ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿಯಾಧಾರಿತ ಉದ್ಯಮಗಳು / ಕರ್ನಾಟಕ ಕೃಷಿ ಬೆಲೆ ಆಯೋಗ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕರ್ನಾಟಕ ಕೃಷಿ ಬೆಲೆ ಆಯೋಗ

ಕರ್ನಾಟಕ ಕೃಷಿ ಬೆಲೆ ಆಯೋಗ ದ ಬಗ್ಗೆ ಇಲ್ಲಿ ತಿಳಿಸಲಾಗಿದೆ

ಕನಿಷ್ಠ ಬೆಂಬಲ ಬೆಲೆ ರೈತರು ಬೆಳೆಯುವ ಬೆಳೆಗಳ ತೀರ್ವತರ ಬೆಲೆ ಕುಸಿತದ ವಿರುದ್ಧ ಭಾರತ ಸರಕಾರದ ಒಂದು ಮಾರುಕಟ್ಟೆ ಮಧ್ಯ ಪ್ರವೇಶ ವ್ಯವಸ್ಥೆಯಾಗಿದೆ. ಕೇಂದ್ರ ಸರಕಾರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು ಮಾಡುವ ಶಿಫಾರಸಿನ ಅನ್ವಯ, ಭಾರತ ಸರಕಾರವು ಕೆಲವು ಬೆಳೆಗಳ ಬಿತ್ತನೆಗೆ ಮೊದಲು ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಕನಿಷ್ಠ ಬೆಂಬಲ ಬೆಲೆಯನ್ನು ಹಲವಾರು ಅಂಶಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಇವುಗಳಲ್ಲಿ ಪ್ರಮುಖವಾದುವು - ಉತ್ಪಾದನಾ ವೆಚ್ಚ, ಪರಿಕರಗಳ ಬೆಲೆಗಳಲ್ಲಿನ ಬದಲಾವಣೆಗಳು, ಅಂತರ ರಾಷ್ಟ್ರೀಯ ಬೆಲೆ ಪರಿಸ್ಥಿತಿ,

ರೈತರು ನೀಡಿದ ಮತ್ತು ಪಡೆದ ಬೆಲೆಗಳಲ್ಲಿನ ಸಮಾನತೆ, ಹೂಡುವಳಿ-ಹುಟ್ಟುವಳಿ ಸಮಾನತೆ, ಮಾರುಕಟ್ಟೆ ಬೆಲೆಗಳ ಪ್ರವೃತ್ತಿ ಮತ್ತಿತರ ಅಂಶಗಳು. ಜೊತೆಗೆ, ಪೂರೈಕೆ ಸಂಬಂಧಿತ ಮಾಹಿತಿಯಾದ ಕ್ಷೇತ್ರ, ಇಳುವರಿ, ಉತ್ಪಾದನೆ, ರಫ್ತು, ಆಮದು, ದೇಶೀಯ ಲಭ್ಯತೆ, ಸರ್ಕಾರಿ / ಸಾರ್ವಜನಿಕ ಸಂಸ್ಥೆಗಳು ಅಥವಾ ಉದ್ದಿಮೆಗಳಲ್ಲಿನ ಸರಕು ಅಲ್ಲದೆ ಬೇಡಿಕೆ ಸಂಬಂಧಿತ ಮಾಹಿತಿಯಾದ ತಲಾ ಸರಾಸರಿ ಬಳಕೆ, ಪ್ರವೃತ್ತಿ ಮತ್ತು ಸಂಸ್ಕರಣಾ ಘಟಕಗಳ ಸಾಮರ್ಥ್ಯ, ಕೃಷಿ ಉತ್ಪನ್ನಗಳ ಸಂಸ್ಕರಣಾ ವೆಚ್ಚ ಮಾರಾಟ ವೆಚ್ಚ - ದಾಸ್ತಾನು, ಸಾಗಾಣಿಕೆ, ಸಂಸ್ಕರಣೆ, ಮಾರಾಟ ಸೇವೆಗಳು, ತೆರಿಗೆ / ಕರಗಳು ಮತ್ತಿತರ ಅಂಶಗಳನ್ನು ಇದು ಪರಿಗಣಿಸುತ್ತದೆ.

ಕರ್ತವ್ಯಗಳು:

ನಿಯಮಿತವಾಗಿ ಮತ್ತು ವ್ಯವಸ್ಥಿತವಾಗಿ ಸ್ಥಳೀಯ ಬೇಡಿಕೆ, ಪರಿಕರಗಳ ಸರಬರಾಜು, ಹುಟ್ಟುವಳಿ ಪ್ರತಿಬಿಂಬಿಸುವ ಪ್ರಾಮಾಣಿತ ಬೆಲೆ ಪರಿಕಲ್ಪನೆಗಳನ್ನು ಬಳಸಿಕೊಂಡು ತೋಟಗಾರಿಕಾ ಬೆಳೆಗಳು ಸೇರಿದಂತೆ ರಾಜ್ಯದ ಪ್ರಮುಖ ಕೃಷಿ ಬೆಳೆಗಳ ಸಾಗುವಳಿ ವೆಚ್ಚ ಅಂದಾಜಿಸುವುದು. ನಿಯತಕಾಲಿಕವಾಗಿ ರಾಜ್ಯ ಸರ್ಕಾರದಿಂದ ಮಧ್ಯಸ್ಥಿಕೆ ವಹಿಸಬೇಕಾಗಿರುವ ಬೆಳೆಗಳನ್ನು ಗುರುತಿಸುವುದು. ಪ್ರಾರಂಭಿಕವಾಗಿ ರಾಗಿ, ಜೋಳ, ಸಜ್ಜೆ, ಕಿರುಧಾನ್ಯಗಳು, ತೊಗರಿ, ನೆಲಗಡಲೆ, ಆಲೂಗಡ್ಡೆ, ಟೊಮೆಟೊ ಮತ್ತು ಈರುಳ್ಳಿ ಬೆಳೆಗಳನ್ನು ಪರಿಗಣಿಸುವುದು. ಇತರೆ ಬೆಳೆಗಳನ್ನು ಸೇರ್ಪಡೆ ಮಾಡುವುದರ ಬಗ್ಗೆ ಸಮಿತಿಯು ಕಾಲಕಾಲಕ್ಕೆ ಸರ್ಕಾರವು ಗುರುತಿಸಿ ಸೂಚಿಸಿದಂತೆ ಕ್ರಮ ಕೈಗೊಳ್ಳುವುದು.

ಕೃಷಿ ಉತ್ಪನ್ನಗಳಿಗೆ ಸಂಭವನೀಯ ಬೆಲೆ ನೀಡಲು, ಬೆಲೆಗಳ ಉತ್ಪಾದಕತೆ, ಉತ್ಪಾದನೆ, ಆವರಿಸಿದ ವಿಸ್ತೀರ್ಣ ಮತ್ತು ಮುಂಗಡ ಬೆಲೆ, ಸರಬರಾಜು ಮತ್ತು ಬೇಡಿಕೆ ಬಗ್ಗೆ ವಿಶ್ಲೇಷಣೆ ಮಾಡುವುದು.

ಷರತ್ತು ಮತ್ತು ನಿಬಂಧನೆಗಳು:

ಬೆಳೆ ಉತ್ಪಾದನಾ ವೆಚ್ಚ, ಮಾರುಕಟ್ಟೆಯ ಕರ್ತವ್ಯಗಳು, ಅಲ್ಪಾವಧಿ ಹಾಗೂ ದೀರ್ಘಾವಧಿಯ ಕೃಷಿ ಪರಿಸರ ಸ್ಥಿತಿಗಳನ್ವಯ ಕೃಷಿ ಮತ್ತು ತೋಟಗಾರಿಕೆ ಬೆಲೆಗಳಿಗೆ ಸಮತೋಲನಾ ಮತ್ತು ಸಮಗ್ರ ರೀತಿಯಲ್ಲಿ ಲಾಭದಾಯಕ ಬೆಲೆಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು

ರಚನೆ ,ದೃಷ್ಟಿಕೋನ ಮತ್ತು ಧ್ಯೇಯ:

ರಚನೆ :

ಅತ್ಯುತ್ತಮ ಶೈಕ್ಷಣಿಕ ಹಿನ್ನಲೆ ಮತ್ತು ಕೃಷಿ ಮಾರುಕಟ್ಟೆ ಸೇರಿದಂತೆ ಕೃಷಿ ಅರ್ಥಶಾಸ್ತ್ರದಲ್ಲಿ ಪರಿಣಿತಿ ಹೊಂದಿರುವ ಕೃಷಿ ತಜ್ಞರವರ ಅಧ್ಯಕ್ಷತೆಯ ನೇತೃತ್ವದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗ ಕಾರ್ಯ ನಿರ್ವಹಿಸುವುದು. ಅಧ್ಯಕ್ಷರಿಗೆ ಸಹಾಯಕರಾಗಿ ಐವರು ಸದಸ್ಯರಿರುವುದು. ಇದರಲ್ಲಿ ಸರ್ಕಾರದಿಂದ ಒಬ್ಬರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವರು. ಐದು ಸದಸ್ಯರುಗಳಲ್ಲಿ ಕೃಷಿ ಅರ್ಥಶಾಸ್ತ್ರ, ಕೃಷಿ ಮಾರಾಟ, ಕೃಷಿ ನಿರ್ವಹಣೆ ಇತ್ಯಾದಿ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಇಬ್ಬರು ಅಧಿಕಾರಿ ಸದಸ್ಯರು. ಇಬ್ಬರು ಅಧಿಕಾರೇತರ ಸದಸ್ಯರು - ಪ್ರಗತಿಪರ ದೃಷ್ಟಿಕೋನವನ್ನು ಹೊಂದಿರುವ ರೈತರು ಮತ್ತು ಕೃಷಿ ಉತ್ಪನ್ನಗಳ ಮಾರಟದ ಬಗ್ಗೆ ಅನುಭವ ಹೊಂದಿರುವವರು.

ದೃಷ್ಟಿಕೋನ ಮತ್ತು ಧ್ಯೇಯ:

ದೃಷ್ಟಿಕೋನ: ರೈತರಿಗೆ ಗ್ರಾಹಕರ ಬೆಲೆಯಲ್ಲಿ ಗರಿಷ್ಠ ಪಾಲು ಖಚಿತ ಪಡಿಸುವುದು, ರಾಜ್ಯದ ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧನೆ, ಆಹಾರ ಭದ್ರತಾ ಅಗತ್ಯಗಳ ಪೂರೈಕೆ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಫಿಸುವುದು ಇತ್ಯಾದಿ ಕರ್ನಾಟಕ ರಾಜ್ಯ ಕೃಷಿ ಆಯೋಗದ ಮುಖ್ಯ ದೃಷ್ಟಿಕೋನವಾಗಿರುತ್ತದೆ. ಧ್ಯೇಯ: ಕೃಷಿ ಮಾರುಕಟ್ಟೆಯ ಮೂಲ ಸೌಕರ್ಯವನ್ನು ಉತ್ತಮಗೊಳಿಸುವುದು, ಬೆಲೆ ಮತ್ತು ಬೆಲೆಯೇತರ ಕ್ರಮಗಳಿಂದ ಮಾರುಕಟ್ಟೆ ಸ್ಥಿರೀಕರಿಸುವುದು, ಅಧಿಕ ಉತ್ಪಾದನೆ ಸಮಯದಲ್ಲಿ 'ಮಾರುಕಟ್ಟೆ ಮಧ್ಯ ಪ್ರವೇಶ', (Market Intervention) ರೈತರಿಗೆ ಲಾಭದಾಯಕ ಬೆಲೆ ಪಡೆಯುವುದಕ್ಕಾಗಿ ಸಾಮೂಹಿಕ ಚೌಕಾಸಿ ಸಾಮರ್ಥ್ಯ (Collective Bargaining Power) ಹೆಚ್ಚಿಸುವುದು, ಮಾರುಕಟ್ಟೆ ಸುಧಾರಣೆ, ಬೆಳೆ ವಿಮೆ, ಇ-ವ್ಯಾಪಾರಗಳ ಮೂಲಕ ಕೃಷಿ ಸಮುದಾಯದ ಎಲ್ಲಾ ವರ್ಗ ಮತ್ತು ಪ್ರದೇಶಗಳ ರೈತರ ಹಿತ ಕಾಪಾಡುವುದು ಮುಖ್ಯ ಧ್ಯೇಯೋದ್ಧೇಶವಾಗಿರುತ್ತದೆ.

ಮೂಲ :ಕರ್ನಾಟಕ ಕೃಷಿ ಬೆಲೆ ಆಯೋಗ

2.94495412844
ಮಹೇಶ ಬೆ೦ಡಿಗೇರಿ Oct 06, 2015 08:50 PM

ಒಳ್ಳೆದು

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top