অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಿಂಗಾರು ಹವಾಮಾನದ ವಿಮೆ

ಈ ಪಾಲಸಿಯ ಮುಖ್ಯ ಲಕ್ಷಣಗಳು

  1. ಡಿಸೆಂಬರ್ ಮತ್ತು ಏಪ್ರಿಲ್ ತಿಗಳುಗಲ ನಡುವಿನ ಹವಾಮಾನದ ವ್ಯತಿರಿಕ್ತ ಬದಲಾವಣೆಯ ಸಂದರ್ಭಗಳಾದ ಹಿಮ, ಉಷ್ಣ, ತುಲನಾತ್ಮಕ ತೇವಾಂಶ , ಮಳೆ ವಿರುದ್ಧ ಭದ್ರತೆ ಒದಗಿಸುತ್ತದೆ
  2. ಗೋಧಿ . ಆಲೂ ಗಡ್ಡೆ, ಬಾರ್ಲಿ, ದ್ವಿದಳಧಾನ್ಯಗಳು, ಸಾಸಿವೆ ಇತ್ಯಾದಿಗಳಿಗೆ ಬೆಳೆ ವಿಮೆ ನೀಡುವ ಸಾಮಾನ್ಯ ವಿಮಾ ಉತ್ಪನ್ನ..
  3. ಗರಿಷ್ಟ ಹೊಣೆಯು ಕೃಷಿ ವೆಚ್ಚದ ಮೇಲೆ ಅವಲಂಬಿಸಿರುವುದು ಮತ್ತು ಅದು ಬೆಳೆಯಿಂದ ಬೆಳೆಗೆ ಬದಲಾಗುತ್ತದೆ.
  4. ಕ್ಲೈಮುಗಳನ್ನು ಬೇಗ ಇತ್ಯರ್ಥ ವಾಗಲು ಅವಕಾಶ ನೀಡುವುದು. ವಿಮೆ ಅವಧಿಯ ನಂತರದ 4 – 6 ವಾರದ ಒಳಗೆ ಆಗುವುದು.

ಯು. ಪಿಎಂ .ಪಿ, ಮಹರಾಷ್ಟ್ರ ಮತ್ತು ರಾಜಾಸ್ಥಾನದಲ್ಲಿ ಗೋಧಿ, ಸಾಸಿವೆ, ಬೇಳೆಗಳು ಅಲೂಗಡ್ಡೆ ಬಾರ್ಲಿ ಮತ್ತು ಹವೀಜಗಳು ಹಿಂಗಾರಿ ಹಂಗಾಮಿನ ಪ್ರಮುಖ ಬೆಳೆಗಳು. ಇವು ಹವಾಮಾನದ ವೈಪರೀತ್ಯಗಳಾದ ಅತಿವೃಷ್ಟಿಯಿ0ದ ಬೇಗ ತೊಂದರೆಗೆ ಒಳಗಾಗುತ್ತವೆ

ಹವಾಮಾನ ವಿಮೆಯು( ಹಿಂಗಾರು) ವ್ಯತಿರಿಕ್ತ ಹವಾ ಮಾನದ ಪರಿಣಾಮವಾಗಿ ತೊಂದರೆಗೆ ಒಳಗಾಗುವ ವ್ಯಕ್ತಿಗತ ರೈತರು ಮತ್ತ ಸಂಸ್ಥೆಗಳಿಗೆ ಪರಿಣಾಮಕಾರಿಯಾದ ನಷ್ಟನಿರ್ವಹಣೆಯ ತಂತ್ರ ಒದಗಿಸುತ್ತದೆ.ಹವಾಮಾನ ಸೂಚಿ ವಿಮೆಯ ಅತಿ ಮುಖ್ಯ ಅನುಕೂಲಗಳು ಹೀಗಿವೆ :

  1. ಹವಾಮಾನ ವೈಪರೀತ್ಯದಂತಹ ಕ್ರಿಯಾ ಘಟನೆಗಳನ್ನು ಸ್ವತಂತ್ರವಾಗಿ ಪರಿಶಿಲನೆ ಮಾಡಿ ಅಳೆಯಬಹದು.
  2. ವಿಮೆ ಅವಧಿ ಮುಗಿದ ೧೫ ದಿನದೊಳಗೆ ವೇಗವಾಗಿ ನಷ್ಟ ಪರಿಹಾರದ ಇತ್ಯರ್ಥ ಮಾಡಲು ಸಹಾಯ ವಾಗುವುದು.
  3. ಎಲ್ಲ ಬೆಳೆಗಾರರು ( ಸಣ್ಣ/ ಅತಿಸಣ್ಣ, ಮಾಲಕರು, ಗುತ್ತಿಗೆ ಮಾಡುವರು, ಹ0ಚಿಕೆ ಬೆಳೆಗಾರರು) ವಿಮೆ ಪಡೆಯಬಹುದು

ವ್ಯಾಪ್ತಿ

ಅಗ್ರಿ ಕಲ್ಚರ್ ಇನಸ್ಯುರೆನ್ಸ ಕಂಪನೆ ಇಂಡಿಯಾ ಲಿ.(ಎ ಐಸಿ) ವಿಮದಾರರಿಗೆ ಒದಗಬಹುದಾದ ನಷ್ಟದ ಪರಿಹಾರ ಕೊಡುವುದು. ಬೆಳೆ ಇಳುವರಿ ನಷ್ಟವು ಸಾಮಾನ್ಯ ಕ್ರಿಯಾ ಮಟ್ಟಕ್ಕಿಂತ ವ್ಯತ್ಯಾಸವಾದಾಗ ಹೆಚ್ಚಾದ ಗರಿಷ್ಟ ಉಷ್ಣತೆ (° C) ಅಥವ ಟ್ರಿಗರ್ ಮಟ್ಟಕ್ಕಿಂತ ಕಡಿಮೆಯಾದ ಕನಿಷ್ಡ ಉಷ್ಣತೆ (° C) ಅಥವ 4 ° C ಗಿಂತ ಕಡಿಮೆ ಉಷ್ನತೆಇದ್ದರೆ / ಅಥವ ಅತಿವೃಷ್ಟಿಯು ಟ್ರಿಗರ್ ಮಟ್ಟಕ್ಕಿಂತ ಹೆಚ್ಚಾದರೆ( ದೈನಂದಿನ, ಸಪ್ತಾಹಿತ ಮತ್ತು ಮಾಸಿಕವಾಗಿ ಲೆಕ್ಕಹಾಕಲಾಗುವುದು) ನಷ್ಟ ಪರಿಹಾರಕ್ಕೆ ಅರ್ಹವಾಗುತ್ತವೆ.

ವಿಮೆಯ ಅವಧಿ

ವಿಮೆಯು ಡಿಸೆಂಬರ್ ನಿಂದ ಏಪ್ರಿಲ್ ವರೆಗೆ ಜಾರಿಯಲ್ಲಿರುವುದು. ಆದರೂ ಈ ಅವಧಿಯು ಬೇರೆ ಬೇರೆ ಬೆಳೆಗಳಿಗೆ ಸಂದರ್ಭಾನುಸಾರ ವಿಭಿನ್ನವಾಗಿರಬಹುದು

ಕ್ಲೈಮು ಪ್ರಕ್ರಿಯೆ: ಸೂಚನೆ

ಕ್ಲೈಮುಗಳನ್ನು ಗಣಕೀಕೃತಗೊಳಿಸಲಾಗಿದೆ. ಅವನ್ನು, ವಾಸ್ತವವಾದ ಗರಿಷ್ಟ ಉಷ್ಣತೆ, ಕನಿಷ್ಟ ಉಷ್ಣತೆ, ಮಳೆ ದಾಖಲೆಯನ್ನು ಮತ್ತು ಸಂಬಂಧಿಸಿದ ಎಜನ್ಸಿ ಅಥವ ಸಂಸ್ಥೆಯಿಂದ ಪಡೆದ ಪ್ರತಿ ಬೆಳೆಗೆ ಪ್ರತ್ಯೇಕವಾಗಿ ಪಡೆದ ಬಿ ಎಸ್ ಎಚ್ ಗಳ ಆಧಾರದ ಮೇಲೆ ಇತ್ಯರ್ಥ ಮಾಡಲಾಗುವುದು. ಕ್ಲೈಮುಗಳನ್ನು ಒಪ್ಪಿ ಹಣ ನೀಡಬೇಕಾದಾಗ. ಆ ಪ್ರದೇಶದ ಎಲ್ಲ ವಿಮೆ ಮಾಡಿದ ಬೆಳೆಗಾರರಿಗೆ( ಹವಾಮಾನದ ಸ್ಟೇಷನ್ ವ್ಯಾಪ್ತಿಗೆ ಉಲ್ಲೇಖಕ್ಕೆ ಅನುಸಾರವಾಗಿ) ಸಮನಾದ ದರದಲ್ಲಿ ಕೊಡಲಾಗುವುದು.

ಸೂಚನೆ: ಈ ಮೇಲಿನ ವಿವರಗಳು ಮಾಹಿತಿಗಾಗಿ ಮಾತ್ರ, ನೈಜವಾದ ವಿಮಾ ಯೋಜನೆಯ ವಿವರವನ್ನು ಅಕ್ಷರಶಃ ಸರಿಯಾಗಿರದಿರಬಹುದು .

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate