ತರಬೇತಿ ಕೇಂದ್ರಗಳಲ್ಲಿ ಆಸಕ್ತ ಗ್ರಾಮೀಣ ರೈತರಿಗೆ ಕೋಳಿ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿ ನಿರಂತರವಾಗಿ ತರಬೇತಿ ನೀಡಲಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ 25 ತರಬೇತಿ ಕೇಂದ್ರಗಳಿರುತ್ತವೆ.
ಇಲಾಖೆಯಲ್ಲಿ ತರಬೇತಿ ನೀಡುವ ಕಾರ್ಯಕ್ರಮವು ಒಂದು ಪ್ರಮುಖ ಅಂಶವಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ತಾಂತ್ರಿಕ ಸಿಬ್ಬಂದಿಗೆ ತಿಳುವಳಿಕೆ ನೀಡುವ ಸಲುವಾಗಿ ತರಬೇತಿ ನೀಡುವುದೂ ಸಹ ಇಲಾಖೆಯ ನಿರಂತರವಾದ ಪದ್ಧತಿಯಾಗಿದೆ. ಅಧಿಕಾರಿ / ಸಿಬ್ಬಂದಿ ವರ್ಗದವರಿಗೆ ವ್ಯವಸ್ಥಿತವಾಗಿ ಅವರ ಜ್ಞಾನವನ್ನು ಹೆಚ್ಚಿಸುವುದು ಹಾಗೂ ಕೆಲಸವನ್ನು ಸುಸೂತ್ರವಾಗಿ ನಡೆಸುವುದು ತರಬೇತಿ ನೀಡುವ ಉದ್ದೇಶವಾಗಿದೆ.
ಕ್ರ. ಸಂ. |
ತರಬೇತಿ ಕೇಂದ್ರ |
01 |
ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ |
02 |
ಜಾನುವಾರು ಸಂವರ್ಧನಾ ಕೇಂದ್ರ, ಹೆಸರಘಟ್ಟ |
03 |
ಜಾನುವಾರು ಸಂವರ್ಧನಾ ಕೇಂದ್ರ, ಕುರಿಕುಪ್ಪೆ |
04 |
ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರ, ಕುಣಿಕೇನಹಳ್ಳಿ |
05 |
ರಾಜ್ಯ ಕುಕ್ಕುಟ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ |
06 |
ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯ್ಲಾ |
07 |
ಅಮೃತ್ ಮಹಲ್ ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಅಜ್ಜಂಪುರ |
08 |
ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಧಾರವಾಡ |
09 |
ಖಿಲ್ಲಾರ್ ತಳಿ ಸಂವರ್ಧನಾ ಕೇಂದ್ರ, ಬಂಕಾಪುರ |
10 |
ಪ್ರಾದೇಶಿಕ ಕುಕ್ಕುಟ ಸಂವರ್ಧನಾ ಕೇಂದ್ರ, ಮಳವಳ್ಳಿ |
11 |
ಪ್ರಾದೇಶಿಕ ಕುಕ್ಕುಟ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಗಂಗಾವತಿ |
12 |
ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ದಕ್ಷಿಣ ಕನ್ನಡ |
13 |
ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಉತ್ತರ ಕನ್ನಡ |
14 |
ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಬಿಜಾಪುರ |
15 |
ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ರಾಯಚೂರು |
16 |
ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಕೋಲಾರ |
17 |
ಹಂದಿ ತಳಿ ಸಂವರ್ಧನಾ ಕೇಂದ್ರ, ಕೊಯ್ಲಾ |
18 |
ಹಂದಿ ತಳಿ ಸಂವರ್ಧನಾ ಕೇಂದ್ರ, ಕೂಡಿಗೆ |
19 |
ರೈತರ ತರಬೇತಿ ಕೇಂದ್ರ, ಬೀದರ |
20 |
ಪಶುವೈದ್ಯ ಪರೀಕ್ಷಕರ ತರಬೇತಿ ಕೇಂದ್ರ, ಧಾರವಾಡ |
21 |
ಪಶುವೈದ್ಯ ಸಹಾಯಕರ ತರಬೇತಿ ಕೇಂದ್ರ, ಬಳ್ಳಾರಿ |
22 |
ಪಶುವೈದ್ಯ ಪರೀಕ್ಷಕರ ತರಬೇತಿ ಕೇಂದ್ರ, ಹಾಸನ |
23 |
ಪಶುವೈದ್ಯ ಸಹಾಯಕರ ತರಬೇತಿ ಕೇಂದ್ರ, ದಾವಣಗೆರೆ |
24 |
ಪಶುವೈದ್ಯ ಪರೀಕ್ಷಕರ ತರಬೇತಿ ಕೇಂದ್ರ, ತುಮಕೂರು |
25 |
ಪಶುವೈದ್ಯ ಸಹಾಯಕರ ತರಬೇತಿ ಕೇಂದ್ರ, ಬೆಳಗಾಂ |
ಕೊನೆಯ ಮಾರ್ಪಾಟು : 7/22/2020