অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೃಷಿ ವಲಯದಲ್ಲಿ ಬ್ಯಾಂಕುಗಳು

ಕೃಷಿ ವಲಯದಲ್ಲಿ ಬ್ಯಾಂಕುಗಳು

ಬ್ಯಾಂಕುಗಳ ರಾಷ್ಟ್ರೀಕರಣವು ಸಾಲವನ್ನು ವಿವಿಧ ಆರ್ಥಿಕ ವಲಯಗಳಿಗೆ, ವಿಶೇಷವಾಗಿ ಕೃಷಿವಲಯಕ್ಕೆ ನೀಡುವಲ್ಲಿ ಪ್ರಮುಖ ಹೆಜ್ಜೆ ಹಾಕಿತು. ಕ್ರಿಯಾತ್ಮಕ ಮತ್ತು ಅಭಿವೃದ್ಧಿ ಶೀಲ ಕೃಷಿವಲಯವು ವೇಗವಾಗಿ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸಲು ಬ್ಯಾಂಕುಗಳಿಂದ ಸಾಕಷ್ಟು ಹಣಕಾಸಿನ ಸೌಲಭ್ಯವನ್ನು ಪಡೆಯುವ ಅಗತ್ಯವಿದೆ. ಕೃಷಿವಲಯಕ್ಕೆ 2004-05 ರಿಂದ ಮೂರು ವರ್ಷಗಳಲ್ಲಿ ಸಾಲದ ಪ್ರಮಾಣವನ್ನು ಎರಡು ಪಟ್ಟುಮಾಡಲು ಸರ್ಕಾರವು ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಸರ್ಕಾರದ ತೀವ್ರ ಆಸಕ್ತಿಯ ಪರಿಣಾಮವಾಗಿ ಮತ್ತು 11 ನೆ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿ ವಲಯಕ್ಕೆ ವಿಶೇಷ ಬಡ್ಜೆಟ್ ಅನುದಾನ ನೀಡಲಾಗಿದೆ. ಈಗ ರೈತರು ಬ್ಯಾಂಕುಗಳ ಯೋಜನೆಯ ಲಾಭ ಪಡೆಯಲು ಮುಂದಾಗ ಬೇಕಿದೆ. ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಸಾಲದ ವಿವರ ಈ ರೀತಿ ಇದೆ :

ಅಲಹಬಾದ ಬ್ಯಾಂಕು (www.allahabadbank.com)

  • ಕಿಸಾನ ಶಕ್ತಿ ಯೋಜನಾ ಸ್ಕೀಮು
  • ರೈತರು ಸಾಲವನ್ನು ತಮಗೆ ಬೇಕಾದಾಗ ಪಡೆಯಬಹುದು.
  • ಮಾರ್ಜಿನ್ ಹಣ ಬೇಕಿಲ್ಲ
  • ಸಾಲದ 50% ಹಣವನ್ನು ವೈಯುಕ್ತಿಕ /ಮನೆಗೆ ಬಳಸಬಹುದು. ಲೇವಾದೇವಿ ಮೂಲದಿಂದ ಪಡೆದ ಸಾಲ ತೀರಿಸಲು ಬಳಸಬಹುದು.

ಆಂಧ್ರ ಬ್ಯಾಂಕು www.andhrabank.in

  • ಆಂಧ್ರ ಬ್ಯಾಂಕು ಕಿಸಾನ್ ಹಸಿರು ಕಾರ್ಡ
  • ವೈಯುಕ್ತಿಕ ಅಫಘಾತ ವಿಮೆ ಯೋಜನೆ (PAIS)

ಬ್ಯಾಂಕು ಆಫ್ ಬರೋಡ www.bankofbaroda.com

  • ಒಣ ಭೂಮಿ ಕೃಷಿಗಾಗಿ ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ಖರೀದಿ ಯೋಜನೆ
  • ಕೃಷಿ ಹಾಗೂ ಜಾನುವಾರುಗಳ ಪರಿಕರಗಳ(ಒಳಾಂಶಗಳ) ಡೀಲರುಗಳು/ಹಂಚಿಕೆದಾರರು/ ವ್ಯಾಪಾರಿಗಳ ಬಂಡವಾಳದ ಅವಶ್ಕತೆ
  • ಕೃಷಿ ಯಂತ್ರೋಪಕರಣಗಳ ಬಾಡಿಗೆ
  • ತೋಟಗಾರಿಕೆ ಅಭಿವೃದ್ಧಿ
  • ಹೈನುಗಾರಿಕೆ , ಹಂದಿಸಾಕಣೆ, ಪೌಲ್ಟ್ರಿ, ರೇಷ್ಮೆ ಕೃಷಿ ಇತ್ಯಾದಿಗಳಿಗಾಗಿ ದುಡಿಯುವ ಬಂಡವಾಳ .
  • ಪರಶಿಷ್ಟ ಜಾತಿ / ಪರಶಿಷ್ಟ ವರ್ಗ ಗಳಿಗೆ ಕೃಷಿ ಉಪಕರಣಗಳು , ಜತೆ ಎತ್ತುಗಳು, ನಿರಾವರಿಸೌಕರ್ಯ ಮಾಡಲು ಹಣಕಾಸಿನ ಸಹಾಯ .

ಬ್ಯಾಂಕು ಅಫ್ ಇಂಡಿಯwww.bankofindia.com

  • ಸ್ಟಾರ್ ಭೂ ಹೀನ ಕಿಸಾನ್ ಕಾರ್ಡ – ಬೆಳೆ ಪಾಲುದಾರರು, ಗುತ್ತಿಗೆ ದಾರರು, ಮೌಖಿಕವಾಗಿ ಗುತ್ತಿಗೆಗೆ ಮಾಡುತ್ತಿರುವವರು
  • ಕಿಸಾನ್ ಸಮಾಧಾನ ಕಾರ್ಡ – ಬೆಳೆ ಉತ್ಪಾದನೆ ಮತ್ತು ಸಂಬಂಧಿ ದಿಸಿದ ಕೆಲಸಗಳಿಗೆ ಬಂಡವಾಳ ಹೂಡಲು ಕಿಸಾನ್ ಕ್ರೆಡಿಟ್ ಕಾರ್ಡ
  • ಬಿಒ ಐ ಶತಾಬ್ದಿ ಕೃಷಿ ವಿಕಾಸ ಕಾರ್ಡ – ಯಾವಾಗಲಾದರೂ ಮತ್ತು ಎಲ್ಲಿಯಾದರೂ ಬ್ಯಾಂಕಿಕಿಂಗ್ ಗಾಗಿ ರೈತರಿಗೆ ಎಲೆಕ್ಟ್ರಾನಿಕ್ ಕಾರ್ಡಗಳು.
  • ಹೈಬ್ರೀಡ್ ಬಿಜೋತ್ಪಾದನೆ, ಹತ್ತಿ ಉದ್ಯಮ, ಸಕ್ಕರೆ ಉದ್ಯಮ ಮೊದಲಾದವರಿಗೆ ಗುತ್ತಿಗೆ ಮೇಲೆ ಕೃಷಿಮಾಡಲು ಆರ್ಥಿಕ ನೆರವು.
  • ಸ್ವಸಹಾಯ ಗುಂಪುಗಳಿಗೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಯೋಜನೆ
  • ಸ್ಟಾರ್ ಸ್ವರೋಜ್ಕರ್ ಪ್ರಶಿಕ್ಶನ್ ಸಂಸ್ಥಾನ (ಎಸ್.ಎಸ್.ಪಿ,ಎಸ್ ), ರೈತರಲ್ಲಿ ಉದ್ಯಮ ಶೀಲತೆ ಬೆಳೆಸಲು ತರಬೇತಿ ಗಾಗಿ ಹೊಸ ಪ್ರಯತ್ನ
  • ಬೆಳೆ ಸಾಲ : ರೂ.. 3 ಲಕ್ಷದ ವರೆಗೆ ವಾಷಿಕ 7% ನಂತೆ
  • ಸಹ ಭದ್ರತೆ ಸಾಲ: ರೂ.. 50, 000, ವರೆಗೆ ಸಹಭದ್ರತೆ ಬೇಕಿಲ್ಲ. ಆದರೆ ರೂ. 50, 000 ಮೇಲ್ಪಟ್ಟು ಆರ ಬಬಿ ಐ ನಿರ್ದೇಶನ ಅನುಸರಿಸಲಾಗುವುದು .

ದೇನಾಬ್ಯಾಂಕುwww.denabank.com

  • ದೇನಾ ಬ್ಯಾಂಕು ಗುಜರಾತ , ಮಹರಾಷ್ಟ, ಚತ್ತೀಸ್ ಘಡ, ದಾದ್ರ ಮತ್ತು ನಗರ ಹವೇಲಿಗಳಲ್ಲಿ ಬಹಳ ಕ್ರಿಯಾಶೀಲವಾಗಿದೆ.
  • ದೇನಾ ಕಿಸಾನ್ ಗೋಲ್ಡ ಕ್ರೆಡಿಟ್ ಕಾರ್ಡ ಸ್ಕೀಮು
  • ಗರಿಷ್ಟ ಸಾಲ ಮಿತಿ . 10 ಲಕ್ಷ ರೂಪಾಯಿಗಳು
  • ಮಕ್ಕಳ ಶಿಕ್ಷಣ ಸೇರಿದಂತೆ ಗೃಹ ಬಳಕೆಗೆ 10% ದರದಲ್ಲಿ ಸಾಲ
  • ದೀರ್ಘಾವಧಿ ಸಾಲ 9 ವರ್ಷಗಳ ವರೆಗೆ ಅವಧಿ
  • ಕೃಷಿಗೆ ಸಂಬಂಧಿಸಿದ ಎಲ್ಲದಕ್ಕೂ : ಉಪಕರಣಗಳು, ಟ್ರಾಕ್ಟರ್ , ಸ್ಪ್ರಿಂಕ್ಲರ್ / ತುಂತುರು ನಿರಾವರಿ ವ್ಯವಸ್ಥೆ , ಆಯಿಲ್ ಇಂಜಿನ್, ಪಂಪ್ ಸೆಟ್ ಇತ್ಯಾದಿಗಳಿಗೆಅಲ್ಪಾವಧಿ ಸಾಲ 3 ಲಕ್ಷದ ವರೆಗೆ @ 7%
  • ಸಾಲ15 ದಿನಗಳಲ್ಲಿ ಮಂಜೂರಿ.
  • ಕೃಷಿ ಸಾಲಕ್ಕೆ ರೂ. 50, 000 ವರೆಗೆ ಮತ್ತು ಕೃಷಿ ಕ್ಲಿನಿಕ್ ಹಾಗೂ ಕೃಷಿ ಉದ್ಯಮದ ಘಟಕಗಳಿಗೆ. 5 ಲಕ್ಷದ ವರೆಗೆ ಕೊಲ್ಯಟರಲ್ ಇಲ್ಲದ ಸಾಲ.

ಇಂಡಿಯನ್ ಬ್ಯಾಂಕುwww.indianbank.in

  • ಉತ್ಪಾದನಾ ಸಾಲ : ಬೇಳೆ ಸಾಲ, ಸಕ್ಕರೆ ಕಾರ್ಖಾನೆಗಳ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡಯೋಜನೆಗಳ ಜತೆ ಹೊಂದಾಣಿಕೆ, ಬಾಡಿಗೆ,ಗುತ್ತಿಗೆ, ಬಾಯಿ ಮಾತಿನ ಒಪ್ಪಂದದಡಿಯಲ್ಲಿನ ಕೃಷಿಕರಿಗೆ ಬೆಳೆ ಸಾಲ.
  • >ಕೃಷಿ ಹೂಡಿಕೆ ಸಾಲ : ಭೂ ಅಭಿವೃದ್ಧಿ, ಸಣ್ಣ ನೀರಾವರಿ, ಕಿರು ನೀರಾವರಿ, ಕೃಷಿ , ತೋಟಗಾರಿಕೆ ,ಪ್ಲಾಂಟೇಷನ್ ಯಾಂತ್ರಿಕರಣ
  • ಕೃಷಿ ಸ್ಟ್ರಕ್ಚ ರ್ಡ ಸಾಲ : ಕಿಸಾನ್ ಬೈಕ್, ಕೃಷಿ- ಮಾರಾಟ ಬೈಕು, ಕೃಷಿ ಕ್ಲಿನಿಕ್ ಮತ್ತು ಕೃಷಿ ಉದ್ಯಮ ಕೇಂದ್ರಗಳು
  • ಕೃಷಿ ಅಭಿವೃದ್ಧಿಗೆ ಗುಂಪು ಸಾಲ : ಜಂಟಿ ಹೊಣೆ ಗುಂಪುಗಳಿಗೆ ಸಾಲ / ಸ್ವ ಸಹಾಯ ಗುಂಪುಗಳು
  • ಕೃಷಿ ಕ್ಷೇತ್ರದಲ್ಲಿನ ಹೊಸ ಆಯಾಮಗಳು : ಕೃಷಿ ಗುತ್ತಿಗೆ ,ಸಾವಯವ ಕೃಷಿ , ಗ್ರಾಮೀಣ ಗುದಾಮುಗಳು, ಕೋಲ್ಡ ಸ್ಟೋರೇಜು, ಔಷಧಿ ಸಸ್ಯಗಳು, ಪರಿಮಳ ಸಸ್ಯಗಳು, ಜೈವಿಕ ಇಂಧನ ಬೆಳೆಗಳು ಇತ್ಯಾದಿ..

ಓರಿಯಂಟಲ್ ಬ್ಯಾಂಕ ಅಫ್ ಕಾಮರ್ಸwww.obcindia.co.in

  • ಓರಿಯಂಟಲ್ ಗ್ರೀನ್ ಕಾರ್ಡ (OGC) ಸ್ಕೀಮು
  • ಕೃಷಿ ಸಾಲಕ್ಕಾ ಗಿ ಕಾಂಪೋಜಿಟ್ ಕ್ರೆಡಿಟ್ ಸ್ಕೀಮು
  • ಕೋಲ್ಡ ಸ್ಟೋರೇಜು/ ಗೊಡೌನು ಸ್ಥಾಪನೆ
  • ಕಮೀಷನ್ ಏಜೆಂಟರಿಗೆ ಹಣಕಾಸು ನೀಡುವಿಕೆ

ಪಂಜಾಬ್ ನ್ಯಾಷನಲ್ ಬ್ಯಾಂಕುwww.pnbindia.in

  • ಪಿ ಎನ್ ಬಿ ಸಂಪೂರ್ಣ ಯೋಜನೆ
  • ಪಿ ಎನ್ ಬಿ ಇಚ್ಛಾ ಪೂರ್ತಿ ಯೋಜನೆ
  • ಆಲೂ ಗಡ್ಡೆ / ಹಣ್ಣುಗಳ ಬೆಳೆ ಮತ್ತು ಕೋಲ್ಡ ಸ್ಟೋರೇಜು ರಸೀದಿಗಳ ಮೇಲೆ ಸಾಲ
  • ಸ್ವಯಂ ಚಾಲಿತ ಕಂಬೈನ್ ಹಾರವೆಸ್ಟರ್ಗಳು
  • ಅರಣ್ಯ ನರ್ಸರಿಗಳ ಅಭಿವೃದ್ಧಿ
  • ಭೂಮಿ ಅಭಿವೃದ್ಧಿ
  • ಅಣಬೆ / ಪ್ರಾನ್ ಕಲ್ಚರ್ ಮತ್ತು ಉತ್ಪಾದನೆ
  • ಹೈನು ದನಗಳ ಖರಿದಿ ಮತ್ತು ನಿರ್ವಹಣೆ.
  • ಡೇರಿ ವಿಕಾಸ ಕಾರ್ಡ ಸ್ಕೀಮು
  • ಮೀನು ಸಾಕಣೆ, ಹಂದಿ ಸಾಕಣೆ,ಜೇನು ಸಾಕಣೆ ಇತ್ಯಾದಿ ಯೋಜನೆಗಳು.

ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್www.sbhyd.com

  • ಕೃಷಿ ಸಾಲ ಮತ್ತು ಕೃ. ಗೋಲ್ದ ಸಾಲ
  • ಕೃಷಿ ಉತ್ಪನ್ನ ಮಾರಾಟ ಸಾಲ
  • ಕೋಲ್ದ ಸ್ಟೋರೇಜು / ಖಾಸಗಿ ಗುದಾಮು
  • ಸಣ್ಣ ನೀರಾವರಿ & ಬಾವಿ ತೋಡು ಯೋಜನೆ / ಹಳೆಯ ಬಾವಿ ಅಭಿವೃದ್ಧಿ ಯೋಜನೆ
  • ಭೂ ಅಭಿವೃದ್ಧಿ ಹಣಕಾಸು
  • ಟ್ರಾಕ್ಟರ್, ಟಿಲ್ಲರ್ ಮತ್ತು ಉಪಕರಣಗಳ ಖರೀದಿ.
  • ಪಾಳು ಭೂಮಿ/ ಬಂಜರು ಭೂಮಿ ಕೃಷಿಭೂಮಿ ಖರೀದಿ
  • ರೈತರಿಗೆ ವಾಹನ ಖರೀದಿ ಸಾಲ.
  • ಹನಿ ನಿರಾವರಿ ಮತ್ತು ಸ್ಪ್ರಿಂಕ್ಲರ್ಸ
  • ಸ್ವ ಸಹಾಯ ಗುಂಪುಗಳು
  • ಕೃಷಿ ಕ್ಲಿನಿಕ್ ಮತ್ತು ಕೃಷಿ ಉದ್ಯಮ ಕೇಂದ್ರಗಳು
  • ಯುವ ಕೃಷಿ ಪ್ಲಸ್ ಸ್ಕೀಮು

ಭಾರತೀಯ ಸ್ಟೇಟ್ ಬ್ಯಾಂಕುwww.statebankofindia.com

  • ಬೆಳೆ ಸಾಲ ಯೋಜನೆ (ACC)
  • ತಮ್ಮ ಸ್ಥಳಗಳಲ್ಲೇ ಕೃಷಿ ಉತ್ಪನ್ನ ಸಂಗ್ರ ಹಿಸಲು ಮತ್ತು ಮುಂದಿನ ಕೃಷಿ ಸಾಲ ನವೀಕರಣ ಮಾಡಲು.
  • ಕಿಸಾನ್ ಕ್ರೆಡಿಟ್ ಕಾರ್ಡ ಯೋಜನೆ
  • ಭೂ ಅಭಿವೃದ್ಧಿ ಯೋಜನೆಗಳು
  • ಸಣ್ಣ ನೀರಾವರಿ ಯೋಜನೆ
  • ಕಂಬೈನ್ ಹಾರವೆಸ್ಟರ್ ಖರೀದಿ
  • ಕಿಸಾನ್ ಗೋಲ್ಡ ಕಾರ್ಡ ಸ್ಕೀಮು
  • ಕೃಷಿ- ಪ್ಲಸ್ ಸ್ಕೀಮು – ಗ್ರಾಮೀಣ ಯುವಕರು ಟ್ರಾಕ್ಟರುಗಳ ಬಾಡಿಗೆ ಪಡೆಯಲು
  • ಅರ್ಥಿಯಾಸ್ ಪ್ಲಸ್ ಸ್ಕೀಮು – ಸಗಟು ದಲಾಲಿಗಳಿಗಾಗಿ
  • ಬ್ರಾಯಿಲರ್ ಪ್ಲಸ್ ಸ್ಕೀಮು – ಬ್ರಾಯಿಲರ್ ಕೋಳಿ ಸಾಕಾಣಿಕೆ
  • ಲೀಡ್ ಬ್ಯಾಂಕು ಸ್ಕೀಮು

ಸಿಂಡಿಕೇಟ್ ಬ್ಯಾಂಕುwww.syndicatebank.com

  • ಸಿಂಡಿಕೇಟ್ ಕಿಸಾನ ಕ್ರೆಡಿಟ್ ಕಾರ್ಡ (ಎಸ್.ಕೆ.ಸಿ.ಸಿ)
  • ಸೋಲಾರ್ ಹೀಟರ್ ಸ್ಕೀಮು
  • ಕೃಷಿ –ಕ್ಲಿನಿಕ್ ಮತ್ತು ಕೃಷಿ- ವ್ಯವಹಾರ ಕೇಂದ್ರ ಗಳು

ವಿಜಯ ಬ್ಯಾಂಕುwww.vijayabank.com

  • ಸ್ವ ಸಹಾಯ ಗುಂಪುಗಳಿಗೆ ಸಾಲ
  • ವಿಜಯ ಕಿಸಾನ ಕಾರ್ಡ
  • ವಿಜಯ ಪ್ಲಾಂಟರ್ಸ ಕಾರ್ಡ
  • ಕರಕುಶಲಕರ್ಮಿಗಳಿಗೆ ಮತ್ತು ಗ್ರಾಮೀಣ ಉದ್ದಿಮೆಗಳಿಗೆ ಕೆ ವಿ ಐಸಿ ಮಾರ್ಜಿನ್ ಮನಿ ಸ್ಕೀಮ್

ಇತರ ಬ್ಯಾಂಕುಗಳ ಲಿಂಕುಗಳು

ಕೊನೆಯ ಮಾರ್ಪಾಟು : 7/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate