অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ- ತುಮಕೂರು

ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ- ತುಮಕೂರು

 1. ಇಲಾಖೆಯ ಪೀಠಿಕೆ ಮತ್ತು ಸಂಘಟನೆ:
 2. ಸಂಘಟನೆ
 3. ಕಾರ್ಯಕ್ರಮ ಮತ್ತು ಯೋಜನೆ
 4. ಜಾನುವಾರು ಗಣತಿ ಮತ್ತು ಸಮಗ್ರ ಮಾದರಿ ಸಮೀಕ್ಷೆ ಯೋಜನೆ:
 5. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ:
 6. ದೊಡ್ಡರೋಗ ನಿವಾರಣೆ ಯೋಜನೆ:
 7. ಮೇವ ಅಭಿವೃದ್ಧಿ ಕಾರ್ಯಕ್ರಮ:
 8. ವಿಸ್ತರಣಾ ಚಟುವಟಿಕೆಗಳು:
 9. ಹೊಸ ಕಾರ್ಯಕ್ರಮಗಳು:
 10. ಗಿರಿರಾಜ ಕೋಳಿಗಳ ವಿತರಣೆ:
 11. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ: (ಎಸ್.ಸಿ.ಪಿ ಮತ್ತು ಟಿ.ಎಸ್.ಪಿ)
 12. ಸಾಂಖ್ಯಿಕ ಸಂಕ್ಷಿಪ್ತ ಪರಿಚಯ
 13. ಜಾನುವಾರು ಗಣತಿ 2007
 14. ಕೆ.ಡಿ.ಪಿ
 15. ಔಷಧಿ ವಿತರಣೆ:
 16. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
 17. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ವಿಶೇಷ ಕಾರ್ಯಕ್ರಮಗಳು
 18. ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ (ಕೆ.ಎಲ್.ಡಿ.ಎ)
 19. ಇಲಾಖೆಯಲ್ಲಿ ಯಾರು ಯಾರು
 20. ಇಲಾಖೆಯ ಪ್ರಮುಖ ಸಾಧನೆಗಳು:
 21. ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4(1) A ಮತ್ತು B:
 22. ದೂರವಾಣಿ ಸಂಖ್ಯೆಗಳು

ಇಲಾಖೆಯ ಪೀಠಿಕೆ ಮತ್ತು ಸಂಘಟನೆ:

ಭಾರತ  ಕೃಷಿ ಆಧಾರಿತ ದೇಶವಾಗಿದ್ದು, ದೇಶದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ಗಣನೀಯವಾಗಿದ್ದು, ಅನಾಧಿ ಕಾಲದಿಂದಲೂ ಕೃಷಿ ಮತ್ತು ಪಶುಸಂಗೋಪನೆ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಗ್ರಾಮೀಣ ಜನ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಜಿಲ್ಲೆಯ ಗ್ರಾಮೀಣ ಜನತೆಯ ಪ್ರಮುಖ ಉದ್ಯೋಗ ವ್ಯವಸಾಯ ಮತ್ತು ವ್ಯವಸಾಯ ಅವಲಂಬಿತ  ಉಪಕಸುಬುಗಳಾಗಿದ್ದು, ಈ ಕಸುಬುಗಳ ನಿರ್ವಹಣೆಗೆ ಉಳುವ ಎತ್ತುಗಳು, ಗೊಬ್ಬರಕ್ಕಾಗಿಜಾನುವಾರುಗಳ ಮೇಲಿನ ಅವಲಂಬನೆ ನಿಚ್ಚಳವಾಗಿದೆ. ಪಶುಪಾಲನೆ ಇಂದು ಕೇವಲ ಒಂದು ಕಸುಬಾಗಿ ಉಳಿಯದೆ ಉದ್ಯಮವಾಗಿ ಬೆಳೆದು ನಿಂತಿದೆ. ಪಶುಪಾಲನೆ ಈ ಹಂತಕ್ಕೇರಲು ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆಯ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಇಲಾಖೆಯು ಈ ಕೆಳಕಂಡ ವಿಭಾಗಗಳಲ್ಲಿ ಅಹರ್ನಿಶೆ ದುಡಿಯುತ್ತಿದೆ. ರೋಗಪೀಡಿತ ಪ್ರಾಣಿ ಮತ್ತು ಪಕ್ಷಿಗಳ ಆರೋಗ್ಯ ರಕ್ಷಣೆ ಪ್ರಾಣಿ ಮತ್ತು ಕೋಳಿ ರೋಗಗಳ ತಡೆಗಟ್ಟುವಿಕೆಗಾಗಿ ವಿವಿಧ ಲಸಿಕಾ ಕಾರ್ಯಕ್ರಮಗಳ  ಆಯೋಜನೆ, ಇದರಿಂದಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಬರಬಹುದಾದ ಕಾಯಿಲೆಗಳ ನಿಯಂತ್ರಣವೂ ಸಾಧ್ಯವಾಗಿದೆ. ಕೃತಕ ಗರ್ಭಧಾರಣೆ ಕಾರ್ಯಕ್ರಮದ ಮೂಲಕ ಹಾಲು ಉತ್ಪಾದನೆಯ ಹೆಚ್ಚಳವಿಸ್ತರಣಾ ಚಟುವಟಿಕೆಗಳ ಮೂಲಕ ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳ ಯಶಸ್ವಿ ಅನುಷ್ಟಾನ.

ಸಂಘಟನೆ

ಜಿಲ್ಲೆಯ  ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ಕೆಲ ಆಯ್ದ ಹೋಬಳಿ ಕೇಂದ್ರಗಳಲ್ಲಿ, ಹಳ್ಳಿಗಳಲ್ಲಿ ಪಶು ಆಸ್ಪತ್ರೆಗಳಿವೆ. ಜಿಲ್ಲೆಯಲ್ಲಿ ಕೆಲ ಹಳ್ಳಿಗಳಲ್ಲಿ ಪಶು ಚಿಕಿತ್ಸಾಲಯಗಳು, ಪ್ರಾಥಮಿಕ ಪಶು ಚಿಕಿತ್ಸಾಕೇಂದ್ರಗಳು ಮತ್ತು ಕೃತಕ ಗರ್ಭಧಾರಣಾ ಕೇಂದ್ರಗಳಿವೆ. ಈ ಸಂಸ್ಥೆಗಳು ಪ್ರಾಣಿ ಪಕ್ಷಿಗಳ ಆರೋಗ್ಯ ರಕ್ಷಣೆ, ತಳಿ ಸಂವರ್ಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೋಳಿ ವಿಸ್ತರಣಾ ಕೇಂದ್ರಗಳಲ್ಲಿ ಒಂದು ದಿನದ ಗಿರಿರಾಜ ಮರಿಗಳನ್ನು 4-5 ವಾರದವರೆಗೆ ಸಾಕಿ ರಿಯಾಯಿತಿ ದರದಲ್ಲಿ ಜಿಲ್ಲೆಯ ಮಹಿಳೆಯರಿಗೆ ವಿತರಿಸಲಾಗುತ್ತದೆ. ಇಲಾಖೆಯು ಜಿಲ್ಲಾ ಕೇಂದ್ರದಲ್ಲಿರುವ ದೊಡ್ಡರೋಗನಿವಾರಣಾ ಯೋಜನೆಯು ಈಗಾಗಲೇ ನಿರ್ಮೂಲನೆಯಾಗಿರುವ ದೊಡ್ಡರೋಗ ಮರುಕಳಿಸದಂತೆ ಯೋಜನೆಗಳ ಅನುಷ್ಟಾನಗೊಳಿಸುತ್ತಾರೆ. ಕೋಳಿಶೀತಜ್ವರದ ಬಗ್ಗೆ ಇಲಾಖಾ ಅದಿಕಾರಿಗಳು, ಸಿಬ್ಬಂದಿ ಹಾಗೂ ಆಯ್ದ ರೈತರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ತರಬೇತಿ ಶಿಬಿರ ಆಯೋಜಿಸುವದು.  ಕೋಳಿ ಫಾರಂ ಮತ್ತು ಗ್ರಾಮೀಣ ಭಾಗದ ನಾಟಿ ಕೋಳಿಗಳಿಂದ ರಕ್ಷಣೆ ಸಾಕು ಮಾದರಿ ಸಂಗ್ರಹಣೆ ಮತ್ತು ಪ್ರಯೋಗಾಲಯಕ್ಕೆ ಸಲ್ಲಿಸುವುದು ಹಾಗೂ ಜಿಲ್ಲೆಯ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಿಗೆ ಲಸಿಕೆ, ವೀರ್ಯನಳಿಕೆ, ಔಷಧಿ ಹಾಗೂ ದ್ರವಸಾರಜನಕ ಸರಬರಾಜು ಮಾಡುವದು.ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆಯು ಮಿಶ್ರತಳಿ ಹೆಣ್ಣು ಕರುಗಳ ಉತ್ತಮ ಪೋಷಣೆಗಾಗಿ ರಿಯಾಯಿತಿಯನ್ನೊಳಗೊಂಡ ಸಾಲ ಯೋಜನೆಯನ್ನು ಹಮ್ಮಿಕೊಳ್ಳುತ್ತದೆ. ರಾಜ್ಯವಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ  ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹೊಸದಾಗಿ ನೇಮಕಗೊಂಡ ಅರೆತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡುತ್ತದೆ. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಕುರಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಗುಣಮಟ್ಟದ ಕುರಿ ಸಾಕಾಣಿಕೆಗಾಗಿ ನಿಗಮಜನಶ್ರೀ ಯೋಜನೆಯಡಿಯಲ್ಲಿ ಕುರಿಗಳ ಜೀವ ವಿಮೆಗೆ ಸಬ್ಸಿಡಿ ನೀಡುತ್ತದೆ. ಕುರಿ ಸಾಕಾಣಿಕೆ ಕುರಿತು ತರಬೇತಿ ಶಿಬಿರ  ಆಯೋಜಿಸುತ್ತದೆ. ಕುರಿಗಳಿಗೆ ಔಷಧಿ ಮತ್ತು ಜಂತುನಾಶಕಗಳ ವಿತರಣೆ ಮಾಡುತ್ತದೆ. ಬಿ.ಪಿ.ವೈ(ಬೀಡ್ ಪಾಲಕ್ ಭೀಮಾ ಯೋಜನೆ)ಯಡಿಯಲ್ಲಿ ಕುರಿಗಾರರಿಗೆ ವಿಮಾ ಸೌಲಭ್ಯ ಒದಗಿಸುತ್ತದೆ ಕುರಿಗಾರರ ಮಕ್ಕಳಿಗಾಗಿ ಕರ್ನಾಟಕ ಬೀಡ್ ಪಾಲಕ್ ಯೋಜನ/ಸರ್ವ ಶಿಕ್ಷಣ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಧಿ ವೇತನ ನೀಡಲಾಗುತ್ತದೆ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಆರ್ಥಿಕ-ಸಾಮಾಜಿಕವಾಗಿ ಹಿಂದುಳಿದ ಕುರಿಗಾರರಿಗೆ ಕುರಿ ಘಟಕಗಳನ್ನು ಕೊಳ್ಳಲು ಸಹಾಯಧನ ನೀಡುತ್ತದೆ.

ಕಾರ್ಯಕ್ರಮ ಮತ್ತು ಯೋಜನೆ

ಜಾನುವಾರು ಗಣತಿ ಮತ್ತು ಸಮಗ್ರ ಮಾದರಿ ಸಮೀಕ್ಷೆ ಯೋಜನೆ:


ಇಲಾಖೆಯು ಪ್ರತಿ 4 ವರ್ಷಗಳಿಗೊಮ್ಮೆ ಜಾನುವಾರು ಗಣತಿಯನ್ನು ಮತ್ತು ಪ್ರತಿ ವರ್ಷ ಬೇಸಿಗೆ, ಮಳೆ ಮತ್ತು ಚಳಿಗಾಲಗಳಲ್ಲಿ ಸಮಗ್ರ ಮಾದರಿ ಸಮೀಕ್ಷೆ ಯೋಜನೆ ಹಮ್ಮಿಕೊಳ್ಳುತ್ತಿದೆ.

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ:


ಕೃತಕ ಗರ್ಭಧಾರಣೆ ಕಾರ್ಯಕ್ರಮ: ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಕೃತಕ ಗರ್ಭಧಾರಣೆ ಕಾರ್ಯಕ್ರಮದ ಮೂಲಕ ಸ್ಥಳೀಯ ರಾಸುಗಳ ಉನ್ನತೀಕರಣದಿಂದ ಅಧಿಕ ಹಾಲು ಇಳುವರಿ ಮತ್ತು ಸ್ಥಳೀಯ ತಳಿಗಳ ಶುದ್ಧತೆ ಕಾಪಾಡಲು ಶ್ರಮಿಸುತ್ತಿವೆ. ಪ್ರತಿ ಕೃತಕ ಗರ್ಭಧಾರಣೆಗೆ ರೂ. 5/-ಗಳ ಶುಲ್ಕ ಪಡೆಯಲಾಗುತ್ತಿದೆ. ಗರ್ಭ ತಪಾಸಣಾ ಕಾರ್ಯಕ್ರಮ: ಕೃತಕ ಗರ್ಭಧಾರಣೆ ಮಾಡಿದ ರಾಸುಗಳನ್ನು 2  ½ ರಿಂದ 3 ತಿಂಗಳ ಬಳಿಕ ಗುರುತಿಸಿ ಗರ್ಭ ತಪಾಸಣೆಗೊಳಪಡಿಸಲಾಗುತ್ತದೆ. ಲಸಿಕಾ  ಕಾರ್ಯಕ್ರಮ: ಕಾಲು ಬಾಯಿ ಜ್ವರ, ಚಪ್ಪೆರೋಗ, ಗಳಲೆರೋಗ, ಅಂಥ್ರಾಕ್ಸ್, ಪಿ.ಪಿ.ಅರ್. ಕುರಿ ಸಿಡುಬು, ರಾಣಿಕೇಟ್ ಇನ್ನು ಮುಂತಾದ ರೋಗಗಳ ವಿರುದ್ಧ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡು ಪ್ರಾಣಿಮತ್ತು ಪಕ್ಷಿಗಳಿಗೆ ರೋಗಗಳಂದ ರಕ್ಷಣೆ ನೀಡಲಾಗುತ್ತದೆ.

ದೊಡ್ಡರೋಗ ನಿವಾರಣೆ ಯೋಜನೆ:


ಮಾರಕ ರೋಗವಾದ ದೊಡ್ಡರೋಗ  ಈಗಾಗಲೇ ನಿರ್ಮೂಲನೆಯಾಗಿದ್ದರೂ, ಈ ರೋಗ ಮರುಕಳಿಸದಂತೆ ‘ಹಳ್ಳಿಗಳ ಪತ್ತೆ’ ಮತ್ತು ‘ಹೆದ್ದಾರಿ ಪತ್ತೆ’ ಕಾರ್ಯಕ್ರಮಗಳಲ್ಲಿ ಪ್ರತಿ   ತಿಂಗಳೂ ಕೆಲವು ಹಳ್ಳಿ ಮತ್ತು ನಿಗಧಿತ ಹೆದ್ದಾರಿಗಳಲ್ಲಿ ಈ ರೋಗ ಲಕ್ಷಗಳುಳ್ಳ ಪ್ರಾಣಿಗಳ ಪತ್ರೆ ಹಚ್ಚಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ರೋಗ ಲಕ್ಷಗಳುಳ್ಳ ರಾಸುಗಳ ರಕ್ತ ಮಾದರಿಗಳನ್ನು ರೋಗ ದೃಢೀಕರಣಕ್ಕಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಬೆಂಗಳೂರು ಇಲ್ಲಿಗೆ ಕಳುಹಿಸಲಾಗುತ್ತದೆ.

ಮೇವ ಅಭಿವೃದ್ಧಿ ಕಾರ್ಯಕ್ರಮ:


ರೈತರು ಉತ್ತಮ ತಳಿಯ ಮೇವ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಸಲುವಾಗಿ ಇಲಾಖಾ ವತಿಯಿಂದ ಲಭ್ಯತೆಯ ಮೇರೆಗೆ ಮೇವಿನ ಬೀಜಗಳ ಕಿರುಪೊಟ್ಟಣಗಳನ್ನು ಮೇವಿನ ಬೇರುಗಳನ್ನು ಮತ್ತು ಮೇವಿನ ಮರಗಳನ್ನು ಆಸಕ್ಕತ ರೈತರಿಗೆ ಒದಗಿಸಲಾಗುತ್ತದೆ.

ವಿಸ್ತರಣಾ ಚಟುವಟಿಕೆಗಳು:

 1. ಕಿಸಾನ್ ಸಂಪರ್ಕ ಸಭೆ: ಪಸು ಸಂಗೋಪನೆಯ ಅಭಿವೃದ್ಧಿಗಾಗಿ ಅಗತ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಕಿಸಾನ್ ಸಂಪರ್ಕ ಸಭೆಗಳ ಮೂಲಕ ರೈತರಿಗೆ ನೀಡಲಾಗುತ್ತದೆ.
 2. ಆರೋಗ್ಯ ಮತ್ತು ಬರಡು ರಾಸುಗಳ ಶಿಭಿರ: ಆಯ್ದ ಹಳ್ಳಿಗಳಲ್ಲಿ ಅರೋಗ್ಯ ಮತ್ತು ಬರಡು ರಾಸುಗಳ ಶಿಬಿರಗಳನ್ನು ಏರ್ಪಡಿಸುವ ಮೂಲಕ ತಜ್ಞ ವೈದ್ಯರಿಂದ ರೋಗ ಪೀಡಿತ ರಾಸುಗಳ ತಪಾಸಣೆ ಮಾಡಲಾಗುತ್ತದೆ ಮತ್ತು ರೈತರಿಗೆ ಹಲವಾರು ವಿಷಯಗಳ ಬಗ್ಗೆ ವೈಜ್ಞಾನಿ ಕ ಮಾಹಿತಿ ನೀಡಲಾಗುತ್ತಿದೆ.
 3. ಗ್ರಾಮ ಸಂದರ್ಶನ: ವಿಸ್ತರಣಾಧಿಕಾರಿಗಳು ಗ್ರಾಮಗಳನ್ನು ಸಂದರ್ಶಿಸಿ ಪಸು ಸಂಗೋಪನಾ ವಿಸ್ತರಣಾ ಚಟುವಟಿಕೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ಮಾಡುತ್ತಾರೆ.

 4. ರಾಸು ಮತ್ತು ಕರುಗಳ ಪ್ರದರ್ಶನ: ಉತ್ತಮ ಗುಣಮಟ್ಟದ ಸ್ಥಳೀಯ ಹೋರಿ, ಮಿಶ್ರತಳಿ ರಾಸುಗಳ ಮತ್ತು ಕರುಗಳ ಸಾಕಾಣಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ದನ ಮತ್ತು ಕರುಗಳ ಪ್ರದರ್ಶನವನ್ನು ಆಯ್ದ ಗ್ರಾಮಗಳಲ್ಲಿ ಏರ್ಪಡಿಸಲಾಗುತ್ತಿದೆ. ಆಯ್ಕೆಯಾದ ರಾಸು ಮತ್ತು ಕರುಗಳಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ.

ತಾಂತ್ರಿಕ ತಪಾಸಣೆ: ವಿಸ್ತರಣಾಧಿಕಾರಿಗಳು ಪ್ರಾಥಮಿಕ ಪಶು ಚಿಕಿತ್ಸಾಕೇಂದ್ರಗಳಿಗೆ ಭೇಟಿಯಿತ್ತು ಅಲ್ಲಿನ ವಿವಿಧ ವಹಿ ಮತ್ತು ಕಡತಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಾರೆ.

ಹೊಸ ಕಾರ್ಯಕ್ರಮಗಳು:

 1. ರೈತರ ತರಬೇತಿ: ವಿವಿಧ ಹಳ್ಳಿಗಳ ಆಯ್ದ ರೈತರಿಗೆ ಪಶು ಸಂಗೋಪನೆಯ ವಿವಿಧ ಕ್ಷೇತ್ರಗಳಲ್ಲಿ (ಸಾಕಾಣಿಕೆ, ತಳಿ ಅಭಿವೃದ್ಧಿ, ಆರೋಗ್ಯ ರಕ್ಷಣೆ, ಆಹಾರ ಇತರೆ) ವೈಜ್ಞಾನಿಕ ತರಬೇತಿ ನೀಡಲಾಗುತ್ತದೆ.

 2. ಅರೆತಾಂತ್ರಿಕ ಸಿಬ್ಬಂದಿಯ ತರಬೇತಿ: ಅರೆತಾಂತ್ರಿಕ ಸಿಬ್ಬಂದಿಗಳಾದ ಪಶುವೈದ್ಯಕೀಯ ಮೇಲ್ವಿಚಾರಕರು, ಪಶುವೈದ್ಯಕೀಯ ಪರೀಕ್ಷಕರು ಮತ್ತು ಪಶುವೈದ್ಯಕೀಯ ಸಹಾಯಕರು ಜಿಲ್ಲೆಯ ಕೇಂದ್ರಸ್ಥಾನದಲ್ಲಿರುವ  ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಒಂದು ವಾರದ ತರಬೇತಿ ಪಡೆದು ಪಶು ಸಂಗೋಪನೆಯ ಬಗೆಗಿನ ಜ್ಞಾನವನ್ನು ಕಾಲಕಾಲಕ್ಕೆ ವಿಸ್ತರಿಸಿಕೊಳ್ಳುತ್ತಾರೆ.
 3. ) ಕೋಳಿಶೀತಜ್ವರ ತರಬೇತಿ: ಕೋಳಿಶೀತಜ್ವರ ತಡೆಗಟ್ಟುವ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಈ ಸಾಲಿನಲ್ಲಿ ಪ್ರತಿ ತಾಲ್ಲೂಕಿನಲ್ಲಿ ಪಂಚಗ್ರಾಮ ಪ್ರತಿನಿಧಿಗಳಿಗೆ ರೋಗದ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಬಗ್ಗೆ ತಾಲ್ಲೂಕು ಮಟ್ಟದಲ್ಲಿ     ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 4. ಕೃತಕ ಗರ್ಭಧಾರಣೆ ತರಬೇತಿ: ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ ವತಿಯಿಂದ ಹೈನುರಾಸುಗಳ ಅಭಿವೃದ್ಧಿ ಕಾರ್ಯಕ್ರಮದಡಿ 40 ಮಂದಿ ಇಲಾಖೆಯ ಅರೆ ತಾಂತ್ರಿಕ ಸಿಬ್ಬಂದಿಗಳ ಎರಡು ತಂಡದಲ್ಲಿ ಐದು ದಿನಗಳ    ಕೃತಕ ಗರ್ಭಧಾರಣೆಯ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗಿರಿರಾಜ ಕೋಳಿಗಳ ವಿತರಣೆ:

ತುಮಕೂರು, ಶಿರಾ ಮತ್ತು ತುರುವೇಕೆರೆ ಪಶು ಆಸ್ಪತ್ರೆಗಳ ಕೋಳಿ ವಿಸ್ತರಣಾ ಕೇಂದ್ರಗಳಲ್ಲಿ ಒಂದು ದಿನದ ಗಿರಿರಾಜ ಕೋಳಿಮರಿಗಳನ್ನು ತಂದು 5-6 ವಾರಗಳವರೆಗೆ ಸಾಕಿ ಜಿಲ್ಲೆಯಲ್ಲಿನ ಆಯ್ದ ಸ್ತ್ರೀಶಕ್ತಿ  ಸಂಘಗಳ ಮಹಿಳೆಯರಿಗೆ ಕೋಳಿಮರಿಗಳ ಲಭ್ಯತೆಯ ಆಧಾರದ ಮೇಲೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ.

ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ: (ಎಸ್.ಸಿ.ಪಿ ಮತ್ತು ಟಿ.ಎಸ್.ಪಿ)

 1. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ: ಈ ಯೋಜನೆಗಳಲ್ಲಿ ಕ್ರಮವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಯ್ದ ರೈತರಿಗೆ ಮಿಶ್ರತಳಿ ರಾಸು, ಎತ್ತುಗಳು ಮತ್ತು ಕುರಿಘಟಕಗಳನ್ನು ಕೊಳ್ಳಲ್ಲು   ಸಹಾಯಧನ ನೀಡಲಾಗುತ್ತದೆ. (ಫಲಾನುಭವಿಗಳನ್ನು ಗ್ರಾಮಸಭೆಗಳಲ್ಲಿ ಆಯ್ಕೆಮಾಡಿ, ಪಟ್ಟಿಯನ್ನು ತಾಲ್ಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿಗಳಿಂದ ಅನುಮೋದಿಸಲ್ಪಟ್ಟಿರಬೇಕು.)
 2. ವಿಶೇಷ ಜಾನುವಾರು ತಳಿ ಅಭಿವೃದ್ಧ ಯೋಜನೆ:( ಈಗಾಗಲೇ ವಿವರಿಸಿದೆ) ಜಿಲ್ಲೆಯ ಸಂಸ್ಥೆಗಳಿಗೆ ಜಿಲ್ಲಾ ಪಂಚಾಯತ್ ಮತ್ತು ಆಯುಕ್ತರ ಕಛೇರಿಯಿಂದ ಔಷಧಿಗಳ ಸರಬರಾಜಾಗುತ್ತದೆ. ಪಶು ಆಸ್ಪತ್ರೆ, ಮೇಲ್ದರ್ಜೆಗೇರಿಸಿದ ಪಶು ಆಸ್ಪತ್ರೆ ಅಥವಾ ಪಶು ಚಿಕಿತ್ಸಾಲಯ, ಸಂಚಾರಿ ಪಶು  ಚಿಕಿತ್ಸಾಲಯ ಹಾಗೂ ಪ್ರಾಥಮಿಕ ಪಶು ಚಿಕಿತ್ಸಾಲಯ ಅಥವಾ ಕೃತಕ ಗರ್ಭಧಾರಣಾ ಕೇಂದ್ರಗಳಿಗೆ 3:2:1ರ ಅನುಪಾತದಲ್ಲಿ ಸರಬರಾಜು ಮಾಡಲಾಗುತ್ತದೆ.
 3. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ಈಗಾಗಲೇ ವಿವರಿಸಲಾಗಿದೆ)
 4. ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ವಿಶೇಷ ಅಭಿವೃದ್ಧಿ ಯೋಜನೆ: 
  ತುಮಕೂರು ಜಿಲ್ಲೆಯ ತುಮಕೂರು ಮತ್ತು ತಿಪಟೂರು ತಾಲ್ಲೂಕುಗಳನ್ನು ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮ ಅನುಷ್ಟಾನಗೊಳಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ರೈತರಿಗೆ ಈ ಕೆಳಕಂಡ ಕಾರ್ಯಕ್ರಮಗಳೀಗೆ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ.
 • ಬಹುವಾರ್ಷಿಕ ಮೇವಿನ ಬೆಳೆಗಳನ್ನು ಬೆಳೆಯಲು
 • ಮಿಶ್ರತಳಿ ಹಸುಗಳು ಮತ್ತು ಕುರಿಘಟಕಗಳನ್ನು ಕೊಳ್ಳಲು
 • ಅಜೋಲ್ಲಾ ಮೇವಿನ ಬೆಳೆ ಬೆಳೆಯಲು
 • ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಮೇವಿನ ಬೆಳೆಗಳ ಪ್ರಾತ್ಯಕ್ಷತೆ ಸ್ಥಾಪಿಸುವದು.
 • ರಾಸುಗಳ ಜೀವವಿಮಾ ಯೋಜನೆ:


ಸಾಂಖ್ಯಿಕ ಸಂಕ್ಷಿಪ್ತ ಪರಿಚಯ

ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ:

ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ, ಬೆಂಗಳುರು (ಕರ್ನಾಟಕ ಲೈವ್ ಸ್ಟಾಕ್ ಡೆವೆಲಪ್ ಮೆಂಟ್ ಏಜೆನ್ಸಿ (ಕೆ.ಎಸ್.ಡಿ.ಎ) ಬೆಂಗಳೂರು ಈ ಸಂಸ್ಥೆಯು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಹೈನು ರಾಸುಗಳ  ಜೀವವಿಮೆಗೆ ಸಹಾಯಧನ ನೀಡುತ್ತಿದೆ (2010-11ನೇ ಸಾಲಿನಲ್ಲಿ 1500 ಲೀಟರ್ಗಳಿಗಿಂತ ಹೆಚ್ಚು ಹಾಲು ಕೊಡುವ ಹಸು ಅಥವಾ ಎಮ್ಮೆಗಳನ್ನು ಯುನೈಟೆಡ್ ಇಂಡಿಯಾ, ಇನ್ಷೂರೆನ್ಸ್ ಕಂಪನಿ, ತುಮಕೂರು ಈ ಸಂಸ್ಥೆಯಲ್ಲಿವಿಮೆಗೆ ಒಳಪಡಿಸಬಹುದು. ವಿಮಾ ಪಾಲಿಸಿಯ ದರ ಶೇ. 2.75, ಶೇ. 5.5 ಮತ್ತು ಶೇ. 7ರಂತೆ ಕ್ರ್ಮವಾಗಿ 1 ವರ್ಷ್ದ,  2ವರ್ಷ್ದ ಅಥವಾ 3ವರ್ಷ್ದ ಅವಧಿಗೆ ಇದ್ದು, ಪ್ರೀಮಿಯಂ ದರದ ಶೇ.50ರಷ್ಟು ಹಣವನ್ನು ಸಹಾಯಧನವಾಗಿ ಕೇಂದ್ರ ಸರ್ಕಾರ ಭರಿಸುತ್ತದೆ)

 

I. ಜಿಲ್ಲೆಯ ಪಶು ಸಂಸ್ಥೆಗಳ ವಿವರ:

 

ಪಶು ಆಸ್ಪತ್ರೆ

ಪಶು ಚಿಕಿತ್ಸಾಲಯಗಳು

ಸಂಚಾರಿ ಪಶು ಚಿಕಿತ್ಸಾಲಯಗಳು

ಪ್ರಾಥಮಿಕ ಪಶು ಚಿಕಿತ್ಸಾಕೇಂದ್ರಗಳು  ಮತ್ತು
ಕೃತಕ ಗರ್ಭಧಾರಣಾ ಕೇಂದ್ರಗಳು

 

ಒಟ್ಟು

18

104

10

101


233

ಜಾನುವಾರು ಗಣತಿ 2007

ದನಕರುಗಳು

ಎಮ್ಮೆಗಳು

ಕುರಿಗಳು

ಮೇಕೆಗಳು

ಹಂದಿಗಳು

ಮೊಲಗಳು

ನಾಯಿ

ಇತರೆ

ಒಟ್ಟು ಜಾನುವಾರುಗಳು

ಕೋಳಿಗಳು

ಸ್ಥಳೀಯ

ವಿದೇಶಿ ತಳಿ

ಮಿಶ್ರತಳಿ

ಒಟ್ಟು

448036

-

141190

589226

241907

1067719

517763

7718

121

90119

9470

2523727

711273

ಕೆ.ಡಿ.ಪಿ

ಕೆ.ಡಿ.ಪಿ:

ಕ್ರ.ಸಂ.

ವಿಷಯ

ಸಾಧನೆ 2010-11(ಫೆಬ್ರವರಿ-11ರ ವರೆಗೆ)

1

ಎ) ಕೃತಕ ಗರ್ಭಧಾರಣೆ

274755

 

ಬಿ) ಕೃತಕ ಗರ್ಭಧಾರಣೆಯಿಂದ ಸಂದಾಯವಾದ ಮೊತ್ತ

1373775

2

ಗರ್ಭ ತಪಾಸಣೆ

204738

3

ಲಸಿಕಾ ಕಾರ್ಯಕ್ರಮ----ಕಾಲುಬಾಯಿಜ್ವರ

1871883

 

ರಾಣಿಕೆಟ್

497223

 

ಪಿ.ಪಿ.ಆರ್

562729

4

ದೊಡ್ಡರೋಗ ಪತ್ತೆ ಹಚ್ಚುವಿಕೆ

 

 

ಎ) ಹಳ್ಳಿಗಳಲ್ಲಿ ರೋಗ ಪತ್ತೆ

4280

 

ಬಿ) ಹೆದ್ದಾರಿಗಳಲ್ಲಿ ರೋಗ ಪತ್ತೆ

268x11 ತಿಂಗಳು

 

ಸಿ) ದಿನದ ಪುಸ್ತಕ ಪರಿಶೀಲನೆ

392

5

ಎ) ಮೇವ ಅಭಿವೃದ್ಧಿ (ಹೆಕ್ಟೇರುಗಳಲ್ಲಿ)

4734

 

ಬಿ) ಮೇವಿನ ಬೀಜಗಳ ವಿತರಣೆ

3100

6

ವಿಸ್ತರಣಾ ಕಾರ್ಯಕ್ರಮಗಳು

 

 

ಎ) ಕಿಸಾನ್ ಸಂಪಕ೵ ಸಭೆ

220

 

ಬಿ)ಆರೋಗ್ಯ ಮತ್ತು ಬರಡು ರಾಸುಗಳ ಶಿಬಿರಗಳು

126

 

ಸಿ) ಗ್ರಾಮ ಸಂದರ್ಶನ

592

 

ಡಿ) ರಾಸು ಮತ್ತು ಕರುಗಳ ಪ್ರದರ್ಶನ

10

 

ಇ) ತಾಂತ್ರಿಕ ತಪಾಸಣೆ

105

7

ಹೊಸ ಕಾರ್ಯಕ್ರಮಗಳು

 

 

ಎ) ರೈತರ ತರಬೇತಿ

686

 

ಬಿ) ಅರೆತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿ

40

8

ಗಿರಿರಾಜ ಕೋಳಿಗಳ ವಿತರಣೆ

5486

9

ವಿಶೇಷ ಘಟಕ ಯೋಜನೆ

91

10

ಗಿರಿಜನ ಉಪಯೋಜನೆ

87

11

ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆ

101

ಔಷಧಿ ವಿತರಣೆ:


ಜಿಲ್ಲೆ ವಿವಿಧ ಸಂಸ್ಥೆಗಳಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಖರೀದಿಸಿದ ರೂ. 42,51,276=00 ಮತ್ತು ಆಯುಕ್ತರ ಕಛೇರಿಯಿಂದ ಸರಬರಾಜಾದ ರೂ. 49,06,697=00 ಮೊತ್ತದ ಔಷಧಿಗಳು ವಿತರಣೆಯಾಗಿದೆ.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ

ಕ್ರ.ಸಂ

ಕಾರ್ಯಕ್ರಮ

ಸಾಧನೆ

1

ಸಾಮೂಹಿಕ ಜಂತುನಾಶಕ ಔಷಧಿ ವಿತರಣಾ ಶಿಬಿರಗಳು

74

2

ಔಷದೋಪಚಾರ ಮಾಡಿದ ಕುರಿಗಳ ಸಂಖ್ಯೆ

68620

3

ಕೆ.ಬಿ.ಪಿ.ಬಿ.ವೈ.ಯಡಿಯಲ್ಲಿ ವಿಮೆಗೊಳಪಡಿಸಿದ ಕುರಿಗಾರರ ಸಂಖ್ಯೆ

1119

4

ಕೆ.ಬಿ.ಪಿ.ವೈ/ಎಸ್.ಎಸ್.ವೈ.ಯಡಿಯಲ್ಲಿ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ಸಂಖ್ಯೆ

549 (ರೂ. 1200=00ರಂತೆ ಪ್ರತಿ ವಿದ್ಯಾರ್ಥೀಗೆ)

5

ವಿಶೇಷ ಘಟಕ ಯೋಜನೆ

67 ಘಟಕಗಳು (ರೂ. 10000 ಪ್ರತಿ ಘಟಕಕ್ಕೆ)

6

ಗಿರಿಜನ  ಉಪಯೋಜನೆ

28 ಘಟಕಗಳು (ರೂ. 10000 ಪ್ರತಿ ಘಟಕಕ್ಕೆ)

7

ತರಬೇತಿ ಶಿಬಿರಗಳು (ಮೌಲ್ಯಾಧಾರಿತ ಉಣ್ಣೆ ಕತ್ತರಿಸುವಿಕೆ)

2 ಶಿಬಿರ (50 ಕುರಿಗಾರರಿಗೆ)

8

ಜನಶ್ರೀ ಕುರಿ ವಿಮೆ ಯೋಜನೆ

ರೂ. 65000=00 ಪ್ರತಿ ಶಿಬಿರಕ್ಕೆ ಪ್ರಗತಿಯಲ್ಲಿದೆ

ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ವಿಶೇಷ ಕಾರ್ಯಕ್ರಮಗಳು

ಕ್ರ.ಸಂ.

ಕಾರ್ಯಕ್ರಮ

ಭೌತಿಕ ಗುರಿ

ಆರ್ಥಿಕ ಗುರಿ (ರೂ. ಲಕ್ಷಗಳಲ್ಲಿ)

1

ಬಹುವಾರ್ಷಿಕ ಮೇವಿನ ಬೆಳೆ ಬೆಳೆಯಲು ಪ್ರೋತ್ಸಾಹಧನ

622

18.71

2

ವಿಶೇಷ ಘಟಕ ಯೋಜನೆ (ರಾಜ್ಯ) ಹೈನುಗಾರಿಕೆ

91

38.22

3

ಮೇವಿನ ಬೆಳೆಗಳ ಪ್ರಾತ್ಯಕ್ಷತೆಗಳು

2

0.1

4

ಅಜೋಲ್ಲಾ ರೈತರ ಹಿತ್ತಲಲ್ಲಿ ಬೆಳೆಗಳ ಘಟಕ ಸ್ಥಾಪನೆ

20

0.2

5

ವಿಶೇಷ ಘಟಕ ಯೋಜನೆ (ಜಿಲ್ಲೆ) ಮಿಶ್ರ ತಳಿ ಹಸು, ಎಮ್ಮೆ ಮತ್ತು ಕುರಿ ಘಟಕಗಳ ಖರೀದಿ

40

18.9

6

ಗಿರಿಜನ ಉಪಯೋಜನೆ (ರಾಜ್ಯ) ಹೈನುಗಾರಿಕೆ

87

45.63

7

ಗಿರಿಜನ ಉಪಯೋಜನೆ (ಜಿಲ್ಲೆ) ಮಿಶ್ರತಳಿ ಹಸು, ಎಮ್ಮೆ ಮತ್ತು ಕುರಿ ಘಟಕಗಳು

49

4.9

ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ (ಕೆ.ಎಲ್.ಡಿ.ಎ)

ವಿವರ

ಭೌತಿಕ ಸಾಧನೆ

ಆರ್ಥಿಕ ಸಾಧನೆ

ಜಾನುವಾರು ವಿಮೆ ಯೋಜನೆ

7297

52,62,174

ಇಲಾಖೆಯಲ್ಲಿ ಯಾರು ಯಾರು

ಇಲಾಖೆಯಲ್ಲಿ ಯಾರು ಯಾರು ?

ಉಪನಿರ್ದೇಶಕರು:
ಇಲಾಖೆಯ ಜಿಲ್ಲಾ ಮುಖ್ಯಸ್ಥರು

ಸಹಾಯಕ ನಿರ್ದೇಶಕರು
ಇಲಾಖೆಯ ತಾಲ್ಲೂಕು ಮುಖ್ಯಸ್ಥರು/ಮೇಲ್ದರ್ಜೇಗೇರಿಸಿದ ಪಶು ಆಸ್ಪತ್ರೆಯ ಮುಖ್ಯಸ್ಥರು/ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆ/ದೊಡ್ಡರೋಗ ನಿವಾರಣಾ ಯೋಜನೆ/ಕುರಿ ಮತ್ತು ಉಣ್ಣೆ      ಅಭಿವೃದ್ಧಿ ಮಂಡಳಿ/ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರಗಳ ಮುಖ್ಯಸ್ಥರು

ಪಶು ವೈದ್ಯಾಧಿಕಾರಿ
ಪಶು ಚಿಕಿತ್ಸಾಲಯದ ಮುಖ್ಯಸ್ಥರು/ವಿಸ್ತರಣಾಧಿಕಾರಿಗಳು/ಸಂಚಾರಿ ಪಶು ಚಿಕಿತ್ಸಾಘಟಕದ ಮುಖ್ಯಸ್ಥರು/ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದಲ್ಲಿನ ಪಶುವೈದ್ಯರು.

ಪಶುವೈದ್ಯಕೀಯ ಮೇಲ್ವಿಚಾರಕರು
ಪಶು ಆಸ್ಪತ್ರೆ/ಮೇಲ್ದರ್ಜೆಗೇರಿಸಿದ ಪಶು ಆಸ್ಪತ್ರೆಗಳಲ್ಲಿ ಸಹಾಯಕ ನಿರ್ದೇಶಕರ ಅಧೀನದಲ್ಲಿ ಕಾರ್ಯನಿರ್ವಹಣೆ

ಹಿರಿಯ ಪಶುವೈದ್ಯಕೀಯ ಪರೀಕ್ಷಕರು: ಪಶುವೈದ್ಯಕೀಯ ಪರೀಕ್ಷಕರು ಮತ್ತು ಪಶು ಸಹಾಯಕರು: 
ಪಶು ಆಸ್ಪತ್ರೆ/ಪಶು ಚಿಕಿತ್ಸಾಲಯದ ಕೆಲ ಯೋಜನೆಗಳಲ್ಲಿ/ಪ್ರಾಥಮಿಕ ಪಶು ಚಿಕಿತ್ಸಾಕೇಂದ್ರಗಳಲ್ಲಿ ಕಾರ್ಯನಿರ್ವಹಣೆ

ವಾಹನ ಚಾಲಕರು
ಉಪ ನಿರ್ದೇಶಕರ ಕಛೇರಿ, ಯೋಜನೆಗಳು ಮತ್ತು ಪಶು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಣೆ

ಡಿ ದರ್ಜೆ ನೌಕರರು
ಎಲ್ಲಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ

ಇಲಾಖೆಯ ಪ್ರಮುಖ ಸಾಧನೆಗಳು:

 1. ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆಯ ವತಿಯಿಂದ ಜಿಲ್ಲೆಯ 7297 ಹೈನುರಾಸುಗಳಿಗೆ ರೂ. 52,62,174=00ಗಳ ವಿಮೆ ಸಹಾಯಧನ ನೀಡಲಾಗಿದೆ.
 2. ಏಪ್ರಿಲ್-11ರಿಂದ ನವೆಂಬರ್-11ರ ವರೆಗೆ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಸದಸ್ಯರಿಗೆ ಪ್ರತಿ 1 ಲೀ. ಹಾಲಿನ ಮೇಲೆ ರೂ.2/-ರಂತೆ ರೂ. 16,41,47,750=00ಗಳ ಸಹಾಯಧನ  ನೀಡಲಾಗಿದೆ.
 3. ಪ್ರಾದೇಶಿಕ ಅಸಮತೋಲನ ನಿವಾರಣೆಯಡಿಯಲ್ಲಿ ವಿಶೇಷ ಕಾರ್ಯಕ್ರಮಗಳು (ಈಗಾಗಲೇ ವಿವರಿಸಿದೆ)
 4. ಕುರಿ ಮತ್ತು ಕುರಿಗಾರರ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳು (ಈಗಾಗಲೇ ವಿವರಿಸಿದೆ)

ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4(1) A ಮತ್ತು B:

ಸಾರ್ವಜನಿಕ ಮಾಹಿತಿ ಅಧಿಕಾರಿ:  ಡಾ. ಆರ್.ಆರ್.ರವೀಂದ್ರ,  ಉಪ ನಿರ್ದೇಶಕರು
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ: ಡಾ. ಶಂಕರಪ್ಪ, ಸಹಾಯಕ ನಿರ್ದೇಶಕರು ,ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆ, ತುಮಕೂರು.

ಜಿಲ್ಲಾ ಕಛೇರಿಯ ವಿಳಾಸ:

ಉಪ ನಿರ್ದೇಶಕರ ಕಛೇರಿ
ಪಶುಪಾಲನಾ  ಮತ್ತು ಪಶುವೈದ್ಯಸೇವಾ ಇಲಾಖೆ
ಕುಣಿಗಲ್ ರಸ್ತೆ, ತುಮಕೂರು

ದೂರವಾಣಿ ಸಂಖ್ಯೆಗಳು

ಕ್ರ.
ಸಂ.

ತಾಲ್ಲೂಕು

ಅಧಿಕಾರಿ/ಸಿಬ್ಬಂದಿಗಳ ಹೆಸರು,
ಪದನಾಮ ಮತ್ತು ವಿಳಾಸ

ಮೊಬೈಲ್ ಸಂಖ್ಯೆಗಳು

ಕಛೇರಿ ದೂರವಾಣಿ ಸಂಖ್ಯೆಗಳು

1

2

3

4

5

‘ಎ’ ಗುಂಪಿನ ಅಧಿಕಾರಿಗಳ ಮಾಹಿತಿ:

1

ತುಮಕೂರು

ಡಾ. ಜಿ.ಶಿವಪ್ರಕಾಶ್,
ಸಹಾಯಕ ನಿರ್ದೇಶಕರು, ಜಿಲ್ಲಾ ಪಶು ಆಸ್ಪತ್ರೆ, ತುಮಕೂರು

9448658683

0816-2255580

 

 

ಡಾ. ಟಿ. ಶಂಕರಪ್ಪ,
ಸಹಾಯಕ ನಿರ್ದೇಶಕರು, ವಿ.ಜಾ.ತ.ಯೋಜನೆ, ತುಮಕೂರು

9448382125

 

 

 

ಡಾ.ಟಿ.ಆರ್.ಪ್ರಸನ್ನರೇಣುಕ, 
ಸಹಾಯಕ ನಿರ್ದೇಶಕರು, ದೊ.ರೋ.ನಿ.ಯೋ. ತುಮಕೂರು

9844137678

 

 

 

ಡಾ.ಡಿ.ಎಸ್.ಹವಾಲದಾರ, 
ಸಹಾಯಕ ನಿರ್ದೇಶಕರು, 
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ತುಮಕೂರು

9448114297

 

 

 

ಡಾ. ಎಂ.ಪಿ.ಶಶಿಕುಮಾರ್,
ಸಹಾಯಕ ನಿರ್ದೇಶಕರು. ಪ.ಪ.ತ.ಕೇಂದ್ರ ತುಮಕೂರು

9880996030

0816-2251214

2

ಮಧುಗಿರಿ

ಡಾ.ಜಿ.ಸಂಜೀವರಾಯ, 
ಸಹಾಯಕ ನಿರ್ದೇಶಕರು, ಪ.ಆ. ಮಧುಗಿರಿ

9980976980

08137-282310

3

ಕುಣಿಗಲ್

ಡಾ.ಎನ್.ರಾಜಶೇಖರ್,
ಸಹಾಯಕ ನಿರ್ದೇಶಕರು, ಪ.ಆ. ಕುಣಿಗಲ್

9448718520

08132-220331

 

 

ಡಾ.ಟಿ.ಎ.ದೇವರಾಜು,
ಸಹಾಯಕ ನಿರ್ದೇಶಕರು, ಪ.ಆ. ಹುಲಿಯೂರುದುರ್ಗ

9448675833

08132-223346

4

ಗುಬ್ಬಿ

ಡಾ. ಎನ್. ಲಿಂಗರಾಜಣ್ಣ
ಸಹಾಯಕ ನಿರ್ದೇಶಕರು, ಪ.ಆ.ಗುಬ್ಬಿ

9449979583
9483081035

08131-222560

 

 

ಡಾ. ಶಶಿಕಾಂತ್ ಎಸ್.ಬಿ.
ಸಹಾಯಕ ನಿರ್ದೇಶಕರು, ಪ.ಆ. ಕಡಬ

9449683484

08131-231540

5

ಚಿ.ನಾ.ಹಳ್ಳಿ

ಡಾ. ಎಂ.ಸಿ.ಶಿವಾನಂದ,
ಸಹಾಯಕ ನಿರ್ದೇಶಕರು, ಪ.ಆ.ಚಿ.ನಾ.ಹಳ್ಳಿ

9448748931

08133-267403

 

 

ಡಾ. ಎಂ. ಮಂಜುನಾಥ್,
ಸಹಾಯಕ ನಿರ್ದೇಶಕರು, ಪ.ಆ. ಹುಳಿಯಾರು

9449307407

-

6

ಶಿರಾ

ಡಾ. ಜಿ.ಎಂ.ನಾಗರಾಜ,
ಸಹಾಯಕ ನಿರ್ದೇಶಕರು, ಪ.ಆ. ಶಿರಾ

9880582473

08135-275274

 

 

ಡಾ.ಲಕ್ಷ್ಮಿನಾರಾಯಣಪಟೇಲ್,
ಸಹಾಯಕ ನಿರ್ದೇಶಕರು, ಪ.ಆ. ತಾವರೆಕೆರೆ

9448924456

08135-272538

 

 

ಡಾ.ಕೃಷ್ಣಮೂರ್ತಿ,
ಸಹಾಯಕ ನಿರ್ದೇಶಕರು, ಪ.ಆ. ಕಳ್ಳಂಬೆಳ್ಳ

9448827263

-

7

ತುರುವೇಕೆರೆ

ಡಾ.ವಿ.ಎನ್.ಸತ್ಯನಾರಾಯಣರೆಡ್ಡಿ,
ಸಹಾಯಕ ನಿರ್ದೇಶಕರು, ಪ.ಆ.ತುರುವೇಕೆರೆ

9448979378

08139-287391

 

 

ಡಾ.ಆನಂದಗುಪ್ಪ,ಸಹಾಯಕ ನಿರ್ದೇಶಕರು, ಪ.ಆ.ಮಾಯಸಂದ್ರ

9449885802

08139-277779

8

ತಿಪಟೂರು

ಡಾ.ಕೆ. ರಾಮಣ್ಣ,ಸಹಾಯಕ ನಿರ್ದೇಶಕರು, ಪ.ಆ. ತಿಪಟೂರು

9483438401

08134-250002

 

 

ಡಾ. ಮಿರ್ಜಾಬಷೀರ್,
ಸಹಾಯಕ ನಿರ್ದೇಶಕರು, ಪ.ಆ. ನೊಣವಿನಕೆರೆ

9448104973

08134-258004

9

ಕೊರಟಗೆರೆ

ಡಾ.ಹೆಚ್.ಆರ್.ನಂಜುಂಡಪ್ಪ,
ಸಹಾಯಕ ನಿರ್ದೇಶಕರು, ಪ.ಆ. ಕೊರಟಗೆರೆ

9448688996

08138-232147

 

 

ಡಾ.ಎಲ್.ನಟರಾಜ್,
ಸಹಾಯಕ ನಿರ್ದೇಶಕರು, ಪ.ಆ. ಹೊಳವನಹಳ್ಳಿ

9900735838

-

10

ಪಾವಗಡ

ಡಾ. ಜಿ.ಎಂ. ಹನುಮಪ್ಪ,
ಸಹಾಯಕ ನಿರ್ದೇಶಕರು, ಪ.ಆ. ಪಾವಗಡ

9448533753

08136-244511

ಕೊನೆಯ ಮಾರ್ಪಾಟು : 2/15/2020© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate