ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿಯಾಧಾರಿತ ಉದ್ಯಮಗಳು / ಕಡಿಮೆ ವೆಚ್ಚದ ಮರದ ಹಸಿರುಮನೆ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕಡಿಮೆ ವೆಚ್ಚದ ಮರದ ಹಸಿರುಮನೆ

ಕಡಿಮೆ ವೆಚ್ಚದ ಮರದ ಹಸಿರುಮನೆ

ಹಸಿರುಮನೆ ತಂತ್ರಜ್ಞಾನದ ಬಗೆಗೆ

ಹಸಿರುಮನೆ ತಂತ್ರಜ್ಞಾನದ ಉದ್ದೇಶವು ಉತ್ತಮ ಗುಣಮಟ್ಟದ ಸಸ್ಯಗಳನ್ನು ವರ್ಷ ಪೂರ್ತಿ ಯಸಸ್ವಿಯಾಗಿ ಬೆಳೆಸಲು ಅಗತ್ಯವಾದ ವತಾವರಣವನ್ನು ಒದಗಿಸುವುದೆ ಆಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ವಾತಾವರಣವು ಸಾಧಾರಣವಾಗಿ ಹಿತಕರ ವಾಗಿರುವುದು ಹಣ್ಣು ಹೂವು ಮತ್ತು ತರಕಾರಿಗಳನ್ನು “ಪಾಲಿ ಹೌಸ” ನಲ್ಲಿ ಬೆಳೆಯುವದು ಸಾಮಾನ್ಯ ಅಭ್ಯಾಸ. ಹಸಿರು ಮನೆ ರಚನೆಗಳು ಹಂಗಾಮು ಇಲ್ಲದಾಗ ತೋಟಗಾರಿಕೆ ಬೆಳೆಗಳನ್ನು , ಸಾಧಾರಣ ಬೇಳೆಗೆ ಹವಾಗುಣ ಪೂರಕ ವಾಗಿಲ್ಲದಾಗ ಬೆಳೆಯುವರು ಹಸಿರು ಮನೆಯು ನಿರಂತರ ಹಣ್ಣಿನ , ಹೂವಿನ ಮತ್ತು ತರಕಾರಿ ಪೂರೈಕೆಯನ್ನು ವರ್ಷಪೂರ್ತಿ ಮಾಡಲು ಸಹಾಯಕ. ನಿಯಂತ್ರಿತ ಹವಾಮಾನ ತಂತ್ರ ಬಳಸುವರು., ಹಸಿರುಮನೆಯ ತರಹದವು ಕೃಷಿಯನ್ನು ವಿಶೇಷವಾಗಿ ವಿಭಿನ್ನ ವಾತಾವರಣ ವಿರುವ ದೇಶಗಳಲ್ಲಿ ಉಪಯುಕ್ತ.

ಹಸಿರು ಮನೆಯು ಪಾರದರ್ಶಕವಾದ ಸಾಮಗ್ರಿಗಳಾದ ಎಲ್.ಡಿ.ಪಿ.ಇ , ಎಫ್.ಆರ್.ಪಿ   ಮತ್ತು ಪಾಲಿ ಕಾಬೊನೆಟ್ ಷೀಟುಗಳಿಂದ ಮಾಡಿದ ರಚನೆ ಅವು ಸೂರ್ಯನ ವಿಕಿರಣ ವನ್ನು ಹಾದುಹೋಗಲು ಬಿಡುತ್ತವೆ. ಆದರೆ ಒಳಗಿರುವ ವಸ್ತುಗಳ ಉಷ್ಣ ವಿಕಿರಣವನ್ನು ತಡೆಯುತ್ತವೆ.ಇದು ಸಸ್ಯಗಳ ಬೆಳವಣಿಗೆಗೆ ಪೂರಕ ವಾತಾವರಣವನ್ನು ಉಂಟು ಮಾಡುತ್ತದೆ. ಸೂರ್ಯ ನಿಂದ ಬಂದ ಶಕ್ತಿಯುಹಗಲಿನಲ್ಲಿ ಉಷ್ಣ ವಾಗಿ ಹಸಿರು ಮನೆಯಲ್ಲಿ ಪರಿವರ್ತನೆಯಾಗಿ ಜತೆಗೆ ಅವುಗಳ ಜಲವಿಸರ್ಜನೆಗೆ ಅನುವು ಮಾಡುತ್ತವೆ . ಸಸ್ಯದ ಬೆಳವಣಿಗೆಯ ಮೇಲೆಪರಿಣಾಮ ಬೀರುವ ಬೇರೆ ಬೇರೆ ಅಂಶಗಳಾದ ಬೆಳಕು, ಉಷ್ಣ, ಮತ್ತು ತೇವಾಂಶಗಳುaಇಲ್ಲಿ ನಿಯಂತ್ರಿತವಾಗುತ್ತವೆ.

ಮನೆಯ ಮೂಲ ರಚನೆಯ ಬೆಲೆಯು ಸಾಮಗ್ರಿಗಳ ಆಯ್ಕೆಯ ಮೇಲೆ ಅವಲಂಬಿಸಿದೆ ಶಾಶ್ವತ ಅಥವ ಸಾಧಾರಣ ಮಾಳಿಗೆ ಯು ಕಟ್ಟಡ ಸಾಮಗ್ರಿ ಗಳಾಧ .ಜಿ, ಐ ಕೊಳವೆಗಳು, ಎಂ ಎಸ್ ಯಾಂಗಲ್ ಗಳು ಫೈಬರ್ ಗ್ಲಾಸ್ ಹೆಣೆಯಲ್ಪಟ್ಟ ಪಾಲಿಸ್ಟರ್, ಗಾಜು, ಆಕ್ರೆಲಿಕ್ ಇತ್ಯಾದಿ.ಅಲ್ಲದೆ ಹಸಿರುಮನೆಯ ಸ್ಥಾಪನೆಯುಮೆಲು ಛಾವಣಿಯ ಸಾಮಗ್ರಿಯನ್ನು ಅವಲಂಬಿಸಿದೆ.

ಈ ರೀತಿಯಾಗಿ ಮೇಲೆ ನಮೂದಿಸಿದ ದುಬಾರಿ ಸಾಮಗ್ರಿಗಳನ್ನು ಬಳಸಿ ಕಟ್ಟಿದ ಹಸಿರು ಮನೆಗಳು ತುಂಬ ದುಬಾರಿಯಾಗಿದ್ದು ಸಾಧಾರಣ ಭಾರತೀಯ ರೈತರಿಗೆ ಹೊಂದುವುದು ಸಾಧ್ಯವೆಇಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ರೈತನ ಆರ್ಥಿಕ ಸ್ಥಿತಿಗೆ ಅನುಗುಣವಾದ ಕಡಿಮೆ ವೆಚ್ಚದ ಕಟ್ಟಿಗೆಯ ರಚನೆಯನ್ನು ವಿನ್ಯಾಸ ಮಾಡಲಾಗಿದೆ. ಈ ರಚನೆಗಳು ಯಾವದೆ ಮೇಲು ಛಾವಣಿಗೆ ಅನವು ಮಾಡಿಕೊಡುವವು. ಫಿಲ್ಮ ಪ್ಲಾಸಟಿಕ್ ಷೀಟುಗಳು, ನೆರಳು ನೀಡುವ ಪರದೆಗಳು, ಯುವಿ ಸ್ಥೀರಿಕರಣ ಗೊಳಿಸಿದ ಎಲ್.ಡಿ.ಪಿ.ಇ ಫಿಲ್ಮ ಷೀಟುಗಳು ಇತ್ಯಾದಿಈ ರೀತಿಯ ಹಸಿರುಮನೆ ಬಳಕೆ ದಾರನಿಗೆ ಬೇರೆ ಕೃಷಿ ಚಟುವಟಿಕೆ ನಡೆಸಲು ಅಗತ್ಯವಾದ ಸ್ಥಳ ಒದಗಿಸುವವು ಅದರ ನಿರ್ಮಾಣ ವಿವರವನ್ನು ಕೈಪಿಡಿಯಲ್ಲಿ ನೀಡಲಾಗಿದೆ.

ಈ ಹಸಿರು ಮನೆಯಲ್ಲಿ ಬೆಳೆದ ಸಸ್ಯಗಳ ತಂತ್ರಜ್ಞಾನದ ಬಳಕೆ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಾಧ್ಯ ಏಕೆಂದರೆ ಇದರಿಂದ ಹೆಚ್ಚು ಇಳುವರಿ ಮತ್ತು ಸುಗ್ಗಿಯಿಲ್ಲದಾಗಲೂ ತರಕಾರಿ ಬೆಳೆದು ಉತ್ತಮ ಬೆಲೆ ಪಡೆಯಬಹುದು.

ಮರದ 35'x 20' ಹಸಿರುಮನೆಯ ನಿರ್ಮಾಣದ ವಿಧಾನ

ಬೇಕಾಗಿರುವ ಸಾಮಗ್ರಿಗಳು:

 1. ಕಟ್ಟಿಗೆ ಕಂಬಗಳು
 2. ಎರಡು ಅಳತೆಯ ಮರದ ಕಂಬಗಳನ್ನು ಸಾಮಾನ್ಯವಾಗಿ ಉಪಯೋಗಿಸುವರು. ಒಂದು ದಪ್ಪನೆಯದು ೭      ರಿಂದ ೧೦ ಸೆಮಿ ವ್ಯಾಸವಿರುವುದು. ಇನ್ನೊಂದು ತೆಳ್ಳನೆಯದು ೫  ಸೆಮಿ ವ್ಯಾಸವಿರುವುದು. ದಪ್ಪಗಿನ ವನ್ನು ಮುಖ್ಯ ರಚನೆಗೂ , ತೆಳುವಾದವನ್ನು ಆಧಾರ ರಚನೆಗಳಿಗೂ.ಬಳಸುವರು

 3. ಬೇಕಾದ ಕಂಬಗಳ ಸಂಖ್ಯೆ
 4. ದಪ್ಪನಾದ ಕಂಬಗಳು:೨೧

  ತೆಳುವಾದ ಕಂಬಗಳು:೩೪

  ಬೇಕಾಗಿರುವ ಒಟ್ಟು ಕಂಬಗಳು:೫೫

 5. ಜಿ ಐ ತಂತಿ
 6. ೪  ಮಿಮಿ ವ್ಯಾಸದ ಜಿ ಯ ತಂತಿಗಳನ್ನು ಗಳುಗಳನ್ನು ಮುಖ್ಯ ರಚನೆಯಲ್ಲಿ ಕಟ್ಟಲು ಬಳಸುವರು. ೨  ಕೆಜಿ

 7. ಮೊಳೆಗಳು

  ಉದ್ದನೆಯ ತಂತಿಯ ಮೊಳೆಗಳನ್ನು ಮರದ ಕಂಬಗಳನ್ನು ಆಧಾರದ ಕಂಬಗಳಿಗೆ ಬಂಧಿಸಲು ಮತ್ತು ಅವುಗಳನ್ನು ಕೀಲುಗಳಂತೆ ಜೋಡಿಸಲು ಬಳಸುವರು ಬೇಕಾದ ಮೊಳೆಗಳು ೭  ಸೆ, ಮಿ ಉದ್ದ:೩  ಕೆ ಜಿ

 8. ಯು ವಿ ಸ್ಥಿರೀಕರಿಸಿದ ಫಿಲ್ಮ
 9. ಈ ರಚನೆಯು ಕೇವಲ ಮೃದುವಾದ ಆವರಣದ ಹೊದಿಕೆಯಿರುವ ಹಸಿರು ಮನೆಗೆ ಸೂಕ್ತವಾಗಿದೆ. ಎಲ್.ಡಿ.ಪಿ.ಇ ಫಿಲ್ಮು ಅನ್ನು ಸಾಮಾನ್ಯವಾಗಿ ಉಪಯೋಗಿಸುವರು.,ಅಲ್ಲದೆ ಅವು ಬಹು ಅಗ್ಗವಾಗವೆ.ಮತ್ತು ಸುಲಭ ವಾಗಿ ನಿಮಾಣ ಕಾರ್ಯಕ್ಕೆ ಬಳಸಬಹುದು. ಬಾರತದಲ್ಲಿ,ಎಲ್.ಡಿ.ಪಿ.ಇ ಫಿಲ್ಮಗಳನ್ನುಇಂಡಿಯನ್ ಪೆಟ್ರೊ ಚೆಮಿಕಲ್ ಲಿ. (ಐಪಿಸಿಎಲ್ )ಉತ್ಪಾದಿಸುವುದು. ಅವಕ್ಕೆ ಅನೇಕ ಗುಣಗಳಿವೆ ಮತ್ತುಮರದಿಂದ ಮಾಡಿದ ಹಸಿರುಮನೆಗೆ ಛಾವಣಿಯಸುವ ಸಾಮಗ್ರಿಯಾಗಿದೆ.ನಮ್ಮ ಅನುಭವದಲ್ಲಿ , ನಮಗೆ ಗೊತ್ತಿದ್ದಂತೆ ಐ.ಪಿ.ಸಿ.ಎಲ್ ಎಲ್.ಡಿ.ಪಿ.ಇಫಿಲ್ಮ ಅನೇಕ ಅನುಕೂಲಗಳನ್ನು ಹೊಂದಿದೆ. ಅದಕ್ಕೆ ಸಸ್ಯದ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಅನೇಕ ಸನ್ನಿವೇಶಗಳಾದ ಬೆಳಕು, ಉಷ್ಣ ಮತ್ತು ತೇವಾಂಶಗಳನ್ನು ಚೆನ್ನಾಗಿ ನಿರ್ವಹಿಸುವುದು.

  ಒಟ್ಟು ಬೇಕಾದ ಫಿಲ್ಮು

  ಬೇಕಾದ ಈ ಫಿಲ್ಮು (U.V. ಫಿಲ್ಮುಕಡಿಮೆ ಸಾಂದ್ರತೆಯ ಪಾಲಿತಿಲಿನ್ಫಿಲ್ಮು) ನೆಲದ ವಿಸ್ತೀರ್ಣದ ಸುಮಾರು 2.48ರಷ್ಟು ಹೆಚ್ಚಿರುವುದು. ಉದಾಹರಣೆ- ಒಂದು. ೩೫ '  x ೨೦' = ೭೦೦  ಚ.ಅಡಿ ಅಳತೆಯ ಹಸಿರು ಮನೆ ಕಟ್ಟಲು 1736ಚ. ಅಡಿಯ ಯುವಿಫಿಲ್ಮು, ಅಂದಾಜು 30 ಕಿ. ಗ್ರಾಂ ತೂಕದ 200ಮೈಕ್ರಾನ್ ದಪ್ಪದಯುವಿಫಿಲ್ಮು,ಬೇಕಾಗುವುದು.

 10. ಟಾರು / ಬಿಟಮನ್ ೨ ಲಿಟರ್
 11. ಎಲ್ ಪಿಡಿಇ ಫಿಲ್ಮ ರೋಲ್ (೧೦ ಸೆಮಿ ಅಗಲ)

  ಸಾಧಾರಣ ಯುವಿ ಎಲ್.ಡಿ.ಪಿ.ಇ ಫಿಲ್ಮ ರೋಲು/ಉಳಿದ ಯುವಿ ಸ್ಥಿರಗೊಳಿಸಿದ ಎಲ್.ಡಿ.ಪಿ.ಇ ಫಿಲ್ಮು ರೋಲ್ ೧೦  ಸೆ. ಮಿ ಅಗಲದ್ದು ಎಲ್ಲ ಕಂಬಗಳನ್ನು ಸುತ್ತಲು ತಯಾರಿಸಬೇಕು.ಇದರಿಂದ ಜಾಯಿಂಟುಗಳು ಮತ್ತು ತಂತಿಗಳುಯುವಿ ಸ್ಥಿರಗೊಳಿಸಿದ ಎಲ್.ಡಿ.ಪಿ.ಇ ಫಿಲ್ಮ ನೇರ ಸಂಪರ್ಕಕ್ಕೆ ಬಾರದಂತೆ ತಡೆಯುವವು.ಒಟ್ಟು ಬೇಕಾದ ಫಿಲ್ಮುಕೆಜಿಗಳಲ್ಲಿ:   ೩ ಕೆಜಿ ೭ ಪ್ಲಾಸ್ಟಿಕ್ ಹಗ್ಗ

  ಪ್ಲಾಸ್ಟಿಕ್ ಹಗ್ಗವನ್ನು ಎಲ್.ಡಿ.ಪಿ.ಇ ಷೀಟುಗಳನ್ನು ರಚನೆಯ ಟ್ರಸ್ ನಡುವೆ ಬಂಧಿಸಲು ಬಳಸುವರು. ಇದರಿಂದ ಬಿರು ಗಾಳಿಗಯ ರಭಸಕ್ಕೆ ಷೀಟುಗಳು ಹರಿದು ಹೋಗುವ ಸಾಧ್ಯತೆ ಕಡಿಮೆಯಾಗುವುದು.

  ಬೇಕಾದ ಪ್ಲಾಸ್ಟಿಕ್ ಹಗ್ಗ ೫  ಕೆಜಿ

 12. ಬೊಂಬಿನ ಕಂಬಗಳು
 13. ಬೊಂಬುಗಳನ್ನು ಸುತ್ತಲೂ ಜಾಯಿಂಟುಗಳನ್ನು ಸೇರಿಸುವಲ್ಲಿ ಛಾವಣಿಯ ಮೇಲೆ ಎಲ್.ಡಿ.ಪಿ.ಇ ಹಾಳೆಗಳನ್ನು ಬಂಧಿಸಲು ಬಳಸುವರು.

  ಒಟ್ಟು ಬೇಕಾಗಿರುವ ಬೊಂಬುಗಳ ಸಂಖ್ಯೆ                  ೩೦

 14. ಟ್ಯಾಗ್ ಮೊಳೆಗಳು
  1. ಟ್ಯಾಗ್ ಮೊಳೆಗಳನ್ನುರಬ್ಬರ್ ವಾಷರ್ ಜೊತೆ ಎಲ್.ಡಿ.ಪಿ.ಇ ಹಾಳೆಗಳನ್ನು ಮರದ ರಚನೆಗೆ ಬಂಧಿಸಲು ಉಪಯೋಗಿಸುವರು.
  2. ಟ್ಯಾಗ್ ಮೊಳೆಗಳನ್ನು ಮರದ ಕಡ್ಡಿಗಳಿಗೆ ಬಲವಾಗಿ ಬಂಧಿಸಲು, ಅವುಗಳನ್ನುರಚನೆಯಟ್ರಸ್ ಗೆ ಒಂದೆ ರೀತಿಯಲ್ಲಿ ಬಂಧಿಸಲು ಬಳಸುವರು.
  3. ಬೇಕಾದಟ್ಯಾಗ್ ಮೊಳೆಗಳು (೧ "ಉದ್ದ): ೨೫೦  ಗ್ರಾಂ

ಹಾಳೆಗಳಿನ ಛಾವಣಿಯುಳ್ಳ ಮರದ ೩೫ 'x ೨೦ ' ಹಸಿರುಮನೆಯ ನಿರ್ಮಾಣದ ವಿಧಾನ

ಹೆಜ್ಜೆ ೧

ಹಸಿರು ಮನೆ ನಿವೇಶನ ಆಯ್ಕೆ ಮತ್ತು ಅನುವು ಗೊಳಿಸುವಿಕೆ

 1. ಒಳ್ಳೆಯ ಮತ್ತು ಸೂಕ್ತ ನಿವೇಶನವು ಹಸಿರು ಮನೆಯು ಅದರ ಕಾರ್ಯವೈಖರಿ ಮತ್ತು ಪರಿಸರ ನಿರ್ವಹಣೆಯ ಮೇಲೆ ಪ್ರಭಾವ ಬೀರುವುದು.ಇದಕ್ಕೆ ಇಳಿಜಾರು ಚರಂಡಿಯು ಒಂದು ಅತ್ಯವಶ್ಯಕ ಅಂಶ. ನೆಲದ ಮೇಲಿನ ನೀರನ್ನು ಹಸಿರು ಮನೆಯಿಂದ ದೂರ ಸಾಗಿಸಲು ಸಾಕಷ್ಟು ಅವಕಾಶವಿರಬೇಕು.ಎಲ್ಲ ಋತಮಾನದಲ್ಲಿ ಬಳಸಬಹುದಾದ ರಸ್ತೆಯು ,ಹಸಿರುಮನೆಗೆ ಮತ್ತು ಅಲ್ಲಿಂದ ಸಾಮಗ್ರಿಗಳನ್ನು ಸಾಗಿಸಲು ಅನುಕೂಲ ವಾಗುವುದು. ಜತೆಗೆ ಹಸಿರು ಮನೆಯು ಮಾರಕಟ್ಟೆಗೆ ಹತ್ತಿರವಿದ್ದರೆ ತುಂಬ ಅನುಕೂಲ.ಇನ್ನೊಂದು ಮುಖ್ಯ ಅಂಶವೆಂದರೆ ಗುಣಮಟ್ಟದ ನೀರಿನ ಶಾಶ್ವತ ಪೂರೈಕೆಗೆ ಪೂರಕವಾದ ಜಲ ಮೂಲ ನಿವೇಶನದ ಹತ್ತಿರವಿರಬೇಕು.
 2. ಹಸಿರು ಮನೆಯು ಮರಗಿಡಗಳಿಂದ ಮತ್ತು ಕಟ್ಟಡಗಳಿಂದ ದೂರವಿರಬೇಕು. ಅವುಗಳಿಂದ ಸೂರ್ಯನ ಬೆಳಕಿಗೆ ತಡೆಯಾಗಬಾರದು.
 3. ಪೂರ್ವ- ಪಶ್ಚಿಮವಾಗಿರುವ ಹಸಿರು ಮನೆಯು ಚಳಿಗಾಲದಲ್ಲಿ ಬೆಳಕಿನ ಮಟ್ಟವನ್ನು ಉತ್ತಮವಾಗಿ ಇರಿಸುತ್ತದೆ.
 4. ಹಸಿರು ಮನೆಯನ್ನು ಅನುವುಗೊಳಿಸುವಾಗ ಅನೇಕ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳ ಬೇಕು. ನಿವೇಶನವಿರುವ ನಿರ್ಧಿಷ್ಟ ಸ್ಥಳ , ಗಾಳಿಬೀಸುವ ದಿಕ್ಕು , ಇರುವ ಗಾಳಿ ತಡೆಗಳು ಮತ್ತು ದಿನಪೂರ್ತಿ ಸೂರ್ಯನ ಬೆಳಕಿನ ಲಭ್ಯತೆ ಇರಬೇಕು.

ಮೆಟ್ಟಿಲು–೨

 1. ದಪ್ಪಗಿರುವ ಕಟ್ಟಿಗೆಯ ಕಂಬಗಳನ್ನು ತೆಗೆದು ಕೊಂಢು ಅವಕ್ಕೆ ತಾರು ಬಳಿಯಿರಿ.ಅವನ್ನು ಎಲ್ ಪಿಡಿಇ ಹಾಳೆಗಳಿಂದ ಸುತ್ತಿ ಪ್ಲಾಸ್ಟಿಕ್ ಸುತ್ತಲಿಯನ್ನು ಕಟ್ಟಿರಿ. ಇದರಿಂದ ಅವುಗಳಿಗೆ ಗೆದ್ದಲು ಕಾಟವಿರುವುದಿಲ್ಲ.
 2. ಕಟ್ಟಿಗೆಯ ಹಸಿರು ಮನೆಯನ್ನು ಸೂಕ್ತವಾದ ಕೆಜೊರಿನಾ ಮರದ ಬೇರೆ ಬೇರೆ ಗಾತ್ರದ ಕಂಬಗಳನ್ನು ಬಳಸಿ ಚಿತ್ರದಲ್ಲಿ ತೋರಿಸಿದಂತೆ ರಚನೆ ನಿರ್ಮಿಸಿ
 3. ಬೊಂಬಿನ ಗಳಗಳು ಚಿತ್ರದಲ್ಲಿನಂತೆ ಎಲ್ಲ ವಿಸ್ತೀರ್ಣವನ್ನು ಅವರಿಸಿರುವವು.
 4. ಹಸಿರು ಮನೆಯ ಉದ್ದಕ್ಕೂ 0.೨ ಮಿ x 0.೨  ಮಿಅಗಲದ ಕಾಲುವೆ ಅಗಿಯಿರಿ. ಆ ಮಣ್ಣನ್ನು ಹೊರಗೆ ಹಾಕಿ.ಅದು ಯು ವಿ ಯ ಸ್ಥಿರ ಗೊಳಿಸಿದ ಎಲ್ ಪಿ ಡಿಇ ಫಿಲ್ಮ ನ ಅಂಚನ್ನು ಮುಚ್ಚಲಿ. ಹೀಗೆ ಹಾಕಿದ ಮಣ್ಣು ಕಲ್ಲು ಅಥವ ಚೂಪಾದ ಯಾವುದೆ ವಸ್ತುವನ್ನು ಹೊಂದಿರಬಾರದು.
 5. ಎಲ್ ಪಿ ಡಿಇ ಫಿಲ್ಮನ್ನು ಎಲ್ಲ ಕಂಬಗಳಿಗೆ ಸುತ್ತಿರಿ. ಇದರಿಂದ ಯಾವುದೆ ಚೂಪಾದ ವಸ್ತುವು ಎಲ್ ಪಿ ಡಿಇ ಫಿಲ್ಮ ನ ಸಂಪರ್ಕಕ್ಕೆ ಬರುವುದನ್ನು ತಡೆಯುವುದು.ಅದರಿಂದ ಅವು ಹಾಳಾಗುವುದು ತಪ್ಪುವುದು. ಕಟ್ಟಿಗೆಯ ಕಂಬಗಳಿಂದ ಬರುವ ಅಂಟಿನಿಂದ ಫಿಲ್ಮ ಹಾಳಾಗಲಾರದು.
 6. ಹಸಿರು ಮನೆಯ ಉದ್ದಕ್ಕೂಯುವಿ ಸ್ಥೀರೀಕರಿಸಿದ ಎಲ್ ಪಿ ಡಿಇ ಫಿಲ್ಮ ಅನ್ನು ಚಿತ್ರದಲ್ಲಿ ತೋರಿಸಿರುವಂತೆ ಹರಡಿ.ಅದರ ಎರಡೂ ಅಂಚುಗಳನ್ನು 2"ಅಗಲವಿರುವಂತೆ ಮಡಿಚಿ.ಅದನ್ನು ಮೇಲೆ ದಾರದಿಂದ 4"ಅಗಲದಲ್ಲಿ ಸಮನಾಗಿ ಕಟ್ಟಿ.ಹಾಳೆಯನ್ನು ಸುತ್ತಲೂ ತೋಡಿದಗುಂಡಿಯಲ್ಲಿ ಕೊನೆ ಗುಂಟ ಇಳಿಬಿಡಿ. ಹಸಿರು ಮನೆಯ ಮುಂಭಾಗ ಮತ್ತು ಹಿಂಭಾಗವನ್ನುಎಲ್ ಪಿ ಡಿ ಇ ಫಿಲ್ಮಹಾಳೆಗಳಿಂದ ಮುಚ್ಚಿ ಮತ್ತು ಆ ಹಾಳೆಗಳು ಸರಿಯಾಗಿ ಒಳ ಸೇರುವಂತೆ ಸಂಕುಚಿತವಾಗದಂತೆ ಕತ್ತರಿಸಿ. ಮೊಳೆ ಮತ್ತು ವಾಷರ್ ಬಳಸಿ ಅವುಗಳನ್ನು ರಚನೆಗೆ ಬಿಗಿಯಿರಿ.ಮೂಲೆಗಳನ್ನು ಗುಂಡಿಯಲ್ಲಿ ಹಿಂದಿನಂತೆ ಬಿಡಿ.ಮತ್ತು ಅವನ್ನು ಗುಂಡಿಯಲ್ಲಿರುವ ಮಣ್ಣಲ್ಲಿ ಹುಗಿಯಿರಿ.ಪ್ರವೇಶ ದ್ವಾರದ ಎರಡೂ ಬದಿಯಲ್ಲಿ ಮಾತ್ರ ಹಾಗೆಯೆ ಬಿಡಿ. ಅಲ್ಲಿ ಚಿತ್ರದಲ್ಲಿರುವಂತೆ ಹೆಚ್.ಡಿ.ಪಿ.ಇ  ಹಾಳೆಯು ಸುತ್ತಿರಲಿ ಮತ್ತು ತೋರಿಸಿರುವಂತೆ ನೇತು ಹಾಕಿ.
 7. ಲೋಹದ ಹುಕ್ಕುಗಳನ್ನು ಚಿತ್ರದಲ್ಲಿನಂತೆ ನಿರ್ಮಿಸಿ ಬಾಗಿಲ ಎರಡು ಕಡೆ ಗಳಲ್ಲಿ ಸ್ಥಾಪಿಸಿ. ಅವು ಸುತ್ತಿದ ಎಲ್ ಪಿ ಡಿಇ ಷೀಟುಗಳನ್ನು ಇಡಲು ಉಪಯುಕ್ತ..

ಎಂ ಸಿ ಆರ್ ಸಿ ಯು ನಿಮರ್ಕಿಸಿದ ಹಸಿರುಮನೆ ರಚನೆಯು ಕೆಳಗಿನ ಅನುಕೂಲಗಳನ್ನು ಹೊಂದಿದೆ.

 1. ಕಡಿಮೆ ವೆಚ್ಚ
 2. ಸುಲಭ ನಿರ್ಮಾಣ
 3. ಸ್ಥಳೀಯ ಸಾಮಗ್ರಿ ಬಳಕೆ
 4. ಯುವಿ ಲೇಪಿತ ಎಲ್ ಡಿ ಪಿಯಿ ತಗಡುಗಳು ಅಥವ ತೆಳ್ಳನೆ ಪ್ಲಾಸ್ಟಿಕ್ ಹಾಳೆಗಳು
 5. ಗಾಳಿಯ ಹೊಡೆತ ತಡೆಯನಬಲ್ಲವು
 6. ಹೆಚ್ಚು ಬಾಳಿಕೆ ಬರುವಂತಹವು
 7. ಹೆಚ್ಚು ಹಸಿರು ಮನೆಗಳ ಅವಕಾಶ & ತೇವಾಂಶ ಮತ್ತು ಉಷ್ಣತೆಯನ್ನು ನಿಯಂತ್ರಿಸಬಹುದಾಗಿದೆ

ಮೂಲ:ಶ್ರೀ  ಅಮ್ಮ  ಮುರುಗಪ್ಪ  ಛೆತ್ತಿಅರ್  ರಿಸರ್ಚ್  ಸೆಂಟರ್ , ತರಮಣಿ , ಚೆನ್ನೈ  – ೬೦೦  ೧೧೩ .

2.9512195122
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top