ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವವರೆಗೂ ಸಣ್ಣ ಪ್ರಮಾಣದ ರೈತರು ತಮ್ಮ ಉತ್ಪನ್ನಗಳನ್ನು ತಮ್ಮಲ್ಲಿಯೇ ಶೇಖರಿಸಿಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹಳ್ಳಿಗಳಲ್ಲಿ ಉಗ್ರಾಣಗಳನ್ನು ಸ್ಥಾಪಿಸುವುದರಿಂದ ಈ ಸಣ್ಣ ಪ್ರಮಾಣದ ರೈತರು ತಮ್ಮ ತಮ್ಮ ಕೃಷಿ ಉತ್ಪನ್ನಗಳನ್ನು ಅವುಗಳಲ್ಲಿ ಸಂಗ್ರಹಿಸಿಟ್ಟು, ಮಾರುಕಟ್ಟೆಯಲ್ಲಿ ಅವುಗಳನ್ನು ಯೋಗ್ಯ ಬೆಲೆಗೆ ಮಾರಲು ಸಾಧ್ಯವಾಗುತ್ತದೆ ಮತ್ತು ಅವಸರದಿಂದ ಸಿಕ್ಕ ಸಿಕ್ಕ ಬೆಲೆಗೆ ಮಾರಿ ಕೈಸುಟ್ಟುಕೊಳ್ಳುವುದು ತಪ್ಪುತ್ತದೆ.
ಈ ಕಾರಣದಿಂದಲೇ ಭಾರತ ಸರ್ಕಾರವು "ಗ್ರಾಮೀಣ ಭಂಡಾರಣ ಯೋಜನೆ" ಯನ್ನು ಪ್ರಾರಂಭಿಸಿದ್ದು ಅದು 1 ಏಪ್ರಿಲ್ 2011 ರಿಂದ ಕಾರ್ಯರೂಪಕ್ಕೆ ಬಂದಿದೆ.
ಯೋಜನೆಯ ಮುಖ್ಯ ಉದ್ದೇಶ
ರೈತರು ತಮ್ಮ ಕೃಷಿ ಉತ್ಪನ್ನಗಳನ್ನು, ಸಂಸ್ಕರಿಸಿದ ಕೃಷಿ ಉತ್ಪನ್ನಗಳನ್ನು, ಬೆಳೆಗೆ ಬೇಕಾದ ಗೊಬ್ಬರ ಇತ್ಯಾದಿಗಳನ್ನು ಶೇಖರಿಸಿಟ್ಟುಕೊಳ್ಳಲು, ಉತ್ತಮ ಬೆಲೆಗೆ ತಮ್ಮ ಉತ್ಪಾದನೆಗಳನ್ನು ಮಾರಲು ಮತ್ತು ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ತಮ್ಮ ಉತ್ಪಾದನೆಗಳಿಗೆ ಪ್ರಚಾರ ಗಿಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ವೈಜ್ಞಾನಿಕ ಪದ್ಧತಿಯಲ್ಲಿ ಉಗ್ರಾಣಗಳ ಸ್ಥಾಪನೆ ಈ ಯೋಜನೆಯ ಮುಖ್ಯ ಉದ್ದೇಶ.
ಈ ಯೋಜನೆಯು 31 ಮಾರ್ಚ್ 2012 ರ ವರೆಗೆ ಜಾರಿಯಲ್ಲಿರುತ್ತದೆ.
ಪ್ರಮುಖ ಲಕ್ಷಣಗಳು
ಅರ್ಹ ಸಂಘಟನೆಗಳು
ದೇಶದಾದ್ಯಂತ ರೈತರು, ರೈತ ಸಮೂಹಗಳು, ಸಹಭಾಗಿತ್ವ/ಸ್ವಾಮ್ಯತೆ ಇರುವ ಸಂಸ್ಥೆಗಳು, ಸರ್ಕಾರೇತರ ಸಂಘಟನೆಗಳು (NGO), ಸ್ವಸಹಾಯ ಸಮೂಹಗಳು (SHG), ಸಂಸ್ಥೆಗಳು, ಕಾರ್ಪೋರೇಶನ್ ಗಳು, ಸಹಕಾರಿ ಸಂಘಗಳು, ಮುನಿಸಿಪಾಲ್ ಕಾರ್ಪೋರೇಶನ್ ಗಳು, ಒಕ್ಕೂಟಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು, ಮಾರುಕಟ್ಟೆ ಮಂಡಳಿಗಳು ಮತ್ತು ಕೃಷಿ ಸಂಸ್ಕರಣಾ ಸಂಸ್ಥೆಗಳಲ್ಲದೇ ಸ್ಥಳೀಯ ಆಡಳಿತ ಸಮಿತಿಗಳು ಇವರಲ್ಲಿ ಯಾರು ಬೇಕಾದರೂ ಉಗ್ರಾಣಗಳ ನಿರ್ಮಾಣವನ್ನು ಕೈಗೊಳ್ಳಬಹುದಾಗಿದೆ. ಆದರೆ ಸಹಕಾರಿ ಸಂಘಗಳಿಂದ ನಿರ್ಮಿಸಲಾದ ಉಗ್ರಾಣಗಳಿಗೆ ಮಾತ್ರ ಜೀರ್ಣೋದ್ಧಾರಕ್ಕಾಗಿ ಧನ ಸಹಾಯ ನೀಡಲಾಗುವುದು.
ಸ್ಥಳ
ಉದ್ಯಮಿಗಳು ತಮ್ಮ ವಾಣಿಜ್ಯ ಆವಶ್ಯಕತೆಗಳಿಗನುಗುಣವಾಗಿ ಮುನಿಸಿಪಾಲಿಟಿಗೆ ಸಂಬಂಧಿಸಿದ ಪ್ರದೇಶಗಳನ್ನು ಹೊರತು ಪಡಿಸಿ ಯಾವ ಸ್ಥಳದಲ್ಲಿ ಬೇಕಾದರೂ ಉಗ್ರಾಣಗಳನ್ನು ನಿರ್ಮಿಸಬಹುದಾಗಿದೆ. ಫುಡ್ ಪಾರ್ಕ್ ಗಳಲ್ಲಿ ನಿರ್ಮಿಸಲಾದ ಗ್ರಾಮೀಣ ಉಗ್ರಾಣಗಳು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದಿಂದ ನೆರವು ಪಡೆದಿದ್ದರೆ, ಈ ಯೋಜನೆಯಡಿಯಲ್ಲಿ ಅವುಗಳಿಗೂ ಧನ ಸಹಾಯ ನೀಡಲಾಗುವುದು.
ವಿಸ್ತಾರ/ಅಳತೆ
ಉಗ್ರಾಣದ ಶೇಖರಣಾ ಸಾಮರ್ಥ್ಯವನ್ನು ಉದ್ಯಮಿಯೇ ನಿರ್ಧರಿಸುವನು. ಆದರೆ ಯೋಜನೆಯಡಿಯಲ್ಲಿ ಕನಿಷ್ಠ 1000 ಟನ್ ಮತ್ತು ಗರಿಷ್ಠ 10,000 ಟನ್ ಶೇಖರಣಾ ಸಾಮರ್ಥ್ಯವಿರುವ ಉಗ್ರಾಣಗಳಿಗೆ ಮಾತ್ರ ಸಹಾಯಧನ (ಸಬ್ಸಿಡಿ) ದೊರೆಯುವುದು.ಎನ್.ಸಿ.ಡಿ.ಸಿ (NCDC) ಯಿಂದ ನೆರವು ಪಡೆದು ಸಹಕಾರಿ ಸಂಘಗಳು ನಿರ್ಮಿಸಿದ ಉಗ್ರಾಣಗಳಿಗೆ ನಿಗದಿತ ಧನಸಹಾಯಕ್ಕಿಂತ ಅಧಿಕ ಮೊತ್ತವನ್ನು ನೀಡಲಾಗುವುದಿಲ್ಲ.
ಕೆಲವು ಪ್ರದೇಶಗಳ ಸ್ಥಳಾಕೃತಿಯ ಕಾರ್ಯ ಸಾಧ್ಯತೆಯ ವಿಶ್ಲೇಷಣೆಯ ಅಧಾರದ ಮೇಲೆ/ರಾಜ್ಯ ಅಥವಾ ಪ್ರದೇಶದ ವಿಶೇಷ ಅವಶ್ಯಕತೆಗನುಗುಣವಾಗಿ 50 ಟನ್ ಗಳಷ್ಟು ಕಡಿಮೆ ಶೇಖರಣಾ ಸಾಮರ್ಥ್ಯ ಹೊಂದಿರುವ ಗ್ರಾಮೀಣ ಉಗ್ರಾಣಗಳಿಗೂ ಯೋಜನೆಯಡಿಯಲ್ಲಿ ಧನಸಹಾಯ ನೀಡಲಾಗುವುದು. ಗುಡ್ಡಗಾಡು ಪ್ರದೇಶಗಳಲ್ಲಿ (ಅಂದರೆ ಉಗ್ರಾಣ ನಿರ್ಮಿಸಬೇಕಾದ ಜಾಗವು ಸಮುದ್ರ ಮಟ್ಟದಿಂದ 1000 ಮೀಟರ್ ಗಳಷ್ಟು ಎತ್ತರದಲ್ಲಿ ಸ್ಥಾಪಿತವಾಗಿದ್ದರೆ) 25 ಟನ್ ಗಳಷ್ಟು ಶೇಖರಣಾ ಸಾಮರ್ಥ್ಯ ಹೊಂದಿರುವ ಗ್ರಾಮೀಣ ಉಗ್ರಾಣಗಳಿಗೂ ಈ ಯೋಜನೆಯಡಿಯಲ್ಲಿ ಸಹಾಯಧನ (ಸಬ್ಸಿಡಿ) ದೊರೆಯುವುದು.
ಸಹಾಯಧನ (ಸಬ್ಸಿಡಿ)
ಯೋಜನೆಗಾಗಿ ಬಂಡವಾಳ ರೂಪದಲ್ಲಿ ನೀಡಲಾಗುವ ಸಬ್ಸಿಡಿಯನ್ನು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತದೆ:
ಮೂಲ :agmarknet(www.agmarknet.nic.in/amrscheme/ruralhead.htm)
ಕೊನೆಯ ಮಾರ್ಪಾಟು : 4/28/2020
೧೯೯೨ರಲ್ಲಿ ಸಾರಾಯಿ ವಿರುದ್ಧ ಚಳುವಳಿಯಿಂದಾಗಿ, ಭಾರತದ ಆಂಧ್...
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ
ಇದು ಸಣ್ಣ ರೈತನೊಬ್ಬನ ಸುದ್ದಿ ಅವನು ವಿಭಿನ್ನ ಮಾದರಿ ಸಂಪನ್...
ಒಣ ಭೂಮಿಯಲ್ಲಿ ಲಾಭದಾಯಕ ಹತ್ತಿ ಬೆಳೆಯುವ ಬಗ್ಗೆ ಇಲ್ಲಿ ತಿಳ...