭೌತಿಕ ಹಾಗೂ ಆರ್ಥಿಕ ಗುರಿಗಳನ್ನು ತಪ್ಪದೆ ನಮೂದಿಸಬೇಕು.
  3. ನೀರು, ಭೂ ಸಂರಕ್ಷಣೆ ಹಾಗು ಚಟುವಟಿಕೆಗಳಿಗೆ ಹೊಂದಿದಂತೆ ಕಡ್ಡಾಯವಾಗಿ ಸಮಗ್ರ ರೂಪದಲ್ಲಿ ವಿಶ್ಲೇಷಿಸಿ ಸ್ಥಳೀಯವಾಗಿ ಜೀವವೈವಿಧ್ಯತೆ ಸಂರಕ್ಷಣೆಗೆ ಪೂರಕವಾದ ತೋಟಗಾರಿಕೆ ಅಭಿವೃದ್ಧಿ ಕಾರ್ಯಗಳನ್ನು ಅಳವಡಿಸುವುದು.
  4. ಅನುಮೋದಿತ ಯೋಜನೆ ವರದಿಯ ಗುರಿಗಳಂತೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆಯುವುದು.
  5. ಪ್ರತಿ ಉಪ ಜಲಾನಯನಕ್ಕೂ ಪ್ರತ್ಯೇಕ ಸವಿವರವಾದ ಕ್ರಿಯಾ ಯೋಜನೆಗಳನ್ನು ತಯಾರಿಸಿ ಸಲ್ಲಿಸುವುದು.

ಮಾದರಿ ದರ ಅಳವಡಿಕೆ

ತೋಟಗಾರಿಕೆ ಘಟಕದಿಂದ ವಿವಿಧ ಹಣ್ಣು, ಹೂವು, ತೋಟದ ಬೆಳೆಗಳು, ಔಷಧಿ ಬೆಳೆಗಳು ಹಾಗು ಸಾಂಬಾರು ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮವನ್ನು ಕೈಗೊಳ್ಳುವುದಲ್ಲದೆ, ಶಾಲೆ ಅಂಗಳ/ಮನೆ ಅಂಗಳಗಳಲ್ಲಿ ಕೈತೋಟ ನಿರ್ಮಾಣ ಹಾಗು ತರಕಾರಿ ಕಿರು ಚೀಲ ವಿತರಣೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಕೃಷಿ ಘಟಕದಡಿ ನಿರ್ಮಿಸಿದ ಬದುಗಳ ಸ್ಥಿರತೆಯನ್ನು ಕಾಪಾಡಿಕೊಂಡು ರೈತರಿಗೆ ಹೆಚ್ಚುವರಿ ಆದಾಯ ಕಲ್ಪಿಸಿಕೊಡಲು ಬದುಗಳ ಬದಿ ವಿವಿಧ ಸೂಕ್ತ ತೋಟಗಾರಿಕೆ ಬೆಳೆಗಳ ಬೀಜಗಳ ಬಿತ್ತನೆ/ಊಣುವ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗುತ್ತಿದೆ. ತೋಟಗಾರಿಕೆ ಬೆಳೆವಾರು ಉಪಚಾರಗಳ ವೆಚ್ಚಗಳನ್ನು ಇಲಾಖಾ ನಿಯಮಾವಳಿಗಳು ಹಾಗು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿ ಪ್ರಕಾರ ತಯಾರಿಸಿ ಜಿಲ್ಲೆಗಳಿಗೆ ಸಂಬಂಧಿಸಿದ ಬೆಳೆಗಳಿಗೆ ಮಾದರಿ ದರಗಳನ್ನು ಆಯುಕ್ತಾಲಯದಿಂದ ಅನುಮೋದನೆ ಪಡೆದುಕೊಂಡು ಯೋಜನೆಗಳನ್ನು ಅನುಷ್ಟಾನಗೊಳಿಸುವುದು.

ಅನುಷ್ಟಾನ ವಿಧಾನದ ಮಾರ್ಗಸೂಚಿಗಳು

ವಿವಿಧ ಕೃಷಿ ವಲಯದ ಹವಾ ಮತ್ತು ಭೂಗುಣ ಪರಿಸ್ಥಿತಿಗಳಿಗೆ ಅನುಗುಣವಾಗಿ ಸೂಕ್ತವಿರುವ ತೋಟಗಾರಿಕೆ ಬೆಳೆಗಳನ್ನು ಆಯ್ಕೆ ಮಾಡುವುದು. ಮಣ್ಣು ಮತ್ತು ನೀರು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿದ ನಂತರ ಬೆಳೆಗಳ ಸೂಕ್ರತೆಯನ್ನು ನಿರ್ಧರಿಸುವುದು.

ಭೂ ವರ್ಗೀಕರಣದ ಅನ್ವಯ ಸೂಕ್ತವಾಗುವ ವಿವಿಧ ತೋಟಗಾರಿಕಾ ಬೆಳೆಗಳ ವಿವರಗಳು:

  1. ಗುಡ್ಡ ತೋಟಗಾರಿಕೆ(U.ಖ.): ಕೊರಕಲು ಮತ್ತು ಕಲ್ಲುಗಳಿಂದ ಕೂಡಿದ ಕಡಿಮೆ ಮೇಲ್ಮಣ್ಣಿರುವ ಹಾಗು ನೀರಿನ ಇಂಗುವಿಕೆ ಕಡಿಮೆ ಪ್ರಮಾಣದಲ್ಲಿರುವ ಪ್ರದೇಶವಾಗಿರುತ್ತದೆ. ಗಿಡಗಳ ಬೆಳವಣಿಗೆಗೆ ತೇವಾಂಶ ಲಭ್ಯತೆ ತೀರಾ ಕಡಿಮೆ ಇರುತ್ತದೆ. ಇಂತಹ ಪರಿಸ್ಥಿತಿಯನ್ನು ಸಹಿಸಿಕೊಂಡು ಬೆಳೆಯುವ ಹಣ್ಣಿನ ಗಿಡಗಳನ್ನು ಬೆಳೆಸಬಹುದಾಗಿದೆ.
  2. ಉದಾ: ಬೆಟ್ಟದ ನೆಲ್ಲಿ, ಬೋರೆ, ಸೀತಾಫಲ, ಬೇಲ, ಹುಣಸೆ.
  3. ಖುಷ್ಕಿ ತೋಟಗಾರಿಕೆ(ಒ.ಖ.): ನೀರಿನ ಇಂಗುವಿಕೆ ಪ್ರಮಾಣ ಸಾಧಾರಣವಾಗಿರುತ್ತದೆ, ಮಣ್ಣು ಬಸಿಯುವಿಕೆ ಪ್ರಮಾಣ ಹೆಚ್ಚಾಗಿರುತ್ತದೆ. ಮಣ್ಣನ್ನು ಹಿಡಿದಿಟ್ಟುಕೊಳ್ಳುವ, ಮಣ್ಣಿನಲ್ಲಿ ಲಭ್ಯವಾಗುವ ತೇವಾಂಶವನ್ನು ಬಳಸಿಕೊಂಡು ಬೆಳೆಯುವ ಬೆಳೆಯನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ.
  4. ಉದಾ: ಗೋಡಂಬಿ, ಮಾವು, ಸಪೋಟ, ಅಂಜೂರ,ಹಲಸು
  5. ಸಾಗುವಳಿ ತೋಟಗಾರಿಕೆ(ಐ.ಖ.): ಸಾಗುವಳಿ ತೋಟಗಾರಿಕೆ ಪ್ರದೇಶದಲ್ಲಿ ಮಣ್ಣು ಮತ್ತು ನೀರಿನ ಬಸಿಯುವಿಕೆ ಪ್ರಮಾಣ ಕಡಿಮೆ ಇರುತ್ತದೆ. ಮಳೆಯಿಂದ ಲಭ್ಯವಾಗುವ ನೀರನ್ನು ವಿವಿಧ ವಿನ್ಯಾಸಗಳಲ್ಲಿ ಸಂಗ್ರಹಿಸಿ ಪುನರ್ ಬಳಕೆ ಮಾಡಬಹುದಾಗಿದೆ. ಈ ಪ್ರದೇಶಕ್ಕೆ ಸೂಕ್ತವಾದ ಬೆಳೆಗಳೆಂದರೆ, ಸೀಬೆ, ನಿಂಬೆ, ದಾಳಿಂಬೆ, ಮೋಸಂಬಿ, ಕರಿಬೇವು, ನುಗ್ಗೆ, ತರಕಾರಿ ಬೆಳೆಗಳು, ಹೂವಿನ ಬೆಳೆಗಳು ಹಾಗೂ ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳು.

ತೋಟಗಾರಿಕೆ ಆಧಾರಿತ ಬೆಳೆ ಪದ್ಧತಿಗಳು

ವಿವಿಧ  ಹವಾ ಮತ್ತು ಭೂಗುಣಗಳಲ್ಲಿನ ಬೆಳೆಗಳು ಫಲಿಸುವ ಆಧಾರದ ಮೇಲೆ ತೋಟಗಾರಿಕೆ ಆಧಾರಿತ ಹಲವಾರು ಬೆಳೆ ಪದ್ಧತಿಗಳನ್ನು ಗುರುತಿಸಲಾಗಿದೆ. ಅವೆಲ್ಲವೂ ಮಳೆ ಆಧಾರಿತ ತೋಟ(ಹಣ್ಣಿನ)ಗಳನ್ನು ಅಭಿವೃದ್ಧಿ ಪಡಿಸಲು ಯಾವುದೇ ಅಡ್ಡಿಯನ್ನುಂಟು ಮಾಡುವುದಿಲ್ಲ. ಒಂದೇ ತೋಟಗಾರಿಕೆ ಬೆಳೆಗಳನ್ನಲ್ಲದೆ ಕಡಿಮೆ ಅವಧಿಯಲ್ಲಿ ಇಳುವರಿ ನೀಡುವ ತರಕಾರಿ ಬೆಳೆಗಳು, ದವಸಧಾನ್ಯ ಬೆಳೆಗಳು, ಎಣ್ಣೆಕಾಳು ಬೆಳೆಗಳು, ಮೇವು ಬೆಳೆಗಳು ಮತ್ತು ಸುಗಂಧದ್ರವ್ಯ ಹಾಹೂ ಒಔಷಧಿಯ ಬೆಳೆಗಳು ಸಹ ಅಂತರ / ಮಿಶ್ರ ಬೆಳೆಯಾಗಿ ಸ್ಥಳೀಯ ಮಣ್ಣು ಹಾಗೂ ನೀರು ಲಭ್ಯತೆ ಮತ್ತು ಮಾರುಕಟ್ಟೆ ಬೇಡಿಕೆಯ ಆಧಾರದ ಮೇಲೆ ಬೆಳೆಯಬಹುದಾಗಿದೆ. ಕೆಲವೂಂದು ತೋಟಗಾರಿಕೆ ಬೆಳೆಗಳು ಪದ್ಧತಿಗಳು ಈ ಕೆಳಕಂಡಂತಿವೆ.

 

  1. ಮಾವು+ಸೀಬೆ/ಸೀತಾಫಲ ಮತ್ತು ಅಂತರ ಬೆಳೆಗಳಾಗಿ ದವಸಧಾನ್ಯದ ಬೆಳೆಗಳು ಇಲ್ಲವೇ ಬೇಳೆಕಾಳು ಬೆಳೆಗಳು ಅಥವಾ ಎಣ್ಣೆಕಾಳು ಬೆಳೆಗಳು (ಪ್ರಾರಂಭದ 6 ರಿಂದ 8 ವರ್ಷಗಳವರೆಗೆ).
  2. ಸಪೋಟ+ಸೀಬೆ/ಅಂಜೂರ ಮತ್ತು ಅಂತರ ಬೆಳೆಗಳಾಗಿ ಹುಲ್ಲು/ದವಸ ಧಾನ್ಯಗಳು/ಬೇಳೆಕಾಳುಗಳು/ಎಣ್ಣೆ ಕಾಳುಗಳು.
  3. ಹುಣಸೆ/ಹಲಸು ಮತ್ತು ಅಂತರ ಬೆಳೆಗಳಾಗಿ ಬೇಳೆ ಕಾಳುಗಳು ಅಥವಾ ದವಸ ಧಾನ್ಯಗಳು ಅಥವಾ ಎಣ್ಣೆಕಾಳುಗಳು.
  4. ಮಾವು/ಸಪೋಟ/ಹುಣಸೆ ಮತ್ತು ಮಳೆ ಆಧಾರಿತ ತರಕಾರಿಗಳು, ಸುಗಂಧ ಸಸ್ಯಗಳು ಅಥವಾ ಔಷಧೀಯ ಬೆಳೆಗಳು.

 

ತೋಟಗಾರಿಕೆ ಬೆಳೆಗಳ ಜೀವ ವೈವಿಧ್ಯತೆ ಯೋಜನೆ:

ತೋಟಗಾರಿಕೆ ಬೆಳೆಗಳ ಜೀವ ವೈವಿಧ್ಯತೆಯ ಮಹತ್ವದ ಬಗ್ಗೆ ರೈತರಲ್ಲಿ ಮನವರಿಕೆ ಮಾಡಬೇಕು ಹಾಗು ಉಪಜಲಾನಯನವಾರು ಪ್ರತ್ಯೇಕವಾಗಿ ಜೀವ ವ್ಯವಿಧ್ಯತೆಗೆ ಒತ್ತುಕೊಟ್ಟು ಕಾರ್ಯಕ್ರಮಗಳನ್ನು ಅಳವಡಿಸುವುದು. ನಿರ್ದಿಷ್ಟ ಪ್ರದೇಶದಲ್ಲಿ ಒಂದೇ ಬೆಳೆಯನ್ನು ಅಳವಡಿಸುವುದಕ್ಕಿಂತ ಮಾರುಕಟ್ಟೆ ಬೇಡಿಕೆ ಇರುವ ತಾಂತ್ರಿಕ ಸೂಕ್ತತೆಗೆ ಅನುಸಾರ ಮೂರು ಅಥವಾ ನಾಲ್ಕು ಬೆಳೆಗಳನ್ನು ಉಪಚಾರದಲ್ಲಿ ಅಳವಡಿಸುವುದು. ಬೆಳೆಗಳ ತಳಿಗಳನ್ನು ಆಯ್ಕೆ ಮಾಡುವಾಗಲು ಸಹ ಬೆಳೆಯ ವಿವಿಧ ತಳಿಗಳನ್ನು ಅಳವಡಿಸುವುದು. ಉದಾಹರಣೆಗೆ ಮಾವು ಬೆಳೆಯಲ್ಲಿ ವಿವಿಧ ಮಾಹೆಯಲ್ಲಿ ಕೊಯ್ಲಿಗೆ ಬರುವ ತಳಿಗಳನ್ನು ಅಳವಡಿಸುವುದು.

ಜೀವ ವೈವಿಧ್ಯತೆ ಯೋಜನೆ ತಯಾರಿಸುವಾಗ ಉಪ ಜಲಾನಯನ ಪ್ರದೇಶಗಳಲ್ಲಿರುವ ವಿವಿಧ ಜಾತಿಯ ತೋಟಗಾರಿಕೆ ಬೆಳೆಗಳು ಮತ್ತು ಅವುಗಳ ತಳಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಆ ಪ್ರದೇಶದ ತೋಟಗಾರಿಕಾ ಬೆಳೆಗಳ ಜೀವ ವೈವಿಧ್ಯತೆ ಸೂಚ್ಯಾಂಕವನ್ನು ಹಾಕಬೇಕು.

ಕ್ಷೇತ್ರ ಮಟ್ಟದ ನಿರ್ವಹಣೆ

ಕ್ಷೇತ್ರ ಮಟ್ಟದ ನಿರ್ವಹಣೆಯು ಪ್ರಮುಖ ಅಂಶವಾಗಿರುತ್ತದೆ. ಇದರಿಂದ ಗಿಡಗಳ ಬದುಕುವಿಕೆ ಬೆಳವಣಿಗೆಗೆ ಸಹಾಯವಾಗುತ್ತದೆ. ಆದುದರಿಂದ ಕ್ಷೇತ್ರ ಮಟ್ಟದಲ್ಲಿ ಈ ಕೆಳಕಂಡ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

 

  1. ಮಣ್ಣು ಮತ್ತು ನೀರಿನ ಪರೀಕ್ಷೆ ಮತ್ತು ವಿಶ್ಲೇಷಣೆ ಆಧಾರದ ಮೇಲೆ ಬೆಳೆ / ತಳಿಗಳ ಆಯ್ಕೆ.
  2. ಸೂಕ್ತ ರೀತಿಯ ಪೂರ್ವಭಾವಿ ಭೂಮಿ ತಯಾರಿಕೆ.
  3. ಸುಧಾರಿತ ವಿನ್ಯಾಸದ ಪ್ರಕಾರ ಗಿಡಗಳ ನಾಟಿ.
  4. ಅಂತರ ಮತ್ತು ಮಿಶ್ರ ಬೆಳೆಗಳ ಹೊಂದಾಣಿಕೆ.
  5. ಸೂಕ್ತ ನೀರೊದಗಿಸುವಿಕೆ ಮತ್ತು ತೇವಾಂಶ ಸಂರಕ್ಷಣೆ.
  6. ಗಿಡಗಳ ಮರುನಾಟಿ ಮತ್ತು ಗಿಡ ಹಾಗೂ ತೋಟಗಳ ರಕ್ಷಣೆ.

 

ನೀರು ಸಂಗ್ರಹಣಾ ವಿನ್ಯಾಸಗಳ ಸುತ್ತ ತೋಟಗಾರಿಕೆ ಸಸಿ ಬೆಳೆಸುವಿಕೆ :

ನೀರು ಸಂಗ್ರಹಣಾ ವಿನ್ಯಾಸಗಳು ಅಂತರ ಜಲ ಹೆಚ್ಚಿಸುವ ಮೂಲಗಳಾಗಿರುತ್ತವೆ. ನೀರು ಸಂಗ್ರಹಣಾ ವಿನ್ಯಾಸಗಳಲ್ಲಿ ಮಳೆಗಾಲದಲ್ಲಿ ಮಳೆಯ ನೀರು ಸಂಗ್ರಹವಾಗುವುದು ಸರಿಯಷ್ಟೆ. ಸದರಿ ನೀರನ್ನು ಸದ್ಭಳಕೆ ಮಾಡಿಕೊಂಡು ಕಡಿಮೆ ಅವಧಿಯ ತೋಟಗಾರಿಕಾ ಬೆಳೆಗಳನ್ನು ಬೆಳೆದು ಅಲ್ಪಸ್ವಲ್ಪ ಆದಾಯಗಳಿಸಬಹುದಾಗಿದೆ. ಕೃಷಿ ಹೊಂಡಗಳ ಸುತ್ತ ಸ್ಥಿರ ನೀರಿನ/ಮಣ್ಣಿನ ತೇವಾಂಶ ಲಭ್ಯತೆ ಮೇರೆಗೆ ಹೆಚ್ಚಿನ ಆಳಿಕ್ಕೆ ಬೇರು ಬಿಡದ ತೋಟಗಾರಿಕಾ ಬೆಳೆಗಳಾದ ಹಣ್ಣು ಮತ್ತು ತರಕಾರಿಗಳನ್ನು ಬೆಳೆಸಬಹುದಾಗಿದೆ. ಇದರಿಂದ ಕುಟುಂಬದ ತೋಟಗಾರಿಕಾ ಬೆಳೆಗಳಾದ ಹಣ್ಣು ಮತ್ತು ತರಕಾರಿಗಳನ್ನು ಬೆಳೆಸಬಹುದಾಗಿದೆ. ಇದರಿಂದ ಕುಟುಂಬದ ಸದಸ್ಯರಿಗೆ ಪೌಷ್ಟಿಕ ಆಹಾರದ ಕೊರತೆ ನೀಗಿಸುವುದಲ್ಲದೆ ಉಳಿಯುವ ಪದಾರ್ಥಗಳನ್ನು ಸ್ಥಳೀಯವಾಗಿ ಮಾರಾಟ ಮಾಡಬಹುದಾಗಿದೆ. ತರಕಾರಿ ಬೆಳೆಗಳಲ್ಲಿ ಪ್ರಮುಖವಾಗಿ ಸೊಪ್ಪು ಜಾತಿಯ ತರಕಾರಿಗಳು, ಬೀನ್ಸ್, ನುಗ್ಗೆ, ಕರಿಬೇವು, ಅವರೆ, ತೊಗರಿಕಾಯಿ, ಗೋರಿಕಾಯಿ, ಕುಂಬಳ, ಸೌತೆಕಾಯಿ, ಟೋಮಾಟೋ, ಮೆಣಸಿನಕಾಯಿಗಳನ್ನು ಬೆಳೆಯಬಹುದಾಗಿದೆ. ಇವುಗಳನ್ನು ಮನೆಯಂಗಳ ಮತ್ತು ಶಾಲಾ ಅಂಗಳ ಕೈತೋಟ ಹಾಗೂ ತರಕಾರಿ ಕಿರು ಚೀಲ ವಿತರಣಾ ಕಾರ್ಯಕ್ರಮದಡಿಯಲ್ಲಿನ ಮಾರ್ಗಸೂಚಿಯಂತೆ ಅನುಷ್ಟಾನಗೊಳಿಸಬಹುದಾಗಿದೆ.

ಅನುಷ್ಟಾನ ಕ್ರಿಯೆಗಳು

ತೋಟಗಾರಿಕಾ ಕಾರ್ಯಕ್ರಮಗಳು ಋತುಮಾನ ಆಧಾರಿತ ಕಾರ್ಯಕ್ರಮವಾಗಿರುತ್ತವೆ. ಆಯಾ ಋತುಮಾನಗಳಲ್ಲಿ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಟಾನಗೊಳಿಸಬೇಕಾಗಿರುತ್ತದೆ. ಇದರಿಂದ ಇಲಾಖಾ ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಅನುಷ್ಟಾನಗೊಳಿಸಿ ಗುಣಮಟ್ಟ ಕಾಪಾಡಬಹುದಾಗಿದೆ. ಮಾಹೆಯಾನ ತೋಟಗಾರಿಕಾ ಚಟುವಟಿಕೆಗಳ ಅನುಷ್ಟಾನ ಕ್ರಿಯೆಗಳನ್ನು ಈ ಕೆಳಕಂಡಂತೆ ಅಳವಡಿಸಿಕೊಳ್ಳುವುದು.

ಜನವರಿ

ಫೆಬ್ರವರಿ

ಮಾರ್ಚ್

  1. ಕ್ಷೇತ್ರ ಸಮೀಕ್ಷೆ ಹಾಗೂ ತಾಂತ್ರಿಕ ವಿಶ್ಲೇಷಣೆ
  2. ಫಲಾನುಭವಿಗಳ ಆಯ್ಕೆ ನಿರ್ಧಾರಗಳು
  3. ಫಲಾನುಭವಿಗಳ ತೋಟದ ಮಣ್ಣು ಮತ್ತು ನೀರಿನ ಪರೀಕ್ಷೆ ಹಾಗೂ ವಿಶ್ಲೇಷಣಾ ಆಧಾರದ ಮೇಲೆ ಬೆಳೆ/ತಳಿಗಳ ಆಯ್ಕೆ.
  4. ಗಿಡಗಳ ಬೇಡಿಕೆ ಕ್ರೂಢೀಕರಣ - ಬೆಳೆ ತಳಿಗಳ ನಿರ್ಧಾರ.
  5. ಭೂಮಿ ಸಿದ್ದತೆ/ವಿನ್ಯಾಸ ನೀಡುವಿಕೆ, ಗುಂಡಿ ತೆಗೆಯುವ ಕಾರ್ಯಗಳು
  6. ಗ್ರಾಮ ಪಂಚಾಯಿತಿ ಉಪ ಸಮಿತಿ ವತಿಯಿಂದ ಉತ್ತಮ ಗಿಡಗಳ ಮೂಲದ ಆಯ್ಕೆ ಮತ್ತು ಕಾಯ್ದಿರುಸುವಿಕೆ.
  • ಬಾಹ್ಯಕಾಶ ತಾಂತ್ರಿಕ ನಕ್ಷೆಗಳ (ಉIS) ಆಧರಿತ ಸಮಗ್ರ ಉಪಚಾರಗಳ ರೂಪಣೆ.
  • ರೈತ ಸಮೂಹಗಳಿಗೆ ತರಬೇತಿ ಮತ್ತು ತಿಳುವಳಿಕೆ ಕಾರ್ಯಕ್ರಮಗಳು.
  • ಏಪ್ರಿಲ್

    ಮೇ

    ಜೂನ್

    ಜುಲೈ

    ಆಗಸ್ಟ್

    1. ಅಂದಾಜು ಪತ್ರಿಕೆಗಳ ತಯಾರಿಕೆ
    2. ಮಂಜೂರಾತಿ ಪ್ರಕ್ರಿಯೆಗಳ ಪೂರ್ಣಗೊಳಿಸುವಿಕೆ.
    3. ತಾಲ್ಲೂಕು / ಜಿಲ್ಲಾ ಹಂತದಲ್ಲಿ ಸಮಗ್ರ ಉಪಚಾರದ ಕ್ರಿಯಾ ಯೋಜನೆಗಳ ಮಂಡನೆ ಹಾಗೂ ಸುಧಾರಣಾ ಕ್ರಮಗಳ ಅಳವಡಿಕೆ.
    4. ಪೂರ್ವಭಾವಿಯಾಗಿ ಗುರುತಿಸಲಾದ ಗಿಡಗಳ ಸಾಗಾಣಿಕೆ.
    5. ಗಿಡಗಳ ನೆಡುಸುವಿಕೆ.
    6. ಪಾಲನೆ ಮತ್ತು ಹೆಚ್ಚಿನ ಬದುಕುಳಿಯುವಿಕೆ ಬಗ್ಗೆ ರೈತರೊಂದಿಗೆ ಗುಂಪು ಚರ್ಚೆ ಮತ್ತು ತಿಳುವಳಿಕೆ ನೀಡುವ ಕ್ರಮಗಳು.
    7. ಪೌಷ್ಟಿಕಾಂಶ ತೋಟಗಳ ಅನುಷ್ಟಾನ.

    ಸೆಪ್ಟೆಂಬರ್

    ಅಕ್ಟೋಬರ್

    ನವೆಂಬರ್

    ಡಿಸೆಂಬರ್

    1. ಬದುಕುಳಿದ ಗಿಡಗಳ ಸಮೀಕ್ಷೆ ಮತ್ತು ಗಿಡಗಳ ಬೇಡಿಕೆ ಕ್ರೋಡೀಕರಣ
    2. ಲೆಕ್ಕ ಪತ್ರಗಳ ಕ್ರೂಢೀಕರಣ.
    3. ಕ್ಷೇತ್ರ ದಾಖಲಾತಿಗಳ ಅಂತಿಮಗೊಳಿಸುವಿಕೆ.
    4. ಪ್ರಗತಿ ಮೌಲ್ಯಮಾಪನ.
    5. ಸಿಬ್ಬಂದಿ ತರಬೇತಿ ಕ್ಷೇತ್ರ ಭೇಟಿ / ಪ್ರಗತಿ ವಿಮರ್ಶೆ, ಯಶೋಗಾಥೆಗಳ ವರದಿ.
    6. ಮಹಾ ಕ್ರಿಯಾ ಯೋಜನೆಗಳ ಪ್ರಕಾರ ಅನುಷ್ಟಾನ ಪೂರಕ ಸಿದ್ಧತೆಗಳು ಹಾಗೂ ಸುಧಾರಣಾ ಕ್ರಮಗಳು.

    ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

    ಕೊನೆಯ ಮಾರ್ಪಾಟು : 7/2/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate