ಗುಲಾಬಿಯು ಅತಿ ಮಹತ್ವದ ಹೂ ಬೆಳೆಗಳಲ್ಲೊಂದು. ಗುಲಾಬಿಯನ್ನು ಕತ್ತರಿಸಿದ ಹೂವಿಗೊಸ್ಕರ, ಅಲಂಕಾರಕ್ಕಾಗಿ, ಹೂ ಮಡಿಗಳಲ್ಲಿ ಹಾಗೂ ಉದ್ಯಾನಗಳಲ್ಲಿ ಸೌಂದರ್ಯಕ್ಕಾಗಿ ಬೆಳೆಯುತ್ತಾರೆ. ಸುಗಂಧದ್ರವ್ಯ ಹಾಗೂ ಗುಲ್‌ಕನ್ ತಯಾರಿಕೆಯಲ್ಲಿ ಈ ಹೂಗಳಿಗೆ ಬೇಡಿಕೆಯಿದೆ.
ತಂಪಾದ ಒಣ ಹವೆ ಈ ಬೆಳೆಗೆ ಒಳ್ಳೆಯದು. ಚೆನ್ನಾಗಿ ಬೆಳಕು ಮತ್ತು ಬಿಸಿಲು ಬೀಳುವಂತಹ ತೆರೆದ ಪ್ರದೇಶಗಳಲ್ಲಿ ಗುಲಾಬಿ ಬೆಳೆಯಬಹುದು. ಬೆಳೆ ನಾಟಿಗೆ ಜೂನ್-ಅಕ್ಟೋಬರ್ ತಿಂಗಳುಗಳು ಅತಿ ಸೂಕ್ತ.
ಗುಲಾಬಿ ಬೇಸಾಯಕ್ಕೆ ಆಳವಾದ, ಚೆನ್ನಾಗಿ ನೀರು ಬಸಿದು ಹೋಗುವಂತಹ, 5.3 ರಿಂದ 5.8 ರಸಸಾರವ್ರಳ್ಳ ಕೆಂಪು ಗೋಡು ಮಣ್ಣು ಅತಿ ಸೂಕ್ತ.
ಕ್ವೀನ್ ಎಲಿಜೆಬೆತ್, ಸೂಪರ್ ಸ್ಟಾರ್, ವೈಟ್ ಕ್ರಿಸ್‌ಮಸ್, ಕ್ರಿಶ್ಚಿಯನ್ ಡಿಯೊರ್, ಗ್ಲೇಡಿಯೇಟರ್, ಚೆರಿಸ್ಮ, ಹ್ಯಾಪಿನೆಸ್ ಪ್ರಮುಖವಾದ ತಳಿಗಳು. ಇದಲ್ಲದೆ ಹೂಗಳ ಬಣ್ಣ, ಆಕಾರ ಇತ್ಯಾದಿ ಆಧಾರಗಳ ಮೇಲೆ ಹಲವಾರು ತಳಿಗಳು ಲಭ್ಯವಿವೆ.
ನಾಟಿ ಮಾಡುವ್ರದು: ಭೂಮಿಯನ್ನು ಆಳವಾಗಿ ಉಳುಮೆ ಮಾಡಿ ಹದಗೊಳಿಸಿ 45 ಘನ ಸೆಂ.ಮೀ. ಗಾತ್ರದ ಗುಣಿಗಳನ್ನು 75x75 ಸೆಂ.ಮೀ. ಅಂತರದಲ್ಲಿ ಸಂಕರಣ ತಳಿಗಳಿಗೆ ಹಾಗೂ 60x60 ಸೆಂ.ಮೀ. ಎರಡು ಕಿ.ಗ್ರಾಂ ಉತ್ತಮ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಗುಣಿಗೆ ತುಂಬಿ ಕಣ್ಣು ಹಾಕಿದ ಭಾಗವ್ರ ಸುಮಾರು 15 ಸೆಂ.ಮೀ. ನಷ್ಟು ಭೂಮಿಯಿಂದ ಮೇಲಿರುವಂತೆ ನಾಟಿ ಮಾಡಿ ಅವ್ರಗಳಿಗೆ ಕೋಲಿನ ಆಸರೆ ಕೊಟ್ಟು ಅಲುಗಾಡದಂತೆ ನೋಡಿಕೊಳ್ಳಬೇಕು. ಒಂದು ಹೆಕ್ಟೇರಿಗೆ ಬೇಕಾಗುವ ಕಸಿ ಮಾಡಿದ ಗಿಡಗಳ ಪ್ರಮಾಣ ಹೀಗಿದೆ 1 ಮೀ. x 1 ಮೀ. : 10,000, 75 x 75 ಸೆಂ.ಮೀ. : 13,333 60 x 60 ಸೆಂ.ಮೀ. : 20,800.
ಗೊಬ್ಬರ ಬಳಕೆ |
ಪ್ರತಿ ಗಿಡಕ್ಕೆ |
ಸಾರಜನಕ |
10 ಗ್ರಾಂ |
ರಂಜಕ |
10 ಗ್ರಾಂ |
ಪೊಟ್ಯಾಷ್ |
15 ಗ್ರಾಂ |
ಬೇವಿನ ಹಿಂಡಿ |
150 ಗ್ರಾಂ |
ಕೊಟ್ಟಿಗೆ ಗೊಬ್ಬರ |
10 ಕಿ.ಗ್ರಾಂ |
ಶಿಫಾರಸ್ಸು ಮಾಡಿದ ಗೊಬ್ಬರಗಳ ಅರ್ಧ ಪ್ರಮಾಣವನ್ನು ಸವರಿಕೆಯ ಸಮಯದಲ್ಲಿ ಹಾಗೂ ಇನ್ನುಳಿದ ಅರ್ಧ ಪ್ರಮಾಣವನ್ನು ಗಿಡಗಳನ್ನು ಸವರಿದ ಒಂದೂವರೆ ತಿಂಗಳ ನಂತರ ಒದಗಿಸಬೇಕು.
ಮಾರುಕಟ್ಟೆಯಲ್ಲಿ ದೊರೆಯುವ ಗುಲಾಬಿ ಮಿಶ್ರಣವನ್ನು ಗಿಡಗಳನ್ನು ಸವರಿದ ಒಂದು ವಾರದ ನಂತರ ಪ್ರತಿ ಗಿಡಕ್ಕೆ 100 ಗ್ರಾಂಗಳಷ್ಟು ಒದಗಿಸಬೇಕು. ಲಘು ಪೋಷಕಾಂಶಗಳ ಮಿಶ್ರಣವನ್ನು (1.5-2 ಗ್ರಾಂ/ಲೀ.) ತಿಂಗಳಿಗೊಮ್ಮೆ ಸಿಂಪಡಿಸುವ್ರದು ಉತ್ತಮ. ನಿಯಮಿತವಾಗಿ ಕಳೆ ತೆಗೆದು ಪಾತಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
ಬೆಳೆಗೆ ಪ್ರತಿ 4-6 ದಿನಗಳಿಗೊಮ್ಮೆ ಮಣ್ಣು ಮತ್ತು ಹವಾಗುಣವನ್ನು ಅನುಸರಿಸಿ ನೀರು ಒದಗಿಸಬೇಕು.
ರೋಗಗಳು: ಟೊಂಗೆ ಒಣಗು ರೋಗ, ಬೂದಿರೋಗ ಹಾಗೂ ಕಪ್ಪು ಎಲೆ ಚುಕ್ಕೆ ರೋಗ.
ಕೀಟಗಳು: ಗೆದ್ದಲು, ಹೂ ತಿನ್ನುವ ದುಂಬಿ, ಮೊಗ್ಗು ಕೊರೆಯುವ ಹುಳ, ಥ್ರಿಪ್ಸ್, ಹೇನು ಹಾಗೂ ಜೇಡರ ನುಸಿ.
ಗಿಡಗಳನ್ನು ಸವರಿದ 45-60 ದಿನಗಳಲ್ಲಿ ಹೂಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಹೂವಿನ ಹೊರದಳ ತೆರೆದ ಕೂಡಲೇ 25-30 ಸೆಂ.ಮೀ. ಕಾಂಡದೊಂದಿಗೆ ಅದನ್ನು ಕಟಾವ್ರ ಮಾಡಬೇಕು. ಬೆಳಗಿನ ಜಾವ ಅಥವಾ ಸಾಯಂಕಾಲ ವೇಳೆಯಲ್ಲಿ ಕೊಯ್ಲು ಮಾಡಿ ನೀರು ತುಂಬಿರುವ ಬಕೇಟಿನಲ್ಲಿ ಶೇಖರಿಸಿಡಬೇಕು.
ಒಂದು ಹೆಕ್ಟೇರ್ ಪ್ರದೇಶದಿಂದ ಪ್ರತಿ ವರ್ಷಕ್ಕೆ 2 ಲಕ್ಷದಿಂದ 2.5 ಲಕ್ಷ ಹೂಗಳ ಇಳುವರಿ ಪಡೆಯಬಹುದು.
ಮೂಲ : ಆಗ್ರೋಪೀಡಿಯ
ಕೊನೆಯ ಮಾರ್ಪಾಟು : 1/15/2020