ಏಲಕ್ಕಿ ಮಸಾಲೆ ಬೆಳೆಗಳ ರಾಣಿ ಎನಿಸಿಕೊಂಡಿದೆ. ಇದು ನೆರಳಿನಲ್ಲಿ ಬೆಳೆಯುವ ಒಂದು ಬಹುವಾರ್ಷಿಕ ಬೆಳೆ. ಏಲಕ್ಕಿಯು ವಿದೇಶಿ ವಿನಿಯಮ ಗಳಿಸುತ್ತದೆ. ಇದನ್ನು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ, ಮಸಾಲೆ ಪದಾರ್ಥಗಳಲ್ಲಿ, ಪಾನೀಯಗಳ, ಮದ್ಯಗಳ ತಯಾರಿಕೆಯಲ್ಲಿ ಮತ್ತು ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ.
ಏಲಕ್ಕಿಯು ನಿಯ್ಯ ಹರಿದ್ವರ್ಣ ತೋಟಗಳಲ್ಲಿ 750 ರಿಂದ 1350 ಮೀಟರ್ ಎತ್ತರದ ಪ್ರದೇಶಗಳಲ್ಲಿ ವಾರ್ಷಿಕ 2000 ದಿಂದ 5000 ಮಿ.ಮೀ. ಮಳೆ ಬೀಳುವ ಪ್ರದೇಶಗಳು ಹಾಗೂ ಉಷ್ಣಾಂಶ 12 ರೀಮದ 350 ಸೆ. ಸೂಕ್ತವಾಗಿರುತ್ತದೆ.
ನೀರು ಬಸಿದು ಹೋಗುವಂತಹ ಫಲವತ್ತಾದ ಕೆಂಪುಗೋಡು ಮತ್ತು ಮೆಕ್ಕಲು ಮಣ್ಣು ಉತ್ತಮ. ಮಣ್ಣಿನ ರಸಸಾರ 6 ರಿಂದ 6.5 ಇರುವ್ರದು ಸೂಕ್ತ.
ಮಲಬಾರ್, ಮೈಸೂರು ಮತ್ತು ವಜ್ಜುಕ್ಕ ಏಲಕ್ಕಿ ತಳಿಗಳಲ್ಲಿ, ರಾಜ್ಯದಲ್ಲಿ ಮಲಬಾರ್ ಬಗೆಗಳು ಹೆಚ್ಚು ಪ್ರಚಲಿತವಾಗಿವೆ. ಮಜ್ಜುಕ್ಕ ಬಗೆಯನ್ನು ಸಹ ಕೃಷಿಗೆ ಅಳವಡಿಸುತ್ತಿದ್ದಾರೆ.
ಮೂಡಿಗೆರೆ-1 : ಹೆಚ್ಚು ಇಳುವರಿ ಕೊಡುವ ತಳಿಯಾಗಿದ್ದು ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ತಳಿಯು 2.5 ರಿಂದ 3 ಮೀಟರ್ ಎತ್ತರ ಬೆಳೆಯುತ್ತದೆ. ಗೊಂಚಲುಗಳು ದಟ್ಟವಾಗಿದ್ದು ಏಲಕ್ಕಿ ಕಾಯಿಗಳು ಹಸಿರಾಗಿ ಮಧ್ಯಮ ಗಾತ್ರದ್ದಾಗಿರುತ್ತದೆ. ಇಳುವರಿ ಪ್ರತಿ ಹೆಕ್ಟೇರಿಗೆ 250-300 ಕಿ.ಗ್ರಾಂ (ಒಣ ಏಲಕ್ಕಿ).
ಮೂಡಿಗೆರೆ-2 : ಈ ತಳಿ ಮೂಡಿಗೆರೆ-1 ಕ್ಕಿಂತ ಶೇ. 30 ರಷ್ಟು ಹೆಚ್ಚು ಇಳುವರಿ ಕೊಡುತ್ತದೆ. (350-400 ಕಿ.ಗ್ರಾಂ ಪ್ರತಿ ಹೆಕ್ಟೇರಿಗೆ) ಇದರ ಇಳುವರಿಯ ಸಾಮರ್ಥ್ಯ 238-848 ಕಿ.ಗ್ರಾಂ. ಪ್ರತಿ ಹೆಕ್ಟೇರಿಗೆ. ಈ ಇಳುವರಿಯು ಮಳೆಯ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ.
ಇತ್ತೀಚಿಗೆ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ, ಕ್ಯಾಲಿಕಟ್ ರವರು ಕರ್ನಾಟಕ ಪ್ರದೇಶಕ್ಕೆ ಬಿಡುಗಡೆ ಮಾಡಿರುವ ತಳಿಗಳ ವಿವರ ಕೆಳಗಿನಂತಿವೆ.
ಸುವಾಸಿನಿ (ಸಿ.ಸಿ.ಎಸ್.-1) : ಏಲಕ್ಕಿ ಬೆಳೆಯುವ ಕಾರ್ನಾಟಕದ ಎಲ್ಲಾ ಪ್ರದೇಶಗಳಲ್ಲಿ ಕೃಷಿ ಮಾಡಬಹುದು. ಒಣ ಏಲಕ್ಕಿ ಇಳುವರಿ ಪ್ರತಿ ಹೆಕ್ಟೇರಿಗೆ 409-745 ಕಿ.ಗ್ರಾಂ ಒಣ ಇಳುವರಿ ಶೇ. 22 ತೈಲದಿಂದ ಶೇ. 8.7 ರಷ್ಟಿರುತ್ತದೆ. ಥ್ರಿಪ್ಸ್ ಬಾಧೆಯನ್ನು ಸಹಿಸುವ ಶಕ್ತಿಯಿದೆ.
ಅವಿನಾಶ್ (ಆರ್.ಆರ್-1) : ಒಣ ಏಲಕ್ಕಿ ಇಳುವರಿ ಪ್ರತಿ ಹೆಕ್ಟೇರಿಗೆ 847 ಕಿ.ಗ್ರಾಂ ಹಾಗೂ ಒಣ ಇಳುವರಿ ಶೇ. 20.8 ತೈಲದಂಶ ಶೇ. 6.7 ರಷ್ಟಿರುತ್ತದೆ. ಕರ್ನಾಟಕದ ಏಲಕ್ಕಿ ಬೆಳೆಯುವ ಪ್ರದೇಶಕ್ಕೆ ಸೂಕ್ತ. ಕಂದು ಕೊಳೆರೋಗ ಹಾಗೂ ಗುಪ್ತ ಕಾಂಡ ಕೊರೆಯುವ ಹುಳುವಿನ ಬಾಧೆ ಸಹಿಸುವ ಶಕ್ತಿ ಹೊಂದಿದೆ.
ವಿಜೇತ-1 : ಒಣ ಏಲಕ್ಕಿ ಇಳುವರಿ ಪ್ರತಿ ಹೆಕ್ಟೇರಿಗೆ 643 ಕಿ.ಗ್ರಾಂ ಒಣ ಇಳುವರಿ ಶೇ. 22 ಮತ್ತು ತೈಲದಂಶ 7.9 ರಷ್ಟನ್ನು ಹೊಂದಿದೆ. ಅಧಿಕ ಸಾಂದ್ರತೆ ಕೃಷಿಗೆ ಸೂಕ್ತ.
ಎಸ್.ಕೆ.ಪಿ.-14 : ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆ, ಸಕಲೇಶಪುರ ಪ್ರಾಂತ್ಯದವರು ಕಾರ್ನಾಟಕಕ್ಕೆ ಬಿಡುಗಡೆ ಮಾಡಿರುವ ತಳಲಿ. ಈ ತಳಿಯು ಪ್ರತಿ ಹೆಕ್ಟೇರಿಗೆ 430 ಕಿ.ಗ್ರಾಂ ಒಣ ಏಲಕ್ಕಿ ಇಳುವರಿ ಕೊಡುವ ಶಕ್ತಿಯಿದೆ.
ವಿವರಗಳು |
ಪ್ರತಿ ಹೆಕ್ಟೇರಿಗೆ |
ಸಸಿಗಳು (1.8 ಮೀ. x 1.8 ಮೀ.) |
3086 |
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 10 ಕಿ.ಗ್ರಾಂ ಪ್ರತಿ ಗಿಡಕ್ಕೆ |
30 ಟನ್‌ಗಳು |
ಸಸ್ಯಾಭಿವೃದ್ಧಿ : ಏಲಕ್ಕಿಯನ್ನು ಬೀಜ, ಮರಿಕಂದುಗಳಿಂದ ಹಾಗೂ ಅಂಗಾಂಶ ಕೃಷಿ ವಿಧಾನದಿಂದ ಅಭಿವೃದ್ಧಿಪಡಿಸಬಹುದು.
ಸಸಿಮಡಿ ತಯಾರಿಕೆ : ನೀರು ಬಸಿದು ಹೋಗುವಂತಹ ಇಳಿಜಾರಾದ ಪ್ರದೇಶವನ್ನು ಆಯ್ಕೆ ಮಾಡಿ. 1 ಮೀ. ಅಗಲ, 5 ಮೀ. ಉದ್ದ, 25 ಸೆಂ.ಮೀ. ಎತ್ತರದ ಸಸಿಮಡಿ ತಯಾರಿಸಿ ಅದರ ಮೇಲೆ ಕಾಂಪೋಸ್ಟ್ ಅಥವಾ ಫಲವತ್ತಾದ ಮಣ್ಣನ್ನು ತೆಳುವಾಗಿ ಹರಡಬೇಕು. ಸಸಿಮಡಿಯನ್ನು ಫಾರ್ಮಲಿನ್ ದ್ರಾವಣದಿಂದ (1 ಭಾಗ ಶೇ. 40 ರ ಫಾರ್ಮಾಲಿನ್‌ಡಿಹೈಡ್‌ಗೆ 50 ಭಾಗ ನೀರು) ಬಿತ್ತನೆಗೆ ಒಂದು ವಾರ ಮುಂಚಿತವಾಗಿ ಉಪಚರಿಸಿ 1 ಅಥವಾ 2 ದಿವಸಗಳವರೆಗೆ ಪಾಲಿಥೀನ್ ಹಾಳೆಗಳಿಂದ ಹೊದಿಸಬೇಕು. 1 ಸಸಿಮಡಿ ಉಪಚರಿಸಲು 40 ರಿಂದ 50 ಲೀಟರ್ ಫಾರ್ಮಲಿನ್ ದ್ರಾವಣ ಬೇಕಾಗುತ್ತದೆ.
ಬೀಜಗಳ ಆಯ್ಕೆ ಮತ್ತು ಬೀಜೋಪಚಾರ: ಹೆಚ್ಚು ಇಳುವರಿ ಕೊಡುವ ಹಾಗೂ ರೋಗಮುಕ್ತ ತೋಟಗಳಿಂದ ಬೀಜಗಳನ್ನು ಆಯ್ಕೆ ಮಾಡಿ. ಎರಡನೇ ಕೊಯ್ಲಿನ (ಸೆಪ್ಟೆಂಬರ್ ಮೊದಲನೆ ವಾರದಿಂದ ಅಕ್ಟೋಬರ್ ಎರಡನೇ ವಾರದವರೆಗೆ) ಬಲಿತ ಬೀಜಗಳನ್ನು ಆಯ್ಕೆ ಮಾಡಿ. ಆಗ ತಾನೇ ಬೇರ್ಪಡಿಸಿದ ಬೀಜಗಳನ್ನು ಶೇ. 25ರ ನೈಟ್ರಿಕ್ ಆಮ್ಲದಲ್ಲಿ ನೆನೆಸಿ. ಆಗಿಂದಾಗ್ಗೆ ಬೀಜಗಳನ್ನು ಕಲುಕುತ್ತಾ ನಂತರ ನೀರಿನಲ್ಲಿ 2-3 ಸಲ ತೊಳೆದು ನೆರಳಿನಲ್ಲಿ ಒಣಗಿಸಿ. ಅನಂತರ ಸಸಿಮಡಿಗಳಲ್ಲಿ ಬಿತ್ತನೆ ಮಾಡಿ.
ಪ್ರಾಥಮಿಕ ಸಸಿಮಡಿ : ಬೀಜಗಳನ್ನು 15 ಸೆಂ.ಮೀ. ಸಾಲುಗಳಲ್ಲಿ 1 ರಿಂದ 2 ಸೆಂ.ಮೀ. ಆಳದಲ್ಲಿ ಪ್ರತಿ ಸಾಲಿನಲ್ಲಿ 50 ರಿಂದ 60 ಬೀಜಗಳು ಇರುವಂತೆ ಬಿತ್ತನೆ ಮಾಡಬೇಕು. ಒಂದು ಹೆಕ್ಟೇರ್ ಪ್ರದೇಶಕ್ಕೆ 100 ರಿಂದ 150 ಗ್ರಾಂ ಉಪಚರಿಸಿದ ಬೀಜಗಳು ಬೇಕಾಗುತ್ತವೆ. ಅನಂತರ ಮರಳು ಅಥವಾ ಮಣ್ಣಿನಿಂದ ಸಾಲುಗಳನ್ನು ತೆಳುವಾಗಿ ಮುಚ್ಚಿ, ಅದರ ಮೇಲೆ ಒಂದು ಪದರ ಬತ್ತದ ಹುಲ್ಲು ಅಥವಾ ಯೋಗ್ಯವಾದ ವಸ್ತುವಿನಿಂದ ಹೊದಿಕೆ ಮಾಡಬೇಕು. ಪ್ರತಿದಿನ ತಪ್ಪದೇ ನೀರು ಕೊಡಬೇಕು. ಬಿತ್ತನೆಯಾದ 30 ರಿಂದ 35 ದಿನಗಳ ಅನಂತರ ಶೇ. 75 ಕ್ಕಿಂತ ಹೆಚ್ಚಿನ ಬೀಜಗಳು ಮೊಳಕೆಯೊಡೆಯುವ್ರದು ಕಂಡುಬಂದಾಗ ಹೊದಿಕೆಯನ್ನು ತೆಗೆಯಿರಿ. ಅನಂತರ, ಸಸಿಗಳಿಗೆ ನೆರಳನ್ನು ನೀಡಿ ಪ್ರತಿ ಸಸಿಮಡಿಗೆ 100 ಗ್ರಾಂ ಸಂಯುಕ್ತ ರಸಗೊಬ್ಬರ ಹಾಕಿ, ಸಸಿಗಳನ್ನು 10 ವಾರಗಳ ನಂತರ ಎರಡನೇ ಸಸಿಮಡಿಯಲ್ಲಿ ನಾಟಿ ಮಾಡಿ.
ಎರಡನೇ ಸಸಿಮಡಿ : 5 ಮೀ. ಉದ್ದ x 1 ಮೀ. ಅಗಲ x 25 ಸೆಂ.ಮೀ ಎತ್ತರದ 8 ರಿಂದ 10 ಸಸಿಮಡಿ ತಯಾರಿಸಿ. ಸಸಿಗಳನ್ನು 22x15 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಿ. ವಾರಕ್ಕೆ ಎರಡು ಸಲ ನೀರು ಕೊಡಿ. ಪ್ರತಿ ಸಸಿಮಡಿಗೆ 100, 200, 300 ಮತ್ತು 400 ಗ್ರಾಂ ಗೊಬ್ಬರದ ಮಿಶ್ರಣ (ಕ್ರಮವಾಗಿ ಯೂರಿಯಾ, ಸೂಪರ್ ಫಾಸ್ಫೇಟ್ ಮತ್ತು ಮ್ಯೂರಿಯೆಟ್ ಆಫ್ ಪೊಟ್ಯಾಷ್ ಅನ್ನು 1:3:1 ಪ್ರಮಾಣದಲ್ಲಿ) 1,2,3 ಮತ್ತು 4 ತಿಂಗಳುಗಳಲ್ಲಿ ಒದಗಿಸಿ, 5 ನೇ ತಿಂಗಳಿನ ನಂತರ 500 ಗ್ರಾಂ ಗೊಬ್ಬರದ ಮಿಶ್ರಣವನ್ನು ಪ್ರತಿ ತಿಂಗಳು ನಾಟಿಮಾಡುವ ತನಕ ಕೊಡಿ.
ಸಸಿಗಳಿಗೆ 10 ರಿಂದ 15 ಕೆ. ಲಕ್ಸ್. ಬೆಳಕು ಬೇಕಾಗುತ್ತದೆ. ಇದನ್ನು ತೆಂಗಿನ ಗರಿ ಅಥವಾ ಹೆಣೆದ ನಾರಿನ ಚಾಪೆಯ ಹೊದಿಕೆಯಿಂದ ಒದಗಿಸಬಹುದು.
ಅಕ್ಟೋಬರ್ ನಂತರ ಸಸಿಮಡಿ ಮಾಡುವ್ರದಾದರೆ ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ.
ನಾಟಿ ಮಾಡುವ್ರದು: 60x60x45 ಸೆಂ. ಮೀ. ಅಳತೆಯ ಗುಣಿಗಳನ್ನು ಸಮಪಾತಳಿ ರೇಖೆಗನುಗುಣವಾಗಿ ತೆಗೆಯಿರಿ. ಅವ್ರಗಳನ್ನು ಕೊಟ್ಟಿಗೆ ಗೊಬ್ಬರ ಮತ್ತು ಮೇಲ್ಮಣ್ಣಿನ ಮಿಶ್ರಣದಿಂದ ತುಂಬಿ. ಸಸಿಗಳನ್ನು ಗುಣಿಗಳ ಮಧ್ಯದಲ್ಲಿ ನಾಟಿ ಮಾಡಿ ಕೋಲಿನಿಂದ ಆಧಾರ ಕೊಡಬೇಕು. ಕಂದುಗಳನ್ನು ಬಳಸುವ್ರದಾದರೆ 8 ರಿಂದ 10 ಸೆಂ.ಮೀ. ಉದ್ದದ ಕೊಂಬುಗಳನ್ನು ಬಳಸಿ. ಕೊಂಬುಗಳನ್ನು ಶಿಲೀಂದ್ರನಾಶಕ ದ್ರಾವಣದಲ್ಲಿ (ಶೇ. 0.2 ಕ್ಯಾಪ್ಟಾನ್‌ನಲ್ಲಿ) ಅದ್ದಿ ನಾಟಿ ಮಾಡಬೇಕು.
ಗೊಬ್ಬರ ಹಾಕುವಿಕೆ: ಮೊದಲನೇ ವರ್ಷ ಪ್ರತಿ ಹೆಕ್ಟೇರಿಗೆ 38 ಕಿ.ಗ್ರಾಂ ಸಾರಜನಕ, 38 ಕಿ.ಗ್ರಾಂ ರಂಜಕ ಮತ್ತು 75 ಕಿ.ಗ್ರಾಂ ಪೊಟ್ಯಾಷ್ ಗೊಬ್ಬರಗಳನ್ನು ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ ಒದಗಿಸಿ. ಎರಡನೇ ವರ್ಷದ ನಂತರ ಪ್ರತಿ ಹೆಕ್ಟೇರಿಗೆ ೭೫:೧೫೦ ಕಿ.ಗ್ರಾಂ ರಸಗೊಬ್ಬರವನ್ನು ಎರಡು ಕಂತುಗಳಲ್ಲಿ ಮೇ-ಜೂನ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಒದಗಿಸಿ ಪ್ರತಿ ಗಿಡಕ್ಕೆ 10 ಕಿ.ಗ್ರಾಂ ಕೊಟ್ಟಿಗೆಗೊಬ್ಬರವನ್ನು ರಸಗೊಬ್ಬರ ಹಾಕುವ್ರದಕ್ಕೆ 2 ವಾರ ಮುಂಚೆ ಕೊಡಿ. ಪ್ರತಿ ಎರಡು ವರ್ಷಕ್ಕೊಮ್ಮೆ ಹೆಕ್ಟೇರ್ ಒಂದಕ್ಕೆ 2 ರಿಂದ 3 ಟನ್ ಸುಣ್ಣವನ್ನು ಮಣ್ಣಿನ ಪರೀಕ್ಷೆ ಆಧಾರದ ಮೇಲೆ ಒದಗಿಸಿ.
ರಾಸಾಯನಿಕ ಗೊಬ್ಬರಗಳು |
|
ಮೊದಲನೇ ವರ್ಷ |
|
ಸಾರಜನಕ |
38 ಕಿ.ಗ್ರಾಂ |
ರಂಜಕ |
38 ಕಿ.ಗ್ರಾಂ |
ಪೊಟ್ಯಾಷ್ |
75 ಕಿ.ಗ್ರಾಂ |
ಎರಡನೇ ವರ್ಷ ಮತ್ತು ಪ್ರತಿ ವರ್ಷ |
|
ಸಾರಜನಕ |
75 ಕಿ.ಗ್ರಾಂ |
ರಂಜಕ |
75 ಕಿ.ಗ್ರಾಂ |
ಪೊಟ್ಯಾಷ್ |
150 ಕಿ.ಗ್ರಾಂ |
ಡಿಸೆಂಬರ್‌ನಿಂದ ಮೇ ತಿಂಗಳ ಅವಧಿಯಲ್ಲಿ ಮಣ್ಣು ಮತ್ತು ಹವಾಗುಣವನ್ನು ಆಧರಿಸಿ 7-15 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಹನಿ ನೀರಾವರಿ ಪದ್ಧತಿಯಿಂದ ಪ್ರತಿದಿನ ಗಿಡವೊಂದಕ್ಕೆ 4 ರಿಂದ 5 ಲೀಟರ್ ನೀರಿನ್ನು ಒದಗಿಸಬೇಕು. ಸಿಂಚನ ನೀರಾವರಿ ಪದ್ಧತಿಯನ್ನು ಅನುಸರಿಸುವ್ರದು ಸಹ ಪರಿಣಾಮಕಾರಿ. ಗಿಡಗಳ ಬುಡವನ್ನು ಕಳೆ ತೆಗೆದು ಸ್ವಚ್ಛವಾಗಿಡಬೇಕು. ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳನ್ನು ಮೇ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ, ಎರಡು ಸಮಪ್ರಮಾಣದಲ್ಲಿ ಗಿಡಗಳ ಬುಡದ ಸುತ್ತ ವರ್ತುಲಾಕಾರದಲ್ಲಿ ಹಾಕಬೇಕು. ಗಿಡಗಳ ಸುತ್ತ ಬೇಸಿಗೆಯಲ್ಲಿ ಎಲೆಗಳ ಹೊದಿಕೆಯನ್ನು ಹೊದಿಸಬೇಕು. ವರ್ಷಕ್ಕೊಮ್ಮೆ ಮೇ ತಿಂಗಳಿನಲ್ಲಿ ಹಳೆಯ ಕಾಂಡಗಳನ್ನು ಮತ್ತು ಎಲೆಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಏಪ್ರಿಲ್-ಮೇ ತಿಂಗಳುಗಳಲ್ಲಿ ಹೂ ಗೊಂಚಲುಗಳನ್ನು ಎಲೆಗಳ ಹೊದಿಕೆಯಿಂದ ಹೊರತೆಗೆದು, ಜೇನು ಹುಳುಗಳು ಪರಾಗಸ್ವರ್ಶಕ್ಕೆ ಬರಲು ಅನುಕೂಲವಾಗುವಂತೆ ಮಾಡಬೇಕು. ಹೆಕ್ಟೇರಿಗೆ 3 ರಿಂದ 4 ಜೇನು ಪೆಟ್ಟಿಗೆಗಳನ್ನು ಇಡುವ್ರದು ಉತ್ತಮ.
ರೋಗಗಳು: ಅ) ಸಸಿಮಡಿಗಳಲ್ಲಿ : ಬೇರು ಜಂತುಗಳು, ಕೊಳೆಯುವಿಕೆ, ಸಸಿ ಕೊಳೆರೋಗ ಮತ್ತು ಎಲೆ ಚುಕ್ಕೆ ರೋಗ.
ಆ) ತೋಟಗಳಲ್ಲಿ: ಕಟ್ಟೆ ರೋಗ, ಕಂದು ಕೊಳೆರೋಗ, ಎಲೆ ಚುಕ್ಕೆ ರೋಗ, ಗೊಂಚಲು ಕೊಳೆ ರೋಗ, ತುಕ್ಕು ರೋಗ, ಕೊಕ್ಕೆ ಕಂದು ರೋಗ, ಹಣ್ಣು ಕೊಳೆ ರೋಗ.
ರೋಗಗಳನ್ನು ಹತೋಟಿ ಮಾಡಲು ಅನುಸರಿಸಬೇಕಾದ ಕ್ರಮಗಳು
ಅ) ಸಸಿಮಡಿಗಳಲ್ಲಿ
ಆ) ತೋಟಗಳಲ್ಲಿ
ಕಟ್ಟೆರೋಗ ಹತೋಟಿಮಾಡುವ ಕ್ರಮ:
ಏಲಕ್ಕಿ ಬೆಳೆಯಲ್ಲಿ ಕಟ್ಟೆ ರೋಗ ಬಹಳ ನಷ್ಟವನ್ನುಂಟುಮಾಡುವ ರೋಗವಾಗಿದೆ. ಪ್ರಕೃತಿಯಲ್ಲಿ ಕಟ್ಟೆ ರೋಗವ್ರ ಸಸ್ಯ ಹೇನಿನ ಮೂಲಕ ಮತ್ತು ಈ ರೋಗಕ್ಕೆ ತುತ್ತಾದ ಕಂದುಗಳನ್ನು ನಾಟಿಗೆ ಬಳಸುವ್ರದರಿಂದ ಹರಡುತ್ತದೆ. ಈ ರೋಗವನ್ನು ಈ ಕೆಳಗಿನ ಕ್ರಮಗಳಿಂದ ಹತೋಟಿ ಮಾಡಬಹುದು.
ಅ) ಹೊಸ ತೋಟಗಳನ್ನು ಆಭಿವೃದ್ಧಿಪಡಿಸುವಾಗ
ಆ) ಅಭಿವೃದ್ಧಿಪಡಿಸಿದ ತೋಟಗಳಲ್ಲಿ
ತೋಟದಲ್ಲಿ ರೋಗಕ್ಕೆ ತುತ್ತಾದ ಗಿಡಗಳನ್ನು ಗುರುತಿಸಿ.
ಕೀಟಗಳು: ಬುಡ ಕತ್ತರಿಸುವ ಹುಳು, ಕಾಯಿ ಕೊರೆಯುವ ಹುಳು, ಥ್ರಿಪ್ಸ್, ಕುಡಿ ಕೊರೆಯುವ ಹುಳು, ಸುಳಿ ನೊಣ, ಕೂದಲು ಕಂಬಳಿ ಹುಳು, ಇಲಿ ಮತ್ತು ಅಳಿಲು.
ಕೀಟಗಳನ್ನು ಹತೋಟಿ ಮಾಡಲು ಅನುಸರಿಸಬೇಕಾದ ಕ್ರಮಗಳು:
ಮೂಲ : : ಆಗ್ರೋಪೀಡಿಯ
ಕೊನೆಯ ಮಾರ್ಪಾಟು : 6/8/2020