অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾಯ್ದೆ

ಕಾಯ್ದೆ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಸಂಬಂಧಪಟ್ಟ ಈ ಕೆಳಕಂಡ ಕಾಯ್ದೆಗಳು/ಮಸೂದೆಗಳು ಜಾರಿಯಲ್ಲಿರುತ್ತವೆ. ಇವುಗಳನ್ನು ಅಗತ್ಯಕ್ಕೆ ತಕ್ಕಂತೆ ಜಾರಿಗೊಳಿಸುವ ಜವಾಬ್ದಾರಿಯನ್ನು ಇಲಾಖೆಯು ಹೊಂದಿರುತ್ತದೆ.

  1. ಕರ್ನಾಟಕ ಗೋಹತ್ಯೆ ತಡೆ ಮತ್ತು ದನಕರು ಸಂರಕ್ಷಣಾ ಅಧಿನಿಯಮ 1964 ಮತ್ತು ನಿಯಮಗಳು 1967
  2. ರಾಜ್ಯದಲ್ಲಿ ಗೋವು ಮತ್ತು ಕರುಗಳ ಹಾಗೂ ಎಮ್ಮೆ ಮತ್ತು ಎಮ್ಮೆ ಕರುಗಳ ಹತ್ಯೆಯನ್ನು ತಡೆಯುವುದಕ್ಕಾಗಿ ಹಾಗೂ ಇತರೆ ದನಕರುಗಳ ರಕ್ಷಣೆಗಾಗಿ ಉಪಬಂಧ ಕಲ್ಪಿಸುವ ಅಧಿನಿಯಮ.
  3. ಕರ್ನಾಟಕ ದನಕರು ಅತಿಕ್ರಮ ಪ್ರವೇಶ ಅಧಿನಿಯಮ 1966 ಮತ್ತು ಕರ್ನಾಟಕ ದನಕರು ಅತಿಕ್ರಮ ಪ್ರವೇಶ ನಿಯಮಗಳು 1971
  4. ಭೂಮಿ ಅಥವಾ ಇತರೆ ಸ್ವತ್ತುಗಳಿಗೆ ಹಾನಿಯನ್ನುಂಟುಮಾಡುವ ದನಕರುಗಳನ್ನು ದೊಡ್ಡಿಯಲ್ಲಿ ಕೂಡಿಹಾಕುವುದಕ್ಕೆ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಉಪಬಂಧಿಸುವ ಅಧಿನಿಯಮ.
  5. ಕರ್ನಾಟಕ ಪುರಸಭಾ ನಿಗಮಗಳ ಅಧಿನಿಯಮ 1976 ಮತ್ತು ನಿಯಮಗಳು
  6. ಕರ್ನಾಟಕ ರಾಜ್ಯದಲ್ಲಿ ಪುರಸಭಾ ನಿಗಮಗಳ ಸ್ಥಾಪನೆಗೆ ಸಂಬಂಧಿಸಿದಂತೆ ಕಾನೂನುಗಳನ್ನು ಕ್ರೋಢೀಕರಿಸುವ ಮತ್ತು ತಿದ್ದುಪಡಿ ಮಾಡುವ ಅಧಿನಿಯಮ.
  7. ಕರ್ನಾಟಕ ಪ್ರಾಣಿಬಲಿಯನ್ನು ತಡೆಗಟ್ಟುವ ಅಧಿನಿಯಮ 1959 ಮತ್ತು ನಿಯಮಗಳು ಕರ್ನಾಟಕ ರಾಜ್ಯದಲ್ಲಿ ಪೂಜಾ ಸ್ಥಳಗಳ ಆವರಣಗಳಲ್ಲಿ ಹಾಗೂ ಆವರಣಗಳೊಳಗೆ ಪ್ರಾಣಿಬಲಿಯನ್ನು ತಡೆಗಟ್ಟುವ ಅಧಿನಿಯಮ.
  8. ಕರ್ನಾಟಕ ಜಾನುವಾರು ಸುಧಾರಣಾ ಅಧಿನಿಯಮ 1961 ಮತ್ತು ನಿಯಮಗಳು 1969 ಕರ್ನಾಟಕ ರಾಜ್ಯದಲ್ಲಿ ಜಾನುವಾರು ಸುಧಾರಣೆಗಾಗಿ ಉಪಬಂಧ ಕಲ್ಪಿಸುವ ಅಧಿನಿಯಮ.
  9. ಜಾನುವಾರು ಆಮದು ಅಧಿನಿಯಮ 1968
  10. ಜಾನುವಾರು ಆಮದನ್ನು ನಿಯಂತ್ರಿಸುವುದಕ್ಕೆ ಉತ್ತಮ ಉಪಬಂಧವನ್ನು ಕಲ್ಪಿಸುವ ಅಧಿನಿಯಮ.
  11. ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ಅಧಿನಿಯಮ 1973 ಕರ್ನಾಟಕ ರಾಜ್ಯದಲ್ಲಿ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿಗಾಗಿ ಒಂದು ಮಂಡಳಿಯನ್ನು ಸ್ಥಾಪಿಸಲು ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳಿಗಾಗಿ ಉಪಬಂಧ ಕಲ್ಪಿಸುವ ಅಧಿನಿಯಮ.
  12. ವನ್ಯಜೀವಿ ಸಂರಕ್ಷಣಾ ಅಧಿನಿಯಮ 1972 ಮತ್ತು ವನ್ಯಜೀವಿ (ಸಂರಕ್ಷಣಾ) (ಕರ್ನಾಟಕ) ನಿಯಮಗಳು 1973
  13. ವನ್ಯಜೀವಿಗಳು, ಪಕ್ಷಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಅಥವಾ ಅದಕ್ಕೆ ಸಹಾಯಕವಾಗಬಹುದಾದ ಅಥವಾ ಪ್ರಾಸಂಗಿಕವಾದ ವಿಷಯಗಳನ್ನು ಉಪಬಂಧಿಸುವ ಅಧಿನಿಯಮ.
  14. ಪ್ರಾಣಿಗಳಲ್ಲಿನ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಅಧಿನಿಯಮ 2009
  15. ಪ್ರಾಣಿಗಳನ್ನು ಬಾಧಿಸುವ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳನ್ನು ಪ್ರತಿಬಂಧಿಸುವ ಮತ್ತು ನಿಯಂತ್ರಿಸುವ ಹಾಗೂ ನಿರ್ಮೂಲನೆಗೊಳಿಸುವುದಕ್ಕಾಗಿ ಮತ್ತು ಅಂಥ ರೋಗಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯದಲ್ಲಿ ತಲೆದೋರುವುದನ್ನು ಅಥವಾ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಮತ್ತು ಪ್ರಾಣಿಜನ್ಯ ಮತ್ತು ಪ್ರಾಣಿಜನ್ಯ ಉತ್ಪನ್ನಗಳಿಗೆ ಆಮದು ಮತ್ತು ರಫ್ತು ಸೌಲಭ್ಯ ಕಲ್ಪಿಸುವ ವಿಷಯಗಳಿಗೆ ಸಂಬಂಧಪಟ್ಟಂತೆ ಭಾರತದ ಅಂತಾರಾಷ್ಟ್ರೀಯ ಹೊಣೆಗಾರಿಕೆಯನ್ನು ಅದಕ್ಕೆ ಸಂಬಂಧಿಸಿದ ಪ್ರಾಸಂಗಿಕ ವಿಷಯಗಲನ್ನು ಕಾರ್ಯಗತಗೊಳಿಸುವ ಅಧಿನಿಯಮ.
  16. ಔಷಧಗಳು ಮತ್ತು ಪ್ರಸಾಧನ ಸಾಮಗ್ರಿಗಳ ಅಧಿನಿಯಮ 1940
  17. ಔಷಧಗಳು ಮತ್ತು ಪ್ರಸಾಧನ ಸಾಮಗ್ರಿಗಳ ಆಮದು ತಯಾರಿಕೆಗಳು, ವಿತರಣೆ ಮತ್ತು ಮಾರಾಟವನ್ನು ನಿಯಂತ್ರಿಸುವ ಅಧಿನಿಯಮ.
  18. ಭಾರತೀಯ ಪಶುವೈದ್ಯಕೀಯ ಪರಿಷತ್ತು ಅಧಿನಿಯಮ 1984 - ಕೆವಿಡಿ ನಿಯಮಗಳು 1998 ಪಶುವೈದ್ಯಕೀಯ ವೃತ್ತಿಯನ್ನು ನಿಯಂತ್ರಿಸುವುದಕ್ಕಾಗಿ ಮತ್ತು ರಾಜ್ಯ ಪಶುವೈದ್ಯಕೀಯ ಪರಿಷತ್ತುಗಳನ್ನು ಸ್ಥಾಪಿಸಲು ಮತ್ತು ಪಶುವೈದ್ಯಕೀಯ ವೃತ್ತಿದಾರರ ರಿಜಿಸ್ಟರುಗಳ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಉಪಬಂಧ ಕಲ್ಪಿಸುವ ಅಧಿನಿಯಮ.
  19. ಕರ್ನಾಟಕ ಕೋಳಿ ಮತ್ತು ಜಾನುವಾರು ಆಹಾರಗಳು (ತಯಾರಿಕೆ ಮತ್ತು ಮಾರಾಟ ನಿಯಂತ್ರಣ) ದನಗಳ ಮತ್ತು ಕೋಳಿ ಆಹಾರ ತಯಾರಿಕೆ ಮತ್ತು ಮಾರಾಟವನ್ನು ನಿಯಂತ್ರಿಸುವ ಆದೇಶ 1987, ತಿದ್ದುಪಡಿ ಆದೇಶ 1991-92.
  20. ಪ್ರಾಣಿಹಿಂಸೆ ತಡೆಗಟ್ಟುವ ಅಧಿನಿಯಮ 1960
  21. ಪ್ರಾಣಿಗಳಿಗೆ ಅನಗತ್ಯವಾಗಿ ನೋವು ಅಥವಾ ಯಾತನೆ ಕೊಡುವುದನ್ನು ತಡೆಗಟ್ಟುವ ಅಧಿನಿಯಮ ಮತ್ತು ಪ್ರಾಣಿಹಿಂಸೆ ತಡೆಗಟ್ಟುವುದಕ್ಕೆ ಸಂಬಂಧಪಟ್ಟ ಕಾನೂನನ್ನು ತಿದ್ದುಪಡಿ ಮಾಡುವುದು.

ಮೂಲ : ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

ಕೊನೆಯ ಮಾರ್ಪಾಟು : 6/7/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate