ಕೇಂದ್ರ ವಲಯದಲ್ಲಿ, ಕನಿಷ್ಠ ವೇತನ ದರ ಅಧಿನಿಯಮ 1948 ರ ಅಡಿಯಲ್ಲಿ, 2010 ನೇ ಇಸ್ವಿಯ ಅಕ್ಟೋಬರ್ 1 ರಂದು, ಕನಿಷ್ಠ ವೇತನ ದರವನ್ನು ಪರಿಷ್ಕರಿಸಲಾಯಿತು. ಆಯಾ ರಾಜ್ಯ ಸರಕಾರಗಳು ರಾಜ್ಯ ವಲಯದಲ್ಲಿ ಕಾಲ ಕಾಲಕ್ಕೆ ಕನಿಷ್ಠ ವೇತನ ದರವನ್ನು ಪರಿಷ್ಕರಿಸುತ್ತವೆ. ಕೃಷಿಯನ್ನೂ ಒಳಗೊಂಡಂತೆ ಅನುಸೂಚಿತ ಉದ್ಯೋಗಗಳಿಗೆ ನಿಗದಿ ಪಡಿಸಿದ ಕನಿಷ್ಠ ವೇತನ ದರವು ಸಂಘಟಿತ ಹಾಗೂ ಅಸಂಘಟಿತ ವಲಯಗಳ ಕ್ಷೇತ್ರಕ್ಕೂ ಅನ್ವಯವಾಗುತ್ತದೆ.ಈ ಕೆಳಗಿನ ಯಾದಿಯಲ್ಲಿ ಕೇಂದ್ರ ಹಾಗೂ ರಾಜ್ಯ ವಲಯಗಳಲ್ಲಿ ನುರಿತ ಕಾರ್ಮಿಕ ಹಾಗೂ ಎಲ್ಲಾ ಅನುಸೂಚಿತ ಉದ್ಯೋಗಗಳಲ್ಲಿ ದುಡಿಯುತ್ತಿರುವ ಸಾಮಾನ್ಯ ಕಾರ್ಮಿಕರಿಗೆ, ಹಾಗೂ ಅನುಸೂಚಿತ ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಾಮಾನ್ಯ ಕಾರ್ಮಿಕರಿಗೆ ನಿಗದಿ ಪಡಿಸಿರುವ ಕನಿಷ್ಠ ವೇತನ ದರದ ಕುರಿತಂತೆ ಲಭ್ಯವಿರುವ ಇತ್ತೀಚೆಗಿನ ಮಾಹಿತಿಯನ್ನು ನೀಡಲಾಗಿದೆ.
(ರೂ. ಪ್ರತಿ ದಿನಕ್ಕೆ) |
|||
ಕ್ರ. ಸಂ. |
ರಾಜ್ಯ/ಕೇಂದ್ರಾಡಳಿತ ಪ್ರದೇಶ |
ಎಲ್ಲಾ ಅನುಸೂಚಿತ ಉದ್ಯೋಗಗಳ |
ಸಾಮಾನ್ಯ ಕೃಷಿ ಕೂಲಿ ಕಾರ್ಮಿಕರು |
1 |
2 |
3 |
4 |
ಅ |
ಕೇಂದ್ರ ವಲಯ* |
146.00-163.00 |
146.00 – 163.00 |
ಬ |
ರಾಜ್ಯ ವಲಯ |
|
|
1 |
ಆಂಧ್ರ ಪ್ರದೇಶ |
69.00 |
112.00 |
2 |
ಅರುಣಾಚಲ ಪ್ರದೇಶ |
134.62 |
134.62 |
3 |
ಅಸ್ಸಾಂ |
66.50 |
100.00 |
4 |
ಬಿಹಾರ |
109.12 |
114.00 |
5 |
ಛತ್ತೀಸ್ ಘರ್ |
100.00 |
100.00 |
6 |
ಗೋವಾ |
150.00 |
157.00 |
7 |
ಗುಜರಾತ್ |
100.00 |
100.00 |
8 |
ಹರಿಯಾಣ |
167.23 |
167.23 |
9 |
ಹಿಮಾಚಲ ಪ್ರದೇಶ |
110.00 |
110.00 |
10 |
ಜಮ್ಮು ಮತ್ತು ಕಾಶ್ಮೀರ |
110.00 |
110.00 |
11 |
ಝಾರ್ಖಂಡ್ |
111.00 |
111.00 |
12 |
ಕರ್ನಾಟಕ |
72.94 |
133.80 |
13 |
ಕೇರಳ |
100.00 |
150.00 (ಲಘು ಕೆಲಸಗಳಿಗೆ) |
|
|
|
200.00 (ಘನ ಕೆಲಸಗಳಿಗೆ) |
14 |
ಮಧ್ಯಪ್ರದೇಶ |
110.00 |
110.00 |
15 |
ಮಹಾರಾಷ್ಟ್ರ# |
90.65 |
100.00 – 120.00 |
16 |
ಮಣಿಪುರ |
81.40 |
81.40 |
17 |
ಮೇಘಾಲಯ |
100.00 |
100.00 |
18 |
ಮಿಝೋರಾಂ |
132.00 |
132.00 |
19 |
ನಾಗಾಲ್ಯಾಂಡ್ |
80.00 |
80.00 |
20 |
ಒರಿಸ್ಸಾ |
90.00 |
90.00 |
21 |
ಪಂಜಾಬ್ |
127.25(ಊಟ ಸೇರಿ) |
127.25 (ಊಟ ಸೇರಿ) |
142.68 (ಊಟವಿಲ್ಲದೆ) |
142.68 (ಊಟವಿಲ್ಲದೆ) |
||
22 |
ರಾಜಸ್ಥಾನ |
81.00 |
100.00 |
23 |
ಸಿಕ್ಕಿಂ |
100.00 |
- |
24 |
ತಮಿಳು ನಾಡು |
87.60 |
100.00 |
25 |
ತ್ರಿಪುರ |
81.54 |
100.00 |
26 |
ಉತ್ತರ ಪ್ರದೇಶ |
100.00 |
100.00 |
27 |
ಉತ್ತರಾಖಂಡ್ |
91.98 |
113.68 |
28 |
ಪಶ್ಚಿಮ ಬಂಗಾಳ |
96.00 |
96.00 |
29 |
ಅಂಡಮಾನ್ ಮತ್ತು ನಿಕೋಬಾರ್ |
|
|
ಅಂಡಮಾನ್ |
156.00 |
156.00 |
|
ನಿಕೋಬಾರ್ |
167.00 |
167.00 |
|
30 |
ಚಂದೀಘರ್ |
170.44 |
170.44 |
31 |
ದಾದ್ರಾ ಮತ್ತು ನಗರ ಹವೇಲಿ |
130.40 |
130.40 |
32 |
ದಾಮನ್ ಮತ್ತು ದಿಯು |
126.40 |
- |
33 |
ದೆಹಲಿ |
203.00 |
203.00 |
34 |
ಲಕ್ಷದ್ವೀಪ |
147.40 |
- |
35 |
ಪುದುಚೆರ್ರಿ |
|
|
ಪುದುಚೆರ್ರಿ/ ಕರೈಕಲ್ |
100.00 |
100.00 (6 ಘಂಟೆ ಕೆಲಸಕ್ಕೆ) |
|
ಮಾಹೆ |
120.00 (8 ಘಂಟೆ ಅವಧಿಯಲ್ಲಿ |
||
160.00 (8 ಘಂಟೆ ಅವಧಿಯಲ್ಲಿ |
|||
* ವಿವಿಧ ಪ್ರದೇಶಗಳಲ್ಲಿ. # ವಿವಿಧ ವಲಯಗಳಲ್ಲಿ |
ಈ ಕಾಯಿದೆಯನ್ನು ಜಾರಿಗೆ ತರಲು ಎರಡು ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ವಲಯದಲ್ಲಿ ಸೆಂಟ್ರಲ್ ಇಂಡಸ್ಟ್ರಿಯಲ್ ರಿಲೇಶನ್ ಮೆಶಿನರಿ (CIRM) ಎಂದು ಹೆಸರುವಾಸಿಯಾದ ಪ್ರಧಾನ ಕಾರ್ಮಿಕ ಆಯುಕ್ತರ ಕಛೇರಿಯ (ಕೇಂದ್ರ) ಅಧೀಕ್ಷಕರ ಮೂಲಕ ಹಾಗೂ ರಾಜ್ಯದಲ್ಲಿ ರಾಜ್ಯ ಮಟ್ಟದಲ್ಲಿ ಅದಕ್ಕಾಗಿ ಮೀಸಲಾದ ವ್ಯವಸ್ಥೆಯ ಮೂಲಕ ಕಾಯಿದೆಯನ್ನು ಕಾರ್ಯ ರೂಪಕ್ಕೆ ತರುವುದನ್ನು ದೃಢಪಡಿಸಿಕೊಳ್ಳಲಾಗುತ್ತದೆ. ಇವುಗಳು ಕಾಲಕಾಲಕ್ಕೆ ತಪಾಸಣೆ ನಡೆಸುವುದರ ಮೂಲಕ ಕನಿಷ್ಠ ವೇತನ ದರ ಜಾರಿಯಲ್ಲಿದೆಯೇ, ಇಲ್ಲವೇ; ಇಲ್ಲವಾದರೆ ಮಾಲೀಕರು/ಒಡೆಯರು ಬಾಕಿ ಇರುವ ವೇತನವನ್ನು ಅರ್ಹ ಕಾರ್ಮಿಕರಿಗೆ ಸಂದಾಯ ಮಾಡುವಂತೆ ನಿರ್ದೇಶಿಸುತ್ತಾರೆ. ಒಂದು ವೇಳೆ ಈ ಕಾಯಿದೆಯನ್ನು ಪಾಲಿಸದಿದ್ದರೆ, ಕಾಯಿದೆಯ 22 ನೇ ಪರಿಚ್ಛೇದದ ಪ್ರಕಾರ ತಪ್ಪು ಮಾಡುತ್ತಿರುವ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.
ಆಕರ: PIB(www.pib.nic.in)
ಕೊನೆಯ ಮಾರ್ಪಾಟು : 7/22/2020