ಎಮ್. ಎನ್. ಆರ್. ಜಿ. ಅಡಿಯಲ್ಲಿ ಬರುವ ಚಟುವಟಿಕೆಗಳು
ಮಹಾತ್ಮ ಗಾಂಧಿ ಎನ್.ಆರ್.ಇ.ಜಿ.ಎ.ಯ ಪರಿಶಿಷ್ಟ- Iರ, ಪಾರಾ –1ರಲ್ಲಿ ಸ್ಪಷ್ಟ ಪಡಿಸಿರುವಂತೆ ಅನುಮೋದಿಸಲ್ಪಟ್ಟ ಚಟುವಟಿಕೆಗಳು ಈ ಕೆಳಗಿನಂತಿವೆ:
- ಜಲ ಸಂರಕ್ಷಣೆ ಮತ್ತು ಕೊಯಿಲು
- ಅನಾವೃಷ್ಠಿ –ತಡೆ (ಅರಣ್ಯೀಕರಣ ಹಾಗೂ ನೆಡುತೋಪುಗಳ ರಚನೆಯನ್ನೂ ಒಳಗೊಂಡಂತೆ)
- ನೀರಾವರಿಯ ಕಾಲುವೆಗಳ ರಚನೆ- ಕಿರು ಹಾಗೂ ಸಣ್ಣ ನೀರಾವರಿ ಕೆಲಸಗಳೂ ಸೇರಿದಂತೆ.
- ಪರಿಶಿಷ್ಠ ಜಾತಿ- ಪರಿಶಿಷ್ಠ ಪಂಗಡಗಳ, ಅಥವಾ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ,ಇಲ್ಲವೇ ಭೂ ಸುಧಾರಣೆಯ ಫಲಾನುಭವಿಗಳ, ಹಾಗೂ ಭಾರತ ಸರಕಾರದ ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳ,ಇಲ್ಲವೇ ಕೃಷಿ ಸಾಲ ಮನ್ನಾ ಹಾಗೂ ಸಾಲ ಪರಿಹಾರ ಯೋಜನೆ 2008 ರ 22.7.2009 ಯ ಅಧಿಸೂಚನೆಯಲ್ಲಿ ಹೇಳಿರುವಂತಹ ಸಣ್ಣ ಹಾಗೂ ಮಧ್ಯಮ ರೈತರ ಕುಟುಂಬಗಳ ಭೂಮಿಯನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ನೀರಾವರಿಯ ಸೌಲಭ್ಯವನ್ನು ಒದಗಿಸುವುದು, ತೋಟಗಾರಿಕಾ ಬೆಳೆಗಳ ಹಾಗೂ ಭೂ ಅಭಿವೃದ್ಧಿಯ ಸೌಲಭ್ಯಗಳನ್ನು ಒದಗಿಸುವುದು.
- ಕೆರೆಗಳ ಹೂಳೆತ್ತುವುದರ ಜೊತೆಗೆ ಸಾಂಪ್ರದಾಯಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸುವುದು.
- ಭೂ ಅಭಿವೃದ್ಧಿ
- ಪ್ರವಾಹಗಳ ತಡೆಗಟ್ಟುವಿಕೆ,ಹಾಗೂ ರಕ್ಷಣಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು; ನಿಂತ ನೀರು ಹರಿದು ಹೋಗಲು ಚರಂಡಿಯ ವ್ಯವಸ್ಥೆ ಮಾಡುವುದು.
- ಎಲ್ಲ ಕಾಲದಲ್ಲೂ ಗ್ರಾಮೀಣ ಸಂಪರ್ಕ.
- ಭಾರತ ನಿರ್ಮಾಣ,ಹಾಗೂ ಗ್ರಾಮ ಜ್ಞಾನ ಸಂಪನ್ಮೂಲ ಕೇಂದ್ರವಾಗಿ ರಾಜೀವ್ ಗಾಂಧಿ ಸೇವಾ ಕೇಂದ್ರಗಳ ನಿರ್ಮಾಣ ಮತ್ತು ಗ್ರಾಮ ಪಂಚಾಯತಿನ ಮಟ್ಟದಲ್ಲಿ ಗ್ರಾಮ ಪಂಚಾಯತ್ ಭವನದ ನಿರ್ಮಾಣ (ದಿನಾಂಕ 11.11.2009 ದ ಅಧಿಸೂಚನೆಯಲ್ಲಿ ಹೇಳಿರುವ ಪ್ರಕಾರ)
- ಹಾಗೂ ಕೇಂದ್ರ ಸರಕಾರವು ರಾಜ್ಯ ಸರಕಾರದ ಜೊತೆಗೆ ಸಮಾಲೋಚನೆ ನಡೆಸಿ ಅಧಿಸೂಚನೆ ಹೊರಡಿಸುವ ಯಾವುದೇ ಕೆಲಸಗಳು
ಆಕರ : PIB(www.pib.nic.in)
ಕೊನೆಯ ಮಾರ್ಪಾಟು : 2/15/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.