ಬರ್ಡ್‌ಆಫ್ ಪ್ಯಾರಡೈಸ್ ಒಂದು ವಿಶಿಷ್ಟ ಹೂವಾಗಿದ್ದು, ಇದನ್ನು ಕತ್ತರಿಸಿದ ಹೂವ್ರ, ಹೂವಿನ ಅಲಂಕಾರಗಳಿಗಾಗಿ ಹಾಗೂ ಉದ್ಯಾನಗಳಲ್ಲಿ ಬೆಳೆಯಲಾಗುತ್ತಿದೆ.
ಇದನ್ನು ಎಲ್ಲ ವಿಧದ ಮಣ್ಣಿನಲ್ಲಿ ಬೆಳೆಯಬಹುದಾಗಿದ್ದು, ಫಲವತ್ತಾದ ಕೆಂಪು ಗೋಡು ಮಣ್ಣು ಈ ಬೆಳೆಗೆ ಹೆಚ್ಚು ಸೂಕ್ತ.
ಇದೊಂದು ಬಹುವಾರ್ಷಿಕ ಸಸ್ಯವಾಗಿದ್ದು, ತಂಪಾದ ಒಣ ಹವೆ ಈ ಬೆಳೆಗೆ ಬಹಳ ಉತ್ತಮವಾದುದು. ಚೆನ್ನಾಗಿ ಬೆಳಕು ಮತ್ತು ಬಿಸಿಲು ಇರುವ ಪ್ರದೇಶವ್ರ ಈ ಬೆಳೆಗೆ ಪೂರಕವಾದುದು. ಬೆಳೆ ನಾಟಿಗೆ ಜೂನ್ - ಅಕ್ಟೋಬರ್ ಅತಿ ಸೂಕ್ತ.
ನಾಟಿ ಮಾಡುವ್ರದು: ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಹದ ಗೊಳಿಸಿ 60 ಘನ ಸೆಂ.ಮೀ. ಗಾತ್ರದ ಗುಣಿಗಳನ್ನು 1 ಮೀ. x 1 ಮೀ. ಅಂತರದಲ್ಲಿ ತೆಗೆದು ಮೇಲ್ಮಣ್ಣಿನ ಜೊತೆಗೆ 10-15 ಕಿ.ಗ್ರಾಂ ಉತ್ತಮ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಗುಣಿಗೆ ತುಂಬಿ ನಾಟಿಮಾಡಿ ಕೋಲಿನ ಆಶ್ರಯವನ್ನು ಕೊಡಬೇಕು.
8-10 ದಿನಗಳಿಗೊಮ್ಮೆ ಮಣ್ಣು ಮತ್ತು ಹವಾಗುಣವನ್ನನುಸರಿಸಿ ನೀರು ಹಾಕಬೇಕು. ಬೆಳೆಗಳಿಗೆ ಅನುಗುಣವಾಗಿ 50-100 ಕಿ.ಗ್ರಾಂ ಸಾರಜನಕ, ರಂಜಕ, ಪೊಟ್ಯಾಷ್ ಒದಗಿಸುವ ಸಂಯುಕ್ತ ರಾಸಾಯನಿಕ ಗೊಬ್ಬರ ಕೊಡಬೇಕು. ರಾಸಾಯನಿಕ ಗೊಬ್ಬರಗಳನ್ನು ಹಂತಹಂತವಾಗಿ ನೀಡುವ್ರದು ಬಹಳ ಉತ್ತಮ. ನಿಯಮಿತವಾಗಿ ಕಳೆಗಳನ್ನು ತೆಗೆದು ಪಾತಿಗಳನ್ನು ಸ್ವಚ್ಛವಾಗಿಡಬೇಕು.
ಕೀಟಗಳು: ಶಲ್ಕ ಕೀಟ ಮತ್ತು ಹಿಟ್ಟು ತಿಗಣೆ.
ಕೀಟಬಾಧೆ ಕಂಡುಬಂದಾಗ 1 ಮಿ.ಲೀ. ಮೀಥೈಲ್ ಪ್ಯಾರಾಥಿಯಾನ್ ಅಥವಾ 2 ಮಿ.ಲೀ. ಆಕ್ಸಿಡೆಮೆಟಾನ್ ಮೀಥೈಲ್ ಇಲ್ಲವೆ 1.5 ಮಿ.ಲೀ. ಮಾನೋಕ್ರೋಟೋಫಾಸ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಿ.
ನಾಟಿ ಮಾಡಿದ 1-11/2 ವರ್ಷಗಳ ನಂತರ ಗಿಡಗಳು ಹೂ ಕೊಡಲು ಪ್ರಾರಂಭಿಸುತ್ತವೆ. ಪ್ರತಿ ಗಿಡದಿಂದ 6-8 ಹೂಗಳನ್ನು ಪಡೆಯಬಹುದು.
ಮೂಲ : ಆಗ್ರೋಪೀಡಿಯ
ಕೊನೆಯ ಮಾರ್ಪಾಟು : 12/9/2019