অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಿಸಾನ ಕ್ರೆಡಿಟ್ ಕಾರ್ಡ

ಕಿಸಾನ ಕ್ರೆಡಿಟ್ ಯೋಜನೆ (ಕೆ ಸಿಸಿ) ರೈತರಿಗೆ ಸಾಕಾಗುವಷ್ಟು ಮತ್ತು ಸಮಯೋಚಿತವಾಗಿ ಬ್ಯಾಂಕುಗಳಿಂದ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಅಲ್ಪಾವಧಿ ಸಾಲವನ್ನೆ ಒದಗಿಸುವುದು. ಇದು ರೈತನಿಗೆ ಮುಖ್ಯವಾಗಿ ಕೃಷಿ ಚಟುವಟಿಕೆಗೆ ಅಗತ್ಯವಾದ ಬಿತ್ತನೆ ಸಾಮಗ್ರಿಗಳನ್ನು ಕೊಳ್ಳಲು ಸಹಾಯಕ ವಾಗುವುದು. ಕ್ರೆಡಿಟ್ ಕಾರ್ಡ ವ್ಯವಸ್ಥೆಯಿಂದ ನಿರ್ವಹಣಾ ಹೊಂದಾಣಿಕೆ ಮತ್ತು ಆಯವ್ಯಯದ ಕ್ಷಮತೆಯಲ್ಲಿ ಸುಧಾರಣೆ ಕಂಡುಬರುತ್ತದೆ.

ಕಿಸಾನ ಕ್ರೆಡಿಟ್ ಕಾರ್ಡ (ಕೆಸಿಸಿ) ಯೋಜನೆಯ ಅನುಕೂಲಗಳಾವು ?

  • ಹಣ ಪಡೆವ ವಿಧಾನವನ್ನು ಸರಳೀಕೃತಗೊಳಿಸಲಾಗಿದೆ.
  • ನಗದು ಮತ್ತು ಸಹಾಯಗಳ ನಿರ್ವಹಣೆಯಲ್ಲಿನ ಜಡತ್ವಗಳನ್ನು ನಿವಾರಿಸುವುದು
  • ಪ್ರತಿ ಬೆಳೆಗೂ ಸಾಲದ ಅರ್ಜಿ ಸಲ್ಲಿಸಬೇಕಿಲ್ಲ
  • ಯಾವಾಗಲೂ ಸಾಲದ ಖಾತ್ರಿ ಇರುವುದರಿಂದ ರೈತರು ದುಬಾರಿ ಬಡ್ಡಿ ತೆರಬೇಕಿಲ್ಲ.
  • ರೈತರು ಅನುಕೂಲವಾದಾಗ, ಬೇಕಾದಾಗ ಬೀಜ, ಗೊಬ್ಬರ ಕೊಳ್ಳಬಹುದು.
  • ನಗದು ಖರೀದಿ ಮಾಡುವದರಿಂದ ವ್ಯಾಪಾರಿಗಳಿ0ದ ರಿಯಾಯತಿ ಸಿಗಬಹುದು.
  • ಮೂರುವರ್ಷಗಳ ವರೆಗೆ ಸಾಲ ಸೌಲಭ್ಯ ವಿರುವುದು. ವಿಮೆಗೆ ಪುನರ್ ವಿರ್ಮಶೆ ಬೇಕಿಲ್ಲ.– ಪ್ರತಿ ಬೆಳೆಯ ಹಂಗಾಮಿಗೆ ಪರಿಶೀಲನೆ ಇರುವುದಿಲ್ಲ.
  • ಕೃಷಿ ಆದಾಯದ ಮೇಲೆ ಸಾಲ ಮಿತಿ ಇರುವುದು.
  • ಸಾಲದ ಮಿತಿಗೊಳಪಟ್ಟು ಎಷ್ಟು ಸಲ ಬೇಕಾದರೂ ಹಣ ಪಡೆಯಬಹುದು
  • ಸುಗ್ಗಿಯಾದ ಮೇಲೆಯೇ ಸಾಲ ವಾಪಸ್ಸು ಮಾಡಬಹುದು
  • ಕೃಷಿ ಸಾಲಕ್ಕೆ ಇರುವ ಬಡ್ಡಿಯೇ ಇದಕ್ಕೂ ಅನ್ವಯವಾಗುವುದು.
  • ಭದ್ರತೆ , ಮಾರ್ಜಿನ್ ಮತ್ತು ದಾಖಲೆ ತಯಾರಿಯು ಕೃಷಿ ಸಾಲದ ರೀತಿಯಲ್ಲೆ ಇರುವುದು.

ಕಿಸಾನ್ ಕ್ರೆಡಿಟ್ ಕಾರ್ಡನ್ನು ಪಡೆಯುವುದು ಹೇಗೆ?

  • ನಿಮ್ಮ ಹತ್ತಿರದ ಸಾರ್ವ ಜನಿಕ ವಲಯದ ಬ್ಯಾಂಕನ್ನು ಸಂಪರ್ಕಿಸಿ . ವಿವರ ಪಡೆಯಿರಿ.
  • ಅರ್ಹ ರೈತರು ಕಿಸಾನ್ ಕ್ರೆಡಿಟ್ ಕಾರ್ಡ ಮತ್ತು ಪಾಸ್ ಬುಕ್ ಅನ್ನು ಪಡೆಯಬಹುದು. ಅದರಲ್ಲಿ ಹೆಸರು , ವಿಳಾಸ, ಹೊಂದಿರುವ ಭೂ ಹಿಡುವಳಿ, ಸಾಲ ದ ಮಿತಿ , ವೆಲಡಿಟಿ ಅವಧಿ , ಪಾಸ್ ಪೋರ್ಟ ಅಳತೆ ಯ ಭಾವಚಿತ್ರ ಇರುವುದು, ಅದು ಗುರ್ತಿನ ಚೀಟಿಯಾಗಿ ವ್ಯವಹಾರಗಳ ದಾಖಲೆಯಾಗಿ ಉಪಯೋಗ ವಾಗುವುದು. .
  • ಪ್ರತಿ ವ್ಯವಹಾರ ಮಾಡುವಾಗ ಕಾರ್ಡ / ಪಾಸು ಪುಸ್ತಕವನ್ನು ತರಲೇ ಬೇಕು..

ಭಾರತದ ಪ್ರಮುಖ ಬ್ಯಾಂಕುಗಳ ಕಿಸಾನ್ ಕ್ರೆಡಿಟ್ ಕಾರ್ಡಗಳು

ಅಲಹಬಾದ ಬ್ಯಾಂಕು - ಕಿಸಾನ್ ಕ್ರೆಡಿಟ್ ಕಾರ್ಡ (KCC) ಆಂಧ್ರ ಬ್ಯಾಂಕು- ಎ.ಬಿ ಕಿಸಾನ್ ಹಸಿರು ಕಾರ್ಡಗಳುಬ್ಯಾಂಕ ಅರ್ಪ ಬರೋಡ -ಬಿಕೆ ಸಿಸಿಬ್ಯಾಂಕ ಅಫ್ ಇಂಡಿಯಾ - ಕಿಸಾನ್ ಸಮಾಧಾನ ಕಾರ್ಡಗಳು ಕೆನರಾ ಬ್ಯಾಂಕು - ಕೆಸಿಸಿ ಕಾರ್ಪೋರೇಷನ್ ಬ್ಯಾಂಕು - ಕೆಸಿಸಿ ದೇನಾ ಬ್ಯಾಂಕು - ಕಿಸಾನ್ ಗೋಲ್ಡ ಕ್ರೆಡಿಟ್ ಕಾರ್ಡಗಳು ಓರಿಯಂಟಲ್ ಬ್ಯಾಂಕ ಅಫ್ ಕಾಮರ್ಸ -ಓರಿಯಂಟಲ್ ಹಸಿರು ಕಾರ್ಡ (OGC) ಪಂಜಾಬ್ ನ್ಯಾಷನಲ್ ಬ್ಯಾಂಕು - ಪಿ ಎನ್ ಬಿ ಕೃಷಿ ಕಾರ್ಡಗಳು ಬ್ಯಾಂಕ ಅಫ್ ಹೈದ್ರಾಬಾದ್ -ಕಸಿಸಿ ಸ್ಟೇಟ್ ಬ್ಯಾಂಕು ಅಫ್ ಇಂಡಿಯಾ -ಕೆಸಿಸಿ ಸಿಂಡಿಕೇಟ್ ಬ್ಯಾಂಕು -ಎಸ್ ಕೆಸಿಸಿ ವಿಜಯ ಬ್ಯಾಂಕು -ವಿಜಯ ಕಿಸಾನ್ ಕಾರ್ಡಗಳು

ಕಿಸಾನ್ ಕ್ರೆಡಿಟ್ ಕಾರ್ಡ ಹೊಂದಿರುವವರಿಗೆ ವೈಯುಕ್ತಿಕ ಅಫಘಾತ ವಿಮೆ ಯೊಜನೆ

“ವೈಯುಕ್ತಿಕ ಅಫಘಾತ ವಿಮೆ ಪ್ಯಾಕೇಜು" ಅನ್ನು ಕಿಸಾನ್ ಕ್ರೆಡಿಟ್ ಕಾರ್ಡ ( ಕೆ ಸಿಸಿ) ಹೊಂದಿರುವವರಿಗೆ ನೀಡಲಾಗುವುದು

ಯೋಜನೆಯ ಪ್ರಮುಖ ಅಂಶಗಳು

  • ವ್ಯಾಪ್ತಿಯ ಅವಕಾಶ – ಈ ಯೋಜನೆಯು ಎಲ್ಲ ಕಿಸಾನ್ ಕಾರ್ಡದಾರರಿಗೆ ನಮ್ಮ ದೇಶದಲ್ಲೆ ಸಾವು ಮತ್ತು ಶಾಶ್ವತ ವಿಕಲತೆಯಾದರೆ ಅನ್ವಯವಾಗುವುದು..
  • ವ್ಯಾಪ್ತಿಯಡಿಯ ವ್ಯಕ್ತಿಗಳು - ಎಲ್ಲ ಕಿಸಾನ್ ಕಾರ್ಡದಾರರಿಗೆ 70 ವರ್ಷದವರಗೆ ಜಾರಿಯಲ್ಲಿರುವುದು.
  • ರಿಸ್ಕ ಕವರೇಜು - ಈ ಯೋಜನೆಯ ಅಡಿಯಲ್ಲಿ ಕೆಳಗಿನ ಸೌಲಭ್ಯಗಳು ದೊರೆಯುವವು
  • ಹೊರಗಿನ,ಎದ್ದು ಕಾಣುವ ಅಫಘಾತದಿಂದಾದ ಸಾವು: ರೂ.50,000/-
  • ಶಾಶ್ವತ ಪೂರ್ಣ ವಿಕಲತೆ : Rs.50,000/-
  • ಎರಡು ಕೈ ಕಾಲು, ಅಥವ ಎರಡು ಕಣ್ಣು,ವ ಒಂದು ಕೈ ಅಥವ ಒಂದು ಕಣ್ಣು ಹೋದರೆ: Rs.50,000/-
  • ಒಂದು ಕೈ ಅಥವ ಕಾಲು ಅಥವ ಕಣ್ಣು ಹೋದರೆ : Rs.25,000/-
  • ಮಾಸ್ಟರ್ ಪಾಲಿಸಿಯ ಅವಧಿ - 3 ವರ್ಷದ ವರೆಗೆ ಜಾರಿಯಲ್ಲಿರುವುದು.
  • ವಿಮೆಯ ಅವಧಿ –ವಿಮಾ ವ್ಯಾಪ್ತಿಯು, ವಾರ್ಷಿಕ ಕಂತಿನ ವಿಷಯದಲ್ಲಿ ಕಂತನ್ನು, ಭಾಗವಹಿಸುವ ಬ್ಯಾಂಕು ಹಣ ಕಟ್ಟಿದ ಒಂದು ವರ್ಷದವರೆಗೆ ಜಾರಿಯಲ್ಲಿರುವುದು. ವಿಮೆಯು ಮೂರು ವರ್ಷಕ್ಕಾಗಿದ್ದರೆ ವಿಮೆಯ ಅವಧಿಯು ಪ್ರೀಮಿಯುಮ್ ನೀಡಿದ ಮೂರುವರ್ಷದ ವರೆಗೆ ಇರುವುದು.
  • ಪ್ರಿಮಿಯುಮ್ - ಪ್ರತಿ ಕೆ.ಸಿ.ಸಿ ಹೊಂದಿದವರಿಗೆ ವಾರ್ಷಿಕ ರೂ.15/- ಪ್ರೀಮಿಯಂನಲ್ಲಿ ಕಾರ್ಡು ದಾರನು .5/- ರೂಪಾಯಿಯನ್ನು ಬ್ಯಾಂಕು ರೂ.10/- ನ್ನು ಕೊಡಬೆಕಾಗುವುದು
  • ಕಾರ್ಯ ವಿಧಾನ – ಈ ವ್ಯವಹಾರದ ಸೇವೆಯನ್ನು ವಲಯ ಮಟ್ಟದಲ್ಲಿ ನಾಲ್ಕು ವಿಮಾ ಕಂಪನಿಗಳು ನಿರ್ವಹಿಸುವವು.ಯುನೈಟೆಡ್ ವಿಮಾ ಕಂಪನಿಯು ಆಂಧ್ರಪ್ರದೇಶ,ಕರ್ನಾಟಕ, ಕೇರಳ, ಅಂಡಮಾನ್ ಮತ್ತು ನಿಕೋಬಾರ್, ತಮಿಳು ನಾಡು ಮತ್ತು ಲಕ್ಷ ದ್ವೀಪಗಳಲ್ಲಿ ಕಂಪನಿಯು ಕಾರ್ಯ ನಿರ್ವಹಿಸುವುದು. .
  • ಅನುಷ್ಠಾನ ಶಾಖೆಗಳು ವಿಮಾ ಕಂತನ್ನು ಕೆ,ಸಿ ಕಾರ್ಡ ಹೊಂದಿರುವ ರೈತರ ಹೆಸರಿನ ಸಮೇತ ಪ್ರತಿ ತಿಂಗಳು ಕಟ್ಟಬೇಕು.
  • ಕ್ಲೇಮು ಮಾಡುವ ರೀತಿ – ಮರಣ, ವಿಕಲತೆ ಅಥವಾ ನೀರಲ್ಲಿ ಮುಳುಗಿ ಮರಣಿಸಿದಾಗ:ವಿಮಾ ಕಂಪನಿಯು ನಿಗದಿಪಡಿಸಿದ ಕಚೇರಿಯು ಕ್ಲೇಮಿನ ಹಣದ ನಿಡುವಕೆ ಪ್ರಕ್ರಿಯೆಯನ್ನು ನಿರ್ವಹಿಸುವುದು. ಪ್ರತ್ಯೇಕವಾದ ಪ್ರಕ್ರಿಯೆ ಅನುಸರಿಸಬೇಕಾಗುವುದು.

ಆಕರ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/1/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate