অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನ್ಯಾಷನಲ್ ಮಿಷನ್ ಫಾರ್ ಸಸ್ಸ್ಟೈನಬಲ್ ಅಗ್ರಿಕಲ್ಚರ್

ನ್ಯಾಷನಲ್ ಮಿಷನ್ ಫಾರ್ ಸಸ್ಸ್ಟೈನಬಲ್ ಅಗ್ರಿಕಲ್ಚರ್

ಇದನ್ನು ಸಮಗ್ರ ಕೃಷಿ ಕೇಂದ್ರೀಕರಿಸಿದ ವಿಶೇಷವಾಗಿ ಮಳೆಯಿಂದ ಪೋಷಿಸಲ್ಪಟ್ಟ ಪ್ರದೇಶಗಳಲ್ಲಿ ಕೃಷಿ ಉತ್ಪನ್ನ ಹೆಚ್ಚಿಸುವ, ದಕ್ಷತೆ ನೀರಿನ ಬಳಕೆ, ಮಣ್ಣಿನ ಆರೋಗ್ಯ ವ್ಯವಸ್ಥೆ ಇತ್ಯಾದಿಗಳಲ್ಲಿ ಉನ್ನತಿಯನ್ನು ಸಾಧಿಸುವ ಉದ್ದೇಶದಿಂದ ಮಾಡಲಾಗಿದೆ ,

ಮಿಷನ್ ಉದ್ದೇಶಗಳು

  • ಕೃಷಿ ಉತ್ಪಾದಕತೆ ಹೆಚ್ಚುಮಾಡಲು ಮತ್ತು ಸಮರ್ಥನೀಯ, ಲಾಭದಾಯಕ ವಾಗಿಸಲು ಮತ್ತು ಹವಾಮಾನ ಸ್ಥಳ ನಿರ್ದಿಷ್ಟ ಸಂಪರ್ಕ / ಕಾಂಪೋಸಿಟ್ ಫಾರ್ಮಿಂಗ್ ವ್ಯಸಸ್ಥೆ ಪ್ರಚಾರ ಮಾಡುವುದು
  • ಸೂಕ್ತ ಮಣ್ಣು ಮತ್ತು ತೇವಾಂಶ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದರ  ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು
  • ಫಸಲು ಇಳುವರಿಯನ್ನು ಹೆಚ್ಚಿಸುವ ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಭೂಮಿ ಮತ್ತು  ಲಭ್ಯ ನೀರಿನ ಉತ್ತಮವಾದ ಬಳಕೆ ಅಗತ್ಯ  ಗುಣಮಟ್ಟ ನಿರ್ವಹಿಸಲು ಬೇಕಾದ ಸ್ಥಳ ಮತ್ತು ಬೆಳೆಗೆ  ನಿರ್ದಿಷ್ಟ ಸಮಗ್ರ ಪೋಷಕಾಂಶಗಳ ನಿರ್ವಹಣೆ ಅಚರಣೆಗಳನ್ನು ಉತ್ತೇಜಿಸುವುದು
  • ಮಣ್ಣಿನ ಫಲವತ್ತತೆ ನಕ್ಷೆಗಳು, ಸ್ಥೂಲ ಮತ್ತು ಸೂಕ್ಷ್ಮ ಪೋಷಕಾಂಶಗಳ ಮಣ್ಣಿನ ಪರೀಕ್ಷೆ ಆಧಾರಿತ ಅಪ್ಲಿಕೇಶನ್, ರಸಗೊಬ್ಬರಗಳು ವಿವೇಚನೆಯುಳ್ಳ ಬಳಸಿ ಆಧರಿಸಿ ಸಮಗ್ರ ಮಣ್ಣಿನ ಆರೋಗ್ಯ ನಿರ್ವಹಣೆ ಕ್ರಿಯೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವುದು
  • ·ಸಮರ್ಥ ನೀರಿನ ನಿರ್ವಹಣೆ ಮೂಲಕ ನೀರಿನ ಸಂಪನ್ಮೂಲಗಳ ಬಳಕೆ ಉತ್ತಮಗೊಳಿಸುವ 'ಪ್ರತಿ ಹನಿಗೆ ಹೆಚ್ಚು ಬೆಳೆ' ಸಾಧಿಸಲು ವ್ಯಾಪ್ತಿ ವಿಸ್ತರಿಸುವುದು ಇತರ ಸಂಯೋಗದೊಂದಿಗೆ, ರೈತರ ಸಾಮರ್ಥ್ಯ ಅಭಿವೃದ್ಧಿ - ಉದಾಹರಣೆಗೆ ಕೃಷಿ ವಿಸ್ತರಣೆ & ತಂತ್ರಶಾಸ್ತ್ರ , ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಚೇತರಿಸಿಕೊಳ್ಳುವ ಕೃಷಿ (NICRA) ರಾಷ್ಟ್ರೀಯ ಉಪಕ್ರಮ ಇತ್ಯಾದಿ ಕ್ರಮಗಳು ಇದರ ವ್ಯಾಪ್ತಿಯಲ್ಲಿ NICRA ಮೂಲಕ ಮಳೆ ಆಧಾರಿತ  ತಂತ್ರಜ್ಞಾನಗಳನ್ನು ಮುಖ್ಯವಾಹಿನಿಗೆ ತರುವ ಮೂಲಕ ಮಳೆಯಿಂದ ಪೋಷಿಸಲ್ಪಟ್ಟ ಕೃಷಿ ಉತ್ಪಾದಕತೆಯನ್ನು ಸುಧಾರಿಸುವಲ್ಲಿ ಇರುವ ಸ್ಥಳದಲ್ಲಿ ಮಾದರಿ ಯೋಜನೆಗಳ್ಳನ್ನು ಪರಿಷ್ಕರಿಸಲಾಗಿದೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ , ಇಂಟೆಗ್ರೇಟೆಡ್ ವಾಟರ್ಷೆಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ( IWMP ), RKVY ಇತ್ಯಾದಿ ಇತರ ಯೋಜನೆಗಳು / ಕಾರ್ಯಗಳಲ್ಲಿ ಸಂಪನ್ಮೂಲಗಳನ್ನು  ಉಪಯೋಗಿಸುವುದು
  • ಪರಸ್ಪರ ಇಲಾಖೆ ಗಳ ನಡುವೆ ಉತ್ತಮ ಹೊಂದಾಣಿಕೆ ಏರ್ಪಡಿಸುವುದು , ಹವಾಮಾನ ಬದಲಾವಣೆ ಬಗ್ಗೆ ರಾಷ್ಟ್ರೀಯ ಕ್ರಿಯಾ ಯೋಜನೆ (NAPCC) ಆಶ್ರಯದಲ್ಲಿ ಪುಷ್ಟಿಕರ ಕೃಷಿಗಾಗಿ ಶರ್ಮಿಸುವುದು

ಮಿಷನ್ ನ  ತಂತ್ರ

  • ಬೆಳೆಗಳು, ಜಾನುವಾರು ಮತ್ತು ಮೀನುಗಾರಿಕೆ, ತೋಟ ಮತ್ತು ಹುಲ್ಲುಗಾವಲು ಒಳಗೊಂಡ ಸಮಗ್ರ ಕೃಷಿ ವ್ಯವಸ್ಥೆ ಪ್ರಚಾರ , ಜೀವನೋಪಾಯ ಅವಕಾಶಗಳನ್ನು ಹೆಚ್ಚಿಸುವ ಆಹಾರ ಭದ್ರತೆಯನ್ನು ಒದಗಿಸುವ ಭರವಸೆ ಮತ್ತು ಪೂರಕ / ಉಳಿದ ಉತ್ಪಾದನಾ ವ್ಯವಸ್ಥೆಗಳ (ಸಂಯುಕ್ತ ಕೃಷಿ ಆಧಾರಿತ) ಮೂಲಕ ಬೆಳೆ ವೈಫಲ್ಯ ಅಪಾಯಗಳನ್ನು ತಗ್ಗಿಸುವುದು
  • ಸಂಪನ್ಮೂಲ ಸಂರಕ್ಷಣೆ ತಂತ್ರಜ್ಞಾನಗಳನ್ನು ಜನಪ್ರಿಯಗೊಳಿಸುವುದು ( ಎರಡೂವಿಧಗಳಾದ - ಕೃಷಿ ಜಮೀನಿನಲ್ಲಿ ಮತ್ತು ಕೃಷಿ ಕ್ಷೇತ್ರದಹೊರಗೆ) ಮತ್ತು ದೀರ್ಘಕಾಲದ ಬರ, ಪ್ರವಾಹ ಇತ್ಯಾದಿ ರೀತಿಯ ತೀವ್ರ ಹವಾಮಾನ ಘಟನೆಗಳು ಅಥವಾ ವಿಪತ್ತುಗಳ ಕಾಲದಲ್ಲಿ ಅನುಸರಿಸಬೇಕಾದ ಆಚರಣೆಗಳ ಪರಿಚಯ
  • ಭ್ಯವಿರುವ ನೀರಿನ ಪ್ರಮಾಣಕ್ಕೆ ಪರಿಣಾಮಕಾರಿ ನಿರ್ವಹಣೆಗೆ ಉತ್ತೇಜನ, ಬೇಡಿಕೆ ಮತ್ತು ಪೂರೈಕೆಯ ಕಡೆ ನಿರ್ವಹಣೆ ಪರಿಹಾರಗಳನ್ನು ಸೇರಿಕೊಂಡು ತಂತ್ರಜ್ಞಾನಗಳ ಮೂಲಕ ನೀರಿನ ಬಳಕೆ ದಕ್ಷತೆ ಹೆಚ್ಚಿಸುವುದು
  • ತೋಟಗಾರಿಕಾ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಪ್ರೋತ್ಸಾಹ, ಸುಧಾರಿತ ಫಸಲಿಗೆ ಅನುಸರಿಸಬೇಕಾದ ಆಚರಣೆಗಳು, ಸುಧಾರಿತ ಮಣ್ಣಿನ ಚಿಕಿತ್ಸೆ, ಹೆಚ್ಚಿದ ನೀರಿನ ಹಿಡಿದಿಡುವ ಸಾಮರ್ಥ್ಯ, ರಾಸಾಯನಿಕಗಳು / ಮಣ್ಣಿನ ಇಂಗಾಲ ಸಂಗ್ರಹ ಶಕ್ತಿ ವಿವೇಚನಾಯುಕ್ತವಾಗಿ ಬಳಸುವುದು
  • ಜಮೀನಿನ ಸ್ಥಳ ಪರಿಶೀಲನೆ ಮತ್ತು ಮಣ್ಣಿನ ಫಲವತ್ತತೆ ಭೂಮಿಯ ಬಳಕೆ ಸಮೀಕ್ಷೆ ಇವುಗಳನ್ನು ಜಿಐಎಸ್ ವೇದಿಕೆಯಲ್ಲಿ ನಿರ್ವಹಿಸುವುದು , ಮಣ್ಣಿನ ಪದರುಗಳ ಅಧ್ಯಯನ ಮತ್ತು ಮಣ್ಣಿನ ವಿಶ್ಲೇಷಣೆಯ ಮೂಲಕ ನಿಖರವಾಗಿ ಬೆಳೆಯಬೇಕಾದ ಬೆಳೆ ಇತ್ಯಾದಿ ಮಣ್ಣಿನ ಸಂಪನ್ಮೂಲಗಳ ಒಂದು ಉತ್ತಮವಾದ ಸಿಂಚಿಕೆ (ಡೇಟಾಬೇಸ್) ರಚಿಸುವುದು
  • ನಿರ್ದಿಷ್ಟ ಕೃಷಿ ಹವಾಮಾನ ಸಂದರ್ಭಗಳಲ್ಲಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವುದು ಹಾಗೂ ಪರಿಹಾರ ತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಜ್ಞಾನ ಸಂಸ್ಥೆಗಳು ಮತ್ತು ವೃತ್ತಿಪರರು ಒಳಗೊಂಡ ಸೂಕ್ತ ಕೃಷಿ ವ್ಯವಸ್ಥೆಗಳ ಮೂಲಕ ಪ್ರಚಾರ
  • ·         MGNREGS , IWMP , RKVY , ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ( NFSM ) , ತೋಟಗಾರಿಕೆ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ( MIDH ) ಮಿಷನ್ , ಕೃಷಿ ವಿಸ್ತರಣೆ & ತಂತ್ರಜ್ಞಾನದ ರಾಷ್ಟ್ರೀಯ ಮಿಷನ್ ( NMAE & T) ನಂತಹ ಮಿಷನ್ಸ್ ಗಳ ಸಹಯೋಗದಲ್ಲಿ ಅಗತ್ಯ ಬಂಡವಾಳದ ಕ್ರೂಢೀಕರಣ

ಮಿಷನ್ ಮಧ್ಯಸ್ಥಿಕೆಗಳು

ಮಳೆಯಿಂದ ಪೋಷಿಸಲ್ಪಟ್ಟ ಪ್ರದೇಶದ ಅಭಿವೃದ್ಧಿ (RAD)

RAD ಕೃಷಿ ಪದ್ಧತಿಗಳೊಂದಿಗೆ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಪ್ರದೇಶ ಆಧಾರಿತ ವಿಧಾನವನ್ನು ಅನುಸರಿಸುತ್ತದೆ. ಈ ಘಟಕ ವನ್ನು ' ಜಲಾನಯನ ಜೊತೆಗೆ ಚೌಕಟ್ಟ' ಸೂತ್ರವನ್ನು ಅನುಸರಿಸಿ ಮಾಡಲಾಗಿದೆ. ಅಂದರೆ MGNREGS, NWDPRA, RVP&FPR, RKVY, IWMPಗಳ  ಸಹಯೋಗದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮೂಲ, ಲಭ್ಯವಿರುವ ಸ್ವತ್ತುಗಳ ಉಪಯೋಗ, ಜಲಾನಯನ ಅಭಿವೃದ್ಧಿ ಮತ್ತು ಮಣ್ಣು ಸಂರಕ್ಷಣಾ ಚಟುವಟಿಕೆಗಳನ್ನು ನಡೆಸುವುದು. ಈ ಘಟಕ ಇಂತಹ ಬೆಳೆಯನ್ನು , ತೋಟಗಾರಿಕೆ, ಜಾನುವಾರು, ಮೀನುಗಾರಿಕೆ , ಅರಣ್ಯ ಕೃಷಿ ಆಧಾರಿತ ಆದಾಯದ ಚಟುವಟಿಕೆಗಳಲ್ಲಿ ಮತ್ತು ಮೌಲ್ಯದ ಸೇರ್ಪಡೆಯಿಂದ , ಕೃಷಿಯ ಅನೇಕ ಘಟಕಗಳನ್ನು ಸಂಯೋಜಿಸುವ ಮೂಲಕ ಸೂಕ್ತ ಕೃಷಿ ವ್ಯವಸ್ಥೆಗಳನ್ನು  ಪರಿಚಯಿಸುತ್ತದೆ. ಜೊತೆಗೆ, ಮಣ್ಣಿನ ಪರೀಕ್ಷೆ / ಮಣ್ಣಿನ ಆರೋಗ್ಯ ಕಾರ್ಡ್ ಆಧಾರಿತ ಪೋಷಕಾಂಶಗಳ ನಿರ್ವಹಣೆಯ ಪದ್ಧತಿಗಳು , ಕೃಷಿ ಅಭಿವೃದ್ಧಿ, ಸಂಪನ್ಮೂಲ ಸಂರಕ್ಷಣೆ ಮತ್ತು ಬೆಳೆ ಆಯ್ಕೆ ಸ್ಥಳೀಯ ಕೃಷಿ ಹವಾಮಾನ ಪರಿಸ್ಥಿತಿ ಪ್ರಚಾರ ಇವುಗಳನ್ನು ನಿರ್ವಹಿಸುತ್ತದೆ

ಕೃಷಿ ನೀರು ಸರಬರಾಜು ವ್ಯವಸ್ಥೆ (OFWM)

OFWM ಕೃಷಿ ನೀರಿನ ನಿರ್ವಹಣೆ ತಂತ್ರಜ್ಞಾನಗಳನ್ನು ಮತ್ತು ಉಪಕರಣಗಳನ್ನು - ಪ್ರಾಥಮಿಕವಾಗಿ ಸಮರ್ಥರೀತಿಯಾಗಿ ಬಳಸುವುದು ಮತ್ತುನೀರಿನ ಬಳಕೆ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮದ   ಪ್ರಚಾರ ಇವುಗಳನ್ನು  ಕೇಂದ್ರೀಕರಿಸುತ್ತದೆ. ಇದು ಪರಿಣಾಮಕಾರಿ ಕೊಯ್ಲು ಮತ್ತು ಮಳೆನೀರಿನ ನಿರ್ವಹಣೆ ಮೇಲೆ ಒತ್ತು ಕೊಡುತ್ತದೆ. ನೀರಿನ ಸಂರಕ್ಷಣೆ ತಂತ್ರಜ್ಞಾನಗಳು, ಸಮರ್ಥ ವಿತರಣೆ ಮತ್ತು ವಿತರಣಾ ವ್ಯವಸ್ಥೆಗಳ ಇತ್ಯಾದಿಗಳಿಗೆ ನೆರವು ಮತ್ತು ನೀರಿನ ಬಳಕೆದಾರ ಸಂಘಗಳನ್ನು ಒಳಪಡಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಿಸುವುದು ಮತ್ತು ಸಮಾನವಾಗಿ ವಿತರಿಸಲು ಅನುವುಮಾಡುವುದು. MGNREGA ಯೋಜನೆಯ ಹಣ ಮತ್ತು ಭೂಮಿಯ ಚಲಿಸುವ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಬೇಕಾಗುವ ನೀರಿನ ಸಂರಕ್ಷಣೆ , ಕೃಷಿ ಕೊಳಗಳ ಬಳಕೆ ಮಾಡುವುದು.

ಮಣ್ಣಿನ ಆರೋಗ್ಯ ನಿರ್ವಹಣೆ (SHM)

ಮಣ್ಣಿನ ಆರೋಗ್ಯ ನಿರ್ವಹಣೆ ಮತ್ತು ಉಳಿದಿರುವ ಶೇಷ ಭಾಗದ ಮಣ್ಣಿನ ನಿರ್ವಹಣೆ ಸೇರಿದಂತೆ ಬೆಳೆ ನಿರ್ದಿಷ್ಟ ಸಮರ್ಥನೀಯ ಹಾಗೂ ಸ್ಥಳ ಪ್ರಚಾರ ಗುರಿಯನ್ನು ಹೊಂದಿದೆ. ಭೂಮಿ ಸಾಮರ್ಥ್ಯವನ್ನು, ರಸಗೊಬ್ಬರಗಳು ವಿವೇಚನಾಯುಕ್ತವಾಗಿ ಬಳಸುವುದು, ಸೂಕ್ಷ್ಮ ಪೋಷಕಾಂಶ ನಿರ್ವಹಣೆ, ಸೂಕ್ತ ಭೂಮಿಯ ಬಳಕೆ ಮತ್ತು ಮಣ್ಣಿನ ಸವಕಳಿ / ಅವನತಿ ಕಡಿಮೆ ಮಾಡುವುದು - ಮತ್ತು ಸ್ಥೂಲ ಮಣ್ಣಿನ ಫಲವತ್ತತೆ ಮೂಲಕ ಜೈವಿಕ ಕೃಷಿಯ ವಿಧಾನಗಳನ್ನು ಅನುಸರಿಸುವುದು. ಕೃಷಿ ಭೂಮಿಯ ಬಳಕೆ ಮತ್ತು ಮಣ್ಣಿನ ಗುಣಲಕ್ಷಣಗಳನ್ನು ಆಧರಿಸಿ ಆಚರಣೆಗಳ ವಿವಿಧ ಸುಧಾರಿತ ಪ್ಯಾಕೇಜ್ ಒದಗಿಸುವುದು, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ವಿಷಯಾಧಾರಿತ ನಕ್ಷೆಗಳು ಮತ್ತು ಡೇಟಾಬೇಸ್ ಒದಗಿಸುವುದು ಮತ್ತು ಮಣ್ಣಿನ ಗುಣಲಕ್ಷಣಗಳನ್ನು ವ್ಯಾಪಕ ಕ್ಷೇತ್ರ ಮಟ್ಟದಲ್ಲಿ ವೈಜ್ಞಾನಿಕ ಸಮೀಕ್ಷೆ ಮೂಲಕ ನೆರವುನೀಡುವುದು. ಇದಲ್ಲದೆ ಜೊತೆಗೆ, ನ್ಯಾಷನಲ್ ಸೆಂಟರ್ ಫಾರ್ ಆರ್ಗ್ಯಾನಿಕ್ ಫಾರ್ಮಿಂಗ್ (NCOF), ಕೇಂದ್ರೀಯ ರಸಗೊಬ್ಬರ ಗುಣಮಟ್ಟ ನಿಯಂತ್ರಣಾ & ತರಬೇತಿ ಸಂಸ್ಥೆ (CFQC & TI ) ಮತ್ತು ಮಣ್ಣಿನ ಮತ್ತು ಜಮೀನು ಬಳಕೆ ಸಮೀಕ್ಷೆ ಆಫ್ ಇಂಡಿಯಾ (SLUSI) ಈ ಘಟಕಗಳ ಬೆಂಬಲದಿಂದ ಮಣ್ಣು ಸುಧಾರಣೆ ಯಡೆಗೆ ಒತ್ತುನೀಡುವುದು.

ಹವಾಮಾನ ಬದಲಾವಣೆ ಮತ್ತು ಸಮರ್ಥನೀಯ ಕೃಷಿ: ಮಾನಿಟರಿಂಗ್, ಮಾಡೆಲಿಂಗ್ ಮತ್ತು ನೆಟ್ವರ್ಕಿಂಗ್ (CCSAMMN)

CCSAMMN ವು ಹವಾಮಾನ - ಮತ್ತು ಹವಾಮಾನ ಸ್ಮಾರ್ಟ್ ಸಮರ್ಥನೀಯ ನಿರ್ವಹಣಾ ಪದ್ಧತಿಗಳ ಕ್ಷೇತ್ರದಲ್ಲಿ  ಹವಾಮಾನ ಬದಲಾವಣೆ ರೂಪಾಂತರ / ತಗ್ಗಿಸುವಿಕೆಯ ಸಂಶೋಧನೆ / ಮಾದರಿ ಯೋಜನೆಗಳು ಪೈಲೆಟಿಂಗ್ ರೀತಿಯಲ್ಲಿ ಸ್ಥಳೀಯ ಕೃಷಿ ಸೂಕ್ತ ಸಮಗ್ರ ಕೃಷಿ ವ್ಯವಸ್ಥೆಯಿಂದ ಹವಾಮಾನ ಬದಲಾವಣೆ ಸಂಬಂಧಿತ ಮಾಹಿತಿ ಮತ್ತು ಜ್ಞಾನ ಪ್ರಸಾರ ಮಾಡುವುದರ ನಿರ್ವಹಣೆ ವಹಿಸುತ್ತದೆ. ಸಮಗ್ರವಾಗಿ ಮಳೆ ಆಧಾರಿತ ಪ್ರದೇಶದಲ್ಲಿ  ತಂತ್ರಜ್ಞಾನಗಳನ್ನು ಅಳವಡಿಸುವುದು ,  MGNREGS, IWMP, ಆಕ್ಸಿಲರೇಟೆಡ್ ನೀರಾವರಿ ಬೆನಿಫಿಟ್ ಕಾರ್ಯಕ್ರಮ (AIBP), RKVY, NFSM, NHM ನ, NMAET ಇತ್ಯಾದಿ ಪ್ರಮುಖ ಯೋಜನೆಗಳನ್ನು  ಒಂದೆಡೆ ಮತ್ತು ಸಮನ್ವಯ ಪ್ರಸಾರಕ್ಕೆ ಕ್ರಿಯಾತ್ಮಕ ಯಾಂತ್ರಿಕವಾಗಿ  ವಿವರಿಸಲು ಬೆಂಬಲಿಸುವುದು . ಕೃಷಿ, ಜಾನುವಾರು ಮತ್ತು ಇತರ ಉತ್ಪಾದನಾ ವ್ಯವಸ್ಥೆಗಳ ಬೇಕಾದ ಮಾಹಿತಿ ಒದಗಿಸುವುದು. ಉತ್ಪಾದನಾ ವ್ಯವಸ್ಥೆಗಳ ಬೆಳವಣಿಗೆಯ ಸಾಮರ್ಥ್ಯವನ್ನು ಸಮರ್ಥವಾಗಿ  ಬಳಸಿಕೊಳ್ಳುವುದು ಇವುಗಳನ್ನು ನಿರ್ವಹಿಸುತ್ತದೆ.

ವೆಚ್ಚ ರೂಢಿಗಳು ಮತ್ತು ನೆರವು ಮಾದರಿ

ಸಂಪೂರ್ಣ ವೆಚ್ಚ ರೂಢಿಗಳು ಮತ್ತು ನೆರವು ಮಾದರಿ ಪಡೆಯಲು ಇಲ್ಲಿ  ಕ್ಲಿಕ್ಕಿಸಿ .

Source : ಪುಷ್ಟಿಕರ ಕೃಷಿಗಾಗಿ ರಾಷ್ಟ್ರೀಯ ಮಿಷನ್

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate