ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಜಾನುವಾರು ಸಂವರ್ಧನಾ ಕ್ಷೇತ್ರಗಳಲ್ಲಿ ಸ್ಥಳೀಯ ರಾಸುಗಳ ಸಂರಕ್ಷಣೆ ಮತ್ತು ಸಾಕಾಣಿಕೆ ಹಾಗೂ ವಿದೇಶಿ ರಾಸುಗಳ ವೈಜ್ಞಾನಿಕ ನಿರ್ವಹಣೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೈತರಿಗೆ ತರಬೇತಿಯನ್ನೂ ಸಹ ಏರ್ಪಡಿಸಲಾಗುತ್ತಿದೆ. ಪ್ರಸ್ತುತ, ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾನುವಾರು ಸಂವರ್ಧನಾ ಕ್ಷೇತ್ರಗಳು ಈ ಕೆಳಕಂಡಂತಿವೆ:
- ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ, ಬೆಂಗಳೂರು ಜಿಲ್ಲೆ
- ಜಾನುವಾರು ಸಂವರ್ಧನಾ ಕ್ಷೇತ್ರ, ಹೆಸರಘಟ್ಟ, ಬೆಂಗಳೂರು ಜಿಲ್ಲೆ
- ರಾಜ್ಯ ವೀರ್ಯ ಸಂಕಲನಾ ಕೇಂದ್ರ, ಹೆಸರಘಟ್ಟ, ಬೆಂಗಳೂರು ಜಿಲ್ಲೆ
- ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರ, ಕುಣಿಕೇನಹಳ್ಳಿ, ತುರುವೇಕೆರೆ ತಾ., ತುಮಕೂರು ಜಿಲ್ಲೆ
- ಖಿಲ್ಲಾರ್ ತಳಿ ಸಂವರ್ಧನಾ ಕ್ಷೇತ್ರ, ಶಿಗ್ಗಾಂ ತಾ., ಹಾವೇರಿ ಜಿಲ್ಲೆ
- ಜರ್ಸಿ ತಳಿ ಸಂವರ್ಧನಾ ಕ್ಷೇತ್ರ, ಕೂಡಿಗೆ ತಾ., ಕೊಡಗು ಜಿಲ್ಲೆ
- ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯ್ಲಾ ತಾ., ದಕ್ಷಿಣ ಕನ್ನಡ ಜಿಲ್ಲೆ
- ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಮುನಿರಾಬಾದ್, ಕೊಪ್ಪಳ ಜಿಲ್ಲೆ
- ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ, ಅಜ್ಜಂಪುರ, ಚಿಕ್ಕಮಗಳೂರು ಜಿಲ್ಲೆ
- ಎಮ್ಮೆ ತಳಿ ಸಂವರ್ಧನಾ ಕೇಂದ್ರ, ತೇಗೂರು, ಧಾರವಾಡ ಜಿಲ್ಲೆ
- ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಹಾಗೂ ಕೇಂದ್ರೀಯ ವೀರ್ಯ ಸಂಕಲನಾ ಕೇಂದ್ರ, ಧಾರವಾಡ ಜಿಲ್ಲೆ
- ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕುರಿಕುಪ್ಪೆ, ಸಂಡೂರು ತಾ., ಬಳ್ಳಾರಿ ಜಿಲ್ಲೆ
- ಕಡಸು ಉತ್ಪಾದನಾ ಕೇಂದ್ರ, ಬರ್ಗಿ, ಗುಂಡ್ಲುಪೇಟೆ ತಾ., ಚಾಮರಾಜನಗರ ಜಿಲ್ಲೆ
ಮೂಲ : ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ
ಕೊನೆಯ ಮಾರ್ಪಾಟು : 6/5/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.