ಪಾಲಕ್ ದೇಹ ಪೋಷಣೆಗೆ ಬೇಕಾದ ಎ ಮತ್ತು ಸಿ ಅನ್ನಾಂಗಗಳ ಮತ್ತು ಕೆಲವ್ರ ಖನಿಜ ಲವಣಾಂಶಗಳ ಸಂಪದ್ಭರಿತ ಮೂಲವಾಗಿದೆ.
ಸೆಪ್ಟೆಂಬರ್‌ನಿಂದ ನವೆಂಬರ್ ತಿಂಗಳುಗಳು ಈ ಬೆಳೆಯನ್ನು ಪ್ರಾರಂಭಿಸಲು ಸೂಕ್ತವಾದ ಕಾಲ.
ಈ ಬೆಳೆಯನ್ನು ನೀರು ಬಸಿದು ಹೋಗುವಂತಹ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನು ಹೊಂದಿರುವಂತಹ ಎಲ್ಲಾ ತರಹದ ಫಲವತ್ತಾದ ಮಣ್ಣುಗಳಲ್ಲಿ ಬೆಳೆಯಬಹುದು.
ಕ್ರ.ಸಂ |
ವಿವರಗಳು |
ಹೆಕ್ಟೇರಿಗೆ |
1. |
ಬೀಜ |
15-20 ಹೆಕ್ಟೇರಿಗೆ |
ಭೂಮಿಯನ್ನು ಹದ ಮಾಡಿದ ನಂತರ 2-3 ಮೀ. x 1-2 ಮೀ. ಉದ್ದಗಲದ ಸಸಿ ಮಡಿಗಳನ್ನು ತಯಾರಿಸಬೇಕು. ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ ಹಾಗೂ ರಸಗೊಬ್ಬರಗಳನ್ನು ಮಡಿಗೆ ಕೊಟ್ಟು ಚೆನ್ನಾಗಿ ಬೆರಸಬೇಕು. ನಂತರ ಬೀಜಗಳನ್ನು 10 ಸೆಂ.ಮೀ. ಸಾಲುಗಳಲ್ಲಿ ಬಿತ್ತಬೇಕು. ಬೀಜಗಳು ಮೊಳಕೆ ಒಡೆಯುವತನಕ ತುಂತುರು ಜಾಡಿಯ ಮೂಲಕ ನೀರು ಹಾಕಬೇಕು.
ಕ್ರ.ಸಂ |
ವಿವರಗಳು |
ಹೆಕ್ಟೇರಿಗೆ |
1. |
ಕೊಟ್ಟಿಗೆ ಗೊಬ್ಬರ |
20-25 ಟನ್ |
2. |
ರಸಾಯನಿಕ ಗೊಬ್ಬರಗಳು |
|
|
ಸಾರಜನಕ |
150 ಕಿ.ಗ್ರಾಂ |
|
ರಂಜಕ |
100 ಕಿ.ಗ್ರಾಂ |
|
ಪೊಟ್ಯಾಷ್ |
100 ಕಿ.ಗ್ರಾಂ |
ಬೀಜಗಳು ಮೊಳಕೆಯೊಡೆದ ನಂತರ 4-5 ದಿವಸಗಳಿಗೊಮ್ಮೆ ನೀರು ಹಾಯಿಸಬೇಕು. ಮಡಿಗಳಲ್ಲಿ ಕಳೆಗಳು ಬೆಳೆಯದಂತೆ ಕಾಳಜಿ ವಹಿಸಬೇಕು.
ರೋಗಗಳು: ಸರ್ಕೋಸ್ಪೊರಾ ಎಲೆ ಚುಕ್ಕೆ ರೋಗ ಮತ್ತು ತುಕ್ಕು ರೋಗ.
ಎಲೆ ಚುಕ್ಕೆ ರೋಗ ಮತ್ತು ತುಕ್ಕು ರೋಗ ಕಂಡಾಗ 2 ಗ್ರಾಂ ಮ್ಯಾಂಕೋಜೆಬ್ ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪರಿಸಬೇಕು.
ಕೀಟಗಳು: ಹೇನು ಮತ್ತು ಎಲೆ ತಿನ್ನುವ ಹುಳು.
ಸೊಪ್ಪಿನಲ್ಲಿ ಕೀಟ ಬಾಧೆ ಕಂಡು ಬಂದಾಗ 2 ಮಿ.ಲೀ. ಮೆಲಾತಿಯಾನ್ ಅಥವಾ 4 ಗ್ರಾಂ ಕಾರ್ಬಾರಿಲ್ 1 ಲೀಟರ್ ನೀರಿಗೆ ಬೆರಸಿ ಸಿಂಪಡಿಸಿರಿ.
ಬಿತ್ತಿದ 30-40 ದಿವಸಗಳಲ್ಲಿ ಬೆಲೆ ಮೊದಲು ಕಟಾವಿಗೆ ಬರುತ್ತದೆ. 3 ತಿಂಗಳ ಅಂತರದಲ್ಲಿ ಮುರು ಬಾರಿ ಕಟಾವ್ರ ಮಾಡಬಹುದು.
ಪ್ರತಿ ಹೆಕ್ಟೇರಿಗೆ 10 ಟನ್ ಸೊಪ್ಪಿನ ಇಳುವರಿ ಪಡೆಯಬಹುದು.
ಮೂಲ : ಆಗ್ರೋಪೀಡಿಯ
ಕೊನೆಯ ಮಾರ್ಪಾಟು : 1/28/2020