অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕ ದನಗಳ ಅತಿಕ್ರಮ ಪ್ರವೇಶ ಅಧಿನಿಯಮ

ಕರ್ನಾಟಕ ದನಗಳ ಅತಿಕ್ರಮ ಪ್ರವೇಶ ಅಧಿನಿಯಮ

  1. ಉದ್ದೇಶ ಮತ್ತು ಕಾರಣಗಳ ಹೇಳಿಕೆ
  2. ಸಂಕ್ಷಿಪ್ತ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ
  3. ಪರಿಭಾಷೆಗಳು
  4. ದೊಡ್ಡಿಗಳ ಸ್ಧಾಪನೆ
  5. ದೊಡ್ಡಿಗಳ ನಿಯಂತ್ರಣ ಮತ್ತು ದನಗಳಿಗೆ ಆಹಾರ ಮತ್ತು ನೀರು ಕೊಡುವ ಸಲುವಾಗಿ ಖರ್ಚು
  6. ದೊಡ್ಡಿ-ಪಾಲಕರ ನೇಮಕ
  7. ದೊಡ್ಡಿ-ಪಾಲಕರ ಕರ್ತವ್ಯಗಳು
  8. ಜಮೀನಿಗೆ ಹಾನಿಯುಂಟು ಮಾಡುವ ದನಗಳನ್ನು ವಶಪಡಿಸಿಕೊಳ್ಳುವಿಕೆ
  9. ಸಾರ್ವಜನಿಕ ರಸ್ತೆಗಳು, ಕಾಲುವೆಗಳು, ಏರಿಗಳು, ಇತ್ಯಾದಿಗಳಿಗೆ ಹಾನಿಯುಂಟು ಮಾಡುವ ದನಗಳು
  10. ದೊಡ್ಡಿಗೆ ಹಾಕಲಾದ ದನಗಳ ಬಗ್ಗೆ ಜುಲ್ಮಾನೆಗಳು
  11. ಜುಲ್ಮಾನೆಗಳ ಮತ್ತು ಮೇವಿನ ಖರ್ಚುಗಳ ಪಟ್ಟಿ
  12. ಒಡೆಯನು ದನವನ್ನು ಕ್ಲೇಮು ಮಾಡಿದಾಗ ಮತ್ತು ಜುಲ್ಮಾನೆಗಳನ್ನು ಹಾಗೂ ಖರ್ಚುಗಳನ್ನು
  13. ದೊಡ್ಡಿಗೆ ಹಾಕಲಾದ ದನಗಳ ಬಗ್ಗೆ ಭದ್ರತೆ
  14. ನಿರ್ದಿಷ್ಟ ಸ್ಧಳಗಳಿಗೆ ದನಗಳನ್ನು ಸಾಗಿಸುವುದು
  15. ಏಳು ದಿನಗಳೊಳಗಾಗಿ ದನಗಳನ್ನು ಕ್ಲೇಮು ಮಾಡದಿದ್ದಲ್ಲಿ ಪ್ರಕ್ರಿಯೆ
  16. ವಶಪಡಿಸಿಕೊಳ್ಳುವಿಕೆಯ ಕಾನೂನು ಬದ್ಧತೆಯನ್ನು ವಿವಾದಿಸುವ ಆದರೆ ಠೇವಣಿ ಇಡುವ ಒಡೆಯನಿಗೆ ದನಗಳನ್ನು ವಾಪಸು ಮಾಡುವುದು.-
  17. ಜುಲ್ಮಾನೆಗಳನ್ನು ಮತ್ತು ಖರ್ಚುಗಳನ್ನು ಸಂದಾಯಮಾಡಲು ಒಡೆಯನು ನಿರಾಕರಿಸಿದಾಗ ಅಥವಾ ತಪ್ಪಿದಾಗ ಪ್ರಕ್ರಿಯೆ
  18. ಜುಲ್ಮಾನೆಗಳ, ಖರ್ಚುಗಳ ಮತ್ತು ಮಾರಾಟದ ಹೆಚ್ಚುವರಿ ಉತ್ಪತ್ತಿಯ ವಿಲೇವಾರಿ.-
  19. ಅಧಿಕಾರಿಗಳು ಮತ್ತು ದೊಡ್ಡಿ- ಪಾಲಕರು ಈ ಅಧಿನಿಯಮದ ಮೇರೆಗಿನ ಮಾರಾಟಗಳಲ್ಲಿ ದನಗಳನ್ನು
  20. ಫಿರ್ಯಾದುಗಳನ್ನು ಸಲ್ಲಿಸಲು ಅಧಿಕಾರ
  21. ಫಿರ್ಯಾದಿನ ಬಗ್ಗೆ ಪ್ರಕ್ರಿಯೆ
  22. ಕಾನೂನು ವಿರುದ್ಧ ವಶಪಡಿಸಿಕೊಳ್ಳುವಿಕೆಯ ಬಗ್ಗೆ ಪರಿಹಾರ
  23. ಪರಿಹಾರದ ವಸೂಲಿ
  24. ದನಗಳ ವಶಪಡಿಸಿಕೊಳ್ಳುವಿಕೆಯನ್ನು ಬಲಾತ್ಕಾರವಾಗಿ ವಿರೋಧಿಸುವ ಅಥವಾ ಇವುಗಳನ್ನು ಪಾರುಮಾಡುವ ಬಗ್ಗೆ ದಂಡ
  25. ದನಗಳಿಂದ ಜಮೀನಿಗೆ ಅಥವಾ ಬೆಳೆಗಳಿಗೆ ಅಥವಾ ಸಾರ್ವಜನಿಕ ರಸ್ತೆಗಳಿಗೆ ಆದ ಹಾನಿಯ ಬಗ್ಗೆ ದಂಡ
  26. ದನಗಳು ಅತಿಕ್ರಮ ಪ್ರವೇಶ ಮಾಡುವಂತೆ ಮಾಡಿ ಉಂಟಾದ ಕೇಡಿಗಾಗಿ ದಂಡದ ವಸೂಲಿ
  27. ಕರ್ತವ್ಯಗಳನ್ನು ನಿರ್ವಹಿಸಲು ತಪ್ಪುವ ದೊಡ್ಡಿ-ಪಾಲಕರಿಗೆ ದಂಡ
  28. 25ನೆಯ, 26ನೆಯ ಅಥವಾ 27ನೆಯ ಪ್ರಕರಣಗಳ ಮೇರೆಗೆ ವಸೂಲು ಮಾಡಿದ ಜುಲ್ಮಾನೆಗಳ ವಿನಿಯೋಗ
  29. ಪರಿಹಾರಕ್ಕಾಗಿ ದಾವೆ ಹೂಡುವ ಅಧಿಕಾರದ ಉಳಿಸುವಿಕೆ
  30. ಈ ಅಧಿನಿಯಮದ ಮೇರೆಗಿನ ಅಧಿಕಾರಗಳನ್ನು ಚಲಾಯಿಸಲು ಸ್ಧಳಿಯ ಪ್ರಾಧಿಕಾರಗಳನ್ನು
  31. ನಿಯಮಗಳನ್ನು ರಚಿಸಲು ಅಧಿಕಾರ
  32. ಅಧಿಸೂಚನೆಗಳನ್ನು ಮತ್ತು ನಿಯಮಗಳನ್ನು ರಾಜ್ಯವಿಧಾನ ಮಂಡಲದ ಮುಂದೆ ಮಂಡಿಸುವುದು
  33. ನಿರಸನ ಮತ್ತು ಉಳಿಸುವಿಕೆಗಳು
  34. ಶೀರ್ಷಿಕೆ ಮತ್ತು ಪ್ರಾರಂಭ
  35. ಪರಿಭಾಷೆಗಳು
  36. ದೊಡ್ಡಿ-ಪಾಲಕನು ಇಡಬೇಕಾದ ರಿಜಿಸ್ಟರುಗಳು ಮತ್ತು ಸಲ್ಲಿಸಬೇಕಾದ ವಿವರಪಟ್ಟಿಕೆಗಳು
  37. ದನಗಳನ್ನು ದೊಡ್ಡಿಗೆ ತಂದಾಗ ಅನುಸರಿಸಬೇಕಾದ ಪ್ರಕ್ರಿಯೆ
  38. ವಸೂಲು ಮಾಡಲಾದ ಜುಲ್ಮಾನೆಯ ಹಣವನ್ನು ಖಜಾನೆಗೆ ಕಟ್ಟುವ ವಿಧಾನ
  39. ದನಗಳ ಒಡೆತನಕ್ಕೆ ಸಂಬಂಧಿಸಿದ ಘೋಷಣೆ
  40. ಭದ್ರತಾ ಹಣವನ್ನು ಠೇವಣಿಯಾಗಿಡುವುದು ಮತ್ತು ಮುಟ್ಟುಗೋಲು ಹಾಕಿಕೊಳ್ಳುವುದು
  41. ಠೇವಣಿ ಇಡುವುದು, ಅದರ ಅಭಿರಕ್ಷೆ ಮತ್ತು ಅದರ ಮರುಪಾವತಿಗೆ ಸಂಬಂಧಿಸಿದ ಪ್ರಕ್ರಿಯೆ
  42. ದನವನ್ನು ವಿಲೇವಾರಿ ಮಾಡುವ ವಿಧಾನ
  43. ನಿರಸನ ಮತ್ತು ಉಳಿಸುವಿಕೆಗಳು

ಉದ್ದೇಶ ಮತ್ತು ಕಾರಣಗಳ ಹೇಳಿಕೆ

  • 1966ರ ಅಧಿನಿಯಮ 19.- ಪ್ರಸ್ತುತ, ಮೈಸೂರು ರಾಜ್ಯದ ಹಲವಾರು ಪ್ರದೇಶಗಳಲ್ಲಿ ಭೂಮಿಗೆ ಅಥವಾ
  • ಇತರ ಸ್ವತ್ತಿಗೆ ಹಾನಿಯುಂಟು ಮಾಡುವ ದನಗಳನ್ನು ದೊಡ್ಡಿಗೆ ಹಾಕುವುದಕ್ಕೆ ಮತ್ತು ಅದಕ್ಕೆ ಸಂಬಂಧಿಸಿದ
  • ವಿಷಯಗಳಿಗೆ ಉಪಬಂಧ ಕಲ್ಪಿಸುವ ದನಗಳ ಅತಿಕ್ರಮ ಪ್ರವೇಶಗಳಿಗೆ ಸಂಬಂಧಿಸಿದ ವಿವಿಧ ರೀತಿಯ
  • ಅಧಿನಿಯಮಗಳು ಜಾರಿಯಲ್ಲಿವೆ. ಈ ವಿಷಯದ ಮೇಲೆ ಇಡೀ ಮೈಸೂರು ರಾಜ್ಯಕ್ಕೆ ಅನ್ವಯವಾಗುವಂತೆ
  • ಏಕರೂಪದ ಶಾಸನವನ್ನು ಹೊಂದಬೇಕೆಂದು ಪ್ರಸ್ತಾವಿಸಲಾಗಿದೆ.
  • ಆದ್ದರಿಂದ ಈ ವಿಧೇಯಕ.
  • ಸಂಬಂಧಪಟ್ಟ ಕಡತದಿಂದ ಪಡೆಯಲಾಗಿದೆ. (ಅಧಿಸೂಚನೆ ಸಂಖ್ಯೆ 811-ಎಲ್.ಸಿ. ದಿನಾಂಕ 22.8.1960)
  • 1966ರ [ಕರ್ನಾಟಕ] ಅಧಿನಿಯಮ ಸಂಖ್ಯೆ 19
  • (1966ರ ಮೇ ಇಪ್ಪತ್ತಾರನೆಯ ದಿನಾಂಕದಂದು ಕರ್ನಾಟಕ ರಾಜ್ಯಪತ್ರದಲ್ಲಿ ಮೊದಲು ಪ್ರಕಟವಾಗಿದೆ)
  • [ಕರ್ನಾಟಕ]ದನಗಳ ಅತಿಕ್ರಮ ಪ್ರವೇಶ ಅಧಿನಿಯಮ, 1966
  • (1966ರ ಮೇ ಹದಿನೆಂಟನೆಯ ದಿನಾಂಕದಂದು ರಾಜ್ಯಪಾಲರ ಅನುಮತಿ ಪಡೆದಿದೆ)
  • ಭೂಮಿಗೆ ಅಥವಾ ಇತರ ಸ್ವತ್ತಿಗೆ ಹಾನಿಯುಂಟುಮಾಡುವ ದನಗಳನ್ನು ದೊಡ್ಡಿಗೆ ಹಾಕುವ ಬಗ್ಗೆ ಮತ್ತು
  • ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಪಬಂಧಿಸುವ ಅಧಿನಿಯಮ.
  • ಭೂಮಿಗೆ ಅಥವಾ ಇತರ ಸ್ವತ್ತಿಗೆ ಹಾನಿಯುಂಟುಮಾಡುವ ದನಗಳನ್ನು ದೊಡ್ಡಿಗೆ ಹಾಕುವ ಮತ್ತು ಅದಕ್ಕೆ
  • ಸಂಬಂಧಿಸಿದ ವಿಷಯಗಳ ಬಗ್ಗೆ ಉಪಬಂಧಿಸುವುದು ಯುಕ್ತವಾಗಿರುವುದರಿಂದ;
  • ಭಾರತ ಗಣರಾಜ್ಯದ ಹದಿನೇಳನೆಯ ವರ್ಷದಲ್ಲಿ [ಕರ್ನಾಟಕ] ರಾಜ್ಯ ವಿಧಾನ ಮಂಡಲದಿಂದ ಮುಂದೆ
  • ಹೇಳಿರುವಂತೆ ಅಧಿನಿಯಮಿಸಲಾಗಿದೆ:-
  • 1. ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶ, 1973ರ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

 

ಅಧ್ಯಾಯ -I ಪ್ರಾರಂಭಿಕ

 

ಸಂಕ್ಷಿಪ್ತ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ

  • (1) ಈ ಅಧಿನಿಯಮವನ್ನು  [ಕರ್ನಾಟಕ] ದನಗಳ ಅತಿಕ್ರಮ ಪ್ರವೇಶ ಅಧಿನಿಯಮ, 1966 ಎಂದು ಕರೆಯತಕ್ಕದ್ದು.
  • (2) ಇದು ಇಡೀ [ಕರ್ನಾಟಕ ರಾಜ್ಯಕ್ಕೆ] 1 ವ್ಯಾಪ್ತವಾಗತಕ್ಕದ್ದು.
  • (3) 33ನೇ ಪ್ರಕರಣದಿಂದ ನಿರಸನಗೊಳಿಸಲಾದ ಅಧಿನಿಯಮಗಳಲ್ಲಿ ಯಾವುದೇ ಅಧಿನಿಯಮವು
  • ಜಾರಿಯಲ್ಲಿರುವ ಪ್ರದೇಶಗಳಲ್ಲಿ ಇದು ಕೂಡಲೇ ಜಾರಿಯಲ್ಲಿ ಬರತಕ್ಕದ್ದು; ಮತ್ತು ರಾಜ್ಯ ಸರ್ಕಾರವು
  • ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದಂತಹ ದಿನಾಂಕದಂದು ಇತರ ಪ್ರದೇಶದಲ್ಲಿ ಜಾರಿಯಲ್ಲಿ
  • ಬರತಕ್ಕದ್ದು:
  • ಪರಂತು, ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ, ಅಂಥ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸ
  • ಬಹುದಾದಂಥ ದಿನಾಂಕದಿಂದ ಯಾವುದೇ ಪ್ರದೇಶದಲ್ಲಿ ಇದು ಜಾರಿಯಲ್ಲಿರುವುದು ನಿಂತುಹೋಗತಕ್ಕದ್ದೆಂದು
  • ನಿರ್ದೇಶಿಸಬಹುದು, ಮತ್ತು ಆ ಮೇಲೆ ಅಂಥ ಪ್ರದೇಶದಲ್ಲಿ ಈ ಅಧಿನಿಯಮವು ಸದರಿ ದಿನಾಂಕದಿಂದ [ಕರ್ನಾಟಕ] ಅಧಿನಿಯಮವೊಂದರಿಂದ ನಿರಸನಗೊಳಿಸಿದಿದ್ದರೆ ಹೇಗೋ ಹಾಗೆ ಕರ್ನಾಟಕ ಸಾಮಾನ್ಯ ಖಂ ಡಗಳ
  • ಅಧಿನಿಯಮ, 1899ರ (1899ರ [ಕರ್ನಾಟಕ] ಅಧಿನಿಯಮ III) 6ನೆಯ ಪ್ರಕರಣವು ಅನ್ವಯವಾಗತಕ್ಕದ್ದು.
  • 1. ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶ, 1973ರ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

 

ಪರಿಭಾಷೆಗಳು

ಈ ಅಧಿನಿಯಮದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

  • (ಎ) ''ದನಗಳು'' ಎಂಬುದರಲ್ಲಿ, ಆನೆಗಳು, ಒಂಟೆಗಳು, ಎಮ್ಮೆ-ಕೋಣಗಳು, ಕುದುರೆಗಳು, ಹೆಣ್ಣು
  • ಕುದುರೆಗಳು, ಬೀಜವೊಡೆದ ಕುದುರೆಗಳು, ಸಣ್ಣ ತಳಿಯ ಕುದುರೆಗಳು, ಕುದುರೆಯ ಗಂಡು ಮರಿಗಳು, ಕುದುರೆಯ
  • ಹೆಣ್ಣು ಮರಿಗಳು, ಹೇಸರಗತ್ತೆಗಳು, ಕತ್ತೆಗಳು, ಹಂದಿಗಳು, ಟಗರುಗಳು, ಹೆಣ್ಣುಕುರಿಗಳು, ಕುರಿಗಳು, ಕುರಿಮರಿಗಳು,
  • ಆಡುಗಳು ಮತ್ತು ಆಡಿನಮರಿಗಳು, ಇವು ಒಳಗೊಳ್ಳುತ್ತವೆ.
  • (ಬಿ) "ಜಿಲ್ಲಾ ದಂಡಾಧಿಕಾರಿ" ಎಂದರೆ ಜಿಲ್ಲಾ ದಂಡಾಧಿಕಾರಿಯ ಅಧಿಕಾರಗಳನ್ನು ಚಲಾಯಿಸುವ ಜಿಲ್ಲೆಯ
  • ಜಿಲ್ಲಾಧಿಕಾರಿ ಎಂದು ಅರ್ಥ.
  • (ಸಿ) "ಸ್ಧಳೀಯ ಪ್ರಾಧಿಕಾರ" ಎಂದರೆ ನಿರ್ದಿಷ್ಟಪಡಿಸಿದ ಸ್ಧಳೀಯ ಪ್ರದೇಶದೊಳಗೆ ಯಾವುವೇ ವಿಷಯಗಳ
  • ನಿಯಂತ್ರಣವನ್ನು ಮತ್ತು ನಿರ್ವಹಣೆಯನ್ನು ಕಾನೂನಿನ ಮೂಲಕ ತತ್ಕಾಲದಲ್ಲಿ ನಿಹಿತಗೊಳಿಸಲಾಗಿದ್ದ ಪೌರ ನಿಗಮ,
  • ಪೌರಸಮಿತಿ, ಅಧಿಸೂಚಿತ ಪ್ರದೇಶ ಸಮಿತಿ, ನೈರ್ಮಲ್ಯ ಮಂಡಲಿ, ದಂಡುಪ್ರದೇಶ ಮಂಡಲಿ ಅಥವಾ
  • ಗ್ರಾಮಪಂಚಾಯತಿ ಅಥವಾ ಪಟ್ಟಣ ಪಂಚಾಯತಿ ಎಂದು ಅರ್ಥ.
  • (ಡಿ) "ಸ್ಧಳೀಯ ನಿಧಿ" ಎಂದರೆ ಸ್ಧಳೀಯ ಪ್ರಾಧಿಕಾರದ ನಿಯಂತ್ರಣದಲ್ಲಿರುವ ಅಥವಾ
  • ನಿರ್ವಹಣೆಯಲ್ಲಿರುವ ಯಾವುದೇ ನಿಧಿ ಎಂದು ಅರ್ಥ;
  • (ಇ) "ಅಧಿಸೂಚನೆ" ಎಂದರೆ ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಲಾದ ಅಧಿಸೂಚನೆ;
  • (ಎಫ್) "ಪೊಲೀಸು ಅಧಿಕಾರಿ" ಎಂಬುದರಲ್ಲಿ, ಪೊಲೀಸು ಪಟೇಲನು ಮತ್ತು ಗ್ರಾಮ ಪೊಲೀಸು
  • ಒಳಗೊಳ್ಳುತ್ತಾರೆ;
  • (ಜಿ) "ಗೊತ್ತುಪಡಿಸಲಾದುದು" ಎಂದರೆ ಈ ಅಧಿನಿಯಮದ ಮೇರೆಗೆ ರಚಿತವಾದ ನಿಯಮಗಳ
  • ಮೂಲಕ ಗೊತ್ತುಪಡಿಸಲಾದುದು.

 

ಅಧ್ಯಾಯ - II ದೊಡ್ಡಿಗಳು ಮತ್ತು ದೊಡ್ಡಿ- ಪಾಲಕರು

ದೊಡ್ಡಿಗಳ ಸ್ಧಾಪನೆ

  • (1) ರಾಜ್ಯ ಸರ್ಕಾರದ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೊಳಪಟ್ಟು, ಜಿಲ್ಲಾ ದಂಡಾಧಿಕಾರಿಯು ಕಾಲಕಾಲಕ್ಕೆ ನಿರ್ದೇಶಿಸಬಹುದಾದಂಥ ಸ್ಧಳಗಳಲ್ಲಿ ದೊಡ್ಡಿಗಳನ್ನು ಸ್ಧಾಪಿಸತಕ್ಕದ್ದು.
  • (2) ಸ್ಧಾಪಿಸಲಾದ ಪ್ರತಿಯೊಂದು ದೊಡ್ಡಿಯ ಬಗ್ಗೆ ಜಿಲ್ಲಾ ದಂಡಾಧಿಕಾರಿಯು ಅಧಿಸೂಚನೆಯ ಮೂಲಕ,
  • ಅಂಥ ದೊಡ್ಡಿಯನ್ನು ಉಪಯೋಗಿಸಲು ಹಕ್ಕು ಹೊಂದಿರುವಂಥ ಗ್ರಾಮವನ್ನು ಅಥವಾ ಪ್ರದೇಶವನ್ನು, ಅಥವಾ
  • ಗ್ರಾಮಗಳನ್ನು ಅಥವಾ ಪ್ರದೇಶಗಳನ್ನು ನಿರ್ಧರಿಸತಕ್ಕದ್ದು.

 

ದೊಡ್ಡಿಗಳ ನಿಯಂತ್ರಣ ಮತ್ತು ದನಗಳಿಗೆ ಆಹಾರ ಮತ್ತು ನೀರು ಕೊಡುವ ಸಲುವಾಗಿ ಖರ್ಚು

  • 3ನೆಯ ಪ್ರಕರಣದ ಮೇರೆಗೆ ಸ್ಧಾಪಿಸಲಾದ ದೊಡ್ಡಿಗಳು ಜಿಲ್ಲಾ ದಂಡಾಧಿಕಾರಿಗಳ ನಿಯಂತ್ರಣದಲ್ಲಿ ಇರತಕ್ಕದ್ದು ಅವರು
  • ದೊಡ್ಡಿಗೆ ಹಾಕಿದ ದನಗಳಿಗೆ ಮೇವು ಮತ್ತು ನೀರು ಕೊಡುವ ಸಲುವಾಗಿನ ಖರ್ಚುಗಳ ದರಗಳನ್ನು ಕಾಲಕಾಲಕ್ಕೆ,
  • ಅಧಿಸೂಚನೆಯ ಮೂಲಕ ನಿಗದಿಪಡಿಸತಕ್ಕದ್ದು.

ದೊಡ್ಡಿ-ಪಾಲಕರ ನೇಮಕ

ದೊಡ್ಡಿಯನ್ನು ಉಪಯೋಗಿಸಲು 3ನೆಯ ಪ್ರಕರಣದ (2)ನೆಯ ಉಪಪ್ರಕರಣದ ಮೇರೆಗಿನ ಅಧಿಸೂಚನೆಯ ಪ್ರಕಾರ ಹಕ್ಕು ಹೊಂದಿರುವ ಗ್ರಾಮದ ಯಾವನೇ ಪೊಲೀಸು ಪಟೇಲನನ್ನು ಜಿಲ್ಲಾ ದಂಡಾಧಿಕಾರಿಯು ಅಂಥ ದೊಡ್ಡಿಯ ದೊಡ್ಡಿ-ಪಾಲಕನನ್ನಾಗಿ ನೇಮಿಸತಕ್ಕದ್ದು:  ಪರಂತು, ಜಿಲ್ಲಾ ದಂಡಾಧಿಕಾರಿಯು ಅವಶ್ಯಕವೆಂದು ಭಾವಿಸಿದಲ್ಲಿ ಅಂಥ ಪೊಲೀಸ್ ಪಟೇಲನನ್ನು

  • ಹೊರತುಪಡಿಸಿ ಬೇರೊಬ್ಬ ವ್ಯಕ್ತಿಯನ್ನು ಅಂಥ ದೊಡ್ಡಿಯ ದೊಡ್ಡಿ-ಪಾಲಕನನ್ನಾಗಿ ನೇಮಿಸತಕ್ಕದ್ದು.
  • (2) ಗ್ರಾಮ ಅಥವಾ ಗ್ರಾಮಗಳನ್ನು ಹೊರತುಪಡಿಸಿ ಯಾವುದೇ ಪ್ರದೇಶಕ್ಕಾಗಿ ಅಥವಾ ಪ್ರದೇಶಗಳಿಗಾಗಿ
  • ಸ್ಧಾಪಿಸಲಾದ ಯಾವುದೇ ದೊಡ್ಡಿಯ ಬಗ್ಗೆ ಜಿಲ್ಲಾ ದಂಡಾಧಿಕಾರಿಯು ಯೋಗ್ಯವೆಂದು ಭಾವಿಸುವಂಥ ವ್ಯಕ್ತಿಯನ್ನು
  • ದೊಡ್ಡಿಯ-ಪಾಲಕನನ್ನಾಗಿ ನೇಮಿಸತಕ್ಕದ್ದು.
  • (3) (1)ನೆಯ ಉಪಪ್ರಕರಣದ ಮೇರೆಗೆ ನೇಮಕಗೊಂಡ ಪ್ರತಿಯೊಬ್ಬ ದೊಡ್ಡಿ-ಪಾಲಕನನ್ನು ಭಾರತ ದಂಡ
  • ಸಂಹಿತೆಯ 21ನೆಯ ಪ್ರಕರಣದ ಅರ್ಥವ್ಯಾಪ್ತಿಯೊಳಗೆ ಲೋಕ ನೌಕರನೆಂದು ಭಾವಿಸತಕ್ಕದ್ದು.

ದೊಡ್ಡಿ-ಪಾಲಕರ ಕರ್ತವ್ಯಗಳು

  • (1) ಪ್ರತಿಯೊಬ್ಬ ದೊಡ್ಡಿ-ಪಾಲಕನು, ಗೊತ್ತುಪಡಿಸ ಬಹುದಾದಂಥ ರಿಜಿಸ್ಟರುಗಳನ್ನು ಇಟ್ಟಿರತಕ್ಕದ್ದು ಮತ್ತು ವಿವರಪಟ್ಟಿಕೆಗಳನ್ನು ಒದಗಿಸತಕ್ಕದ್ದು.
  • (2) ದನಗಳನ್ನು ದೊಡ್ಡಿಗೆ ತಂದಾಗ, ದೊಡ್ಡಿಪಾಲಕನು, ಈ ಉದ್ದೇಶಕ್ಕಾಗಿ ಇರಿಸಲಾದ ರಿಜಿಸ್ಟರಿನಲ್ಲಿ,-
  • (ಎ) ಪಶುಗಳ ಸಂಖ್ಯೆ ಮತ್ತು ವರ್ಣನೆ;
  • (ಬಿ) ಅವುಗಳನ್ನು ತಂದ ದಿನ ಮತ್ತು ಗಂಟೆ;
  • (ಸಿ) ದನಗಳನ್ನು ವಶಪಡಿಸಿಕೊಂಡ ಅಥವಾ ವಶಪಡಿಸಿಕೊಳ್ಳುವಂತೆ ಮಾಡಿದ ವ್ಯಕ್ತಿಯ ಹೆಸರು
  • ಮತ್ತು ವಾಸಸ್ಧಳ ; ಮತ್ತು
  • (ಡಿ) ಗೊತ್ತಿದ್ದರೆ, ಒಡೆಯನ ಹೆಸರು ಮತ್ತು ವಾಸಸ್ಧಳ
  • - ಇವುಗಳನ್ನು ನಮೂದಿಸತಕ್ಕದ್ದು.
  • (3) ದೊಡ್ಡಿ-ಪಾಲಕನು (2)ನೆಯ ಉಪಪ್ರಕರಣದ ಮೇರೆಗೆ ಮಾಡಿದ ನಮೂದನೆಯ ಪ್ರತಿಯನ್ನು,
  • ದನಗಳನ್ನು ವಶಪಡಿಸಿಕೊಂಡ ಅಥವಾ ವಶಪಡಿಸಿಕೊಳ್ಳುವಂತೆ ಮಾಡಿದ ವ್ಯಕ್ತಿಗೆ ಅಥವಾ ಅವನ ಏಜೆಂಟನಿಗೆ
  • ಕೊಡತಕ್ಕದ್ದು.
  • (4) ದೊಡ್ಡಿ-ಪಾಲಕನು ದನಗಳನ್ನು ವಶಕ್ಕೆ ತೆಗೆದುಕೊಳ್ಳತಕ್ಕದ್ದು ಮತ್ತು ಈ ಅಧಿನಿಯಮದ ಮೇರೆಗೆ
  • ಅವುಗಳನ್ನು ವಿಲೇವಾರಿ ಮಾಡುವವರಿಗೆ ಅವುಗಳಿಗೆ ಸಾಕಷ್ಟು ಆಹಾರವನ್ನು ಮತ್ತು ನೀರನ್ನು ಒದಗಿಸತಕ್ಕದ್ದು.

ಜಮೀನಿಗೆ ಹಾನಿಯುಂಟು ಮಾಡುವ ದನಗಳನ್ನು ವಶಪಡಿಸಿಕೊಳ್ಳುವಿಕೆ

  • (1) ರಾಜ್ಯ ಸರ್ಕಾರದಿಂದ ಈ ಬಗ್ಗೆ ಅಧಿಕೃತಗೊಳಿಸಲಾದ ಯಾರೇ ವ್ಯಕ್ತಿಯು, ಅಥವಾ ಗ್ರಾಮ ಅಥವಾ ಪಟ್ಟಣ ಪಂಚಾಯತಿಯ, ಕಾವಲು ಮತ್ತು ರಕ್ಷಣಾ ಸಿಬ್ಬಂದಿ ವರ್ಗದವನು, ಗ್ರಾಮದಲ್ಲಿರುವ ಯಾವುದೇ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡುವ ಮತ್ತು ಅಂಥ ಜಮೀನಿಗೆ ಅಥವಾ ಅದರ ಮೇಲಿರುವ ಯಾವುದೇ ಬೆಳೆ ಅಥವಾ ಹುಟ್ಟುವಳಿಗೆ ಹಾನಿಯುಂಟು
  • ಮಾಡುವ ಯಾವುದೇ ದನವನ್ನು ವಶಪಡಿಸಿಕೊಳ್ಳಬಹುದು ಅಥವಾ ವಶಪಡಿಸಿಕೊಳ್ಳುವಂತೆ ಮಾಡಬಹುದು.
  • (2) (i) ಯಾವುದೇ ಜಮೀನಿನ ಸಾಗುವಳಿದಾರನು ಅಥವಾ ಅಧಿಭೋಗದಾರನು; ಅಥವಾ
  • (ii) ಯಾವುದೇ ಜಮೀನಿನ ಬೆಳೆಯ ಸಾಗುವಳಿಗಾಗಿ ಅಥವಾ ಹುಟ್ಟುವಳಿಗಾಗಿ ಹಣವನ್ನು
  • ಮುಂಗಡವಾಗಿ ಕೊಟ್ಟಿದ್ದ ಯಾವನೇ ವ್ಯಕ್ತಿಯು; ಅಥವಾ
  • (iii) ಯಾವುದೇ ಜಮೀನಿನ ಬೆಳೆಯ ಅಥವಾ ಹುಟ್ಟುವಳಿಯ, ಅಥವಾ ಅಂಥ ಬೆಳೆಯ ಅಥವಾ
  • ಹುಟ್ಟುವಳಿಯ ಯಾವುದೇ ಭಾಗದ ಖರೀದಿದಾರನು ಅಥವಾ ಅಡಮಾನದಾರನು
  • - ಅಂಥ ಜಮೀನಿನ ಮೇಲೆ ಅತಿಕ್ರಮ ಪ್ರವೇಶ ಮಾಡುವ ಮತ್ತು ಅದಕ್ಕೆ ಅಥವಾ ಅದರ ಮೇಲಿನ
  • ಯಾವುದೇ ಬೆಳೆಗೆ ಅಥವಾ ಹುಟ್ಟುವಳಿಗೆ ಹಾನಿಯುಂಟು ಮಾಡುವ ಯಾವುದೇ ದನವನ್ನು
  • ವಶಪಡಿಸಿಕೊಳ್ಳಬಹುದು ಅಥವಾ ವಶಪಡಿಸಿಕೊಳ್ಳುವಂತೆ ಮಾಡಬಹುದು.
  • (3) (1)ನೆಯ ಅಥವಾ (2)ನೆಯ ಉಪಪ್ರಕರಣದ ಮೇರೆಗೆ ವಶಪಡಿಸಿಕೊಂಡ ಅಥವಾ
  • ವಶಪಡಿಸಿಕೊಳ್ಳುವಂತೆ ಮಾಡಿದ ದನವನ್ನು ಆ ಜಮೀನಿರುವ ಗ್ರಾಮದ ಅಥವಾ ಪ್ರದೇಶದ ಸಲುವಾಗಿ
  • ಸ್ಧಾಪಿಸಲಾದ ದೊಡ್ಡಿಗೆ ಅಥವಾ ಜಿಲ್ಲಾ ದಂಡಾಧಿಕಾರಿಯು ಈ ಬಗ್ಗೆ ನಿರ್ದಿಷ್ಟಪಡಿಸಬಹುದಾದಂಥ ಬೇರೆ ದೊಡ್ಡಿಗೆ
  • ಅದನ್ನು ವಶಪಡಿಸಿಕೊಂಡ ಇಪ್ಪತ್ನಾಲ್ಕು ಗಂಟೆಗಳೊಳಗಾಗಿ ಕಳಿಸತಕ್ಕದ್ದು.

ಸಾರ್ವಜನಿಕ ರಸ್ತೆಗಳು, ಕಾಲುವೆಗಳು, ಏರಿಗಳು, ಇತ್ಯಾದಿಗಳಿಗೆ ಹಾನಿಯುಂಟು ಮಾಡುವ ದನಗಳು

  • ಸಾರ್ವಜನಿಕ ರಸ್ತೆಗಳು, ಉದ್ಯಾನವನಗಳು, ವಿಹಾರ ಸ್ಧಳಗಳು, ಹಣ್ಣು ತೋಟಗಳು, ನೆಡುತೋಪುಗಳು,
  • ಕಾಲುವೆಗಳು, ಚರಂಡಿ ಕಾಮಗಾರಿಗಳು, ಏರಿಗಳು, ಇವುಗಳ ಮೇಲೆ, ಅಥವಾ ಅಂಥ ರಸ್ತೆಗಳು, ಉದ್ಯಾನವನಗಳು,
  • ಮೈದಾನಗಳು, ಹಣ್ಣುತೋಟಗಳು, ನೆಡುತೋಪುಗಳು, ಕಾಲುವೆಗಳು, ಚರಂಡಿ ಕಾಮಗಾರಿಗಳು ಮತ್ತು ಏರಿಗಳು -
  • ಇವುಗಳ ಪಕ್ಕಗಳ ಅಥವಾ ಇಳಿಜಾರುಗಳ ಮೇಲೆ ಮತ್ತು ಅದರಂಥವುಗಳ ಮೇಲೆ, ಯಾವುವೇ ದನಗಳು
  • ಅಲೆಯುತ್ತಿದ್ದುದು ಅಥವಾ ಅವುಗಳಿಗೆ ಹಾನಿಯುಂಟು ಮಾಡುತ್ತಿದ್ದುದು ಕಂಡುಬಂದರೆ, ಅಂಥ ರಸ್ತೆಗಳ,
  • ಉದ್ಯಾವನಗಳ, ಮೈದಾನಗಳ, ಹಣ್ಣುತೋಟಗಳ, ನೆಡುತೋಪುಗಳ, ಕಾಲುವೆಗಳ, ಚರಂಡಿ ಕಾಮಗಾರಿಗಳ, ಏರಿಗಳ
  • ಮತ್ತು ಅದರಂಥವುಗಳನ್ನು ನೋಡಿಕೊಳ್ಳುವ ವ್ಯಕ್ತಿಗಳು ಅಥವಾ ಯಾರೇ ಪೊಲೀಸು ಅಧಿಕಾರಿಯು ಆ ದನಗಳನ್ನು
  • ವಶಪಡಿಸಿಕೊಳ್ಳಬಹುದು ಅಥವಾ ವಶಪಡಿಸಿಕೊಳ್ಳುವಂತೆ ಮಾಡಬಹುದು ಮತ್ತು ವಶಪಡಿಸಿಕೊಂಡ ಇಪ್ಪತ್ನಾಲ್ಕು
  • ಗಂಟೆಗಳೊಳಗಾಗಿ ಅವುಗಳನ್ನು ಅತೀ ಸಮೀಪದ ದೊಡ್ಡಿಗೆ ಕಳುಹಿಸತಕ್ಕದ್ದು ಅಥವಾ ಕಳುಹಿಸುವಂತೆ ಮಾಡತಕ್ಕದ್ದು.
  • 9. ವಶಪಡಿಸಿಕೊಳ್ಳಲು ಪೊಲೀಸರ ಸಹಾಯ.-
  • 7ನೆಯ ಅಥವಾ 8ನೆಯ ಪ್ರಕರಣದ ಮೇರೆಗೆ ವಶಪಡಿಸಿಕೊಳ್ಳಲು ಪ್ರತಿಭಟನೆ ಇರುವಾಗ ಅಥವಾ ಅದರ ಸಂಭವವಿದ್ದಾಗ, ಅಥವಾ ವಶಪಡಿಸಿಕೊಳ್ಳಲಾದ ದನಗಳನ್ನು ಹಾಗೆ ವಶಪಡಿಸಿಕೊಳ್ಳುವ ವ್ಯಕ್ತಿಗಳಿಂದ ಬಿಡಿಸಲು ಪ್ರಯತ್ನಿಸುವ ಸಂಭವವಿದ್ದಾಗ, ದನಗಳನ್ನು ವಶಪಡಿಸಿಕೊಳ್ಳುವ ಅಥವಾ ವಶಪಡಿಸಿಕೊಳ್ಳುವಂತೆ ಮಾಡುವ ವ್ಯಕ್ತಿಯು, ಅಂಥ ಪ್ರತಿಭಟನೆಯನ್ನು ಅಥವಾ
  • ಬಿಡಿಸುವಿಕೆಯನ್ನು ತಡೆಯುವುದಕ್ಕಾಗಿ ಪೊಲೀಸರ ಸಹಾಯವನ್ನು ಕೋರಬಹುದು ಮತ್ತು ಪೊಲೀಸು
  • ಅಧಿಕಾರಿಯು ಹಾಗೆ ಕೋರಲ್ಪಟ್ಟಾಗ ಅವಶ್ಯಕ ಸಹಾಯವನ್ನು ನೀಡತಕ್ಕದ್ದು.

ದೊಡ್ಡಿಗೆ ಹಾಕಲಾದ ದನಗಳ ಬಗ್ಗೆ ಜುಲ್ಮಾನೆಗಳು

  • (1) ಈ ಅಧಿನಿಯಮದ ಮೇರೆಗೆ ದೊಡ್ಡಿಗೆ ಹಾಕಲಾದ ಪ್ರತಿಯೊಂದು ದನದ ಬಗ್ಗೆ ದೊಡ್ಡಿ- ಪಾಲಕನು ರಾಜ್ಯ ಸರ್ಕಾರದಿಂದ ಅಧಿಸೂಚನೆಯ ಮೂಲಕ ಆಯಾ ಕಾಲದಲ್ಲಿ ಗೊತ್ತುಪಡಿಸಿದ ದರದ ಮೇರೆಗೆ ಜುಲ್ಮಾನೆಯನ್ನು ವಿಧಿಸತಕ್ಕದ್ದು ಮತ್ತು ರಾಜ್ಯದ ದೊಡ್ಡಿಗಳು ಇರುವ ಬೇರೆಬೇರೆ ಪ್ರದೇಶಗಳ ಸಲುವಾಗಿ ರಾಜ್ಯ ಸರ್ಕಾರವು ಬೇರೆ ಬೇರೆ ದರಗಳನ್ನು ನಿಗದಿಪಡಿಸಬಹುದು :
  • ಪರಂತು, ಒಬ್ಬನೇ ವ್ಯಕ್ತಿಗೆ ಸೇರಿದ ಅಥವಾ ಅವನು ಇಟ್ಟುಕೊಂಡಿರುವ ದನಗಳ ಸಂಬಂಧದಲ್ಲಿ ಒಂದು
  • ಸಲಕ್ಕೆ ದೊಡ್ಡಿಗೆ ಹಾಕಲಾದ ದನಗಳ ಸಂಖ್ಯೆಗೆ ಮತ್ತು ಅಂಥ ದನಗಳನ್ನು ದೊಡ್ಡಿಗೆ ಎಷ್ಟು ಸಲ ಹಾಕಲಾಗಿದೆಯೋ
  • ಆ ಸಂಖ್ಯೆಗನುಸಾರವಾಗಿ ಕ್ರಮೇಣ ಹೆಚ್ಚುವ ದರವನ್ನು ಗೊತ್ತುಪಡಿಸುವುದು ರಾಜ್ಯ ಸರ್ಕಾರಕ್ಕೆ
  • ಕಾನೂನುಬದ್ಧವಾಗಿರತಕ್ಕದ್ದು.
  • (2) (1)ನೆಯ ಉಪಪ್ರಕರಣದ ಮೇರೆಗೆ ವಿಧಿಸಲಾದ ಎಲ್ಲ ಜುಲ್ಮಾನೆಗಳನ್ನು ದೊಡ್ಡಿ-ಪಾಲಕನು ಜಿಲ್ಲಾ
  • ದಂಡಾಧಿಕಾರಿಗೆ ಗೊತ್ತುಪಡಿಸಿದ ರೀತಿಯಲ್ಲಿ ಕಳಿಸತಕ್ಕದ್ದು.

ಜುಲ್ಮಾನೆಗಳ ಮತ್ತು ಮೇವಿನ ಖರ್ಚುಗಳ ಪಟ್ಟಿ

ದೊಡ್ಡಿಯು ಇರುವ ಪ್ರದೇಶದ ಬಗ್ಗೆ 10ನೆಯ ಪ್ರಕರಣದ ಮೇರೆಗೆ ನಿಗದಿಪಡಿಸಿದ ಜುಲ್ಮಾನೆಗಳ ದರವನ್ನು ಮತ್ತು ಅಂಥ ದೊಡ್ಡಿಯಲ್ಲಿರುವ ದನಗಳಿಗೆ ಮೇವು ಮತ್ತು ನೀರನ್ನು ಕೊಡುವ ಬಗ್ಗೆ 4ನೇ ಪ್ರಕರಣದ ಮೇರೆಗೆ ನಿಗದಿಪಡಿಸಲಾದ ಖರ್ಚುಗಳ ದರಗಳನ್ನು ಒಳಗೊಂಡ ಪಟ್ಟಿಯನ್ನು, ಅಂಥ ದೊಡ್ಡಿಯಲ್ಲಿ ಅಥವಾ ಅದರ ಸಮೀಪದಲ್ಲಿ ಎದ್ದು ಕಾಣುವ ಸ್ಧಳದಲ್ಲಿ ಪ್ರದರ್ಶಿಸತಕ್ಕದ್ದು.

ಒಡೆಯನು ದನವನ್ನು ಕ್ಲೇಮು ಮಾಡಿದಾಗ ಮತ್ತು ಜುಲ್ಮಾನೆಗಳನ್ನು ಹಾಗೂ ಖರ್ಚುಗಳನ್ನು

ಸಂದಾಯಮಾಡಿದಾಗ ಅನುಸರಿಸಬೇಕಾದ ಪ್ರಕ್ರಿಯೆ.-

ದೊಡ್ಡಿಗೆ ಹಾಕಲಾದ ದನಗಳ ಒಡೆಯನು, ಅಥವಾ ಅವನ ಏಜೆಂಟನು, ಹಾಜರಾಗಿ ದನಗಳನ್ನು ಕ್ಲೇಮು ಮಾಡಿದರೆ, ಅಂಥ ದನಗಳ ಬಗ್ಗೆ ಗೊತ್ತುಪಡಿಸಲಾದ ಜುಲ್ಮಾನೆಗಳನ್ನು ಮತ್ತು ಸಂದಾಯ ಮಾಡಬೇಕಾದ ಖರ್ಚುಗಳನ್ನು ಸಂದಾಯ ಮಾಡಿದ ಮೇಲೆ, ಅವುಗಳನ್ನು ದೊಡ್ಡಿ-ಪಾಲಕನು ಅವನಿಗೆ ವಾಪಸು ಮಾಡತಕ್ಕದ್ದು.

(2) ಒಡೆಯನು ಅಥವಾ ಅವನ ಏಜೆಂಟನು ತನ್ನ ದನಗಳನ್ನು ಹಿಂದಕ್ಕೆ ತೆಗೆದುಕೊಂಡ ಮೇಲೆ, ಆ

ದನಗಳು ತಲುಪಿವೆ ಎಂದು ಒಪ್ಪಿಕೊಂಡು ಆ ಬಗ್ಗೆ ದೊಡ್ಡಿ ಪಾಲಕನು ಇಟ್ಟಿರುವ ರಿಜಿಸ್ಟರಿನಲ್ಲಿ ಸಹಿ ಮಾಡತಕ್ಕದ್ದು.

ದೊಡ್ಡಿಗೆ ಹಾಕಲಾದ ದನಗಳ ಬಗ್ಗೆ ಭದ್ರತೆ

  • ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ
  • ಅಧಿಸೂಚನೆಯ ಮೂಲಕ, ಈ ಪ್ರಕರಣವು ಅನ್ವಯಿಸುವ ಯಾವುದೇ ಸ್ಧಳಿಯ ಪ್ರದೇಶದಲ್ಲಿ ಪ್ರತಿಯೊಬ್ಬ ದೊಡ್ಡಿ-
  • ಪಾಲಕನು, ದೊಡ್ಡಿಗೆ ಹಾಕಲಾದ ಯಾವುದೇ ದನವನ್ನು ಬಿಟ್ಟುಕೊಡುವ ಮುಂಚೆ, ಅಂಥ ದನಗಳ ಒಡೆತನದ ಬಗ್ಗೆ
  • ಒಂದು ಘೋಷಣೆಯನ್ನು, ರಾಜ್ಯ ಸರ್ಕಾರವು ಗೊತ್ತುಪಡಿಸುವ ನಮೂನೆಯಲ್ಲಿ ಮಾಡಬೇಕೆಂದು, ಮತ್ತು ರಾಜ್ಯ
  • ಸರ್ಕಾರವು ನಿಯಮಗಳ ಮೂಲಕ ಗೊತ್ತುಪಡಿಸಬಹುದಾದಂಥ ಮೊಬಲಗನ್ನು ಭದ್ರತೆ ರೂಪದಲ್ಲಿ ಠೇವಣಿ
  • ಮಾಡಬೇಕೆಂದು ದೊಡ್ಡಿಗೆ ಹಾಕಲಾದ ದನಗಳ ಒಡೆಯನನ್ನು ಅಥವಾ ಏಜೆಂಟನನ್ನು ಅಗತ್ಯಪಡಿಸತಕ್ಕದ್ದು. ಬೇರೆ
  • ಬೇರೆ ಪ್ರದೇಶಗಳ ಬಗ್ಗೆ ಅಥವಾ ಬೇರೆ ಬೇರೆ ವರ್ಗದ ದನಗಳ ಬಗ್ಗೆ ಬೇರೆ ಬೇರೆ ದರಗಳನ್ನು
  • ಗೊತ್ತುಪಡಿಸಬಹುದು.
  • (2) ಭದ್ರತಾ ಹಣವನ್ನು ಠೇವಣಿ ಮಾಡಿದ ತಾರೀಖಿನಿಂದ ಆರು ತಿಂಗಳುಗಳ ಅವಧಿಯೊಳಗಾಗಿ ಅಂಥ
  • ಒಡೆಯನಿಗೆ ಸೇರಿದ ಯಾವುವೇ ದನಗಳನ್ನು ದೊಡ್ಡಿಗೆ ಹಾಕಿದರೆ, ಮತ್ತು (ದನಗಳ) ವಶಪಡಿಸಿಕೊಳ್ಳುವಿಕೆಯು
  • ಕಾನೂನು ವಿರುದ್ಧವಾದುದೆಂದು ತೀರ್ಮಾನಿಸಿಲ್ಲದಿದ್ದರೆ, ರಾಜ್ಯ ಸರ್ಕಾರವು ಈ ಬಗ್ಗೆ ನಿಯಮಗಳ ಮೂಲಕ
  • ಗೊತ್ತುಪಡಿಸಬಹುದಾದಂತೆ, ಆ ಠೇವಣಿಯ ಮೊಬಲಗು ಅಥವಾ ಅದರ ಭಾಗವು ರಾಜ್ಯ ಸರ್ಕಾರಕ್ಕೆ
  • ಮುಟ್ಟುಗೋಲಾಗತಕ್ಕದ್ದು. ಈ ಹಿಂದೆ ಹೇಳಿದಂತೆ ದನಗಳನ್ನು ದೊಡ್ಡಿಗೆ ಹಾಕದಿದ್ದಲ್ಲಿ, ಠೇವಣಿದಾರನು ಅಥವಾ
  • ಅವನ ಪರವಾಗಿ ಸಲ್ಲಿಸಿದ ಅರ್ಜಿಯ ಮೇಲೆ, ಆ ಅವಧಿ ಮುಗಿದ ಬಳಿಕ ಭದ್ರತೆಯ ಮೊಬಲಗನ್ನು ಅವನಿಗೆ
  • ಮರುಪಾವತಿ ಮಾಡತಕ್ಕದ್ದು.
  • (3) ಈ ಅಧಿನಿಯಮದ ಮೇರೆಗೆ ದೊಡ್ಡಿಗೆ ಹಾಕಲಾದ ದನಗಳನ್ನು ಬಿಡುವಂತೆ ಕ್ಲೇಮು ಮಾಡಲಾದ
  • ಪ್ರತಿಯೊಂದು ಸಂದರ್ಭದಲ್ಲಿ, ದನಗಳ ಒಡೆಯನು ಹೊಸದಾಗಿ ಭದ್ರತಾ ಹಣವನ್ನು ಠೇವಣಿ ಇಡತಕ್ಕದ್ದು.

ನಿರ್ದಿಷ್ಟ ಸ್ಧಳಗಳಿಗೆ ದನಗಳನ್ನು ಸಾಗಿಸುವುದು

ಯಾವುದೇ ಸ್ಧಳೀಯ ಪ್ರದೇಶಕ್ಕೆ ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಪ್ರಕರಣವನ್ನು ಅನ್ವಯಿಸಬಹುದೋ ಆ ಯಾವುದೇ ಸ್ಥಳೀಯ ಪ್ರದೇಶದಲ್ಲಿ ತಹಶೀಲ್ದಾರನಿಗೆ,-

  • (i) ತನ್ನ ಅಧಿಕಾರ ವ್ಯಾಪ್ತಿಯೊಳಗಿನ ತಾಲ್ಲೂಕಿನಲ್ಲಿರುವ ಒಂದು ಅಥವಾ ಹೆಚ್ಚು ಗ್ರಾಮಗಳಲ್ಲಿ ದನಗಳ
  • ಉಪಯೋಗಕ್ಕಾಗಿ ಮೀಸಲಿಡಲಾದ ಗೋಮಾಳವು ಅಂಥ ಗ್ರಾಮದ ಅಥವಾ ಗ್ರಾಮಗಳ ಖಾಯಂ ನಿವಾಸಿಗಳಿಗೆ
  • ಸೇರಿದ ದನಗಳಿಗೆ ಸಾಕಾಗುವಷ್ಟು ಇರುವುದಿಲ್ಲವೆಂದು ; ಅಥವಾ
  • (ii) ಅಂಥ ಗ್ರಾಮಗಳ ನಿವಾಸಿಗಳಲ್ಲದ ಮತ್ತು ಇಪ್ಪತ್ತಕ್ಕಿಂತ ಹೆಚ್ಚು ದನಗಳ ಒಡೆತನ ಹೊಂದಿರುವ
  • ವ್ಯಕ್ತಿಗಳಿಗೆ ಸೇರಿದ ದನಗಳು, ಹಾಗೆ ಮೀಸಲಿಡಲಾದ ಯಾವುದೇ ವ್ಯವಸಾಯ ಜಮೀನಿನ ಮೇಲೆ ಬೆಳೆದು
  • ನಿಂತಿರುವ ಬೆಳೆಗಳಿಗೆ ಅಥವಾ ಹುಲ್ಲಿಗೆ ಹಾನಿಯುಂಟು ಮಾಡುವ ಸಂಭವವಿದೆಯೆಂದು ಮನದಟ್ಟಾದರೆ, ಅವನು,-
  • (ಎ) (1)ನೆಯ ಖಂಡದಲ್ಲಿ ಉಲ್ಲೇಖಿಸಿದ ಯಾವುದೇ ಸಂದರ್ಭದಲ್ಲಿ ಅಂಥ ಯಾವನೇ ನಿವಾಸಿ
  • ಒಡೆಯನಿಗೆ ವಿಶೇಷ ಅಥವಾ ಸಾಮಾನ್ಯ ಆದೇಶ ಕೊಡುವ ಮೂಲಕ, ಅವನಿಗೆ ಸೇರಿದ ಎಲ್ಲ ಅಥವಾ ಯಾವುದೇ
  • ಬರಡು ಅಥವಾ ನಿರುಪಯುಕ್ತ ದನಗಳನ್ನು ಮತ್ತು ಆ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂತೆ ರಾಜ್ಯದಲ್ಲಿರುವ
  • ಅಂಥ ಸ್ಧಳಕ್ಕೆ ಅಥವಾ ಸ್ಧಳಗಳಿಗೆ ಮತ್ತು ಅಂಥ ಅವಧಿಯೊಳಗಾಗಿ ಸಾಗಿಸಲು ಅಥವಾ ಸಾಗಿಸುವಂತೆ ಮಾಡಲು
  • ನಿರ್ದೇಶಿಸಬಹುದು, ಮತ್ತು
  • (ಬಿ) (ii)ನೇಯ ಖಂಡದಲ್ಲಿ ಉಲ್ಲೇಖಿಸಿದ ಯಾವುದೇ ಸಂದರ್ಭದಲ್ಲಿ ಅಂಥ ನಿವಾಸಿಯಲ್ಲದ ಯಾರೇ
  • ಒಡೆಯನಿಗೆ ವಿಶೇಷ ಅಥವಾ ಸಾಮಾನ್ಯ ಆದೇಶ ಕೊಡುವ ಮೂಲಕ ಅವನ ಎಲ್ಲ ಅಥವಾ ಯಾವುವೇ
  • ದನಗಳನ್ನು, ರಾಜ್ಯದಲ್ಲಿರುವ ಮತ್ತು ಆ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಸ್ಧಳಕ್ಕೆ ಅಥವಾ ಸ್ಧಳಗಳಿಗೆ ಮತ್ತು
  • ಅಂಥ ಅವಧಿಯೊಳಗೆ ಸಾಗಿಸಲು ಅಥವಾ ಸಾಗಿಸುವಂತೆ ಮಾಡಲು ನಿರ್ದೇಶಿಸಬಹುದು.
  • (2) (1)ನೆಯ ಉಪಪ್ರಕರಣದ ಮೇರೆಗೆ ನಿರ್ದೇಶಿಸಲಾದಂತೆ ದನಗಳನ್ನು ಸಾಗಿಸಲು ಒಡೆಯನು ತಪ್ಪಿದರೆ,
  • ಆದೇಶದಲ್ಲಿ ಉಲ್ಲೇಖಿಸಲಾದ ಅಂಥ ದನಗಳನ್ನು ಅಂಥ ಸ್ಧಳಕ್ಕೆ, ಅಥವಾ ಸ್ಧಳಗಳಿಗೆ ಸಾಗಿಸಲು ಅಥವಾ
  • ಸಾಗಿಸುವಂತೆ ಮಾಡಲು ತಹಶೀಲ್ದಾರನು ಹೆಡ್‍ಕಾನ್ಸ್‍ಸ್ಟೇಬಲ್ ದರ್ಜೆಗಿಂತ ಕಡಿಮೆಯಿಲ್ಲದ ದರ್ಜೆಯ ಪೊಲೀಸ್
  • ಅಧಿಕಾರಿಗೆ ನಿರ್ದೇಶಿಸಬಹುದು.
  • (3) (1)ನೆಯ ಉಪಪ್ರಕರಣದ ಮೇರೆಗೆ ತಾನು ಮಾಡಿದ ಆದೇಶವನ್ನು ದನಗಳ ಯಾವನೇ ಒಡೆಯನು
  • ಅಥವಾ ಪಾಲಕನು ಉಲ್ಲಂಘಿಸಿರುವನೆಂದು ತಹಶೀಲ್ದಾರನಿಗೆ ಮನದಟ್ಟಾದರೆ, ಅವನು ಒಂದು ಸಾವಿರ
  • ರೂಪಾಯಿಗಳಿಗೆ ಮೀರದ ಜುಲ್ಮಾನೆಯನ್ನು ವಿಧಿಸಬಹುದು. ಹೀಗೆ ವಿಧಿಸಲಾದ ಯಾವುದೇ ಜುಲ್ಮಾನೆಯನ್ನು ಅಂಥ
  • ದನಗಳ ಒಡೆಯನು ಅಥವಾ ಪಾಲಕನು ನಿರ್ದಿಷ್ಟಪಡಿಸಲಾದ ಕಾಲದೊಳಗೆ ಸಂದಾಯ ಮಾಡಲು ತಪ್ಪಿದರೆ,
  • (1)ನೆಯ ಉಪಪ್ರಕರಣದ ಮೇರೆಗೆ ಸಾಗಿಸಲು ಆದೇಶ ಮಾಡಲಾದ ಎಲ್ಲ ಅಥವಾ ಯಾವುವೇ ದನಗಳ
  • ಮಾರಾಟದ ಮೂಲಕ ಅದನ್ನು ವಸೂಲು ಮಾಡಬಹುದು:

ಏಳು ದಿನಗಳೊಳಗಾಗಿ ದನಗಳನ್ನು ಕ್ಲೇಮು ಮಾಡದಿದ್ದಲ್ಲಿ ಪ್ರಕ್ರಿಯೆ

  • (1) ದನಗಳನ್ನು ದೊಡ್ಡಿಗೆ ಹಾಕಿದ ತಾರೀಖಿನಿಂದ ಏಳು ದಿನಗಳೊಳಗಾಗಿ ಅವುಗಳನ್ನು ಕ್ಲೇಮು ಮಾಡದಿದ್ದರೆ, ದೊಡ್ಡಿ - ಪಾಲಕನು ಆ ಸಂಗತಿಯನ್ನು ಅತಿ ಸಮೀಪದ ಪೋಲೀಸು ಠಾಣೆಯ ಅಧಿಕಾರಿಗೆ ಅಥವಾ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಯು
  • ನೇಮಿಸುವಂಥ ಅಧಿಕಾರಿಗೆ ವರದಿ ಮಾಡತಕ್ಕದ್ದು:
  • ಪರಂತು, ಕತ್ತೆಗಳನ್ನು ಮತ್ತು ಕುರಿಗಳನ್ನು ದೊಡ್ಡಿಗೆ ಹಾಕಿದ ತಾರೀಖಿನಿಂದ ಮೂರು ದಿನಗಳೊಳಗಾಗಿ
  • ಅವುಗಳನ್ನು ಕ್ಲೇಮು ಮಾಡತಕ್ಕದ್ದು.
  • (2) (1)ನೆಯ ಉಪಪ್ರಕರಣದ ಮೇರೆಗೆ ವರದಿ ಬಂದ ಮೇಲೆ ಸಂಬಂಧಿಸಿದ ಅಧಿಕಾರಿಯು ತನ್ನ ಕಚೇರಿಯಲ್ಲಿ ಎದ್ದು ಕಾಣುವ ಸ್ಧಳದಲ್ಲಿ,-
  • (ಎ) ದನಗಳ ಸಂಖ್ಯೆ ಮತ್ತು ವರ್ಣನೆ;
  • (ಬಿ) ಅವುಗಳನ್ನು ವಶಪಡಿಸಿಕೊಂಡ ಸ್ಧಳ;
  • (ಬಿ) ಅವುಗಳನ್ನು ದೊಡ್ಡಿಗೆ ಹಾಕಿದ ಸ್ಧಳ
  • - ಇವುಗಳನ್ನು ತಿಳಿಸುವ ನೋಟೀಸನ್ನು ಪ್ರದರ್ಶಿಸತಕ್ಕದು ಮತ್ತು ಆ ಗ್ರಾಮದಲ್ಲಿ ಅಥವಾ ಪ್ರದೇಶದಲ್ಲಿ
  • ಮತ್ತು ಅವುಗಳನ್ನು ವಶಪಡಿಸಿಕೊಂಡ ಸ್ಧಳದ ಸಮೀಪದಲ್ಲಿರುವ ಮಾರುಕಟ್ಟೆ ಸ್ಧಳದಲ್ಲಿ ಡಂಗುರ ಹೊಡೆಸುವ
  • ಮೂಲಕ ಆ ಬಗ್ಗೆ ಪ್ರಚುರಪಡಿಸತಕ್ಕದ್ದು.
  • (3) (2)ನೆಯ ಉಪಪ್ರಕರಣದ ಮೇರೆಗೆ ನೋಟೀಸಿನ ತಾರೀಖಿನಿಂದ ಏಳು ದಿನಗಳೊಳಗಾಗಿ ದನಗಳನ್ನು
  • ಅಥವಾ ಮೂರು ದಿನಗಳೊಳಗಾಗಿ ಕತ್ತೆಗಳನ್ನು ಅಥವಾ ಕುರಿಗಳನ್ನು ಕ್ಲೇಮು ಮಾಡದಿದ್ದರೆ, ಸದರಿ ಅಧಿಕಾರಿಯು
  • ಅಥವಾ ಅವನ ಸಿಬ್ಬಂದಿ ವರ್ಗಕ್ಕೆ ಸೇರಿದ ಆ ಉದ್ದೇಶಕ್ಕಾಗಿ ಪ್ರತಿನಿಯೋಜಿತನಾದ ಅಧಿಕಾರಿಯು, ಜಿಲ್ಲಾ
  • ದಂಡಾಧಿಕಾರಿಯ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಕಾಲಕಾಲಕ್ಕೆ ನಿರ್ದೇಶಿಸಬಹುದಾದಂಥ ಸ್ಧಳ
  • ಮತ್ತು ವೇಳೆಯಲ್ಲಿ ಮತ್ತು ಅಂಥ ಷರತ್ತುಗಳಿಗೆ ಒಳಪಟ್ಟು ಸಾರ್ವಜನಿಕ ಹರಾಜಿನ ಮೂಲಕ ಅವುಗಳನ್ನು
  • ಮಾರಾಟ ಮಾಡತಕ್ಕದ್ದು:
  • ಪರಂತು, ಸಾರ್ವಜನಿಕ ಹರಾಜಿನಲ್ಲಿ ಯಾವುದೇ ದನಗಳ ಬಗ್ಗೆ ಯಾರೇ ವ್ಯಕ್ತಿಯು ಕೂಗಿದ ಸವಾಲು,
  • ಅವುಗಳನ್ನು ಮಾರಲು ಅಧಿಕೃತಗೊಳಿಸಲಾದ ಅಧಿಕಾರಿಯ ಅಭಿಪ್ರಾಯದಲ್ಲಿ ಯೋಗ್ಯ ಬೆಲೆಯಾಗಿರದಿದ್ದರೆ, ಅವನು
  • ಕೂಗಿದ ಸವಾಲನ್ನು ಅಧಿಕಾರಿಯು ನಿರಾಕರಿಸಬಹುದು ಮತ್ತು ಅವನಿಗೆ ಯೋಗ್ಯವೆಂದು ಕಂಡುಬರುವ ರೀತಿಯಲ್ಲಿ
  • ದನಗಳ ವಿಲೇ ಮಾಡಬಹುದು.

ವಶಪಡಿಸಿಕೊಳ್ಳುವಿಕೆಯ ಕಾನೂನು ಬದ್ಧತೆಯನ್ನು ವಿವಾದಿಸುವ ಆದರೆ ಠೇವಣಿ ಇಡುವ ಒಡೆಯನಿಗೆ ದನಗಳನ್ನು ವಾಪಸು ಮಾಡುವುದು.-

  • (1) ದೊಡ್ಡಿಗೆ ಹಾಕಲಾದ ದನಗಳ ಒಡೆಯನು ಅಥವಾ ಅವನ ಏಜೆಂಟನು
  • ದೊಡ್ಡಿ-ಪಾಲಕನ ಮುಂದೆ ಹಾಜರಾಗಿ ವಶಪಡಿಸಿಕೊಳ್ಳುವಿಕೆಯು ಕಾನೂನು ವಿರುದ್ಧವಾಗಿತ್ತೆಂಬ ಕಾರಣದ ಮೇಲೆ
  • ಮತ್ತು ಒಡೆಯನು 20ನೆಯ ಪ್ರಕರಣದ ಮೇರೆಗೆ ಫಿರ್ಯಾದು ಮಾಡಲಿರುವನೆಂಬ ಕಾರಣದ ಮೇಲೆ ಆ ದನಗಳ
  • ಸಂಬಂಧದಲ್ಲಿ 12ನೆಯ ಪ್ರಕರಣದ (1)ನೆಯ ಉಪಪ್ರಕರಣದ ಮೇರೆಗೆ ಸಂದಾಯ ಮಾಡಬೇಕಾಗಿರುವ
  • ಜುಲ್ಮಾನೆಗಳನ್ನು ಮತ್ತು ಖರ್ಚುಗಳನ್ನು ಸಂದಾಯ ಮಾಡಲು ನಿರಾಕರಿಸಿದರೆ, ಆಗ ಆ ದನಗಳ ಸಂಬಂಧದಲ್ಲಿ
  • ಸಂದಾಯ ಮಾಡಬೇಕಾದ ಆ ಜುಲ್ಮಾನೆಗಳ ಮತ್ತು ಖರ್ಚುಗಳ ಮೊತ್ತವನ್ನು ಠೇವಣಿ ಇಟ್ಟ ಮೇಲೆ, ದನಗಳನ್ನು
  • ಅವನಿಗೆ ವಾಪಸು ಕೊಡತಕ್ಕದ್ದು.
  • (2) (1)ನೆಯ ಉಪಪ್ರಕರಣದಲ್ಲಿ ಉಲ್ಲೇಖಿಸಲಾದ ಯಾವುದೇ ಫಿರ್ಯಾದಿನ ಮೇಲೆ
  • ವಶಪಡಿಸಿಕೊಳ್ಳುವಿಕೆಯು ಕಾನೂನುಬದ್ಧವಾಗಿದೆಯೆಂದು ಘೋಷಿಸಿದರೆ, ಅಥವಾ ಒಡೆಯನು ಅಥವಾ ಅವನ
  • ಏಜೆಂಟನು ಅವನಿಗೆ ದನಗಳನ್ನು ವಾಪಸು ಮಾಡಿದ ನಾಲ್ಕು ವಾರಗಳ ಅವಧಿಯೊಳಗಾಗಿ ಫಿರ್ಯಾದು ನೀಡಲು
  • ತಪ್ಪಿದರೆ, 13ನೆಯ ಪ್ರಕರಣವು ಅಗತ್ಯಪಡಿಸಿದಂತೆ ಘೋಷಣೆ ಮಾಡಲು ಅಥವಾ ಜಾಮೀನು ಮೊಬಲಗನ್ನು
  • ಠೇವಣಿ ಇಡಲು ಅಂಥ ಒಡೆಯನಿಗೆ ಅಥವಾ ಅವನ ಏಜೆಂಟನಿಗೆ ದೊಡ್ಡಿ-ಪಾಲಕನು ಅಗತ್ಯಪಡಿಸತಕ್ಕದ್ದು.
  • ಒಡೆಯನು ಅಥವಾ ಅವನ ಏಜೆಂಟನು ಅಂಥ ಘೋಷಣೆಯನ್ನು ಮಾಡಲು ಅಥವಾ ಅಂಥ ಮೊಬಲಗನ್ನು
  • ಠೇವಣಿ ಇಡಲು ತಪ್ಪಿದರೆ, (1)ನೆಯ ಉಪಪ್ರಕರಣದ ಮೇರೆಗೆ ಅವನಿಗೆ ವಾಪಸು ಮಾಡಲಾದ ದನಗಳನ್ನು
  • 17ನೆಯ ಪ್ರಕರಣದ ಉದ್ದೇಶಗಳಿಗಾಗಿ ಪುನ: ವಶಪಡಿಸಿಕೊಳ್ಳತಕ್ಕದ್ದು.

ಜುಲ್ಮಾನೆಗಳನ್ನು ಮತ್ತು ಖರ್ಚುಗಳನ್ನು ಸಂದಾಯಮಾಡಲು ಒಡೆಯನು ನಿರಾಕರಿಸಿದಾಗ ಅಥವಾ ತಪ್ಪಿದಾಗ ಪ್ರಕ್ರಿಯೆ

  • (1) ಒಡೆಯನು ಅಥವಾ ಅವನ ಏಜೆಂಟನು ದೊಡ್ಡಿ-ಪಾಲಕನ ಮುಂದೆ ಹಾಜರಾಗಿ, 16ನೇ
  • ಪ್ರಕರಣದ (1)ನೆಯ ಉಪಪ್ರಕರಣದ ಮೇರೆಗೆ ಸದರಿ ಜುಲ್ಮಾನೆಗಳನ್ನು ಮತ್ತು ಖರ್ಚುಗಳನ್ನು ಸಂದಾಯ
  • ಮಾಡಲು ಮತ್ತು ಸದರಿ ಭದ್ರತಾ ಮೊಬಲಗನ್ನು ಠೇವಣಿ ಇಡಲು ಅಥವಾ 16ನೆಯ ಪ್ರಕರಣದ (2)ನೆಯ
  • ಉಪಪ್ರಕರಣದಲ್ಲಿ ಹೇಳಲಾದ ಸಂದರ್ಭಗಳಲ್ಲಿ ಸದರಿ ಜುಲ್ಮಾನೆಗಳನ್ನು, ಖರ್ಚುಗಳನ್ನು ಠೇವಣಿ ಇಡಲು ಮತ್ತು
  • 13ನೇ ಪ್ರಕರಣವು ಅಗತ್ಯಪಡಿಸಿದಂತೆ ಭದ್ರತಾ ಮೊಬಲಗನ್ನು ಠೇವಣಿ ಇಡಲು ಅಥವಾ ಘೋಷಣೆ ಸಲ್ಲಿಸಲು
  • ನಿರಾಕರಿಸಿದರೆ ಅಥವಾ ತಪ್ಪಿದರೆ ಆ ದನಗಳನ್ನು ಅಥವಾ ಅವುಗಳ ಪೈಕಿ ಅವಶ್ಯಕವಾದಷ್ಟವುಗಳನ್ನು 15ನೆಯ
  • ಪ್ರಕರಣದಲ್ಲಿ ಉಲ್ಲೇಖಿಸಲಾದಂಥ ಅಧಿಕಾರಿಯು ಅಂಥ ಸ್ಧಳ ಮತ್ತು ಕಾಲದಲ್ಲಿ ಮತ್ತು ಅಂಥ ಷರತ್ತಿಗೊಳಪಟ್ಟು
  • ಮಾರಾಟ ಮಾಡತಕ್ಕದ್ದು.
  • (2) ವಿಧಿಸಬಹುದಾದ ಜುಲ್ಮಾನೆಗಳನ್ನು, ಮೇವು ಮತ್ತು ನೀರಿನ ಖರ್ಚುಗಳನ್ನು, ಮಾರಾಟಕ್ಕೆ
  • ಯಾವುವಾದರೂ ವೆಚ್ಚಗಳು ತಗುಲಿದ್ದರೆ, ಅವುಗಳನ್ನು, 13ನೆಯ ಪ್ರಕರಣದ ಮೇರೆಗೆ ಗೊತ್ತುಪಡಿಸಿದ ಭದ್ರತಾ
  • ಮೊಬಲಗಿನ ಸಮೇತವಾಗಿ ಮಾರಾಟದ ಉತ್ಪತ್ತಿಯಿಂದ ಮುರಿದುಕೊಳ್ಳತಕ್ಕದ್ದು.
  • (3) ದನಗಳಲ್ಲಿ ಯಾವುವಾದರೂ ಮತ್ತು ಖರೀದಿ ಹಣದಲ್ಲಿ ಏನಾದರೂ ಉಳಿದಿದ್ದರೆ, ಅದನ್ನು,
  • ಒಡೆಯನಿಗೆ ಅಥವಾ ಅವನ ಏಜೆಂಟನಿಗೆ,-
  • (ಎ) ವಶಪಡಿಸಿಕೊಳ್ಳಲಾದ ದನಗಳ ಸಂಖ್ಯೆ;
  • (ಬಿ) ಅವು ದೊಡ್ಡಿಯಲ್ಲಿದ್ದ ಅವಧಿ;
  • (ಸಿ) ಸಂದಾಯ ಮಾಡಬೇಕಾದ ಜುಲ್ಮಾನೆಯ ಮತ್ತು ಖರ್ಚುಗಳ ಮೊಬಲಗು;
  • (ಡಿ) ಮಾರಾಟ ಮಾಡದ ದನಗಳ ಸಂಖ್ಯೆ;
  • (ಇ) ಮಾರಾಟದಿಂದ ಬಂದ ಉತ್ಪತ್ತಿ; ಮತ್ತು
  • (ಎಫ್) ಸದರಿ ಉತ್ಪತ್ತಿಯನ್ನು ವಿಲೇವಾರು ಮಾಡಿದ ರೀತಿ
  • - ಇವುಗಳನ್ನು ತೋರಿಸಿರುವ ಲೆಕ್ಕಗಳ ಜೊತೆಗೆ ವಾಪಸು ಮಾಡತಕ್ಕದ್ದು.
  • (4) ಅಂಥ ಲೆಕ್ಕಗಳ ಪ್ರಕಾರ ಒಡೆಯನಿಗೆ ಅಥವಾ ಅವನ ಏಜೆಂಟನಿಗೆ ಒಪ್ಪಿಸಲಾದ ದನಗಳ ಬಗ್ಗೆ ಮತ್ತು
  • ಖರೀದಿ ಹಣದ ಬಾಕಿ ಯಾವುದಾದರೂ ಇದ್ದರೆ, ಅದನ್ನು ತನಗೆ ಕೊಟ್ಟ ಬಗ್ಗೆ ರಸೀದಿಯನ್ನು ಕೊಡತಕ್ಕದ್ದು.

ಜುಲ್ಮಾನೆಗಳ, ಖರ್ಚುಗಳ ಮತ್ತು ಮಾರಾಟದ ಹೆಚ್ಚುವರಿ ಉತ್ಪತ್ತಿಯ ವಿಲೇವಾರಿ.-

  • (1) ಮಾರಾಟ ನಡೆಸಿದ ಅಧಿಕಾರಿಯು 17ನೆಯ ಪ್ರಕರಣದ (2)ನೆಯ ಉಪಪ್ರಕರಣದ ಮೇರೆಗೆ ಮುರಿದುಕೊಂಡ ಜುಲ್ಮಾನೆಗಳನ್ನು ಜಿಲ್ಲಾ ದಂಡಾಧಿಕಾರಿಗೆ ಕಳಿಸತಕ್ಕದ್ದು.
  • (2) 10ನೆಯ ಪ್ರಕರಣದ (1)ನೆಯ ಉಪಪ್ರಕರಣದ ಮೇರೆಗೆ ವಿಧಿಸಿದ ಜುಲ್ಮಾನೆಗಳನ್ನು ಮತ್ತು 17ನೆಯ
  • ಪ್ರಕರಣದ (2)ನೆಯ ಉಪಪ್ರಕರಣದ ಮೇರೆಗೆ ಮುರಿದುಕೊಳ್ಳಲಾದ ಜುಲ್ಮಾನೆಯನ್ನು, ಆ ದೊಡ್ಡಿಯು ಯಾವ
  • ಸ್ಧಳೀಯ ಪ್ರಾಧಿಕಾರದ ವ್ಯಾಪ್ತಿಯಲ್ಲಿದೆಯೋ ಆ ಪ್ರಾಧಿಕಾರದ ಸ್ಧಳೀಯ ನಿಧಿಗೆ ಜಮೆ ಮಾಡತಕ್ಕದ್ದು.
  • (3) 17ನೆಯ ಪ್ರಕರಣದ ಮೇರೆಗೆ ಮುರಿದುಕೊಳ್ಳಲಾದ ಮೇವು ಮತ್ತು ನೀರಿನ ಖರ್ಚುಗಳನ್ನು ದೊಡ್ಡಿ
  • ಪಾಲಕನಿಗೆ ಸಂದಾಯ ಮಾಡಕ್ಕದ್ದು, ಅವನು ಅವುಗಳನ್ನು ಮತ್ತು 12ನೆಯ ಪ್ರಕರಣದ ಮೇರೆಗೆ ಅಂಥ ಖರ್ಚುಗಳ
  • ಬಾಬ್ತು ಬಗ್ಗೆ ತಾನು ಸ್ವೀಕರಿಸಿದ್ದ ಎಲ್ಲ ಮೊಬಲಗುಗಳನ್ನು ಸಹ ಇಟ್ಟುಕೊಳ್ಳತಕ್ಕದ್ದು ಮತ್ತು ವಿನಿಯೋಗಿಸತಕ್ಕದ್ದು.
  • (4) 13ನೆಯ ಪ್ರಕರಣದ ಮೇರೆಗೆ ಅಗತ್ಯಪಡಿಸಿದ ಭದ್ರತಾ ಮೊಬಲಗನ್ನು ದೊಡ್ಡಿ ಪಾಲಕನಲ್ಲಿ ಠೇವಣಿ
  • ಇಡತಕ್ಕದ್ದು.
  • (5) ದನಗಳ ಮಾರಾಟದ ಉತ್ಪತ್ತಿಯ ಪೈಕಿ ಕ್ಲೇಮು ಮಾಡಿರದ ಹೆಚ್ಚುವರಿಗಳನ್ನು ಜಿಲ್ಲಾ ದಂಡಾಧಿಕಾರಿಗೆ
  • ಕಳಿಸತಕ್ಕದ್ದು, ಅವುಗಳನ್ನು ಅವನು ಆರು ತಿಂಗಳುಗಳ ಅವಧಿಯವರೆಗೆ ಠೇವಣಿಯಾಗಿ ಇಟ್ಟುಕೊಳ್ಳತಕ್ಕದ್ದು ಮತ್ತು
  • ಆ ಅವಧಿಯೊಳಗೆ ಅದಕ್ಕೆ ಸಂಬಂಧಿಸಿದಂತೆ ಯಾವ ಕ್ಲೇಮನ್ನೂ ಮಾಡದಿದ್ದರೆ ಮತ್ತು ಸ್ಧಾಪಿಸದಿದ್ದರೆ ಅಂಥ
  • ಉತ್ಪತ್ತಿಗಳನ್ನು, ದೊಡ್ಡಿಯ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸ್ಧಳೀಯ ಪ್ರಾಧಿಕಾರದ ಸ್ಧಳೀಯ ನಿಧಿಗೆ ಜಮೆ
  • ಮಾಡತಕ್ಕದ್ದು ಮತ್ತು ಹಾಗೆ ಜಮೆ ಮಾಡಲಾದ ಯಾವುದೇ ಮೊಬಲಗಿನ ವಸೂಲಿಯ ಬಗ್ಗೆ ಯಾವ
  • ದಾವೆಯನ್ನೂ ಹೂಡಲು ಅವಕಾಶವಿರತಕ್ಕದ್ದಲ್ಲ.

ಅಧಿಕಾರಿಗಳು ಮತ್ತು ದೊಡ್ಡಿ- ಪಾಲಕರು ಈ ಅಧಿನಿಯಮದ ಮೇರೆಗಿನ ಮಾರಾಟಗಳಲ್ಲಿ ದನಗಳನ್ನು

ಕೊಳ್ಳತಕ್ಕದ್ದಲ್ಲ.-

  • (1) ಈ ಅಧಿನಿಯಮದ ಮೇರೆಗೆ ಯಾವುದೇ ಕಾರ್ಯವನ್ನು ನೆರವೇರಿಸಲು ನೇಮಿಸಲಾದ
  • ಅಥವಾ ಅಧಿಕೃತಗೊಳಿಸಲಾದ ಯಾವನೇ ಪೊಲೀಸು ಅಧಿಕಾರಿಯೂ ಅಥವಾ ಬೇರೆ ಅಧಿಕಾರಿಯೂ ಅಥವಾ
  • ದೊಡ್ಡಿ-ಪಾಲಕನೂ, ಈ ಅಧಿನಿಯಮದ ಮೇರೆಗಿನ ಮಾರಾಟದಲ್ಲಿ ಯಾವುದೇ ದನವನ್ನು ಪ್ರತ್ಯಕ್ಷವಾಗಿ ಅಥವಾ
  • ಪರೋಕ್ಷವಾಗಿ ಕೊಳ್ಳತಕ್ಕದ್ದಲ್ಲ.
  • (2) ದೊಡ್ಡಿಗೆ ಹಾಕಲಾದ ದನಗಳ ಬಿಡುಗಡೆಗೆ ಅಥವಾ ವಾಪಸು ಕೊಡುವಿಕೆಗೆ ಸಕ್ಷಮ ನ್ಯಾಯಾಲಯವು
  • ಆದೇಶ ಮಾಡಿದ್ದ ಹೊರತು, ಯಾವ ದೊಡ್ಡಿ-ಪಾಲಕನೂ ಅವುಗಳನ್ನು ಈ ಅಧ್ಯಾಯದ
  • ಉಪಬಂಧಗಳಿಗನುಸಾರವಾಗಿಯಲ್ಲದೆ, ಬಿಡುಗಡೆ ಮಾಡತಕ್ಕದ್ದಲ್ಲ ಅಥವಾ ವಾಪಸು ಮಾಡತಕ್ಕದ್ದಲ್ಲ.

ಫಿರ್ಯಾದುಗಳನ್ನು ಸಲ್ಲಿಸಲು ಅಧಿಕಾರ

ಈ ಅಧಿನಿಯಮದ ಮೇರೆಗೆ ಯಾರ ದನಗಳನ್ನು ವಶಪಡಿಸಿಕೊಳ್ಳಲಾಗಿದೆಯೋ ಅಥವಾ ಹಾಗೆ ವಶಪಡಿಸಿಕೊಂಡಿರುವ ದನಗಳನ್ನು ಈ ಅಧಿನಿಯಮವನ್ನು ಉಲ್ಲಂಘಿಸಿ ತಡೆಹಿಡಿದಿಟ್ಟುಕೊಳ್ಳಲಾಗಿದೆಯೋ ಅಂಥ ವ್ಯಕ್ತಿಯು, ಆ ಬಗ್ಗೆ ಫಿರ್ಯಾದುಗಳನ್ನು ಸ್ವೀಕರಿಸಲು ಮತ್ತು ದೋಷಾರೋಪಗಳ ಅಧಿವಿಚಾರಣೆ ಮಾಡಲು ಅಧಿಕೃತನಾದ ಯಾವನೇ ದಂಡಾಧಿಕಾರಿಗೆ ಅವುಗಳನ್ನು

ವಶಪಡಿಸಿಕೊಂಡ ದಿನಾಂಕದಿಂದ ಹತ್ತು ದಿನಗಳೊಳಗಾಗಿ ಯಾವುದೇ ಕಾಲದಲ್ಲಿ ಫಿರ್ಯಾದು ಸಲ್ಲಿಸಬಹುದು.

ಫಿರ್ಯಾದಿನ ಬಗ್ಗೆ ಪ್ರಕ್ರಿಯೆ

  • ಫಿರ್ಯಾದುದಾರನು ಸ್ವತಃ ಅಥವಾ ವಿದ್ಯಮಾನಗಳನ್ನು ಸ್ವತಃ ಅರಿತಿದ್ದ ಏಜೆಂಟನ ಮೂಲಕ ಫಿರ್ಯಾದನ್ನು ಲಿಖಿತದಲ್ಲಿಯಾಗಲಿ ಅಥವಾ ಬಾಯಿ ಮಾತಿನ ಮೂಲಕವಾಗಲಿ ಮಾಡತಕ್ಕದ್ದು:
  • ಪರಂತು, ಅದನ್ನು ಬಾಯಿ ಮಾತಿನಿಂದ ಮಾಡಿದ್ದರೆ, ಅದರ ಸಾರಾಂಶವನ್ನು ದಂಡಾಧಿಕಾರಿಯು
  • ಬರೆದುಕೊಳ್ಳತಕ್ಕದ್ದು.
  • (2) ಫಿರ್ಯಾದುದಾರನನ್ನು ಅಥವಾ ಅವನ ಏಜೆಂಟನನ್ನು ವಿಚಾರಣೆ ಮಾಡಿದ ಮೇಲೆ ಫಿರ್ಯಾದು
  • ಸರಿಯಾದ ಆಧಾರವುಳ್ಳದ್ದಾಗಿದೆ ಎಂದು ನಂಬಲು ದಂಡಾಧಿಕಾರಿಗೆ ಕಾರಣಗಳಿದ್ದರೆ, ದಂಡಾಧಿಕಾರಿಯು ಯಾರ
  • ವಿರುದ್ಧ ಆ ವ್ಯಕ್ತಿಯ ಫಿರ್ಯಾದನ್ನು ಮಾಡಿರುವನೋ ಆ ವ್ಯಕ್ತಿಯನ್ನು ಸಮನು ಮಾಡತಕ್ಕದ್ದು ಮತ್ತು
  • ಮೊಕದ್ದಮೆಯ ತನಿಖೆ ಮಾಡತಕ್ಕದ್ದು.

ಕಾನೂನು ವಿರುದ್ಧ ವಶಪಡಿಸಿಕೊಳ್ಳುವಿಕೆಯ ಬಗ್ಗೆ ಪರಿಹಾರ

ವಶಪಡಿಸಿಕೊಳ್ಳುವಿಕೆಯು ಅಥವಾ ತಡೆಹಿಡಿದಿರಿಸುವಿಕೆಯು ಕಾನೂನು ವಿರುದ್ಧವಾದುದೆಂದು ತೀರ್ಮಾನಿಸಿದರೆ, ಆ ವಶಪಡಿಸಿಕೊಳ್ಳುವಿಕೆಯಿಂದ ಅಥವಾ ತಡೆಹಿಡಿದಿರಿಸುವಿಕೆಯಿಂದ ಉಂಟಾದ ನಷ್ಟಕ್ಕಾಗಿ, ನೂರು ರೂಪಾಯಿಗಳಿಗೆ ಮೀರದ ಯುಕ್ತವಾದ ಪರಿಹಾರವನ್ನು, ಮತ್ತು ದನಗಳನ್ನು ಬಿಡಿಸಿಕೊಳ್ಳುವಲ್ಲಿ ಫಿರ್ಯಾದುದಾರನು ಸಲ್ಲಿಸಿದ್ದ ಎಲ್ಲಾ ಜುಲ್ಮಾನೆಗಳನ್ನು

  • ಮತ್ತು ಅವನಿಗೆ ತಗುಲಿದ್ದ ವೆಚ್ಚಗಳನ್ನು ಆ ದನಗಳನ್ನು ವಶಪಡಿಸಿಕೊಂಡ ಅಥವಾ ತಡೆಹಿಡಿದಿರಿಸಿದ ವ್ಯಕ್ತಿಯಿಂದ
  • ದಂಡಾಧಿಕಾರಿಯು ಫಿರ್ಯಾದುದಾರನಿಗೆ ಕೊಡಿಸತಕ್ಕದ್ದು:
  • ಪರಂತು, ದನಗಳನ್ನು ಬಿಟ್ಟುಕೊಡಲಾಗದಿದ್ದರೆ ದಂಡಾಧಿಕಾರಿಯು ಅಂಥ ಪರಿಹಾರಕ್ಕೆ ಆದೇಶ
  • ಮಾಡುವುದರ ಜೊತೆಗೆ, ಅವುಗಳನ್ನು ಬಿಟ್ಟುಕೊಡುವುದಕ್ಕೆ ಆದೇಶ ಮಾಡತಕ್ಕದ್ದು ಮತ್ತು ಈ ಅಧಿನಿಯಮದ
  • ಮೇರೆಗೆ ವಿಧಿಸಲಾದ ಎಲ್ಲಾ ಜುಲ್ಮಾನೆಗಳನ್ನು ಮತ್ತು ಖರ್ಚುಗಳನ್ನು, ಆ ದನಗಳನ್ನು ವಶಪಡಿಸಿಕೊಂಡ ಅಥವಾ
  • ತಡೆಹಿಡಿದಿರಿಸಿಟ್ಟ ವ್ಯಕ್ತಿಯು ಸಲ್ಲಿಸತಕ್ಕದ್ದೆಂದು ನಿರ್ದೇಶಿಸತಕ್ಕದ್ದು.

ಪರಿಹಾರದ ವಸೂಲಿ

22ನೆಯ ಪ್ರಕರಣದಲ್ಲಿ ವಿವರಿಸಲಾದ ಪರಿಹಾರವನ್ನು, ಜುಲ್ಮಾನೆಗಳನ್ನು ಮತ್ತು

ಖರ್ಚುಗಳನ್ನು, ಅವು ದಂಡಾಧಿಕಾರಿಯಿಂದ ವಿಧಿಸಲಾದ ಜುಲ್ಮಾನೆಗಳೆಂಬಂತೆ ವಸೂಲು ಮಾಡಬಹುದು.

ದನಗಳ ವಶಪಡಿಸಿಕೊಳ್ಳುವಿಕೆಯನ್ನು ಬಲಾತ್ಕಾರವಾಗಿ ವಿರೋಧಿಸುವ ಅಥವಾ ಇವುಗಳನ್ನು ಪಾರುಮಾಡುವ ಬಗ್ಗೆ ದಂಡ

  • ಈ ಅಧಿನಿಯಮದ ಮೇರೆಗೆ ವಶಪಡಿಸಿಕೊಳ್ಳಲು ಗುರಿಯಾಗುವ ದನಗಳ
  • ವಶಪಡಿಸಿಕೊಳ್ಳುವಿಕೆಯನ್ನು ಬಲಾತ್ಕಾರವಾಗಿ ವಿರೋಧಿಸುವ ಯಾರೇ ಆಗಲಿ, ಮತ್ತು ಆ ದನಗಳನ್ನು
  • ವಶಪಡಿಸಿಕೊಂಡ ತರುವಾಯ ದೊಡ್ಡಿಯಿಂದಾಗಲೀ ಅಥವಾ ದನಗಳ ಹತ್ತಿರದಲ್ಲಿದ್ದು, ಈ ಅಧಿನಿಯಮದ ಮೇರೆಗೆ
  • ಪ್ರದತ್ತವಾದ ಅಧಿಕಾರಗಳ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಯಾರೇ ವ್ಯಕ್ತಿಯು ಆ ದನಗಳನ್ನು ದೊಡ್ಡಿಗೆ
  • ಒಯ್ಯುತ್ತಿರುವಾಗ ಆಗಲೀ ಅಥವಾ ಒಯ್ಯಲಿರುವಾಗ ಆಗಲೀ, ಅವುಗಳನ್ನು ಪಾರು ಮಾಡುವ ಯಾರೇ ಆಗಲಿ,
  • ಅವನು ಅಪರಾಧ ನಿರ್ಣೀತನಾದ ಮೇಲೆ, ಆರು ತಿಂಗಳವರೆಗೆ ವಿಸ್ತರಿಸಬಹುದಾದ ಅವಧಿಯ ಕಾರಾವಾಸದಿಂದ
  • ಅಥವಾ ಐದುನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ
  • ದಂಡಿತನಾಗತಕ್ಕದ್ದು.

ದನಗಳಿಂದ ಜಮೀನಿಗೆ ಅಥವಾ ಬೆಳೆಗಳಿಗೆ ಅಥವಾ ಸಾರ್ವಜನಿಕ ರಸ್ತೆಗಳಿಗೆ ಆದ ಹಾನಿಯ ಬಗ್ಗೆ ದಂಡ

  • (1) ಯಾವುದೇ ಜಮೀನು ಅಥವಾ ಯಾವುದೇ ಬೆಳೆ ಅಥವಾ ಜಮೀನಿನ ಉತ್ಪತ್ತಿ ಅಥವಾ ಯಾವುದೇ
  • ಸಾರ್ವಜನಿಕ ರಸ್ತೆಯ ಮತ್ತು 8ನೆಯ ಪ್ರಕರಣದಲ್ಲಿ ವಿವರಿಸಲಾದ ಇತರ ಯಾವುವೇ ಸ್ವತ್ತುಗಳ ಮೇಲೆ ದನಗಳು
  • ಅತಿಕ್ರಮಿಸುವುದಕ್ಕೆ ಅವಕಾಶ ಮಾಡಿಕೊಟ್ಟು, ಉಪೇಕ್ಷೆಯಿಂದ ಅಥವಾ ಇತರ ರೀತಿಯಲ್ಲಿ ಹಾನಿಗೊಳಿಸುವ ಅಥವಾ
  • ಹಾನಿಯುಂಟು ಮಾಡಿಸುವ ಅಥವಾ ಹಾನಿಯುಂಟು ಮಾಡುವುದಕ್ಕೆ ಅವಕಾಶ ಕೊಡುವ ಯಾವನೇ ಒಡೆಯನು
  • ಅಥವಾ ದನಗಳ ಪಾಲಕನು ಅಪರಾಧ ನಿರ್ಣೀತನಾದ ಮೇಲೆ, ಅವನು ಐವತ್ತು ರೂಪಾಯಿಗಳವರೆಗೆ
  • ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.
  • (2) (1)ನೆಯ ಉಪಪ್ರಕರಣದ ಮೇರೆಗೆ ಅಪರಾಧದ ಅಧಿವಿಚಾರಣೆ ಮಾಡುವ ದಂಡಾಧಿಕಾರಿಯು,-
  • (ಎ) ಎರಡು ನೂರ ಐವತ್ತು ರೂಪಾಯಿಗಳಿಗೆ ಮೀರದಂತೆ ದಂಡಾಧಿಕಾರಿಯು ಯುಕ್ತವೆಂದು
  • ಪರ್ಯಾಲೋಚಿಸುವಷ್ಟು ಪರಿಹಾರವನ್ನು, ಯಾವನೇ ವ್ಯಕ್ತಿಗೆ, ಅಪರಾಧ ಮಾಡುವ ಆಪಾದಿತನಿಂದ ಜಮೀನಿನ
  • ಮೇಲಿರುವ ಅವನ ಬೆಳೆಗೆ ಅಥವಾ ಇತರ ಉತ್ಪತ್ತಿಗೆ ಯಾವುದೇ ಹಾನಿ ಉಂಟಾಗಿದೆಯೆಂದು ರುಜುವಾತಾದಲ್ಲಿ ಆ
  • ಬಗ್ಗೆ ಆರೋಪಿಯು ಸಲ್ಲಿಸತಕ್ಕದ್ದೆಂದು; ಮತ್ತು
  • (ಬಿ) ಯಾವ ದನಗಳಿಗೆ ಸಂಬಂಧಿಸಿದಂತೆ ಅಪರಾಧ ಘಟಿಸಿರುವುದೋ ಆ ದನಗಳನ್ನು ರಾಜ್ಯ ಸರ್ಕಾರಕ್ಕೆ
  • ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದೆಂದು
  • - ಆದೇಶ ಮಾಡಬಹುದು.
  • (3) (2)ನೆಯ ಉಪಪ್ರಕರಣದ ಮೇರೆಗೆ ಐತೀರ್ಪು ನೀಡಿದ ಯಾವುದೇ ಪರಿಹಾರವನ್ನು, ಅದು ಈ
  • ಪ್ರಕರಣದ ಮೇರೆಗೆ ವಿಧಿಸಲಾದ ಜುಲ್ಮಾನೆಯೆಂಬಂತೆ ವಸೂಲು ಮಾಡಬಹುದು.
  • (4) ಅಧಿಸೂಚನೆಯ ಮೂಲಕ ರಾಜ್ಯ ಸರ್ಕಾರವು, ಅಂಥ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ
  • ಯಾವುದೇ ಸ್ಥಳೀಯ ಪ್ರದೇಶದ ಸಂಬಂಧದಲ್ಲಿ ಈ ಪ್ರಕರಣವನ್ನು ಮೂರು ತಿಂಗಳುಗಳವರೆಗೆ ವಿಸ್ತರಿಸಬಹುದಾದ
  • ಕಾರಾವಾಸ ಅಥವಾ ಐದುನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆ ಅಥವಾ ಅವೆರಡೂ" ಎಂಬ
  • ಶಬ್ದಗಳನ್ನು "ಐವತ್ತು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆ" ಎಂಬ ಶಬ್ದಗಳ ಬದಲಾಗಿ
  • ಸೇರಿಸಲಾಗಿದೆಯೆಂಬಂತೆ ಓದತಕ್ಕದ್ದು ಎಂದು ನಿರ್ದೇಶಿಸಬಹುದು.
  • (5) 24ನೆಯ ಮತ್ತು 25ನೆಯ ಪ್ರಕರಣದ ಮೇರೆಗಿನ ಅಪರಾಧಗಳು ಸಂಜ್ಞೇಯ ವಾದವುಗಳಾಗಿರತಕ್ಕದ್ದು.

ದನಗಳು ಅತಿಕ್ರಮ ಪ್ರವೇಶ ಮಾಡುವಂತೆ ಮಾಡಿ ಉಂಟಾದ ಕೇಡಿಗಾಗಿ ದಂಡದ ವಸೂಲಿ

  • ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದಾಗ್ಯೂ, 25ನೆಯ ಪ್ರಕರಣದ ಮೇರೆಗೆ ವಿಧಿಸಲಾದ ಅಥವಾ
  • ಯಾವುದೇ ಜಮೀನಿನ ಮೇಲೆ ದನಗಳ ಅತಿಕ್ರಮ ಪ್ರವೇಶ ಮಾಡುವಂತೆ ಮಾಡಿ ಉಂಟುಮಾಡಿದ ಕೇಡಿನ
  • ಅಪರಾಧಕ್ಕಾಗಿ ಭಾರತ ದಂಡಸಂಹಿತೆಯ 426ನೆಯ ಪ್ರಕರಣದ ಮೇರೆಗೆ ವಿಧಿಸಲಾದ ಯಾವುದೇ ಜುಲ್ಮಾನೆಯನ್ನು
  • ಅತಿಕ್ರಮ ಪ್ರವೇಶವಾದ ಕಾಲಕ್ಕೆ ಅವುಗಳನ್ನು ವಶಪಡಿಸಿಕೊಂಡಿರಲಿ ಅಥವಾ ಇಲ್ಲದಿರಲಿ ಮತ್ತು ಅವು ಅಪರಾಧ
  • ನಿರ್ಣೀತನಾದ ವ್ಯಕ್ತಿಯ ಸ್ವತ್ತಾಗಿರಲಿ, ಅಥವಾ ಅತಿಕ್ರಮ ಪ್ರವೇಶವು ಘಟಿಸಿದಾಗ ಅವನ ವಶದಲ್ಲಿ ಮಾತ್ರವೇ
  • ಇದ್ದುದಾಗಿರಲಿ, ಆ ಅತಿಕ್ರಮ ಪ್ರವೇಶ ಮಾಡಿದ ಎಲ್ಲ ಅಥವಾ ಯಾವುವಾದರೂ ದನಗಳ ಮಾರಾಟದ ಮೂಲಕ
  • ವಸೂಲು ಮಾಡಬಹುದು.

ಕರ್ತವ್ಯಗಳನ್ನು ನಿರ್ವಹಿಸಲು ತಪ್ಪುವ ದೊಡ್ಡಿ-ಪಾಲಕರಿಗೆ ದಂಡ

  • 19ನೆಯ ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸಿ ದನಗಳ ಬಿಡುಗಡೆ ಮಾಡುವ ಅಥವಾ ಖರೀದಿ ಮಾಡುವ ಅಥವಾ ವಾಪಸು ಮಾಡುವ, ಅಥವಾ ಈ ಅಧಿನಿಯಮದ ಮೂಲಕ ಅವನಿಗೆ ವಿಧಿಸಲಾದ ಇತರ ಯಾವುವೇ ಕರ್ತವ್ಯಗಳನ್ನು
  • ನೆರವೇರಿಸಲು ತಪ್ಪುವ ಯಾರೇ ದೊಡ್ಡಿ-ಪಾಲಕನು, ಅವನು ಅಪರಾಧ ನಿರ್ಣೀತನಾದ ಬಳಿಕ, ಅವನು
  • ಗುರಿಯಾಗಬಹುದಾದ ಇತರ ಯಾವುದೇ ದಂಡದ ಜೊತೆಗೆ, ಐವತ್ತು ರೂಪಾಯಿಗಳವರೆಗೆ ವಿಸ್ತರಿಸಬಹುದಾದ
  • ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.

25ನೆಯ, 26ನೆಯ ಅಥವಾ 27ನೆಯ ಪ್ರಕರಣಗಳ ಮೇರೆಗೆ ವಸೂಲು ಮಾಡಿದ ಜುಲ್ಮಾನೆಗಳ ವಿನಿಯೋಗ

  • 25ನೆಯ, 26ನೆಯ ಅಥವಾ 27ನೆಯ ಪ್ರಕರಣಗಳ ಮೇರೆಗೆ ವಸೂಲು ಮಾಡಲಾದ ಎಲ್ಲ
  • ಜುಲ್ಮಾನೆಗಳನ್ನು ಯಾವನೇ ವ್ಯಕ್ತಿಯ ಬೆಳೆಗಳಿಗೆ ಅಥವಾ ಇತರ ಉತ್ಪತ್ತಿಗೆ ಅಥವಾ ಯಾವನೇ ವ್ಯಕ್ತಿಯ ಜಮೀನಿಗೆ
  • ಅಥವಾ ಯಾವನೇ ವ್ಯಕ್ತಿಗೆ ಉಂಟಾದ ಮತ್ತು ಅಪರಾಧ ನಿರ್ಣಯಿಸುವ ದಂಡಾಧಿಕಾರಿಗೆ ಮನದಟ್ಟಾಗುವಂತೆ
  • ರುಜುವಾತಾದ ನಷ್ಟದ ಅಥವಾ ಹಾನಿಯ ಸಲುವಾಗಿ ಪರಿಹಾರವೆಂದು ಪೂರ್ತಿಯಾಗಿ ಅಥವಾ ಭಾಗಶ:
  • ವಿನಿಯೋಗಿಸಬಹುದು.

ಪರಿಹಾರಕ್ಕಾಗಿ ದಾವೆ ಹೂಡುವ ಅಧಿಕಾರದ ಉಳಿಸುವಿಕೆ

  • (1) ದನಗಳ ಅತಿಕ್ರಮ ಪ್ರವೇಶದಿಂದ ಯಾರ ಬೆಳೆಗಳು ಅಥವಾ ಇತರ ಉತ್ಪತ್ತಿಗಳು ಅಥವಾ ಜಮೀನು ಹಾನಿಗೊಳಗಾಗಿದೆಯೋ ಅವನು ಯಾವುದೇ ಸಕ್ಷಮ ನ್ಯಾಯಾಲಯದಲ್ಲಿ ಪರಿಹಾರದ ಸಲುವಾಗಿ ದಾವೆ ಹೂಡುವುದಕ್ಕೆ ಈ ಅಧಿನಿಯಮದಲ್ಲಿರುವ ಯಾವುದೂ ಪ್ರತಿಬಂಧಿಸುವುದೆಂದು ಭಾವಿಸತಕ್ಕದಲ್ಲ.
  • (2) ಈ ಅಧಿನಿಯಮದ ನಿಯಮದ ಮೇರೆಗೆ ಅಂಥ ವ್ಯಕ್ತಿಗೆ ಅಪರಾಧ ನಿರ್ಣಯಿಸುವ
  • ದಂಡಾಧಿಕಾರಿಯು ಆದೇಶದ ಮೂಲಕ ಸಂದಾಯ ಮಾಡಿದ ಯಾವುದೇ ಪರಿಹಾರವನ್ನು ಅಂಥ ದಾವೆಯಲ್ಲಿ
  • ಅವನು ಕ್ಲೇಮು ಮಾಡಿದ ಅಥವಾ ಅವನಿಗೆ ಕೊಡಿಸಲಾದ ಯಾವುದೇ ಮೊಬಲಗಿನಿಂದ ವಜಾ ಮಾಡಿಕೊಳ್ಳತಕ್ಕದ್ದು
  • ಅಥವಾ ಮುರಿದುಕೊಳ್ಳತಕ್ಕದ್ದು.

ಈ ಅಧಿನಿಯಮದ ಮೇರೆಗಿನ ಅಧಿಕಾರಗಳನ್ನು ಚಲಾಯಿಸಲು ಸ್ಧಳಿಯ ಪ್ರಾಧಿಕಾರಗಳನ್ನು

ಅಧಿಕೃತಗೊಳಿಸಲು ರಾಜ್ಯ ಸರ್ಕಾರದ ಅಧಿಕಾರ.-

ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಅಂಥ ಸ್ಧಳೀಯ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಅಂಥ ಯಾವುದೇ ಸ್ಧಳೀಯ ಪ್ರಾಧಿಕಾರವನ್ನು ಈ ಅಧಿನಿಯಮದ ಮೇರೆಗೆ ರಾಜ್ಯ ಸರ್ಕಾರದ ಅಥವಾ ಜಿಲ್ಲಾ ದಂಡಾಧಿಕಾರಿಯ ಎಲ್ಲ ಅಥವಾ ಯಾವುದೇ ಅಧಿಕಾರಗಳನ್ನು ಅಂಥ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ನಿರ್ಬಂಧಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟು ಚಲಾಯಿಸಲು ಅಧಿಕೃತಗೊಳಿಸಬಹುದು.

ನಿಯಮಗಳನ್ನು ರಚಿಸಲು ಅಧಿಕಾರ

  • (1) ರಾಜ್ಯ ಸರ್ಕಾರವು ಪೂರ್ವ ಪ್ರಕಟಣೆಯ ಷರತ್ತಿಗೊಳಪಟ್ಟು, ಅಧಿಸೂಚನೆಯ ಮೂಲಕ, ಈ ಅಧಿನಿಯಮದ ಎಲ್ಲ ಅಥವಾ ಯಾವುವೇ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ನಿಯಮಗಳನ್ನು ರಚಿಸಬಹುದು.
  • (2) ವಿಶೇಷವಾಗಿ ಮತ್ತು ಮೇಲೆ ಹೇಳಿದ ಉಪಬಂಧದ ಸಾಮಾನ್ಯ ಅನ್ವಯಕ್ಕೆ ಬಾಧೆ ಬಾರದಂತೆ ಅಂಥ
  • ನಿಯಮಗಳು ಈ ಕೆಳಕಂಡವುಗಳ ಬಗ್ಗೆ ಉಪಬಂಧಿಸಬಹುದು, ಎಂದರೆ,-
  • (i) 13ನೆಯ ಪ್ರಕರಣದ ಮೇರೆಗೆ ಮಾಡಬೇಕಾದ ಘೋಷಣೆಯ ನಮೂನೆ ಮತ್ತು ಆ ಸಂಬಂಧದ
  • ಪ್ರಕ್ರಿಯೆ ಮತ್ತು ಠೇವಣಿ ದರ;
  • (ii) ಭದ್ರತಾ ಠೇವಣಿ ಇಡುವುದನ್ನು, ಮತ್ತು ಅದರ ಅಭಿರಕ್ಷೆ ಮತ್ತು ಮರುಪಾವತಿಯನ್ನು
  • ವಿನಿಯಮಿಸುವ ಪ್ರಕ್ರಿಯೆ;
  • (iii) ಯಾವುದೇ ದನವನ್ನು ವಿಲೇ ಮಾಡಬೇಕಾದ ರೀತಿ;
  • (iv) ಗೊತ್ತುಪಡಿಸಬೇಕಾದ ಅಥವಾ ಗೊತ್ತುಪಡಿಸಬಹುದಾದ ಯಾವುದೇ ಇತರ ವಿಷಯ.

ಅಧಿಸೂಚನೆಗಳನ್ನು ಮತ್ತು ನಿಯಮಗಳನ್ನು ರಾಜ್ಯವಿಧಾನ ಮಂಡಲದ ಮುಂದೆ ಮಂಡಿಸುವುದು

  • 10ನೇ ಪ್ರಕರಣದ (1)ನೇ ಉಪಪ್ರಕರಣದ, 25ನೇ ಪ್ರಕರಣದ (4)ನೇ ಉಪಪ್ರಕರಣದ ಮತ್ತು 30ನೇ ಪ್ರಕರಣದ ಮೇರೆಗೆ
  • ಹೊರಡಿಸಿದ ಪ್ರತಿಯೊಂದು ಅಧಿಸೂಚನೆಯನ್ನು, ಮತ್ತು 31ನೆಯ ಪ್ರಕರಣದ ಮೇರೆಗೆ ರಚಿಸಿದ ಪ್ರತಿಯೊಂದು
  • ನಿಯಮವನ್ನು, ಅದನ್ನು ಹೊರಡಿಸಿದ ಅಥವಾ ರಚಿಸಿದ ತರುವಾಯ, ಆದಷ್ಟು ಬೇಗನೆ, ರಾಜ್ಯ ವಿಧಾನ
  • ಮಂಡಲದ ಪ್ರತಿಯೊಂದು ಸದನದ ಮುಂದೆ ಅದು ಅಧಿವೇಶನದಲ್ಲಿರುವಾಗ ಒಂದು ಅಧಿವೇಶನದಲ್ಲಿ ಅಥವಾ
  • ಒಂದಾದ ಮೇಲೊಂದರಂತೆ ಅನುಕ್ರಮವಾಗಿ ಬರುವ ಎರಡು ಅಥವಾ ಹೆಚ್ಚು ಅಧಿವೇಶನಗಳಲ್ಲಿ
  • ಅಡಕವಾಗಬಹುದಾದ ಒಟ್ಟು ಮೂವತ್ತು ದಿನಗಳ ಅವಧಿಯವರೆಗೆ ಇಡತಕ್ಕದ್ದು ಮತ್ತು, ಅದನ್ನು ಹಾಗೆ ಇಡಲಾದ
  • ಅಧಿವೇಶನ ಅಥವಾ ಅದರ ನಿಕಟೋತ್ತರದ ಅಧಿವೇಶನಗಳು ಮುಕ್ತಾಯವಾಗುವುದಕ್ಕೆ ಮುಂಚೆ, ಎರಡೂ
  • ಸದನಗಳು ಆ ಅಧಿಸೂಚನೆಯಲ್ಲಿ ಅಥವಾ ನಿಯಮದಲ್ಲಿ ಯಾವುದೇ ಮಾರ್ಪಾಟನ್ನು ಮಾಡಬೇಕೆಂದು ಒಪ್ಪಿದರೆ,
  • ಅಥವಾ ಆ ಅಧಿಸೂಚನೆಯನ್ನು ಅಥವಾ ಆ ನಿಯಮವನ್ನು ಹೊರಡಿಸಕೂಡದೆಂದು ಅಥವಾ ರಚಿಸಕೂಡದೆಂದು
  • ಎರಡೂ ಸದನಗಳು ಒಪ್ಪಿದರೆ, ಆ ತರುವಾಯ ಆ ಅಧಿಸೂಚನೆಯು ಅಥವಾ ನಿಯಮವು, ಅಂಥ ಮಾರ್ಪಾಟಾದ
  • ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಸಂದರ್ಭಾನುಸಾರ ಪರಿಣಾಮಕಾರಿಯಾಗತಕ್ಕದ್ದಲ್ಲ;
  • ಆದರೂ ಇಂಥ ಯಾವುದೇ ಮಾರ್ಪಾಟು ಅಥವಾ ರದ್ದಿಯಾತಿಯು ಆ ಅಧಿಸೂಚನೆಯ ಅಥವಾ ನಿಯಮದ
  • ಮೇರೆಗೆ ಮಾಡಲಾದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧೆಯನ್ನುಂಟುಮಾಡತಕ್ಕದ್ದಲ್ಲ.

ನಿರಸನ ಮತ್ತು ಉಳಿಸುವಿಕೆಗಳು

ಮೈಸೂರು ಪ್ರದೇಶದಲ್ಲಿ ಜಾರಿಯಲ್ಲಿರುವಂತೆ ಮೈಸೂರು ದನಗಳ ಅತಿಕ್ರಮ ಪ್ರವೇಶ ಅಧಿನಿಯಮ, 1871 (1871ರ ಮೈಸೂರು ಅಧಿನಿಯಮ I), [ಗುಲ್ಬರ್ಗ ಪ್ರದೇಶದಲ್ಲಿ]ಜಾರಿಯಲ್ಲಿರುವಂತೆ ಹೈದರಾಬಾದು ದನಗಳ ಅತಿಕ್ರಮ ಪ್ರವೇಶ ಅಧಿನಿಯಮ, 1337 ಫಸ್ಲಿ (1337 ಫಸ್ಲಿಯ ಹೈದರಾಬಾದು ಅಧಿನಿಯಮ ಗಿ), [ಮಂಗಳೂರು ಮತ್ತು ಕೊಳ್ಳೇಗಾಲ ಪ್ರದೇಶ] [ಬೆಳಗಾಂ ಪ್ರದೇಶ] ಮತ್ತು ಕೊಡಗು ಜಿಲ್ಲೆಯಲ್ಲಿ ಜಾರಿಯಲ್ಲಿರುವಂಥ ದನಗಳ ಅತಿಕ್ರಮಣ ಅಧಿನಿಯಮ, 1871 (1871ರ ಕೇಂದ್ರ ಅಧಿನಿಯಮ

  • I) ಇವುಗಳನ್ನು ಈ ಮೂಲಕ ನಿರಸನಗೊಳಿಸಲಾಗಿದೆ:
  • ಪರಂತು, [ಕರ್ನಾಟಕ] ಸಾಮಾನ್ಯ ಖಂಡಗಳ ಅಧಿನಿಯಮ, 1899ರ (1899ರ ಕರ್ನಾಟಕ ಅಧಿನಿಯಮ
  • III) 6ನೆಯ ಪ್ರಕರಣದ ಉಪಬಂಧಗಳು ಸದರಿ ಅಧಿನಿಯಮಿತಿಗಳ ನಿರಸನಕ್ಕೆ ಸಂಬಂಧಿಸಿದಂತೆ ಅನ್ವಯಿಸತಕ್ಕದ್ದು
  • ಮತ್ತು ಸದರಿ ಅಧಿನಿಯಮದ 8ನೆಯ ಮತ್ತು 26ನೆಯ ಪ್ರಕರಣಗಳು, ಸದರಿ ಅಧಿನಿಯಮಿತಿಗಳು, ಈ
  • ಅಧಿನಿಯಮದ ಮೂಲಕ ನಿರಸಿತವಾಗಿದ್ದರೆ ಮತ್ತು ಪುನಃ ಅಧಿನಿಯಮಿತಗೊಳಿಸಿದ್ದರೆ ಹೇಗೋಹಾಗೆ
  • ಅನ್ವಯಿಸತಕ್ಕದ್ದು.
  • 1. ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶ, 1973ರ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
  • 1. ಶೀರ್ಷಿಕೆ ಮತ್ತು ಪ್ರಾರಂಭ
  • 2. ಪರಿಭಾಷೆಗಳು
  • (ಎ) ಅಧಿನಿಯಮ
  • (ಬಿ) ನಮೂನೆ
  • (ಸಿ) ಪ್ರಕರಣ
  • 3. ದೊಡ್ಡಿಪಾಲಕನು ಇಟ್ಟಿರಬೇಕಾದ ರಿಜಿಸ್ಟರುಗಳು ಮತ್ತು ಸಲ್ಲಿಸಬೇಕಾದ ವಿವರಪಟ್ಟಿಕೆಗಳು
  • 4. ದನಗಳನ್ನು ದೊಡ್ಡಿಗೆ ತಂದಾಗ ಅನುಸರಿಸಬೇಕಾದ ಪ್ರಕ್ರಿಯೆ
  • 5. ವಸೂಲಿ ಮಾಡಲಾದ ಜುಲ್ಮಾನೆಯ ಹಣವನ್ನು ಖಜಾನೆಗೆ ಕಟ್ಟುವ ವಿಧಾನ
  • 6. ದನಗಳ ಒಡೆತನಕ್ಕೆ ಸಂಬಂಧಿಸಿದ ಘೋಷಣೆ
  • 7. ಭದ್ರತಾ ಹಣವನ್ನು ಠೇವಣಿಯಾಗಿಡುವುದು ಮತ್ತು ಮುಟ್ಟುಗೋಲು ಹಾಕಿಕೊಳ್ಳುವುದು.
  • 8. ಠೇವಣಿ ಇಡುವುದು, ಅದರ ಅಭಿರಕ್ಷೆ ಮತ್ತು ಅದರ ಮರುಪಾವತಿಗೆ ಸಂಬಂಧಿಸಿದ ಪ್ರಕ್ರಿಯೆ
  • 9. ದನಗಳನ್ನು ವಿಲೇವಾರಿ ಮಾಡುವ ವಿಧಾನ
  • 10. ನಿರಸನ ಮತ್ತು ಉಳಿಸುವಿಕೆಗಳು
  • ಅನುಸೂಚಿ - ನಮೂನೆಗಳು
  • ಜಿಎಸ್‍ಆರ್ 406.- ಕರ್ನಾಟಕ ದನಗಳ ಅತಿಕ್ರಮ ಪ್ರವೇಶ ಅಧಿನಿಯಮ, 1966ರ (1966ರ ಕರ್ನಾಟಕ
  • ಅಧಿನಿಯಮ 19) 31ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು,
  • ಈ ಮುಂದಿನ ನಿಯಮಗಳನ್ನು ರಚಿಸಿದ್ದು, ಸದರಿ ನಿಯಮಗಳ ಕರಡು ದಿನಾಂಕ 9ನೇ ಜುಲೈ, 1971ರ ಜಿಎಸ್‍ಆರ್
  • 219ರಲ್ಲಿನ ಸದರಿ ಪ್ರಕರಣದ (1)ನೇ ಉಪ ಪ್ರಕರಣವು ಅಗತ್ಯಪಡಿಸಿದಂತೆ ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆ
  • ಭಾಗ IV, 2-ಸಿ (i)ರಲ್ಲಿ ದಿನಾಂಕ 15ನೇ ಜುಲೈ 1971 ರಂದು ಪ್ರಕಟವಾಗಿದೆ, ಎಂದರೆ:-

ಶೀರ್ಷಿಕೆ ಮತ್ತು ಪ್ರಾರಂಭ

  • (1) ಈ ನಿಯಮಗಳನ್ನು ಕರ್ನಾಟಕ ದನಗಳ ಅತಿಕ್ರಮ ಪ್ರವೇಶ ನಿಯಮಗಳು, 1971 ಎಂದು ಕರೆಯತಕ್ಕದ್ದು.
  • (2) ಇವು ಕೂಡಲೇ ಜಾರಿಗೆ ಬರತಕ್ಕದ್ದು.

ಪರಿಭಾಷೆಗಳು

ಈ ನಿಯಮಗಳಲ್ಲಿ, ಈ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

  • (ಎ) "ಅಧಿನಿಯಮ" ಎಂದರೆ ಕರ್ನಾಟಕ ದನಗಳ ಅತಿಕ್ರಮ ಪ್ರವೇಶ ಅಧಿನಿಯಮ, 1966 (1966ರ
  • ಕರ್ನಾಟಕ ಅಧಿನಿಯಮ 19);
  • (ಬಿ) "ನಮೂನೆ" ಎಂದರೆ ಈ ನಿಯಮಗಳ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ನಮೂನೆ;
  • (ಸಿ) "ಪ್ರಕರಣ" ಎಂದರೆ ಅಧಿನಿಯಮದ ಪ್ರಕರಣ.

ದೊಡ್ಡಿ-ಪಾಲಕನು ಇಡಬೇಕಾದ ರಿಜಿಸ್ಟರುಗಳು ಮತ್ತು ಸಲ್ಲಿಸಬೇಕಾದ ವಿವರಪಟ್ಟಿಕೆಗಳು

ಪ್ರತಿಯೊಬ್ಬ ದೊಡ್ಡಿ-ಪಾಲಕನು ಈ ನಿಯಮಗಳ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ನಮೂನೆಗಳಲ್ಲಿ,-

  • (i) ರಿಜಿಸ್ಟರುಗಳನ್ನು ಇರಿಸತಕ್ಕದ್ದು; ಮತ್ತು
  • (ii) ವಿವರಪಟ್ಟಿಕೆಗಳನ್ನು ಸಲ್ಲಿಸತಕ್ಕದ್ದು.

ದನಗಳನ್ನು ದೊಡ್ಡಿಗೆ ತಂದಾಗ ಅನುಸರಿಸಬೇಕಾದ ಪ್ರಕ್ರಿಯೆ

  • (1 ದನಗಳನ್ನು ದೊಡ್ಡಿಗೆ ತಂದಾಗ, ದೊಡ್ಡಿ-ಪಾಲಕನು 6ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿ ಅಗತ್ಯಪಡಿಸಿರುವಂತೆ ನಮೂನೆ-1 ರಲ್ಲಿ ನಮೂದುಗಳನ್ನು ಭರ್ತಿಮಾಡತಕ್ಕದ್ದು, ಮತ್ತು ರಿಜಿಸ್ಟರಿನಲ್ಲಿ, ದನಗಳನ್ನು ದೊಡ್ಡಿಗೆ ತಂದ ವ್ಯಕ್ತಿಯ ಸಹಿಯನ್ನು ಅಥವಾ ಅವನು ಅನಕ್ಷರಸ್ಧನಾಗಿದ್ದರೆ ಎಡಗೈ ಹೆಬ್ಬೆರಳಿನ ಗುರುತನ್ನು ಪಡೆದುಕೊಳ್ಳತಕ್ಕದ್ದು.
  • (2) ದೊಡ್ಡಿಪಾಲಕನು 6ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ಮಾಡಲಾದ ನಮೂದಿನ
  • ಪ್ರತಿಯನ್ನು, ದನಗಳನ್ನು ವಶಪಡಿಸಿಕೊಂಡ ಅಥವಾ ವಶಪಡಿಸಿಕೊಳ್ಳುವುದಕ್ಕೆ ಕಾರಣವಾದ ವ್ಯಕ್ತಿಗೆ ನಮೂನೆ-2
  • ರಲ್ಲಿ ಕೊಡತಕ್ಕದ್ದು.

ವಸೂಲು ಮಾಡಲಾದ ಜುಲ್ಮಾನೆಯ ಹಣವನ್ನು ಖಜಾನೆಗೆ ಕಟ್ಟುವ ವಿಧಾನ

ದೊಡ್ಡಿ-ಪಾಲಕನು, 10ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ವಿಧಿಸಲಾದ ಜುಲ್ಮಾನೆಯಾಗಿ ವಸೂಲು ಮಾಡಲಾದ ಯಾವುದೇ ಮೊತ್ತಕ್ಕೆ ನಮೂನೆ-3ರಲ್ಲಿ ರಸೀದಿ ನೀಡತಕ್ಕದ್ದು ಮತ್ತು ಅವನು ಅಂಥ ಮೊತ್ತವನ್ನು, 10ನೇ ಪ್ರಕರಣದ (2)ನೇ

ಉಪ ಪ್ರಕರಣದಿಂದ ಅಗತ್ಯಪಡಿಸಿದಂತೆ ಜಿಲ್ಲಾ ದಂಡಾಧಿಕಾರಿಯ ಹೆಸರಿಗೆ ಸೂಕ್ತ ಲೆಕ್ಕ ಶೀರ್ಷಿಕೆಗೆ ಜಮೆ

ಮಾಡುವುದಕ್ಕಾಗಿ ತಾಲೂಕಿನ ಸರ್ಕಾರಿ ಖಜಾನೆಗೆ ಹಣವನ್ನು ಕಟ್ಟತಕ್ಕದ್ದು.

ದನಗಳ ಒಡೆತನಕ್ಕೆ ಸಂಬಂಧಿಸಿದ ಘೋಷಣೆ

ದೊಡ್ಡಿ-ಪಾಲಕನು ದೊಡ್ಡಿಗೆ ಹಾಕಲಾದ ದನಗಳನ್ನು ಬಿಡುಗಡೆ ಮಾಡುವುದಕ್ಕೆ ಮುಂಚೆ ದನಗಳ ಮಾಲೀಕ ಅಥವಾ ಆತನ ಏಜೆಂಟನು ಅವುಗಳ ಮಾಲೀಕತ್ವದ ಬಗ್ಗೆ ಮಾಡುವಂತೆ ಅಗತ್ಯಪಡಿಸಿದ ಘೋಷಣೆಯು ನಮೂನೆ-4 ರಲ್ಲಿ ಇರತಕ್ಕದ್ದು.

(2) (1)ನೇ ಉಪಪ್ರಕರಣದ ಮೇರೆಗೆ ಉಲ್ಲೇಖಿಸಿರುವ ಘೋಷಣೆಯನ್ನು ದೊಡ್ಡಿ-ಪಾಲಕನ

ಸಮಕ್ಷಮದಲ್ಲಿ ಮಾಡತಕ್ಕದ್ದು ಮತ್ತು ಅದನ್ನು ಇಬ್ಬರು ಸಾಕ್ಷಿಗಳು ಧೃಡೀಕರಿಸತಕ್ಕದ್ದು.

ಭದ್ರತಾ ಹಣವನ್ನು ಠೇವಣಿಯಾಗಿಡುವುದು ಮತ್ತು ಮುಟ್ಟುಗೋಲು ಹಾಕಿಕೊಳ್ಳುವುದು

(1) ದೊಡ್ಡಿ- ಪಾಲಕನು, ದೊಡ್ಡಿಗೆ ಹಾಕಿರುವ ಯಾವುವೇ ದನಗಳನ್ನು ಬಿಡುಗಡೆ ಮಾಡುವುದಕ್ಕೆ ಮುಂಚೆ ದೊಡ್ಡಿಗೆ ಹಾಕಿರುವ

ದನಗಳ ಮಾಲೀಕ ಅಥವಾ ಅವನ ಏಜೆಂಟನು ಭದ್ರತೆಯಾಗಿ ಠೇವಣಿ ಇಡಬೇಕಾದ ಹಣದ ಮೊತ್ತವು ಈ

ಮುಂದಿನ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿರುವ ಪ್ರಮಾಣಕ್ಕನುಸಾರವಾಗಿ ಇರತಕ್ಕದ್ದು.-

ಠೇವಣಿ ಇಡಬೇಕಿರುವ ಭದ್ರತಾ ಹಣದ ದರ

 

ಭದ್ರತೆಯ ದರಗಳು - ರೂಪಾಯಿಗಳಲ್ಲಿ

ದನದ ಬಗೆ

1961ರ ಜನಗಣತಿ ಪ್ರಕಾರ ಒಂದು

ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯಿರುವ

ಪ್ರದೇಶಗಳಿಗೆ

1961ರ ಜನಗಣತಿ ಪ್ರಕಾರ ಒಂದು

ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿರುವ

ಪ್ರದೇಶಗಳಿಗೆ

ಆನೆ

50

250

ಒಂಟೆ

50

250

ಎಮ್ಮೆ-ಕೋಣ

40

250

ಕುದುರೆ

50

250

ಹೆಣ್ಣು ಕುದುರೆ

50

250

ಬೀಜವೊಡೆದ ಕುದುರೆ

50

250

ಸಣ್ಣ ತಳಿಯ ಕುದುರೆಗಳು

50

250

ಹೋರಿ

50

250

ಎತ್ತು

50

250

ಕತ್ತೆ

50

250

ಹಸು

50

250

ಕರು

15

50

ಕುದುರೆಯ ಗಂಡುಮರಿ

15

50

ಕುದುರೆಯ ಹೆಣ್ಣುಮರಿ

15

50

ಹೇಸರಗತ್ತೆ

15

50

ಹಂದಿ

20

30

ಟಗರು

10

25

ಹೆಣ್ಣುಕುರಿ

10

25

ಕುರಿಮರಿ

10

25

ಆಡು

10

25

ಆಡುಮರಿ

10

25

ಕುರಿ 10 25

10

25

 

 

 

(2) ಆರು ತಿಂಗಳ ಅವಧಿಯೊಳಗೆ ದೊಡ್ಡಿಗೆ ಹಾಕಿರುವ ಯಾವುದೇ ದನಕ್ಕೆ ಸಂಬಂಧಪಟ್ಟಂತೆ 13ನೇ

ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ರಾಜ್ಯ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕಾದಂಥ ಮೊಬಲಗು

ಅಂಥ ದನದ ಸಂಬಂಧದಲ್ಲಿ ಭದ್ರತೆಯ ರೂಪದಲ್ಲಿ ಠೇವಣಿಯಾಗಿಟ್ಟ ಮೊಬಲಗಿನ ಶೇಕಡಾ

ಇಪ್ಪತ್ತೈದರಷ್ಟಿರತಕ್ಕದ್ದು.

ಠೇವಣಿ ಇಡುವುದು, ಅದರ ಅಭಿರಕ್ಷೆ ಮತ್ತು ಅದರ ಮರುಪಾವತಿಗೆ ಸಂಬಂಧಿಸಿದ ಪ್ರಕ್ರಿಯೆ

  • ಭದ್ರತೆಯ ರೂಪದಲ್ಲಿ ಠೇವಣಿ ಇಡಬೇಕಾದ ಮೊತ್ತವನ್ನು ದೊಡ್ಡಿ-ಪಾಲಕನಿಗೆ ನಗದು ರೂಪದಲ್ಲಿ ಪಾವತಿಸತಕ್ಕದ್ದು ಮತ್ತು
  • ಅವನು ಅದಕ್ಕೆ ನಮೂನೆ-5 ರಲ್ಲಿ ರಸೀದಿ ನೀಡತಕ್ಕದ್ದು.
  • (2) ದೊಡ್ಡಿ-ಪಾಲಕನು, (1)ನೇ ಉಪಪ್ರಕರಣದ ಅಡಿಯಲ್ಲಿ ಭದ್ರತೆ ಠೇವಣಿಯಾಗಿ ಸ್ವೀಕರಿಸಿದ
  • ಪ್ರತಿಯೊಂದು ಮೊಬಲಗನ್ನು ಆತನು ತನ್ನ ವೈಯಕ್ತಿಕ ಅಭಿರಕ್ಷೆಯಲ್ಲಿಟ್ಟುಕೊಂಡಿರತಕ್ಕದ್ದು ಮತ್ತು ಅಂಥ ಹಣದ
  • ಲೆಕ್ಕವನ್ನು ಅವನು ನಮೂನೆ-6 ರಲ್ಲಿ ಇಟ್ಟುಕೊಂಡು ಬರತಕ್ಕದ್ದು.
  • (3) ದೊಡ್ಡಿ-ಪಾಲಕನು, ಠೇವಣಿದಾರನು ಅಥವಾ ಅವನ ಪರವಾಗಿ ಸಲ್ಲಿಸಿದ ಅರ್ಜಿಯ ಮೇಲೆ, 13ನೇ
  • ಪ್ರಕರಣದ (2)ನೇ ಉಪಪ್ರಕರಣದ ಮೂಲಕ ಅಗತ್ಯಪಡಿಸಿದಂತೆ ಆರು ತಿಂಗಳುಗಳ ಅವಧಿ ಮುಕ್ತಾಯವಾದ ಮೇಲೆ ಅರ್ಜಿದಾರನು ಠೇವಣಿ ಇಟ್ಟ ಮೊತ್ತವನ್ನು ನಮೂನೆ-7 ರಲ್ಲಿ ಇಟ್ಟಿರುವ ಮರುಪಾವತಿ ರಿಜಿಸ್ಟರ್‍ನಲ್ಲಿ ಅಂಥ ವ್ಯಕ್ತಿಯ ಸಹಿ ಪಡೆದ ತರುವಾಯ ಮರುಪಾವತಿ ಮಾಡತಕ್ಕದ್ದು.

ದನವನ್ನು ವಿಲೇವಾರಿ ಮಾಡುವ ವಿಧಾನ

ಯಾವುದೇ ದನ ದೊಡ್ಡಿಯಲ್ಲಿರುವಾಗ ಮೃತಪಟ್ಟರೆ, ದೊಡ್ಡಿ-ಪಾಲಕನು, ಅದರ ಮರಣದ ಕಾರಣವನ್ನು ಕುರಿತು ಪಂಚನಾಮೆಯನ್ನು ನಡೆಸತಕ್ಕದ್ದು ಮತ್ತು ಆ ಮೃತದೇಹವನ್ನು ವಿಲೇವಾರಿ ಮಾಡಿ, ಆ ಬಗ್ಗೆ ನಮೂನೆ-8 ರಲ್ಲಿ ಜಿಲ್ಲಾ ದಂಡಾಧಿಕಾರಿಗೆ ವರದಿ ಕಳುಹಿಸಿಕೊಡತಕ್ಕದ್ದು.

ನಿರಸನ ಮತ್ತು ಉಳಿಸುವಿಕೆಗಳು

ಮೈಸೂರು ಪ್ರದೇಶ, ಬಾಂಬೆ ಪ್ರದೇಶ, ಕೊಡಗು ಜಿಲ್ಲೆ, ಹೈದರಾಬಾದು ಪ್ರದೇಶ ಅಥವಾ ಮದ್ರಾಸು ಪ್ರದೇಶಗಳಲ್ಲಿ ಈ ನಿಯಮಗಳು ಪ್ರಾರಂಭವಾದ ದಿನಾಂಕದಂದು ಜಾರಿಯಲ್ಲಿದ್ದಂಥ ಈ ನಿಯಮಗಳಿಗೆ ಸಂವಾದಿಯಾದ ಎಲ್ಲಾ ನಿಯಮಗಳನ್ನು ಅಂಥ ನಿಯಮಗಳ ಮೇರೆಗೆ ಮಾಡಲಾದ ಅಥವಾ ಮಾಡದೆ ಬಿಟ್ಟ ಕೃತ್ಯಗಳನ್ನು ಹೊರತುಪಡಿಸಿ ಈ ಮೂಲಕ ನಿರಸನಗೊಳಿಸಲಾಗಿದೆ.

ಅನುಸೂಚಿ

ನಮೂನೆ - 1

(6ನೇ ಪ್ರಕರಣದ (2)ನೇಉಪಪ್ರಕರಣದ ಮತ್ತು 4ನೇ ನಿಯಮದ (1)ನೇ ಉಪನಿಯಮವನ್ನು ನೋಡಿ)

ದೊಡ್ಡಿ ರಿಜಿಸ್ಟರ್

ದೊಡ್ಡಿಯ ಹೆಸರು

ನಮೂನೆ -2

(6ನೇ ಪ್ರಕರಣದ (3)ನೇ ಉಪಪ್ರಕರಣ ಮತ್ತು 4ನೇ ನಿಯಮದ (2)ನೇ ಉಪನಿಯಮ ನೋಡಿ)

ದೊಡ್ಡಿಗೆ ಹಾಕಿದ ದನದ ಬಗೆಗಿನ ರಸೀದಿ

ದೊಡ್ಡಿಯ ಹೆಸರು                                                                                                ಪುಸ್ತಕದ ಸಂಖ್ಯೆ

ರಸೀದಿ ಸಂಖ್ಯೆ

(ಎರಡೂ ಬದಿಯಲ್ಲಿ ಕಾರ್ಬನ್ ಉಪಯೋಗಿಸಿದ ಮೂಲ ಮತ್ತು ನಕಲು ಪ್ರತಿ. ಆ ನಕಲು ಪ್ರತಿ

ಸಾಲು ರಂಧ್ರಹೊಂದಿದ್ದಾಗಿರಬೇಕು)

ನಮೂನೆ - 3

(ನಿಯಮ 5ನ್ನು ನೋಡಿ)

ದೊಡ್ಡಿಯ ರಸೀದಿ ಮತ್ತು ಬಿಡುಗಡೆ ಪಾಸು

 

ಪುಸ್ತಕ ಸಂಖ್ಯೆ                                                                                                ಮೂಲ ಮತ್ತು ನಕಲು

ಸಂಖ್ಯೆ                                                                                                             ದೊಡ್ಡಿಯ ಹೆಸರು

------------------------------------------------

ಸ್ವೀಕರಿಸಿದ ಮೊತ್ತ (ಅಕ್ಷರಗಳಲ್ಲಿ)

ನಮೂನೆ - 4

(13ನೇ ಪ್ರಕರಣಾನುಸಾರ)

ಒಡೆತನದ ಘೋಷಣೆ

 

--------- ವೃತ್ತಿಯನ್ನು ಮಾಡುತ್ತಿರುವ ---------ರ ನಿವಾಸಿಯಾಗಿರುವ --------- ಎಂಬುವವರ ಮಗ / ಮಗಳಾದ --------- ಎಂಬ ನಾನು ಸದರಿ ದನದ ಹಕ್ಕುಳ್ಳ ಒಡೆಯನಾಗಿರುತ್ತೇನೆಂದೂ / ಸದರಿ ದನದ ಹಕ್ಕುಳ್ಳ ಒಡೆಯರಾಗಿರುವ ಶ್ರೀ ---------/ ಶ್ರೀಮತಿ --------- ರವರ ಅಧಿಕೃತ ಪ್ರತಿನಿಧಿಯಾಗಿರುತ್ತೇನೆಂದು ಈ ಮೂಲಕ ಘೋಷಿಸುತ್ತೇನೆ.

ದನವನ್ನು ಈಗ ವಿಲೇವಾರಿ ಮಾಡುತ್ತಿರುವುದರಿಂದಾಗಿ ಯಾವುದಾದರೂ ವಿವಾದವುಂಟಾದ ಪಕ್ಷದಲ್ಲಿ ಅದರ ಪರಿಣಾಮಗಳಿಗೆ ಅಥವಾ ಅಂಥ ಹಾನಿಗಳನ್ನು ಭರಿಸುವುದಕ್ಕೆ ನಾನು ಹೊಣೆಗಾರನಾಗಿರುತ್ತೇನೆಂದು, ಅದರ ಸಂಕೇತವಾಗಿ ನಾನು --------- ರೂಪಾಯಿಗಳ ಮೊತ್ತವನ್ನು ಠೇವಣಿಯಿರಿಸುತ್ತೇನೆ ಮತ್ತು ಇಂದಿನಿಂದ ಪ್ರಾರಂಭಿಸಿ ಆರು ತಿಂಗಳವರೆಗೆ ಹಿಂದಿರುಗಿಸಲು ಆ ಬಗ್ಗೆ ತಗಾದೆ ಮಾಡುವುದಿಲ್ಲವೆಂದೂ, ನಷ್ಟಪರಿಹಾರ ತುಂಬಿಕೊಡುವುದಕ್ಕೆ ಬದ್ಧನಾಗಿರುತ್ತೇನೆಂದೂ ಈ ಮೂಲಕ ಘೋಷಿಸುತ್ತೇನೆ.

ಮೇಲೆ ಹೇಳಿದ ಅವಧಿಯಲ್ಲಿ ದನವನ್ನು ದೊಡ್ಡಿಗೆ ಹಾಕಿದ್ದು ಮತ್ತು ವಶಪಡಿಸಿಕೊಳ್ಳುವಿಕೆಯು ಕಾನೂನುಬಾಹಿರವಲ್ಲವೆಂದು ನ್ಯಾಯನಿರ್ಣಯವಾಗದಿದ್ದರೆ ಸದರಿ ಠೇವಣಿಯ ಮುಟ್ಟುಗೋಲಿಗೆ ನಾನು ಬದ್ಧನಾಗಿರುತ್ತೇನೆ.

--------- ರವರ ಮತ್ತು ಸಾಕ್ಷಿದಾರರ ಸಮ್ಮುಖದಲ್ಲಿ --------- ನಲ್ಲಿ ---------ವರ್ಷದ ---------ತಿಂಗಳ ---------ಆದ ಈ ದಿನದಂದು ನಾನು ಸಹಿ ಮಾಡಿರುತ್ತೇನೆ. ಸಾಕ್ಷಿದಾರರು ಸಹಿ

ಸಂದಾಯ

ಶ್ರೀ/ ಶ್ರೀಮತಿ --------- ರವರು ಶ್ರೀ/ಶ್ರೀಮತಿ ---------ರವರಿಗೆ --------- ರೂಪಾಯಿಗಳ ಮೊತ್ತವನ್ನು ತದನುಸಾರವಾಗಿ ಸಂದಾಯ ಮಾಡಿರುತ್ತಾರೆ.

ನನ್ನ ಸಮಕ್ಷಮದಲ್ಲಿ

ಸಾಕ್ಷಿದಾರರು                                                                                     (ಯಾರೇ ಸ್ಧಳೀಯ ಗಣ್ಯ ವ್ಯಕ್ತಿ)

ನಮೂನೆ -5

(8ನೇ ನಿಯಮದ (1)ನೇ ಉಪನಿಯಮ ನೋಡಿ)

ಭದ್ರತಾ ಠೇವಣಿ ರಸೀದಿ

ಪುಸ್ತಕ ಸಂಖ್ಯೆ ---------                                                                                       ದೊಡ್ಡಿಯ ಹೆಸರು -------

ಸಂಖ್ಯೆ ---------                                                                                                ದಿನಾಂಕ ---------

--------- ಗಾಗಿ (ದನದ ಬಗೆಯನ್ನು ಸೂಚಿಸಬೇಕು) ಭದ್ರತಾ ಠೇವಣಿಯಾಗಿ ------- ರೂಪಾಯಿಗಳ ಮೊತ್ತವನ್ನು ಮಾತ್ರ -------- ರವರಿಂದ ಸ್ವೀಕರಿಸಲಾಗಿದೆ.

ಮೊತ್ತ ಸಂದಾಯ ಮಾಡುವ ವ್ಯಕ್ತಿಯ ಸಹಿ                                               ದೊಡ್ಡಿ- ಪಾಲಕನ ಸಹಿ

ಸೂಚನೆ: ಪ್ರತಿಯೊಂದು ಪಕ್ಕದ ಹಾಳೆಯ ಮೇಲೆ 'ನಕಲು' ಎಂದು ಬರೆಯಬೇಕು ಮತ್ತು ಅದು ಸಾಲು ರಂಧ್ರ

ಹೊಂದಿರಬೇಕು.

ನಮೂನೆ - 8

(9ನೇ ನಿಯಮ ನೋಡಿ)

ದೊಡ್ಡಿಗೆ ಹಾಕಿದ ದನದ ಮರಣದ ವರದಿ ನೀಡುವುದು

ಪುಸ್ತಕ ಸಂಖ್ಯೆ                                                                                                      ದೊಡ್ಡಿಯ ಹೆಸರು

ಸಂಖ್ಯೆ                                                                                                                ವರದಿ ದಿನಾಂಕ

 

  • 1. ದೊಡ್ಡಿ ರಿಜಿಸ್ಟರ್‍ನಲ್ಲಿನ ಕ್ರಮ ಸಂಖ್ಯೆ
  • 2. ದನದ ವರ್ಣನೆ
  • 3. ಮರಣ ಹೊಂದಿದ ದಿನಾಂಕ ಮತ್ತು ಗಂಟೆ
  • 4. ಮರಣದ ಸ್ವರೂಪ ಮತ್ತು ಕಾರಣ
  • 5. ಒಡೆಯನು ಗೊತ್ತಿದ್ದರೆ, ಅವನ ಹೆಸರು ಮತ್ತು ವಿಳಾಸ
  • 6. ವಿಲೇವಾರಿ ವಿಧಾನ
  • 7. ಯಾರಿಗೆ ವಹಿಸಿಕೊಡಲಾಯಿತೋ ಆತನ ಸಹಿ
  • ದೊಡ್ಡಿ-ಪಾಲಕನ ಸಹಿ.

ಮೂಲ : ಕರ್ನಾಟಕ ರಾಜಭಾಷಾ ಅಧಿನಿಯಮ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate